ಬ್ರೆಜಿಲ್
ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ ಬ್ರೆಜಿಲ್. Brazil ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನ, ಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. ಈಕ್ವೆಡಾರ್ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ದಕ್ಷಿಣ ಅಮೇರಿಕದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ ಪೋರ್ಚುಗೀಸ್ ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಕ್ರೈಸ್ತ ಧರ್ಮೀಯರ ದೇಶವೂ ಇದಾಗಿದೆ.
ಬ್ರೆಜಿಲ್ ಸಂಯುಕ್ತ ಗಣರಾಜ್ಯ [República Federativa do Brasil] Error: {{Lang}}: text has italic markup (help) | |
---|---|
Motto: [Ordem e Progresso] Error: {{Lang}}: text has italic markup (help) (ಪೋರ್ಚುಗೀಸ್ ಭಾಷೆಯಲ್ಲಿ "ಸುವ್ಯವಸ್ಥೆ ಮತ್ತು ಪ್ರಗತಿ") | |
Anthem: ಹಿನೊ ನಾಸನಲ್ ಬ್ರೆಸಿಲೇರೊ | |
![]() | |
Capital | ಬ್ರೆಸಿಲಿಯಾ |
Largest city | ಸಾವೊ ಪಾಲೊ |
Official languages | ಪೋರ್ಚುಗೀಸ್ |
Government | ಸಂಯುಕ್ತ ಗಣರಾಜ್ಯ |
• ರಾಷ್ಟ್ರಪತಿ | ಲುಯಿಸ್ ಇನೇಚಿಯೊ ಲುಲಾ ಡ ಸಿಲ್ವ |
• ಉಪರಾಷ್ಟ್ರಪತಿ | ಯೋಸೇ ಅಲೆಂಕಾರ್ ಗೋಮ್ಸ್ ಡ ಸಿಲ್ವ |
ಸ್ವಾತಂತ್ರ್ಯ ಪೋರ್ಚುಗಲ್ ನಿಂದ | |
• ಘೋಷಣೆ | ಸೆಪ್ಟೆಂಬರ್ ೭ ೧೮೨೨ |
• ಮಾನ್ಯತೆ | ಆಗಸ್ಟ್ ೨೯ ೧೮೨೫ |
• ಗಣರಾಜ್ಯ | ನವೆಂಬರ್ ೧೫ ೧೮೮೯ |
• Water (%) | 0.65 |
Population | |
• ೨೦೦೫ estimate | ೧೮,೬೪,೦೫,೦೦೦ (೫ನೇ) |
• ೨೦೦೦ census | ೧೬,೯೭,೯೯,೧೭೦ |
GDP (PPP) | ೨೦೦೫ estimate |
• Total | $1.577 trillion (೯ನೇ) |
• Per capita | $8,584 (೬೮ನೇ) |
HDI (೨೦೦೯) | 0.೮೧೩ Error: Invalid HDI value · ೬೩ನೇ |
Currency | Real (BRL) |
Time zone | UTC-2 to -5 (Official: -3) |
Calling code | 55 |
Internet TLD | .br |
ಇತಿಹಾಸಸಂಪಾದಿಸಿ
ಮೊದಲನೇ ಪೋರ್ಚುಗೀಸ್ ನಾವಿಕರು ೧೫೦೦ರಲ್ಲಿ ಬಂದಿಳಿಯುವ ಮುನ್ನ್ ಅಲೆಮಾರಿ ಜನಾಂಗವು ಬ್ರೆಜಿಲ್ ಪ್ರದೇಶವನ್ನು ೧೦,೦೦೦ ವರ್ಷಗಳಷ್ಟು ಕಾಲ ಜೀವಿಸುತ್ತಿತ್ತು. ನಂತರದ ಮೂರು ಶತಮಾನದಲ್ಲಿ ಪೋರ್ಚುಗೀಸರು ಬ್ರೆಜಿಲ್‌ನ ನೈಸರ್ಗಿಕ್ ಸಂಪನ್ಮೂಲಗಳನ್ನು ಸುಲಿಗೆ ಮಾಡಿದರು. ಮೊದಲು ಬ್ರೆಜಿಲ್‌ಮರ (brazilwood)ವನ್ನು ದೋಚಿದ ನಂತರ ಕಬ್ಬು, ಕಾಫಿ, ಮತ್ತು ಬಂಗಾರಗಳ ಉಪಯೋಗ ಪಡೆದರು. ತಮ್ಮ ಪರವಾಗಿ ದುಡಿಯಲು ಮೊದಲು ಮೂಲನಿವಾಸಿಗಳನ್ನು ಶೋಷಿಸಿ, ೧೫೫೦ರ ನಂತರ ಆಫ್ರಿಕಾ ಗುಲಾಮರನ್ನು ಕರೆತಂದರು. ೧೮೦೮ರಲ್ಲಿ ಪೋರ್ಚುಗಲ್ ರಾಣಿ ಒಂದನೇ ಮರಿಯಾ ಮತ್ತು ಅವಳ ಮಗ ಆರನೇ ಜಾನ್ ನೆಪೋಲಿಯನ್ನನ ಸೈನ್ಯದಿಂದ ತಪ್ಪಿಸಿಕೊಳ್ಳಲು ದೇಶತ್ಯಾಗ ಮಾಡಿ ರಿಯೊ ಡಿ ಜನೈರೊಗೆ ಬಂದರು. ಇತಿಹಾಸದಲ್ಲಿ ಯಾವುದೇ ರಾಜ ಪರಿವಾರ ಖಂಡಾಂತರ ಪಲಾಯನ ಮಾಡಿದ್ದು ಇದೇ ಮೊದಲು ಮತ್ತು ಕೊನೆ. ಇವರು ಕೊನೆಗೆ ೧೮೨೧ರಲ್ಲಿ ಪೋರ್ಚುಗಲ್ ಗೆ ವಾಪಾಸಾಗಿ, ಬ್ರೆಜಿಲ್ ಪ್ರದೇಶವನ್ನು ಪೋರ್ಚುಗಲ್ಲಿನ ಸಂಯುಕ್ತ ರಾಜ್ಯವನ್ನಾಗಿ ಏರಿಸಲಾಯಿತು. ಆದರೆ ರಾಜ ಆರನೇ ಜಾನ್ ನಿರ್ಗಮನದ ನಂತರ ಬ್ರೆಜಿಲ್ ರಾಜ್ಯವನ್ನು ವಿಸರ್ಜಿಸಿ ಮತ್ತೆ ಪೊರ್ಚುಗಲ್ಲಿನ ವಸಾಹತನ್ನಾಗಿ ಮಾಡಲಾಯಿತು. ಇದರ ನಂತರ ಹಲವಾರು ಕದನಗಳ ಏರ್ಪಟ್ಟು ಬ್ರೆಜಿಲ್ ಸ್ವಾತಂತ್ರ್ಯ ಯುದ್ಧವಾಯಿತು. ೧೮೨೨ರಲ್ಲಿ ಬ್ರೆಜಿಲ್ ರಾಜಕುಮಾರ ಮೊದಲನೇ ಪೀಟರ್ ಸ್ವಾತಂತ್ರ್ಯ ಘೋಷಿಸಿ, ಸ್ವತಂತ್ರ ಬ್ರೆಜಿಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ಪ್ರಜಾಪ್ರಭುತ್ವ ಏರ್ಪಟ್ಟ ಮೇಲೆ ೧೮೮೮ರಲ್ಲಿ ಗುಲಾಮ ಪದ್ಧತಿಯನ್ನು ರದ್ದು ಮಾಡಲಾಯಿತು. ನಂತರ ಭೂಸೇನೆ ಮತ್ತು ನೌಕಾಪಡೆಗಳ ನಡುವೆ ಅಂತಃಕಲಹ ತಪ್ಪಿಸಲು ಆಗಿನ ದೊರೆ ಎರಡನೇ ಪೆದ್ರೊ ಸಿಂಹಾಸನ ತ್ಯಾಗ ಮಾಡಿದಾಗ ನವೆಂಬರ್ ೧೫, ೧೮೮೯ರಂದು ಗಣರಾಜ್ಯದ ಸ್ಥಾಪನೆಯಾಯಿತು.
೧೯ನೇ ಶತಮಾನದ ಅಂತ್ಯ ಮತ್ತು ೨೦ನೇ ಶತಮಾನದ ಆದಿಯಲ್ಲಿ ೫೦ ಲಕ್ಷಕ್ಕೂ ಹೆಚ್ಚು ಯೂರೋಪಿಯನ್ನರು, ಅರಬರು, ಮತ್ತು ಜಪಾನೀಯರು ವಲಸೆ ಬಂದರು. ಆ ಕಾಲದಲ್ಲಿ ಬ್ರೆಜಿಲ್ ಕೈಗಾರಿಕೆಗಳ ಸ್ಥಾಪನೆಯಾಗಿ ಒಳಭೂಮಿಯ ಅಭಿವೃದ್ಧಿ ಆಯಿತು. ನಂತರ ಪ್ರಜಾಪ್ರಭುತ್ವವನ್ನು ಮೂರು ಸಲ ಎತ್ತಿಹಾಕಿ ಸರ್ವಾಧಿಕಾರತ್ವದ ಸ್ಥಾಪನೆಯಾಯಿತು. ೧೯೮೫ರ ನಂತರ ಬ್ರೆಜಿಲ್ ದೇಶವನ್ನು ಪ್ರಜಾಪ್ರಭುತ್ವ ಎಂದೇ ಪರಿಗಣಿಸಲಾಗುತ್ತದೆ. ೧೯೯೩ರ ಜನಮತ ಗಣನೆಯ ಪ್ರಕಾರ ಜನರು ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿ ಸಾಂವಿಧಾನಿಕ ರಾಜಪ್ರಭುತ್ವವನ್ನು ತಿರಸ್ಕರಿಸಿದರು.
ಸರಕಾರ ಮತ್ತು ರಾಜಕಾರಣಸಂಪಾದಿಸಿ
ಬ್ರೆಜಿಲ್ ದೇಶದ ರಾಜಧಾನಿ ಬ್ರೆಸಿಲಿಯಾ. ೧೯೮೮ರ ಸಂವಿಧಾನದ ಆದೇಶದ ಪ್ರಕಾರ ಬ್ರೆಜಿಲ್ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಗಣರಾಜ್ಯ ಒಕ್ಕೂಟ ವಾಗಿದ್ದು ದೇಶದ ರಾಷ್ಟ್ರಪತಿ ಸಾಂವಿಧಾನಿಕ ಮತ್ತು ಸರಕಾರದ ಮುಖ್ಯಸ್ಥ. ರಾಜಕೀಯ ಸ್ವಾತಂತ್ರ್ಯವನ್ನು ಕಾಪಾಡಲೋಸುಗ ಬಹುಪಕ್ಷ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.
ಕಾರ್ಯಾಂಗದ ಮುಖ್ಯಸ್ಥ ರಾಷ್ಟ್ರಪತಿಯಾಗಿದ್ದು, ಇವರನ್ನು ನಾಲ್ಕು ವರ್ಷದ ಅವಧಿಗೆ ಚುನಾಯಿಸಲಾಗುತ್ತದೆ ಮತ್ತು ಇನ್ನೊಂದು ಅವಧಿಗೆ ಮಾತ್ರ ಮರುಚುನಾಯಿತರಾಗಬಹುದಾಗಿದೆ. ಶಾಸಕಾಂಗದ ಅಧಿಕಾರವು ರಾಷ್ಟ್ರೀಯ ಪರಿಷತ್ತಿಗಿದ್ದು, ಇದರಲ್ಲಿ ಎರಡು ಮನೆಗಳಿವೆ.
ನ್ಯಾಯಾಂಗ ರಾಜ್ಯ ಮತ್ತು ಪ್ರಾಂತೀಯ ವಲಯಗಳಲ್ಲಿ "ಕೊಮಾರ್ಕ" ಹೆಸರಿನಾಲಿದೆ. ಒಂದು "ಕೊಮಾರ್ಕ"ದಲ್ಲಿ ಹಲವಾರು ನಗರಸಭೆಗಳಿರಬಹುದು.
ಭೂಗೋಳಸಂಪಾದಿಸಿ
ಭೂಮಿ: ಉತ್ತರದಲ್ಲಿ ಅಮೆಜಾನ್ ನಿತ್ಯಹರಿದ್ವರ್ಣ ಕಾಡು, ದಕ್ಷಿಣದಲ್ಲಿ ಗುಡ್ಡಗಾಡು ಪ್ರದೇಶ
- ಪರ್ವತ: ಅಟ್ಲಾಂಟಿಕ್ ಮಹಾಸಾಗರಕ್ಕಿರುವ ಕರಾವಳಿ ಪ್ರದೇಶದುದ್ದಕ್ಕೂ ೨,೯೦೦ ಮೀಟರ್ ಎತ್ತರಕ್ಕಿರುವ ಪರ್ವತ ಶ್ರೇಣಿ. ಅತ್ಯುನ್ನತ ಶಿಖರ ಪೀಕೊ ಡ ನೆಬ್ಲೀನಾ ೩,೦೧೪ ಮಿ. ಎತ್ತರವಿದೆ.
- ನದಿಗಳು: ಪ್ರಪಂಚದ ಎರಡನೇ ಅತಿ ದೊಡ್ಡ ನದಿಯಾದ ಅಮೆಜಾನ್ (ಹರಿಯುವ ನೀರಿನ ರಾಶಿಯ ಪ್ರಕಾರ ಪ್ರಪಂಚದ ಅತಿ ದೊಡ್ಡ ನದಿ). ಪರಾನ ನದಿ ಮತ್ತದರ ಉಪನದಿಯಾದ ಇಗ್ವಾಚು ನದಿ - ಇಲ್ಲಿಯೇ ಪ್ರಖ್ಯಾತ ಇಗ್ವಾಚು ಜಲಪಾತವಿರುವುದು.
- ಹವಾಮಾನ: ಬಹುತೇಕ ಉಷ್ಣ ವಲಯದಲ್ಲಿರುವ ಕಾರಣ ಹವಾಮಾನದಲ್ಲಿ ವೈಪರೀತ್ಯಗಳು ವಿರಳ. ಆದರೆ ದಕ್ಷಿಣದ ತುದಿಯಲ್ಲಿ ಸಮಶೀತೋಷ್ಣ ವಾತಾವರನದಿಂದ ಕೆಲವೊಮ್ಮೆ ಹಿಮಪಾತವಾಗುವುದು. ಅಮೆಜಾನ್ ನದಿಯ ಜಲಾನಯನ ಪ್ರದೇಶದಲ್ಲಿ ಅಥೇಚ್ಛವಾಗಿ ಮಳೆಯಾಗುವುದು.
ಆಡಳಿತಾತ್ಮಕ ಪ್ರದೇಶಗಳುಸಂಪಾದಿಸಿ
ಬ್ರೆಜಿಲ್ ೨೬ ರಾಜ್ಯ ("ಎಸ್ಟಾಡೊ")ಗಳ ಮತ್ತು ಒಂದು ಕೆಂದ್ರೀಯ ಜಿಲ್ಲೆ ("ಡಿಸ್ಟ್ರಿಟೊ ಫೆಡೆರಲ್") - ಇವುಗಳ ಒಕ್ಕೂಟ. ಇವುಗಳನ್ನು ಹೀಗೆ ವಿಂಗಡಿಸಲಾಗಿದೆ:
- ಉತ್ತರ: ಉತ್ತರ ಭಾಗವು ದೇಶದ ಶೇ.೪೫ ರಷ್ಟು ಪ್ರದೇಶವಾಗಿದ್ದು, ಅತಿ ಕಡಿಮೆ ಜನಸಂಖ್ಯೆಯಿರುವ ಪ್ರದೇಶವಾಗಿದೆ. ಪ್ರಪಂಚದಲ್ಲಿರುವ ನಿತ್ಯಹರಿದ್ವರ್ಣ ಕಾಡು ಪ್ರದೇಶ ಬಹುತೇಕ ಈ ಪ್ರದೇಶದಲ್ಲಿಯೇ ಇದೆ. ಈ ಪ್ರದೇಶವು ಅತಿ ಕಡಿಮೆ ಅಭಿವೃದ್ಧಿಯನ್ನು ಕಂಡಿದೆ. ಈ ಪ್ರದೇಶದಲ್ಲಿರುವ ರಾಜ್ಯಗಳು - ರೊರೈಮ, ಅಮಾಪ, ಅಮೆಜಾನಾಸ್, ಪಾರಾ, ಟೊಕಾಂಟಿನ್, ಆಕ್ರೆ, ಮತ್ತು ರೊಂದೊನಿಯ
- ಈಶಾನ್ಯ: ದೇಶದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಇಲ್ಲಿ ವಾಸಿಸುತ್ತದೆ. ಸಾಂಸ್ಕೃತಿಕ ವೈವಿಧ್ಯತೆ ಬಹಳಷ್ಟಿರುವ ಈ ಪ್ರದೇಶವು ರಮ್ಯ ಕರಾವಳಿಗೆ ಪ್ರಖ್ಯಾತವಾಗಿದೆ. ಈ ಪ್ರದೇಶದಲ್ಲಿನ ರಾಜ್ಯಗಳು - ಮರಾನ್ಯಾವೊ, ಪಿಯಾವಿ, ರಿಯೊ ಗ್ರಾಂಡೆ ಡೊ ನಾರ್ಟೆ, ಪರಯಿಬ, ಪರ್ನಾಂಬುಚೊ, ಅಲಗೊವಾ, ಸರ್ಗಿಪೆ, ಮತ್ತು ಬಹಿಯ
- ಕೇಂದ್ರ-ಪಶ್ಚಿಮ: ದೇಶದ ಎರಡನೇ ದೊಡ್ಡ ಪ್ರದೇಶವಾಗಿದ್ದು ರಾಜಧಾನಿ ಬ್ರೆಸಿಲಿಯಾ ಈ ಪ್ರದೇಶದಲ್ಲಿದೆ. ಇಲ್ಲಿರುವ ರಾಜ್ಯಗಳು - ಮಾಟೊ ಗ್ರಾಸೊ, ಗೊಯಾಸ್, ಬ್ರೆಜಿಲ್ ಕೇಂದ್ರೀಯ ಜಿಲ್ಲೆ, ಮಾಟೊ ಮತ್ತು ಗ್ರಸೊ ಡೊ ಸುಲ್
- ಆಗ್ನೇಯ: ಆಗ್ನೇಯ ಬ್ರೆಜಿಲ್ ಅತಿ ಶ್ರೀಮಂತ ಹಾಗೂ ಅತಿ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶವಾಗಿದ್ದು, ದೇಶದ ಎರಡು ಅತಿ ದೊಡ್ಡ ನಗರಗಳಾದ ಆರ್ಥಿಕ ರಾಜಧಾನಿ ಸಾವೊ ಪಾಲೊ ಮತ್ತು ಮನೋಹರ ಸಮುದ್ರ ತಿರಗಳಿರುವ ರಿಯೊ ಡಿ ಜನೈರೊ ಇಲ್ಲಿವೆ. ಈ ಪ್ರದೇಶದ ರಾಜ್ಯಗಳು - ಮಿನಾಸ್ ಗೆರಾಯ್ಸ್, ಎಸ್ಪಿರಿತೊ ಸಾಂತೊ, ರಿಯೊ ಡಿ ಜನೈರೊ (ರಾಜ್ಯ), ಮತ್ತು ಸಾವೊ ಪಾಲೊ (ರಾಜ್ಯ)
- ದಕ್ಷಿಣ: ದಕ್ಷಿಣ ಬ್ರೆಜಿಲ್‌ನಲ್ಲಿ ಅತುನ್ನತ ಜೀವನ ಮಟ್ಟವಿದ್ದು ದೇಶದ ಅತಿ ತಣ್ಣನೆಯ ಪ್ರದೇಶವಾಗಿದೆ. ಇಲ್ಲಿರುವ ರಾಜ್ಯಗಳು - ಪರಾನ (ರಾಜ್ಯ), ಸಾಂತಾ ಕ್ಯಾತರೀನಾ, ಮತ್ತು ರಿಯೊ ಗ್ರಾಂಡೆ ಡೊ ಸುಲ್
ಅರ್ಥ ವ್ಯವಸ್ಥೆಸಂಪಾದಿಸಿ
- ದಕ್ಷಿಣ ಅಮೇರಿಕದ ಅತಿ ಯಶಸ್ವಿ ಅರ್ಥ ವ್ಯವಸ್ಥೆಯನ್ನು ಹೊಂದಿದ ಬ್ರೆಜಿಲ್ ವಿಶ್ವ ಮಾರುಕಟ್ಟೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ದೇಶದ ಮುಖ್ಯ ರಫ್ತು ವಿಮಾನ, ಕಾಫಿ, ವಾಹನಗಳು, ಸೋಯಾ ಬೀನ್ಸ್, ಕಬ್ಬಿಣದ ಅದಿರು, ಉಕ್ಕು, ಜವಳಿ, ಮತ್ತು ಪಾದರಕ್ಷೆ.
- ದಕ್ಷಿಣ ಅಮೇರಿಕದ ಅತಿ ಆಧುನಿಕ ಕೈಗಾರಿಕೆ ಕೆಂದ್ರವಾಗಿದೆ.
ಸವಾಲುಗಳುಸಂಪಾದಿಸಿ
- ದೇಶದ ಅರ್ಥ ವ್ಯವಸ್ಥೆ ಅತಿ ಮುಂದುವರೆದು ಪ್ರಗತಿಪರವಾಗಿದ್ದರೂ, ಭ್ರಷ್ಟಾಚಾರ, ಬಡತನ, ಮತ್ತು ಅಸಾಕ್ಷರತೆ ವ್ಯಾಪಕವಾಗಿವೆ.
- ಆಂತರಿಕ ಸಾರ್ವಜನಿಕ ಸಾಲ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು ಸಾರ್ವಜನಿಕ ಖರ್ಚು-ವೆಚ್ಚಗಳು ಏರಿವೆ.
- ತೆರಿಗೆಗಳು ಮುಖ್ಯ ರಾಷ್ಟ್ರೀಯ ಆದಾಯವಾಗಿದ್ದು ಸಮಾಜದ ಎಲ್ಲ ವರ್ಗಗಳಿಗೂ ದೊಡ್ಡ ಹೊರೆಯಾಗಿ ಪರಿಣಮಿಸಿವೆ.
- ಈಗಿನ ಆರ್ಥಿಕ ಬೆಳವಣಿಗೆ ದರ ದಕ್ಷಿಣ ಅಮೇರಿಕದ ಇತರ ರಾಷ್ಟ್ರಗಳು ಹಾಗೂ ಚೀನಾ ಮತ್ತು ಭಾರತಗಳಿಗಿಂತ ಕಡಿಮೆ ಮಟ್ಟದಲ್ಲಿದೆ.
ಪರಿಸರಸಂಪಾದಿಸಿ
ಆರ್ಥಿಕ ಮತ್ತು ಜನಸಂಖ್ಯಾ ಸ್ಫೋಟದಿಂದ ಬ್ರೆಜಿಲ್‌ನ ವಾತಾವರಣ ತತ್ತರಿಸುತ್ತಿದೆ. ಅಮೆಜಾನ್ ನಿತ್ಯಹರಿದ್ವರ್ಣ ಕಾಡಿನಲ್ಲಿ ಮರಗಳ ಕಡಿಯುವಿಕೆಯಿಂದ ವಿವಿಧ ಜೀವಸಂಕುಲಗಳು ಅಂತ್ಯ ಕಾಣುತ್ತಿವೆ. ಬ್ರೆಜಿಲ್ ದೇಶದಲ್ಲಿ ಸಾವಿರಾರು ಬಗೆಯ ಜೀವಿಗಳಿವೆ, ಇವುಗಳಲ್ಲಿ ಬಹಳಷ್ಟು ಇನ್ನೂ ಪತ್ತೆಯಾಗಿಲ್ಲ. ೨೦೨೦ರಲ್ಲಿ ಕಡಿಮೆಯೆಂದರೂ ಅರ್ಧದಷ್ಟು ಜೀವ ಬಗೆಗಳು ನಾಶವಾಗಿ ಹೋಗುತ್ತವೆ.
ಜನತೆ ಮತ್ತು ಜನಾಂಗಗಳುಸಂಪಾದಿಸಿ
- ಬ್ರೆಜಿಲ್ ದೇಶದ ಪ್ರಧಾನ ವಂಶಾವಳಿ ಪೋರ್ಚುಗೀಸರು. ೧೫೩೨ರ ನಂತರ ವಸಾಹತು ಪ್ರದೇಶಕ್ಕೆ ಪೋರ್ಚುಗೀಸರ ಆಗಮನ, ನಂತರ ೧೯ನೇ ಶತಮಾನದಲ್ಲಿ ಪೋರ್ಚುಗೀಸರ ವಲಸೆಯೇ ಇದಕ್ಕೆ ಕಾರಣ.
- ಬ್ರೆಜಿಲ್‌ನ ಮೂಲ ನಿವಾಸಿಗಳು ಒಂದೋ ನಿರ್ನಾಮವಾದರು, ಅಥವಾ ಪೋರ್ಚುಗೀಸರ ಜೊತೆ ವಿವಾಹ ಮಾಡಿ ಸೇರಿಕೊಂಡರು. ಇಂದು ಈ ಮೂಲನಿವಾಸಿಗಳ ಸಂಖ್ಯೆ ಸುಮಾರು ಏಳು ಲಕ್ಷ, ದೇಶದ ಶೇ. ೧.
- ಕಪ್ಪು ವರ್ಣೀಯರನ್ನು ೧೬ನೇ ಶತಮಾನದಿಂದ ೧೯ನೇ ಶತಮಾನದ ತನಕ ಆಫ್ರಿಕಾದಿಂದ ಗುಲಾಮರನ್ನಾಗಿ ಕರೆತರಲಾಯಿತು. ಇವರು ಪೋರ್ಚುಗೀಸ್ ಜನಾಂಗದ ಜೊತೆ ಮಿಶ್ರಗೊಂಡು ಮಿಶ್ರ ತಳಿಯ ಜನಾಂಗ ಸಾಕಷ್ಟಿದೆ.
೨೦೦೦ದ ಜನಗಣತಿಯ ಪ್ರಕಾರ ಬ್ರೆಜಿಲ್‌ನ ಜನರನ್ನು ವಿಭಾಗಿಸಬಹುದು:
- ಶ್ವೇತ ವರ್ಣೀಯರು - ೫೩.೭ %
- ಬಹುವರ್ಣೀಯರು - ೩೮.೫ %
- ಕಪ್ಪು ವರ್ಣೀಯರು - ೬.೨ %
- ಏಷ್ಯನ್ನರು - ೦.೫ %
- ಮೂಲನಿವಾಸಿಗಳು - ೦.೪ %
- ಅಸ್ಪಷ್ಟ - ೦.೭%
ಭಾಷೆಗಳುಸಂಪಾದಿಸಿ
ಬ್ರೆಜಿಲ್ ದೇಶದ ಏಕೈಕ ಅಧಿಕೃತ ಭಾಷೆ ಪೋರ್ಚುಗೀಸ್. ಎಲ್ಲ ಜನರೂ ಆಡುವ ಈ ಭಾಷೆ ಶಾಲೆಗಳಲ್ಲಿ ಕಲಿಸಲಾಗುವ ಒಂದೇ ಭಾಷೆಯಾಗಿದೆ. ಎಲ್ಲ ಆಡಳಿತಾತ್ಮಕ, ವ್ಯಾವಹಾರಿಕ, ವಾಣಿಜ್ಯ ಪ್ರಯೋಗಗಳಿಗೆ ಮತ್ತು ಟಿ.ವಿ - ರೇಡಿಯೋಗಳಲ್ಲಿ ಸಹ ಇದೇ ಭಾಷೆಯನ್ನು ಉಪಯೋಗಿಸಲಾಗುತ್ತದೆ. ಎರಡು ಅಮೆರಿಕ ಖಂಡಗಳಲ್ಲಿ ಈ ಭಾಷೆ ಮಾತಾಡುವ ಒಂದೇ ದೇಶ ಬ್ರೆಜಿಲ್ ಆದ್ದರಿಂದ ಈ ಪೋರ್ಚುಗೀಸ್ ಭಾಷೆ ರಾಷ್ಟ್ರೀಯ ಪರಿಚಯ ಸೂಚಕವಾಗಿದೆ.
ಉತ್ತರ ಬ್ರೆಜಿಲ್‌ನಲ್ಲಿ ಅನೇಕ ಮೂಲಭಾಷೆಗಳನ್ನಾಡಲಾಗುತ್ತದೆ. ಇಂಗ್ಲಿಷ್ ಪ್ರೌಢ ಶಾಲೆಯ ಅಧಿಕೃತ ಕಲಿಕೆಯ ಭಾಷೆಯಾಗಿದ್ದರೂ, ಅತಿ ಕಡಿಮೆ ಬ್ರೆಜಿಲಿಯನ್ನರು ಇದನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಪೋರ್ಚುಗೀಸ್ ಭಾಷೆಯ ಜೊತೆ ಸ್ಪಾನಿಷ್ ಭಾಷೆಯ ಸಾಮ್ಯವಿರುವುದರಿಂದ ಈ ಭಾಷೆಯನ್ನು ಬ್ರೆಜಿಲಿಯನ್ನರು ಅರ್ಥ ಮಾಡಿಕೊಳ್ಳುತ್ತಾರೆ.
ಅಪರಾಧಸಂಪಾದಿಸಿ
ಕಳೆದ ಕೆಲವು ದಶಕಗಳಲ್ಲಿ ಬ್ರೆಜಿಲ್‌ನಲ್ಲಿ ಅಪರಾಧದ ಪ್ರಮಾಣದಲ್ಲಿ ಅತಿ ಹೆಚ್ಚಿನ ಏರಿಕೆ ಕಂಡು ಬಂದಿದೆ. ಅನೇಕ ಅಪರಾಧಗಳಿಗೆ ಶಿಕ್ಷೆಯೇ ದೊರೆಯುವುದಿಲ್ಲ. ರಸ್ತೆ ಅಪರಾಧಗಳು ಹೆಚ್ಚಿನ ಪ್ರಮಾಣದಲ್ಲಿದ್ದು ನಿವಾಸಿಗಳಿಗೆ ಸಂಜೆಯ ವೇಳೆ ದೊಡ್ಡ ಸಮಸ್ಯೆಯಾಗಿದೆ. ರಿಯೊ ಡಿ ಜನೈರೊ ನಗರದಲ್ಲಿ ಅಪರಾಧ ಪ್ರಮಾಣ ಅಗಾಧವಾಗಿದೆ. ಪೊಲೀಸರು ಮತ್ತು ಮಾದಕ ಪದಾರ್ಥಗಳ ವ್ಯವಹಾರ ನಡೆಸುವವರ ಮಧ್ಯೆ ಗುಂಡಿನ ಕಾಳಗ ಸಾಮಾನ್ಯ. ಅಪರಾಧಿಗಳ್ಯ್ ಜೈಲಿನಲ್ಲಿದ್ದರೂ ಕೂಡ ಅಲ್ಲಿಂದಲೇ ಅಬಾಧಿತವಾಗಿ ವ್ಯವಹಾರವನ್ನು ನಡೆಸುತ್ತಾರೆ. ಬ್ರೆಜಿಲ್‌ನಲ್ಲಿ ಅಪಹರಣಗಳೂ ಸಾಮಾನ್ಯವಾಗಿವೆ.
ಧರ್ಮಸಂಪಾದಿಸಿ
ಜನಗಣತಿಯ ಪ್ರಕಾರ
- ೭೩.೬% ಜನ ಕ್ಯಾಥಲಿಕ್ ಪಂಗಡದವರು. ಹೀಗೆ ಬ್ರೆಜಿಲ್ ಪ್ರಪಂಚದ ಅತಿ ದೊಡ್ಡ ಕ್ಯಾಥಲಿಕ್ ಜನರ ದೇಶವಾಗಿದೆ.
- ಪ್ರೊಟೆಸ್ಟಂಟರ ಸಂಖ್ಯೆ ೧೫.೪% ಇದ್ದು, ಈಗ ಹೆಚ್ಚುತ್ತಿದೆ.
- ೭.೪% ಜನತೆ ನಾಸ್ತಿಕರಾಗಿದ್ದಾರೆ.
- ಆಧ್ಯಾತ್ಮಿಕತೆ ೧.೩% ಜನರಲ್ಲಿದೆ.
- ಉಳಿದ ೧.೮% ಜನ ಇನ್ನುಳಿದ ಧರ್ಮಗಳಿಗೆ ಸೇರಿದವರಾಗಿದ್ದಾರೆ.
ಕ್ರೀಡೆಸಂಪಾದಿಸಿ
ಬ್ರೆಜಿಲ್ ದೇಶದ ಅತಿ ಜನಪ್ರಿಯ ಕ್ರೀಡೆ ಫುಟ್‌ಬಾಲ್. ಬ್ರೆಜಿಲ್ ತನ್ನ ಆಟಗಾರರ ಕೌಶಲ್ಯಕ್ಕೆ ಹೆಸರಾಗಿದೆ. ಕೆಲವು ಆಟಗಾರರು - ರೊನಾಲ್ಡೊ, ಪೆಲೆ, ರೊಮಾರಿಯೊ, ರಿವಾಲ್ಡೊ, ರಾಬರ್ಟೊ ಕಾರ್ಲೊಸ್, ರೊನಾಲ್ಡಿನಿಯೊ, ಕಾಕಾ, ಮುಂತಾದವರು. ಬ್ರೆಜಿಲ್ ರಾಷ್ಟ್ರೀಯ ಫುಟ್‌ಬಾಲ್ ತಂಡ ದಾಖಲೆಯ ಐದು ಬಾರಿ ಫುಟ್‌ಬಾಲ್ ವಿಶ್ವ ಕಪ್ ಅನ್ನು ಗೆದ್ದಿದೆ.
ಬ್ರೆಜಿಲ್ ಇನ್ನಿತರ ಅಂತಾರಾಷ್ಟ್ರೀಯ ಕ್ರೀಡೆಗಳಾದ ವಾಲಿಬಾಲ್, ಬಾಸ್ಕೆಟ್‌ಬಾಲ್, ಟೆನ್ನಿಸ್, ಮತ್ತು ಜಿಮ್ನಾಸ್ಟಿಕ್ಸ್ ಗಳಲ್ಲಿ ಉಶಸ್ಸು ಗಳಿಸಿದೆ.
ಇವುಗಳನ್ನೂ ನೋಡಿಸಂಪಾದಿಸಿ
ಹೊರಗಿನ ಸಂಪರ್ಕಗಳುಸಂಪಾದಿಸಿ
- ಬ್ರೆಜಿಲ್ ಸರಕಾರದ ಅಧಿಕೃತ ಅಂತರ್ಜಾಲ ತಾಣ (ಪೋರ್ಚುಗೀಸ್ ಭಾಷೆಯಲ್ಲಿ)
- ಬ್ರೆಜಿಲ್ ದೇಶದ ಪ್ರಮುಖ ನಗರಗಳ ಉಪಗ್ರಹ ಚಿತ್ರಗಳು Archived 2007-03-14 ವೇಬ್ಯಾಕ್ ಮೆಷಿನ್ ನಲ್ಲಿ.
- ಬ್ರೆಜಿಲ್ ಬಗ್ಗೆ ಮಾಹಿತಿ ಮತ್ತು ಸುದ್ದಿ Archived 2006-10-19 ವೇಬ್ಯಾಕ್ ಮೆಷಿನ್ ನಲ್ಲಿ.
- ಬ್ರೆಜಿಲ್ ದೇಶದ ದ್ವೀಪಗಳು ಮತ್ತು ಸಮುದ್ರ ತಟಗಳ ಬಗ್ಗೆ ಮಾಹಿತಿ Archived 2021-05-05 ವೇಬ್ಯಾಕ್ ಮೆಷಿನ್ ನಲ್ಲಿ.
ದಕ್ಷಿಣ ಅಮೇರಿಕ ಖಂಡದ ದೇಶಗಳು | |
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ |