ಪೆರು

ದಕ್ಷಿಣ ಅಮೆರಿಕಾದಲ್ಲಿ ಗಣರಾಜ್ಯ

ಪೆರು ( ಅಧಿಕೃತವಾಗಿ ಪೆರು ಗಣರಾಜ್ಯ) ದಕ್ಷಿಣ ಅಮೆರಿಕ ಖಂಡದ ಪಶ್ಚಿಮ ಭಾಗದಲ್ಲಿರುವ ಒಂದು ರಾಷ್ಟ್ರ. ಇದು ಪೂರ್ವಕ್ಕೆ ಬ್ರೆಜಿಲ್ ಆಗ್ನೇಯಕ್ಕೆ ಬೊಲಿವಿಯ ದಕ್ಷಿಣಕ್ಕೆ ಚಿಲಿ ಉತ್ತರಕ್ಕೆ ಎಕ್ವಡಾರ್ ಹಾಗೂ ಕೊಲೊಂಬಿಯ ಮತ್ತು ಪಶ್ಚಿಮಕ್ಕೆ ಶಾಂತಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ಪೆರು ಪ್ರದೇಶವು ಜಗತ್ತಿನ ಅತಿ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ನಾರ್ಟೆ-ಚಿಕೋ ನಾಗರಿಕತೆಗೆ, ಇಂಕಾ ಸಾಮ್ರಾಜ್ಯಕ್ಕೆ ನೆಲೆಯಾಗಿತ್ತು. ಅಲ್ಲದೆ ಕೊಲಂಬಸ್ ಅಮೆರಿಕ ಖಂಡದಲ್ಲಿ ಕಾಲಿಡುವ ಸಮಯದಲ್ಲಿ ಅಲ್ಲಿನ ಅತಿ ದೊಡ್ಡ ದೇಶವಾಗಿತ್ತು. ೧೬ನೆಯ ಶತಮಾನದಲ್ಲಿ ಸ್ಪೇನ್ನ ಸಮ್ರಾಟರು ಪೆರುವನ್ನು ವಶಪಡಿಸಿಕೊಂಡು ಇಲ್ಲಿ ತಮ್ಮ ದಕ್ಷಿಣ ಅಮೆರಿಕದ ಎಲ್ಲಾ ವಸಾಹತುಗಳನ್ನೊಳಗೊಂಡ ಒಂದು ವೈಸರಾಯಲ್ಟಿಯನ್ನು ಸ್ಥಾಪಿಸಿದರು. ೧೮೨೧ರಲ್ಲಿ ಸ್ವಾತಂತ್ಯ್ರ ಪಡೆದ ಪೆರು ನಂತರದ ದಿನಗಳಲ್ಲಿ ರಾಜಕೀಯವಾಗಿ ಮತ್ಥು ಆರ್ಥಿಕವಾಗಿ ಹಲವು ಏಳು ಬೀಳುಗಳನ್ನು ಕಂಡಿದೆ. ಪೆರು ಒಂದು ಅಧ್ಯಕ್ಷೀಯ ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯ. ಪೆರು ಭೌಗೋಳಿಕವಾಗಿ ವಿವಿಧ ವಲಯಗಳನ್ನುಳ್ಳ ದೇಶ. ಪಶ್ಚಿಮದ ಶಾಂತಸಾಗರದ ತೀರದ ಬಯಲು ಪ್ರದೇಶವು ಅತಿ ಶುಷ್ಕ ವಲಯ. ಪೂರ್ವದಲ್ಲಿ ಆಂಡೆಸ್ ಪರ್ವತಶ್ರೇಣಿಯ ಉನ್ನತ ಶಿಖರಗಳು ಹಾಗೂ ಅಮೆಝಾನ್ ಕೊಳ್ಳದ ಉಷ್ಣವಲಯಮಳೆಕಾಡುಗಳಿವೆ. ೧೨,೮೫,೨೨೦ ಚ.ಕಿ.ಮೀ. ವಿಸ್ತೀರ್ಣವುಳ್ಳ ಪೆರುವಿನ ಜನಸಂಖ್ಯೆ ಸುಮಾರು ೨ ಕೋಟಿ ೮೭ ಲಕ್ಷ. ರಾಷ್ಟ್ರದ ರಾಜಧಾನಿ ಲಿಮಾ. ಪೆರು ಒಂದು ಅಭಿವೃದ್ಧಿಶೀಲ ರಾಷ್ಟ್ರ. ಕೃಷಿ, ಮೀನುಗಾರಿಕೆ, ಗಣಿಗಾರಿಕೆ ಮತ್ತು ಜವಳಿ ಉದ್ಯಮ ನಾಡಿನ ಪ್ರಮುಖ ಆರ್ಥಿಕ ಚಟುವಟಿಕೆಗಳು. ಪೆರುವಿನ ಜನತೆ ಹಲವು ಜನಾಂಗಗಳಿಗೆ ಸೇರಿದವರು. ಮುಖ್ಯವಾಗಿ ಅಮೆರಿಂಡಿಯನ್ನರು,ಯುರೋಪಿಯನ್ನರು,ಆಫ್ರಿಕನ್ನರು ಹಾಗೂ ಏಷ್ಯನ್ನರು ಇಲ್ಲಿ ನೆಲೆಸಿದ್ದಾರೆ. ಪ್ರಧಾನ ಭಾಷೆ ಸ್ಪಾನಿಷ್. ಉಳಿದಂತೆ ಕ್ವೆಚುವಾ ಮತ್ತು ಹಲವು ಸ್ಥಳೀಯ ಬುಡಕಟ್ಟು ಭಾಷೆಗಳೂ ನುಡಿಯಲ್ಪಡುತ್ತವೆ. ಬಹುಸಂಖ್ಯಾಕರು ಕ್ಯಾಥೊಲಿಕ್ ಧರ್ಮೀಯರು.

ಪೆರು ಗಣರಾಜ್ಯ
ರಿಪಬ್ಲಿಕಾ ಡೆಲ್ ಪೆರು
Flag of ಪೆರು
Flag
Coat of arms of ಪೆರು
Coat of arms
Anthem: "ನಾವು ಸ್ವತಂತ್ರರು, ಎಂದೆಂದಿಗೂ ನಾವು ಹೀಗೆಯೇ ಇರೋಣವಾಗಲಿ"
Location of ಪೆರು
Capital
and largest city
ಲಿಮಾ
Official languagesಸ್ಪಾನಿಷ್1
Demonym(s)ಪೆರುವಿಯನ್
Governmentಸಾಂವಿಧಾನಿಕ ಗಣರಾಜ್ಯ
ಅಲನ್ ಗಾರ್ಸಿಯಾ ಪೆರೆಝ್
ಜೋರ್ಗ್ ಡೆಲ್ ಕ್ಯಾಸ್ಟಿಲ್ಲೋ
ಸ್ವಾತಂತ್ರ್ಯ 
• ಘೋಷಣೆ
ಜುಲೈ ೨೮ ೧೮೨೧
• Water (%)
8.80
Population
• ಜುಲೈ ೨೦೦೭ estimate
28,674,757 (41ನೆಯದು)
• ೨೦೦೫ census
27,219,266
GDP (PPP)೨೦೦೫ estimate
• Total
$170.089 billion (51ನೆಯದು)
• Per capita
$6,715 (94ನೆಯದು)
GDP (nominal)೨೦೦೬ estimate
• Total
$93.268 ಬಿಲಿಯನ್ (55ನೆಯದು)
• Per capita
$3,374 (87ನೆಯದು)
Gini (2002)54.6
high
HDI (೨೦೦೪)Increase0.767
Error: Invalid HDI value · 82ನೆಯದು
Currencyನ್ಯೂವೋ ಸಾಲ್ (PEN)
Time zoneUTC-5 (PET)
• Summer (DST)
not observed
Calling code51
Internet TLD.pe
  1. Quechua, Aymara and other indigenous languages are co-official in the areas where they are predominant.
ಇಂಕಾ ಜನರ ಕಳೆದುಹೋದ ನಗರ: ಮಾಚು ಪಿಚ್ಚು
ಆಂಡೆಸ್ ಪರ್ವತಗಳು ಪೆರುವಿನ ಹಲವು ನದಿಗಳಿಗೆ ಮೂಲ
ಅಮೆರಿಂಡಿಯನ್ ಸಂತತಿಯ ಪೆರುವಿನ ಮೂಲನಿವಾಸಿ ಮಹಿಳೆ ತನ್ನ ಮಗುವಿನೊಂದಿಗೆ

ನೋಡಿ ಬದಲಾಯಿಸಿ

ಹೆಚ್ಚಿನ ಓದಿಗೆ ಬದಲಾಯಿಸಿ

  • ಎಲ್ಲೇ ಹೋದರೂ, ಎಷ್ಟು ಬಾರಿ ನೋಡಿದರೂ ಪರ್ವತಗಳೆದುರು ನಿಂತರೆ ಒಳಗೊಂದು ಅಂತಃಸ್ಫುರಣೆಯುಂಟಾಗುತ್ತದೆ. ಪ್ರಕೃತಿಯಲ್ಲಿ, ಅದರ ಸೌಂದರ್ಯದಲ್ಲಿ, ಅದು ಹೇಳುವ ಸತ್ಯದಲ್ಲಿ ನೀನು ಲೀನವಾಗು; ‘ಸ್ವ’ವನ್ನು ಕಳೆದುಕೊ ಎಂದು ಯಾರೋ ಪಿಸುಗುಡುವ ಭಾಸವಾಗುತ್ತದೆ. ಘಟ್ಟಕಣಿವೆಯೆದುರು, ಜಲಪಾತದೆದುರು ಮಾತು ಮರೆತು ಹೋಗಿ ಇದು ಅನುಭವಕ್ಕೆ ನಿಲುಕುತ್ತದೆ. ಅವತ್ತು ಅಲ್ಲಿ, ಆ ಕ್ಷಣದಲ್ಲಿ, ಪವಿತ್ರ ಕಣಿವೆಯ ಪರ್ವತ ದೃಶ್ಯ ತನ್ನ ಮನಮೋಹಕ, ಘನತೆವೆತ್ತ ಸೌಂದರ್ಯದಿಂದ ಒಳಹೊರಗುಗಳ ತುಂಬಿಕೊಂಡಿತು. ‘ನಾನು’ ಕರಗಿ ಹರಡಿ ಆವಿಯಾದಂತೆನಿಸಿತು.
  • ಪವಿತ್ರ ಕಣಿವೆಯ ದಾರಿಯಲ್ಲಿ...;ಡಾ. ಎಚ್. ಎಸ್. ಅನುಪಮಾ;11 Jun, 2017 Archived 2017-06-10 ವೇಬ್ಯಾಕ್ ಮೆಷಿನ್ ನಲ್ಲಿ.
"https://kn.wikipedia.org/w/index.php?title=ಪೆರು&oldid=1079604" ಇಂದ ಪಡೆಯಲ್ಪಟ್ಟಿದೆ