ಶಾಸಕಾಂಗ
ಶಾಸಕಾಂಗಗಳು ಕಾನೂನುಗಳನ್ನು ನಿಶ್ಚಯಿಸುವ ಸರಕಾರಗಳ ವಿಭಾಗಗಳು. ಇವು ಸಾಮಾನ್ಯವಾಗಿ ಪ್ರತಿನಿಧಿತ್ವ ಸಭೆಗಳ ರೂಪದಲ್ಲಿ ಇರುತ್ತವೆ. ವಿವಿಧ ಸರಕಾರಗಳ ವಿಧಗಳಲ್ಲಿ ಈ ಪ್ರತಿನಿಧಿತ್ವ ಸಭೆ ವಿವಿಧ ಬಗೆಗಳಲ್ಲಿ ಸಂಘಟಿತಗೊಳ್ಳುತ್ತವೆ. ಸಂಸದೀಯ ಸರ್ಕಾರಗಳಲ್ಲಿ ಶಾಸಕಾಂಗ ಕಾರ್ಯಾಂಗಕ್ಕಿಂತ ಮೇಲ್ದರ್ಜೆಯನ್ನು ಹೊಂದಿರುತ್ತದೆ. ರಾಷ್ಟ್ರಪತಿ ಆಳ್ವಿಕೆ ಸರ್ಕಾರದ ಪದ್ಧತಿಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಮಾನ ದರ್ಜೆಗಳನ್ನು ಹೊಂದಿರುತ್ತವೆ.
ಸದಸ್ಯರು
ಬದಲಾಯಿಸಿಶಾಸಕಾಂಗದ ಸದಸ್ಯರಿಗೆ "ಶಾಸಕ" ಎಂದು ಕರೆಯುತ್ತಾರೆ. ಶಾಸಕರು ಶಾಸನವನ್ನು ನಿರ್ಮಿಸುತ್ತಾರೆ. ಶಾಸಕರು ಪ್ರಸ್ತಾವಿತ ಕಾನೂನುಗಳ ಮೂಲಕ ಮತ ಹಾಕುತ್ತಾರೆ. ಶಾಸನವು ಸ್ಥಿರ ಸಂಖ್ಯೆಯ ಸದಸ್ಯರನ್ನು ಹೊಂದಿರುತ್ತದೆ. ಶಾಸನದಲ್ಲಿ ಸಾಮಾನ್ಯವಾಗಿ ಶಾಸಕರು ತುಂಬಿರುತ್ತಾರೆ, ಅವರು ನಿರ್ದಿಷ್ಟ ಕೋಣೆಯಲ್ಲಿ ಕೂಡಿರುತ್ತಾರೆ.