ಕಬ್ಬಿಣದ ಅದಿರು
ಬಂಡೆಗಳು ಮತ್ತು ಖನಿಜಗಳಿಂದ ಕೂಡಿರುವ ಕಬ್ಬಿಣದ ಅದಿರುಗಳಿಂದ ಲೇ ಲೋಹಯುಕ್ತ ಕಬ್ಬಿಣವನ್ನು ವಾಣಿಜ್ಯ ರೀತಿಯಲ್ಲಿ ಬೇರ್ಪಡಿಸಲಾಗುವುದು. ಈ ಅದಿರುಗಳು ಸಾಮಾನ್ಯವಾಗಿ ಕಬ್ಬಿಣದ ಆಕ್ಸೈಡ್‌ಗಳಲ್ಲಿ ಹೇರಳವಾಗಿವೆ ಮತ್ತು ಬಣ್ಣದಲ್ಲಿ ಕಡು ಬೂದು, ಪ್ರಕಾಶಮಾನ ಹೊಳಪಿನ ಹಳದಿ, ಕಡು ನೇರಳೆಗಳಿಂದ ಹಿಡಿದು ಕೆಂಪು ಮಾಸಲು ವರ್ಣಗಳ ವರೆಗೆ ವಿಭಿನ್ನವಾಗಿವೆ. ಈ ಕಬ್ಬಿಣವನ್ನು ಸಾಮಾನ್ಯವಾಗಿ ಮ್ಯಾಗ್ನಾಟೈಟ್(Fe
3O
4), ಹೆಮಟೈಟ್(Fe
2O
3), ಗೋಎತೈಟ್ (FeO(OH)), ಲೈಮೋನೈಟ್ (FeO(OH).n(H2O)) ಅಥವಾ ಸೈಡೆರೈಟ್ (FeCO3). ಹೆಮಟೈಟನ್ನು "ನೈಸರ್ಗಿಕ ಅದಿರು" ಎಂದು ಕೂಡ ಕರೆಯಲಾಗುತ್ತಿದೆ. ಆ ಹೆಸರೇ ಹೇಳುವಂತೆ, ಗಣಿಗಾರಿಕೆಯ ಮುಂಚಿನ ವರ್ಷಗಳಲ್ಲಿ ನಿರ್ಧಿಷ್ಠ ಹೆಮಟೈಟ್ ಅದಿರುಗಳು 66% ನಷ್ಟು ಕಬ್ಬಿಣವನ್ನು ಹೊಂದಿದ್ದವು ಹಾಗೂ ಅದನ್ನು ನೇರವಾಗಿ ಕಬ್ಬಿಣ ತಯಾರಿಸುವ ಕಾದಕುಲುಮೆಯೊಳಗೆ ಪೂರೈಸಲಾಗುತ್ತಿತ್ತು. ಕಬ್ಬಿಣದ ಗಟ್ಟಿ (ಇಟ್ಟಿಗೆ)ಯನ್ನು ಮಾಡಲೆಂದು ಕಬ್ಬಿಣದ ಅದಿರೆಂಬ ಕಚ್ಚಾ ಪದಾರ್ಥವನ್ನು ಬಳಸಲಾಗುತ್ತದೆ. ಈ ಕಬ್ಬಿಣದ ಗಟ್ಟಿಯು ಉಕ್ಕಿನ ತಯಾರಿಕೆಗಾಗಿ ಬಳಸುವ ಒಂದು ಪ್ರಮುಖ ಕಚ್ಚಾ ಪದಾರ್ಥ. ಕಬ್ಬಿಣದ ಅದಿರಿನ ಗಣಿಗಾರಿಕೆಯ 98% ರಷ್ಟು ಪ್ರಮಾಣವನ್ನು ಉಕ್ಕನ್ನು ತಯಾರಿಸಲೆಂದು ಉಪಯೋಗಿಸಲಾಗುತ್ತದೆ.[೧] ನಿಜವಾಗಿಯೂ, ಕಬ್ಬಿಣದ ಅದಿರು ಒಂದು "ಬೇರೆ ಯಾವುದೇ ಉಪಯುಕ್ತ ವ್ಯಾಪಾರೋತ್ಪನ್ನಗಳಿಗಿಂತ ಅತಿ ಹೆಚ್ಚಾಗಿ ಅಂತರಾಷ್ಟೀಯ ಆರ್ಥಿಕತೆಯಲ್ಲಿಯೇ ಸಮಗ್ರತೆ ಹೊಂದಿದೆ, ಬಹುಶಃ ತೈಲವೊಂದನ್ನು ಹೊರತುಪಡಿಸಿ ಎಂಬಂಥ ವಾದ ನಡೆಯುತ್ತಲೇ ಬಂದಿದೆ."[೨]
ಮೂಲಗಳು
ಬದಲಾಯಿಸಿಲೋಹಯುಕ್ತ ಕಬ್ಬಿಣವು ಮೂಲಾಂಶಗಳಿಗೆ ಸಂಬಂಧಿಸಿದಂತೆ, ಭೂಮಿಯ ಮೇಲ್ಮೈಯ ಮೇಲೆ ಸಿಗಲಾರದು. ಮೆಟಿಯೋರೈಟ್ಗಳಿಂದ ಕಬ್ಬಿಣ-ನಿಕ್ಕಲ್ (ಬೆರಕೆ ಲೋಹಗಳು) ಅಲಾಯ್‍ಗಳಂತೆ ಹೊರತು ಪಡಿಸಿ, ಮತ್ತು ಭೂಮಿಯ ಆಳವಾದ ತಿರುಳು ಝೆನೋಲಿತ್ಗಳಂತಹ ತುಂಬಾ ಅವರೂಪದ ಆಕಾರಗಳಲ್ಲಿ ಲೋಹಯುಕ್ತ ಕಬ್ಬಿಣ ದೊರೆವುದು. ಆದ್ದರಿಂದ ಮಾನವ ಕೈಗಾರಿಕೆಗಳಿಂದ ಉಪಯೋಗಿಸಲ್ಪಡುವ ಕಬ್ಬಿಣದ ಎಲ್ಲ ಮೂಲಗಳು ಕಬ್ಬಿಣ ಆಕ್ಸೈಡ್ ಖನಿಜಗಳನ್ನು ಬಳಸುತ್ತಿವೆ.ಪ್ರಸ್ತುತ ಹೆಮಟೈಟ್ ಅನ್ನು ಪ್ರಾಥಮಿಕ ರೂಪದಲ್ಲಿಯೇ ಕಾರ್ಖಾನೆಯಲ್ಲಿ ಉಪಯೋಗಿಸಲಾಗುತ್ತಿದೆ.
ಹೇಗಾದರೂ, ಕೆಲವೊಂದು ಸಂದರ್ಭಗಳಲ್ಲಿ, ಉನ್ನತ ದರ್ಜೆಯ ಹೆಮಟೈಟ್ ಅದಿರು ಸುಲಭ ಮಾರ್ಗದಲ್ಲಿ ದೊರೆಯದೇ ಇದ್ದಾಗ ಕಾರ್ಖಾನೆಯು ಸಮಾಜದಿಂದ ಕೀಳು ಮಟ್ಟದ ಕಬ್ಬಿಣದ ಅದಿರ ಮೂಲಗಳು ಹೆಚ್ಚಾಗಿ ಉಪಯೋಗಿಸಲ್ಪಡುತ್ತಾ ಇವೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟ್ಯಾಕೋನೈಡ್ನ ಉಪಯೋಗ ಒಳಗೊಂಡಿದೆ. ಎರಡನೇ ವಿಶ್ವಯುದ್ಧದ ನಂತರ ಮತ್ತು ಗೋಎತೈಟ್ ಅಥವಾ ಜೌಗು ಪ್ರದೇಶದ ಅದಿರುಗಳನ್ನು ಅಮೇರಿಕಾ ಕ್ರಾಂತಿಯಲ್ಲಿ ಮತ್ತು ನೆಪೋಲಿಯೋನಿಕ್ ಯುದ್ಧಗಳಲ್ಲಿ ಕೂಡ ಇದು ಉಪಯುಕ್ತವೆನಿಸಿತು. ಪೂರ್ವ ಇತಿಹಾಸದ ಸಮಾಜಗಳು ಕಬ್ಬಿಣದ ಅದಿರಿನ ಒಂದು ಮೂಲವೆಂದು ಲ್ಯಾಟರೈಟ್ನ್ನು ಉಪಯೋಗಿಸಿದ್ದವು. ಮ್ಯಾಗ್ನಟೈಟ್ ಎಂಬುದು ಮ್ಯಾಗ್ನಟಿಕ್ ಆಗಿದ್ದರಿಂದ ಅದು ಆಗಾಗ್ಗೆ ಉಪಯೋಗಿಸಲ್ಪಡುತ್ತಿತ್ತು ಹೀಗಾಗಿ ಗ್ಯಾಂಗ್ಯೂ ಖನಿಜಗಳಿಂದ ಸುಲಭವಾಗಿ ಬಿಡುಗಡೆಯಾಗುತ್ತದೆ. ಸಾಮಾನ್ಯವಾಗಿ ಕಬ್ಬಿಣ ಅದಿರಿನ ಕೆಳದರ್ಜೆ ಮೂಲಗಳಿಗೆ ಸಂಸ್ಕರಣದ ಅವಶ್ಯಕತೆಯಿದೆ. ಸಿಲಿಕೇಟ್ಸ್ಗೆ ಸಂಬಂಧಿತ ಹೆಮಟೈಟ್‍ನ ಹೆಚ್ಚಿನ ಸಾಂದ್ರತೆಯಿಂದಾಗಿ, ಸಾಮಾನ್ಯವಾಗಿ ಈ ಸಂಸ್ಕರಣವು ಜಜ್ಜುವಿಕೆ ಮತ್ತು ಪುಡಿ ಪುಡಿಗೊಳಿಸುವಿಕೆಗಳೆರಡರ ಒಂದು ಸಂಯೋಗದೊಂದಿಗೆ ಭಾರವಾದ ದ್ರವ ಬೇರ್ಪಡಿಸುವಿಕೆಯನ್ನು ಒಳಗೊಂಡಿದೆ. ಅತ್ಯುತ್ತಮವಾಗಿ ಪುಡಿಯಾದ ಅದಿರಿನ ಮೇಲೆ ಬೆಂಟೊನೈಟ್ ಹೊಂದಿರುವ ಒಂದು ದ್ರಾವಣದಲ್ಲಿ ಮುಳುಗಿಸುವುದು ಅಥವಾ ದ್ರಾವಣದ ಸಾಂದ್ರತೆಯನ್ನೇರಿಸುವ ಬೇರೆ ಪ್ರಚೋದಕ ವಸ್ತುವನ್ನು ಹಾಯಿಸುವ ಮೂಲಕ ಈ ಸಂಸ್ಕರಣ ಕಾರ್ಯಾಚರಣೆ ಮಾಡಬೇಕು. ದ್ರಾವಣದ ಸಾಂದ್ರತೆಯನ್ನು ಸರಿಯಾದ ರೀತಿಯಲ್ಲಿ ಮಾಪನಾಂಕ ನಿರ್ಣಯಿಸಿದಾಗ, ಹೆಮಟೈಟ್ ಕೆಳಗೆ ಇಳಿದು ತಳಸೇರುವುದು ಮತ್ತು ಸಿಲಿಕೇಟ್ ಖನಿಜ ಚೂರು ಚೂರಾದ ತುಣುಕುಗಳು ತೇಲುವವು ಹಾಗೂ ಅವನು ಹೊರತೆಗೆದು ಬೇರ್ಪಡಿಸಲಾಗುವುದು.
ಕಬ್ಬಿಣದ ಅದಿರಿನ ಗಣಿಗಾರಿಕೆಯ ವಿಧಾನಗಳು, ಅದಿರನ್ನು ಅಗೆಯುವುದರ ಆಧಾರದ ಮೇಲೆ ವರ್ಗೀಕರಿಸಲ್ಪಟ್ಟು ಭಿನ್ನವಾಗಿದೆ. ಪ್ರಸ್ತುತದಲ್ಲಿ, ಅದಿರಿನ ನಿಕ್ಷೇಪಗಳ ಖನಿಜ ವಿಜ್ಞಾನ (ಶಾಸ್ತ್ರ) ಮತ್ತು ಭೂವಿಜ್ಞಾನದ ಆಧಾರದ ಮೇಲೆ, ಪ್ರಮುಖವಾಗಿ 4 ಪ್ರಮುಖ ಕಬ್ಬಿಣ ಅದಿರ ಗಣಿಗಳ ಕಾರ್ಯಾಚರಣೆ ನಡೆಯುತ್ತಿದೆ. ಅವುಗಳೆಂದರೆ, ಮ್ಯಾಗ್ನಾಟೈಟ್, ಟೈಟಾನೋಮ್ಯಾಗ್ನಾಟೈಟ್, ಅಪಾರ ಹೆಮಟೈಟ್ ಮತ್ತು ಪಿಸೊಲಿಟಿಕ್ ಕಬ್ಬಿಣಕಲ್ಲು ಗಣಿಗಳು
ವಲಯಗಳುಳ್ಳ ಕಬ್ಬಿಣ ಗಣಿಗಳು
ಬದಲಾಯಿಸಿ(ಕ್ವಾರ್ಟ್ಸ್ನಂತೆ) ಸಿಲಿಕಾ ಮತ್ತು ಕಬ್ಬಿಣದ ತೆಳುವಾದ ಖನಿಜಗಳ ಪದರವಾಗಲ್ಪಟ್ಟು ಅವುಗಳಿಂದ ಪ್ರಧಾನವಾಗಿ ಸಂಯೋಗ ಹೊಂದಿದ ಸಂಚಿತ ಶಿಲೆಗಳ ಆಕಾರ ರೂಪ ಬದಲಾವಣೆಗೊಂಡು ರೂಪಾಂತರವೇ BIF ಅಂದರೆ ಬ್ಯಾಂಡೆಡ್ ಐರನ್ ಫಾರ್ಮೇಶನ್ಗಳು. ಈ ಕಬ್ಬಿಣಾಂಶದ ಖನಿಜವು ಕಾರ್ಬೋನೆಟ್ ಸೈಡ್‌ರೈಟ್ ಇರುವುದನ್ನು ತೋರಿಸಬಹುದು. ಆದರೆ ಅವನ್ನು ಮ್ಯಾಗ್ನಾಟೈಟ್ ಅಥವಾ ಹೆಮಟೈಟ್ ಆಕ್ಸೈಡ್‌ಗಳನ್ನು ಹೊಂದಿರುವ ಕಬ್ಬಿಣದ ಅದಿರುಗಳಂತೆ ಬಳಸಲಾಗುತ್ತದೆ.[೩] ಉತ್ತರ ಅಮೇರಿಕದೊಳಗೆ ಟ್ಯಾಕೊನೈಟ್ ಎಂಬುದಾಗಿ ಬ್ಯಾಂಡೆಡ್ ಐರನ್ ಫಾರ್ಮೇಶನ್‌ಗಳನ್ನು ಕರೆಯಲಾಗುತ್ತದೆ. BIF ಫಾರ್ಮೇಶನ್‌ಗಳ ಗಣಿಗಾರಿಕೆಯು ಒರಟಾದ ಕಚ್ಚಾ ಅದಿರಿನ ಜಜ್ಜುವಿಕೆ ಮತ್ತು ಜರಡಿ ಹಿಡಿಯುವಿಕೆಯನ್ನು ಒಳಗೊಂಡಿದೆ. ಸ್ಪಟಿಕೀಕರಿಸಲ್ಪಟ್ಟ ಮ್ಯಾಗ್ನಾಟೈಟ್ ಮತು ಕ್ವಾರ್ಟ್ಸ್‌ಗಳನ್ನು ಸಾಕಷ್ಟು ಚೆನ್ನಾಗಿ ಪಡೆಯಲು ಅದಿರನ್ನು ನುಣ್ಣಗೆ ಪುಡಿಮಾಡಿ, ಒರಟಾಗಿ ಜಜ್ಜಿ ಮತ್ತು ಉತ್ತಮವಾಗಿ ರುಬ್ಬುವ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಪರಿಣಾಮಕಾರಿಯುತ ಪುಡಿಯು ಒಂದು ಮ್ಯಾಗ್ನೆಟಿಕ್ ಛೇದಕದ ಕೆಳಗೆ ಹಾದು ಹೋದ ನಂತರವೇ ಕ್ವಾರ್ಟ್ಸ್ ಹಿಂದೆ ಹಾಗೇ ಉಳಿದು ಬಿಡುವುದು.
ಈ ಗಣಿಗಾರಿಕೆಯು ಅದಿರಿನ ಮತ್ತು ಕಸದ ಅಪಾರವಾದ ಬೃಹತ್ ಪ್ರಮಾಣವನ್ನೇ ಚಲಿಸುವುದನ್ನು ಒಳಗೊಂಡಿದೆ. ಕಸ ರೂಪದ ನಿರುಪಯುಕ್ತ ಪದಾರ್ಥವು ಎರಡು ರೀತಿಯಲ್ಲಿ ಬರುತ್ತದೆ. (ಮುಲ್ಲಾಕ್) ಎಂಬ ಅದಿರಲ್ಲದೇ ಇರುವ ನಿಕ್ಷೇಪದೊಳಗಿನ (ಆಧಾರ ಶಿಲೆ) ಅಡಿಬಂಡೆ, ಹಾಗೂ (ಗಾಂಗ್ಯೂ) ಎಂಬ ಅದಿರಿನ ಬಂಡೆಯ ಒಂದು ಸ್ವಾಭಾವಿಕವಾಗಿರುವ ಭಾಗವೆನಿಸುವ ಅನಗತ್ಯದ ಖನಿಜಗಳು ಸಿಗುತ್ತವೆ. ಈ ಮುಲ್ಲಾಕ್‌ನ್ನು ಅಗೆದಾಗ ಸಿಕ್ಕರೆ ಅದರ ಕಸದ ರಾಶಿಗಳಲ್ಲಿ ಈ ಹಾಕಲಾಗುವುದು ಮತ್ತು ಸಂಸ್ಕರಣ ಕ್ರಿಯೆಯಲ್ಲಿ ಬರುವ ಈ ಗ್ಯಾಂಗನ್ನು ಬೇರ್ಪಡಿಸಲಾಗುವುದು ಹಾಗೂ ಅದನ್ನು ಜರಡಿಯಿಂದ ಹಾಗೇ ಉಳಿದ ಕಸದ ರಾಶಿಯಂತೆ ತೆಗೆದು ಹಾಕಲಾಗುವುದು. ಟ್ಯಾಕೊನೈಟ್ ಎಂಬ ಜರಡಿಯ ಕಸವು ಹೆಚ್ಚಿನದಾಗಿ ಒಂದು ಕ್ವಾರ್ಟ್ಸ್ ಖನಿಜವಾಗಿದ್ದು, ಅದು ರಾಸಾಯನಿಕವಾಗಿ ನಿಷ್ಕ್ರೀಯತೆಯ ವಸ್ತುವಾಗಿದೆ. ಈ ಪದಾರ್ಥವನ್ನು ಅಗಾಧವಾದ, ನಿಯಂತ್ರಿತಗೊಂಡು ನೀರಿನ ಕೊಳಗಳಲ್ಲಿ ಶೇಖರಿಸಿಡಲಾಗುವುದು.
ಆರ್ಥಿಕವಾಗಿ ಉಳಿದಿರಲು ಮ್ಯಾಗ್ನಾಟೈಟ್‌ನ ವಾಣಿಜ್ಯಾ ಸೂಚಕ ಪರಿಣಾಮವೆಂದರೆ ಅದೂ ಕೂಡ ಅದರ ಸ್ಪಟಿಕತೆ (ಸ್ಪಟಿಕೀಯ) ಗುಣವೇ ಸರಿ ಅದರೊಂದಿಗೆ BIF ಬಂಡೆ ಸಮೂಹದ ಒಳಗಡೆ ಕಬ್ಬಿಣದ (ದರ್ಜೆ) ಗುಣಮಟ್ಟ, ಮತ್ತು ಮ್ಯಾಗ್ನಾಟೈಟ್ ಸಾಂದ್ರೀಕೃತ ಮಿಶ್ರಣದೊಳಗಿರುವ ಕಶ್ಮಲಕಾರಕ ವಸ್ತುಗಳು. ಹೆಚ್ಚಿನ ಮ್ಯಾಗ್ನಾಟೈಟ್ ಸಂಪತ್ತಿನ ಗಾತ್ರ ಮತ್ತು ತುಂಡು ಪ್ರಮಾಣದ ನಿಷ್ಪತ್ತಿಯ ಸಂಬಂದಿಸದ ವಿಷಯವಾಗಿರುತ್ತದೆ. ಹಾಗೆ BIF ಫಾರ್ಮೇಶನ್‌ಗಳು ನೂರು ಮೀಟರ್ ದಪ್ಪ, ನೂರು ಕಿ.ಮೀ. ನಷ್ಟು ಎಳೆ (ಉದ್ದ), ಮತ್ತು 2,500 ಮಿಲಿಯನ್‌ಗಿಂತ ಹೆಚ್ಚು ಟನ್‌ಗಳಿರುವ ಅದಿರು ಸುಲಭವಾಗಿ ಬರಬಹುದು.
ಒಂದು ನಿರ್ಧಿಷ್ಟವಾದ ಕಬ್ಬಿಣದ ದರ್ಜೆಯು, ಒಂದು ಮ್ಯಾಗ್ನಾಟೈಟ್ ಹೊತ್ತಿರುವ BIF ನಂಥಹ ವಲಯಗೊಂಡ ಕಬ್ಬಿಣ ರಚನೆಯು ಮುಂದೆ ಆರ್ಥಿಕವಾದ ಗುಣಮಟ್ಟ ತೋರುತ್ತದೆ. ಅದೆಂದರೆ 25% Fe , ಅದು ಒಂದು 33% ನಿಂದ 40% ನಷ್ಟು ಪ್ರತಿಫಲವನ್ನು ಭಾರವಾದ ಮ್ಯಾಗ್ನಾಟೈಟ್‌ನ ಮರುಗಳಿಕೆಯು ಸಾಂದ್ರಿಕೃತವಾದ 64% Fe ತೂಕಕ್ಕಿಂತ ಹೆಚ್ಚಿನದನ್ನು ಉತ್ಪತ್ತಿಮಾಡುತ್ತವೆ. ಸಾಂದ್ರಿಕೃತವಾದ ಒಂದು ನಿರ್ಧಿಷ್ಟ ಮ್ಯಾಗ್ನಾಟೈಟ್ ಕಬ್ಬಿಣದ ಅದಿರು 0.1% ಫಾಸ್ಪರಸ್, 3-7% ಸಿಲಿಕಾ ಮತ್ತು 3% ಗಿಂತ ಕಡಿಮೆ ಅಲ್ಯೂಮಿನಿಯಂಗಳನ್ನು ಹೊಂದಿವೆ.
ಮ್ಯಾಗ್ನಾಟೈಟ್‌ನ ಒಂದು ಕಾಳಿನ ಗಾತ್ರ ಮತ್ತು ಅದರ ಸಿಲಿಕಾ ತಳದ ರಾಶಿ ಜೊತೆಗೆ ಸಮ್ಮಿಶ್ರಗೊಳ್ಳುವ ಡಿಗ್ರಿಯು ರುಬ್ಬುವ ಪ್ರಾಮಾಣವನ್ನು ನಿರ್ಧರಿಸುತ್ತದೆ. ಈ ರುಬ್ಬುವ ಗಾತ್ರದಿಂದ ಒಂದು ಬಂಡೆ ಕೂಡ ನುಣ್ಣಗೆ ಪುಡಿಯಾಗಲ್ಪಟ್ಟು ಉತ್ಕೃಷ್ಟ ಮ್ಯಾಗ್ನಾಟಿಕ್ ಛೇದಕವು ಬರಲು ಸಾಧ್ಯವಾಗುವುದರಿಂದ ಅತ್ಯಂತ ಶುದ್ಧವಾದ ಮ್ಯಾಗ್ನಾಟೈಟ್ ಸಾಂದ್ರೀಕೃತವು ಒದಗಿಸಲು ದಾರಿಯಾಗುತ್ತದೆ.
ಇದು ಒಂದು ಹಿಟ್ಟಿನಂಥ ಗಿರಣಿ ಕ್ರಿಯೆ ನಡೆಯಲು ಬೇಕಾದ ಶಕ್ತಿಯ ಅವಶ್ಯಕತೆಗಳನ್ನು ನಿಶ್ಚಯಿಸುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಮ್ಯಾಗ್ನಾಟೈಟ್ BIF ನಿಕ್ಷೇಪಗಳು ಒಂದು ಕಡಿಮೆ ಸಿಲಿಕಾ ಮ್ಯಾಗ್ನಟೈಟ್ ಸಾಂದ್ರೀಕೃತವನ್ನು ಒದಗಿಸಲೆಂದು 32 ಮತ್ತು 45 ಮೈಕ್ರೋಮೀಟರ್ಸ್‌ನ ಒಳಗೆ ಭೂಮಿಯ ಪದರವಾಗಲ್ಪಟ್ಟಿವೆ. ಸಾಂದ್ರಿಕೃತ ಮ್ಯಾಗ್ನಾಟೈಟ್ ದರ್ಜೆ 63% ನ ತೂಕದಷ್ಟು Fe ಯು ಸಾಮಾನ್ಯವಾಗಿ ಇರುತ್ತದೆ. ಹಾಗೂ ಅದರೊಂದಿನ ಕಡಿಮೆ ಫಾಸ್ಪರಸ್, ಅಲ್ಪ ಪ್ರಮಾಣದ ಅಲ್ಯೂಮಿನಿಯ, ಕಡಿಮೆ ಟೈಟ್ಯಾನಿಯಂ, ಕಡಿಮೆ ಸಿಲಿಕಾ ಮತ್ತು ಒಂದು ಪೂರ್ವಿಕ ಬೆಲೆಗಿಂತ ಉಳಿದ ಬೇಡಿಕೆಯನ್ನು ಪೂರೈಸುತ್ತದೆ.
ಪ್ರಸ್ತುತದಲ್ಲಿ ಮ್ಯಾಗ್ನಾಟೈಟ್ ಕಬ್ಬಿಣವು ಮಿನ್ನೆಸೋಟಾ ಮತ್ತು ಮಿಚಿಗಾನ್U.S., ಮತ್ತು ಪಾಶ್ಚಿಮಾತ್ಯಕೆನಡಾ ಗಣಿ ಟ್ಯಾಕೊನೈಟ್ ರೂಪದಲ್ಲಿ ಅಗೆಯಲ್ಪಡುತ್ತಿವೆ.
ಬ್ರೆಜಿಲ್‌ನಲ್ಲಿ ಈಗ ಮ್ಯಾಗ್ನಾಟೈಟ್ ಜವಾಬ್ದಾರಿ ಹೊಂದಿರುವ BIF ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸಿ ಮಹತ್ತರವಾದ ಪ್ರಮಾಣದ ಅದಿರನ್ನು ಏಷ್ಯಾಗೆ ರಫ್ತು ಮಾಡಿದೆ. ಹಾಗೂ ಆಸ್ಟ್ರೇಲಿಯಾದಲ್ಲಿ ಪ್ರಾರಂಭಾವಸ್ಥೆಯ ಒಂದು ದೊಡ್ಡ ಮ್ಯಾಗ್ನಾಟೈಟ್ ಕಬ್ಬಿಣದ ಅದಿರಿನ ಕಾರ್ಖಾನೆಯಿದೆ.
ಮ್ಯಾಗ್ನಾಟೈಟ್ ಅದಿರಿನ ನಿಕ್ಷೇಪಗಳು
ಬದಲಾಯಿಸಿಗ್ರಾನೈಟ್ ಮತ್ತು ಅಲ್ಟ್ರಾಪೊಟಾಸಿಕ್ ಅಗ್ನಿ ಶಿಲೆಗಳು ಸಮಯಾನುಸಾರವಾಗಿ ಮ್ಯಾಗ್ನಾಟೈಟ್ (ಸ್ಪಟಿಕಗಳ) ಹರಳುಗಳನ್ನು ಪ್ರತ್ಯೇಕಿಸುತ್ತವೆ. ಹಾಗೂ ಆರ್ಥಿಕವಾದ ಸಾಂದ್ರೀಕೃತೆಗೆ ತಕ್ಕಂಥ ಮ್ಯಾಗ್ನಾಟೈಟ್‌ನ ದ್ರವ್ಯರಾಶಿಗಳನ್ನೇ ರಚಿಸುತ್ತವೆ. ಚಿಲಿಯಲ್ಲಿ ಗುರುತಿಸುವಂತೆ ಸ್ವಲ್ಪ ಕಡಿಮೆ ಕಬ್ಬಿಣದ ಅದಿರು ನಿಕ್ಷೇಪಗಳು ಅಗ್ನಿ ಪರ್ವತಗಳ ಸ್ಪೋಟದಿಂದ ಹರಿದು ಬಂದು ರಚಿಸಲ್ಪಟ್ಟಿವೆ. ಇವು ಮ್ಯಾಗ್ನಾಟೈಟ್ ಫಿನೊಕ್ರಿಸ್ಟ್‌ಗಳ ಬೃಹತ್ತರವಾದ ಶೇಖರಣಾ ರಾಶಿಗಳನ್ನು ಹೊಂದಿದೆ. ಈ ರೀತಿಯ ಅಗ್ನಿಪರ್ವತ ರಚನೆಗಳಿಂದಾಗಿ ಮ್ಯಾಗ್ನಾಟೈಟ್‌ನ ಹರಿವುಗಳಲ್ಲಿಯೇ ಅಲ್ಯೂವಿಯಲ್ ಶೇಖರಣೆಯ ರಾಶಿಗಳು ಕೂಡ, ಚಿಲಿಯ ಮ್ಯಾಗ್ನಾಟೈಟ್ ಕಬ್ಬಿಣ ಅದಿರ ನಿಕ್ಷೇಪಗಳು ಅಟಕಾಮಾ ಮರುಭೂಮಿಯೊಳಗಡೆಯೇ ರಚನೆಯಾಗಿವೆ.
ಕೆಲವು ಮ್ಯಾಗ್ನಾಟೈಟ್ ಸ್ಕಾರ್ನ್ ಮತ್ತು ಹೈಡ್ರೋಥರ್ಮಲ್ ನಿಕ್ಷೇಪಗಳು ಸ್ವಲ್ಪ ಪರಿಷ್ಕರಣೆಯ ಅಗತ್ಯತೆಯನ್ನು ಹೊಂದಿದೆ. ಹಾಗಾಗಿ ಹಿಂದಿನ ಕಾಲದಲ್ಲಿಯೇ ಮೇಲ್ದರ್ಜೆಯ ಕಬ್ಬಿಣ ಅದಿರ ನಿಕ್ಷೇಪಗಳ ರೀತಿಯಲ್ಲಿಯೇ ಕಾರ್ಯನಿರ್ವಹಿಸಲ್ಪಟ್ಟಿವೆ. ಮಲೇಷ್ಯಾ ಮತ್ತು ಇಂಡೋನೇಷ್ಯಾಗಳಲ್ಲಿನ ಪರಿಸರದಲ್ಲಿ ಈ ರೀತಿಯ ಹಲವು ಗ್ರಾನೈಟ್ ಸಂಯೋಜಿತ ನಿಕ್ಷೇಪಗಳಿವೆ.
ಮ್ಯಾಗ್ನಾಟೈಟ್ ಕಬ್ಬಿಣ ಅದಿರಿನ ಬೇರೆ ಬೇರೆ ಮೂಲಗಳು ರೂಪಾಂತರಗೊಂಡ ಅಗಾಧವಾದ ಮ್ಯಾಗ್ನಾಟೈಟ್ ಅದಿರ ಶೇಖರಣೆಗಳನ್ನು ಒಳಗೊಂಡಿವೆ. ಅಂತಹ ಶೇಖರಿತ ಅದಿರುಗಳು ಸ್ಯಾವೇಜ್ ನದಿಯಲ್ಲಿನ, ಟಸ್ಮೇನಿಯಾವು ಅಲ್ಟ್ರಾಮಾಫಿಕ್ಗಳು ಮತ್ತು ಓಫಿಯೋಲೈಟ್ಗಳ ಹಂಚಿಕೆಯಿಂದಾಗಿ ರಚಿಸಲ್ಪಟ್ಟಿವೆ.
ಮತ್ತೊಂದು, ಕಬ್ಬಿಣ ಅದಿರಿನ ಚಿಕ್ಕ ಮೂಲವೆಂದರೆ ಸ್ತರಗಳ ಮಧ್ಯೆ ನುಗ್ಗಿದ ಶಿಲಾರಸದ ಹಸ್ತಕ್ಷೇಪಗಳಲ್ಲಿ ಶೇಖರಿಸಲ್ಪಟ್ಟ ಮ್ಯಾಗ್ನೇಟಿಕ್ ರಾಶಿಗಳು. ಇವು ಒಂದು ವಿಧವಾದ ಟೈಟಾನಿಯಂ ಮತ್ತು ವೆನೆಡಿಯಂ ಜೊತೆಗೆ ಆಗಾಗ್ಗೆ ತಯಾರಾದ ಮ್ಯಾಗ್ನಾಟೈಟ್‌ನ್ನು ಒಳಗೊಂಡಿವೆ. ಈ ಅದಿರುಗಳು ಒಂದು ಸುವ್ಯವಸ್ಥೆಯ ಪ್ರದೇಶದಂತೆ (ನಿಚೆ) ಮಾರುಕಟ್ಟೆಯನ್ನು ರಚಿಸುತ್ತವೆ. ಅದರೊಂದಿಗೆ ವಿಶೇಷದ ಅದಿರು ಕರಗಿಸುವ ಕುಲುಮೆಗಳನ್ನು ಬಳಸಲಾಗುತ್ತದೆ. ಇದರಿಂದ ವೆನೆಡಿಯಂ, ಟೈಟಾನಿಯಂ, ಕಬ್ಬಿಣಗಳನ್ನು ಪುನಃ ಪಡೆಯಬಹುದು. ಅತ್ಯವಶ್ಯಕವಾಗಿ ಈ ಎಲ್ಲ ಅದಿರುಗಳು ಸಂಸ್ಕರಿಸಲ್ಪಟ್ಟು ವಲಯಗೊಂಡು ಕಬ್ಬಿಣ ಸೃಷ್ಟಿಯ ಅದಿರುಗಳಿಗೆ ಒಂದೇ ರೀತಿಯಲ್ಲಿರುತ್ತದೆ. ಆದರೆ ಪ್ರಾಯೋಗಿಕವಾಗಿ ಅವು ಕ್ರಷಿಂಗ್ ಮತ್ತು ಸ್ಕ್ರೀನಿಂಗ್‌ಗಳ ಮೂಲಕ ಸುಲಭವಾಗಿ ಹೆಚ್ಚು ಮೇಲ್ದರ್ಜೆ ಹೊಂದುತ್ತವೆ. ಈ ನಿರ್ಧಿಷ್ಟ ಟೈಟ್ಯಾನೋಮ್ಯಾಗ್ನಾಟೈಟ್ ಸಾರಯುಕ್ತ ಸಾಂದ್ರೀಕೃತವು 57% Fe, 12% Ti ಮತ್ತು 0.5% ನಷ್ಟು ದರ್ಜೆಯ ಗುಣಮಟ್ಟ ಹೊಂದಿವೆ V
2O
5.[ಸೂಕ್ತ ಉಲ್ಲೇಖನ ಬೇಕು]
ಹೆಮಟೈಟ್ ಅದಿರು
ಬದಲಾಯಿಸಿಹೆಮಟೈಟ್ ಕಬ್ಬಿಣದ ಅದಿರು ನಿಕ್ಷೇಪಗಳು ಪ್ರಸ್ತುತದಲ್ಲಿ ಎಲ್ಲಾ ಖಂಡಗಳಲ್ಲಿಯೂ ಉಪಯೋಗಿಸಲ್ಪಡುತ್ತಿವೆ. ಅದರಲ್ಲೂ ದಕ್ಷಿಣ ಅಮೇರಿಕ, ಆಸ್ಟ್ರೇಲಿಯಾ ಮತ್ತು ಏಷ್ಯಾಗಳಲ್ಲಿ ಅತ್ಯಂತ ದೊಡ್ಡ ಪ್ರಾಮಾಣದಲ್ಲಿ ತನ್ನ ಪ್ರಭಾವ ಬೀರಿದೆ. ಹೆಚ್ಚಿನ ದೊಡ್ಡ ಹೆಮಟೈಟ್ ಕಬ್ಬಿಣದ ಅದಿರು ನಿಕ್ಷೇಪಗಳು ಮೆಟಾಸೋಮ್ಯಾಟಿಕಲೀಯಿಂದ ಮೂಲಾಧಾರ ಹೊಂದಿದ್ದು, ರೂಪಾಂತರಗೊಂಡ BIF ಗಳ ಮತ್ತು ಅತಿವಿರಳವಾದ ಅಗ್ನಿಶಿಲೆ ಶೇಖರಣೆಗಳು ಜೋಡಣೆ ಹೊಂದಿರುತ್ತವೆ.
ನಿಜವಾಗಿಯೂ ಹೆಮಟೈಟ್ ಕಬ್ಬಿಣವು, ಮ್ಯಾಗ್ನಾಟೈಟ್ ತಯಾರಿಸಿದ BIF ಗಳಿಗಿಂತ ಅಥವಾ ಬೇರೆ ಬಂಡೆಗಳಿಗಿಂತ ವಿರಳವಾಗಿದೆ. ಇಂಥ ಬಂಡೆಗಳು ಮುಖ್ಯ ಸ್ಥಾನ ಅಥವಾ ಪ್ರೋಟೋಲಿಥಿಕ್ ಬಂಡೆಗಳನ್ನು ಸೃಷ್ಟಿಸಿವೆ. ಆದರೆ ಗಣನೀಯವಾಗಿ, ಕಾರ್ಯನಡೆಸಲು ಇದು ಲೆಕ್ಕಕ್ಕೆ ಬಾರದಷ್ಟು ಅಗ್ಗವೆನಿಸಿದೆ. ಸಾಮಾನ್ಯವಾಗಿ ಇದರ ಅತೀ ಹೆಚ್ಚಿನ ಕಬ್ಬಿಣಾಂಶ ಹೊಂದಿರುವಿಕೆಯಿಂದಾಗಿ ಇದಕ್ಕೆ ಸಂಸ್ಕರಣ ಕ್ರಿಯೆಯ ಅಗತ್ಯವಿಲ್ಲ. ಆದಾಗ್ಯೂ, ಮ್ಯಾಗ್ನಾಟೈಟ್ ಅದಿರುಗಳಿಗಿಂತ ಹೆಮಟೈಟ್ ಅದಿರುಗಳು ಹೆಚ್ಚು ಗಟ್ಟಿಯಾಗಿವೆ. ಆದ್ದರಿಂದ ಗಣನೀಯವಾದ ಹೆಚ್ಚಿನ ಶಕ್ತಿಯ ಅಗತ್ಯವು ಜಜ್ಜಲು ಮತ್ತು ನುಣ್ಣಗೆ ಪುಡಿಮಾಡಲು (ಸಂಸ್ಕರಣ ಕ್ರಿಯಿಗಾಗಿ) ಬೇಕು. ಅದೂ ಪರಿಷ್ಕರಣೆ ಅವಶ್ಯಕತೆ ಇದ್ದಾಗ ಮಾತ್ರ. ಅನಗತ್ಯ ವಸ್ತುಗಳ ಹೆಚ್ಚಿನ ಕೇಂದ್ರೀಕತೆಯ ರಾಶಿಗಳು ಮಹತ್ವರೀತಿಯಲ್ಲಿ ಕೂಡ ಹೆಮಟೈಟ್ ಅದಿರಿನಲ್ಲಿ ಇರಬಹುದಾಗಿದೆ. ನಿಜವಾಗಿ ಹೇಳಬೇಕೆಂದರೆ ಫಾಸ್ಪರಸ್, ನೀರಿನ ಅಂಶ (ಫಿಸೋಲೈಟ್ ಸಂಚಿತ ಶಿಲೆ ಒಟ್ಟುಗೂಡಿರುವಿಕೆ ವಿಶೇಷವಾಗಿ) ಮತ್ತು ಅಲ್ಯೂಮಿನಿಯಂ ಗಳಲ್ಲಿ ಅಧಿಕಾಂಶವಿರುತ್ತದೆ. (ಜೇಡಿಮಣ್ಣು ಫಿಸೋಲೈಟ್‌ಗಳೊಳಗೆ) ರಫ್ತಾಗುವ ದರ್ಜೆಯ ಹೆಮಟೈಟ್ ಅದಿರು ಸಾಮಾನ್ಯವಾಗಿ 62-64% Fe ಪ್ರಮಾಣದಲ್ಲಿದೆ [ಸೂಕ್ತ ಉಲ್ಲೇಖನ ಬೇಕು].
ಉತ್ಪಾದನೆ ಮತ್ತು ಬಳಕೆ
ಬದಲಾಯಿಸಿದೇಶ | ಉತ್ಪಾದನೆ |
---|---|
ಚೈನಾ | 820 (2009) |
ಆಸ್ಟ್ರೇಲಿಯಾ | 470 (2009) |
ಬ್ರೆಝಿಲ್ | 250 |
ಭಾರತ | 150 |
ರಷಿಯಾ | 105 |
ಉಕ್ರೇನ್ | 73 |
ಯುನೈಟೆಡ್ ಸ್ಟೇಟ್ಸ್ | 54 |
ದಕ್ಷಿಣ ಆಫ್ರಿಕಾ | 40 |
ಇರಾನ್ | 35 [೫] |
ಕೆನಡಾ | 33 |
ಸ್ವೀಡನ್ | 24 |
ವೆನೆಜುವೆಲಾ | 20 |
ಕಝಖ್‌ಸ್ತಾನ್ | 15 |
ಮೌರಿತಾನಿಯಾ | 11 |
ಇತರೆ ದೇಶಗಳು | 43 |
ಒಟ್ಟು ಪ್ರಪಂಚ | 1690 |
ಪ್ರಪಂಚದಲ್ಲಿ ಅತಿ ಹೆಚ್ಚು ಸಾಮಾನ್ಯವಾಗಿ ಬಳಸುವ ಲೋಹ ಕಬ್ಬಿಣ-ಸ್ಟೀಲ್ ಎಂಬುದು ಕಬ್ಬಿಣದ ಅದಿರಿನ ಒಂದು ಸೂಚಕ ವಸ್ತು. ಒಂದು ವರ್ಷದಲ್ಲಿ 95% ನಷ್ಟು ಅಧಿಕವಾಗಿ ಎಲ್ಲಾ ಲೋಹಗಳಲ್ಲಿಯೇ ಕಬ್ಬಿಣ ಸ್ಟೀಲ್ ಉಪಯೋಗಿಸಲ್ಪಡುತ್ತದೆ.[೨] ಸ್ಟ್ರಕ್ಚರಲ್ ಇಂಜಿನಿಯರಿಂಗ್ ಅಪ್ಲಿಕೇಶನ್ಸ್‌ನಲ್ಲಿ ಮತ್ತು ಆಟೋಮೊಬೈಲ್ಸ್, ಕಡಲ ಬಳಿ ವಾಸ ಮಾಡಲು ಹಾಗೂ (ಯಂತ್ರೋಪಕರಣಗಳು) ಸಾಮಾನ್ಯ ಕಾರ್ಖಾನೆ ಉಪಯೋಗಗಳಲ್ಲಿ ಪ್ರಮುಖವಾಗಿ ಇದು ಬಳಸಲ್ಪಟ್ಟಿದೆ.
ಕಬ್ಬಿಣವಿರುವ ಹೇರಳ ಬಂಡೆಗಳು ಜಗತ್ತಿನಾದ್ಯಂತ ಸಾಮಾನ್ಯವಾಗಿವೆ ಆದರೆ ವಾಣಿಜ್ಯ ದರ್ಜೆಯ ಅದಿರಿನ ಗಣಿಗಾರಿಕೆ ಕಾರ್ಯಾಚರಣೆಗಳು ಪಕ್ಕದ ಒಂದು ಟೇಬಲ್‌ನಲ್ಲಿರುವ ಪಟ್ಟಿಮಾಡಿದ ದೇಶಗಳಿಂದ ನಿರ್ವಹಿಸಲ್ಪಡುತ್ತಿವೆ. ಕಬ್ಬಿಣದ ಅದಿರು ನಿಕ್ಷೇಪಗಳಿಗಾಗಿ ಆರ್ಥಿಕವಾದ ಒಂದು ದೊಡ್ಡ ನಿರ್ಬಂಧವು ಅಗತ್ಯವಾಗಿ ಅದರ ದರ್ಜೆ ಅಥವಾ ನಿಕ್ಷೇಪದ ಗಾತ್ರವೇನಲ್ಲ. ಏಕೆಂದರೆ ಭೂವಿಜ್ಞಾನದ ಪ್ರಕಾರ ನಿರ್ಧಿಷ್ಟ ಬಂಡೆಗಳ ಸಾಕಷ್ಟು ಇರುವಿಕೆಯ ಸಾಗಾಣಿಕಾ ಸುಂಕವನ್ನು ಸಾಬೀತು ಮಾಡುವುದು ಕಠಿಣವೇನಲ್ಲ. ಮಾರುಕಟ್ಟೆಗೆ ಸಂಬಂಧಿಸಿದಂತೆ ಕಬ್ಬಿಣ ಅದಿರಿನ ಸ್ಥಾನವು ಒಂದು ಪ್ರಮುಖ ನಿರ್ಬಂಧ. ರೈಲ್ವೆ ಕಾಮಗಾರಿ ಉದ್ಯಮ ಮಾರುಕಟ್ಟೆಗೆ ಬರಲು ಮತ್ತು ಹಾಗೇ ಮಾಡಲು ತಗಲುವ ಶಕ್ತಿಯ ವೆಚ್ಚಗಳು ಒಂದು ಮುಖ್ಯ ಇತಿಮಿತಿಯಿದೆ.
ಕಬ್ಬಿಣ ಅದಿರ ಗಣಿಗಾರಿಕೆ ಒಂದು ದೊಡ್ಡ ಪ್ರಮಾಣದ ಕಡಿಮೆ ಅಂತರ ವ್ಯಾಪಾರವಿರುವ ಅಂದಾಜು ಲೆಕ್ಕದ ವಾಣಿಜ್ಯೋದ್ಯಮ. ಮೂಲಭೂತ ಲೋಹಗಳಿಗಿಂತ ಮಹತ್ವದ ಬೆಲೆಯ ಕಬ್ಬಿಣಕ್ಕಿದೆ ಹಾಗಾಗಿ ಇದರ ಬೆಲೆಯು ಬೇರೆ ಪ್ರಮುಖ ಲೋಹಗಳಿಗಿಂತ ಕಡಿಮೆ.[೬] ಇದು ಒಂದು ಹೆಚ್ಚಿನ ಬಂಡವಾಳ ನಿರೀಕ್ಷೆಯ ಹಾಗೂ ವ್ಯಾಪಾರೋದ್ಯಮದಲ್ಲಿ ಮುಖ್ಯ ಹಣಹೂಡಿಕೆಯ ಅವಶ್ಯಕತೆಯಿದೆ. ಉದಾಹರಣೆಗೆ ಗಣಿಯಿಂದ ಸಾಗಾಣೆ ಹಡಗಿಗೆ ಸರಬರಾಜು ಮಾಡಲು ರೈಲ್ವೆಗೆ ಹಣ ಹೂಡಬೇಕು. ಈ ಎಲ್ಲಾ ಕಾರಣಗಳಿಗಾಗಿ, ಕಬ್ಬಿಣ ಅದಿರ ಉತ್ಪಾದನೆಯು ಕೆಲವು ದೊಡ್ಡ ಉದ್ಯಮಿಗಳಡಿಯಲ್ಲಿ ಕೇಂದ್ರಿಕೃತವಾಗಿದೆ.
ವಾರ್ಷಿಕವಾಗಿ (1 ಬಿಲಿಯನ್ ಮೆಟ್ರಿಕ್ ಟನ್ಸ್‌ನಷ್ಟು) ಅದಿರು ಜಗತ್ತಿನ ಉತ್ಪಾದನೆಯ ಸರಾಸರಿ. ಜಗತ್ತಿನ ಬೃಹತ್ ಕಬ್ಬಿಣ ಅದಿರಿನ ಉತ್ಪಾದಕವೇ ಬ್ರೆಜಿಲಿಯನ್ ಗಣಿಗಾರಿಕಾ ಕಾರ್ಪೋರೇಶನ್ Vale ನಂತರ ಆಂಗ್ಲೋ - ಆಸ್ಟ್ರೇಲಿಯನ್ ಕಂಪನಿಗಳಾದ BHP ಬಿಲ್ಲಿಟನ್ ಮತ್ತು ರಿಯೋ ಟಿಂಟೋ ಗ್ರೂಪ್. ಮುಂದಿನ ಒಂದು ಆಸ್ಟ್ರೇಲಿಯನ್ ಪೂರೈಕೆದಾರ, ಫೋರ್ಟೆಸ್‌ಕ್ಯೂ ಮೆಟಲ್ ಗ್ರೂಪ್ಲಿಮಿಟೆಡ್, ಜಗತ್ತಿನಲ್ಲೇ ಆಸ್ಟ್ರೇಲಿಯದ ಉತ್ಪಾದನೆಯನ್ನು ದ್ವಿತಿಯವಾಗಿ ಕಾರ್ಯನಿರ್ವಹಿಸುವಂತೆ ಸಹಕರಿಸಿ ಮೇಲೆತ್ತಿದೆ.
ಸಾಗರ ತೀರದ ಬಳಿಯ ಕಬ್ಬಿಣ ಅದಿರ ವಾಣಿಜ್ಯೋದ್ಯಮದಲ್ಲಿ ಬೇರೆ ದೇಶಗಳಿಗೆ ಅದಿರಿನ ಹಡಗು ಸಾಗಾಣಿಕೆಯು 2004 ರಲ್ಲಿ 849 m ಟನ್‌ಗಳಷ್ಟು ಸರಬರಾಜಗಿತ್ತು.[೬] ಆಸ್ಟ್ರೇಲಿಯ ಮತ್ತು ಬ್ರೆಜಿಲ್‌ಗಳು 72% ನಷ್ಟು ಮಾರುಕಟ್ಟೆಯ ಕಡಲ ತಡಿ ಉದ್ಯಮವನ್ನು ನೆಡಸುತ್ತವೆ.[೬]
ಅವರ ನಡುವೆ ಬಿಎಚ್‌ಪಿ, ರಿಯೊ ಮತ್ತು ವೇಲ್‌ಗಳು ಈ ಮಾರುಕಟ್ಟೆಯ 66% ನಷ್ಟು ಆಡಳಿತವನ್ನು ವಹಿಸಿವೆ.[೬]
ಮೂರು ಪ್ರಮುಖ ಮೂಲಗಳಿಂದ ಆಸ್ಟ್ರೇಲಿಯಾದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ನಡೆಸಿವೆ: ಪಿಸೋಲೈಟ್ "ಚಾನೆಲ್ ಕಬ್ಬಿಣ ನಿಕ್ಷೇಪ" ಅದಿರು, ಪ್ರಾಥಮಿಕ ಬ್ಯಾಂಡೆಡ್ ಐರನ್ ಫಾರ್ಮೇಶನ್‌ಗಳ ಯಾಂತ್ರಿಕ ಸವಕಳಿಯಿಂದ (ನಾಶ) ನಿರ್ಮಾಣಗೊಂಡಿದೆ (ಜನ್ಮತಾಳಿದೆ) ಹಾಗೂ ಅಲ್ಯೂವಿಯಲ್ ಚಾನೆಲ್‌ಗಳ ಪನ್ನಾವೋನಿಕಾ, ವೆಸ್ಟರ್ನ್ ಆಸ್ಟ್ರೇಲಿಯಾಗಳಲ್ಲಿ ಶೇಖರಿಸಲ್ಪಟ್ಟಿವೆ ಮತ್ತು ಈ ಮೆಟಾಸೊಮ್ಯಾಟಿಕ್ ಆಗಿ ನಿರ್ವಹಿಸುವ ಪರ್ಯಾಯಗೊಂಡ ಬ್ಯಾಂಡೆಡ್ ಐರನ್ ಫಾರ್ಮೇಶನ್ ಅದಿರಿಗೆ ಸಂಬಂಧಿಸಿವೆ. ಅಂಥಹವುಗಳೆಂದರೆ ನ್ಯೂಮ್ಯಾನ್ನಲ್ಲಿ ಚಿಚೆಸ್ಟರ್ ರೇಂಜ್, ಹ್ಯಾಮರ್ಸ್ಲೇ ರೇಂಜ್ ಮತ್ತು ಕೂಲ್ಯನೊಬಿಂಗ್, ವೆಸ್ಟರ್ನ್ ಆಸ್ಟ್ರೇಲಿಯ. ಇತ್ತೀಚಿಗೆ ಅದಿರಿನ ಬೇರೆ ಬೇರೆ ವಿಧಗಳು ಮುನ್ನುಗುತ್ತೆವೆ. ಅಂಥಹವೆಂದರೆ ಆಕ್ಸಡೈಸ್ಡ್ ಫೆರುಜಿಯನಸ್ ಹಾರ್ಡ್‌ಕ್ಯಾಪ್ಸ್, ನಿದರ್ಶನವಾಗಿ ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿರುವ ಲೇಕ್ ಅರ್ಜೈಲ್ ಹತ್ತಿರದ ಲ್ಯಾಟರೈಟ್ ಕಬ್ಬಿಣ ಅದಿರ ನಿಕ್ಷೇಪಗಳು.
ಭಾರತದಲ್ಲಿನ ಕಬ್ಬಿಣ ಅದಿರಿನ ಒಂದು ಕೂಲಂಕುಷವಾದ ಪುನರ‍್ನವೀಕರಣಗೊಳ್ಳಬಲ್ಲ ಸಂರಕ್ಷಿತ ನಿಕ್ಷೇಪಗಳಲ್ಲಿ ಹೆಮಟೈಟ್ ಸುಮಾರು 9602 ಮಿಲಿಯನ್ ಟನ್‌ಗಳಷ್ಟಿದೆ ಮತ್ತು ಮ್ಯಾಗ್ನಾಟೈಟ್ ಸರಿಸುಮಾರು 3,408 ಮಿಲಿಯನ್ ಟನ್‌ಗಳಿಷ್ಟಿದೆ. ಮಧ್ಯ ಪ್ರದೇಶ, ಕರ್ನಾಟಕ, ಬಿಹಾರ, ಒಡಿಶಾ, ಗೋವಾ, ಮಹಾರಾಷ್ಟ್ರ, ಅಂದ್ರ ಪ್ರದೇಶ, ಕೇರಳ, ರಾಜಸ್ಥಾನ ಮತ್ತು ತಮಿಳು ನಾಡುಗಳು ಕಬ್ಬಿಣದ ಅದಿರಿನ ಪ್ರಮುಖ ಭಾರತೀಯ ಉತ್ಪಾದಕ ರಾಜ್ಯಗಳಾಗಿವೆ.
ಪ್ರಮುಖ ಗ್ರಾಹಕರಾಗಿ ಚೈನಾ, ಜಪಾನ್, ಕೊರಿಯಾ, ದಿ ಯುನೈಟೆಡ್ ಸ್ಟೇಟ್ಸ್ ಮತ್ತು ದಿ ಯೂರೋಪಿಯನ್ ಯೂನಿಯನ್‌ಗಳಿವೆ. ಜಗತ್ತಿನ ಕಬ್ಬಿಣ ಅದಿರಿನ ಅನುಭೋಗವು ಸರಾಸರಿಯಲ್ಲಿ ಒಂದು ವರ್ಷಕ್ಕೆ 10% ವೃದ್ಧಿಯಾಗುತ್ತದೆ.
ಪ್ರಸ್ತುತ ಕಬ್ಬಿಣ ಅದಿರಿನ ಅತ್ಯಂತ ದೊಡ್ಡ ಗ್ರಾಹಕನೆಂದರೆ ಚೀನಾ. ಇದು ಜಗತ್ತಿನ ಬೃಹತ್ ಸ್ಟೀಲ್ ಉತ್ಪಾದಿಸಿ ವರ್ಗಾವಣೆ ಮಾಡುವ ದೇಶವಾಗಿದೆ. 2004 ರಲ್ಲಿ ಕಡಲತಡಿಯ ವ್ಯಾಪಾರದ ಕಬ್ಬಿಣ ಅದಿರಿನಲ್ಲಿ 52% ಕೊಂಡುಕೊಳ್ಳುವ ಮೂಲಕ ಸಹ ಚೀನಾ ಅತಿ ದೊಡ್ಡ ಆಮದು ರಾಷ್ಟ್ರವಾಗಿದೆ.[೬] ಚೈನಾದ ತರುವಾಯ ಜಪಾನ್ ಮತ್ತು ಕೊರಿಯಾಗಳು, ಒಂದು ಅಗಾಧ ಪ್ರಮಾಣದ ಕಚ್ಚಾ ಕಬ್ಬಿಣ ಅದಿರನ್ನು ಮತ್ತು ಮೆಟಲರ್ಜಿಕಲ್ ಕಲ್ಲಿದ್ದಲನ್ನು ಅನುಭೋಗಿಸಿ ಬಳಸಿವೆ. 2006 ರಲ್ಲಿ, ಒಂದು 38% ನಷ್ಟು ವಾರ್ಷಿಕ (ಏರಿಕೆ) ಪ್ರಗತಿಯೊಂದಿಗೆ ಚೀನಾ 588 ಮಿಲಿಯನ್ ಟನ್ನಿನಷ್ಟು ಕಬ್ಬಿಣದ ಅದಿರನ್ನು ಉತ್ಪಾದಿಸಿದೆ.
ಕಬ್ಬಿಣ ಅದಿರಿನ ಮಾರುಕಟ್ಟೆ
ಬದಲಾಯಿಸಿಕಳೆದ 40 ವರ್ಷಗಳಲ್ಲಿಯೇ, ಗಣಿಗಾರಿಕೆ ನಡೆಸುವವರು ಮತ್ತು ಸ್ಟೀಲ್ ತಯಾರಕರ ನಡುವೆ ಒಂದು ವಿಧದ ಬೆಂಚ್ ಮಾರ್ಕ್ ಸಿಸ್ಟಂ ನಿಂದಾಗಿ ಕಬ್ಬಿಣದ ಅದಿರಿನ ಬೆಲೆಯೂ ನಿರ್ಧರಿತವಾಗಲ್ಪಟ್ಟಿವೆ. ಸಾಂಪ್ರದಾಯಕವಾಗಿ, ಈ ಎರಡು ಗುಂಪುಗಳ ನಡುವಿನ ಮೊಟ್ಟ ಮೊದಲ ವ್ಯವಹಾರವು ಬಾಕಿ ಉಳಿದ ಕಾರ್ಖಾನೆಗಳಿಂದ ಮುನ್ನಡೆಯಲ್ಪಟ್ಟಿರುವುದು ಈ ಒಂದು ಬೆಂಚ್ ಮಾರ್ಕ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದರಿಂದ ಆಗಿದೆ. ಹಾಗಾಗಿ, ಪ್ರತೀ ವರ್ಷ ಒಮ್ಮೆ ಒಂದೇ ಒಂದು ಬೆಲೆಯ ನಿರ್ಧರಿಸಲ್ಪಡುತ್ತದೆ. ಒಂದು ಸ್ಪಾಟ್ ಮಾರುಕಟ್ಟೆ ಕೂಡ ರೂಪಿಸಲ್ಪಟ್ಟಿದೆ. ಇದು ಸಾಂಪ್ರದಾಯಿಕವಾಗಿ ತುಂಬಾ ಚಿಕ್ಕದಾಗಿಯೇ ಉಳಿಯಲ್ಪಟ್ಟಿದೆ. ಈ ಒಂದು ವ್ಯವಸ್ಥೆಯ ಸಮಸ್ಯೆ ಏನೆಂದರೆ, ಬೆಂಚ್ ಮಾರ್ಕ್‌ಗಿಂತ ಸ್ಪಾಟ್ ಬೆಲೆಗಳು ಹೆಚ್ಚಾಗಿದ್ದಾಗ, ಗಣಿಗಾರಿಕೆ ನಡೆಸುವವರಿಗೆ ಹೂಡಿದ್ದ ಹಣಕಾಸಿನಲ್ಲಿ ನಷ್ಟವಾಗುತ್ತದೆ. ಆ ನಷ್ಟವನ್ನು ಸ್ಪಾಟ್ ಮಾರುಕಟ್ಟೆಯಲ್ಲೇ ಅದಿರನ್ನು ಮಾರಾಟ ಮಾಡುವ ಮೂಲಕ ಪುನಃ ಭರ್ತಿ ಮಾಡಿ ಆದಾಯ ಪಡೆಯಬಹುದಾಗಿದೆ. ಬೆಂಚ್ ಮಾರ್ಕಿಗಿಂತ ಸ್ಪಾಟ್ ಬೆಲೆಗಳು ಕಡಿಮೆಯಾದಾಗ, ಕೆಲವು ಸ್ಟೀಲ್‌ಮಿಲ್‌ಗಳು ಸ್ಪಾಟ್ ಮಾರುಕಟ್ಟೆಯಿಂದ ಅವರ ಅದಿರನ್ನೇ ಕೊಂಡುಕೊಳ್ಳುತ್ತಾ ಮೋಸ ಮಾಡುತ್ತದೆ.[೨] ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಬೆಂಚ್‌ಮಾರ್ಕ್ ವ್ಯವಸ್ಥೆಯು ಸ್ಟೀಲ್ ಮಿಲ್‍ಗಳಿಗೆ ಮಾತ್ರ ರಕ್ಷಣೆ ಒದಗಿಸುತ್ತದೆ. ಆದರೆ ಗಣಿಗಾರಿಕೆ ಉದ್ಯಮಿಗಳಿಗಲ್ಲ. ಬೇರೊಂದು ದೃಷ್ಟಿಕೋನದಲ್ಲಿ, ಈ ಬೆಂಚ್‌ಮಾರ್ಕ್ ವ್ಯವಸ್ಥೆಯು ಗಣಿಗಾರಿಕೆದಾರರಿಗೆ ಮತ್ತು ಸ್ಟೀಲ್ ಮಿಲ್‍ಗಳಿಗೆ ಬೆಲೆ ಸ್ಥಿರತೆಯ ಅವಕಾಶ ನೀಡುತ್ತದೆ. ಹೆಚ್ಚು ಪ್ರಭಾವ ಪೂರ್ಣವಾಗಿ ತಮ್ಮ ಉತ್ಪಾದನೆಯು ನಿಯೋಜಿತ ಕಾರ್ಯರೂಪಕ್ಕೆ ಬರಲೆಂದು ಅವರಿಗೆ ಅವಕಾಶ ಒದಗಿಸಿದೆ.
ಇತ್ತೀಚೆಗಿನ ವರ್ಷಗಳಲ್ಲಿ, ಈ ಬೆಂಚ್‌ಮಾರ್ಕ್ (ಸಿಸ್ಟಂ) ವ್ಯವಸ್ಥೆಯು ಮುರಿದು ಬೀಳಲು ಶುರುವಾಗಿದೆ. ಅತ್ಯಂತ ದೊಡ್ಡ ಗ್ರಾಹಕ, ಚೈನಾದೊಂದಿಗೆ ಸಂಘರ್ಷ ಉಂಟುಮಾಡಲು ಈ ತೀರ್ಮಾನಗಳು ಮತ್ತು ಸ್ಪಾಟ್ ಮಾರುಕಟ್ಟೆಯನ್ನು ಉಪಯೋಗಿಸಲೆಂದು ಕೆಲವು ಗಣಿ ಉದ್ಯಮಿಗಳು ತಮ್ಮ ಗ್ರಾಹಕರನ್ನು ಮುನ್ನುಗಿಸುವುದರ ಜೊತೆಗೆ ಕುಸಿತ ಕಂಡವು. ಈ ಸ್ಪಾಟ್ ಮಾರುಕಟ್ಟೆಯು ಗಾತ್ರದಲ್ಲಿ ಮತ್ತು ಪ್ರಾಮುಖ್ಯತೆಯಲ್ಲಿ ಏಳಿಗೆ ಹೊಂದಿದಂತೆಯೇ, ಹಣಕಾಸಿನ ಭದ್ರತೆಯ ರಕ್ಷಕಗಳಾದಂಥ ಕಬ್ಬಿಣದ ಅದಿರು ಸ್ಟಾಪ್‌ಗಳು ಕೂಡಿಕೊಂಡವು. ಕಲ್ಲಿದ್ದಲಿನಂತಹ ಸರಕುಗಳು ಮಾರುಕಟ್ಟೆ ಬೆಲೆಯ ಮಟ್ಟಕ್ಕೆ ಬೆಳೆದಿದ್ದು,ಕಬ್ಬಿಣದ ಅದಿರು ಇಂತಹ ಸರಕುಗಳೊಂದಿಗೆ ಬಹಳ ಕಾಲದಿಂದ ಪೈಪೋಟಿ ನಡೆಸುತ್ತಾ ಬಂದಿದೆ.[೨] ಆದರೆ,ಕೆಲವು ಸಂದರ್ಭಗಳಲ್ಲಿ ಅದಿರಿನ ಬೆಲೆಯು ಹಡಗಿನ ಸಾಗಣಿಕಾ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ.[೬] ಉದಾಹರಣೆಗೆ ಆಸ್ಟ್ರೇಲಿಯದ ಅದಿರನ್ನು ಚೀನಾಕ್ಕೆ ಸಾಗಿಸಲು ತಗಲುವ ವೆಚ್ಚ ಬ್ರೆಜಿಲ್ ನ ಅದಿರಿಗಿಂತ ಅತ್ಯಂತ ಕಡಿಮೆ. ಸಾಗಣಿಕಾ ವೆಚ್ಚ ಕಡಿಮೆ ಎನ್ನುವ ಕಾರಣದಿಂದ ಈ ಹಿಂದೆ ಆಸ್ಟ್ರೇಲಿಯಾದ ಉತ್ಪಾದಕರು ತಮ್ಮ ಅದಿರಿಗೆ ಹೆಚ್ಚಿನ ಬೇಡಿಕೆ ಇಟ್ಟಿರುವ ಉದಾಹರಣೆಗಳಿವೆ
ಬರಿದಾಗುವಿಕೆ
ಬದಲಾಯಿಸಿಇಂದು ಕಬ್ಬಿಣದ ಅದಿರಿನ ಕಣಜ ಯಥೇಚ್ಛವಾಗಿದ್ದಂತೆ ಕಂಡು ಬಂದರೂ, ಕೆಲವು ತಜ್ನರ ಲೆಕ್ಕಾಚಾರದ ಪ್ರಕಾರ ಸತತವಾದ ಬಳಕೆಯಿಂದ ಇಂತಹ ಸಂಪನ್ಮೂಲವೂ ಕೆಲವೇ ವರ್ಷ ಳಲ್ಲಿ ಬರಿದಾಗುವುದರಲ್ಲಿ ಸಂಶಯವಿಲ್ಲ. ಉದಾರಣೆಗೆವರ್ಲ್ಡ್ ವಾಚ್ ಸಂಸ್ಥೆಯಲೆಸ್ಟರ್ ಬ್ರೌನ್ ನ ಪ್ರಕಾರ ವರ್ಷಕ್ಕೆ 2% .[೭] ಬೆಳವಣಿಗೆಯಂತೆ ನಿರಂತರವಾಗಿ ಕಬ್ಬಿಣ ಅದಿರನ್ನು ಬಳಸುತ್ತಾ ಬಂದಲ್ಲಿ 64 ವರ್ಷಗಳಲ್ಲಿ ಸಂಪೂರ್ಣವಾಗಿ ಬರಿದಾಗುತ್ತದೆ.
ಕರಗಿಸುವಿಕೆ
ಬದಲಾಯಿಸಿಕಬ್ಬಿಣದ ಅದಿರು ಆಮ್ಲಜನಕ ಮತ್ತು ಕಬ್ಬಿಣದ ಪರಮಾಣುಗಳಿಂದ ಬಂಧಿತವಾದ ಅಣುಗಳಿಂದ ಕೂಡಿದೆ. ಅದಿರನ್ನು ಲೋಹೀಯ ಕಬ್ಬಿಣವನ್ನಾಗಿ ಪರಿವರ್ತಿಸಲು ಅದನ್ನು ಕರಗಿಸುವ ಅಥವಾ ನೇರ ಅಪಕರ್ಷಣೆಯ ಮೂಲಕಆಮ್ಲಜನಕವನ್ನು ತೆಗೆಯುವ ವಿಧಾನಕ್ಕೆ ಅದಿರನ್ನು ಒಳಪಡಿಸಬೇಕು. ಆಮ್ಲಜನಕ-ಕಬ್ಬಿಣದ ಬಂಧಗಳು ಪ್ರಭಲವಾಗಿದ್ದು, ಅಮ್ಲಜನಕವನ್ನು ಕಬ್ಬಿಣದ ಧಾತುವಿನಿಂದ ತೆಗೆಯಲು,ಇನ್ನಷ್ಟು ಪ್ರಭಲ ಬಂಧವುಳ್ಳ ಧಾತು ಅಗತ್ಯ. ಇದಕ್ಕಾಗಿ ಇಂಗಾಲವನ್ನು ಬಳಸಲಾಗುತ್ತದೆ.ಏಕೆಂದರೆ ಇಂಗಾಲ-ಆಮ್ಲಜನಕದ ಬಂಧವು ಅತಿ ಹೆಚ್ಚಿನ ತಾಪಮಾನದಲ್ಲಿ ಕಬ್ಬಿಣ-ಆಮ್ಲಜನಕ ಬಂಧಕ್ಕಿಂತ ಪ್ರಭಲವಾಗಿರುತ್ತದೆ. ಕರಗಿಸುವಿಕೆಯ ಪ್ರಕ್ರಿಯೆಯಲ್ಲಿ,ಚೆನ್ನಾಗಿ ಪುಡಿ ಮಾಡಿದ ಕಬ್ಬಿಣದ ಅದಿರನ್ನುಕೋಕ್ನೊಂದಿಗೆ ಬೆರಸಲಾಗುತ್ತದೆ.
ಆದಾಗ್ಯೂ ಈ ಪ್ರಕ್ರಿಯೆ ಅಷ್ಟು ಸುಲಭ ಸಾಧ್ಯವಲ್ಲಏಕೆಂದರೆ, ಇದರಲ್ಲಿ ಆಮ್ಲಜನಕವನ್ನು ಹೊರತೆಗೆಯಲು ಅಸಾಧ್ಯವಾದ ಇಂಗಾಲದ ಮಾನಾಕ್ಸೈಡ್ ಎಂಬ ಪ್ರಾಥಮಿಕ ಘಟಕವಿದೆ. ಆದ್ದರಿಂದ ಕಬ್ಬಿಣ ಮತ್ತು ಇಂಗಾಲದ ಕರಗಿಸುವಿಕೆಯನ್ನು ಕಶ್ಮಲ ಧಾತುಗಳು ಉಳಿಯದಂತೆ ಆಮ್ಲಜನಕದ ಅನುಪಸ್ಥಿತಿಯಲ್ಲಿ ಕಾರ್ಬನ್‌ನ CO ದಹನದCO
2ಮೂಲಕ ನಡೆಸಲಾಗುತ್ತದೆ.
- ಏರ್ ಬ್ಲಾಸ್ಟ್ ಮತ್ತು ಚಾರ್ಕೋಲ್ (ಕೋಕ್): 2 C + O2 → 2 CO.
- ಕಾರ್ಬನ್ ಮೊನಾಕ್ಸೈಡ್ (CO) ಒಂದು ಪ್ರಧಾನ ಅಪಕರ್ಷಣಕಾರಿ.
- ಒಂದನೇ ಹಂತ: 3 Fe2O3 + CO → 2 Fe3O4 + CO2
- ಎರಡನೇ ಹಂತ: Fe3O4 + CO → 3 FeO + CO2
- ಮೂರನೆಯ ಹಂತ: FeO + CO → Fe + CO2
- ಸುಣ್ಣದಕಲ್ಲು ಕ್ಯಾಲ್ಸೈನಿಂಗ್: CaCO3 → CaO + CO2
- ಸುಣ್ಣವು ಅತಿಸಾರದಂತೆ ಕೆಲಸ ಮಾಡುತ್ತದೆ: CaO + SiO2 → CaSiO3
ಕಶ್ಮಲ ಧಾತುಗಳು
ಬದಲಾಯಿಸಿಸಣ್ಣ ಪ್ರಮಾಣದ ಧಾತುಗಳ ಇರುವಿಕೆಯೂ ಸಹ ಕಬ್ಬಿಣದ ಗುಣಲಕ್ಷಣಗಳು ಅಥವಾ ಕರಗಿಸುವಿಕೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತವೆ.
ಈ ಪರಿಣಾಮಗಳು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದ್ದಾಗಿರಬಹುದು.ಕೆಲವು ಸಮಯಗಳಲ್ಲಿ ವಿನಾಶಕಾರಿಯಾಗಿರಬಹುದು. ಊದು ಕುಲುಮೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಫ್ಲಕ್ಸ್ ನಂತಹ ಕೆಲವು ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇನ್ನೂ ಕೆಲವು ರಾಸಾಯನಿಕಗಳನ್ನು ಸೇರಿಸುವುದರಿಂದ ಕಬ್ಬಿಣದ ದ್ರವತ್ವ,ಕಠಿಣತೆ ಮತ್ತು ಅವಶ್ಯ ಗುಣಮಟ್ಟಗಳು ಹೆಚ್ಚಾಗುತ್ತವೆ.
ಅದಿರು,ಇಂಧನ ಮತ್ತು ಫ್ಲಕ್ಸ್ ಗಳ ಆಯ್ಕೆ ಕಿಟ್ಟದ ಸ್ವಭಾವ ಮತ್ತು ಉತ್ಪತ್ತಿಯಾಗುವ ಕಬ್ಬಿಣದ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಒಂದು ಮಾದರಿ ಕಬ್ಬಿಣದ ಅದಿರಿನಲ್ಲಿ ಕೇವಲ ಕಬ್ಬಿಣ ಮತ್ತು ಆಮ್ಲಜನಕ ಮಾತ್ರ ಇರುತ್ತವೆ. ಆದರೆ ವಾಸ್ತವವಾಗಿ ಈ ರೀತಿಯ ಸಂಯೋಜನೆ ಬಹಳ ವಿರಳ. ಸಾಮಾನ್ಯವಾಗಿ ಕಬ್ಬಿಣದ ಅದಿರಿನಲ್ಲಿ ಆಧುನಿಕ ಉಕ್ಕಿಗೆ ಬೇಡವಾದ ಧಾತುಗಳಿರುತ್ತವೆ.
ಸಿಲಿಕಾನ್
ಬದಲಾಯಿಸಿಸಿಲಿಕಾ(SiO
2) ಕಬ್ಬಿಣದ ಅದಿರಿನಲ್ಲಿ ಕಂಡು ಬರುವ ಸಾಮಾನ್ಯ ಕಶ್ಮಲ. ಬಹಳಷ್ಟು ಪ್ರಮಾಣದ ಸಿಲಿಕಾವನ್ನು ಕರಗಿಸುವ ಪ್ರಕ್ರಿಯೆಯಲ್ಲಿ ಕಿಟ್ಟದ ರೂಪದಲ್ಲಿ ಹೊರತೆಗೆಯಲಾಗುತ್ತದೆ.
ಸುಮಾರು1300 °C ಉಷ್ಣತೆಯಲ್ಲಿ ಕೆಲವು ಅಪಕರ್ಷಣಗೊಳ್ಳುತ್ತವೆ.ಇನ್ನು ಕೆಲವು ಕಬ್ಬಿಣದೊಂದಿಗೆ ಮಿಶ್ರಲೋಹಗಳಾಗುತ್ತವೆ. ಕುಲುಮೆ ಬಿಸಿಯಾದಂತೆಲ್ಲಾ ಕಬ್ಬಿಣದಲ್ಲಿ ಸಿಲಿಕಾನ್ ನ ಪ್ರಮಾಣ ಹೆಚ್ಚಾಗುತ್ತದೆ. 16ರಿಂದ18ನೇ ಶತಮಾನದ ಯೂರೋಪಿನ ಕಬ್ಬಿಣದಲ್ಲಿ ಸುಮಾರು1.5% ರಷ್ಟು ಸಿಲಿಕಾನ್ ಕಂಡುಬಂದಿತ್ತು.
ಸಿಲಿಕಾನ್‌ನ ಪ್ರಮುಖ ಪರಿಣಾಮವೆಂದರೆ ಇದು ಬೂದು ಕಬ್ಬಿಣ ಉಂಟಾಗುವುದಕ್ಕೆ ಸಹಕಾರಿಯಾಗಿದೆ. ಬೂದು ಕಬ್ಬಿಣ ,ಬಿಳಿ ಕಬ್ಬಿಣಕ್ಕಿಂತ ಕಡಿಮೆ ಬಿಧುರತೆಯನ್ನು ಹೊಂದಿದ್ದು ಬೇಗ ಆಕಾರವನ್ನು ಕೊಡುವುದಕ್ಕೆ ಸಹಕಾರಿಯಾಗಿದೆ. ಈ ಕಾರಣದಿಂದ ಬೂದು ಕಬ್ಬಿಣವನ್ನು ಎರಕ ಹೊಯ್ಯಲು ಉಪಯೋಗಿಸುತ್ತಾರೆ.Turner (1900, pp. 192–197) ಇಷ್ಟೇ ಅಲ್ಲದೆ ಸಿಲಿಕಾನ್ ಕಬ್ಬಿಣ ಸುರುಳಿಯಾಗುವುದನ್ನು ಮತ್ತು ಊದು ರಂದ್ರಗಳು ಉಂಟಾಗುವುದನ್ನು ಕಡಿಮೆ ಮಾಡುವುದರೊಂದಿಗೆ,ಉತ್ತಮ ಎರಕಗಳಿಗೆ ಸಹಕಾರಿಯಾಗಿದೆ.
ರಂಜಕ
ಬದಲಾಯಿಸಿರಂಜಕವು ಕಬ್ಬಿಣದ ಮೇಲೆ ನಾಲ್ಕು ಪ್ರಮುಖ ಪರಿಣಾಮಗಳನ್ನು ಉಂಟುಮಾಡುತ್ತದೆ. ಕಬ್ಬಿಣದ ಉಪಯೋಗ ಮತ್ತುಬೇಡಿಕೆಗೆ ಅನುಸಾರವಾಗಿ ಈ ಪರಿಣಾಮಗಳು ಒಳ್ಳೆಯವೆ ಅಥವಾ ಕೆಟ್ಟವೆ ಎಂದು ನಿರ್ಧರಿಸಲಾಗುತ್ತದೆ. ಬೊಗ್ ಅದಿರು ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ರಂಜಕದ ಅಂಶವನ್ನು ಹೊಂದಿರುತ್ತದೆ.
ರಂಜಕದ ಪ್ರಮಾಣ ಹೆಚ್ಚಾದಂತೆಲ್ಲಾ ಕಬ್ಬಿಣದ ಸಾಮರ್ಥ್ಯ ಮತ್ತು ಗಡಸುತನ ಹೆಚ್ಚಾಗುತ್ತದೆ. 0.05% ರಷ್ಟು ರಂಜಕದ ಪ್ರಮಾಣ ತುಕ್ಕು ರಹಿತ ಉಕ್ಕಿಗೆ ಒಂದು ಸಾಮಾನ್ಯ ಕಾರ್ಬನ್ ಉಕ್ಕಿನಷ್ಟು ಗಡಸುತನವನ್ನು ಕೊಡಬಲ್ಲದು. ಹೆಚ್ಚು ರಂಜಕವನ್ನು ಹೊಂದಿರುವ ಕಬ್ಬಿಣವನ್ನು ಶೀತಲ ಬಡಿಯುವಿಕೆಯಿಂದ ಗಡಸಾಗುವಂತೆ ಮಾಡಬಹುದು. ಅದಿರಿನಲ್ಲಿರುವ ರಂಜಕದ ಪ್ರಮಾಣ ಅದರ ಗಡಸುತನವನ್ನು ನಿರ್ಧರಿಸುತ್ತದೆ. ರಂಜಕ ಹೆಚ್ಚಾದಂತೆಲ್ಲಾ ಕಬ್ಬಿಣದ ಗಡಸುತನ ಹೆಚ್ಚಾಗುತ್ತದೆ ಮತ್ತು ಬಡಿಯುವಿಕೆಯಿಂದ ಅದರ ಕಠಿಣತೆ ಇನ್ನೂ ಅಧಿಕವಾಗುತ್ತದೆ. ಈಗಿನ ಉಕ್ಕಿನ ಉತ್ಪಾದಕರು ಯಾವುದೇ ರೀತಿಯ ರೋಧವನ್ನು ಒಡ್ಡದೆ ರಂಜಕದ ಪ್ರಮಾಣ 0.07 ರಿಂದ 0.12%.ರವರೆಗೆ ಕಾಪಾಡುವುದರಿಂದ ಕಬ್ಬಿಣದ ಗಡಸುತನ 30%, ರಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಪು ಮಾಡುವುದರಿಂದ ಕಬ್ಬಿಣದ ಗಡಸುತನ ಹೆಚ್ಚಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಉಚ್ಚ ತಾಪದಲ್ಲಿ ಕಬ್ಬಿಣದಲ್ಲಿರುವ ಕಾರ್ಬನ್ನಿನ ಕರಗುವಿಕೆ ಕಡಿಮೆಯಾಗುತ್ತದೆ. ಇದು ಬೊಬ್ಬೆ ಉಕ್ಕಿನ ಉಪಯುಕ್ತತೆಯನ್ನು ಕಡಿಮೆ ಮಾಡುತ್ತದೆ.ಜೊತೆಗೆ ಇಂಗಾಲದ ಹೀರುವಿಕೆಯ ವೇಗವನ್ನು ಹೆಚ್ಚಿಸುತ್ತದೆ.
ರಂಜಕದ ಸೇರ್ಪಡೆಯಿಂದ ಗುಣಮಟ್ಟದಲ್ಲಿ ಇಳಿಮುಖ ಉಂಟಾಗುತ್ತದೆ. 0.2% ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣವು ಹೆಚ್ಚು ಶೀತಲವಾಗುತ್ತದೆ ಜೊತೆಗೆ ಕಡಿಮೆ ಉಷ್ಣತೆಯಲ್ಲಿ ಬಿರುಕು ಬಿಡುತ್ತದೆ. ದಂಡ ಕಬ್ಬಿಣಕ್ಕೆ ಶೀತಲ ಸ್ಥಿತಿ ಅತಿ ಪ್ರಾಮುಖ್ಯವಾಗಿದೆ. ದಂಡಕಬ್ಬಿಣವು ಸಾಮಾನ್ಯವಾಗಿ ಉಚ್ಚ ಉಷ್ಣತೆಯಲ್ಲಿ ಉತ್ತಮ ಫಲಿತಾಂಶವನ್ನು ಕೊಡುತ್ತದೆ, ಆದರೂ ಕೊಠಡಿ ಉಷ್ಣತೆಯಲ್ಲಿ ಹೆಚ್ಚಿನ ರೋಧ ಮತ್ತು ಬಾಗುವ ಗುಣವನ್ನು ಹೊಂದಿರಬೇಕಾಗುತ್ತದೆ. ಸುತ್ತಿಗೆಯಿಂದ ಬಡಿದಾಗ ಬಾಗುವ ಮೊಳೆ ಅಥವಾ ಬಂಡೆಗೆ ಬಡಿದಾಗ ಮುರಿದು ಬೀಳುವ ಎತ್ತಿನ ಗಾಡಿಯ ಚಕ್ರ ಮಾರಲು ಯೋಗ್ಯವಲ್ಲ. ಅತಿ ಹೆಚ್ಚಿನ ಪ್ರಮಾಣದ ರಂಜಕವು ಕಬ್ಬಿಣವನ್ನು ನಿರುಪಯುಕ್ತ ವಸ್ತುವನ್ನಾಗಿ ಮಾಡುತ್ತದೆ.(Rostoker & Bronson 1990, p. 22) ಶೀತಲ ಸ್ಥಿತಿಯ ಪರಿಣಾಮವನ್ನು ಉಷ್ಣತೆಯ ಮೂಲಕ ಉನ್ನತೀಕರಿಸಬಹುದು. ಆದ್ದರಿಂದ ಬೇಸಿಗೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಒಂದು ಕಬ್ಬಿಣದ ತುಂಡು ಚಳಿಗಾಲದಲ್ಲಿ ಬಿರುಕುಗಳನ್ನುಂಟುಮಾಡಬಲ್ಲದು. ಮಧ್ಯಕಾಲೀನ ಯುಗದಲ್ಲಿ ಶ್ರೀಮಂತರು ಉಷ್ಣಕಾಲದಲ್ಲಿ ಹೆಚ್ಚು ರಂಜಕವಿರುವ ಖಡ್ಗವನ್ನು ಮತ್ತು ಶೀತಕಾಲದಲ್ಲಿ ಕಡಿಮೆ ರಂಜಕವಿರುವ ಕಬ್ಬಿಣವನ್ನು ಉಪಯೋಗಿಸುತ್ತಿದ್ದಕ್ಕೆ ಪುರಾವೆಗಳಿವೆ.
ರಂಜಕದ ಎಚ್ಚರಿಕೆಯ ನಿರ್ವಹಣೆ ಎರಕ ಕಾರ್ಯಗಳಿಗೆ ಅನುಕೂಲಕರವಾಗಿದೆ. ರಂಜಕವು ದ್ರವೀಕರಣ ಉಷ್ಣತೆಯನ್ನು ಕಡಿಮೆ ಮಾಡುವುದರೊಂದಿಗೆ ಕಬ್ಬಿಣವು ಬಹಳ ಕಾಲ ದ್ರವಿತ ಸ್ಥಿತಿಯಲ್ಲಿರುವಂತೆ ಮಡುತ್ತದೆ. 1% ರಷ್ಟು ರಂಜಕವನ್ನು ಸೇರಿಸುವುದರಿಂದ ಕಬ್ಬಿಣದ ದ್ರವಿತ ಸ್ಥಿತಿ ಇಮ್ಮಡಿಯಾಗುವಂತೆ ಮಾಡುತ್ತದೆ.(Rostoker & Bronson 1990, p. 22). ಸುಮಾರು 500 °C ಉಷ್ಣತೆಯಲ್ಲಿ ರಂಜಕದ ಪ್ರಮಾಣ 10.2% (Rostocker & Bronson 1990, p. 194) .ರಷ್ಟು ಇರುವಾಗ ಗರಿಷ್ಟ ಪರಿಣಾಮವನ್ನು ಕಾಣಬಹುದು. ಕುಲುಮೆ ಕೆಲಸಗಳಿಗೆ 0.2–0.55% ಇರುವ ಕಬ್ಬಿಣ ಹೆಚ್ಚು ಸೂಕ್ತ ಎಂದು ಟರ್ನರ್ ಅಭಿಪ್ರಾಯಪಟ್ಟಿದ್ದನು.
ಈ ರೀತಿಯಲ್ಲಿ ಪಡೆದ ಕಬ್ಬಿಣದ ಅಚ್ಚುಗಳು ಬೇಗ ಕುಗ್ಗುತ್ತಿರಲಿಲ್ಲ. 19ನೇ ಶತಮಾನದಲ್ಲಿ ಕೆಲವು ಉತ್ಪಾದಕರು 5% ರಂಜಕವಿರುವ ಕಬ್ಬಿಣವನ್ನು ಬಳಸಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದರು. ಗರಿಷ್ಟ ದ್ರವವತ್ವವು ಲೋಹವನ್ನು ಸಂಕೀರ್ಣವಾಗಿ ಹಾಗೂ ದುರ್ಬಲ ಎರಕವಾಗಿ ಪರಿವರ್ತಿಸುತ್ತದೆ. ಆದರೆ, ಅಂತಹ ಲೋಹಗಳಿಗೆ ಹೆಚ್ಚಿನ ಸಾಮರ್ಥ್ಯ ಇಲ್ಲದೇ ಇರುವುದರಿಂದ(Turner 1900, pp. 202–204)ಹೆಚ್ಚಿನ ತೂಕವನ್ನು ತಡೆಯಲಾರವು.
ಅತಿ ಹೆಚ್ಚು ರಂಜಕವನ್ನು ಹೊಂದಿರುವ ಕಬ್ಬಿಣಕ್ಕೆ ಎರಡು ಪರಿಹಾರೋಪಾಯಗಳಿವೆ. ಅತ್ಯಂತ ಹಳೆಯ ಮತ್ತು ಸುಲಭ ವಿಧಾನವೆಂದರೆ ರಂಜಕದ ಬಳಕೆಯನ್ನು ತಡೆಗಟ್ಟವುದು. ಪಡೆದ ಕಬ್ಬಿಣವು ಕೋಲ್ಡ್ ಶಾರ್ಟ್ ಆಗಿದ್ದಲ್ಲಿ,ಹೊಸ ಅದಿರನ್ನು ಬಳಸುವುದು. ಎರಡನೇ ವಿಧಾನದಲ್ಲಿ ಲೋಹದ ಶುದ್ಧೀಕಣದ ಸಮಯದಲ್ಲಿ ರಂಜಕವನ್ನು ಕಬ್ಬಿಣದ ಆಕ್ಸೈಡ್ ನಿಂದ ಉತ್ಕರ್ಷಿಸಲಾಗುವುದು. ಈ ತಂತ್ರಜ್ಞಾನವು 19ನೇ ಶತಮಾನದಲ್ಲಿ ಪಡ್ಲಿಂಗ್ ವಿಧಾನದಲ್ಲಿ ಬಳಸಲಾಗುತ್ತಿತ್ತು. ಆದರೆ ಇದಕ್ಕಿಂತ ಮೊದಲು ಈ ವಿಧಾನವು ತಿಳಿದಿರಲಿಲ್ಲ. ಉದಾಹರಣೆಗೆ ಮಾರ್ಲ್ ಬೊರೊ ಉಕ್ಕಿನ ಸಂಸ್ಥೆಯ ಸ್ಥಾಪಕನಾದ ಐಸಾಕ್ ಝೇನ್ ಗೆ 1772ರಲ್ಲಿ ಈ ವಿಧಾನವು ತಿಳಿದಿರಲಿಲ್ಲ.
ಈ ತಂತ್ರಜ್ಞಾನವು ಝೇನ್ ನ ಅಧುನಿಕ ಅಭಿವ್ರದ್ಧಿಗಳಲ್ಲಿ ಒಂದಾಗಿದ್ದು, ವರ್ಜೀನಿಯ ಮತ್ತು ಪೆನ್ಸಿಲ್ವೇನಿಯಾದ ಉತ್ಪಾದಕರಿಗೆ ಗೊತ್ತಿರಲಿಲ್ಲ.
ರಂಜಕವುಒಂದು ಸೂಕ್ಷ್ಮ ಮಲಿನಕಾರಿಯಾಗಿದ್ದು 0.6%.ರಷ್ಟು ಪ್ರಮಾಣವು ಉಕ್ಕು ಬಿಧುರವಾಗುವಂತೆ ಮಾಡುತ್ತದೆ. ರಂಜಕವನ್ನು ಕರಗಿಸುವಿಕೆಯಿಂದ ಅಥವಾ ಫ್ಲಕ್ಸಿಂಗ್ ನಿಂದ ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಆದ್ದರಿಂದ ಅತಿ ಕ್ಡಿಮೆ ಪ್ರಮಾಣವುಳ್ಳ ಅದಿರನ್ನು ಬಳಸುವುದು ಸೂಕ್ತ. ಭಾರತದ ಪ್ರಖ್ಯಾತ ಉಕ್ಕು ಸ್ತಂಭವು ರಂಜಕವನ್ನು ಹೊಂದಿರುವುದರಿಂದ ಬಹಳ ಕಾಲದಿಂದ ತುಕ್ಕು ಹಿಡಿಯದೇ ಹಾಗೇ ಉಳಿದಿದೆ.
ಪಾಸ್ಪಾರಿಕ್ ಆಮ್ಲವನ್ನು ತುಕ್ಕು ಪರಿವರ್ತಕವಾಗಿ ಬಳಸಲಾಗುತ್ತದೆ. ಏಕೆಂದರೆ ಪಾಸ್ಪಾರಿಕ್ ಕಭ್ಭಿಣದ ಉತ್ಕರ್ಷಣ ಸಾಮರ್ಥ್ಯವು ಕಡಿಮೆ ಇರುತ್ತದೆ.
ಅಲ್ಯುಮಿನಿಯಂ
ಬದಲಾಯಿಸಿಸಣ್ಣ ಪ್ರಮಾಣದ ಅಲ್ಯುಮಿನಿಯಂ (Al) ಅನೇಕ ಅದಿರುಗಳಲ್ಲಿ ಮತ್ತು ಕೆಲವು ಸುಣ್ಣದ ಕಲ್ಲುಗಳಲ್ಲಿ ಇರುತ್ತವೆ. ಕರಗಿಸುವುದಕ್ಕಿಂತ ಮುಂಚೆ ಅದಿರನ್ನು ತೊಳೆಯುವುದರಿಂದ ಇದನ್ನು ನಿವಾರಿಸಬಹುದು. ಇಟ್ಟಿಗೆಯ ಕುಲುಮೆಗಳನ್ನು ಬಳಸುವುದಕ್ಕಿಂತ ಮುಂಚೆ ಅಲ್ಯುಮಿನಿಯಂನ ಕಶ್ಮಲವು ಅದಿರನ ಮೇಲಾಗಲಿ ಅಥವಾ ಕಿಟ್ಟದ ಮೇಲಾಗಲಿ ಯಾವುದೇ ಪರಿಣಾಮವನ್ನುಂಟು ಮಾಡುತ್ತಿರಲಿಲ್ಲ.
ಕುಲುಮೆಗಳಲ್ಲಿ ಇಟ್ಟಿಗೆಗಳನ್ನು ಬಳಸಲು ಪ್ರಾರಂಭಿಸಿದಾಗ ಅಲ್ಯುಮಿನಿಯಂ ಮಲಿನದ ಪ್ರಮಾಣ ನಾಟಕೀಯವಾಗಿ ಹೆಚ್ಚಾಯಿತು. ದ್ರವಕಿಟ್ಟವು ಕುಲುಮೆಯ ಪದರವನ್ನು ಸವೆಯುವಂತೆ ಮಾಡುವುದೇ ಇದಕ್ಕೆ ಕಾರಣ.
ಅಲ್ಯುಮಿನಿಯಂನ ಅಪಕರ್ಷಣೆ ಅತ್ಯಂತ ಕಠಿಣ. ಆದ್ದರಿಂದ ಅಲ್ಯುಮಿನಿಯಂನ ಮಲಿನತ್ವ ಕಬ್ಬಿಣದ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ. ಇದು ಕಿಟ್ಟದ (Kato & Minowa 1969, p. 37 ಸ್ನಿಗ್ಧತೆಯನ್ನು ಕಡಿಮೆ ಮಾಡುತ್ತದೆ.Rosenqvist 1983, p. 311). ಇದು ಕುಲುಮೆಯ ಕಾರ್ಯದ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರುತ್ತದೆ. ಕಿಟ್ಟವು ಮಂದವಾದಂತೆ ಮಿಶ್ರಣವು ಕುಲುಮೆಯಲ್ಲಿ ಹರಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅತಿ ಹೆಚ್ಚಿನ ಅಲ್ಯುಮಿನಿಯಂ ಅಂಶವಿದ್ದಲ್ಲಿ ದ್ರವ ಕಿಟ್ಟವನ್ನು ಹೊರತೆಗೆಯಲು ಕಷ್ಟವಾಗುತ್ತದೆ. ಇದು ಹೆಚ್ಚಾದಾಗ ಕುಲುಮೆಯು ತಣ್ಣಗಾಗುತ್ತದೆ.
ಅಧಿಕ ಪ್ರಮಾಣದ ಅಲ್ಯುಮಿನಿಯಂ ಕಿಟ್ಟಕ್ಕೆ ಸಾಕಷ್ಟು ಪರಿಹಾರೋಪಾಯಗಳಿವೆ. ಮೊದಲನೆಯ ವಿಧಾನವೆಂದರೆ ಅತಿ ಹೆಚ್ಚು ಅಲ್ಯುಮಿನಿಯಂ ಅಥವಾ ಸುಣ್ಣದ ಅಂಶವಿರುವ ಅದಿರನ್ನು ಬಳಸದೇ ಇರುವುದು.
ಲೈಮ್ ಫ್ಲಕ್ಸ್‌ನ ಅತಿ ಹೆಚ್ಚಿನ ಅನುಪಾತವು ಸ್ನಿಗ್ಧತೆಯನ್ನು(Rosenqvist 1983, p. 311)ಕಡಿಮೆ ಮಾಡುತ್ತದೆ.
ಗಂಧಕ
ಬದಲಾಯಿಸಿಗಂಧಕವು(S) ಕಲ್ಲಿದ್ದಲಿನಲ್ಲಿ ಕಂಡುಬರುವ ಒಂದು ಸಾಮಾನ್ಯ ಕಶ್ಮಲ. ಕೆಲವು ಅದಿರುಗಳಲ್ಲಿ ಇದು ಸಣ್ಣ ಪ್ರಮಾಣಗಳಲ್ಲಿ ಕಂಡುಬರುತ್ತದೆ. ಆದರೆ ಇದನ್ನುಕ್ಯಾಲ್ಸಿನೀಕರಣದ ವಿಧಾನದಿಂದ ಹೊರತೆಗೆಯಬಹುದು. ಕಬ್ಬಿಣ ಕರಗುವ ಉಷ್ಣಾಂಶಗಳಲ್ಲಿ ಗಂಧಕವು ದ್ರವ ಮತ್ತು ಘನ ಕಬ್ಬಿಣಗಳೆರಡರಲ್ಲೂ ಕರಗುತ್ತದೆ. ಕೇವಲ ಸಣ್ಣ ಪ್ರಮಾಣದ ಗಂಧಕವೂ ಗಂಭೀರ ಪರಿಣಾಮವನ್ನು ಬೀರುತ್ತವೆ. ಕಬ್ಬಿಣದ ಉತ್ಪಾದಕರು ಮೊಟ್ಟ ಮೊದಲಿಗೆ ಈ ಪ್ರಯೋಗವನ್ನು ಮಾಡಿದರು. ಗಂಧಕವು ಕಬ್ಬಿಣವನ್ನು ಕೆಂಪಾಗುವಂತೆ ಮಾಡುತ್ತದೆ(Gordon 1996, p. 7).
ಹಾಟ್ ಶಾರ್ಟ್ ಕಬ್ಬಿಣವು ಕೆಂಪಗೆ ಕಾದಾಗ ಬಿಧುರತೆಯನ್ನು ಹೊಂದಿರುತ್ತದೆ. 17 ಮತ್ತು18ನೇ ಶತಮಾನಗಳಲ್ಲಿ ದಂಡ ಅಥವಾ ತುಕ್ಕು ರಹಿತ ಕಬ್ಬಿಣವನ್ನು ಬಳಸಲಾಗುತ್ತಿತ್ತು.ಇದು ಒಂದು ಗಂಭೀರ ಸಮಸ್ಯೆಯಾಗಿತ್ತು. ತುಕ್ಕು ರಹಿತ ಕಬ್ಬಿಣವನ್ನು ಕೆಂಪಗೆ ಕಾಯಿಸಿ ಬಡಿಯುವುದರಿಂದ ಅದಕ್ಕೆ ಬೇಕಾದ ಆಕಾರ ಕೊಡಬಹುದು. ಕೆಂಪಗೆ ಕಾದ ಕಬ್ಬಿಣವನ್ನು ಸುತ್ತಿಗೆಯಿಂದ ಬಡಿದಾಗ ಅದರಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಕಾದ ಕಬ್ಬಿಣ ಅಥವಾ ಉಕ್ಕಿನ ತುಂಡಿನಲ್ಲಿ ಬಿರುಕುಗಳು ಕಾಣಿಸಿಕೊಂಡಾಗ ಆ ಭಾಗವು ಸುಲಭವಾಗಿ ಉತ್ಕರ್ಷಣಗೊಳ್ಳುತ್ತದೆ. ಆಕ್ಸೈಡ್‌ನ ಈ ಪದರವು ಬಿರುಕನ್ನು ಬೆಸೆದು ಹೆಚ್ಚು ಹಾನಿಯಾಗದಂತೆ ತಡೆಯುತ್ತದೆ. ಆದರೆ ದೊಡ್ಡ ಬಿರುಕುಗಳಿಂದ ಕಬ್ಬಿಣ ಅಥವಾ ಉಕ್ಕು ಮುರಿದುಹೋಗುತ್ತವೆ. ಚಿಕ್ಕ ಬಿರುಕುಗಳು ವಸ್ತು ಅನುಪಯುಕ್ತವಾಗುವಂತೆ ಮಾಡುತ್ತವೆ. ಅದಿರಿನ ತಾಪವು ಗಂಧಕದ ಪ್ರಮಾಣಕ್ಕೆ ನೇರ ಅನುಪಾತದಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ 0.03% ಗಂಧಕ ಇರುವ ಕಬ್ಬಿಣವನ್ನು ಬಳಸುತ್ತಿಲ್ಲ.
ಹಾಟ್ ಶಾರ್ಟ್ ಕಬ್ಬಿಣವು ಉಪಯುಕ್ತವಾಗಿದ್ದರೂ. ಇದನ್ನು ಕಡಿಮೆ ತಾಪಮಾನಗಳಲ್ಲಿ ಬಳಸುವುದು ಸೂಕ್ತ. ಒಬ್ಬ ಕುಲುಮೆಗಾರನಿಗೆ ಕಡಿಮೆ ತಾಪಮಾನಗಳಲ್ಲಿ ಕೆಲಸ ಮಾಡಬೇಕಾದಲ್ಲಿ ಹೆಚ್ಚಿನ ದೈಹಿಕೆ ಶ್ರಮ ಅಗತ್ಯ. ಉತ್ತಮ ಫಲಿತಾಂಶಕ್ಕೆ ಕಬ್ಬಿಣವನ್ನು ಹೆಚ್ಚು ಬಲದಿಂದ ಬಡಿಯಬೇಕಾಗುತ್ತದೆ. ಸಾಧಾರಣ ಮಟ್ಟದ ಗಂಧಕ ಹೊಂದಿರುವ ಲೋಹವನ್ನು ಬಳಸಬಹುದಾದರೂ,ಅದಕ್ಕೆ ಹೆಚ್ಚಿನ ಶ್ರಮ ಮತ್ತು ಕಾಲ ಬೇಕಾಗುತ್ತದೆ.
ಎರಕ ಕಬ್ಬಿಣದಲ್ಲಿರುವ ಗಂಧಕವು ಬಿಳಿ ಕಬ್ಬಿಣದ ಉತ್ಪತ್ತಿಗೆ ಕಾರಣವಾಗಿದೆ. ಕೇವಲ0.5% ಗಂಧಕ ಅಧಿಕ ಅಂಶದ ಸಿಲಿಕಾನ್(Rostoker & Bronson 1990, p. 21).ಉಂಟುಮಾಡಬಹುದಾದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಬಿಳಿ ಎರಕ ಲೋಹವು ಹೆಚ್ಚು ಬಿಧುರತೆಯನ್ನು ಹೊಂದಿದ್ದರೂ ಕಠಿಣವಾಗಿರುತ್ತದೆ. ಸಾಮಾನ್ಯವಾಗಿ ಇದರ ಬಳಕೆಯನ್ನು ಮಾಡುವುದಿಲ್ಲ. ಏಕೆಂದರೆ ಇದನ್ನು ಉಪಯೋಗ ಕಷ್ಟಕರ,ಚೀನಾದಲ್ಲಿ ಮಾತ್ರ ಅತಿ ಹೆಚ್ಚು ಗಂಧಕ ಅಂಶವಿರುವ ಬೀಡು ಕಬ್ಬಿಣವನ್ನು ಗಂಟೆಗಳ ತಯಾರಿಕೆಯಲ್ಲಿ ಬಳಸುತ್ತಿದ್ದರು ಇದಕ್ಕೆ ಸುಮಾರು0.57%ಗಂಧಕವನ್ನು ಬೆರಸಲಾಗಿತ್ತು.(Rostoker, Bronson & Dvorak 1984, p. 760) ಗುಡ್‌ನ ಪ್ರಕಾರTurner (1900, pp. 200), ಕುಲುಮೆ ಕೆಲಸಗಳಿಗೆ ಬಳಸುವ ಕಬ್ಬಿಣವು 0.15% ಕ್ಕಿಂತ ಕಡಿಮೆ ಗಂಧಕ ಅಂಶವನ್ನು ಹೊಂದಿರಬೇಕು. ಪ್ರಪಂಚದ ಉಳಿದ ಭಾಗಗಳಲ್ಲಿ ಬಳಸುವ ಲೋಹವು ಹೆಚ್ಚು ಗಂಧಕ ಅಂಶವಿರುವ ಬೀಡು ಕಬ್ಬಿಣವಾಗಿರಬೇಕು.ಆದರೆ ಇದು ಕಡಿಮೆ ಗುಣಮಟ್ಟದ ತುಕ್ಕುರಹಿತ ಕಬ್ಬಿಣಕ್ಕೆ ಯೋಗ್ಯವಲ್ಲ.
ಗಂಧಕ ಮಾಲಿನ್ಯಕ್ಕೆ ಅನೇಕ ಪರಿಹಾರಗಳಿವೆ. ಪುರಾತನ ಕಾಲದಿಂದಲೂ ಇರುವ ಒಂದೇ ಒಂದು ಮಾರ್ಗವೆಂದರೆ ಅದರ ಬಳಕೆಯನ್ನು ಕಡಿಮೆ ಮಾಡುವುದು. ಯೂರೋಪ್ ನಲ್ಲಿ ಅದಿರನ್ನು ಕರಗಿಸಲು ಕಲ್ಲಿದ್ದಲನ್ನು ಇಂಧನವಾಗಿ ಬಳಸುತ್ತಿರಲಿಲ್ಲ. ಏಕೆಂದರೆ ಇದರಲ್ಲಿ ಗಂಧಕದ ಅಂಶವಿದ್ದು ಹಾಟ್ ಶಾಟ್ ಕಬ್ಬಿಣದ ಉತ್ಪತ್ತಿಗೆ ಕಾರಣವಾಗುತ್ತದೆ. ಒಂದು ಅದಿರಿನಿಂದ ಹಾಟ್ ಶಾರ್ಟ್ ಲೋಹವು ದೊರೆಯುವುದಾದರೆ ಕಬ್ಬಿಣ ಉತ್ಪಾದಕರು ಬೇರೆ ಅದಿರನ್ನು ಹುಡುಕುತ್ತಿದ್ದರು. 1709ರಲ್ಲಿ ಅಥವಾ ಅದಕ್ಕಿಂತ ಮುಂಚೆ ಯೂರೋಪ್ ನಲ್ಲಿ ಊದು ಕುಲುಮೆಗಳಲ್ಲಿ ಮೊದಲು ಕಲ್ಲಿದ್ದಲಿನ ಖನಿಜ ಬಳಕೆಯಾಗಿದ್ದಾಗ, ಅದು ಕರಕಲಾಗಿಸಲ್ಪಟ್ಟಿತ್ತು 1829ರಿಂದ ಊದು ಕುಲುಮೆಬಳಕೆ ಪ್ರಾರಂಭವಾದಾಗಿನಿಂದ ಕಲ್ಲಿದ್ದಲನ್ನು ಬಳಸಲು ಪ್ರಾರಂಭಿಸಲಾಯಿತು.
ಹುರಿಯುವ ಹಾಗೂ ತೊಳೆಯುವ ವಿಧಾನದಿಂದ ಅದಿರಿನಲ್ಲಿರುವ ಗಂಧಕವನ್ನು ಹೊರತೆಗೆಯಬಹುದು. ಹುರಿಯುವಿಕೆಯು ಗಂಧಕವನ್ನುಗಂಧಕದ ಡೈ ಆಕ್ಸೈಡ್‌ನ್ನಾಗಿ ಪರಿವರ್ತಿಸುತ್ತದೆ. ಇದು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ ಅಥವಾ ತೊಳೆದು ಹೊರತೆಗೆಯಬಹುದಾಗಿದೆ. ಉಷ್ಣವಾತಾವರಣಗಳಲ್ಲಿ ಪೈರಿಟಿಕ್ ಅದಿರನ್ನು ಮಳೆಯಲ್ಲಿ ತೋಯಿಸಬಹುದು. ಮಳೆಹನಿ, ಬ್ಯಾಕ್ಟೀರಿಯಾ ಮತ್ತು ಉಷ್ಣದ ಒಟ್ಟಾರೆ ಕ್ರಿಯೆಗಳು ಗಂಧಕವನ್ನು ನೀರಿನಲ್ಲಿ ಕರಗುವ ಸಲ್ಫೇಟ್‌ಗಳಾಗಿ ಪರಿವರ್ತಿಸುತ್ತವೆ(Turner 1900, pp. 77). ಕಬ್ಬಿಣದ ಸಲ್ಫೈಡ್ (ಕಬ್ಬಿಣ ಪೈರೈಟ್ FeS
2), ಸಾಮಾನ್ಯವಾಗಿ ಕಬ್ಬಿಣದ ಅದಿರನಲ್ಲಿ ಕಂಡುಬರುವ ಕಶ್ಮಲಗಳು. ಇಂತಹ ಅದಿರನ್ನು ಕಬ್ಬಿಣದ ಉದ್ದರಣೆಗೆ ಬಳಸುವುದಿಲ್ಲ. ಸ್ವೀಡನ್‌ನಲ್ಲಿ ನೈಸರ್ಗಿಕ ವಿಧಾನವನ್ನೂ ಸಹ ಬಳಸಲಾಗುತ್ತಿತ್ತು. ಇಂತಹ ನೈಸರ್ಗಿಕ ಪ್ರಕ್ರಿಯೆಗಳಿಂದ ಗೊಸನ್ ಮತ್ತು ಲಿಮೋನೈಟ್ ನಂತಹ ಅದಿರುಗಳು ಉತ್ಪತ್ತಿಯಾಗುತ್ತವೆ.
16ಮತ್ತು18ನೇ ಶತಮಾನಗಳಲ್ಲಿ ಸ್ವೀಡನ್, ರಷ್ಯಾ ಮತ್ತು ಸ್ಪೇನ್ ದೇಶಗಳ ಕಬ್ಬಿಣವನ್ನು ಅತಿ ಹೆಚ್ಚು ಬೆಲೆಗೆ ಕೊಂಡುಕೊಳ್ಳಲಾಗುತ್ತಿತ್ತು.ಏಕೆಂದರೆ ಕಡಿಮೆ ಗಂಧಕ ಅಂಶವಿರುವ ಅದಿರಿಗೆ ಬೇಡಿಕೆ ಇತ್ತು. ಆದರೆ ಇಂದಿನ ದಿನಗಳಲ್ಲಿ ಗಂಧಕದಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಇದಕ್ಕಿರುವ ಈಗಿನ ಪರಿಹಾರವೆಂದರೆಮ್ಯಾಂಗನೀಸ್ ಅನ್ನು ಅದಿರಿಗೆ ಸೇರಿಸುವುದು. ಆದರೆ ಒಬ್ಬ ಕೆಲಸಗಾರನಿಗೆ ಕಬ್ಬಿಣದಲ್ಲಿ ಎಷ್ಟು ಗಂಧಕದ ಪ್ರಮಾಣ ಇದೆ ಎಂಬುದು ಗೊತ್ತಿರಬೇಕು. ಏಕೆಂದರೆ ಅದರ ಐದು ಪಟ್ಟು ಮ್ಯಾಂಗನೀಸ್ ನ್ನು ಸೇರಿಸಿದಾಗ ಮಾತ್ರ ಅದಿರನ್ನು ತಟಸ್ಥಗೊಳಿಸಬಹುದು. ಕೆಲವು ಪುರಾತನ ಕಬ್ಬಿಣದ ಅದಿರುಗಳು ಮ್ಯಾಂಗನೀಸ್ ನ್ ಸೂಚಕಗಳಾಗಿವೆ.ಆದರೆ ಗಂಧಕವನ್ನು(Rostoker & Bronson 1990, p. 21).ತಟಸ್ಥೀಕರಣಗೊಳಿಸುವ ಮಟ್ಟದಲ್ಲಿಲ್ಲ.
ಆಕರಗಳು
ಬದಲಾಯಿಸಿThis article includes a list of references, but its sources remain unclear because it has insufficient inline citations. (April 2009) |
- ↑ "IRON ORE - Hematite, Magnetite & Taconite". Mineral Information Institute. Archived from the original on 17 ಏಪ್ರಿಲ್ 2006. Retrieved 7 April 2006.
- ↑ ೨.೦ ೨.೧ ೨.೨ ೨.೩ ಐರನ್ ಓರ್ ಪ್ರೈಸಿಂಗ್ ಎಮರ್ಜಸ್ ಫ್ರಮ್ ಸ್ಟೋನ್ ಏಜ್ Archived 2011-03-22 ವೇಬ್ಯಾಕ್ ಮೆಷಿನ್ ನಲ್ಲಿ., ಫೈನಾನ್ಷಿಯಲ್ ಟೈಮ್ಸ್ , ಅಕ್ಟೋಬರ್ 26 2009
- ↑ ಹ್ಯಾರಿ ಕ್ಲೆಮಿಕ್, ಹೆರಾಲ್ಡ್ ಎಲ್. ಜೇಮ್ಸ್, ಮತ್ತು ಜಿ. ಡೊನಾಲ್ಡ್ ಎಬರ್ಲಿನ್, (1973) "ಕಬ್ಬಿಣ," ಯುನೈಟೆಡ್ ಸ್ಟೇಟ್ಸ್ ಮಿನರಲ್ ರೀಸೋರ್ಸಸ್ , US ಜಿಯಲಾಜಿಕಲ್ ಸರ್ವೇ, ಪ್ರೊಫೆಷನಲ್ ಪೇಪರ್ 820, ಪು.298-299.
- ↑ "U.S. Geological Survey". Retrieved 2008-01-29.
- ↑ "ಆರ್ಕೈವ್ ನಕಲು". Archived from the original on 2008-07-01. Retrieved 2010-07-10.
- ↑ ೬.೦ ೬.೧ ೬.೨ ೬.೩ ೬.೪ ೬.೫ ಐರನ್ ಓರ್ ಪ್ರೈಸಿಂಗ್ ವಾರ್, ಫೈನಾನ್ಷಿಯಲ್ ಟೈಮ್ಸ್ , ಅಕ್ಟೋಬರ್ 14 2009
- ↑ ಬ್ರೌನ್, ಲೆಸ್ಟರ್ ಪ್ಲ್ಯಾನ್ ಬಿ 2.0 , ನ್ಯೂಯಾರ್ಕ್: ಡಬ್ಲು.ಡಬ್ಲು. ನಾರ್ಟನ್, 2006. ಪು. 109
- Gordon, Robert B. (1996), American Iron 1607-1900, The Johns Hopkins University Press
- Rostoker, William; Bronson, Bennet (1990), Pre-Industrial Iron: Its Technology and Ethnology, Archeomaterials Monograph No. 1
- Turner, Thomas (1900), The Metallurgy of Iron (2nd ed.), Charles Griffin & Company, Limited
- Kato, Makoto and Susumu Minowa (1969), "Viscosity Measurement of Molten Slag- Properties of Slag at Elevated Temperature (Part 1)", Transactions of the Iron and Steel Institute of Japan, vol. 9, Tokyo: Nihon Tekko Kyokai, pp. 31–38
- Rosenqvist, Terkel (1983), Principles of Extractive Metallurgy, McGraw-Hill Book Company
- Rostoker, William; Bronson, Bennet; Dvorak, James (1984), "The Cast-Iron Bells of China", Technology and Culture, vol. 25, no. 4, The Society for the History of Technology, pp. 750–767
ಬಾಹ್ಯ ಕೊಂಡಿಗಳು
ಬದಲಾಯಿಸಿ- ಮಹಾ ಸರೋವರಗಳಲ್ಲಿ ಕಬ್ಬಿಣದ ಅದಿರಿನ ವ್ಯಾಪಾರದ ಇತಿಹಾಸ Archived 2009-07-28 ವೇಬ್ಯಾಕ್ ಮೆಷಿನ್ ನಲ್ಲಿ.
- ಯುನೈಟೆಡ್ ಸ್ಟೇಟ್ಸ್ ವಸಾಹತಿನ ಕಬ್ಬಿಣದ ಅದಿರು ಕೈಗಾರಿಕೆ Archived 2006-12-09 ವೇಬ್ಯಾಕ್ ಮೆಷಿನ್ ನಲ್ಲಿ.
- 1875ರಲ್ಲಿ ಜೆ.ಎಸ್.ಜೀನ್ಸ್ ಅವರ "ಪಯೋನೀರ್ಸ್ ಆಫ್ ದಿ ಕ್ಲೆವ್ಲ್ಯಾಂಡ್ ಐರನ್ ಟ್ರೇಡ್"
- ಪ್ಲ್ಯಾಟ್ಸ್ ಕಬ್ಬಿಣದ ಅಧಿರು ಬೆಲೆ ಮತ್ತು ಐತಿಹಾಸಿಕ ಪಟ್ಟಿ
- NY/NJಯ ಕಬ್ಬಿಣದ ಗಣಿಗಳು
- ಪ್ರಮುಖ ವಿಶ್ವ ಉತ್ಪಾದಕರ ಕಬ್ಬಿಣದ ಅದಿರು ಧಾರಕತೆ
- ಫೈನಾನ್ಷಿಯಲ್ ಟೈಮ್ಸ್ನಿಂದ ಇಂಟರ್ಯಾಕ್ಟೀವ್ ಕಬ್ಬಿಣದ ಅದಿರು ಬೆಲೆಗಳು