ಸ್ವೀಡನ್
ಸ್ವೀಡನ್ (ಅಧಿಕೃತವಾಗಿ ಸ್ವೀಡನ್ ರಾಜ್ಯ) ಯುರೋಪಿನ ಸ್ಕ್ಯಾಂಡಿನೇವಿಯ ಜಂಬೂದ್ವೀಪದ ಪೂರ್ವಭಾಗದಲ್ಲಿರುವ ಒಂದು ನಾರ್ಡಿಕ್ ದೇಶ. ಸ್ವೀಡನ್ ದೇಶವನ್ನು ಉತ್ತರದಲ್ಲಿ ನಾರ್ವೆ ಮತ್ತು ಫಿನ್ಲೆಂಡ್, ದಕ್ಷಿಣದಲ್ಲಿ ಡೆನ್ಮಾರ್ಕ್ ಪಶ್ಚಿಮಕ್ಕೆ ನಾರ್ವೆ ಉತ್ತರಕ್ಕೆ ಬಾಲ್ಟಿಕ್ ಸಮುದ್ರ ಮತ್ತು ಬೊತ್ನಿಕ್‍ಖಾರಿ ಸುತ್ತವರೆದಿವೆ. ಸ್ವೀಡನ್ ವಿಸ್ತೀರ್ಣದಲ್ಲಿ ಐರೋಪ್ಯ ಒಕ್ಕೂಟದಲ್ಲಿ ಮೂರನೇ ಅತಿ ದೊಡ್ಡ ದೇಶವಾಗಿದೆ, ಮತ್ತು ಸುಮಾರು ೯.೭ ಮಿಲಿಯದಷ್ಟು ಒಟ್ಟು ಜನಸಂಖ್ಯೆಯನ್ನು ಹೊಂದಿದೆ.
ಸ್ವೀಡನ್ ರಾಜ್ಯ Konungariket Sverige | |
---|---|
Motto: "ಸ್ವೀಡನ್ ಗಾಗಿ - ಕಾಲದೊಂದಿಗೆ" | |
Anthem: "ನೀನು ಪ್ರಾಚೀನ, ನೀನು ಸ್ವತಂತ್ರ" Royal anthem: ದೊರೆಯ ಗೀತೆ | |
![]() | |
Capital | ಸ್ಟಾಕ್‍ಹೋಮ್ |
Largest city | ರಾಜಧಾನಿ |
Official languages | ಸ್ವೀಡಿಷ್ |
Demonym(s) | Swedish |
Government | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
• ದೊರೆ | ಕಾರ್ಲ್ XVI ಗುಸ್ತಾಫ್ |
• ಪ್ರಧಾನಿ | ಫ್ರೆಡ್ರಿಕ್ ರೈನ್‌ಫೆಲ್ಟ್ |
ರಾಜ್ಯದ ಬಲಪಡಿಸುವಿಕೆ ಇತಿಹಾಸಪೂರ್ವಕಾಲ | |
• Water (%) | 8.7 |
Population | |
• 2007 estimate | 9,142,817 (88ನೆಯದು) |
• 1990 census | 8,587,353 |
GDP (PPP) | 2006 estimate |
• Total | $291 ಬಿಲಿಯನ್ (34ನೆಯದು) |
• Per capita | $32,200 (18ನೆಯದು) |
GDP (nominal) | 2006 estimate |
• Total | $385 ಬಿಲಿಯನ್ (19ನೆಯದು) |
• Per capita | $42,400 (9ನೆಯದು) |
Gini (2005) | 23 low |
HDI (2004) | ![]() Error: Invalid HDI value · 6ನೆಯದು |
Currency | ಸ್ವೀಡಿಷ್ ಕ್ರೋನಾ (SEK) |
Time zone | UTC+1 (CET) |
• Summer (DST) | UTC+2 (CEST) |
Calling code | 46 |
Internet TLD | .se |
ವಿಸ್ತೀರ್ಣ 4,49,964ಚ.ಕಿಮೀ. ಜನಸಂಖ್ಯೆ 89,72000. ಭಾಷೆ ಸ್ವೀಡಿಷ್. ಸಾಕ್ಷರತೆ 100%. ಕ್ರೈಸ್ತಧರ್ಮ, ನಾಣ್ಯ ಕ್ರೋನಾ. ಸ್ವೀಡನ್ ವಿಸ್ತೀರ್ಣದಲ್ಲಿ ನಾರ್ಕಿಕ್ ದೇಶಗಳಲ್ಲೇ ಅತಿ ದೊಡ್ಡದು ಯುರೋಪಿನಲ್ಲಿ ನಾಲ್ಕನೆಯ ದೊಡ್ಡ ದೇಶ. ಸ್ವೀಡನ್ ಉದ್ದವಾದ ತೀರ ಪ್ರದೇಶವನ್ನು, ವಿಸ್ತಾರವಾದ ಅರಣ್ಯ ಪ್ರದೇಶವನ್ನೂ ಅನೇಕ ಸರೋವರಗಳನ್ನೂ ಒಳಗೊಂಡಿದೆ. ರಾಜಧಾನಿ ಸ್ಟಾಕೋಮ್. ಸ್ವೀಡನ್ ಆರ್ಥಿಕವಾಗಿ ಮುಂದುವರೆದ ದೇಶ. ಉತ್ತಮ ಸಾರಿಗೆ ಸಂಪರ್ಕ ಮತ್ತು ಮೂಲಭೂತ ಸೌಕರ್ಯವಿದೆ.
ಇತಿಹಾಸ ಸಂಪಾದಿಸಿ
ಸ್ವೀಡನ್ನಿನ ಪ್ರದೇಶ ಶತಮಾನದಿಂದ ಶತಮಾನಕ್ಕೆ ವ್ಯತ್ಯಾಸವಾಗುತ್ತಿದೆ. 1809ರಲ್ಲಿ ಫಿನ್‍ಲೆಂಡ್ ಸ್ವೀಡ್‍ನ್ನಿನಿಂದ ಬೇರ್ಪಟ್ಟಿತು. ಅನಂತರ 17ನೆಯ ಶತಮಾನದಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡಿಸ್‍ನ ವಸಾಹತು ನೆಲೆಯಾಗಿತ್ತು. 1914ರ ಒಂದನೆಯ ಮಹಾಯುದ್ಧದ ಅನಂತರ ಇದರ ಎಲ್ಲೆಯನ್ನು ನಿಖರವಾಗಿ ಗುರುತಿಸಲಾಯ್ತು.
ಭೂರಚನೆ ಸಂಪಾದಿಸಿ
ಸ್ವೀಡನ್ ಯುರೇಷಿಯ ಭೂಖಂಡದ ಒಂದು ಸ್ಥಿರ ಭೂ ಫಲಕ. ಈ ದೇಶದ ದಕ್ಷಿಣದ ಭಾಗ ಫಲವತ್ತಾದ ಮೈದಾನದಿಂದ ಕೂಡಿದೆ. ಉತ್ತರದ ಭಾಗ ಅರಣ್ಯ ಪ್ರದೇಶ. ಇಲ್ಲಿಯ ಮಣ್ಣು ಅಷ್ಟೇನೂ ಫಲವತ್ತಾಗಿಲ್ಲ. ಉಳಿದ ಭಾಗದಲ್ಲಿ ಛಿದ್ರವಾದ ಭೂ ಪ್ರದೇಶಗಳಿದ್ದು ವೈವಿಧ್ಯಮಯವಾಗಿವೆ. ಮೈದಾನ ಪ್ರದೇಶದಲ್ಲಿ ಬೆಟ್ಟಗುಡ್ಡಗಳು ಮತ್ತು ಸರೋವರಗಳಿವೆ. ಗಡಿಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಮತ್ತು ಇತರ ಖನಿಜ ನಿಕ್ಷೇಪಗಳಿವೆ. ಇದು ಸ್ವೀಡನ್ನಿನ ಹಳೆಯ ಕೈಗಾರಿಕಾ ವಲಯ ನಾರ್ವೆ ಮತ್ತು ಸ್ವೀಡನ್ ನಡುವೆ ಸ್ಕಾಂಡಿನೇವಿಯ ಪರ್ವತ ಶ್ರೇಣಿಗಳಿವೆ. ಈ ಪ್ರದೇಶ ಸಮುದ್ರಮಟ್ಟದಿಂದ ಸು. 2000ಮೀ ಎತ್ತರದಲ್ಲಿದೆ. ಅನೇಕ ನದಿಗಳು ಇಲ್ಲಿ ಉಗಮಿಸುತ್ತವೆ.
ವಾಯುಗುಣ ಸಂಪಾದಿಸಿ
ಸ್ವೀಡನ್ ಉತ್ತರದ ಆರ್ಟಿಕ್ ಹಾಗೂ ಅಟ್ಲಾಂಟಿಕ್ ಸಾಗರದ ಗಲ್ಫ್‍ಸ್ಟ್ರೀಮ್ ಉಷ್ಣೋದಕ ಪ್ರವಾಹದ ಪ್ರಭಾವಕ್ಕೊಳಗಾಗಿದೆ. ಭೂಮಿಯು 221/20 ಓರೆಯಾಗಿ ಸುತ್ತುವುದರಿಂದ ಈ ಪ್ರದೇಶವು ಉತ್ತರ ಧ್ರುವ ಪ್ರದೇಶವಾಗಿ ಭಾಸವಾಗುತ್ತದೆ. ಆದ್ದರಿಂದ ಬೇಸಗೆಯಲ್ಲಿ ಹಗಲು ಹೆಚ್ಚು. ಚಳಿಗಾಲದಲ್ಲಿ ರಾತ್ರಿ ಹೆಚ್ಚು. ಸ್ವೀಡನ್ನಿನ ದಕ್ಷಿಣ ಭಾಗ ಉತ್ತರ ಭಾಗಕ್ಕಿಂತ ಹೆಚ್ಚು ಹಿತಕರವಾದ ವಾಯುಗುಣ ಹೊಂದಿವೆ. ಇಲ್ಲಿ ವಾರ್ಷಿಕ ಸರಾಸರಿ ಮಳೆ 385ಮಿಮೀ. ವರ್ಷದ ಎಲ್ಲ ಕಾಲದಲ್ಲಿಯೂ ಮಳೆ ಬೀಳುತ್ತದೆ.
ಸಸ್ಯವರ್ಗ ಸಂಪಾದಿಸಿ
ಸ್ವೀಡನ್‍ನಲ್ಲಿ ಕೋನಿಫರಸ್ ಅರಣ್ಯವಿದೆ, ದಕ್ಷಿಣದ ಭಾಗದಲ್ಲಿರುವುದು ಎಲೆ ಉದುರುವ ಮರಗಳಿಂದ ಕೂಡಿದ ಅರಣ್ಯ. ಈ ಅರಣ್ಯದಲ್ಲಿ ಬೀಚ್ ಮತ್ತು ಓಕ್ ಮರಗಳು ಪ್ರಮುಖವಾಗಿವೆ. ಈಚೆಗೆ ದಕ್ಷಿಣ ಮತ್ತು ನೈಋತ್ಯ ಭಾಗಗಳಲ್ಲೂ ಕೋನಿಫರಸ್ ಅರಣ್ಯವನ್ನು ಬೆಳೆಸಲಾಗುತ್ತಿದೆ.
ಪ್ರಾಣಿವರ್ಗ ಸಂಪಾದಿಸಿ
ಸ್ವೀಡನ್ ಶೀತವಲಯದಲ್ಲಿರುವುದರಿಂದ ಕರಡಿ, ಚಿರತೆ, ತೋಳ, ಬೆಕ್ಕು, ಕಾಡುಜಿಂಕೆ, ಇಲಿ ಮತ್ತು ಮೊಲ ಇವೆ. ಇಲ್ಲಿ ಪ್ರಾಣಿ ಸಂರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಪ್ರಾಣಿಗಳ ಬೇಟೆಯನ್ನು ನಿಷೇಧಿಸಲಾಗಿದೆ.
ಆರ್ಥಿಕತೆ ಸಂಪಾದಿಸಿ
ವ್ಯವಸಾಯ ಸಂಪಾದಿಸಿ
ಸ್ವೀಡನ್‍ನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಸ್ವೀಡನ್ನಿನ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಸೇ.10ರಷ್ಟು ಭೂ ಭಾಗವನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲಾಗಿದೆ. ದಕ್ಷಿಣದ ಭಾಗಗಳು ವ್ಯವಸಾಯ ಪ್ರಧಾನ, ಹಂದಿ ಸಾಕಣೆ ಇದೆ. ಮಾಂಸ ಮತ್ತು ಹಾಲಿನ ಉತ್ಪನ್ನಗಳೂ ಮುಖ್ಯ. ನದಿಗಳ ದಂಡೆಗಳಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ.
ಮೀನುಗಾರಿಕೆ ಸಂಪಾದಿಸಿ
ಮೀನುಗಾರಿಕೆ ಕಡಿಮೆ. ಏಕೆಂದರೆ ಮೀನುಗಾರಿಕೆಯ ವಲಯ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಒಳಪಟ್ಟಿದೆ. ಇದರಿಂದ ಇದು ಸಾಗರ ಮೀನುಗಾರಿಕೆ ವಲಯ ಕಳೆದುಕೊಂಡಿದೆ. ಆದರೆ ಸ್ವೀಡನ್ ಕೈಗಾರಿಕೆಯಲ್ಲಿ ಮುಂದುವರಿದಿದೆ. ತನ್ನ ಕೈಗಾರಿಕಾ ಉತ್ಪನ್ನದಲ್ಲಿ ಇಂದು ಸೇ. 40ರಷ್ಟನ್ನು ರಫ್ತು ಮಾಡುತ್ತಿದೆ.
ಆರ್ಥಿಕತೆಯ ಇತಿಹಾಸ ಸಂಪಾದಿಸಿ
1850ಕ್ಕಿಂತ ಮುಂಚೆ ಸ್ವೀಡನ್ ವ್ಯವಸಾಯ ಪ್ರಧಾನವಾದ ದೇಶವಾಗಿತ್ತು. ಆಗ ದೇಶದಲ್ಲಿ ಸು. 35 ಲಕ್ಷ ಜನಸಂಖ್ಯೆಯಿತ್ತು. ಜನನ ಮರಣ ದರ ಪ್ರತಿ ಸಾವಿರಕ್ಕೆ 150 ಇತ್ತು. ಸರಾಸರಿ ಜೀವಿತ ಅವಧಿ ಪುರುಷರಲ್ಲಿ 40 ವರ್ಷ ಮತ್ತು ಸ್ತ್ರೀಯರಲ್ಲಿ 45ವರ್ಷ. 1970ರಲ್ಲಿ ಈ ದೇಶವು ಪ್ರಪಂಚದಲ್ಲಿಯೇ ತಲಾ ಒಟ್ಟು ಸ್ಥೂಲದೇಶೀಯ ಉತ್ಪನ್ನದಲ್ಲಿ 4ನೆಯ ಸ್ಥಾನ ಪಡೆದಿತ್ತು. ಜನಸಂಖ್ಯೆ 90 ಲಕ್ಷಕ್ಕೆ ಏರಿತು. ಜನನ ಮತ್ತು ಮರಣ ದರ ಪ್ರತಿ ಸಾವಿರಕ್ಕೆ 4ಕ್ಕೆ ಇಳಿಯಿತು. ಹಾಗೆಯೇ ಸರಾಸರಿ ಜೀವಿತ ಅವಧಿ ಪುರಷರಲ್ಲಿ 75ವರ್ಷ ಮತ್ತು ಸ್ತ್ರೀಯರಲ್ಲಿ 80 ವರ್ಷ ಇತ್ತು.
ಗಣಿಗಾರಿಕೆ ಸಂಪಾದಿಸಿ
ಉತ್ತರ ಸ್ವೀಡನ್‍ನಲ್ಲಿ ಕಬ್ಬಿಣದ ಅದಿರು ನಿಕ್ಷೇಪವಿದೆ. ಪ್ರಪಂಚದ ಉಕ್ಕು ಉತ್ಪಾದನೆಯಲ್ಲಿ ಇದು ಸೇ.2ರಷ್ಟು ಉತ್ಪಾದಿಸುತ್ತಿದೆ. ಇದನ್ನು ಹೆಚ್ಚಾಗಿ ಯುರೋಪ್ ದೇಶಗಳಿಗೆ ರಫ್ತು ಮಾಡುತ್ತದೆ. ತಾಮ್ರ, ಸೀಸ ಮತ್ತು ಯುರೇನಿಯಮ್ ಕೂಡ ದೊರೆಯುತ್ತವೆ. ಅರಣ್ಯ, ಖನಿಜ ಮತ್ತು ಜಲವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಲಾಗಿದೆ. ಮರ ಮತ್ತು ಮರದ ದಿಮ್ಮಿಗಳ ಕೈಗಾರಿಕೆಗಳು ಕಚ್ಚಾವಸ್ತುಗಳು ದೊರೆಯುವ ಪ್ರದೇಶಗಳ ಹತ್ತಿರವೇ ನೆಲೆಸಿವೆ. ಕಾಗದ ಕೈಗಾರಿಕೆ ನದಿ ಮುಖಜ ಭೂಮಿಯಲ್ಲಿ ನೆಲಸಿದೆ. ಲೋಹದ ಕೈಗಾರಿಕೆ ಮುಖ್ಯವಾಗಿ ಬಗ್ರ್ಸ್‍ಲೋಶೆನ್ ಪ್ರದೇಶದಲ್ಲಿ ಕಂಡುಬರುತ್ತವೆ. ದಕ್ಷಿಣ ಭಾಗದಲ್ಲಿ ವಾಹನದ ಬಿಡಿಭಾಗಗಳು ಮತ್ತು ವಿಮಾನ ತಯಾರಿಕೆ ಕೇಂದ್ರಗಳು ಕಂಡುಬರುತ್ತವೆ. ತಂತ್ರಪ್ರಧಾನ ಕೈಗಾರಿಕೆಗಳು ಪೂರ್ವ ಸ್ವೀಡನ್ ಮತ್ತು ಸ್ಕಾನ್ ಪ್ರದೇಶದಲ್ಲಿ ನೆಲೆಸಿವೆ. ವಿದ್ಯುಚ್ಛಕ್ತಿಯ ಉತ್ಪಾದನೆಯಲ್ಲಿ ಇದು ಬಹಳ ಅನುಕೂಲ ಸ್ಥಿತಿಯಲ್ಲಿದೆ.
ಸ್ವೀಡನ್ ರಾಷ್ಟ್ರೀಯ ಆದಾಯದ ಅತಿ ಹೆಚ್ಚಿನ ಭಾಗವು ವ್ಯಾಪಾರ, ಸಾರಿಗೆ, ಆಡಳಿತ ಮತ್ತು ಸೇವೆಗಳನ್ನು ಒಳಗೊಂಡಿದೆ. ಸ್ವೀಡನ್ 1995 ಜನವರಿ 1ರಂದು ಯುರೋಪ್ ಒಕ್ಕೂಟಕ್ಕೆ ಸೇರಿಕೊಂಡಿತು. ಅಲ್ಲದೆ ವಿಶ್ವಸಂಸ್ಥೆ, ವಿಶ್ವವ್ಯಾಪಾರ ಸಂಘ, ನೇಟೋ ಮುಂತಾದ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿದೆ.
ಕೈಗಾರಿಕೆ ಸಂಪಾದಿಸಿ
ಸ್ವೀಡನ್ ಕೈಗಾರಿಕೆಯಲ್ಲಿ ಬಹಳ ಮುಂದುವರಿದಿದೆ. ಇದರ ಕೈಗಾರಿಕಾ ಉತ್ಪನ್ನದಲ್ಲಿ 40%ಭಾಗ ರಫ್ತಾಗುತ್ತದೆ. ಸ್ವೀಡನ್ ಪ್ರಪಂಚದ ಪ್ರಪ್ರಥಮ ಸಮಗ್ರ ಕಲ್ಯಾಣ ರಾಜ್ಯವಾಗಿದೆ. ಸ್ಟಾಕೋಮ್ ಸಮುದ್ರದ ಮೇಲಿನ ಸುಂದರತಾಣ ಎಂದು ಪ್ರಸಿದ್ಧವಾಗಿದೆ. ಸ್ವೀಡನ್ 1995 ಜನವರಿ 1ರಂದು ಯುರೋಪಿಯನ್ ಒಕ್ಕೂಟಕ್ಕೆ ಸೇರಿತು. ಆದರೆ ನ್ಯಾಟೋ ಕೂಟಕ್ಕೆ ಸೇರಲಿಲ್ಲ. 2000ದಲ್ಲಿ ಅದು ಯುರೋ ನಾಣ್ಯವನ್ನು ಸ್ವೀಕರಿಸಲು ಮತನೀಡಿದೆ.
ಆಡಳಿತ ಸಂಪಾದಿಸಿ
ಸ್ವೀಡನ್ 21 ರಾಜ್ಯಗಳನ್ನಾಗಿ ವಿಂಗಡಿಸಲಾಗಿದೆ ಒಂದೊಂದು ರಾಜ್ಯಕ್ಕೂ ಒಬ್ಬೊಬ್ಬ ರಾಜ್ಯಪಾಲರನ್ನು ಪ್ರಧಾನ ಮಂತ್ರಿ ಅಥವಾ ಅಲ್ಲಿನ ಸರ್ಕಾರ ನೇಮಿಸುತ್ತದೆ.
ಧರ್ಮ ಸಂಪಾದಿಸಿ
10 ಮತ್ತು 11ನೆಯ ಶತಮಾನದಲ್ಲಿ ಕ್ರೈಸ್ತಧರ್ಮ ನಿಧಾನವಾಗಿ ಈ ದೇಶದಲ್ಲಿ ನೆಲೆಯೂರಿತು. ನಂತರ 16ನೆಯ ಶತಮಾನದಲ್ಲಿ ರೋಮನ್ ಚರ್ಚ್‍ಗಳು ಹೆಚ್ಚು ಪ್ರಚಲಿತವಾದುವು. ಜೊತೆಗೆ ಇಸ್ಲಾಮ್‍ಧರ್ಮ, ಹಿಂದುಧರ್ಮ, ಭೌದ್ಧಧರ್ಮ ಮತ್ತು ಜೂಯಿಷ್‍ಧರ್ಮಗಳು ಕಂಡುಬರುತ್ತವೆ.
ಭಾಷೆಗಳು ಸಂಪಾದಿಸಿ
ಸ್ವೀಡನ್‍ನಲ್ಲಿ ಡ್ಯಾನಿಷ್, ನಾರ್ವೇಜಿಯನ್, ಐಸ್‍ಲೆಂಡಿಕ್ ಮತ್ತು ಫರೋಯಿಸ್ ಜನಾಂಗಗಳಿವೆ. ನಾರ್ಡಿಕ್ ಭಾಷೆ ಹೆಚ್ಚು ಪ್ರಚಾರದಲ್ಲಿದೆ. ಸ್ವೀಡಿಷರು ನಾರ್ಡಿಕ್ ಭಾಷೆ ಆಡುತ್ತಾರೆ. ಇದರ ಜೊತೆಗೆ ಅಲ್ಪಸಂಖ್ಯಾತ ಭಾಷೆಗಳಾದ ಸಮಿ ಫಿನ್ಸ್, ಮೀನ್ ಕೀಲ್, ಯಾಡಿಸ್, ರೋಮಾನಿ ಚಿಬ್ ಭಾಷೆಗಳನ್ನು ಬಳಸುತ್ತಾರೆ. ಇಲ್ಲಿ ಈತ 200 ಭಾಷೆಗಳನ್ನಾಡುವ ಜನರು ನೆಲಸಿದ್ದಾರೆ.