(ಹೈನು ಹಸುಗಳು ಎಂದೂ ಕರೆಯಲ್ಪಡುವ) ಹೈನು ದನ ಎಂದರೆ ಭಾರೀ ಪ್ರಮಾಣದ ಹಾಲನ್ನು ಉತ್ಪಾದಿಸುವ ಸಾಮರ್ಥ್ಯಕ್ಕಾಗಿ ಬೆಳೆಸಲ್ಪಟ್ಟ ದನಗಳು. ಇದರಿಂದ ಕ್ಷೀರೋತ್ಪನ್ನಗಳನ್ನು ತಯಾರಿಸಲಾಗುತ್ತದೆ. ಐತಿಹಾಸಿಕವಾಗಿ, ಹೈನು ದನ ಮತ್ತು ಮಾಂಸದ ದನದ ನಡುವೆ ಸ್ವಲ್ಪವೇ ವ್ಯತ್ಯಾಸವಿತ್ತು, ಮತ್ತು ಅದೇ ಪಶುಗಳನ್ನು ಹಲವುವೇಳೆ ಮಾಂಸ ಮತ್ತು ಹಾಲು ಉತ್ಪಾದನೆ ಎರಡಕ್ಕೂ ಬಳಸಲಾಗುತ್ತಿತ್ತು. ಇಂದು, ಗೋವಿನ ಉದ್ಯಮವು ಹೆಚ್ಚು ವಿಶಿಷ್ಟವಾಗಿದೆ ಮತ್ತು ಬಹುತೇಕ ಹೈನು ದನಗಳನ್ನು ದೊಡ್ಡ ಪ್ರಮಾಣದ ಹಾಲನ್ನು ಉತ್ಪಾದಿಸಲು ಬೆಳೆಸಲಾಗಿದೆ.

Cow female black white.jpg

ಹೈನು ಹಸುಗಳನ್ನು ಹಿಂಡುಗಳಲ್ಲಿ ಅಥವಾ ಹೈನುದಾಣಗಳಲ್ಲಿ ಅಥವಾ ವಾಣಿಜ್ಯ ಸಾಕಣೆಕೇಂದ್ರಗಳಲ್ಲಿ ಕಾಣಬಹುದು. ಹೈನುದಾಣಗಳಲ್ಲಿ ಹೈನು ಕೃಷಿಕರು ದನಗಳ ಒಡೆಯರಾಗಿ ಅವನ್ನು ನಿರ್ವಹಿಸಿ, ಆರೈಕೆ ಮಾಡಿ, ಅವುಗಳಿಂದ ಹಾಲನ್ನು ಸಂಗ್ರಹಿಸುತ್ತಾರೆ. ಹಿಂಡಿನ ಗಾತ್ರಗಳು ಭೂಸ್ವಾಧೀನ ಸಂಸ್ಕೃತಿ ಮತ್ತು ಸಾಮಾಜಿಕ ರಚನೆಯನ್ನು ಅವಲಂಬಿಸಿ ವಿಶ್ವದಾದ್ಯಂತ ಬದಲಾಗುತ್ತವೆ. ಅಮೇರಿಕವು ೭೫,೦೦೦ ಹೈನು ಹಿಂಡುಗಳಲ್ಲಿ ೯ ಮಿಲಿಯ ಹಸುಗಳನ್ನು ಹೊಂದಿದೆ, ಮತ್ತು ಹಿಂಡಿನ ಸರಾಸರಿ ಗಾತ್ರ ೧೨೦ ಹಸುಗಳಷ್ಟು ಇದೆ. ಸಣ್ಣ ಹಿಂಡುಗಳ ಸಂಖ್ಯೆಯು ಬಹಳ ವೇಗವಾಗಿ ಕುಸಿಯುತ್ತಿದೆ ಮತ್ತು ೫೦೦ ಹಸುಗಳಿಗಿಂತ ಹೆಚ್ಚಿರುವ ೩,೧೦೦ ಹಿಂಡುಗಳು ೨೦೦೭ರಲ್ಲಿ ಅಮೇರಿಕದ ಹಾಲಿನ ಶೇಕಡ ೫೧ ರಷ್ಟು ಉತ್ಪಾದಿಸಿದ್ದವು.[೧] ಒಟ್ಟಾರೆಯಾಗಿ ಯುನೈಟಡ್ ಕಿಂಗ್ಡಮ್ ಹೈನು ಹಿಂಡು ಸರಿಸುಮಾರು ೧.೫ ಮಿಲಿಯ ಹಸುಗಳನ್ನು ಹೊಂದಿದೆ, ಮತ್ತು ಒಂದು ಸರಾಸರಿ ಸಾಕಣೆಕೇಂದ್ರದಲ್ಲಿ ಸುಮಾರು ೧೦೦ ತಲೆಗಳಿವೆ ಎಂದು ವರದಿ ಮಾಡಲಾಗಿದೆ. ನ್ಯೂ ಜ಼ೀಲಂಡ್‍ನಲ್ಲಿ, ಸರಾಸರಿ ಹಿಂಡು ೩೭೫ಕ್ಕಿಂತ ಹೆಚ್ಚು ಹಸುಗಳನ್ನು ಹೊಂದಿದ್ದರೆ, ಆಸ್ಟ್ರೇಲಿಯಾದಲ್ಲಿ, ಸರಾಸರಿ ಹಿಂಡಿನಲ್ಲಿ ಸುಮಾರು ೨೨೦ ಹಸುಗಳು ಇವೆ.

ಅನೇಕ ಇತರ ಜಾನುವಾರು ಪಾಲನೆಯಂತೆ ಹೈನುಗಾರಿಕೆಯನ್ನು ಸಾಂದ್ರ ಮತ್ತು ವ್ಯಾಪಕ ನಿರ್ವಹಣಾ ಪದ್ಧತಿಗಳಾಗಿ ವಿಭಜಿಸಬಹುದು. ಸಾಂದ್ರ ವ್ಯವಸ್ಥೆಗಳು ಹಿಂಡಿನಲ್ಲಿನ ಪ್ರತಿ ಹಸುವಿನಿಂದ ಗರಿಷ್ಠ ಉತ್ಪಾದನೆ ಕಡೆಗೆ ಕೇಂದ್ರೀಕರಿಸುತ್ತವೆ. ಇದು ಪರಿಪೂರ್ಣ ಪೋಷಣೆ ಒದಗಿಸಲು ಅವುಗಳ ಆಹಾರವನ್ನು ರೂಪಿಸುವುದನ್ನು ಮತ್ತು ಹಸುಗಳಿಗೆ ಮುಕ್ತ ಕೊಟ್ಟಿಗೆ ಅಥವಾ ಕಟ್ಟು ಕೊಟ್ಟಿಗೆಯಂತಹ ಬಂಧನ ವ್ಯವಸ್ಥೆಯಲ್ಲಿ ವಸತಿ ಮಾಡಿಕೊಡುವುದನ್ನು ಒಳಗೊಳ್ಳುತ್ತದೆ. ಈ ಹಸುಗಳನ್ನು ಅವುಗಳ ಸ್ತನ್ಯದಾನದ ಉದ್ದಕ್ಕೂ ಒಳಗಡೆ ಇಡಲಾಗುತ್ತದೆ ಮತ್ತು ಆದರ್ಶಪ್ರಾಯವಾಗಿ ಮತ್ತೊಮ್ಮೆ ಕರುಹಾಕುವ ಮೊದಲು ಅವುಗಳ ೬೦ ದಿನದ ಒಣ ಅವಧಿಯಲ್ಲಿ ಹುಲ್ಲುಗಾವಲಿನಲ್ಲಿ ಬಿಡಬಹುದು. ಮುಕ್ತ ಕೊಟ್ಟಿಗೆ ಶೈಲಿಯ ವಸತಿಸ್ಥಳಗಳು ದನಗಳನ್ನು ಮುಕ್ತವಾಗಿ ಬಿಟ್ಟಿರುವುದನ್ನು ಒಳಗೊಳ್ಳುತ್ತವೆ. ಇಲ್ಲಿ ಇವು ಮೇವು, ನೀರು ಮತ್ತು ಲಾಯಗಳಿಗೆ ಮುಕ್ತ ಅವಕಾಶವನ್ನು ಹೊಂದಿರಬಹುದು, ಆದರೆ ದಿನದಲ್ಲಿ ಬಹು ಬಾರಿ ಹಾಲು ಕರೆಯಲು ಇವುಗಳನ್ನು ವಸತಿಸ್ಥಳದ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ.

ಉಲ್ಲೇಖಗಳುಸಂಪಾದಿಸಿ

  1. James M. McDonald et al., "Changes in the Size and Location of U.S. Dairy Farms Archived 1 July 2015 at the Wayback Machine.," Profits, Costs and the Changing Structure of Dairy Farming, ERR-47 Sept. 2007.
"https://kn.wikipedia.org/w/index.php?title=ಹೈನು_ದನ&oldid=874148" ಇಂದ ಪಡೆಯಲ್ಪಟ್ಟಿದೆ