ಕ್ಷಾರ(Alkali):ರಸಾಯನಶಾಸ್ತ್ರದಲ್ಲಿ ಕ್ಷಾರ ಲೋಹಗಳೆಂದು ಕರೆಯಲ್ಪಡುವ ಲಿಥಿಯಮ್,ಸೋಡಿಯಮ್,ಪೊಟ್ಯಾಶಿಯಮ್,ರುಬಿಡಿಯಮ್,ಸೀಸಿಯಮ್,ಫ್ರಾನ್ಸಿಯಮ್ ಮೂಲಧಾತುಗಳ ಹೈಡ್ರಾಕ್ಸಡ್‍ಗಳ ಹಾಗೂ ಕಾರ್ಬೋನೇಟ್‍ಗಳನ್ನು ಕ್ಷಾರವೆಂದು ಕರೆಯುತ್ತಾರೆ.ಈ ಕ್ಷಾರ ಲೋಹಗಳ ಸಂಯುಕ್ತಗಳು ಅತ್ಯಂತ ಉಪಯುಕ್ತ ಮತ್ತು ಹೆಚ್ಚು ಬಳಕೆಯಲ್ಲಿರುವ ಸಂಯುಕ್ತಗಳಾಗಿವೆ.ಸೋಡಿಯಮ್ ಕ್ಲೊರೈಡ್,ಹೈಡ್ರೋಜನ್ ಪೆರಾಕ್ಸೈಡ್,ಸೋಡಿಯಮ್ ಹೈಡ್ರಾಕ್ಸೈಡ್ ಮುಂತಾದವುಗಳು ನಿತ್ಯ ಬಳಕೆಯಲ್ಲಿರುವ ಕ್ಷಾರಗಳು.

ಉಪಯೋಗಗಳು

ಬದಲಾಯಿಸಿ

ಕ್ಷಾರಗಳು ನಿತ್ಯ ಬಳಕೆಯ ಹಲವಾರು ವಸ್ತುಗಳ ತಯಾರಿಕೆಯಲ್ಲಿ ಅತ್ಯುಪಯುಕ್ತ.ಕಾಗದ,ಗಾಜು,ಮಾರ್ಜಕ,ಬಟ್ಟೆ,ಅಡುಗೆಉಪ್ಪು ಮುಂತಾದವುಗಳು ತಯಾರಿಕೆಯಲ್ಲಿ ಪ್ರಮುಖ ಕಚ್ಚಾವಸ್ತು.ತೈಲ ಶುದ್ಧೀಕರಣ ಹಾಗೂ ಚರ್ಮ ಹದಮಾಡುವ ಕೈಗಾರಿಕೆಗಳಲ್ಲೂ ಉಪಯುಕ್ತ.

ಕ್ಷಾರಯುಕ್ತ ಮಣ್ಣು

ಬದಲಾಯಿಸಿ

ಮಣ್ಣಿನಲ್ಲಿ ಪಿ.ಹೆಚ್. ಸೂಚ್ಯಾಂಕ ೭.೩ಕ್ಕಿಂತಲೂ ಹೆಚ್ಚು ಇದ್ದಲ್ಲಿ ಅದನ್ನು ಕ್ಷಾರಯುಕ್ತ ಮಣ್ಣು ಎನ್ನುತ್ತಾರೆ.ಕೆಲವು ಸಸ್ಯಗಳಿಗೆ,ಉದಾಹರಣೆಗೆ ಕ್ಯಾಬೇಜ್ ಇತ್ಯಾದಿ ಇದು ಉತ್ತಮವಾದರೂ ಹೆಚ್ಚಿನೆಲ್ಲ ಸಸ್ಯಗಳಿಗೆ ಇದು ಸಮಸ್ಯೆ ತಂದೊಡ್ಡುತ್ತದೆ. ಆಗ ಇದನ್ನು ಅಮ್ಲಯುಕ್ತ ಪದಾರ್ಥಗಳನ್ನು ಭೂಮಿಗೆ ಸೇರಿಸಿ ಸಮಗೊಳಿಸಬೇಕಾಗುತ್ತದೆ.

ಲವಣ ಸರೋವರಗಳು

ಬದಲಾಯಿಸಿ

ಕೆಲವು ಸರೋವರಗಳು ಕ್ಷಾರ ಲವಣಯುಕ್ತವಾಗಿವೆ.ಇವುಗಳಲ್ಲಿ ಭೂ ಪದರದಲ್ಲಿರುವ ಕ್ಷಾರ ಲವಣಗಳು ನೀರಿನಲ್ಲಿ ಕರಗಿರುತ್ತವೆ.ನೀರು ಆವಿಯಾದೆಂತೆಲ್ಲಾ ಸರೋವರಗಳು ಹೆಚ್ಚು ಹೆಚ್ಚು ಕ್ಷಾರಯುಕ್ತವಾಗುತ್ತವೆ.ಇವುಗಳಲ್ಲಿ ಕೆನಡದಲ್ಲಿರುವ ರೆಡ್‌ಬರಿ ಸರೋವರ,ಅಮೆರಿಕದಲ್ಲಿರುವ ಮೊನೊಲೇಕ್,ಸಮ್ಮರ್‌ಲೇಕ್ ಸರೋವರಗಳು ಪ್ರಮುಖವಾಗಿವೆ.

"https://kn.wikipedia.org/w/index.php?title=ಕ್ಷಾರ&oldid=318447" ಇಂದ ಪಡೆಯಲ್ಪಟ್ಟಿದೆ