ಮೇಲೆ:ಮೂಲಧಾತುಗಳ ಪಟ್ಟಿ ಕೆಳಗೆ:ಕೆಲವು ಮೂಲಧಾತುಗಳ ಉದಾಹರಣೆಗಳು ಎಡದಿಂದ ಬಲಕ್ಕೆ: ಹೈಡ್ರೋಜನ್ (Hydrogen), ಬೇರಿಯಮ್ (Barium), ತಾಮ್ರ(Copper), ಯುರೇನಿಯಮ್ (Uranium), ಬ್ರೋಮಿನ್(Bromine) ಮತ್ತು ಹೀಲಿಯಂ (Helium).

ರಾಸಾಯನಿಕ ಮೂಲಧಾತು ಅಥವಾ ಮೂಲಧಾತು

ಬದಲಾಯಿಸಿ
  • ರಾಸಾಯನಿಕ ಮೂಲಧಾತು ಅಥವಾ ಮೂಲಧಾತು ರಸಾಯನಶಾಸ್ತ್ರದ (Chemistry) ಮೂಲ ಪದಾರ್ಥ. ಇವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ ದ್ರವ್ಯಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವಾ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ ಅಣು.[]
  • ಪ್ರತಿಯೊಂದು ವಸ್ತುವು (matter) ಅನೇಕ ಧಾತುಗಳಿಂದ (elements)ಕೂಡಿದೆ. ವಸ್ತುವನ್ನು ಮತ್ತು ಧಾತು ಅಥವಾ ಮೂಲವಸ್ತುವನ್ನು ವಿಭಜಿಸಿದಾಗ ಅದರ ಚಿಕ್ಕ ಘಟಕ 'ಅಣು'(Molecule) ರೂಪದಲ್ಲಿ ಇರುವುದು ಕಂಡುಬಂದಿದೆ. ಅದನ್ನೂ ವಿಭಜಸಿದರೆ ಅದರ ಅತಿ ಚಿಕ್ಕ ಘಟಕ ಪರಮಾಣು. ಒಂದು ವಿಭಜಿಸಿದ ವಸ್ತುವಿನ ಅತಿ ಚಿಕ್ಕ ಘಟಕವಾದ ಪರಮಾಣು ಮೂಲವಸ್ತುವಿನ ಗುಣವನ್ನೇ ಹೊಂದಿರುತ್ತದೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ. ಪ್ರಸ್ತುತವಾಗಿ 118 ಧಾತುಗಳನ್ನು (elements) 2013 ವೇಳೆಗೆ ಕಂಡುಹಿಡಿಯಲಾಗಿದೆ.
  • ಮೂಲಧಾತುವಿನ ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುವರು.
  • ಪಕ್ಕದಲ್ಲಿ ಕೊಟ್ಟಿರುವ ಮೂಲಧಾತುವಿನ ಅಂಕಣ-ಪಟ್ಟಿ ಮೂಲಧಾತುವಿನ ಗುಂಪು,ಸಂಖ್ಯೆ ಮತ್ತು ಮೂಲಧಾತುವಿನ ಇಂಗ್ಲಿಷ್‍ನ ಸಂಕೇತವನ್ನು ತೋರಿಸುತ್ತದೆ. ಅಣುತೂಕವನ್ನು ಪಟ್ಟಿಯಿಂದ ಬಿಡಲಾಗಿದೆ. ಆ ಪಟ್ಟಿಗೆ 'ಪೀರಿಯಾಡಿಕ್ ಟೇಬಲ್' ಅಥವಾ 'ಆವೃತ್ತಕೋಷ್ಠಕ' ಎಂದು ಹೆಸರು.

ಮೂಲಧಾತುಗಳ ಪಟ್ಟಿ

ಬದಲಾಯಿಸಿ
ಪರಮಾಣು ಸಂಖ್ಯೆ ಧಾತುಗಳು ಸಂಕೇತ ಧಾತುವಿನ ಭೌತ ಲಕ್ಷಣ
1 ಹೈಡ್ರೋಜನ್[]-Hydrogen H ಬಣ್ಣವಿಲ್ಲದ ಅನಿಲ
2 ಹೀಲಿಯಂ-Helium He ಬಣ್ಣವಿಲ್ಲದ ಅನಿಲ
3 ಲಿಥಿಯಂ-Lithium Li ಬಿಳಿಯ ಲೋಹ
4 ಬೆರಿಲಿಯಂ-Beryllium Be ಬೂದು ಬಣ್ಣದ ಲೋಹ
5 ಬೊರಾನ್-Boron B ದಟ್ಟ ಕಂದು ಪುಡಿ
6 ಇಂಗಾಲ-Carbon C ಕಪ್ಪು ಘನ
7 ನೈಟ್ರೋಜನ್-Nitrogen N ಬಣ್ಣವಿಲ್ಲದ ಅನಿಲ
8 ಆಕ್ಸಿಜನ್-Oxygen O ಬಣ್ಣವಿಲ್ಲದ ಅನಿಲ
9 ಫ್ಲೂರೀನ್-Flourine F ಹಸಿರುಛಾಯೆಯ ಹಳದಿ ಅನಿಲ
10 ನಿಯಾನ್-Neon Ne ಬಣ್ಣವಿಲ್ಲದ ಅನಿಲ
11 ಸೋಡಿಯಮ್-Sodium Na ಬಿಳಿ ಲೋಹ
12 ಮ್ಯಗ್ನೀಶಿಯಮ್-Magnesium Mg ಬಿಳಿ ಲೋಹ
13 ಅಲ್ಯೂಮಿನಿಯಮ್-Aluminium Al ಬಿಳಿ ಬಣ್ಣದ ಲೋಹ
14 ಸಿಲಿಕಾನ್-Silicon Si ಕಪ್ಪು-ಬೂದು ಬಣ್ಣದ ಘನ
15 ರಂಜಕ-Phoshphorous P ಬೂದು ಬಣ್ಣದ ಘನ
16 ಸಲ್ಫರ್-Sulphur S ಹಳದಿ ಬಣ್ಣದ ಘನ
17 ಕ್ಲೋರಿನ್-Chlorine Cl ಹಳದಿ ಛಾಯೆಯ ಹಸಿರು ಅನಿಲ
18 ಆರ್ಗಾನ್-Argon Ar ಬಣ್ಣವಿಲ್ಲದ ಲೋಹ
19 ಪೊಟ್ಯಾಶಿಯಮ್-Potassium K ಬಿಳಿ ಲೋಹ
20 ಕ್ಯಾಲ್ಸಿಯಮ್-Calcium Ca ಬಿಳಿ ಲೋಹ
21 ಸ್ಕ್ಯಾಂಡಿಯಮ್-Scandium Sc ಬಿಳಿ ಲೋಹ
22 ಟೈಟೇನಿಯಮ್-Titanium Ti ಬಿಳಿ ಲೋಹ
23 ವನಾಡಿಯಮ್-Vanadium V ಬೂದು ಬಣ್ಣದ ಲೋಹ
24 ಕ್ರೋಮಿಯಮ್-Cromium Cr ಕಿತ್ತಳೆ[permanent dead link] ಬಣ್ಣದ ಲೋಹ
25 ಮ್ಯಾಂಗನೀಸ್-Manganese Mn ಕೆಂಪು ಮಿಶ್ರದ ಬಿಳಿ ಲೋಹ
26 ಕಬ್ಬಿಣ-Iron Fe ತಿಳಿ ಕಂದು ಬಣ್ಣದ ಲೋಹ
27 ಕೋಬಾಲ್ಟ್-Cobalt Co ಕೆಂಪು ಮಿಶ್ರಿತ ಬಿಳಿ ಲೋಹ
28 ನಿಕಲ್-Nickel Ni ಹಸಿರು-ಬಿಳಿ ಲೋಹ
29 ತಾಮ್ರ-Copper Cu ನೀಲಿ ಬಣ್ಣದ ಲೋಹ
30 ಜಿಂಕ್-Zinc Zn ಬಿಳಿ ಲೋಹ
31 ಗ್ಯಾಲಿಯಮ್-Gallium Ga ಬೂದು ಬಣ್ಣದ ಲೋಹ
32 ಜರ್ಮೇನಿಯಮ್-Germanium Ge ಬೂದು ಮಿಶ್ರಿತ ಬಿಳಿ ಲೋಹ
33 ಆರ್ಸೆನಿಕ್-Arsenic As ಉಕ್ಕಿನ ಬಣ್ಣದ ಅನಿಲ
34 ಸೆಲೆನಿಯಮ್-Selenium Se ಬೂದು ಬಣ್ಣದ ಘನ
35 ಬ್ರೋಮಿನ್-Bromine Br ಕೆಂಪು ಮಿಶ್ರಿತ ಕಂದು ಬಣ್ಣದ ದ್ರವ
36 ಕ್ರಿಪ್ಟಾನ್-Krypton Kr ಬಣ್ಣವಿಲ್ಲದ ಅನಿಲ
37 ರುಬಿಡಿಯಮ್-Rubidium Rb ಬಿಳಿ ಲೋಹ
38 ಸ್ಟ್ರಾನ್ಶಿಯಮ್-Strontium Sr ಬಿಳಿ ಲೋಹ
39 ಇಟ್ರಿಯಮ್-Yttrium Y ಉಕ್ಕಿನ ಬಣ್ಣದ ಲೋಹ
40 ಜಿರ್ಕೊನಿಯಮ್-Zirconium Zr ಬಿಳಿ ಬಣ್ಣದ ಲೋಹ
41 ನಿಯೋಬಿಯಮ್-Niobium Nb ಬೂದು ಬಣ್ಣದ ಲೋಹ
42 ಮಾಲಿಬ್ಡಿನಮ್-Molybdenum Mo ಬಿಳಿ ಬಣ್ಣದ ಲೋಹ
43 ಟೆಕ್ನೀಶಿಯಮ್-Technetium Tc ಬೂದು ಬಣ್ಣದ ಲೋಹ
44 ರುಥೇನಿಯಮ್-Ruthenium Ru ನೀಲಿ-ಬಿಳಿ ಬಣ್ಣದ ಲೋಹ
45 ರೋಡಿಯಮ್-Rhodium Rh ನೀಲಿ ಲೋಹ
46 ಪಲ್ಗಾಡಿಯಮ್-Palladium Pd ಬಿಳಿ ಬಣ್ಣದ ಲೋಹ
47 ಬೆಳ್ಳಿ-Silver Ag ಬಿಳಿ ಲೋಹ
48 ಕ್ಯಾಡ್ಮಿಯಮ್-Cadmium Cd ನೀಲಿ ಮಿಶ್ರಿತ ಬಿಳಿ ಲೋಹ
49 ಇಂಡಿಯಮ್-Indium In ನೀಲಿ ಬಣ್ಣದ ಲೋಹ
50 ಟಿನ್-Tin Sn ಬಿಳಿ ಲೋಹ
51 ಆಂಟಿಮೊನಿ-Antimony Sb ಬಿಳಿ ಬಣ್ಣದ ಲೋಹ
52 ಟೆಲ್ಲುರಿಯಮ್-Tellurium Te ಬೂದು ಬಣ್ಣದ ಲೋಹ
53 ಅಯೊಡಿನ್-Iodine I ಬೂದು ಮಿಶ್ರಿತ ಕಪ್ಪು ಘನ
54 ಝೆನಾನ್-Xenon Xe ಬಣ್ಣವಿಲ್ಲದ ಅನಿಲ
55 ಸೀಸಿಯಮ್-Cesium Cs ಲೋಹೀಯ
56 ಬೇರಿಯಮ್-Barium Ba ಬಿಳಿ ಲೋಹ
57 ಲ್ಯಾಂಥಾನಮ್-Lanthanum La ಲೋಹೀಯ
58 ಸೀರಿಯಮ್-Cerium Ce ದಟ್ಟ ಬೂದು ಬಣ್ಣದ ಘನ
59 ಪ್ರೇಸಿಯೊಡೈಮಿಯಮ್-Praseodymium Pr ಉಕ್ಕಿನ ಬೂದು ಬಣ್ಣದ ಲೋಹ
60 ನಿಯೊಡೈಮಿಯಮ್-Neodymium Nd ಹಳದಿ ಮಿಶ್ರಿತ ಬಿಳಿ ಲೋಹ
61 ಪ್ರೊಮೆಥಿಯಮ್-Promethium Pm ಲೋಹ
62 ಸಮಾರಿಯಮ್-Samarium Sm ಬೂದು ಬಣ್ಣದ ಲೋಹ
63 ಯುರೋಪಿಯಮ್-Europium Eu ಉಕ್ಕಿನ ಬೂದು ಬಣ್ಣದ ಲೋಹ
64 ಗ್ಯಾಡೊಲಿನಿಯಮ್-Gadolinium Gd ಬಿಳಿ ಲೋಹ
65 ಟೆರ್ಬಿಯಮ್-Terbium Tb ಬಿಳಿ ಬಣ್ಣದ ಲೋಹ
66 ಡಿಸ್ಪ್ರೋಸಿಯಮ್-Dysprosium Dy ಲೋಹ
67 ಹೊಲ್ಮಿಯಮ್-Holmium Ho ಬಿಳಿ ಬಣ್ಣದ ಲೋಹ
68 ಎರ್ಬಿಯಮ್-Erbium Er ಬೂದು ಬೆಳ್ಳಿ ಬಣ್ಣದ ಲೋಹ
69 ಥುಲಿಯಮ್-Thulium Tm ಲೋಹ
70 ಇಟ್ಟೆರ್ಬಿಯಮ್-Ytterbium Yb ಬಿಳಿ ಬಣ್ಣದ ಲೋಹ
71 ಲ್ಯುಟೇಶಿಯಮ್-Lutetium Lu ಲೋಹ
72 ಹಾಫ್ನಿಯಮ್-Hafnium Hf ಉಕ್ಕಿನ ಬೂದು ಬಣ್ಣದ ಲೋಹ
73 ಟಾಂಟಲಮ್-Tantalum Ta ಬಿಳಿ ಬಣ್ಣದ ಲೋಹ
74 ಟಂಗ್ ಸ್ಟನ್-Tungsten W ಬೂದು ಬಣ್ಣದ ಲೋಹ
75 ರೀನಿಯಮ್-Rhenium Re ಬೂದು ಬಣ್ಣಾದ ಲೋಹ
76 ಆಸ್ಮಿಯಮ್-Osmium Os ಬೂದು-ನೀಲಿ ಬಣ್ಣದ ಲೋಹ
77 ಇರಿಡಿಯಮ್-Iridium Ir ಬಿಳಿ ಬಣ್ಣದ ಲೋಹ
78 ಪ್ಲಾಟಿನಮ್-Platinum Pt ನೀಲಿ-ಬಿಳಿ ಬಣ್ಣದ ಲೋಹ
79 ಚಿನ್ನ-Gold Au ಹೊಳಪಿನ ಹಳದಿ ಬಣ್ಣದ ಲೋಹ
80 ಪಾದರಸ-Mercury Hg ಬಿಳಿ ಬಣ್ಣದ ಲೋಹಿಯ ದ್ರವ
81 ಥಾಲಿಯಮ್-Thallium Ti ನೀಲಿ ಮಿಶ್ರಿತ ಬೂದು ಲೋಹ
82 ಸೀಸ-Lead Pb ಉಕ್ಕಿನ ನೀಲಿ ಬಣ್ಣದ ಲೋಹ
83 ಬಿಸ್ಮತ್-Bismuth Bi ಕೆಂಪು-ಬೆಳ್ಳಿ ಬಣ್ಣದ ಲೋಹ
84 ಪೊಲೊನಿಯಮ್-Polonium Po ಲೋಹ
85 ಆಸ್ಟಟೈನ್-Astatine At ಲೋಹ
86 ರೇಡಾನ್-Radon Rn ಬಣ್ಣವಿಲ್ಲದ ಅನಿಲ
87 ಫ್ರಾನ್ಸಿಯಮ್-Francium Fr ಲೋಹ
88 ರೇಡಿಯಮ್-Radium Ra ಬೆಳ್ಳಿ ಬೂದು ಬಣ್ಣದ ಲೋಹ
89 ಆಕ್ಟಿನಿಯಮ್-Actinium Ac ಲೋಹ
90 ಥೋರಿಯಮ್-Thorium Th ಬೂದು ಬಣ್ಣದ ಲೋಹ
91 ಪ್ರೊಟಾಕ್ಟಿನಿಯಮ್-Protactinium Pa ಬೆಳ್ಳಿ ಬೂದು ಬಣ್ಣದ ಲೋಹ
92 ಯುರೇನಿಯಮ್-Uranium U ನೀಲಿ ಮಿಶ್ರಿತ ಬಿಳಿ ಲೋಹ
93 ನೆಪ್ಚೂನಿಯಮ್-Neptunium Np ಬಿಳಿ ಬಣ್ಣದ ಲೋಹ
94 ಪ್ಲುಟೋನಿಯಮ್-Plutonium Pu ಬಿಳಿ ಬಣ್ಣದ ಲೋಹ
95 ಅಮೇರಿಶಿಯಮ್-Americium Am ಬಿಳಿ ಬಣ್ಣದ ಲೋಹ
96 ಕ್ಯೂರಿಯಮ್-Curium Cm ಬಿಳಿ ಬಣ್ಣದ ಲೋಹ
97 ಬೆರ್ಕೆಲಿಯಮ್-Berkelium Bk ಬಿಳಿ ಬಣ್ಣದ ಲೋಹ
98 ಕ್ಯಾಲಿಫೋರ್ನಿಯಮ್-Calfiornium Cf ಬಿಳಿ ಬಣ್ಣದ ಲೋಹ
99 ಐನ್‌ಸ್ಟೈನಿಯಮ್-Einsteinium Es ಬಿಳಿ ಬಣ್ಣದ ಲೋಹ
100 ಫೆರ್ಮಿಯಮ್-Fermium Fm ಲೋಹ
101 ಮೆಂಡೆಲೀವಿಯಮ್-Mendelevium Md ಲೋಹ
102 ನೊಬೆಲಿಯಮ್-Nobelium No ಲೋಹ
103 ಲಾರೆನ್ಸಿಯಮ್-Lawrencium Lr ಲೋಹ

ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು

ಬದಲಾಯಿಸಿ

ಬ್ರಹ್ಮಾಂಡದಲ್ಲಿನ ಪ್ರತಿ ಮಿಲಿಯನ್ ಕಣಗಳಲ್ಲಿ ಅತಿ ಹೆಚ್ಚು ಕಣಗಳನ್ನು ಹೊಂದಿರುವ ೧೦ ಮೂಲಧಾತುಗಳ ಪಟ್ಟಿ:

ಮೂಲಧಾತು ಮಿಲಿಯನ್ ಕಣಗಳಲ್ಲಿನ ಭಾಗ
ಜಲಜನಕ 739,000
ಸೂರ್ಯಧಾತು (ಹೀಲಿಯಂ) 240,000
ಆಮ್ಲಜನಕ 10,700
ಇಂಗಾಲ 4,600
ಹೊಸಧಾತು(ನಿಯಾನ್) 1,340
ಕಬ್ಬಿಣ 1,090
ಸಾರಜನಕ 970
ಕಿಡಿಗಲ್ಲುಧಾತು (ಸಿಲಿಕಾನ್) 650
ಮಗ್ನಿಸೀಯಧಾತು (ಮ್ಯಗ್ನೀಶಿಯಂ) 580
ಗಂಧಕ 440

ಉಲ್ಲೇಖ

ಬದಲಾಯಿಸಿ
  1. https://en.wikipedia.org/wiki/Chemical_element
  2. https://en.wikipedia.org/wiki/Hydrogen
"https://kn.wikipedia.org/w/index.php?title=ಮೂಲಧಾತು&oldid=1100017" ಇಂದ ಪಡೆಯಲ್ಪಟ್ಟಿದೆ