ಥಾಲಿಯಮ್ ಒಂದು ಲೋಹ ಮೂಲಧಾತು. ಇದು ಬಹಳ ಮೃದುವಾದ ಲೋಹ. ವಿಷಕಾರಿಯಾಗಿರುವುದರಿಂದ ಇದನ್ನು ಮುಂಚೆ ಆರ್ಸೆನಿಕ್ ರೀತಿಯಲ್ಲಿ ಇಲಿ ಪಾಶಾಣವಾಗಿ ಉಪಯೋಗಿಸಲಾಗುತ್ತಿತ್ತು. ಈಗ ಇದನ್ನು ಗಾಜಿನ ಉತ್ಪಾದನೆಯಲ್ಲಿ, ಅರೆಸಂವಾಹಕಗಳಲ್ಲಿ, ಗಾಮ ವಿಕಿರಣವನ್ನು ಮತ್ತು ಬೆಳಕನ್ನು ಪತ್ತೆಹಚ್ಚುವ ಉಪಕರಣಗಳಲ್ಲಿ, ಉಪಯೋಗಿಸಲಾಗುತ್ತದೆ.

ಥಾಲಿಯಮ್

ಈ ಲೋಹವನ್ನು ೧೮೬೧ರಲ್ಲಿ ವಿಲಿಯಮ್ ಕ್ರೂಕ್ಸ್ ಪತ್ತೆಹಚ್ಚಿದನು. ಇದು ವರ್ಣಪಂಕ್ತಿಯಲ್ಲಿ ಹಸಿರು ಗೆರೆಯನ್ನು ಮೂಡಿಸುವುದರಿಂದ ಇದರ ಹೆಸರು ಗ್ರೀಕ್ ಭಾಷೆಯ "ಹಸಿರು ಬಳ್ಳಿ" ಎಂಬ ಅರ್ಥ ಕೊಡುವ "ಥಾಲೋಸ್" ಪದದಿಂದ ಬಂದಿದೆ.

"https://kn.wikipedia.org/w/index.php?title=ಥಾಲಿಯಮ್&oldid=323492" ಇಂದ ಪಡೆಯಲ್ಪಟ್ಟಿದೆ