ಯುರೇನಿಯಮ್
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಯುರೇನಿಯಮ್, U, ೯೨ | ||||||||||||||
ರಾಸಾಯನಿಕ ಸರಣಿ | ಆಕ್ಟಿನೈಡ್ | ||||||||||||||
ಗುಂಪು, ಆವರ್ತ, ಖಂಡ | -, ೭, f | ||||||||||||||
ಸ್ವರೂಪ | ಬೆಳ್ಳಿ ಹೊಳಪಿನ ಬೂದು ಬಣ್ಣ; ಗಾಳಿಗೆ ಒಡ್ಡಿದಾಗ ಕಪ್ಪು ಪದರ ಉಂಟಾಗುತ್ತದೆ | ||||||||||||||
ಅಣುವಿನ ತೂಕ | 238.02891(3) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Rn] 5f3 6d1 7s2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 21, 9, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | solid | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 19.1 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 17.3 g·cm−3 | ||||||||||||||
ಕರಗುವ ತಾಪಮಾನ | 1405.3 K (1132.2 °C, 2070 °ಎಫ್) | ||||||||||||||
ಕುದಿಯುವ ತಾಪಮಾನ | 4404 K (4131 °C, 7468 °F) | ||||||||||||||
ಸಮ್ಮಿಲನದ ಉಷ್ಣಾಂಶ | 9.14 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 417.1 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 27.665 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | orthorhombic | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 3+,4+,5+,6+[೧] (weakly basic oxide) | ||||||||||||||
ವಿದ್ಯುದೃಣತ್ವ | 1.38 (Pauling scale) | ||||||||||||||
ಅಣುವಿನ ತ್ರಿಜ್ಯ | 175 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 186 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | paramagnetic | ||||||||||||||
ವಿದ್ಯುತ್ ರೋಧಶೀಲತೆ | (0 °C) 0.280 µΩ·m | ||||||||||||||
ಉಷ್ಣ ವಾಹಕತೆ | (300 K) 27.5 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 13.9 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (20 °C) 3155 m/s | ||||||||||||||
ಯಂಗ್ ಮಾಪಾಂಕ | 208 GPa | ||||||||||||||
ವಿರೋಧಬಲ ಮಾಪನಾಂಕ | 111 GPa | ||||||||||||||
ಸಗಟು ಮಾಪನಾಂಕ | 100 GPa | ||||||||||||||
ವಿಷ ನಿಷ್ಪತ್ತಿ | 0.23 | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-61-1 | ||||||||||||||
ಉಲ್ಲೇಖನೆಗಳು | |||||||||||||||
ಯುರೇನಿಯಮ್ ಒಂದು ಮೂಲಧಾತು ಲೋಹ. ಇದು ವಿಕಿರಣಶೀಲ ವಸ್ತು. ಪ್ಲುಟೋನಿಯಮ್ನ ನಂತರ ಅತ್ಯಂತ ಭಾರವಾದ ಮೂಲಧಾತು. ಆವರ್ತಕೋಷ್ಟಕದ ಆಕ್ಟಿನೈಡ್ ಶ್ರೇಣಿಯಲ್ಲಿಯ ಲೋಹಧಾತು. ರಾಸಾಯನಿಕ ಪ್ರತೀಕ U. ಪರಮಾಣು ಸಂಖ್ಯೆ 92. ಪರಮಾಣು ತೂಕ 238.03. ಈ ಧಾತು ಬಲುವಿಷ. ವಾಯುವಿನಲ್ಲಿ ಒಮ್ಮೆಲೇ ಹೊತ್ತಿಕೊಳ್ಳುತ್ತದೆ. ಹೆಚ್ಚು ಕಡಿಮೆ ಎಲ್ಲ ಅಲೋಹಗಳೊಂದಿಗೂ ವರ್ತಿಸುತ್ತದೆ. ದ್ರವನಬಿಂದು 11320 ಸೆಲ್ಸಿಯಸ್; ಕುದಿಬಿಂದು 38180 ಸೆಲ್ಸಿಯಸ್.
ಇದನ್ನು ೧೭೮೯ರಲ್ಲಿ ಜರ್ಮನಿಯ ರಸಾಯನ ವಿಜ್ಞಾನಿ ಮಾರ್ಟಿನ್ ಕ್ಲಾಪ್ರೊತ್ (Martin Klaproth) (1743-1817) ಪಿಚ್‌ಬ್ಲೆಂಡ್ ಎಂಬ ಹೆಸರಿನ ಖನಿಜದ ಪ್ರತಿಚಯವೊಂದರಿಂದ, ಖನಿಜ ವಿಶ್ಲೇಷಣೆಯ ಸುಧಾರಿತ ವಿಧಾನಗಳ ಅನ್ವಯದಿಂದ ಯುರೇನಿಯಮ್ಮನ್ನು ಬೇರ್ಪಡಿಸಿದ (1789). ಇದನ್ನು ವಿಜ್ಞಾನಿ ವಿಲಿಯಂ ಹರ್ಷೆಲ್‍ರಿಂದ ೧೭೮೧ ರಲ್ಲಿ ಕಂಡುಹಿಡಿಯಲ್ಪಟ್ಟ ಯುರೇನಸ್ ಗ್ರಹದ ಹೆಸರಿನಲ್ಲಿಯೇ ನಾಮಕರಣ ಮಾಡಿದರು. ಯುರೇನಿಯಮ್ ಅನ್ನು ಪ್ರಥಮವಾಗಿ ಇದರ ಮೂಲ ಅದಿರಿನಿಂದ ೧೮೪೧ರಲ್ಲಿ ಫ್ರಾನ್ಸ್‌ನ ರಸಾಯವಿಜ್ಞಾನಿ ಯೂಜಿನ್ ಪೆಲಿಗಾಟ್ (1811-90) ಎಂಬವರು ಬೇರ್ಪಡಿಸಿದರು. ಇವರು ಯುರೇನಿಯಮ್ ಟೆಟ್ರಕ್ಲೋರೈಡನ್ನು ಪೊಟ್ಯಾಸಿಯಮ್ಮಿನೊಡನೆ ಅಪಕರ್ಷಿಸಿ ಯುರೇನಿಯಮ್ ಲೋಹವನ್ನು ತಯಾರಿಸಿದರು (1842). ಇದಲ್ಲದೆ ಕ್ಲಾಪ್ರೋತ್ ಪಡೆದ ಧಾತು ಅರ್ಧಲೋಹವಾಗಿದ್ದು ಅದು ಯುರೇನಿಯಮ್ ಡೈಆಕ್ಸೈಡ್ ಆಗಿದ್ದುದನ್ನು ನಿರೂಪಿಸಿದ. ಪೆಲಿಗಾಟ್‌ನ ಪ್ರಯೋಗ ಅಪಾಯಕಾರಿಯಾದುದಾಗಿದ್ದರೂ ಯುರೇನಿಯಮ್ಮನ್ನು ಬೇರ್ಪಡಿಸುವಲ್ಲಿ ಆತ ಸಫಲತೆ ಕಂಡುಕೊಂಡ. ಮತ್ತೊಬ್ಬ ಫ್ರೆಂಚ್ ಭೌತವಿಜ್ಞಾನಿ ಎ.ಸಿ. ಬೆಕೆರಲ್ ಎಂಬಾತ ಯುರೇನಿಯಮ್ ಧಾತು ವಿಕಿರಣಪಟುಕ್ಷಯಕ್ಕೆ ಈಡಾಗುತ್ತದೆ ಎಂಬ ಸಂಗತಿಯನ್ನು ಆವಿಷ್ಕರಿಸಿದ (1896). ಜರ್ಮನಿಯ ರಸಾಯನ ವಿಜ್ಞಾನಿಗಳಾದ ಆಟೋ ಹಾನ್ ಮತ್ತು ಎಫ್. ಸ್ಟ್ರಾಸ್‌ಮನ್ ಎಂಬವರಿಂದ ನ್ಯೂಕ್ಲಿಯರ್ ವಿದಳನ ವಿದ್ಯಮಾನ ಮಾನ್ಯತೆ ಪಡೆದುದರಿಂದ (1939) ತೆರೆಮರೆಯ ಧಾತುವೆನಿಸಿದ್ದ ಯುರೇನಿಯಮ್ಮಿಗೆ ಮಹತ್ತ್ವದ ಸ್ಥಾನ ಪ್ರಾಪ್ತಿಯಾಯಿತು.
ನಾಗರಿಕ ವಲಯದಲ್ಲಿ ಯುರೇನಿಯಮ್‍ನ ಮುಖ್ಯ ಬಳಕೆಯೆಂದರೆ ಅಣು ಸ್ಥಾವರಗಳಲ್ಲಿ ಇಂಧನವಾಗಿ. ವಾಣಿಜ್ಯ ಅಣು ಸ್ಥಾವರಗಳು ಸಾಮಾನ್ಯವಾಗಿ ಸುಮಾರು 3% ಯುರೇನಿಯಂ-235 ನ್ನು ಇಂಧನವಾಗಿ ಬಳಸುತ್ತವೆ.
ಕ್ಯಾಂಡು ಮತ್ತು ಮ್ಯಾಗ್ನೊಕ್ಸ್ ವಿನ್ಯಾಸಗಳು ಮಾತ್ರ ಪುಷ್ಟೀಕರಿಸದ ಯುರೇನಿಯಂ ಇಂಧನವನ್ನು ಬಳಸಲು ಸಮರ್ಥವಾಗಿರುವ ವಾಣಿಜ್ಯ ರಿಯಾಕ್ಟರ್‌ಗಳಾಗಿವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೇರಿಕಾ ಎರಡು ಅಣುಬಾಂಬುಗಳನ್ನು ತಯಾರಿಸಿತು.
ಲಭ್ಯತೆ
ಬದಲಾಯಿಸಿಯುರೇನಿಮ್ ಧಾತು ಪ್ರಕೃತಿಯಲ್ಲಿ ಹೇರಳವಾಗಿ ಪಿಚ್‌ಬ್ಲೆಂಡ್ ಅಥವಾ ಯುರಾನಿನೈಟ್ ಎಂಬ ಅದುರಿನಲ್ಲಿ ಶೇಕಡಾ 75-80 ಭಾಗ U2O3 ರೂಪದಲ್ಲಿ ಅಥವಾ [UO2.2UO3 ಯುರೇನಿಯಮ್ ಯುರೇನೇಟ್ U.(UO4)2] ರೂಪದಲ್ಲಿ ಆಸ್ಟ್ರಿಯ, ಬೊಹೀಮಿಯ, ನಾರ್ವೆ, ಹಂಗರಿ ಮತ್ತು ಪೂರ್ವ ಆಫ್ರಿಕದಲ್ಲೂ, ಕಾರ್ನೊಟೈಟ್, ಪೊಟ್ಯಾಸಿಯಮ್ ಯುರೇನೈಟ್, ವ್ಯಾನೆಕೇಟ್ ಎಂಬ ಅದುರಿನಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಆಸ್ಟ್ರೇಲಿಯಗಳಲ್ಲೂ ದೊರೆಯುತ್ತದೆ. ಭಾರತದಲ್ಲಿ ಸಿಂಘಭೂಮ್‌ನ ಲೋಪ್ಸೊ ಬೆಟ್ಟಪ್ರದೇಶದಲ್ಲಿ ತಾಮ್ರದ ಯುರೇನೈಟ್ ರೂಪದಲ್ಲಿ (1860) ಮತ್ತು ಪಿಚ್‌ಬ್ಲೆಂಡ್ ಅದುರು ಗಯಾ ಜಿಲ್ಲೆಯಲ್ಲಿ (1901) ಇರುವುದು ಕಂಡುಬಂದಿತು. ಇದೇ ಜಿಲ್ಲೆಯ ಪಿಚಲಿ ಪ್ರದೇಶದಲ್ಲಿ ಕೂಡ ಯುರೇನಿಯಮ್ ಲೋಹದ ಅದುರು ಪತ್ತೆಯಾಗಿದೆ. ಕೇರಳದ ಪಶ್ಚಿಮ ತೀರದಲ್ಲಿಯ ಮೋನಜ಼ೈಟ್ ಅದುರಿನಲ್ಲೂ ಶೇಕಡಾ 0.5 ರಿಂದ 2 ರಷ್ಟು ಯುರೇನಿಯಮ್ ಲೋಹ ಇದೆ. ತೊಗಟೆಯಲ್ಲಿ ಸಾಕಷ್ಟು ಯುರೇನಿಯಮ್ ಸಾಂದ್ರಗೊಂಡಿರುವುದಾಗಿ ಹೇಳಲಾಗಿದೆ. ಸರಾಸರಿ ಸಾಂದ್ರತೆ ಪ್ರತಿಯೊಂದು ದಶಲಕ್ಷದಲ್ಲಿ ನಾಲ್ಕು ಭಾಗಗಳು. ಅಲ್ಪ ಸಿಲಿಕಾಂಶ ಶಿಲೆಗಳಲ್ಲಿ (ಬಸಾಲ್ಟುಗಳು) ಪ್ರತಿಯೊಂದು ದಶಲಕ್ಷದಲ್ಲಿ 1 ಭಾಗಕ್ಕಿಂತಲೂ ಕಡಿಮೆ ಯುರೇನಿಯಮ್ ಇದೆ. ಆಮ್ಲೀಯ ಶಿಲೆಗಳಲ್ಲಿ (ಗ್ರ್ಯಾನೈಟುಗಳು) ಪ್ರತಿಯೊಂದು ದಶಲಕ್ಷದಲ್ಲಿ 8 ಭಾಗ ಅಥವಾ ಇನ್ನೂ ಹೆಚ್ಚು ಯುರೇನಿಯಮ್ ಇದೆ. ಜಲಜಶಿಲೆಗಳಲ್ಲಿ 2 ಭಾಗಗಳು; ಕಡಲನೀರಿನಲ್ಲಿ 0.001 ಭಾಗದಷ್ಟು, ಭೂತೊಗಟೆಯಿಂದ ಸುಮಾರು 22 ಕಿಮೀ. ಆಳದವರೆಗೆ 1014 ಟನ್ನುಗಳಷ್ಟು ಯುರೇನಿಯಮ್ ಇದೆ ಎಂದೂ ಸಾಗರಗಳಲ್ಲಿ 1010 ಟನ್ನುಗಳಿರಬಹುದು ಎಂದೂ ಅಂದಾಜು ಮಾಡಲಾಗಿದೆ.
ಯುರೇನಿಯಮ್ ಯುಕ್ತವಾದ ಅನೇಕ ಸಹಸ್ರ ಖನಿಜಗಳನ್ನು ಗುರುತಿಸಿದೆಯಾದರೂ ಇವುಗಳ ಪೈಕಿ ಕೆಲವೊಂದು ಮಾತ್ರ ವಾಣಿಜ್ಯ ಮಹತ್ತ್ವ ಪಡೆದಿವೆ. ಆಧಿಕ ಪ್ರಾಮುಖ್ಯದ ಕೆಲವೊಂದು ಖನಿಜಗಳ ಬಗ್ಗೆ ಮುಂದಿನ ಕೋಷ್ಟಕದಲ್ಲಿ ವಿವರಣೆ ಇದೆ;
ಖನಿಜ | ರಾಸಾಯನಿಕ ಸಂಯೋಜನೆ | ಬಣ್ಣ | ಲಭ್ಯತೆ |
---|---|---|---|
ಯುರಾನಿಟೈಟ್ | UO2 (ಥೋರಿಯಮ್ | ಕಪ್ಪು | ಆರೆಂಡಾಲ್, ನಾರ್ವೆ |
ಪಿಚ್‍ಬ್ಲೆಂಡ್ | UO2 +x | ಕಪ್ಪು | ಕಾಂಗೋ ಗಣರಾಜ್ಯ |
ಯೂಕ್ಸೆನೈಟ್ ಪಾಲಿಕ್ರೇಸ್ | (Y, Ca, Ce, U, Th) (Nb, Ta, Ti) 2 O6 | ಕಂದು | ನಿಷಿಸಿಂಗ್, ಆಂಟೇರಿಯೋ |
ಸಾಮರ್ಸ್‌ಕೈಟ್ | (Y, Ca, Fe, U, Th) (Nb, Ta2 ) O6 | ಕಪ್ಪು | ಮಿಚೆಲ್ ಕೊ. ನಾರ್ತ್
ಕ್ಯಾರೊಲೀನ |
ಡೇವಿಡೈಟ್ | (Fe, Ce, U) (Ti, Fe, V, Cr)3 (O, OH) 7 | ಕಪ್ಪು | ರಮ್ ಜಂಗಲ್, ಆಸ್ಟ್ರೇಲಿಯ |
ಕಾಫಿನೈಟ್ | USiO4 | ಕಪ್ಪು | ಕೊಲರಾಡೋ ಪ್ರಸ್ಥಭೂಮಿ |
ಕಾರ್ನೊಟೈಟ್ | K2 (UO2,) 2 (VO4 ) 2 x H2 O | ಹಳದಿ | ಕೊಲರಾಡೋ ಪ್ರಸ್ಥಭೂಮಿ |
ಟ್ಯುಯಾಮ್ಯುನೈಟ್ | Ca (UO2 ) 2 (VO4 ) 2, x H2 O | ಹಳದಿ | ಫೆರಾಘಾನ್, ತುರ್ಕಿಸ್ತಾನ |
ಆಟುನೈಟ್ | Ca (UO2 ) 2 (PO4 ) 2, x H2 O | ಹಸುರುಮಿಶ್ರಿತ ಹಳದಿ | ಆಟುನ್, ಫ್ರಾನ್ಸ್ |
ಟಾರ್ಬರ್‌ನೈಟ್ | Ca (UO2 ) 2 (PO4 ) 2, x H2 O | ಹಸುರು | ಎರ್‌ಜ಼ಿಬಿರ್ಗೇ, ಸ್ಯಾಕ್ಸನಿ |
ಯೂರಾನೊಫೇನ್ | Ca (UO2 ) 2 (SiO4 ) 2, x H2 O | ಹಸುರುಮಿಶ್ರಿತ ಹಳದಿ | ಕಾಂಗೊ ಗಣರಾಜ್ಯ |
ತಯಾರಿಕೆ
ಬದಲಾಯಿಸಿಪಿಚ್ಬ್ಲೆಂಡ್, ಕಾರ್ನೊಟೈಟ್ ಮುಂತಾದ ಯುರೇನಿಯಮ್ ಸಮೃದ್ಧ ಅದುರುಗಳನ್ನು ಪುಡಿಮಾಡಿ, ನೈಟ್ರಿಕ್ ಆಮ್ಲದಲ್ಲಿ ವಿಲೀನಿಸಿ, ಆಮ್ಲದ್ರಾವಣವನ್ನು ಇಂಗಿಸುತ್ತಾರೆ.[೨] ಅನಂತರ ನೀರು ಸೇರಿಸುವುದರಿಂದ ಕಬ್ಬಿಣ, ಸೀಸ ಮುಂತಾದ ಲೋಹಸಂಯುಕ್ತಗಳು ವಿಲೀನವಾಗದೆ ಹಾಗೆಯೇ ಉಳಿಯುತ್ತವೆ. ಯುರೇನಿಯಮ್ ನೈಟ್ರೇಟ್ ನೀರಿನಲ್ಲಿ ವಿಲೀನವಾಗುತ್ತದೆ. ಇದನ್ನು ಶೋಧಿಸಿ ಬೇರ್ಪಡಿಸುತ್ತಾರೆ. ಪಿಚ್‌ಬ್ಲೆಂಡ್ ಹೇರಳವಾಗಿ ದೊರೆಯುವ ಆಸ್ಟ್ರಿಯದಲ್ಲಿ ಪುಡಿ ಅದುರನ್ನು ಸುಣ್ಣದೊಡನೆ ಸೇರಿಸಿ ಆಕ್ಸಿಜನ್ನಿನ ವಾತಾವರಣದಲ್ಲಿ ಕಾಸುತ್ತಾರೆ.
2U3O8 + 6CaO + O2 → 6CaUO4
ಇದರಿಂದ ಕ್ಯಾಲ್ಸಿಯಂ ಯುರೇನೇಟ್ ಲಭಿಸುತ್ತದೆ. ವೆನೇಡಿಯಮ್, ಟಂಗ್‍ಸ್ಟನ್, ಮಾಲಿಬ್ಡಿನಮ್‌ಗಳೂ ಕ್ಯಾಲ್ಸಿಯಮ್ ಲವಣಗಳಾಗಿ ಮಾರ್ಪಡುತ್ತವೆ. ಇವನ್ನು ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಿಸಿ ಫೆರಿಕ್ ಕ್ಲೋರೈಡನ್ನು ಸೇರಿಸಿ ಸೋಡಿಯಮ್ ಕಾರ್ಬೊನೆಟ್ ದ್ರಾವಣದಿಂದ ತಟಸ್ಥಗೊಳಿಸಿದಾಗ ಫೆರಿಕ್ ವ್ಯಾನೆಡೇಟ್ ಬೇರ್ಪಡುತ್ತದೆ. ಇದನ್ನು ಇಂಗಿಸಿ ಅನಂತರ ಆಲ್ಕೊಹಾಲ್‌ನ್ನು ಮಿಶ್ರಮಾಡಿ ಅಮೋನಿಯಮ್ ಹೈಡ್ರಾಕ್ಸೈಡ್ ದ್ರಾವಣ ಸೇರಿಸುತ್ತಾರೆ. ಇದರಿಂದ ಅಮೋನಿಯಮ್ ಡೈಯುರೇನೇಟ್ ಒತ್ತರಗೊಳ್ಳುತ್ತದೆ. ಇದನ್ನು ಬೇರ್ಪಡಿಸಿ ಒಣಗಿಸಿದಾಗ ಲೆಮನ್ ಎಲ್ಲೊ ಯುರೇನಿಯಮ್ ಸಿದ್ಧಗೊಳ್ಳುತ್ತದೆ.
ಪಿಚ್‌ಬ್ಲೆಂಡನ್ನು ಸೋಡಿಯಮ್ ಕಾರ್ಬೊನೇಟಿನೊಡನೆ ಕಾಸಿ, ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಿಸಿ, ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಿಂದ ತಟಸ್ಥಗೊಳಿಸಿದಾಗ ಸೋಡಿಯಮ್ ಡೈಯುರೇನೇಟ್ (Na2U2O7·6H2O) ಉಂಟಾಗುತ್ತದೆ. ಇದು ಯುರೇನಿಯಮ್ ಎಲ್ಲೊ ಆಕ್ಸೈಡ್ ಎಂಬ ಹೆಸರಿನಿಂದ ಮಾರಾಟಕ್ಕೆ ಬಿಡುಗಡೆಯಾಗುತ್ತದೆ. ಈ ವಿಧಾನದಲ್ಲಿ ಅನೇಕ ಮಾರ್ಪಾಟುಗಳನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಅಧಿಕ ಪ್ರಮಾಣದಲ್ಲಿ ಯುರೇನಿಯಮ್ ಸಂಯುಕ್ತಗಳನ್ನು ಪಡೆಯುವುದು ಸಾಧ್ಯವಾಗಿದೆ.
ಯುರೇನಿಯಮ್ ಲೋಹವನ್ನು ಅಲ್ಪ ಪ್ರಮಾಣದಲ್ಲಿ ಯುರೇನಿಯಮ್ ಇರುವ ಗ್ರಾನೈಟ್, ಕಲ್ಲಿದ್ದಲು, ಮೋನಜ಼ೈಟ್ ಮರಳು ಮತ್ತು ಸಮುದ್ರದ ನೀರು ಇವುಗಳಿಂದ ಉತ್ಪಾದಿಸಲಾಗುತ್ತಿದೆ. ಇವನ್ನು ಸಾಂದ್ರತಾಪೂರ್ಣ (ಪ್ರಿಕಾನ್ಸೆಂಟ್ರೇಷನ್) ವಿಧಾನಗಳಿಂದಲೂ ರಾಸಾಯನಿಕ ಸಾಂದ್ರತಾ ಹಂತದಲ್ಲಿ ಅಮೋನಿಯಮ್ ಕಾರ್ಬೋನೇಟ್ ಮತ್ತು ವಾಯು ಒತ್ತಡಕ್ಕೆ ಈಡುಮಾಡಿ, ಅಯಾನ್ ವಿನಿಮಯ, ದ್ರಾವಕ ಬೇರ್ಪಡೆ ಇಲ್ಲದೆ ವಿದ್ಯುದ್ವಿಶ್ಲೇಷಣೆ ಒತ್ತರ ವಿಧಾನಗಳಿಂದಲೂ ಯುರೇನಿಯಮ್ ಸಂಯುಕ್ತಗಳನ್ನು ಪಡೆಯಲಾಗುತ್ತಿದೆ.
ಅಯಾನ್ ವಿನಿಮಯ ವಿಧಾನದಲ್ಲಿ ರೆಸಿನ್ ಇನ್‌ಪಲ್ಟ್ (RIP) ಮತ್ತು ಆಧುನಿಕವಾದ ಸಂತತ ಕೌಂಟರ್ ಕರೆಂಟ್ ಫ್ಲೂಯಿಡೈಸ್ಡ್ ಬೆಕ್ ಆಪರೇಷನ್ ಪ್ರಕ್ರಮಗಳು ಮುಖ್ಯ. ಅಯಾನ್ ವಿನಿಮಯ ವಿಧಾನಕ್ಕಿಂತಲೂ ಸರಳ ಮತ್ತು ಬಲು ಪರಿಣಾಮಕಾರಿಯಾದ ವಿಧಾನವೆಂದರೆ ದ್ರಾವಕ ಬೇರ್ಪಡೆ ವಿಧಾನ (ಸಾಲ್ವೆಂಟ್ ಎಕ್ಸ್‌ಟ್ರಾಕ್ಷನ್). ಈ ವಿಧಾನದಲ್ಲೂ ಅಯಾನ್ ವಿನಿಮಯ ಕಾರ್ಯವೇ ದ್ರವ ವಾತಾವರಣದಲ್ಲಿ ನಡೆಯುತ್ತದೆ. ಯುರೇನಿಯಮ್ ಸಂಯುಕ್ತಗಳನ್ನು ವಿದ್ಯುತ್ ರಾಸಾಯನಿಕ ಒತ್ತರ ವಿಧಾನಗಳಿಂದಲೂ ಬೇರ್ಪಡಿಸುವುದಿದೆ. ಈ ವಿಧಾನದಲ್ಲಿ ಪರ್ನ್ಸೆಲೆಕ್ಟಿವ್ ಕೋಶಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ವಿದ್ಯುತ್ತನ್ನು ಹಾಯಿಸಿದಾಗ ಯುರೇನಿಯಮ್ ಸಂಯುಕ್ತ ಅಪಕರ್ಷಣೆಗೊಂಡು ಯುರೇನಿಯಮ್ ಡೈಆಕ್ಸೈಡ್ ಅಥವಾ ಸೋಡಿಯಮ್ ಡೈಯುರೇನೇಟ್ ಆಗಿ ಒತ್ತರಿಸುತ್ತದೆ.
ಬಿಟ್ಯುಮಿನಸ್ ಕಲ್ಲಿದ್ದಲು ಮತ್ತು ಲಿಗ್ನೈಟ್ ಕಲ್ಲಿದ್ದಲುಗಳನ್ನು ನೈಟ್ರಿಕ್ ಅಥವಾ ಸಲ್ಫ್ಯೂರಿಕ್ ಆಮ್ಲಗಳಲ್ಲಿ ವಿಲೀನಿಸಿ ಅಯಾನ್ ವಿನಿಮಯ ಇಲ್ಲವೇ ದ್ರಾವಕ ಬೇರ್ಪಡಿಕೆ ವಿಧಾನದಿಂದಲೂ ಯುರೇನಿಯಮ್ ಸಂಯುಕ್ತ ಪಡೆಯಬಹುದು. ಗ್ರ್ಯಾನೈಟ್ ಮತ್ತು ಫಾಸ್‌ಫೇಟ್ ಅದುರುಗಳಿಂದಲೂ ಈ ಸಂಯುಕ್ತಗಳು ಒದಗುತ್ತವೆ. ಸಮುದ್ರದ ನೀರಿನಲ್ಲಿ ಯುರೇನಿಯಮ್ ಯುರೇನೈಟ್ ಕಾರ್ಬನೇಟ್ ರೂಪದಲ್ಲಿರುತ್ತದೆ. ಇದನ್ನು ಕೆಮಿಸಾರ್ಪ್ಷನ್ ಮತ್ತು ಅಡ್ಸಾರ್ಪ್ಷನ್ ವಿಧಾನಗಳಿಂದ ಬೇರ್ಪಡಿಸುತ್ತಾರೆ. ಕೆಲವು ಲೋಹಲವಣಗಳ ವಿಶ್ರಣವನ್ನು ಮತ್ತು ಸಾರ ಸಮುದ್ರದ ನೀರನ್ನು 8.4-8.7 PH ವಾತಾವರಣದಲ್ಲಿಟ್ಟಾಗ ಲೋಹದ ಹೈಡ್ರಾಕ್ಸೈಡುಗಳು ಉತ್ಪತ್ತಿಗೊಂಡು ಯುರೇನಿಯಮ್ ಸಂಯುಕ್ತಗಳು ಹೀರಲ್ಪಟ್ಟು ಒತ್ತರಿಸುತ್ತವೆ. ಈ ಒತ್ತರವನ್ನು ಬೇರ್ಪಡಿಸಿ ನೀರಿನ ಅಂಶವನ್ನು ತೆಗೆದು ಸಲ್ಫ್ಯೂರಿಕ್ ಆಮ್ಲದಲ್ಲಿ ಲೀನಗೊಳಿಸಿದಾಗ ಯುರೇನಿಯಮ್ ಸಂಯುಕ್ತಗಳು ಬೇರೆಯಾಗುತ್ತವೆ. ಈ ವಿಧಾನ ಈಗ ರಷ್ಯದಲ್ಲಿ ಬಳಕೆಯಲ್ಲಿದೆ.
ಶುದ್ಧೀಕರಣ
ಬದಲಾಯಿಸಿಪರಮಾಣು ಶಕ್ತಿಯ ಉತ್ಪಾದನೆಯಲ್ಲಿ ಬಳಸುವ ಯುರೇನಿಯಮ್ ಲೋಹ ಬಲು ಶುದ್ಧರೂಪದಲ್ಲಿ ಇರಬೇಕಾದ ಕಾರಣ ವಿವಿಧ ವಿಧಾನಗಳ ರೀತ್ಯ ತಯಾರಿಸಿದ ಯುರೇನಿಯಮ್ ಸಂಯುಕ್ತಗಳನ್ನು ಯುರೆನೈಟ್ ನೈಟ್ರೇಟ್ ಆಗಿ ಪರಿವರ್ತಿಸಿ, ಅನಂತರ ಈ ನೈಟ್ರೇಟನ್ನು ಆರ್ಗ್ಯಾನಿಕ್ ದ್ರವಗಳಿಂದ ಶುದ್ಧೀಕರಿಸುವುದು ವಾಡಿಕೆ. ಶುದ್ಧಗೊಂಡ ನೈಟ್ರೇಟಿನಿಂದ ಆಕ್ಸೈಡನ್ನು ಪಡೆದು ಅನಂತರ ಇದನ್ನು ಕ್ಯಾಲ್ಸಿಯಮ್ ಇಲ್ಲವೆ ಮೆಗ್ನೀಷಿಯಮ್ ಲೋಹದಿಂದ ಅಪಕರ್ಷಿಸಿ, ಶುದ್ಧ ಲೋಹವನ್ನು ಪಡೆಯಲಾಗುವುದು. ಆಕ್ಸೈಡ್ ವಿದ್ಯುದ್ವಿಶ್ಲೇಷಣ ವಿಧಾನದಲ್ಲಿ ಅಭಿವರ್ಧನೆಗಳು ಏರ್ಪಟ್ಟು, ವಿಲೀನವಾದ ಮೆಗ್ನಿಷಿಯಮ್ ಫ್ಲೂರೈಡ್ ಮತ್ತು ಬೇರಿಯಮ್ ಫ್ಲೂರೈಡ್ ಮಿಶ್ರಣದಲ್ಲಿ ಸೇರಿಸಿ, ವಿದ್ಯುದ್ವಿಶ್ಲೇಷಣಕ್ಕೆ ಒಳಪಡಿಸಿದಾಗ ಬಹಳಷ್ಟು ಶುದ್ಧಲೋಹ ಪಡೆಯುವುದು ಸಾಧ್ಯವಾಗಿದೆ.
ಗುಣಗಳು
ಬದಲಾಯಿಸಿಶುದ್ಧ ಯುರೇನಿಯಮ್ ಲೋಹ ಬೆಳ್ಳಗೆ ಹೊಳೆಯುವ ವಸ್ತು, ಅಶುದ್ಧ ಲೋಹದ ಬಣ್ಣ ಮಿಶ್ರಿತ ಬಿಳಿ. ಇದು ಉಕ್ಕಿಗಿಂತಲೂ ಮೃದು. ಇಂಗಾಲದೊಡನೆ ಮಿಶ್ರಣಗೊಂಡಾಗ ಗಡಸಾಗುತ್ತದೆ. ಯುರೇನಿಯಮ್ ಪುಡಿ ವಾಯು ಸಂಪರ್ಕದಲ್ಲಿ 1600 ಸೆ. ನಲ್ಲೂ, ಕ್ಲೋರಿನಿನೊಡನೆ 1500 ಸೆ. ನಲ್ಲೂ, ಫ್ಲೂರಿನಿನೊಡನೆ 20-250 ಸೆ. ನಲ್ಲೂ ಉರಿದು ಅವುಗಳ ತತ್ಸಂಬಂಧಿ ಸಂಯುಕ್ತಗಳನ್ನು ನೀಡುತ್ತದೆ. ನೈಟ್ರೊಜನ್, ಸಲ್ಫರ್, ಅಯೋಡೀನುಗಳೊಡನೆ ಸ್ವಲ್ಪ ಹೆಚ್ಚಿನ ಉಷ್ಣತೆಯಲ್ಲಿ ಮಿಲನವಾಗುತ್ತದೆ. ಯುರೇನಿಯಮ್ ನೀರನ್ನು ವಿಭಜಿಸುತ್ತದೆ. ಅಮೋನಿಯದೊಂದಿಗೆ ವರ್ತಿಸಿದಾಗ, ನೈಟ್ರೊಜನ್ ಬಿಡುಗಡೆಯಾಗುವುದು. ಸಾರರಿಕ್ತ ಆಮ್ಲಗಳೊಡನೆ ವರ್ತಿಸಿ ಹೈಡ್ರೊಜನ್ನನ್ನು ನೀಡುತ್ತದೆ. ತಾಮ್ರ, ಪಾದರಸ ಮತ್ತು ಬೆಳ್ಳಿ ಮುಂತಾದ ಲೋಹಗಳನ್ನು ಅವುಗಳ ಲವಣದ್ರಾವಣಗಳಿಂದ ಬಿಡುಗಡೆ ಮಾಡುತ್ತದೆ. ಯುರೇನಿಯಮ್ ಲೋಹದ ಯುರೇನಿಯಮ್ ಪರಮಾಣು ಯಾವುದೇ ಇತರ ವಸ್ತುವಿನ ಅಥವಾ ಪರಿಸ್ಥಿತಿಯ ಸಹಾಯವಿಲ್ಲದೆಯೂ ಸಂತತವಾಗಿ ವಿದಳನಗೊಂಡು ಆಲ್ಫ, ಬೀಟ ಮತ್ತು ಗ್ಯಾಮ ಕಿರಣಗಳನ್ನು ಹೊರಸೂಸುತ್ತದೆ. ಈ ಪ್ರಕ್ರಿಯೆಯಲ್ಲಿ ಬೇರೆ ಬೇರೆ ವಸ್ತುವಿನ ಪರಮಾಣುಗಳು ಉತ್ಪತ್ತಿಯಾಗಿ ಅವು ಕೂಡ ವಿಕಿರಣಪಟು ವಸ್ತುಗಳಾಗಿ ಮಾರ್ಪಟ್ಟು ಅಂತಿಮವಾಗಿ ಸೀಸವಾಗಿ ಮಾರ್ಪಡುತ್ತದೆ. ಬೆಳಕನ್ನು ಹೊರಸೂಸಿ ಬೆಳಕು ಉತ್ಸರ್ಜನೆಗೊಳ್ಳುತ್ತದೆ. ಇಂಥ ವಸ್ತುಗಳು ಬೆಳಕನ್ನು ಹೊರಸೂಸಿ ರಾತ್ರಿಯ ವೇಳೆ ಮಿನುಗುತ್ತವೆ.
ಯುರೇನಿಯಮ್ ಬಲು ಸಾಂದ್ರ ಲೋಹ.[೩] ಅಧಿಕ ವೈದ್ಯುತಧನ (ಎಲೆಕ್ಟ್ರೊ ಪಾಸಿಟಿವ್) ಗುಣ ಹೊಂದಿರುವಂಥದ್ದು. ಬಲು ಬೇಗ ವರ್ತನೆಗೆ ಈಡಾಗುವಂಥದ್ದು ಕೂಡ. ಇದನ್ನು ತೆಳು ತಂತಿಯಾಗಿ ಎಳೆಯಬಹುದು. ಇಲ್ಲವೆ ನವುರು ಹಾಳೆಯಾಗಿ ಬಡಿಯಬಹುದು. ಇದರ ವಿದ್ಯುದ್ವಾಹಕತೆ ತೀರ ಕಡಿಮೆ.[೪][೫] ಲೋಹ ಮೂರು ಸ್ಫಟಿಕೀಯ ಪ್ರರೂಪಗಳಲ್ಲಿ ಇರುತ್ತದೆ.[೬] α - ಯುರೇನಿಮ್ (25-6680ಸೆ.) ಇದು ಆರ್ಥೊರಾಂಬಿಕ್ ವರ್ಗಕ್ಕೆ ಸೇರಿದ್ದು;[೭] β - ಯುರೇನಿಯಮ್ (668-7740ಸೆ.) ಇದು ಟೆಟ್ರಾಗೊನಲ್ ರಚನೆ ಹೊಂದಿದೆ. γ - ಯುರೇನಿಯಮ್ (774-11320ಸೆ.) ಇದು ಕಾಯಕೇಂದ್ರೀಯ (ಬಾಡಿ-ಸೆಂಟರ್ಡ್) ಘನ, β ಪ್ರರೂಪದ ಲೋಹವನ್ನು ಕೊಠಡಿಯುಷ್ಣತೆಯಲ್ಲಿ ಅಲ್ಪ ಪ್ರಮಾಣ ಕ್ರೋಮಿಯಮ್ಮನ್ನು ಸೇರಿಸುವುದರಿಂದ γ ಪ್ರರೂಪದ ಲೋಹವನ್ನು ಅದೇ ಉಷ್ಣತೆಯಲ್ಲಿ ಮಾಲಿಬ್ಡಿನಮ್ಮನ್ನು ಸೇರಿಸುವುದರಿಂದಲೂ ಸ್ಥಿರಗೊಳಿಸಬಹುದು.
ಇದಕ್ಕೆ ಮೂರು ನೈಸರ್ಗಿಕ ಸಮಸ್ಥಾನಿ (isotope) ಗಳು ಇವೆ. ಇವುಗಳೆಂದರೆ 234U (0.0057%), 235U (02.7204%), ಮತ್ತು 238U (99.2739%). ಇದರ ಒಂದು ಸಮಸ್ಥಾನಿ ಯುರೇನಿಯಮ್-೨೩೫ ಸುಲಭವಾಗಿ ವಿದಳನ ಕ್ರಿಯೆಗೆ ಒಳಗಾಗುವುದರಿಂದ ಪ್ರಪಂಚದಾದ್ಯಂತ ಅಣುವಿದ್ಯುತ್[೮] ಹಾಗೂ ಅಣುಬಾಂಬುಗಳ ತಯಾರಿಕೆಯಲ್ಲಿ ಮುಖ್ಯ ಕಚ್ಚಾವಸ್ತುವಾಗಿದೆ. ಇದರಿಂದ ಪರಮಾಣುಗಳ ಶಕ್ತಿ ಬಿಡುಗಡೆ ಹೊಂದುತ್ತದೆ. 235U ಪರಮಾಣುವಿಗೆ ಮಂದವೇಗದ ಶಕ್ತಿಯ ನ್ಯೂಟ್ರಾನುಗಳು ಢಿಕ್ಕಿ ಹೊಡೆದಾಗ, ಪರಮಾಣು ವಿಭಜನೆಹೊಂದಿ ಅಪಾರ ಶಕ್ತಿಯನ್ನು ಬಲು ಉಪಯುಕ್ತವಾದ ರೇಡಿಯೊ ಐಸೊಟೋಪುಗಳನ್ನು ನೀಡುತ್ತದೆ; ಇದರ ಜೊತೆಗೆ ನ್ಯೂಟ್ರಾನುಗಳೂ ಉತ್ಪತ್ತಿಯಾಗುತ್ತವೆ. ಇವು ಇತರ ಯುರೇನಿಯಮ್ ಪರಮಾಣುಗಳಿಗೆ ಢಿಕ್ಕಿ ಹೊಡೆದು ಈ ಕ್ರಿಯೆ ಸಂತತವಾಗಿ, ಸರಪಳಿಯೋಪಾದಿಯಲ್ಲಿ ಮತ್ತು ಸ್ವಾವಲಂಬಿಯಾಗಿ ಮುಂದುವರೆಯುತ್ತದೆ. ಇದೇ ಯುರೇನಿಯಮ್ ವಿದಳನ. 238U ಪರಮಾಣು ಶಕ್ತಿಯುತವಾಗಿರುವ ನ್ಯೂಟ್ರಾನುಗಳೊಡನೆ ವರ್ತಿಸಿ ಮತ್ತೊಂದು ವಿದಳನಶೀಲ (ಫಿಷನ್‌ಬಲ್) ವಸ್ತು ಪ್ಲುಟೋನಿಯಮ್ ಉತ್ಪತ್ತಿಯಾಗುತ್ತದೆ.
β ವಿಕಿರಣ β β ವಿಕಿರಣ ವಿಕಿರಣ
ಯುರೇನಿಯಮ್ ರಿಯಾಕ್ಟರುಗಳು ಮತ್ತು ಬಾಂಬುಗಳಲ್ಲಿ ನಡೆಯುವುದು ಇದೇ ಪ್ರತಿಕ್ರಿಯೆ. ಪರಮಾಣು ಬಾಂಬಿನಲ್ಲಿ ಈ ಶಕ್ತಿಯನ್ನು ನಿಯಂತ್ರಿಸಲಾಗುವುದಿಲ್ಲವಾದರೂ ಪರಮಾಣು ರಿಯಾಕ್ಟರುಗಳಲ್ಲಿ ನಿಯಂತ್ರಿಸಬಹುದು. ಈ ಶಕ್ತಿಯಿಂದ ಬಲು ಉಪಯುಕ್ತವೆನಿಸಿದ ವಿದ್ಯುತ್ತನ್ನು ಪಡೆಯುವುದಿದೆ. ಹದಿನೈದು ಸಾವಿರ ಟನ್ ತೂಕದ ಕಲ್ಲಿದ್ದಲು[೯] ಇಲ್ಲವೆ ಇನ್ನೂರು ಸಾವಿರ ಗ್ಯಾಲನ್ ಗಾತ್ರದ ಎಣ್ಣೆಯಿಂದ ಲಭಿಸುವ ಶಕ್ತಿಯನ್ನು 0.5 ಕೆಜಿ ತೂಕದ 235 ಯುರೇನಿಯಮ್ ಅಥವಾ ಪ್ಲೂಟೋನಿಯಮ್ಮಿನಿಂದ ಪಡೆಯಬಹುದು. ಯುರೇನಿಯಮ್ ಲೋಹವನ್ನು ಮುಖ್ಯವಾಗಿ ವಿದ್ಯುತ್ತನ್ನು ಪಡೆಯಲು, ಯಂತ್ರಗಳನ್ನು ನಡೆಸಲು ಬಳಸುವುದಿದೆ.
ಯುರೇನಿಯಮ್ ಸಂಯುಕ್ತಗಳು
ಬದಲಾಯಿಸಿಯುರೇನಿಯಮ್ ಲೋಹ 2ರಿಂದ 6 ಮತ್ತು 8 ಸಂಯೋಗಸಾಮರ್ಥ್ಯ (ವೇಲನ್ಸಿ) ಹೊಂದಿದೆ. ಆದ್ದರಿಂದ ವಿವಿಧ ಬಗೆಯ ಸಂಯುಕ್ತಗಳು ನೀಡುವುದು ಇದಕ್ಕೆ ಸಾಧ್ಯವಾಗಿದೆ. ಮುಖ್ಯವಾಗಿ ನಾಲ್ಕು ಸಂಯೋಗ ಸಾಮರ್ಥ್ಯದ ಯುರೇನಿಯಮ್ ಸಂಯುಕ್ತಗಳನ್ನೂ ಅದರ ಯುರೇನೇಟ್‌ಗಳನ್ನೂ ಹಾಗೂ ಯುರೇನೈಲ್ ಸಂಯುಕ್ತಗಳನ್ನೂ ನೀಡುತ್ತದೆ. ಆಕ್ಸೈಡುಗಳಲ್ಲಿ ಮುಖ್ಯವಾದುವೆಂದರೆ ಯುರೇನಿಯಮ್ ಡೈಆಕ್ಸೈಡ್ (UO2) ಮತ್ತು ಯುರೇನಿಯಮ್ ಟ್ರೈ ಆಕ್ಸೈಡ್ (UO3).[೧೦] UO2 ನ್ನು ಕಾಸಿದರೆ UO3 ಉತ್ಪತ್ತಿಯಾಗುತ್ತದೆ. ಇದನ್ನು ಫೆರೊಯುರೇನಿಯಮನ್ನು ತಯಾರಿಸಲು ಬಳಸಿಕೊಳ್ಳುವುದಿದೆ. ಯುರೇನೈಲ್ ಅಮೋನಿಯಮ್ ಕಾರ್ಬೊನೇಟನ್ನು ಕಾಸಿದಾಗ UO3 ಉತ್ಪತ್ತಿಯಾಗುತ್ತದೆ. ಇದು ಕಿತ್ತಲೆಗೆಂಪು ಬಣ್ಣದ್ದು. ವಾಯವಿನಲ್ಲಿ ಕಾಸಿದಾಗ ಹಸುರು ಬಣ್ಣದ U3O8 ನ್ನು ಕೊಡುತ್ತದೆ. ಯುರೇನಿಯಮ್ ಡೈಆಕ್ಸೈಡನ್ನು ಕ್ಲೋರಿನೊಡನೆ ಕಾಸಿದಾಗ ಯುರೆನೈಲ್ ಕ್ಲೋರೈಡನ್ನು ಪಡೆಯಬಹುದು. ಯುರೇನಿಯಮ್ ಆಕ್ಸೈಡನ್ನು ನೈಟ್ರಿಕ್ ಆಮ್ಲದಲ್ಲಿ ವಿಲೀನಿಸಿ ಯುರೇನಲ್ ನೈಟ್ರೇಟನ್ನು ಪಡೆಯಬಹದು. ಇದು ಬಲು ಪ್ರಮುಖವಾದ ಯುರೇನಿಯಮ್ ಲವಣ. ಇದು ನೀರಿನಲ್ಲಿ ಲೀನವಾಗುತ್ತದೆ. ಇದರ ದ್ರಾವಣ ಹಸುರು ಬಣ್ಣದ ಪ್ರತಿದೀಪ್ತಿ ಪ್ರದರ್ಶಿಸುತ್ತದೆ. ಯುರೇನಿಯಮ್ ಆಕ್ಸೈಡನ್ನು ಅಸಿಟಿಕ್ ಆಮ್ಲದಲ್ಲಿ ವಿಲೀನಿಸಿದಾಗ ಯುರೇನೈಟ್ ಅಸಿಟೇಟ್ ಉತ್ಪತ್ತಿಯಾಗುತ್ತದೆ. ಇದೂ ಒಂದು ಮುಖ್ಯ ಲವಣ. ಆಕ್ಸೈಡನ್ನು ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಿಸಿದಾಗ ಸಲ್ಫೇಟ್ ಲವಣ ಉಂಟಾಗುತ್ತದೆ. ಅಮೊನೀಯ ಅಥವಾ ಆಲ್ಕಲಿಗಳನ್ನು ಯುರೇನಿಯಮ್ ಲವಣದ ದ್ರಾವಣಗಳಿಗೆ ಸೇರಿಸಿದಾಗ ಯುರೇನೇಟುಗಳು ಉತ್ಪತ್ತಿಯಾಗುತ್ತವೆ. ಯುರೇನಿಯಮ್ ಸಂಯುಕ್ತಗಳನ್ನು ಪ್ರಯೋಗಶಾಲೆಯಲ್ಲಿ ಅಭಿಕರ್ಮಗಳಾಗಿ (ರೀಏಜೆಂಟ್ಸ್), ಪ್ರತಿದೀಪ್ತಿ ಬಣ್ಣಗಳ ತಯಾರಿಕೆ, ಗಾಜುಗಳ ತಯಾರಿಕೆಯಲ್ಲಿ ಬಳಸುವುದಿದೆ.
ಯುರೇನಿಯಮ್ ಲೋಹ ಮತ್ತು ಅದರ ಸಂಯುಕ್ತಗಳನ್ನು ಅವುಗಳ ವಿಕಿರಣಪಟುತ್ವಗುಣದಿಂದ ಸಿಂತಾರಿಸ್ಕೋಪ್, ಗೀಗರ್-ಮುಲ್ಲರ್ ಗುಣಕಗಳ ಸಹಾಯದಿಂದ ಗುರುತಿಸಬಹುದು. ಇದಲ್ಲದೆ ಛಾಯಾಚಿತ್ರ ವಿಧಾನಗಳಿಂದಲೂ ಪತ್ತೆಮಾಡಬಹುದು. ಕೆಲೊರಿಮಾಪನ, ಕ್ರೊಮಟೊಗ್ರಫಿ, ಪೋಲರೋಗ್ರಫಿ ಮತ್ತು ರೇಡಿಯೋ ಅನಾಲಿಸಿಸ್ ಮುಂತಾದ ವಿಧಾನಗಳಿಂದಲೂ ಈ ಸಂಯುಕ್ತಗಳನ್ನು ಪತ್ತೆಮಾಡುವುದು ಸಾಧ್ಯವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ The Chemistry of the Actinide and Transactinide Elements: Third Edition by L.R. Morss, N.M. Edelstein, J. Fuger, eds. (Netherlands: Springer, 2006.)
- ↑ "Uranium". Encyclopaedia Britannica. Retrieved 22 April 2017.
- ↑ "Uranium". Royal Society of Chemistry.
- ↑ "Uranium". The McGraw-Hill Science and Technology Encyclopedia (5th ed.). The McGraw-Hill Companies, Inc. 2005. ISBN 978-0-07-142957-3.
- ↑ Hammond, C. R. (2000). The Elements, in Handbook of Chemistry and Physics (PDF) (81st ed.). CRC press. ISBN 978-0-8493-0481-1.
- ↑ Rollett, A. D. (2008). Applications of Texture Analysis. John Wiley and Sons. p. 108. ISBN 978-0-470-40835-3.
- ↑ Grenthe, Ingmar; Drożdżyński, Janusz; Fujino, Takeo; Buck, Edgar C.; Albrecht-Schmitt, Thomas E.; Wolf, Stephen F. (2006). "Uranium". In Morss, Lester R.; Edelstein, Norman M.; Fuger, Jean (eds.). The Chemistry of the Actinide and Transactinide Elements (PDF). Vol. 5 (3rd ed.). Dordrecht, the Netherlands: Springer. pp. 52–160. doi:10.1007/1-4020-3598-5_5. ISBN 978-1-4020-3555-5. Archived from the original (PDF) on 7 March 2016.
- ↑ http://www.world-nuclear.org/information-library/nuclear-fuel-cycle/introduction/what-is-uranium-how-does-it-work.aspx
- ↑ Emsley 2001, p. 479.
- ↑ Seaborg 1968, p. 779.
ಹೊರಗಿನ ಕೊಂಡಿಗಳು
ಬದಲಾಯಿಸಿ- Nuclear fuel data and analysis from the U.S. Energy Information Administration
- Current market price of uranium
- World Uranium deposit maps
- ಟೆಂಪ್ಲೇಟು:Cite EB9
- Annotated bibliography for uranium from the Alsos Digital Library
- NLM Hazardous Substances Databank – Uranium, Radioactive
- CDC – NIOSH Pocket Guide to Chemical Hazards
- Mining Uranium at Namibia's Langer Heinrich Mine
- World Nuclear News
- ATSDR Case Studies in Environmental Medicine: Uranium Toxicity U.S. Department of Health and Human Services
- Uranium at The Periodic Table of Videos (University of Nottingham)