ಸಲ್ಫ್ಯೂರಿಕ್ ಆಮ್ಲ

ಟೆಂಪ್ಲೇಟು:Chembox LattConst Angle

ಸಲ್ಫ್ಯೂರಿಕ್ ಆಮ್ಲ ಒಂದು ಖನಿಜಾಮ್ಲ. ಇದು ಗಂಧಕ, ಜಲಜನಕ ಮತ್ತು ಆಮ್ಲಜನಕ ಮೂಲಧಾತುಗಳನ್ನು ಹೊಂದಿದೆ. ಇದರ ರಚನಾಸೂತ್ರ H2SO4.

ಸಲ್ಫ್ಯೂರಿಕ್ ಆಮ್ಲ
Space-filling model
Ball-and-stick model length = 142.2 pm,
S-O bond length = 157.4 pm,
O-H bond length = 97 pm
ಹೆಸರುಗಳು
ಐಯುಪಿಎಸಿ ಹೆಸರು
Sulfuric acid
Other names
Oil of vitriol
Hydrogen sulfate
Identifiers
3D model (JSmol)
ChEBI
ChemSpider
ECHA InfoCard 100.028.763
EC Number 231-639-5
E number E513 (acidity regulators, ...)
2122
KEGG
RTECS number WS5600000
UNII
UN number 1830
  • InChI=1S/H2O4S/c1-5(2,3)4/h(H2,1,2,3,4) checkY
    Key: QAOWNCQODCNURD-UHFFFAOYSA-N checkY
  • InChI=1/H2O4S/c1-5(2,3)4/h(H2,1,2,3,4)
    Key: QAOWNCQODCNURD-UHFFFAOYAC
  • OS(=O)(=O)O
ಗುಣಗಳು
ಅಣು ಸೂತ್ರ H2SO4
ಮೋಲಾರ್ ದ್ರವ್ಯರಾಶಿ 98.079 g/mol
Appearance Colorless viscous liquid
Odor Odorless
ಸಾಂದ್ರತೆ 1.8302 g/cm3, liquid[]
ಕರಗು ಬಿಂದು

10.31[] °C, ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"". K, ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"". °F

ಕುದಿ ಬಿಂದು

337[] °C, ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"". K, ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"". °F

ಕರಗುವಿಕೆ ನೀರಿನಲ್ಲಿ miscible, exothermic
Vapor pressure 0.001 mmHg (20 °C)[]
ಅಮ್ಲತೆ (pKa) pKa1 = −2.8
pKa2 = 1.99
ಸ್ನಿಗ್ಧತೆ (ವಿಸ್ಕಾಸಿಟಿ) 26.7 cP (20 °C)
ರಚನೆ
monoclinic
C2/c
ಉಷ್ಣರಸಾಯನಶಾಸ್ತ್ರ
ರೂಪಗೊಳ್ಳುವ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔfHo298
−814 kJ/mol[]
ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298
157 J/(mol·K)[]
Hazards
Safety data sheet External MSDS
GHS pictograms GHS05: Corrosive GHS06: Toxic
GHS Signal word
H314
P260, P264, P280, P301+330+331, P303+361+353, P363, P304+340, P305+351+338, P310, P321, P405, P501
NFPA 704
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
15 mg/m3 (IDLH), 1 mg/m3 (TWA), 2 mg/m3 (STEL)
Lethal dose or concentration (LD, LC):
2140 mg/kg (rat, oral)[]
  • 50 mg/m3 (guinea pig, 8 hr)
  • 510 mg/m3 (rat, 2 hr)
  • 320 mg/m3 (mouse, 2 hr)
  • 18 mg/m3 (guinea pig)
[]
87 mg/m3 (guinea pig, 2.75 hr)[]
US health exposure limits (NIOSH):
PEL (Permissible)
TWA 1 mg/m3[]
REL (Recommended)
TWA 1 mg/m3[]
IDLH (Immediate danger)
15 mg/m3[]
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ದೊರಕುವಿಕೆ

ಬದಲಾಯಿಸಿ

ಭಾರತದಲ್ಲಿ ಸಲ್ಫರ್ ನಿಕ್ಷೇಪಗಳು ಇರಲಿಲ್ಲ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಣ್ಣ ನಿಕ್ಷೇಪಗಳು ಕಂಡುಬಂದಿವೆ. ಸಲ್ಫರನ್ನು ಅಮೆರಿಕ, ಫ್ರಾನ್ಸ್, ಕೆನಡ, ಮೆಕ್ಸಿಕೊ, ರಷ್ಯ ಮುಂತಾದ ದೇಶಗಳಿಂದ ಅಗಾಧ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ಸಲ್ಫ್ಯೂರಿಕ್ ಆಮ್ಲದ ಕೈಗಾರಿಕೆ ಸ್ವಾವಲಂಬಿಯಲ್ಲ. ಆಂಧ್ರಪ್ರದೇಶದ ಕಮ್ಮಂಜಿಲ್ಲೆಯ ಕೊತ್ತಗುಂಡಂನಲ್ಲಿ ಗಂಧಕವನ್ನು ಅಲ್ಪ ಪ್ರಮಾಣದಲ್ಲಿ ಇತ್ತೀಚೆಗೆ ತಯಾರಿಸಲಾಗುತ್ತಿದೆ. ಬಿಹಾರ್‌ನ ಶಹಬಾದ್ ಜಿಲ್ಲೆಯ ಅಮಜ್ಹೋರ್, ತಮಿಳುನಾಡಿನ ಉತ್ತರ ಆರ್ಕಾಟ್, ಮೈಸೂರಿನ ಚಿತ್ರದುರ್ಗ ಜಿಲ್ಲೆಯ ಇಂಗಳ ಹಾಳ್‌ಗಳಲ್ಲಿ ಸಲ್ಫೈಡ್ ನಿಕ್ಷೇಪಗಳಿರುವುದು ತಿಳಿದಿದೆ. ಅಮಜ್ಹೋರ್‌ನ ನಿಕ್ಷೇಪಗಳ ಉಪಯೋಗ ಆರಂಭವಾಗಿದೆ. ದುರ್ಗಾಪುರ ಮತ್ತು ಸಿಂಧ್ರಿಗಳಲ್ಲಿ ಸಲ್ಫೈಡ್ ನಿಕ್ಷೇಪಗಳಾಧಾರಿತ ಸಲ್ಫ್ಯೂರಿಕ್ ಆಮ್ಲತಯಾರಿಕೆಯ ಕೈಗಾರಿಕೆಗಳು ಕಾರ್ಯಗತವಾಗಲಿವೆ. ಪೆಟ್ರೋಲಿಯಂ ಎಣ್ಣೆ ಶುದ್ಧೀಕರಣ ಕಾರ್ಯಾಗಾರಗಳು ಹೆಚ್ಚಿದಂತೆಲ್ಲ ಹೆಚ್ಚು ಹೆಚ್ಚಾಗಿ ದೊರೆಯಲಾರಂಭಿಸಿರುವ ಸಲ್ಫರ್ ಆಂಶವಿರುವ ಅನಿಲಗಳನ್ನವಲಂಬಿಸಿಯೂ ಆಮ್ಲತಯಾರಿಕೆ ಸಾಧ್ಯ. ಪಂಜಾಬ್, ರಾಜಾಸ್ತಾನ್, ತಮಿಳುನಾಡುಗಳಲ್ಲಿ ಗಣನೀಯ ಪ್ರಮಾಣದಲ್ಲಿ ದೊರಕುವ ಕ್ಯಾಲ್ಸಿಯಂ ಸಲ್ಫೇಟ್ ನಿಕ್ಷೇಪಗಳನ್ನೂ ಕಲ್ಲಿದ್ದಲಿನಲ್ಲಿರುವ ಗಂಧಕಾಂಶವನ್ನೂ ಅವಲಂಬಿಸಿದಂತೆ ಕೈಗಾರಿಕಾಭಿವೃದ್ಧಿಯಾಗಬೇಕಾದುದು ಅಪೇಕ್ಷಣೀಯ.

ತಯಾರಿಕೆ

ಬದಲಾಯಿಸಿ

ಗಂಧಕವನ್ನು (S) ಗಾಳಿ ಅಥವಾ ಆಕ್ಸಿಜನ್ನಿನಲ್ಲಿ (O) ಉರಿಸಿದಾಗ ಸಲ್ಫರ್ ಡೈಆಕ್ಸೈಡ್ ದೊರೆಯುತ್ತದೆ. S + O2 → SO2. ಇದನ್ನು ವೇಗವರ್ಧಕಗಳ ಸಂಪರ್ಕದಿಂದ ಉತ್ಕರ್ಷಣೆ ಮಾಡಿದಾಗ ಸಲ್ಫರ್ ಟ್ರೈ ಆಕ್ಸೈಡ್ (SO3) ಉಂಟಾಗುತ್ತದೆ. 2SO2 + O2 → 2SO3

ಸಲ್ಫರ್ ಟ್ರೈ ಆಕ್ಸೈಡ್ ನೀರಿನಲ್ಲಿ ಲೀನವಾದಾಗ ಸಲ್ಫ್ಯೂರಿಕ್ ಆಮ್ಲ ಲಭಿಸುವುದು. SO3 + H2O → H2SO4. ಆದ್ದರಿಂದ ಈ ಆಮ್ಲದ ಉತ್ಪಾದನೆಗೆ ಬೇಕಾದ ಮುಖ್ಯ ಕಚ್ಚಾ ವಸ್ತುಗಳು ಸಲ್ಫರ್ (ಗಂಧಕ), ಗಾಳಿ (ಆಕ್ಸಿಜನ್ ರೂಪದಲ್ಲಿ) ಮತ್ತು ನೀರು.

ಸಲ್ಫರ್ ಡೈ ಆಕ್ಸೈಡ್‌ನ್ನು ಸಲ್ಫ್ಯೂರಿಕ್ ಆಮ್ಲವಾಗಿ ಪರಿವರ್ತಿಸಲು ಎರಡು ಪ್ರಮುಖ ಕೈಗಾರಿಕಾ ವಿಧಾನಗಳು ಪ್ರಮುಖವಾಗಿವೆ.

(i) ಸೀಸಕೋಷ್ಠಿವಿಧಾನ (ಲೆಡ್ ಚೇಂಬರ್ ಪ್ರೋಸೆಸ್): ಸಲ್ಫರ್ ಡೈ ಆಕ್ಸೈಡ್, ನೀರಿನ ಹಬೆ, ಅಮೋನಿಯ ಇವುಗಳನ್ನು ಬಳಸಿ ಉತ್ಕರ್ಷಣದಿಂದ ತಯಾರಿಸಲ್ಪಟ್ಟ ನೈಟ್ರೊಜನ್ ಆಕ್ಸೈಡ್‌ಗಳು ಮತ್ತು ಯಥೇಚ್ಛವಾದ ಗಾಳಿ ಇವುಗಳ ಮಿಶ್ರಣವೊಂದು ಮೊದಲು ಆಮ್ಲಸಹಿಷ್ಣು ಇಟ್ಟಿಗೆಗಳಿಂದ ನಿರ್ಮಿತವಾದ ಎತ್ತರದ ಗ್ಲೋವರನ ಗೋಪುರವನ್ನು ಪ್ರವೇಶಿಸುವುದು. ಅಲ್ಲಿಂದ ಮುಂದೆ ಸೀಸ (ಲೆಡ್) ಲೋಹದಿಂದ ನಿರ್ಮಿತವಾದ ವಿಶಾಲವಾಗಿರುವ ಕ್ರಿಯಾಗಾರದೊಳಕೆ (ಲೆಡ್‌ಚೇಂಬರ್ ಅಥವಾ ಸೀಸಕೋಷ್ಠಿ) ಪ್ರವಹಿಸುವುದು. ನೈಟ್ರೊಜನ್ ಆಕ್ಸೈಡ್‌ಗಳ ಪಾತ್ರವೆಂದರೆ ಗಾಳಿಯಲ್ಲಿನ ಆಕ್ಸಿಜನ್ನನ್ನು ಸಲ್ಫರಿನ ಡೈ ಆಕ್ಸೈಡ್‌ಗೆ ವರ್ಗಾಯಿಸಿ ಉತ್ಕರ್ಷಣೆಯಿಂದ ಸಲ್ಫರಿನ ಟ್ರೈ ಆಕ್ಸೈಡ್‌ನ ಉತ್ಪಾದನೆಯ ವರ್ಧನೆ. ನೈಟ್ರೊಜನ್ನಿನ ಆಕ್ಸೈಡ್‌ಗಳು ರಾಸಾಯನಿಕ ಕ್ರಿಯೆಯಲ್ಲಿ ಒಂದು ರೀತಿಯಲ್ಲಿ ವೇಗವರ್ಧಕಗಳಾಗಿ ಪಾತ್ರವಹಿಸುವವು. ಉತ್ಕರ್ಷಣ ಕ್ರಿಯೆಯಿಂದ ಉತ್ಪನ್ನವಾದ ಸಲ್ಫರ್ ಟ್ರೈ ಆಕ್ಸೈಡ್ ನೀರಿನೊಳಗೆ ಲೀನವಾಗಿ ಸಲ್ಫ್ಯೂರಿಕ್ ಆಮ್ಲ ದ್ರಾವಣ ಹನಿಹನಿಯಾಗಿ ಸೀಸಕೋಷ್ಠಿ ತಳದಲ್ಲಿ ಕ್ರಮೇಣ ಶೇಖರವಾಗುತ್ತದೆ.

H2O + SO2  +   ½O2 → H2SO4

ಆಮ್ಲ ಉತ್ಪಾದನೆಯಲ್ಲಿ ಹೊರಹೊಮ್ಮುವ ಉಷ್ಣವನ್ನು ಸುತ್ತ ಆವರಿಸಿರುವ ನೀರಿನ ಕೊಳಾಯಿಗಳ ಮೂಲಕ ಹೀರಲಾಗುವುದು. ಅಪರಿವರ್ತಿತ ಅನಿಲಗಳು ಅಲ್ಲಿಂದ ಮುಂದೆ ಗೇಲ್ಯುಸಾಕ್‌ನ ಗೋಪುರವನ್ನು ಪ್ರವೇಶಿಸುವುವು. ನೈಟ್ರೋಜನ್ ಆಕ್ಸೈಡ್‌ಗಳನ್ನು ತಣ್ಣನೆಯ ಆಮ್ಲದಲ್ಲಿ ಹೀರಿ, ಪುನಃ ಗ್ಲೋವರನ ಗೋಪುರಕ್ಕೆ ಕಳುಹಿಸಲಾಗುವುದು. ಶೇಖರಿತ ಆಮ್ಲವನ್ನು ವಿಶೇಷ ತುಕ್ಕು ನಿರೋಧಕ ಲೋಹಗಳಿಂದ ನಿರ್ಮಿತವಾದ ಯಂತ್ರಗಳ ಮೂಲಕ ಹೊರಕ್ಕೆಳೆದು ಸೂಕ್ತ ಜೇಡಿಮಣ್ಣಿನ, ಗಾಜಿನ, ಸಿಲಿಕಾನ್ ಅಂಶ ಹೆಚ್ಚಾಗಿರುವ ಬೀಡು ಕಬ್ಬಿಣದ ಆಥವಾ ವಿಶೇಷ ಉಕ್ಕಿನ ಆಶಯಗಳಲ್ಲಿ ತುಂಬುವರು. ಈ ವಿಧಾನದಲ್ಲಿ ಒಂದು ಸಲ ಕಾರ್ಯಾರಂಭವಾದ ಮೇಲೆ ಕ್ರಿಯೆ ನಿರಂತರವಾಗಿ ನಡೆಯುವುದು. ಆದರೆ ಉತ್ಪಾದಿತ ಆಮ್ಲದಲ್ಲಿ ನೀರಿನ ಅಂಶ ಹೆಚ್ಚಾಗಿದ್ದು ದುರ್ಬಲವಾಗಿರುತ್ತದೆ. ದ್ರಾವಣದ ಪ್ರಬಲತೆ ಮತ್ತು ಸಾಂದ್ರತೆಗಳನ್ನು ಅಳೆದು ತಿಳಿಯಬಹುದು. ಆಮ್ಲಾಂಶ ೯೩.೧೯% ಮಟ್ಟ ಮೀರಿದಾಗ ಆಮ್ಲದ ಪ್ರಬಲತೆಯನ್ನು ಅದರ ವಿದ್ಯುದ್ವಾಹಕ ಶಕ್ತಿ ಪ್ರಮಾಣ ಮಾಪನೆಯಿಂದ ನಿರ್ಧರಿಸಬಹುದು. ಸೀಸಕೋಷ್ಠಿ ವಿಧಾನ ಇಂದು ಅಷ್ಟಾಗಿ ಬಳಕೆಯಲ್ಲಿಲ್ಲ.

 
ಸಂಪರ್ಕ ವಿಧಾನ

(ii) ಸಂಪರ್ಕವಿಧಾನ (ಕಾಂಟ್ಯಾಕ್ಟ್ ಪ್ರೋಸೆಸ್): ಆಧುನಿಕ ಸಂಪರ್ಕ ವಿಧಾನದಲ್ಲಿ ಕ್ರಿಯಾ ವಸ್ತುಗಳಾದ ಸಲ್ಫರ್ ಡೈ ಆಕ್ಸೈಡ್ ಮತ್ತು ಗಾಳಿಯಲ್ಲಿನ ಆಮ್ಲಜನಕದ ಸಂಪರ್ಕದಲ್ಲಿ ಒಂದು ಘನ ವೇಗವರ್ಧಕ ಇರುತ್ತದೆ. ಉತ್ಕರ್ಷಣ ಕ್ರಿಯಾ ಪ್ರೇರಣೆಗೆ ಅತ್ಯಂತ ಅನುಕೂಲಕರವಾದ ಉಷ್ಣತೆಯ ಮಟ್ಟ ೪೫೦ ಸೆ. ಉತ್ಕರ್ಷಣ ಕ್ರಿಯೆಯಿಂದಾಗಿ ಸಲ್ಫರ್ ಟ್ರೈಆಕ್ಸೈಡ್ ಉತ್ಪನ್ನವಾಗುತ್ತದೆ. ಇದನ್ನು ನೇರವಾಗಿ ನೀರಿನೊಳಕ್ಕೆ ನುಗ್ಗಿಸುವಂತಿಲ್ಲ. ಇಂಥ ಕ್ರಿಯೆ ಉಷ್ಣೋತ್ಪತ್ತಿಯಿಂದ ಆಸ್ಫೋಟನಾ ಪ್ರೇರಕವಾಗಿದೆ. ಉತ್ಪಾದಿತ ಸಲ್ಫರ್ ಟ್ರೈಆಕ್ಸೈಡನ್ನು ಹೀರಲು ನೀರಿನ ಬದಲು ಸೀಸಕೋಷ್ಠಿ ವಿಧಾನದಿಂದ ಆಥವಾ ಇನ್ನಾವುದೇ ಮೂಲದಿಂದ ದೊರೆಯುವ ದುರ್ಬಲ ಸಲ್ಫ್ಯೂರಿಕ್ ಆಮ್ಲದ ದ್ರಾವಣವನ್ನೇ ಉಪಯೋಗಿಸಬೇಕು. ವೇಗವರ್ಧಕವಾಗಿ ಪ್ಲಾಟಿನಂ, ಕಬ್ಬಿಣದ ಆಕ್ಸೈಡ್, ಕ್ರೋಮಿಯಂ, ಯುರೇನಿಯಂ ಮತ್ತಿತರ ಲೋಹಗಳ ಆಕ್ಸೈಡ್‌ಗಳು, ವೆನೇಡಿಯಂ ಪೆಂಟಾಕ್ಸೈಡ್ ಈ ಎಲ್ಲವೂ ಕೆಲಸಕ್ಕೆ ಬರುವಂಥವು. ಮೊದಮೊದಲು ಕೈಗಾರಿಕೆಗಳಲ್ಲಿ ಕಬ್ಬಿಣದ ಆಕ್ಸೈಡ್ ಅನಂತರ ಶ್ರೇಷ್ಠ ಮಟ್ಟದ ಶುದ್ಧತೆಯಲ್ಲಿರಬೇಕು; ಕಲ್ಮಷಗಳಿದ್ದಲ್ಲಿ ಪ್ಲಾಟಿನಂ ಲೋಹ ಬಹುಬೇಗ ತನ್ನ ವೇಗವರ್ಧಕ ಶಕ್ತಿಯನ್ನು ಕಳೆದುಕೊಳ್ಳುವುದೆಂದು ತಿಳಿಯಿತು. ಪುನಃ ಪುನಃ ಪ್ಲಾಟಿನಂ ಲೋಹವನ್ನು ಬಳಸುವುದು ದುಬಾರಿಯಾದಾಗ ಅದರ ಬದಲು ಅಗ್ಗದ ಬೆಲೆಯ ವೆನೇಡಿಯಂ ಪೆಂಟಾಕ್ಸೈಡ್ ಸಂಯುಕ್ತವನ್ನು ಉಪಯೋಗಿಸತೊಡಗಿದರು. ಈ ಸಂಯುಕ್ತವನ್ನು ಕಲ್ನಾರು ಅಥವಾ ಶುದ್ಧ ಮರಳಿನ ಹರಳುಗಳ ಮೇಲೆ ಉರಿಸಿ ಉಪಯೋಗಿಸುವರು. ಇದು ಪ್ಲಾಟಿನಂನಷ್ಟು ಸುಲಭವಾಗಿ ತನ್ನ ವೇಗವರ್ಧಕತೆಯ ಶಕ್ತಿಯನ್ನು ಕಳೆದು ಕೊಳ್ಳುವುದಿಲ್ಲ; ಅನೇಕ ವರ್ಷಗಳ ಕಾಲ (ಸರಾಸರಿ ೨ ೧/೨) ಸತತವಾಗಿ ಉಪಯೋಗಕ್ಕೆ ಬರುತ್ತದೆ.

ಉತ್ಕರ್ಷಣಕ್ರಿಯೆ ಜರುಗುವ ಸಂಪರ್ಕಾಲಯದಲ್ಲಿ ವೇಗವರ್ಧಕಗಳ ಅನೇಕ ಪದರಗಳನ್ನು ಒಂದರಮೇಲೊಂದರಂತೆ ಕ್ರಮೇಣ ದಪ್ಪಹೆಚ್ಚುವ ರೀತಿಯಲ್ಲಿ ಜೋಡಿಸಿರುತ್ತಾರೆ. ಬಿಸಿಯಾದ ಸಲ್ಫರ್ ಡೈ ಆಕ್ಸೈಡ್ ಮತ್ತು ಯಥೇಚ್ಛ ಪ್ರಮಾಣದ ಗಾಳಿಯ ಮಿಶ್ರಣವನ್ನು ನಿಯಂತ್ರಿತ ಉಷ್ಣತೆಯ ಮಟ್ಟದಲ್ಲಿ (೪೦೦  ಮೇಲೆ ೫೯೫ ಸೆ. ಒಳಗೆ) ಸಂಪರ್ಕಾಲಯದೊಳಕ್ಕೆ ಬಿಡುವರು. ಉಷ್ಣತೆಯ ಮಟ್ಟ ೪೦೦  ಸೆ. ಗೆ ಕಡಿಮೆಯಾದರೆ ರಾಸಾಯನಿಕ ಉತ್ಕರ್ಷಣ ಕ್ರಿಯೆಯ ವೇಗ ಕಡಿಮೆಯಾಗುವುದು. ೫೯೫ ಸೆ. ಹೆಚ್ಚಾದರೆ ಉತ್ಪಾದಿತ ಸಲ್ಫರ್ ಟ್ರೈ ಆಕ್ಸೈಡ್ ಪುನಃ ಉಷ್ಣ ವಿಭಜನೆಹೊಂದಿ ಸಲ್ಫರ್ ಡೈ ಆಕ್ಸೈಡ್, ಆಮ್ಲಜನಕಗಳು ಉಂಟಾಗುವುವು.

 

ವೇಗವರ್ಧಕದ ಸಂಪರ್ಕದಲ್ಲಿ ರಾಸಾಯನಿಕ ಉತ್ಕರ್ಷಣದಿಂದಾಗಿ ಸಲ್ಫರ್ ಟ್ರೈ ಆಕ್ಸೈಡ್ ಉತ್ಪತ್ತಿಯಾಗಿ ಹೊರಬೀಳುವುದು. ಇದನ್ನು ದುರ್ಬಲ ಸಲ್ಫ್ಯೂರಿಕ್ ಆಮ್ಲದೊಳಗೆ ಸತತವಾಗಿ ಹೀರುವಂತೆ ಏರ್ಪಾಡು ಮಾಡಲಾಗಿದ್ದು ಪ್ರಬಲ ಸಲ್ಫ್ಯೂರಿಕ್ ಆಮ್ಲ ನಿರಂತರವಾಗಿ ಉತ್ಪಾದನೆಯಾಗುತ್ತಿರುತ್ತದೆ. ಸಂಪರ್ಕ ವಿಧಾನದ ಮೂಲತತ್ತ್ವಗಳು ಪ್ರಥಮವಾಗಿ ೧೮೩೧ರಲ್ಲಿಯೇ ಪ್ರತಿಪಾದಿಸಲ್ಪಟ್ಟವು. ಆದರೂ ಅನೇಕ ತಾಂತ್ರಿಕ ತೊಂದರೆಗಳ ಪರಿಣಾಮವಾಗಿ ೧೮೯೮ರವರೆಗೂ ಯಶಸ್ವೀ ಕೈಗಾರಿಕೋತ್ಪನ್ನ ಸಾಧ್ಯವಾಗಲಿಲ್ಲ. ಸಂಪರ್ಕ ವಿಧಾನ ಇಂದು ಹೆಚ್ಚಾಗಿ ಬಳಕೆಯಲ್ಲಿದೆ.

ಮೂಲವಸ್ತು ಸ್ವರೂಪದ ನಿಕ್ಷೇಪಗಳಿಂದ ಪಡೆಯುವ ಪ್ರಕೃತಿ ಮೂಲ ಸಲ್ಫರಿನ ಶುದ್ಧತೆಯ ಮಟ್ಟ ಹೆಚ್ಚು; ಭಾರ ಕಡಿಮೆ. ಆದ್ದರಿಂದ ಅದನ್ನು ಸುಲಭ ಖರ್ಚಿನಲ್ಲಿ ಸಾಗಿಸುವುದು ಸಾಧ್ಯ. ಉಳಿದ ಕಚ್ಚಾವಸ್ತುಗಳು ಗಾಳಿ, ನೀರು ಆದುದರಿಂದ ಸಲ್ಫ್ಯೂರಿಕ್ ಆಮ್ಲ ಕೈಗಾರಿಕಾ ಕೇಂದ್ರಗಳನ್ನು ಎಲ್ಲಿ ಬೇಕಾದರೂ ಅಂದರೆ, ಆಮ್ಲದ ಪೂರೈಕೆಯ ಅವಲಂಬಿತ ಇತರ ಕೈಗಾರಿಕಾ ಕೇಂದ್ರಗಳು ಎಲ್ಲಿವೆಯೋ ಅಲ್ಲಿಯೇ ನಿರ್ಮಿಸಬಹುದು.

ಪ್ರಬಲ ಸಲ್ಫ್ಯೂರಿಕ್ ಅಮ್ಲ ಮತ್ತಷ್ಟು ಸಲ್ಫರ್ ಟ್ರೈ ಆಕ್ಸೈಡನ್ನು ಹೀರಿ ತನ್ನಲ್ಲಿ ಲೀನಮಾಡಿಕೊಳ್ಳುವ ಲಕ್ಷಣ ಹೊಂದಿದೆ. ಹೀಗೆ ದೊರೆಯುವ ಆಮ್ಲದ ಉಗ್ರತೆ ಬಹು ತೀಕ್ಷ್ಣ. ಅದು ಅತಿ ಅಪಾಯಕಾರಿಯೂ ಹೌದು. ಇದರ ಹೆಸರು ಓಲಿಯಂ. ಇದಕ್ಕೂ ಅನೇಕ ಕೈಗಾರಿಕಾ ಉಪಯೋಗಗಳಿವೆ.

ಆಮ್ಲದ ಶುದ್ಧತೆ

ಬದಲಾಯಿಸಿ

ಸಲ್ಫ್ಯೂರಿಕ್ ಆಮ್ಲವನ್ನು ಮಾರುಕಟ್ಟೆಗೆ ಸಾಮಾನ್ಯವಾಗಿ ನಾಲ್ಕು ದರ್ಜೆಗಳಲ್ಲಿ ಬಿಡುಗಡೆ ಮಾಡಲಾಗುವುದು; ವಾಣಿಜ್ಯ ದರ್ಜೆಯದು, ವಿದ್ಯುತ್ ಕೋಶದರ್ಜೆಯದು, ರಾಸಾಯನಿಕವಾಗಿ ಶುದ್ಧವಾದುದು ಮತ್ತು ಅತ್ಯಂತ ಶುದ್ಧವಾದುದು. ನಿಯೋಜಿತ ಉದ್ದೇಶ ಉಪಯೋಗಗಳಿಗೆ ತಕ್ಕಂತೆ ಬೇಕಾದುದನ್ನು ಆರಿಸಿಕೊಳ್ಳಬಹುದು. ಬಹು ಭಾರಿ ಪ್ರಮಾಣದ ಕೈಗಾರಿಕೆಗಳಿಗೆ (ಉದಾಹರಣೆಗೆ ರಾಸಾಯನಿಕ ಗೊಬ್ಬರ ಮತ್ತಿತರ ಆಮ್ಲಗಳ ತಯಾರಿಕೆ) ಅಷ್ಟೇನೂ ಶುದ್ಧವಾದುದು ಬೇಕಾಗಿಲ್ಲ; ವಾಣಿಜ್ಯ ದರ್ಜೆಯ ಆಮ್ಲವೇ ಸಾಕು. ಅದೇ ಔಷಧಿ ಅಥವಾ ಆಹಾರ ಸಾಮಗ್ರಿಗಳಿಗೆ ಸಂಬಂಧಿತ ಕೈಗಾರಿಕೆಗಳಿಗೆ ಅತ್ಯಂತ ಶುದ್ಧ ಅಂದರೆ ಸೀಸ ಮತ್ತು ಆರ್ಸೆನಿಕ್ ರಹಿತವಾದ ಆಮ್ಲದ ಪೂರೈಕೆಯಾಗಬೇಕು.

ಗುಣಲಕ್ಷಣಗಳು

ಬದಲಾಯಿಸಿ

ಸಲ್ಫ್ಯೂರಿಕ್ ಆಮ್ಲ ಮಂದವಾದ ಎಣ್ಣೆಯಂತೆ ಕಾಣುವ ವರ್ಣರಹಿತ ದ್ರಾವಣ.[] ಅದಕ್ಕೆ ನೀರು ಅಥವಾ ತೇವವನ್ನು ತೀವ್ರವಾಗಿ ಹೀರುವ ಗುಣವಿದೆ. ನೀರಿನೊಡನೆ ಬೆರೆತಾಗ ಗಣನೀಯ ಪ್ರಮಾಣದ ಉಷ್ಣ ಉತ್ಪಾದಿಸುವುದು. ಬಹುತೇಕ ಲೋಹಗಳನ್ನು ಸುಲಭವಾಗಿ ತಿಂದು ಹಾಕುವುದು. ಪ್ರಬಲ ಆಮ್ಲ ಸೀಸವನ್ನು ಸಹ ಕ್ರಮೇಣ ಜೀರ್ಣಿಸಿಕೊಳ್ಳಬಲ್ಲುದು. ಚರ್ಮಕ್ಕೆ ಸೋಂಕಿದರೆ ತೀವ್ರ ಸುಟ್ಟಗಾಯಗಳಾಗುವುವು.[][] ಮರಮುಟ್ಟುಗಳೂ ಸುಟ್ಟು ಕಪ್ಪಾಗುತ್ತವೆ. ಇದರಿಂದಾಗಿ ಈ ಆಮ್ಲದ ಶೇಖರಣೆ ಮತ್ತು ಸಾಗಾಣಿಕೆಯಲ್ಲಿ ಬಹುವಾಗಿ ಸುಟ್ಟ ಜೇಡಿಮಣ್ಣಿನ ಜಾಡಿಗಳು, ಗಾಜಿನ ದೊಡ್ಡ ಸೀಸೆ ಅಥವಾ ಹಂಡೆಗಳನ್ನು ಉಪಯೋಗಿಸುವುದು ವಾಡಿಕೆಯಾಗಿತ್ತು. ಇತ್ತೀಚೆಗೆ ಅಗಾಧ ಪ್ರಮಾಣದಲ್ಲಿ ಆಮ್ಲ ಸರಬರಾಜಿನ ಆವಶ್ಯಕತೆಯುಂಟಾದಂತೆ, ಲಾರಿ ಹಡಗುಗಳಲ್ಲಿ ಸಾಗಿಸಬೇಕಾಗಿ ಬಂದಿತು. ಈ ಕಾರಣ ದೈತ್ಯಾಕಾರದ ಉಕ್ಕಿನ ಆಶಯಗಳಿಗೆ ಗಾಜು, ಸೀಸ, ಪ್ಲಾಸ್ಟಿಕ್‌ಗಳ ಬಿಳಿ ಮೈ ಪದರವನ್ನು ಹೊದಿಸಿ ಪಿಂಗಾಣಿ ತೂಬುಗಳನ್ನು ಅಳವಡಿಸಿ, ಟೆಪ್ಲಾನ್ ಪ್ಲಾಸ್ಟಿಕ್ ಕೊಳವೆಗಳ ಮೂಲಕ (ಪೆಟ್ರೋಲ್, ಸೀಮೆಎಣ್ಣೆಯ ಸರಬರಾಜಿನಂತೆ) ಸುಲಭವಾಗಿ ಆಮ್ಲವನ್ನು ಪೂರೈಕೆಮಾಡುವ ವಿಧಾನ ಆಚರಣೆಗೆ ಬಂದಿದೆ.

ಉಪಯೋಗಗಳು

ಬದಲಾಯಿಸಿ

ಸಲ್ಫ್ಯೂರಿಕ್ ಆಮ್ಲಕ್ಕಿರುವ ಉಪಯೋಗಗಳು ಅಸಂಖ್ಯಾತ. ಶಾಂತಿ ಮತ್ತು ಯುದ್ಧಕಾಲಗಳೆರಡರಲ್ಲೂ ರಾಷ್ಟ್ರದ ಕ್ಷೇಮಕ್ಕೆ ಈ ಆಮ್ಲ ಅತ್ಯಾವಶ್ಯಕ. ಸಲ್ಫ್ಯೂರಿಕ್ ಆಮ್ಲದ ವಿವಿಧ ಉಪಯೋಗಗಳ ಯಾದಿ: ಕೃತಕ ರಾಸಾಯನಿಕ ಗೊಬ್ಬರಗಳು[] (ನೈಟ್ರೊಜನ್ ಮೂಲ ಅಮೋನಿಯಂ ಸಲ್ಫೇಟ್ ಮತ್ತು ರಂಜಕಮೂಲ ಸೂಪರ್ ಫಾಸ್ಫೇಟ್) ಇತರ ಆಮ್ಲಗಳು (ಹೈಡ್ರೊಕ್ಲೋರಿಕ್, ನೈಟ್ರಿಕ್, ಫಾಸ್‌ಫಾರಿಕ್ ಮತ್ತು ಕ್ರೋಮಿಕ್), ರೇಯಾನ್ ಕೃತಕನೂಲು ಬಣ್ಣಗಳು, ಔಷಧಿಗಳು, ಆಹಾರ, ಯುರೇನಿಯಂ, ನಿಕ್ಕಲ್, ಕೋಬಾಲ್ಟ್ ಲೋಹಗಳ ತಯಾರಿಕೆ, ಲೋಹಗಳ ಶುದ್ಧೀಕರಣ, ಲೊಹಗಳನ್ನು ಮತ್ತು ಉಕ್ಕುಗಳನ್ನು ಸ್ವಚ್ಛ ಮಾಡುವುದು, ಪೆಟ್ರೋಲಿಯಂ ಶುದ್ಧಿಕರಣ, ಕಾರು ಬಸ್ಸು ಲಾರಿ ಭಾರಿ ಟ್ರಕ್ಕುಗಳಲ್ಲಿನ ವಿದ್ಯುತ್ಕೋಶಗಳು, ಬ್ಯಾಟರಿಗಳು, ಸಾವಯವ ಸಂಯುಕ್ತಗಳ ತಯಾರಿಕೆಯ ಕೈಗಾರಿಕೆಗಳು, ಮಾರ್ಜಕಗಳು, ಸ್ಫೋಟಕಗಳು, ನೀರಿನ ಶುದ್ಧೀಕರಣದಲ್ಲಿ ಉಪಯೋಗಿಸುವ ಅಲ್ಯೂಮಿನಿಯಂ ಸಲ್ಫೇಟ್ ಮತ್ತು ಪಟಿಕಗಳ ತಯಾರಿಕೆ ಇತ್ಯಾದಿ.[] ಅಮೋನಿಯಂ ಸಲ್ಫೇಟ್, ಹೈಟ್ರೊಕ್ಲೋರಿಕ್ ಆಮ್ಲ, ನೈಟ್ರಿಕ್ ಅಮ್ಲಗಳ ತಯಾರಿಕೆಯಲ್ಲಿ ಹೊಸ ವಿಧಾನಗಳ ಅನುಸರಣೆಯಿಂದ ಸಲ್ಫ್ಯೂರಿಕ್ ಆಮ್ಲದ ಬಳಕೆ ಕುಗ್ಗುತ್ತಲಿದೆ. ಆದರೆ ಇತರ ಅನೇಕ ಕೈಗಾರಿಕಾ ಬೆಳವಣಿಗೆ ಹೆಚ್ಚಿದಂತೆ ಹೊಸ ಹೊಸ ಉಪಯೋಗಗಳು (ಕೃತಕ ಸಾಬೂನಿನ ತಯಾರಿಕೆ) ಕಂಡುಹಿಡಿಯುವಿಕೆಯಿಂದಲೂ ಸಲ್ಫ್ಯೂರಿಕ್ ಆಮ್ಲದ ಕೈಗಾರಿಕೆ ಬೆಳೆಯುತ್ತಲೇ ಇದೆ. ಹೀಗಾಗಿ ಒಟ್ಟಿನಲ್ಲಿ ಸಲ್ಫ್ಯೂರಿಕ್ ಆಮ್ಲ ತಯಾರಿಕಾ ಕೈಗಾರಿಕೆ ಒಂದು ಮೂಲಭೂತ ಭಾರಿ ಪ್ರಮಾಣದ ರಾಸಾಯನಿಕ ಕೈಗಾರಿಕೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ Haynes, William M. (2014). CRC Handbook of Chemistry and Physics (in ಇಂಗ್ಲಿಷ್) (95 ed.). CRC Press. pp. 4–92. ISBN 9781482208689. Retrieved 18 November 2018.
  2. ೨.೦ ೨.೧ ೨.೨ ೨.೩ ಟೆಂಪ್ಲೇಟು:PGCH
  3. ೩.೦ ೩.೧ Zumdahl, Steven S. (2009). Chemical Principles 6th Ed. Houghton Mifflin Company. p. A23. ISBN 978-0-618-94690-7.
  4. ೪.೦ ೪.೧ ೪.೨ "Sulfuric acid". Immediately Dangerous to Life and Health Concentrations (IDLH). National Institute for Occupational Safety and Health (NIOSH).
  5. "Sulfuric acid safety data sheet" (PDF). arkema-inc.com. Archived from the original (PDF) on 17 June 2012. Clear to turbid oily odorless liquid, colorless to slightly yellow.
  6. "Sulfuric acid – uses". dynamicscience.com.au. Archived from the original on 9 May 2013.
  7. "BASF Chemical Emergency Medical Guidelines – Sulfuric acid (H2SO4)" (PDF). BASF Chemical Company. 2012. Archived from the original (PDF) on 2019-06-14. Retrieved 18 December 2014.
  8. "Sulfuric acid".
  9. Greenwood, Norman N.; Earnshaw, Alan (1997). Chemistry of the Elements (2nd ed.). Butterworth-Heinemann. p. 653. ISBN 978-0-08-037941-8.

ಹೊರಗಿನ ಕೊಂಡಿಗಳು

ಬದಲಾಯಿಸಿ