ರಂಜಕ
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ರಂಜಕ, P, ೧೫ | ||||||||||||||
ರಾಸಾಯನಿಕ ಸರಣಿ | ಅಲೋಹ | ||||||||||||||
ಗುಂಪು, ಆವರ್ತ, ಖಂಡ | ೧೫, 3, p | ||||||||||||||
ಸ್ವರೂಪ | ಬಿಳಿ/ ಕೆಂಪು/ ಕಪ್ಪು/ ಬಣ್ಣರಹಿತ | ||||||||||||||
ಅಣುವಿನ ತೂಕ | 30.973762(2) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ne] 3s2 3p3 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 5 | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | (white) 1.823 g·cm−3 | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | (red) 2.34 g·cm−3 | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | (black) 2.69 g·cm−3 | ||||||||||||||
ಕರಗುವ ತಾಪಮಾನ | (white) 317.3 K (44.2 °C, 111.6 °ಎಫ್) | ||||||||||||||
ಕುದಿಯುವ ತಾಪಮಾನ | 550 K (277 °C, 531 °F) | ||||||||||||||
ಸಮ್ಮಿಲನದ ಉಷ್ಣಾಂಶ | (white) 0.66 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 12.4 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) (white) 23.824 J·mol−1·K−1 | ||||||||||||||
| |||||||||||||||
| |||||||||||||||
ಆಕ್ಸಿಡೀಕರಣ ಸ್ಥಿತಿಗಳು | 5, 4, 3, 2 [೧], 1 [೨], -3 (mildly acidic oxide) | ||||||||||||||
ವಿದ್ಯುದೃಣತ್ವ | 2.19 (Pauling scale) | ||||||||||||||
ಅಣುವಿನ ತ್ರಿಜ್ಯ | 100 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 98 pm | ||||||||||||||
ತ್ರಿಜ್ಯ ಸಹಾಂಕ | 106 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 180 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | no data | ||||||||||||||
ಉಷ್ಣ ವಾಹಕತೆ | (300 K) (white) 0.236 W·m−1·K−1 | ||||||||||||||
ಸಗಟು ಮಾಪನಾಂಕ | 11 GPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7723-14-0 | ||||||||||||||
ಉಲ್ಲೇಖನೆಗಳು | |||||||||||||||
ರಂಜಕ (Phosphorus) ಒಂದು ಅಲೋಹ ಮೂಲವಸ್ತು. ಇದನ್ನು ಜರ್ಮನಿಯ ಹೆನ್ನಿಗ್ ಬ್ರಾಂಡ್ ಎಂಬವರು ೧೬೬೯ರಲ್ಲಿ ಕಂಡು ಹಿಡಿದರು. ಇದು ಎಲ್ಲಾ ಜೀವಕೋಶಗಳಲ್ಲಿಯೂ ಇರುತ್ತದೆ. ಮನುಷ್ಯರ ಹಲ್ಲು ಹಾಗೂ ಎಲುಬುಗಳ ರಚನೆ ಹಾಗೂ ಬೆಳವಣಿಗೆಗೆ ಇದು ಅತ್ಯವಶ್ಯಕ ಮೂಲಧಾತುವಾಗಿದೆ. ರಂಜಕದ ಬಣ್ಣ ಮೂಲತಃ ಬಿಳಿಯಾದರೂ ಕೆಂಪು ಹಾಗೂ ಕಪ್ಪು ಬಣ್ಣದಲ್ಲಿಯೂ ಲಭ್ಯವಿದೆ. ಔಷಧ, ಕೀಟನಾಶಕ, ಮಾರ್ಜಕ, ಪ್ಲಾಸ್ಟಿಕ್ ಮುಂತಾದವುಗಳ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಕೆಯಲ್ಲಿದೆ. ಕೆಂಪು ರಂಜಕ ಬೆಂಕಿಕಡ್ಡಿ ತಯಾರಿಕೆಯ ಮುಖ್ಯ ಕಛ್ಛಾವಸ್ತು.
ರಂಜಕ ಆವರ್ತಕೋಷ್ಟಕದ ಮೂರನೆಯ ಆವರ್ತದ (ಪೀರಿಯಡ್) ಐದನೆಯ ಎ ಗುಂಪಿಗೆ ಸೇರಿದ ಅಲೋಹಧಾತು. ಇದರ ರಾಸಾಯನಿಕ ಪ್ರತೀಕ P. ಪರಮಾಣು ಸಂಖ್ಯೆ 15: ಪ್ರಮಾಣು ತೂಕ 30.9738. ಎಲೆಕ್ಟ್ರಾನಿಕ್ ವಿನ್ಯಾಸ 1 s2 2s 2 2 s2 p6 3s3 s2 3 p3. ಬಹಳಷ್ಟು ಸಂಖ್ಯೆಯ ಸಂಯುಕ್ತಗಳಿಗೆ ಫಾಸ್ಫರಸ್ಸೇ ಮೂಲಧಾತು. ಈ ಸಂಯುಕ್ತಗಳ ಪೈಕಿ ಫಾಸ್ಫೇಟುಗಳು ಬಲು ಮುಖ್ಯವಾದವು. ಜೀವದ ಪ್ರತಿಯೊಂದು ಪ್ರಕಾರದಲ್ಲೂ ಅಂದರೆ, ಉಪಾಪಚಯ ಕ್ರಿಯೆ (ಮೆಟಬಾಲಿಸಮ್), ದ್ಯುತಿಸಂಶ್ಲೇಷಣೆ (ಫೋಟೋಸಿಂತೆಸಿಸ್), ನರಕ್ರಿಯೆಗಳು ಮತ್ತು ಮಾಂಸಖಂಡಗಳ ಕ್ರಿಯೆಗಳಿಂದ ಎಲ್ಲ ಶಕ್ತಿ-ವಿನಿಮಯ ಪ್ರಕ್ರಿಯೆಗಳಲ್ಲಿ ಫಾಸ್ಫೇಟುಗಳು ಪ್ರಮುಖ ಪಾತ್ರವಹಿಸುತ್ತವೆ. ಆನವಂಶಿಕವಸ್ತುಗಳಿಗೆ (ಕ್ರೋಮೊಸೋಮುಗಳು) ಕಾರಣವಾಗುವ ಇನ್ನಿತರ ವಸ್ತಗಳ ಪೈಕಿ ಇರುವ ನ್ಯೂಕ್ಲಿಯಿಕ್ ಆಮ್ಲಗಳೂ ಫಾಸ್ಫೇಟುದಗಳೇ.
ಲಭ್ಯತೆ ಮತ್ತು ತಯಾರಿಕೆ
ಬದಲಾಯಿಸಿಇರುವ 200 ವಿವಿಧ ಫಾಸ್ಫೇಟ್ ಖನಿಜಗಳ ಪೈಕಿ ವಾಣಿಜ್ಯಪ್ರಾಮುಖ್ಯವನ್ನು ಪಡೆದಿರುವುದು ಫ್ಲ್ಯೂರಾಪಟೈಟ್ ಎಂಬ ಖನಿಜ. ಇದರ ರಾಸಾಯನಿಕ ಸೂತ್ರ Ca3F(PO4)2. ಸತ್ತ ಪ್ರಾಣಿಗಳ ಮೂಳೆಗಳು ಪೂರ್ವೇತಿಹಾಸ ಕಾಲದ ಸಮುದ್ರಗಳ ತಳಭಾಗದಲ್ಲಿ ದ್ವಿತೀಯಕ ನಿಕ್ಷೇಪಗಳ ರೂಪದಲ್ಲಿ ಮತ್ತು ರುಕ್ ಪಕ್ಷಿಗಳ ಪ್ರಾಚೀನ ವಾಸಸ್ಥಾನಗಳಿಂದ ಸಂಗ್ರಹಗೊಂಡ ಮೂಳೆ ಮತ್ತಿತರ ವಸ್ತುಗಳ ರೂಪದಲ್ಲಿ ಇದು ಕಾಣಬರುತ್ತದೆ. ಇವನ್ನು ಹೊರತೆಗೆದು ಖನಿಜವನ್ನು ಪಡೆಯುವುದಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಫ್ಲಾರಿಡ, ಟೆನೆಸೀ ರಾಜ್ಯಗಳು ಮತ್ತು ಮಾಂಟಾನ-ಇಡಾಹೋ ಪ್ರದೇಶಗಳಲ್ಲಿ ಪ್ರಮುಖ ಫಾಸ್ಪೇಟ್ ನಿಕ್ಷೇಪಗಳಿವೆ. ಇವಲ್ಲದೆ ಮೊರಾಕೋ, ಟ್ಯುನೀಸಿಯ ಮತ್ತು ರಷ್ಯಗಳಲ್ಲೂ ಫಾಸ್ಫೇಟ್ ನಿಕ್ಷೇಷಗಳನ್ನು ಕಾಣಬಹುದು. ಫಾಸ್ಫೇಟ್ ಯುಕ್ತವಾದ ಇತರ ಖನಿಜ ಎಂದರೆ ಕ್ಲೋರಾಪಟೈಟ್ [CaCl2 . 3Ca2 (PO4)2] ಪ್ರಾಣಿ ಮತ್ತು ಸಸ್ಯಗಳಲ್ಲಿ ಇದು ಫಾಸ್ಫೋ ಪ್ರೋಟೇನುಗಳ ರೂಪದಲ್ಲಿ ಇರುತ್ತದೆ.
ಫಾಸ್ಪೇಟ್‍ಶಿಲೆಯನ್ನು (ಅಶುದ್ಧರೂಪದ ಸಾಮಾನ್ಯ ಖನಿಜ ಅಪಟೈಟಿಗೆ ಇರುವ ಹೆಸರಿದು.) ಉಪಯುಕ್ತ ರಾಸಾಯನಿಕವಾಗಿ ಪರಿವರ್ತಿಸುವ ಕ್ರಿಯೆಯಲ್ಲಿ ಎರಡು ಪ್ರಮುಖ ಹಂತಗಳಿವೆ. ಆರ್ದ್ರ-ಆಮ್ಲ ಪ್ರತಿಕ್ರಿಯೆಯಲ್ಲಿ ಫಾಸ್ಫೇಟ್ ಶಿಲೆಯನ್ನು ಸಲ್ಪ್ಯೂರಿಕ್ ಆಮ್ಲದೊಡನೆ ವರ್ತಿಸಿ, ಬಲು ಅಶುದ್ಧವಾದ ಫಾಸ್ಪಾರಿಕ್ ಆಮ್ಲ ಮತ್ತು ಕ್ಯಾಲ್ಸಿಯಮ್ ಸಲ್ಪೇಟುನ್ನು ಸುಲಭವಾಗಿ ಹೊರತೆಗೆಯಲ್ಲ ಮತ್ತು ಫಾಸ್ಫ್ಪಾರಿಕ್ ಆಮ್ಲದ ಮುಂದಿನ ಸಾರೀಕರಣಕ್ರಿಯೆಯನ್ನೂ ಆಂಶಿಕ ಶುದ್ಧೀಕರಣ ಕ್ರಿಯೆಯನ್ನೂ ಉಂಟು ಮಾಡಲು ತಂತ್ರಜ್ಞಾನದ ಅನೇಕ ನೂತನ ವಿಧಾನಗಳು ರೂಪುಗೊಂಡಿವೆ.
ಎಲೆಕ್ಟ್ರೋಥರ್ಮಲ್ ಪ್ರಕ್ರಿಯೆ: ಮೂಳೆಬೂದಿಯನ್ನು ಇಲ್ಲವೆ ಪುಡಿರೂಪದ ಫಾಸ್ಫೇಟ್‍ಶಿಲೆಯನ್ನು (ಅಂದರೆ ಫಾಸ್ಫೊರೈಟ್) ಶುದ್ಧಮರಳು (ಸಿಲಿಕಾನ್ ಡೈಆಕ್ಸೈಡ್) ಮತ್ತು ಕಲ್ಲಿದ್ದಲ ಕಿಟ್ಟದೊಂದಿಗೆ (ಕೋಕ್) ವಿದ್ಯುಚ್ಚಾಪ ಕುಲುಮೆಯಲ್ಲಿ ಕಾಸುವುದರಿಂದ ಪಾಸ್ಫೇಟ್‍ನ್ನು ಪಡೆಯಲಾಗುತ್ತದೆ. ಆಲಿಕೆಯ ಆಕಾರದ ಸಲಕರಣಿಯ (ಹಾಪರ್) ಮೂಲಕ ಹೊರೆಯನ್ನು ಕುಲುಮೆಯೊಳಕ್ಕೆ ದೂಡಲಾಗುವುದು. ಕುಲುವೆಯ ತಳಭಾಗದಲ್ಲಿ ಅಳವಡಿಸಲಾಗಿರುವ ಎರಡು ಕಾರ್ಬನ್ ಎಲೆಕ್ಟ್ರೋಡುಗಳ ಮೂಲಕ ವಿದ್ಯುಚ್ಚಾಪವನ್ನು ಹರಿಸಿ, ಸುಮರು 15000C ಉಷ್ಟತೆಯನ್ನು ಉಂಟುಮಾಡಲಾಗುತ್ತದೆ. ಈ ಉಷ್ಣತೆಯಲ್ಲಿ ಸಿಲಿಕಾನ್ ಡೈಆಕ್ಸೈಡು ಕ್ಯಾಲ್ಸಿಯಮ್ ಫಾಸ್ಫೇಟ್‍ನಲ್ಲಿರುವ ಫಾಸ್ಫೆರಸ್ ಪೆಂಟ್ಸಾಕ್ಸೈಡನ್ನು ಸ್ಥಳಪಲ್ಲಟಗೊಳಿಸುತ್ತದೆ. ಕಲ್ಲಿದ್ದಲು ಕಿಟ್ಟ ಫಾಸ್ಫೆರಸ್ ಪೆಂಟ್ಸಾಕ್ಸೈಡನ್ನು ರಂಜಕವನ್ನಾಗಿ ಅಪಕರ್ಷಣಗೊಳಿಸುತ್ತದೆ.
ಈ ಪ್ರಕ್ರಿಯೆಯ ರಾಸಾಯನಿಕ ಸಮೀಕರಣಗಳು ಹೀಗಿವೆ:
11500-C Ca3(PO4)2 + 3SiO2 ______3CaSiO2 + P2O2 14000C P2O5 +5C ———— 5CO + 2P ಅಥವಾ 2Ca2(PO4) + 6SiO2 +10C ——— 6CaSiO2 + 10 CO + P4↑
ಕಾರ್ಬನ್ ಮಾನಾಕ್ಸೈಡ್ ಸಹಿತವಾದ ಫಾಸ್ಫರಿಸ್ಸಿನ ಆವಿ ಕುಲುಮೆಯ ಹೊರಬಂದು ಶೀತಕಾರಿಯನ್ನು ಪ್ರವೇಶಿಸುತ್ತದೆ. ಆಗ ಫಾಸ್ಫರಸ್ಸ್‌ನ ಆವಿ ದ್ರವವಾಗಿ ಮಾರ್ಪಡುವುದು. ಕಾರ್ಬನ್ ಮಾನಾಕ್ಸೈಡ್ ಹೊರಬೀಳುತ್ತದೆ. ಕರಗಿದ ಕ್ಯಾಲ್ಸಿಯಮ್ ಸಿಲಿಕೇಟ್ ಕುಲುಮೆಯ ತಳಭಾಗದಲ್ಲಿ ದ್ರವರೂಪದಲ್ಲಿ ಶೇಖರಗೊಳ್ಳುವುದು. ಈ ಧಾತುಮಲವನ್ನು (ಸ್ಲ್ಯಾಗ್) ಆಗಿಂದಾಗೆ ಹೊರತೆಗೆಯುತ್ತಾರೆ. ನೀರಿನಲ್ಲಿ ಸಂಗ್ರಹಗೊಂಡ ದ್ರವರೂಪದ ಫಾಸ್ಪರಸ್ ಬಿಳಿಬಣ್ಣದ ಘನರೂಪ ತಾಳುತ್ತದೆ. ಈ ಪ್ರಕ್ರಿಯೆಯಲ್ಲಿ ಮರಳು ಸ್ರಾವಕವಾಗೂ (ಫ್ಲಕ್ಸ್) ಕಲ್ಲಿದ್ದಲ ಕಿಟ್ಟ ಅಪಕರ್ಷಣಕಾರಿಯಾಗೂ ವರ್ತಿಸುತ್ತದೆ.
ಶುದ್ಧೀಕರಣ: ಹೀಗೆ ಒದಗಿದ ಫಾಸ್ಫರಸ್ ಅಶುದ್ಧ ಸ್ಥಿತಿಯಲ್ಲಿರುತ್ತದೆ. ಇದನ್ನು ಕ್ರೋಮಿಕ್ ಆಮ್ಲ ದ್ರಾವಣದೊಂದಿಗೆ ಬೆರೆಸಿ ಕರಗಿಸಲಾಗುವುದು. ಕಲ್ಮಷಗಳೆಲ್ಲ ಉತ್ಕರ್ಷಣಗೊಂಡು ಕುಲುಮೆಯ ಮೇಲೆ ಪೊರೆಗಟ್ಟಾಗಿ (ಸ್ಕಮ್) ಶೇಖರವಾಗುತ್ತದೆ. ಬಳಿಕ ಇದನ್ನು ಹೊರತೆಗೆದು ಕರಗಿದ ಫಾಸ್ಫರಸ್ಸನ್ನು ಒತ್ತಡದಲ್ಲಿ ಷಾಮಾಯ್ ಚರ್ಮದ ಮೂಲಕ ಸೋಸಿ ಬಳಿಕ ಕಡ್ಡಿಗಳ ರೂಪದಲ್ಲಿ ಎರಕಹೊಯ್ಯಲಾಗುತ್ತದೆ. ಇದೇ ಬಿಳಿ ಫಾಸ್ಫರಸ್. ಇದು ಒಮ್ಮೆಲೇ ಹತ್ತಿಕೊಂಡು ಉರಿಯುವ ಗುಣವನ್ನು ಹೊಂದಿರುವುದರಿಂದ ಇದನ್ನು ನೀರಿನಡಿಯಲ್ಲಿ ಶೇಖರಿಸಲಾಗುವುದು.
ಬಿಳಿ ಫಾಸ್ಫರಸ್ಸನ್ನು ಬಹಳ ಸಮಯದ ತನಕ ಹಾಗೆಯೇ ಇಟ್ಟರೆ ಅದು ನಿಧಾನವಾಗಿ ಕೆಂಪು ಫಾಸ್ಫರಸ್ಸಾಗಿ ಮಾರ್ಪಟುತ್ತದೆ. ಉಷ್ಣತೆಯನ್ನು ಹೆಚ್ಚು ಮಾಡುವುದರ ಮೂಲಕ ಹಾಗು ವೇಗವರ್ಧಕವನ್ನು ಬಳಸುವುದರ ಮೂಲಕ ಈ ಪ್ರಕ್ರಿಯೆಯನ್ನು ಶೀಘ್ರಗೊಳಿಸಬಹುದು. ಕೊಂಚಮಟ್ಟಿನ ಅಯೋಡಿನ್ ಮಿಶ್ರಿತ ಬಿಳಿ ಫಾಸ್ಫರಸ್ಸನ್ನು ಅಂಡಾಕಾರದ, ತಾಂಡವಾಳದ ಪಾತ್ರೆಯಲ್ಲಿ ಇಡಲಾಗುವುದು. ಈ ಪಾತ್ರೆಗೆ ಎರಡು ಉಷ್ಣತಾಮಾಪಕಗಳನ್ನು ಉಕ್ಕಿನ ಕೊಳವೆಗಳ ಮೂಲಕ ಅಳವಡಿಸಿರಲಾಗುತ್ತದೆ. ಪಾತ್ರೆಯ ಮೇಲುಭಾಗದಲ್ಲಿ ಊಡುಸಲಕರಣೆ ಇರುತ್ತದೆ. ಇದಕ್ಕೊಂದು ಸುರಕ್ಷತಾ ಕವಾಟ ಇರುತ್ತದೆ. ಪಾತ್ರೆಯೊಳಗಿನ ವಾಯುವನ್ನು ಹೊರತೆಗೆದು ಅಲ್ಲಿ ನೈಟ್ರೋಜನ್ ಇಲ್ಲವೆ ಕಲ್ಲಿದ್ದಲ ಅನಿಲವನ್ನು ತುಂಬಲಾಗುವುದು. ಕುಲುಮೆಯೊಳ್ಳಕ್ಕೆ ಈ ಪಾತ್ರೆಯನ್ನು ಇಟ್ಟು ಸುಮಾರು ೨೪೦೦ - ೨೫೦೦ C ಉಷ್ಣತೆಯಲ್ಲಿ ಬಹಳ ಹೊತ್ತಿನ ತನಕ ಕಾಯಿಸುತ್ತಾರೆ. ಹೀಗಾದಾಗ ಬಿಳಿ ಫಾಸ್ಫರಸ್ ಕೆಂಪು ಫಾಸ್ಫರಸ್ ಆಗಿ ಮಾರ್ಪಡುತ್ತದೆ. ಪಾತ್ರೆಯ ಮೇಲೆ ಅಳವಡಿಸಲಾಗಿರುವ ಸುರಕ್ಷತಾ ಕವಟ ಉಷ್ಣತೆಯನ್ನೂ ಒಳಗಿನ ಸಂಮರ್ದವನ್ನೂ ನಿಯಂತ್ರಣದಲ್ಲಿಟ್ಟಿರಲು ಸಹಾಯವೆಸಗುತ್ತದೆ. ಬಹಳ ಹೊತ್ತಿನ ತನಕ ಕಾಸಿದ ಉತ್ಪನ್ನವನ್ನು ಆರಲು ಬಿಡುತ್ತಾರೆ. ಬಳಿಕ ಇದನ್ನು ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಅರೆದು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದೊಂದಿಗೆ ಚೆನ್ನಾಗಿ ಕುದಿಸುತ್ತಾರೆ. ಹೀಗೆ ಮಾಡುವುದರಿಂದ ಮಾರ್ಪಡದ ಯಾವುದೇ ಶೇಷರೂಪದ ಬಿಳಿ ಫಾಸ್ಫರಸ್ ಫಾಸ್‌ಫೀನ್ ರೂಪದಲ್ಲಿ ಹೊರಬರುವುದೂ ಸಾಧ್ಯವಾಗುತ್ತದೆ.
ಮೂಳೆಗಳಿಂದ ಬಿಳಿ ಫಾಸ್ಪರಸ್ಸಿನ ತಯಾರಿಕೆ: ಕಚ್ಚಾರೂಪದ ಮೂಳೆಗಳನ್ನು ಅವುಗಳಲ್ಲಿರಬಹುದಾದ ಕೊಬ್ಬಿನ ಅಂಶವನ್ನು ತೆಗೆದುಬಿಡುವುದಕ್ಕೋಸ್ಕರ ಅವನ್ನು ಬೆನ್‌ಜೀ಼ನ್ ಇಲ್ಲವೆ ಕಾರ್ಬನ್ ಟೆಟ್ರಕ್ಲೋರೈಡಿನೊಂದಿಗೆ ಬೆರೆಸಿ ಬೇಯಿಸಲಾಗುವುದು. ಅನಂತರ ಮೂಳೆಗಳನ್ನು ನೀರಿನೊಂದಿಗೆ ಬೆರೆಸಿ ನಿರ್ದಿಷ್ಟ ಸಂಮರ್ದದಲ್ಲಿ ಚೆನ್ನಾಗಿ ಕಾಸುತ್ತಾರೆ. ಹೀಗಾದಾಗ ಅಲ್ಲಿ ಇರಬಹುದಾದ ಜಿಲಾಟಿನ್ ಬೇರ್ಪಡುತ್ತದೆ. ಜಿಲಾಟಿನ್‌ರಹಿತ ಮೂಳೆಗಳನ್ನು ವಾಯುಸಂಪರ್ಕವಿಲ್ಲದಂಥ ರಿಟಾರ್ಟ್ ಪಾತ್ರೆಗಳಲ್ಲಿ ಕಾಸುತ್ತಾರೆ. ಇದರಿಂದಾಗಿ ಮೂಳೆತೈಲಗಳು ಬಟ್ಟಿಯಿಳಿದು ಮೂಳೆಕಲ್ಲಿದ್ದಲು ಇಲ್ಲವೆ ಪ್ರಾಣಿಕಲ್ಲಿದ್ದಲು ಮಾತ್ರ ಹಿಂದೆ ಉಳಿಯುತ್ತದೆ. ಇದನ್ನು ಮತ್ತೆ ಗಾಳಿಯಲ್ಲಿ ಕಾಸಿದಾಗ ಅದರಲ್ಲಿರಬಹುದಾದ ಕಾರ್ಬನ್ ಪೂರ್ತಿಯಾಗಿ ಸುಟ್ಟುಹೋಗಿ ಮೂಳೆಬೂದಿ ಮಾತ್ರ ಉಳಿದಿರುತ್ತದೆ. ಈ ಬೂದಿಯಲ್ಲಿ ಅದರ ತೂಕದ ಸುಮಾರು ಶೇ. ೮೦ ರಷ್ಟು ಕ್ಯಾಲ್ಸಿಯಮ್ ಆರ್ಥೋಫಾಸ್ಫೇಟ್ ಇರುತ್ತದೆ. ಕ್ಯಾಲ್ಸಿಯಮ್ ಆರ್ಥೋಫಾಸ್ಫೇಟಿನಿಂದ. ಎಲೆಕ್ಟ್ರೋಥರ್ಮಲ್ ವಿಧಾನದ ರೀತ್ಯ ಫಾಸ್ಫರಸನ್ನು ಪಡೆಯುತ್ತಾರೆ.
ಫಾಸ್ಫರಸ್ ಬಹುರೂಪಗಳನ್ನು ಪ್ರದರ್ಶಿಸುತ್ತದೆ. ಬಿಳಿಯ ಇಲ್ಲವೆ ಹಳದಿ ಬಣ್ಣದ್ದು; ಕೆಂಪು ಬಣ್ಣದ್ದು; ನೇರಿಳೆ ಬಣ್ಣದ್ದು; ಕಡುಗೆಂಪು ಬಣ್ಣದ್ದು ಮತ್ತು ಕಪ್ಪು ಬಣ್ಣದ್ದು.
ಗುಣಲಕ್ಷಣಗಳು
ಬದಲಾಯಿಸಿಫಾಸ್ಫರಸ್ಸಿನ ಎರಡು ಪ್ರಮುಖ ಬಗೆಗಳಾದ ಕೆಂಪು ಫಾಸ್ಫರಸ್ ಮತ್ತು ಬಿಳಿಯ ಅಥವಾ ಹಳದಿ ಫಾಸ್ಫರಸ್ಸುಗಳ ಮುಖ್ಯ ಗುಣಲಕ್ಷಣಗಳನ್ನು ಈ ಮುಂದಿನ ಯಾದಿಯಲ್ಲಿ ಪ್ರಸ್ತುತಪಡಿಸಿದೆ.
ಗುಣಲಕ್ಷಣ | ಕೆಂಪು ಫಾಸ್ಫರಸ್ | ಬಿಳಿ ಫಾಸ್ಫರಸ್ |
ಬಣ್ಣ | ಕೆಂಪು-ನೇರಿಳೆ | ಬಲುಮಟ್ಟಿಗೆ ಬಣ್ಣವಿಲ್ಲದ್ದು |
ಸ್ಫಟಿಕರೂಪತ್ವ | ಷಟ್ಫಲಕೀಯ ವ್ಯವಸ್ಥೆ | ಘನಾಕೃತಿ ವ್ಯವಸ್ಥೆ |
ವಾಸನೆ | ರುಚಿ ಇಲ್ಲದ್ದು, ವಾಸನಾರಹಿತದ್ದು | ಬೆಳ್ಳುಳ್ಳಿಯ ವಾಸನೆ |
ವಾಯುವಿನ ಸಂಪರ್ಕ | ಸ್ಫುರದೀಪ್ತಿ. ಉತ್ಕರ್ಷಣೆ ಇಲ್ಲ | ಸ್ಫುರದೀಪ್ತಿ. ಉತ್ಕರ್ಷಣೆ ಇದೆ |
ದ್ರವನಬಿಂಬು | ೫೮೯.೫೦C(೪೩ ವಾಯುಮಂಡಲ ಒತ್ತಡದಲ್ಲಿ) | ೪೪.೧೦C |
ದೇಹದ ಮೇಲಿನ ಕ್ರಿಯೆ | ವಿಷರಹಿತ | ವಿಷಪೂರಿತ |
ಸಾಪೇಕ್ಷ ಸಾಂದ್ರತೆ | ೨.೨ | ೧.೮೨ |
ಗ್ರಾಹ್ಯೋಷ್ಣ | ೦.೧೭೦ | ೦.೧೮೯ |
ಕಾರ್ಬನ್ ಡೈಸಲ್ಫೈಡಿನೊಂದಿಗೆ ವರ್ತನೆ | ಲೀನಕಾರಿಯಲ್ಲ | ಲೀನಕಾರಿ |
ಹೊತ್ತಿಕೊಳ್ಳುವ ಉಷ್ಣತೆ | ೨೬೦೦C | ೩೦೦C |
ವಿದ್ಯುತ್ಪ್ರವಾಹ | ಮಂದವಾಹಕ | ಅತಿಮಂದವಾಹಕ |
ಬಿಸಿ ಸೋಡಿಯಮ್ ಆಕ್ಸೈಡಿನೊಂದಿಗೆ ವರ್ತನೆ | ಏನೂ ಇಲ್ಲ | ಫಾಸ್ಫೀನ್. ಇತ್ಯಾದಿ ಲಭ್ಯ |
ಕ್ಲೋರೀನ್ ಅನಿಲದೊಂದಿಗೆ | ಕಾಸಿದರೆ ಹತ್ತಿಕೊಳ್ಳುತ್ತದೆ | ಒಮ್ಮೇಲೇ ಹತ್ತಿಕೊಳ್ಳುತ್ತದೆ |
ಉಪಯೋಗಗಳು
ಬದಲಾಯಿಸಿರಂಜಕದ ಬಲುಮುಖ್ಯ ಉಪಯೋಗ ಇರುವುದು ರಾಸಾಯನಿಕ ಗೊಬ್ಬರ ತಯಾರಿಕೆಯಲ್ಲಿ. ಗೊಬ್ಬರಗಳು ಫಾಸ್ಫೇಟುಗಳ ರೂಪದಲ್ಲಿ ಇರುತ್ತವೆ. ಬಹುತೇಕ ಫಾಸ್ಫೇಟ್ ಗೊಬ್ಬರಗಳು ಅಧಿಕ ಅಶುದ್ಧವೆನಿಸಿದ ಮಾನೊಕ್ಯಾಲ್ಸಿಯಮ್ ಇಲ್ಲವೆ ಡೈಕ್ಯಾಲ್ಸಿಯಮ್ ಆರ್ಥೋಫಾಸ್ಫೇಟುಗಳಾಗಿ [Ca (H2PO4)2] ಮತ್ತು (CaHPO4) ಇರುತ್ತವೆ. ಈ ಫಾಸ್ಫೇಟುಗಳು ಆರ್ಥೋಫಾಸ್ಫರಿಕ್ ಆಮ್ಲದ ಲವಣಗಳು. ಅಶುದ್ಧ ಡೈಕ್ಯಾಲ್ಸಿಯಮ್ ಆರ್ಥೋಫಾಸ್ಫೇಟ್ ಗೊಬ್ಬರವನ್ನು ಸಾಮಾನ್ಯವಾಗಿ ಸೂಪರ್‌ಫಾಸ್ಫೇಟ್ ಎಂದೂ ಅಶುದ್ಧ ಮಾನೋ ಕ್ಯಾಲ್ಸಿಯಮ್ ಗೊಬ್ಬರವನ್ನು ಟ್ರಿಪಲ್ ಸೂಪರ್ ಫಾಸ್ಫೇಟ್ ಎಂದೂ ಕರೆಯುವುದಿದೆ. ರಂಜಕದ ಮತ್ತೊಂದು ಉಪಯೋಗ ಕ್ಷೇತ್ರ ಎಂದರೆ ಬೆಂಕಿಕಡ್ಡಿಗಳ ತಯಾರಿಕೆ. ಆಧುನಿಕವಾಗಿರುವಂಥ 'ಎಲ್ಲಿಬೇಕಾದರೂ ಗೀರಿ' ಎಂಬ ಸೂಚನೆಯನ್ನು ಹೊತ್ತ ಬೆಂಕಿಕಡ್ಡಿಯ ತಲೆಗೆ ಪೊಟ್ಯಾಸಿಯಮ್ ಕ್ಲೋರೇಟ್ ಇಲ್ಲವೆ ಮ್ಯಾಂಗನೀಸ್ ಡೈಆಕ್ಸೈಡ್, ಅಂಟು, ಪುಡಿಮಾಡಿದ ಗಾಜುಗಳನ್ನು ಬೆರೆಸಿದ ಫಾಸ್ಫರಸ್ ಸಲ್ಫೈಡನ್ನು ಬಳಸುವುದಿದೆ. ಸುಕ್ಷೇಮ ಬೆಂಕಿಕಡ್ಡಿಗಳು (ಸೇಫ್ಟಿ ಮ್ಯಾಚಸ್) ಎಂದೆನ್ನುವ ಸಂದರ್ಬದಲ್ಲಿ ಅವುಗಳ ತಲೆಗೆ ಆಂಟಿಮೊನಿ ಸಲ್ಫೈಡ್ ಮತ್ತು ಕೆಲವು ವೇಳೆ ಗಂಧಕ ಮತ್ತು ಇದ್ದಿಲನ್ನು ಮಿಶ್ರಮಾಡಿ ಇರುವಂಥ ಉತ್ಕರ್ಷಣಕಾರಿ ವಸ್ತುಗಳಾದ ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಕೆಂಪು ಸೀಸವನ್ನು ಮೆತ್ತಿರುತ್ತಾರೆ. ರಾಸಾಯನಿಕ ಕೈಗಾರಿಕಾ ಕ್ಷೇತ್ರದಲ್ಲಿ ಅಗತ್ಯವಿರುವ ಫಾಸ್ಫರಸ್ ಟ್ರೈ ಮತ್ತು ಪೆಂಟಕ್ಲೋರೈಡುಗಳ ತಯಾರಿಕೆಗೆ ರಂಜಕವನ್ನು ಉಪಯೋಗಿಸುವುದಿದೆ. ಇಲಿಪಾಷಾಣ, ಬಾಣಬಿರುಸುಗಳು, ಹೊಗೆ ಬಾಂಬುಗಳು, ಫಾಸ್ಫರ್ ಬ್ರಾಂಜ಼್ ಮುಂತಾದವುಗಳಲ್ಲಿ ರಂಜಕದ ಉಪಯೋಗ ಇದೆ.
ರಂಜಕದ ಆಕ್ಸೈಡ್
ಬದಲಾಯಿಸಿಪ್ರಮುಖವಾದ ಮೂರು ಆಕ್ಸೈಡುಗಳಿವೆ. A ಫಾಸ್ಪರಸ್ ಟ್ರೈಆಕ್ಸೈಡ್ (ಫಾಸ್ಫರಸ್ (III) ಆಕ್ಸೈಡ್).B ಫಾಸ್ಫರಸ್ ಟೆಟ್ರಾಕ್ಸೈಡ್ ಫಾಸ್ಫರಸ್ (IV) ಆಕ್ಸೈಡ್) ಮತ್ತು C ಫಾಸ್ಫರಸ್ ಪೆಂಟಾಕ್ಸೈಡ್ (ಫಾಸ್ಫರಸ್ (V) ಆಕ್ಸೈಡ್).
A ಫಾಸ್ಫರಸ್ ಟ್ರೈಆಕ್ಸೈಡ್ (P4O6)
ಬದಲಾಯಿಸಿಶುಷ್ಕರೂಪದ ಬಿಳಿ ಫಾಸ್ಫರಸ್ಸನ್ನು ಸೀಮಿತ ಸರಬರಾಜಿನ ವಾಯುವಿನಲ್ಲಿ ಉರಿಸುವುದರಿಂದ ಇದು ಉಂಟಾಗುತ್ತದೆ.
ಭೌತಲಕ್ಷಣಗಳು: ಇದು ವರ್ಣರಹಿತ ಹರಳುರೂಪದ ಘನವಸ್ತು ಅಶುದ್ಧರೂಪದ್ದು. ಮೇಣದಂತಿರುತ್ತದೆ. ಇದಕ್ಕೆ ಬೆಳ್ಳುಳ್ಳಿಯ ವಾಸನೆ ಉಂಟು. ಕರಗುವ ಬಿಂದು ೨೩.೧೦C. ಸಂಯುಕ್ತದ ಬಾಷ್ಪಸಾಂದ್ರತೆ ೧೧೦. ಇದೊಂದು ವಿಷಪದಾರ್ಥ. ಲಿಟ್‌ಮಸ್ ಕಾಗದಕ್ಕೆ ಆಮ್ಲೀಯ ಗುಣ ಪ್ರದರ್ಶಿಸುತ್ತದೆ.
ರಾಸಾಯನಿಕ ಲಕ್ಷಣಗಳು:
- ಸ್ಥಿರತೆ: ಫಾಸ್ಫರಸ್ ಟ್ರೈಆಕ್ಸೈಡನ್ನು ಅಧಿಕ ಉಷ್ಣತೆಯಲ್ಲಿ ಮೊಹರುಮಾಡಿದ ಪಾತ್ರೆಯಲ್ಲಿ ಕಾಸಿದಾಗ ಫಾಸ್ಫರಸ್ ಟೆಟ್ರಾಕ್ಸೈಡ್ ಮತ್ತು ಫಾಸ್ಫರಸ್ ಉಂಟಾಗುತ್ತದೆ.
- ಆಕ್ಸಿಜನ್ನಿನೊಡನೆ ಕ್ರಿಯೆ: ಫಾಸ್ಫರಸ್ ಟ್ರೈಆಕ್ಸೈಡನ್ನು ವಾಯು ಇಲ್ಲವೆ ಆಕ್ಸಿಜನ್ನಿಗೆ ಒಡ್ಡಿದಾಗ ನಿಧಾನವಾಗಿ ಫಾಸ್ಫರಸ್ ಪೆಂಟಾಕ್ಸೈಡ್ ಉಂಟಾಗುತ್ತದೆ. ಆಕ್ಸಿಜನ್ನಿನೊಂದಿಗೆ ಕಾಸಿದಾಗ ಹಸುರು ಬಣ್ಣದ ಜ್ವಾಲೆಯಿಂದ ಸಿಡಿದು ಫಾಸ್ಫರಸ್ ಪೆಂಟಾಕ್ಸೈಡ್ ಲಭಿಸುತ್ತದೆ.
- ನೀರಿನೊಂದಿಗೆ ಕ್ರಿಯೆ: ಫಾಸ್ಫರಸ್ ಪೆಂಟಾಕ್ಸೈಡ್ ತಣ್ಣನೆಯ ನೀರಿನಲ್ಲಿ ನಿಧಾನವಾಗಿ ಕರಗಿ ವರ್ತಿಸಿ ಫಾಸ್ಫರಸ್ ಆಮ್ಲವನ್ನು ಉಂಟುಮಾಡುತ್ತದೆ ಬಿಸಿನೀರಿನ ಸಂಪರ್ಕದಲ್ಲಿ ಬಿರುಸಿನಿಂದ ವರ್ತಿಸಿ ಆರ್ಥೋಫಾಸ್ಪಾರಿಕ್ ಆಮ್ಲವನ್ನು ಉಂಟುಮಾಡುತ್ತದೆ.
- ಫಾಸ್ಫರಸ್ ಟ್ರೈಆಕ್ಸೈಡ್ ಕ್ಲೋರಿನ್‌ನೊಂದಿಗೆ ಬಿರುಸಿನಿಂದ ವರ್ತಿಸಿ ಫಾಸ್ಫರಸ್ ಆಕ್ಸಿಕ್ಲೋರೈಡ್ ಮತ್ತು ಮೆಟಫಾಸ್ಫೊರಿಲ್ ಕ್ಲೋರೈಡ್ ಉಂಟುಮಾಡುತ್ತದೆ.
- ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಬಿರುಸಿನಿಂದ ವರ್ತಿಸಿ ಫಾಸ್ಫರಸ್ ಟ್ರೈಕ್ಲೋರೈಡ್ ಮತ್ತು ಫಾಸ್ಫರಸ್ ಆಮ್ಲಗಳನ್ನು ಉಂಟುಮಾಡುತ್ತದೆ.
ಫಾಸ್ಫರಸ್ ಟ್ರೈಆಕ್ಸೈಡನ್ನು ಫಾಸ್ಫರಸ್ ಆಮ್ಲ ಮತ್ತು ಫಾಸ್ಫೈಟುಗಳನ್ನು ತಯಾರಿಸಲು ಉಪಯೋಗಿಸುವುದಿದೆ.
B ಫಾಸ್ಫರಸ್ ಟ್ರೆಟ್ರಾಕ್ಸೈಡ್ (P2O4)
ಬದಲಾಯಿಸಿಫಾಸ್ಫರಸ್ ಟ್ರೈಆಕ್ಸೈಡನ್ನು ಮೊಹರು ಮಾಡಿದ ನಳಿಕೆಯಲ್ಲಿ ೪೪೦೦C ಉಷ್ಣತೆಗೆ ಕಾಸಿದಾಗ ಫಾಸ್ಫರಸ್ ಟೆಟ್ರಾಕ್ಸೈಡ್ ಲಭಿಸುತ್ತದೆ. ಇದು ಹರಳುರೂಪದ ಘನಸ್ಥಿತಿಯ ವಸ್ತು. ನಿರ್ವರ್ಣ, ಪಾರದರ್ಶಕ ಹರಳು. ನೀರಿನೊಡನೆ ಇದು ಫಾಸ್ಫೂರಸ್ ಮತ್ತು ಫಾಸ್ಫಾರಿಕ್ ಆಮ್ಲಗಳು ಮಿಶ್ರಣಗೊಂಡಿರುವ ದ್ರಾವಣದಂತೆ ಇರುತ್ತದೆ. ಹೀಗಾಗಿ ಇದು ನೈಟ್ರೊಜನ್ ಟೆಟ್ರಾಕ್ಸೈಡಿಗೆ ಸಾದೃಶ ಎನಿಸಿದೆ.
C ಫಾಸ್ಪರಸ್ ಪೆಂಟಾಕ್ಸೈಡ್ (P2O5 ಅಥವಾ P4O10)
ಬದಲಾಯಿಸಿಅತ್ಯಂತ ಹೆಚ್ಚಿನ ಶುಷ್ಕವಾಯು ಇಲ್ಲವೆ ಆಕ್ಸಿಜನ್ನಿನ ಸಾನ್ನಿಧ್ಯದಲ್ಲಿ ಬಿಳಿಯ ಶುಷ್ಕ ಫಾಸ್ಫರಸ್ಸನ್ನು ಉರಿಸುವುದರಿಂದ ಇದನ್ನು ತಯಾರಿಸುತ್ತಾರೆ. ಫಾಸ್ಫರಸ್ ವಾಯುವಿನಲ್ಲಿ ಉರಿದು ಫಾಸ್ಪರಸ್ ಪೆಂಟಾಕ್ಸೈಡಿನ ಬಿಳಿಯ ಹೊಗೆ ಉಂಟಾಗಿ ಇದನ್ನು ಸಾಂದ್ರೀಕರಿಸಿದಾಗ ಬಿಳಿಯ ಪುಡಿರೂಪದ ಉತ್ಪನ್ನ ಸಂಗ್ರಹಗೊಳ್ಳುತ್ತದೆ. ಉತ್ಪನ್ನವನ್ನು ಮತ್ತೆ ಶುಷ್ಕವಾಯುವಿನಲ್ಲಿ ೫೦೦೦ - ೬೦೦೦ C ಉಷ್ಣತೆಯಲ್ಲಿ ಕಾಸಿ ಶುದ್ಧೀಕರಿಸುತ್ತಾರೆ. ಶುದ್ಧರೂಪದ ಫಾಸ್ಫರಸ್ ಪೆಂಟಾಕ್ಸೈಡ್‌ನ್ನು ವಾಯು ಹೋಗದ ಸೀಸೆಗಳಲ್ಲಿ ಶೇಖರಿಸಿಟ್ಟಿರುತ್ತಾರೆ. ಇದು ಬಿಳಿಯ ಬಣ್ಣದ ಘನವಸ್ತು. ೨೫೦೦C ಉಷ್ಣತೆಗೆ ಕಾಸುವುದರಿಂದ ನೇರವಾಗಿ ಬಾಷ್ಪೀಕರಿಸುತ್ತದೆ. ಇದು ಆರ್ದ್ರತಾಗ್ರಾಹಿವಸ್ತು (ಹೈಗ್ರೋಸ್ಕೋಪಿಕ್). ಸಂಯುಕ್ತದ ಬಾಷ್ಪಸಾಂದ್ರತೆ ಇದರ ರಾಸಾಯನಿಕ ಸೂತ್ರ P4O10 ಅನುಗುಣವಾಗಿದೆ.
ಫಾಸ್ಪರಸ್ ಪೆಂಟಾಕ್ಸೈಡ್ ನೀರಿನೊಂದಿಗೆ ಅಧಿಕ ಬಂಧುತ್ವವನ್ನು (ಅಫಿನಿಟಿ) ಹೊಂದಿರುವಂಥದು. ತಣ್ಣೀರಿನಲ್ಲಿ ಕರಗಿ ಮೆಟಪಾಸ್ಫಾರಿಕ್ ಆಮ್ಲ ಏರ್ಪಡುತ್ತದೆ. ಬಿಸಿನೀರಿನೊಂದಿಗೆ ಬೆರೆತು ಆರ್ಥೋಫಾಸ್ಫಾರಿಕ್ ಆಮ್ಲವಾಗಿ ಮಾರ್ಪಡುತ್ತದೆ. ನೀರಿನೊಂದಿಗೆ ಅಧಿಕ ಬಂಧುತ್ವ ಹೊಂದಿರುವುದರಿಂದ ಶಕ್ತಿಯುತ ಅಪಜಲ ಸಂಯೋಜನಾಕಾರಿಯಾಗಿ (ಡೀಹೈಡ್ರೇಟಿಂಗ್ ಏಜೆಂಟ್) ವರ್ತಿಸುವುದು. ಆರ್ಗ್ಯಾನಿಕ್ ಆಮ್ಲಗಳೊಂದಿಗೆ ವರ್ತಿಸಿ ಅವುಗಳ ಅನುಕ್ರಮ ಆಮ್ಲ ಅನ್‌ಹೈಡ್ರೇಟುಗಳನ್ನು ಉಂಟುಮಾಡುತ್ತದೆ. ಫಾಸ್ಫಾರಿಕ್ ಆಮ್ಲದ ಅನ್‌ಹೈಡ್ರೇಡ್ ಆಗಿರುವುದರಿಂದ ಇದೊಂದು ಆಮ್ಲೀಯ ಆಕ್ಸೈಡ್ ಆಗಿ ವರ್ತಿಸುತ್ತದೆ. ಕಲ್ಲಿದ್ದಲ ಕಿಟ್ಟದೊಂದಿಗೆ ವಿಪರೀತವಾಗಿ ಕಾಸುವುದರಿಂದ ಫಾಸ್ಪರಸ್ ಲಭಿಸುತ್ತದೆ.
ಉಪಯೋಗಗಳು: ಫಾಸ್ಫರಸ್ ಪೆಂಟಾಕ್ಸೈಡನ್ನು ಇದರೊಂದಿಗೆ ಬೆರೆಯದ ಇನ್ನಿತರ ಅನಿಲಗಳನ್ನು ಶುಷ್ಕಗೊಳಿಸಲು ಉಪಯೋಗಿಸುವುದಿದೆ. ನೈಟ್ರಿಕ್ ಆಮ್ಲದಿಂದ ನೈಟ್ರಿಕ್ ಪೆಂಟಾಕ್ಸೈಡ್, ಸಲ್ಫೂರ‍್ಯಿಕ್ ಆಮ್ಲದಿಂದ ಸಲ್ಫರ್ ಟ್ರೈಆಕ್ಸೈಡ್ ಮತ್ತು ಪರ್‌ಕ್ಲೋರಿಕ್ ಆಮ್ಲದಿಂದ ಕ್ಲೋರಿನ್ ಹೆಪ್ಟಾಕ್ಸೈಡ್ ಇವುಗಳಂಥ ಆಮ್ಲ ಅನ್‌ಹೈಡ್ರೈಡುಗಳನ್ನು ತಯಾರಿಸಲು ಇದರ ಬಳಕೆ ಉಂಟು.
ರಂಜಕ ಅನೇಕ ಆಕ್ಸೋಆಮ್ಲಗಳಿಗೆ (ಆಕ್ಸಿಆಮ್ಲಗಳೆಂದೂ ಕರೆಯುವುದಿದೆ) ಕಾರಣವೆನಿಸಿದೆ. ಅವುಗಳಲ್ಲಿ ಹೈಪೊಫಾಸ್ಫರಸ್ ಆಮ್ಲ. ಫಾಸ್ಫೋರಸ್ ಆಮ್ಲ, ಹೈಪೊಫಾಸ್ಫರಿಕ್ ಆಮ್ಲ, ಪೆರಾಕ್ಸೋಫಾಸ್ಫಾರಿಕ್ ಆಮ್ಲಗಳು, ಆರ್ಥೋಫಾಸ್ಫಾರಿಕ್ ಆಮ್ಲ, ಪೈರೋಫಾಸ್ಫಾರಿಕ್ ಆಮ್ಲ ಮತ್ತು ಮೆಟಫಾಸ್ಫಾರಿಕ್ ಆಮ್ಲಗಳು ಮುಖ್ಯ ಎನಿಸಿವೆ.
ಫಾಸ್ಫೈಡುಗಳು
ಬದಲಾಯಿಸಿಲೋಹಗಳೊಂದಿಗೆ ಇರುವ ಫಾಸ್ಫರಸ್‌ನ ದ್ವಿಸಂಯುಕ್ತಗಳಿಗೆ ಈ ಹೆಸರಿದೆ. ಉದಾಹರಣೆಗೆ ಸೋಡಿಯಮ್ ಫಾಸ್ಫೈಡ್ (Na3P), ಕ್ಯಾಲ್ಸಿಯಮ್ ಫಾಸ್ಫೈಡ್ (Ca3P2). ಅಲ್ಯೂಮಿನಿಯಮ್ ಫಾಸ್ಫೈಡ್ (AlP) ಇತ್ಯಾದಿ.
ಫಾಸ್ಫೈಟುಗಳು
ಬದಲಾಯಿಸಿಫಾಸ್ಫರಸ್ ಆಮ್ಲದ ಲವಣಗಳಿಗೆ ಇರುವ ಹೆಸರು. ಇವು ರ‍್ಯಾಡಿಕಲ್ಲನ್ನು ಹೊಂದಿರುತ್ತವೆ. ಉದಾಹರಣೆ: ಪ್ರಸಾಮಾನ್ಯ ಸೋಡಿಯಮ್ ಫಾಸ್ಫೈಟ್ (Na3PO3).
ಗ್ರಂಥಸೂಚಿ
ಬದಲಾಯಿಸಿ- Emsley, John (2000). The Shocking history of Phosphorus. A biography of the Devil's Element. London: MacMillan. ISBN 0-333-76638-5.
- Parkes, G. D.; Mellor, J. W. (1939). Mellor's Modern Inorganic Chemistry. Longman's Green and Co.
- Podger, Hugh (2002). Albright & Wilson. The Last 50 years. Studley: Brewin Books. ISBN 1-85858-223-7.
- Threlfall, Richard E. (1951). The Story of 100 years of Phosphorus Making: 1851–1951. Oldbury: Albright & Wilson Ltd.