ಸಕ್ರಿಯ ಬೈಜಿಕ ವಿದಳನ ಕ್ರಿಯೆ

ಬೈಜಿಕ ಬೌತಶಾಸ್ತ್ರ ಮತ್ತು ಬೈಜಿಕ ರಸಾಯನಶಾಸ್ತ್ರದಲ್ಲಿ , ಬೈಜಿಕ ವಿದಳನವು ಬೈಜಿಕ ಪ್ರತಿಕ್ರಿಯೆ ಅಥವಾ ವಿಕಿರಣ ಶೀಲ ಕ್ಷೀಣತೆ ಪ್ರಕ್ರಿಯೆಯಾಗಿದ್ದು, ಇಲ್ಲಿ ಬೀಜಕೇಂದ್ರವು ವಿದಳನ ಹೊಂದಿ ಸಣ್ಣ ಸಣ್ಣ ಬೀಜ (ಹಗುರ ಬೀಜ)ಗಳಾಗಿ ವಿಭಜನೆ ಹೊಂದುತ್ತದೆ.ವಿದಳನ ಕ್ರಿಯೆಯು ಪ್ರತಿಸಲವು ನ್ಯೂಟ್ರಾನ್‍ಗಳನ್ನು ಮತ್ತು ಫೋಟಾನ್(ಗಾಮಾ ಕಿರಣಗಳ ರೂಪದಲ್ಲಿ)ಗಳನ್ನು ಬಿಡುಗಡೆಗೊಳಿಸುತ್ತವೆ.ಮತ್ತು ಇದರೊಂದಿಗೆ ವಿಕಿರಣ ಶೀಲ ಧಾತು[೧]ಗಳಿಂದ ಬಿಡುಗಡೆಯಾಗುವ ಪ್ರಮಾಣೀಕೃತ ಮಟ್ಟದ ಶಕ್ತಿಗಿಂತಲೂ ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಡಿಸೆಂಬರ್ ೧೭ರ ೧೯೩೮ರಲ್ಲಿ ಜರ್ಮನಿಯ ಓಟ್ಟೋ ಹಾನ್

ಓಟ್ಟೊ ಹಾನ್

ಎಂಬಾತನಿಂದ ಆವಿಷ್ಕಾರದಿಂದಾಗಿ ಭಾರವಾದ ಧಾತುಗಳಿಂದ ಬೀಜ ವಿದಳನ ಕ್ರಿಯೆ ಜರುಗುತ್ತದೆ ಎಂದು ತಿಳಿದು ಬಂತು.ಮತ್ತು ೧೯೩೯ ರಲ್ಲಿ ಅವನ ಸಹಾಯಕರಾದ ಪ್ರಿಟ್ಞ ಸ್ಟ್ರಾಸಮನ್ ಮತ್ತು ಲೈಸ್ ಮೆಟನರ್‍ ಹಾಗೂ ಓಟ್ಟೋ ಹಾನ್‍ನ ಸಂಬಂಧಿಕಳಾದ ಒಟ್ಟೊ ರಾಬರ್ಟ ಪ್ರಿಶ್ಚ ರವರು ವಿದಳನದ ಸೈದ್ಧಾಮತಿಕ ವಿವರಣೆಯನ್ನು ನೀಡಿದರು.ಪ್ರಿಶ್ಚರವರು ಜೀವಕೋಶಗಳಲ್ಲಿ ಜರುಗುವ ಜೈವಿಕ ವಿದಳನ ಕ್ರಿಯೆಗೆ ಸಾದೃಷ್ಯವಾಗಿ ಬೈಜಿಕ ವಿದಳನ ಕ್ರಿಯೆಯನ್ನು ಹೆಸರಿಸಿದರು.ಇದೊಂದು ಬಹಿರ್ ಉಷ್ಣ ಕ್ರಿಯೆಯಾಗಿದ್ದು ಅದು ಬಿಡುಗಡೆಗೊಳಿಸುವ ಅಗಾಧ ಪ್ರಮಾಣದ ಶಕ್ತಿಯ ಭಾಗಗಳು ವಿದ್ಯುತ್ಕಾಂತೀಯ ವಿಕಿರಣ ಮತ್ತು ಚಲನ ಶಕ್ತಿ ಎರಡನ್ನೂ ಒಳಗೊಂಡಿದೆ.ವಿದಳನ ಕ್ರಿಯೆಯಿಂದ ಶಕ್ತಿಬಿಡುಗಡೆಗೊಳ್ಳ ಬೇಕಾದರೆ ಪ್ರತಿಕ್ರಿಯೆಯ ನಂತರ ಉಂಟಾಗುವ ಧಾತುಗಳ ಬಂಧಕ ಶಕ್ತಿ[೨]ಗಿಂತ ಮುಂಚೆಯ ಧಾತುಗಳ ಬಂಧಕ ಶಕ್ತಿಗಿಂತ ಕಡಿಮೆ ಇರಬೇಕು.

ವಿದಳನವು ಒಂದು ರೀತಿಯ ಬೈಜಿಕ ಪರಿವರ್ತನಾ[೩] ಕ್ರಿಯೆಯಾಗಿದೆ, ಏಕೆಂದರೆ ನಂತರ ಉಂಟಾಗುವ ಮುಂಚಿನ ಧಾತುಗಳಿಗಿಂತ ಭಿನ್ನವಾಗಿರುತ್ತವೆ.ಮತ್ತು ಉಂಟಾಗುವ ಎರಡು ಬೀಜಗಳು ಹೋಲಿಕೆ ಮಾಡಬಲ್ಲವಾಗಿವೆ, ಅದರೆ ಗಾತ್ರದಲ್ಲಿ ಬಿನ್ನವಾಗಿವೆ, ಸಾಮಾನ್ಯವಾಗಿ ೩ ರಿಂದ ೨ ವಿದಳನೀಯ ಸಮಸ್ಥಾನಿಗಳ ದ್ರವ್ಯರಾಶಿ ಅನುಪಾತಗಳಿಗೆ ಹೋಲಿಸಲಾಗಿ ಬಿನ್ನವಾಗುತ್ತವೆ.ಬಹಳಷ್ಟು ವಿದಳನಗಳು ದ್ವೀವಿದಳನವಾಗಿದೆ(ಎರಡು ವಿದ್ಯುದಂಶ ಹೊಂದಿದ ಉತ್ಪನ್ನಗಳು), ಆದರೆ ಸಾಂಧರ್ಬಿಕವಾಗಿ ( ೧೦೦೦ ವಿದಳನದಲ್ಲಿ ೨ ಅಥವಾ ೪ ಬಾರಿ ಮಾತ್ರ) ತೃತೀಯಕ ವಿದಳನದಲ್ಲಿ ಮೂರು ಧನ ವಿದ್ಯುದಂಶ ಹೊಂದಿರುವ ಭಾಗಗಳು ಉಂಟಾಗುತ್ತವೆ.ಈ ಭಾಗಗಳಲ್ಲಿ ಅತ ಚಿಕ್ಕ ಭಾಗಗಳ ಗಾತ್ರವು ಫೋಟಾನ್‍ನ ಬೀಜಕೇಂದ್ರದಿಂದ ಅರ್ಗಾನ್ ಬೀಜಕೇಂದ್ರದವರೆಗೂ ಇರಬಹುದು.

ಊಹಿಸಲು ಸಾಧ್ಯವಾಗದ ವಿದಳನದ ಉತ್ಪನ್ನಗಳ ಸಂಯೋಜನೆಯು ಕ್ವಾಂಟಮ್ ಟನ್ನೆಲಿಂಗ ಪ್ರಕ್ರಿಯೆಗಿಂತಲೂ ಭಿನ್ನವಾಗಿದೆ.ಉದಾಹರಣೆಗಾಗಿ,ಫೋಟಾನ್ ಉತ್ಸರ್ಜನೆ,ಅಲ್ಫಾ ಕಣಗಳ ಕ್ಷೀಣಿಸುವಿಕೆ ಮತ್ತು ಸಮೂಹ ಕ್ಷೀಣಿಸುವಿಕೆ ಮುಂತಾದವು ಪ್ರತಿಸಲು ಏಕರೀತಿಯಾದ ಉತ್ಪನ್ನಗಳನ್ನು ನೀಡುತ್ತವೆ.ಬೈಜಿಕ ವಿದಳನವು ಬೈಜಿಕ ಇಂಧನಗಳಿಗೆ ಶಕ್ತಿಯನ್ನು ಒದಗಿಸುತ್ತವೆ.ಮತ್ತು ಬೈಜಿಕ ಶಸ್ತ್ರಾಸ್ತ್ರ[೪]ಗಳ ಸ್ಪೋಟಗಳಿಗೆ ಚಾಲನೆ ನೀಡುತ್ತದೆ.ಎರಡು ಬಳಕೆಗಳು ಸಾದ್ಯವಾಗುತ್ತದೆ, ಆದರೆ ಬೈಜಿಕ ಇಂಧನವೆಂದು ಕರೆಯಲ್ಪಡುವ ಕೆಲವು ವಸ್ತುಗಳು ವಿದಳನೀಯ ನ್ಯೂಟ್ರಾನ್‍ಗಳಿಗೆ ತಾಕಿದಾಗ ವಿದಳನ ಕ್ರಿಯೆ ಜರುಗುತ್ತದೆ.ಮತ್ತು ಪ್ರತಿಯಾಗಿ ವಿದಳನಗೊಂಡ ಭಾಗದಿಂದ ನ್ಯೂಟ್ರಾನ್ ಬಿಡುಗಡೆಗೊಳ್ಳುತ್ತದೆ.ಈ ರೀತಿ ಸ್ವಯಂ ಸುಸ್ಥಿರಗೊಂಡ ಸರಪಣಿ ಕ್ರಿಯೆಯನ್ನು ನಿಯಂತ್ರಿತ ದರದಲ್ಲಿ ಬೈಜಿಕ ಕ್ರಿಯಾಕಾರಿ[೫]ಗಳು ನಿರ್ವಹಿಸಿ ಅಗಾಧ ಪ್ರಮಾಣದ ಶಕ್ತಿ ಬಿಡುಗಡೆಗೊಳಿಸುತ್ತದೆ ಅಥವಾ ಬೈಜಿಕ ಶಸ್ತ್ರಾಸ್ತ್ರಗಳಲ್ಲಿ ನಡೆಯುವ ಅನಿಯಂತ್ರಿತ ಕ್ರಿಯೆಯಲ್ಲಿಯೂ ಅಗಾಧ ಪ್ರಮಾಣದಲ್ಲಿ ಶಕ್ತಿ ಬಿಡುಗಡೆಗೊಳ್ಳುತ್ತದೆ.

ಬೈಜಿಕ ಕ್ರಿಯಾಕಾರಿ


ಉಲ್ಲೇಖಗಳುಸಂಪಾದಿಸಿ

  1. http://nuclear-energy.net/definitions/radioactivity.html
  2. http://hyperphysics.phy-astr.gsu.edu/hbase/nucene/nucbin.html
  3. http://faculty.ncc.edu/LinkClick.aspx?fileticket=Fkhb0_AcPfE%3D&tabid=1920
  4. http://www.britannica.com/technology/nuclear-weapon
  5. http://www.world-nuclear.org/info/Nuclear-Fuel-Cycle/Power-Reactors/Nuclear-Power-Reactors/
"https://kn.wikipedia.org/w/index.php?title=ವಿದಳನ&oldid=932560" ಇಂದ ಪಡೆಯಲ್ಪಟ್ಟಿದೆ