ಫೋಟಾನ್
ಭೌತಶಾಸ್ತ್ರದಲ್ಲಿ ಫೋಟಾನ್ ಎಂದರೆ ವಿದ್ಯುತ್ಕಾಂತೀಯ ಕ್ರಿಯೆಗಳಿಗೆ ಕಾರಣೀಭೂತವಾದ ಅತ್ಯಂತ ಮೂಲಕಣ. ಇದು ವಿದ್ಯುತ್ಕಾಂತೀಯ ವಿಕಿರಣಗಳ ವಾಹಕವಾಗಿದೆ. ಇದರಲ್ಲಿ ಬೆಳಕು, ಕ್ಷ ಕಿರಣ, ಗಾಮ ಕಿರಣಗಳು, ರೇಡಿಯೋ ಅಲೆಗಳು ಇತ್ಯಾದಿಗಳು ಸೇರಿವೆ. ಫೋಟಾನ್ ಗಳು ನಿರ್ವಾತದಲ್ಲಿ ಬೆಳಕಿನವೇಗದಲ್ಲಿ ಚಲಿಸುತ್ತವೆ.