ತಂತಿಯು ಲೋಹದ ಒಂಟಿ, ಉರುಳೆಯಾಕಾರದ, ಮೆತುವಾದ ಎಳೆ ಅಥವಾ ಸರಳು. ತಂತಿಗಳನ್ನು ಯಾಂತ್ರಿಕ ಭಾರಗಳನ್ನು ಹೊರಲು ಅಥವಾ ವಿದ್ಯುಚ್ಛಕ್ತಿ ಹಾಗೂ ದೂರಸಂಪರ್ಕ ಸಂಜ್ಞೆಗಳನ್ನು ಸಾಗಿಸಲು ಬಳಸಲಾಗುತ್ತದೆ. ಲೋಹವನ್ನು ಅಚ್ಚು ಅಥವಾ ಕಂಬಚ್ಚಿನಲ್ಲಿರುವ ರಂಧ್ರದ ಮೂಲಕ ಸೆಳೆದು ಸಾಮಾನ್ಯವಾಗಿ ತಂತಿಯನ್ನು ರೂಪಿಸಲಾಗುತ್ತದೆ. ತಂತಿ ಮಾಪಕಗಳು ವಿವಿಧ ಸಾಮಾನ್ಯ ಗಾತ್ರಗಳಲ್ಲಿ ಬರುತ್ತವೆ ಮತ್ತು ಇವನ್ನು ಮಾಪಕ ಸಂಖ್ಯೆಯ ಅನುಸಾರವಾಗಿ ವ್ಯಕ್ತಪಡಿಸಲಾಗುತ್ತದೆ.

Wires overhead

ತಂತಿಯು ಘನ ಮಧ್ಯಭಾಗ, ಎಳೆರೂಪದ ಅಥವಾ ಹೆಣೆದ ರೂಪಗಳಲ್ಲಿ ಬರುತ್ತದೆ. ಅಡ್ಡಕೊಯ್ತದಲ್ಲಿ ಸಾಮಾನ್ಯವಾಗಿ ವೃತ್ತಾಕಾರದಲ್ಲಿ ಇರುತ್ತದಾದರೂ, ತಂತಿಯನ್ನು ಚೌಕ, ಷಟ್ಕೋನ, ಚಪ್ಪಟೆಯಾಗಿಸಿದ ಆಯತ ಅಥವಾ ಇತರ ಅಡ್ಡಕೊಯ್ತ ಹೊಂದಿರುವಂತೆ ತಯಾರಿಸಬಹುದು, ಅಲಂಕಾರಿಕ ಉದ್ದೇಶಗಳಿಗಾಗಿ ಅಥವಾ ಉನ್ನತ ದಕ್ಷತೆಯ ಧ್ವನಿವರ್ಧಕಗಳಲ್ಲಿನ ಧ್ವನಿ ಸುರುಳಿಗಳಂತಹ ತಾಂತ್ರಿಕ ಉದ್ದೇಶಗಳಿಗಾಗಿ. ಅಂಚು ಸುತ್ತಿನ, ಸುರುಳಿ ತಂತಿಗಳನ್ನು ವಿಶೇಷ ಚಪ್ಪಟೆಯಾಗಿಸಿದ ತಂತಿಯಿಂದ ತಯಾರಿಸಲಾಗುತ್ತದೆ.

ಉಲ್ಲೇಖಗಳುಸಂಪಾದಿಸಿ

  •   This article incorporates text from a publication now in the public domainChisholm, Hugh, ed. (1911). "Wire" . Encyclopædia Britannica. 28 (11th ed.). Cambridge University Press. p. 738. Cite has empty unknown parameters: |separator= and |HIDE_PARAMETER= (help)CS1 maint: ref=harv (link)


"https://kn.wikipedia.org/w/index.php?title=ತಂತಿ&oldid=968595" ಇಂದ ಪಡೆಯಲ್ಪಟ್ಟಿದೆ