ಹಾಫ್ನಿಯಮ್
ಹಾಫ್ನಿಯಮ್ ಒಂದು ಲೋಹ ಮೂಲಧಾತು.ಇದರ ಗುಣ ಲಕ್ಷಣಗಳು ಹೆಚ್ಚಾಗಿ ಜಿರ್ಕೋನಿಯಮ್ ನ್ನು ಹೋಲುತ್ತದೆ. ಇದು ಜಿರ್ಕೋನಿಯಮ್ ನೊಂದಿಗೆ ಮಿಶ್ರಣವಾಗಿಯೇ ದೊರೆಯುತ್ತದೆ.ಇದನ್ನು ಡೆನ್ಮಾರ್ಕ್ ನ ಡಿರ್ಕ್ ಕೋಸ್ಟರ್ ಮತ್ತು ಹಂಗರಿಯ ಜಿಯೋರ್ಗ್ ವಾನ್ ಹೆವಿಸೆ(Georg von Hevesy)ಎಂಬವರು ೧೯೨೩ ರಲ್ಲಿ ಕೋಪನ್ ಹೇಗನ್ ನಗರದಲ್ಲಿ ಕಂಡುಹಿಡಿದರು. ಇದಕ್ಕೆ ಹೆಸರನ್ನು ಇದೇ ನಗರಕ್ಕೆ ಲ್ಯಾಟಿನ್ ಬಾಷೆಯ ಹೆಸರಾದ " ಹಾಫ್ನಿಯ " ಎಂಬ ಶಬ್ದದಿಂದ ಇಡಲಾಗಿದೆ.ಇದನ್ನು ಅಣುರಿಯಾಕ್ಟರ್ ಗಳಲ್ಲಿ,ಕೆಲವು ಮಿಶ್ರ ಲೋಹಗಳ ಉತ್ಪಾದನೆಯಲ್ಲಿ ಬಳಸುತ್ತಾರೆ.