ಜೀವಸತ್ವವೆಂದರೆ (ವಿಟಮಿನ್) ಯಾವುದೇ ಜೀವಿಗೆ ಕೂಡಾ ಪೋಷಕಾಂಶದ ರೂಪದಲ್ಲಿ ಅಲ್ಪ ಪ್ರಮಾಣದಲ್ಲಿ ಅಗತ್ಯವಾಗಿರುವ ಸಾವಯವ ಸಂಯೋಗ.[] ಆಂಗ್ಲ ಪದ 'ವಿಟಮಿನ್‌' (vitamin) ಎಂಬುದು ಮೊದಲಿಗೆ 1800ನೇ ಶತಮಾನದ ಮೊದಲ ಭಾಗದಲ್ಲಿ 'vital‌' ಹಾಗೂ 'mineral‌' ಎಂಬೆರಡು ಪದಗಳ ಮಿಶ್ರಪದವಾಗಿ ಜನಪ್ರಿಯವಾಗಿತ್ತಾದರೂ, ಪದದ ನಿಜವಾದ ಅರ್ಥವು ಆ ಸಮಯದಿಂದೀಚೆಗೆ ಸಾಕಷ್ಟು ಬದಲಾಗಿದೆ[]. ಯಾವುದೇ ಜೀವಿಯು ಸಂಯೋಗವೊಂದನ್ನು ಸಾಕಷ್ಟು ಪ್ರಮಾಣದಲ್ಲಿ ಸಂಯೋಜಿಸಲು ಸಾಧ್ಯವಾಗದೇ ಆಹಾರದ ಮೂಲಕವೇ ಪಡೆದುಕೊಳ್ಳಬೇಕಾಗಿದ್ದರೆ ಅದನ್ನು ಜೀವಸತ್ವ ಎಂದು ಕರೆಯಲಾಗುತ್ತದೆ. ಹಾಗಾಗಿ ಪದವು ಸಂದರ್ಭಗಳು ಹಾಗೂ ನಿರ್ದಿಷ್ಟ ಜೀವಿಯ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ಆಸ್ಕಾರ್ಬಿಕ್‌ ಆಮ್ಲವು ಕೆಲ ಪ್ರಾಣಿಗಳಿಗೆ ಮಾತ್ರವೇ ಜೀವಸತ್ವ Cಯಾಗಿ ಪರಿಣಮಿಸುತ್ತದೆ, ಹಾಗೂ K, ಬಯೊಟಿನ್‌ ಮತ್ತು D ಜೀವಸತ್ವಗಳು ಮಾನವರ ಆಹಾರದಲ್ಲಿ ಕೆಲ ಸಂದರ್ಭಗಳಲ್ಲಿ ಮಾತ್ರವೇ ಅಗತ್ಯವಾಗಿರುತ್ತವೆ.[] ಜೀವಸತ್ವ ಪದವನ್ನು ಆಹಾರದಲ್ಲಿ ಬಳಸುವ ಖನಿಜಾಂಶಗಳು, ಅತ್ಯಗತ್ಯವಾದ ಕೊಬ್ಬಿನ ಅಂಶದ ಆಮ್ಲಗಳು, ಅಥವಾ ಅಗತ್ಯವಾದ ಅಮೈನೋ ಆಮ್ಲಗಳಂತಹಾ ಇತರೆ ಅತ್ಯಗತ್ಯ ಪೋಷಕಾಂಶಗಳಿಗೆ ಅನ್ವಯಿಸುವುದಿಲ್ಲ, ಹಾಗೂ ಆರೋಗ್ಯವನ್ನು ಉತ್ತಮಗೊಳಿಸುವುದಕ್ಕೆ ಸಹಾಯ ಮಾಡುವುದಾದರೂ ಹೆಚ್ಚೇನೂ ಅಗತ್ಯವಿಲ್ಲದ ಇತರೆ ಅನೇಕ ಪೋಷಕಾಂಶಗಳನ್ನು ಕೂಡಾ ಹಾಗೆಂದು ಕರೆಯಲಾಗುವುದಿಲ್ಲ.[]

Fruit and vegetables on display at a market.
ಹಣ್ಣುಗಳು ಹಾಗೂ ತರಕಾರಿಗಳು ಸಾಮಾನ್ಯವಾಗಿ ಜೀವಸತ್ವಗಳ ಉತ್ತಮ ಮೂಲಗಳು.

ಜೀವಸತ್ವಗಳನ್ನು ಅವುಗಳ ಜೈವಿಕ ಹಾಗೂ ರಾಸಾಯನಿಕ ಚಟುವಟಿಕೆಗಳ ಮೇಲೆ ವರ್ಗೀಕರಿಸಲಾಗುತ್ತದೆಯೇ ಹೊರತು ಅವುಗಳ ರಚನೆಯ ಮೇಲಲ್ಲ. ಆದ್ದರಿಂದ, ಯಾವುದೇ "ಜೀವಸತ್ವ"ವು ನಿರ್ದಿಷ್ಟ ಜೀವಸತ್ವಕ್ಕೆ ಸಂಬಂಧಿಸಿದಂತೆ ಜೈವಿಕ ಚಟುವಟಿಕೆಗಳನ್ನು ತೋರಿಸುವ ಅನೇಕ ವಿಟಾಮೆರ್‌ ಸಂಯೋಗಗಳಿಂದ ಉಂಟಾಗಿರಬಹುದು. ಅಂತಹಾ ರಾಸಾಯನಿಕಗಳನ್ನು ಅಕಾರಾದಿಯಾಗಿ ಜೀವಸತ್ವದ "ಸಾಮಾನ್ಯ ವಿವರಕ" ಶೀರ್ಷಿಕೆಗಳಡಿಯಲ್ಲಿ ವರ್ಗೀಕರಿಸಲಾಗಿದೆ ಉದಾಹರಣೆಗೆ ರೆಟಿನಲ್‌, ರೆಟಿನಾಲ್‌‌, ಮತ್ತು ನಾಲ್ಕು ಪರಿಚಿತ ಕಾರೊಟೆನಾಯ್ಡ್‌‌ಗಳಂತಹಾ ಸಂಯೋಗಗಳನ್ನು ಒಳಗೊಂಡಿರುವ "ಜೀವಸತ್ವ A".[] ವಿಟಮೆರ್‌ಗಳನ್ನು ಸಾಧಾರಣವಾಗಿ ದೇಹದಲ್ಲಿರುವ ಚಟುವಟಿಕೆಯಿಂದಿರುವ ಜೀವಸತ್ವದ ರೂಪಕ್ಕೆ ಪರಿವರ್ತಿಸಬಹುದು ಅಲ್ಲದೇ ಕೆಲವೊಮ್ಮೆ ಪರಸ್ಪರ ಪರಿವರ್ತನೆ ಕೂಡಾ ಸಾಧ್ಯವಾಗುತ್ತದೆ.

ಜೀವಸತ್ವಗಳು ವೈವಿಧ್ಯಮಯ ಜೀವರಾಸಾಯನಿಕ ಕಾರ್ಯಗಳನ್ನು ಹೊಂದಿವೆ. ಕೆಲವು ಹಾರ್ಮೋನ್‌ಗಳಂತೆ ಖನಿಜ ಚಯಾಪಚಯದ ನಿಯಂತ್ರಕದಂತೆ (e.g. ಜೀವಸತ್ವ D), ಅಥವಾ ಕೋಶ ಹಾಗೂ ಅಂಗಾಂಶಗಳ ಬೆಳವಣಿಗೆ ಮತ್ತು ಪ್ರಭೇದಕರಣದ ನಿಯಂತ್ರಕದಂತೆ (e.g. ಜೀವಸತ್ವ Aದ ಕೆಲವು ರೂಪಗಳು) ಕಾರ್ಯನಿರ್ವಹಿಸುವುದು. ಇತರೆ ರಾಸಾಯನಿಕಗಳು ಆಕ್ಸಿಡೀಕಾರಕವಿರೋಧಿಯಾಗಿ (e.g. ಜೀವಸತ್ವ E ಹಾಗೂ ಕೆಲವೊಮ್ಮೆ ಜೀವಸತ್ವ C) ಕಾರ್ಯನಿರ್ವಹಿಸುತ್ತವೆ.[] ಹೆಚ್ಚಿನ ಸಂಖ್ಯೆಯ ಜೀವಸತ್ವಗಳು (e.g. B ಸಂಕೀರ್ಣ ಜೀವಸತ್ವಗಳು ) ಕಿಣ್ವ ಸಹವರ್ತಿ ಜೈವಿಕ-ಅಣುಗಳ (ಸಹಕಿಣ್ವಗಳು) ಪೂರ್ವಗಾಮಿಯಾಗಿ ಕಾರ್ಯನಿರ್ವಹಿಸಿ, ಚಯಾಪಚಯದಲ್ಲಿ ವೇಗವರ್ಧಕಗಳಾಗಿ ಹಾಗೂ ತಲಾಧಾರಗಳಾಗಿ ವರ್ತಿಸಲು ಸಹಾಯಕವಾಗಿರುತ್ತವೆ. ವೇಗವರ್ಧಕದ ಭಾಗವಾಗಿ ವರ್ತಿಸುವಾಗ, ಜೀವಸತ್ವಗಳು ಕಿಣ್ವಗಳು ಪೂರಕ ವರ್ಗಗಳ ಭಾಗವಾಗಿ ಬಿಗಿಯಾಗಿ ಬಂಧಿಸಲ್ಪಟ್ಟಿರಬಹುದಾಗಿದೆ: ಉದಾಹರಣೆಗೆ, ಕೊಬ್ಬಿನಾಂಶದ ಆಮ್ಲಗಳನ್ನು ತಯಾರಿಸುವಲ್ಲಿ ಬಳಸಲಾಗುವ ಕಿಣ್ವಗಳು ಬರೋಟಿನ್‌‌ ಹೊಂದಿರುತ್ತವೆ. ಜೀವಸತ್ವಗಳು ಕಿಣ್ವ ವೇಗವರ್ಧಕಗಳಾದ ಸಹಕಿಣ್ವಗಳಿಗೆ ಕೇವಲ ಅಲ್ಪಬಿಗಿತದಲ್ಲಿ ಬಂಧಿಸಲ್ಪಟ್ಟಿರಬಹುದಾಗಿರುತ್ತದೆ, ಇವುಗಳ ಬೇರ್ಪಟ್ಟ ಅಣುಗಳು ರಾಸಾಯನಿಕ ವರ್ಗಗಳನ್ನು ಅಥವಾ ಎಲೆಕ್ಟ್ರಾನ್‌ಗಳನ್ನು ಅಣುಗಳ ನಡುವೆ ಸಾಗಿಸುವ ಕಾರ್ಯವನ್ನು ಮಾಡುತ್ತವೆ. ಉದಾಹರಣೆಗೆ, ಫಾಲಿಕ್‌ ಆಮ್ಲವು ಇಂಗಾಲ ವರ್ಗದ ಅನೇಕ ರೂಪಗಳನ್ನು – ಮೀಥೈಲ್‌‌, ಫಾರ್ಮೈಲ್‌ ಮತ್ತು ಮಿಥೈಲೀನ್‌‌ಗಳನ್ನು - ಕೋಶಗಳಲ್ಲಿ ಸಾಗಿಸುತ್ತದೆ. ಕಿಣ್ವ ಪ್ರತಿಕ್ರಿಯೆಗಳಿಗೆ ಸಹವರ್ತಿಯಾಗಿರುವುದು ಜೀವಸತ್ವಗಳ' ಹೆಚ್ಚು ಪರಿಚಿತ ಕಾರ್ಯವಾಗಿದ್ದರೂ ಇತರೆ ಜೀವಸತ್ವ ಕಾರ್ಯಗಳೂ ಸಹಾ ಅಷ್ಟೇ ಪ್ರಮುಖವಾಗಿವೆ.[]

1900ನೇ ಶತಮಾನದವರೆಗೂ, ಜೀವಸತ್ವಗಳನ್ನು ಕೇವಲ ಆಹಾರದ ಮೂಲಕ ಮಾತ್ರವೇ ಪಡೆಯಲಾಗುತ್ತಿದ್ದು, ಆಹಾರ ಶೈಲಿಯ ಬದಲಾವಣೆಯು(ಉದಾಹರಣೆಗೆ, ನಿರ್ದಿಷ್ಟ ಬೆಳೆಗಳ ಋತುವಿನ ಸಮಯದಲ್ಲಿ ಆಗಬಹುದಾದಂತಹವು) ಸೇವಿಸಿದ ಜೀವಸತ್ವಗಳ ವೈವಿಧ್ಯ ಹಾಗೂ ಪ್ರಮಾಣವನ್ನು ಬದಲಿಸುವ ಸಾಧ್ಯತೆ ಹೊಂದಿದ್ದವು. ಜೀವಸತ್ವಗಳನ್ನು ರಾಸಾಯನಿಕ ಉತ್ಪನ್ನಗಳಾಗಿ ಉತ್ಪಾದಿಸಿದ ಅಲ್ಪದರದ ಗುಳಿಗೆಗಳ ರೂಪದಲ್ಲಿ ಅನೇಕ ದಶಕಗಳಿಂದ ಲಭ್ಯವಿದ್ದು,[] ಆಹಾರದಲ್ಲಿನ ಸೇವನೆಯ ಕೊರತೆಗಳನ್ನು ನೀಗಿಸುವ ಮಾರ್ಗವಾಗಿ ಉಪಯುಕ್ತವಾಗಿವೆ.

ಇತಿಹಾಸ

ಬದಲಾಯಿಸಿ
ಜೀವಸತ್ವಗಳ ಆವಿಷ್ಕಾರ ಹಾಗೂ ಅವುಗಳ ಆಹಾರ ಮೂಲಗಳು
ಆವಿಷ್ಕಾರವಾದ ವರ್ಷ ಜೀವಸತ್ವಗಳು ಆಹಾರ ಮೂಲ
1909 ಜೀವಸತ್ವ A (ರೆಟಿನಾಲ್‌) ಕಾಡ್‌ ಮೀನಿನ ಯಕೃತ್ತಿನ ತೈಲ
1912 ಜೀವಸತ್ವ B1 (ಥಿಯಾಮೈನ್‌‌) ಅಕ್ಕಿ ತವುಡು
1912 ಜೀವಸತ್ವ C (ಆಸ್ಕಾರ್ಬಿಕ್‌ ಆಮ್ಲ ) ನಿಂಬೆಹಣ್ಣುಗಳು
1918 ಜೀವಸತ್ವ D (ಕ್ಯಾಲ್ಷಿಫೆರಾಲ್‌) ಕಾಡ್‌ ಮೀನಿನ ಯಕೃತ್ತಿನ ತೈಲ
1920 ಜೀವಸತ್ವ B2 (ರಿಬೋಫ್ಲಾವಿನ್‌‌) ಮೊಟ್ಟೆಗಳು
1922 ಜೀವಸತ್ವ E (ಟೊಕೊಫೆರಾಲ್‌) ಗೋಧಿ ಮೊಳಕೆಯ ತೈಲ,
ಅಂಗರಾಗ ಮತ್ತು ಯಕೃತ್ತು
1926 ಜೀವಸತ್ವ B12 (ಸೈಯಾನೊಕೊಬಾಲಮಿನ್‌) ಯಕೃತ್ತು
1929 ಜೀವಸತ್ವ K (ಫೈಲ್ಲೋಕ್ವಿನೊನ್‌) ಕುದುರೆ ಮೇವಿನ ಸೊಪ್ಪು
1931 ಜೀವಸತ್ವ B5 (ಪಾಂಟೊಥೆನಿಕ್‌‌ ಆಮ್ಲ ) ಯಕೃತ್ತು
1931 ಜೀವಸತ್ವ B7 (ಬಯೊಟಿನ್‌‌) ಯಕೃತ್ತು
1934 ಜೀವಸತ್ವ B6 (ಪೈರಿಡಾಕ್ಸಿನ್‌‌) ಅಕ್ಕಿ ತವುಡು
1936 ಜೀವಸತ್ವ B3 (ನಿಯಾಸಿನ್‌‌) ಯಕೃತ್ತು
1941 ಜೀವಸತ್ವ B9 (ಫಾಲಿಕ್‌‌ ಆಮ್ಲ ) ಯಕೃತ್ತು

ಕಳೆದ ಶತಮಾನದ ಕೊನೆಯವರೆಗೆ ಆಹಾರ ಪದಾರ್ಥ ಒಂದರ ಪೋಶಕ ಗುಣವನ್ನು ಅಳೆಯಲು, ಅದರಲ್ಲಿರುವ ಶರ್ಕರ, ಪ್ರೋಟೀನು, ಮತ್ತು ಕೊಬ್ಬು ಇವುಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.ಅದಕ್ಕೆ ಕಾರಣ ಆಹಾರ ಪದಾರ್ಥವೊಂದರಲ್ಲಿರುವ ಈ ಘಟಕಗಳ ಪ್ರಮಾಣದೊಂದಿಗೆ ಅದರಲ್ಲಿರುವ ನೀರು ಮತ್ತು ಖನಿಜ ವಸ್ತುಗಳ ಪ್ರಮಾಣಗಳನ್ನು ಸೇರಿಸಿದಾಗ ಆಗುವ ಒಟ್ಟು ಮೊತ್ತ ಆಹಾರ ಪದಾರ್ಥದ ಒಟ್ಟು ತೂಕದ ಅತಿ ಹತ್ತಿರಕ್ಕೆ ಬರುತ್ತಿತ್ತು. ಆದರೆ ಆಹಾರ ಪದಾರ್ಥವೊಂದರ ಘಟಕಗಳು ಇವಿಷ್ಟೆ ಅಲ್ಲ., ಅದರಲ್ಲಿ ಈ ಘಟಕಗಳಿಗಿಂತ ರಾಸಾಯಿನಿಕವಾಗಿ ಭಿನ್ನವಾದ ಕೆಲವು ಸಾವಯವ ಸಂಯುಕ್ತಗಳೂ ಅತ್ಯಲ್ಪ ಪ್ರಮಾಣದಲ್ಲಿರುತ್ತವೆ ಅನ್ನುವುದನ್ನು ಈ ಶತಮಾನದ ಪ್ರಾರಂಭದಲ್ಲಿ ಕಂಡು ಹಿಡಿಯಲಾಯಿತು. ಈ ರಾಸಾಯನಿಕ ಸಂಯುಕ್ತಗಳೇ ವಿಟಮಿನ್ನುಗಳು.

ಕೆಲವೊಂದು ಆಹಾರಪದಾರ್ಥಗಳನ್ನು ಸೇವಿಸುವುದರಿಂದಾಗುವ ಉಪಯೋಗಗಳನ್ನು ಜೀವಸತ್ವಗಳನ್ನು ಗುರುತಿಸುವ ಬಹುಕಾಲ ಮುನ್ನವೇ ಗುರುತಿಸಲಾಗಿತ್ತು. ಪ್ರಾಚೀನ ಈಜಿಪ್ಟ್‌‌ನವರು ಈಗ ಜೀವಸತ್ವ Aನ ಕೊರತೆಯಿಂದುಂಟಾಗುವ ರೋಗವೆಂದು ಗೊತ್ತಾಗಿರುವ ಇರುಳುಗಣ್ಣು ರೋಗವನ್ನು ಪಿತ್ತಜನಕಾಂಗವನ್ನು ಸೇವಿಸಿ ಗುಣಪಡಿಸಲು ಸಾಧ್ಯವೆಂದು ಪತ್ತೆಹಚ್ಚಿದ್ದರು.[] ನವೋದಯ ಕಾಲದಲ್ಲಿ ಉಂಟಾದ ಸಾಗರ ಜಲಪರ್ಯಟನದ ಉನ್ನತಿಯು ತಾಜಾ ಹಣ್ಣುಗಳ ಹಾಗೂ ತರಕಾರಿಗಳ ದೀರ್ಘಕಾಲೀನ ಅಲಭ್ಯತೆಗಳಿಗೆ ಕಾರಣವಾಗಿ ಜೀವಸತ್ವ ಕೊರತೆಯಿಂದುಂಟಾಗುವ ರೋಗಗಳ ಹಾವಳಿ ಹಡಗಿನ ಸಿಬ್ಬಂದಿಯಲ್ಲಿ ಸಾಮಾನ್ಯವೆನಿಸುವಂತೆ ಮಾಡಿತು.[೧೦]

1749ರಲ್ಲಿ, ಸ್ಕಾಟಿಷ್‌ ಶಸ್ತ್ರಚಿಕಿತ್ಸಾತಜ್ಞ ಜೇಮ್ಸ್‌‌ ಲಿಂಡ್‌‌ ನಿಂಬೆಕುಲದ ಆಹಾರಗಳು ವಿಶೇಷತಃ ಕೊಲ್ಲಾಜೆನ್‌ ಸರಿಯಾಗಿ ರೂಪುಗೊಳ್ಳದೇ ಗಾಯಗಳ ಮಾಯುವಿಕೆಯನ್ನು ನಿಧಾನಗೊಳಿಸುವ, ಒಸಡಿನಿಂದ ರಕ್ತ ಸೋರುವಿಕೆಗೆ, ವಿಪರೀತ ನೋವು ಹಾಗೂ ಸಾವಿಗೆ ಕಾರಣವಾಗಬಲ್ಲ ರಕ್ತಪಿತ್ತವ್ಯಾಧಿಯನ್ನು ತಡೆಹಿಡಿಯಲು ಸಹಾಯಕ ಎಂದು ಪತ್ತೆಹಚ್ಚಿದರು.[] 1753ರಲ್ಲಿ, ಲಿಂಡ್‌ ರಕ್ತಪಿತ್ತವ್ಯಾಧಿಯನ್ನು ತಡೆಗಟ್ಟಲು ನಿಂಬೆಹಣ್ಣುಗಳನ್ನು ಹಾಗೂ ಸುಣ್ಣವನ್ನು ಬಳಸಲು ಶಿಫಾರಸು ಮಾಡಿದ್ದ ತಮ್ಮ ಟ್ರೀಟಿಸ್‌ ಆನ್‌ ದ ಸ್ಕರ್ವಿ ಎಂಬ ಗ್ರಂಥವನ್ನು ಪ್ರಕಟಿಸಿದರು, ಈ ಸಲಹೆಯನ್ನು ಬ್ರಿಟಿಷ್‌ ರಾಯಲ್‌ ನೌಕಾಪಡೆಯು ಅಳವಡಿಸಿಕೊಂಡಿತು. ಇದರಿಂದಾಗಿ ಆ ಸಂಸ್ಥೆಯ ನಾವಿಕರನ್ನು ಲೈಮೆ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. ಆದಾಗ್ಯೂ ಲಿಂಡ್‌ರ ಆವಿಷ್ಕಾರವನ್ನು 19ನೇ ಶತಮಾನದಲ್ಲಿ ಕೈಗೊಂಡಿದ್ದ ರಾಯಲ್‌ ನೌಕಾಪಡೆಯ ಉತ್ತರ ಧೃವದ ಪರ್ಯಟನೆಯಲ್ಲಿನ ವ್ಯಕ್ತಿಗಳು ಇದನ್ನು ವ್ಯಾಪಕವಾಗಿ ಅಂಗೀಕರಿಸಿರಲಿಲ್ಲ, ಪ್ರಯಾಣದಲ್ಲಿರುವಾಗ ಉತ್ತಮ ನೈರ್ಮಲ್ಯದ ಕಾಪಾಡಿಕೊಳ್ಳುವಿಕೆ, ನಿಯಮಿತ ಕಸರತ್ತು, ಹಾಗೂ ಸಿಬ್ಬಂದಿಯು ನೈತಿಕತೆಯನ್ನು ಕಾಪಾಡಿಕೊಂಡರೆ ರಕ್ತಪಿತ್ತವ್ಯಾಧಿಯನ್ನು ತಡೆಗಟ್ಟಬಹುದಲ್ಲದೇ ಕೇವಲ ತಾಜಾ ಆಹಾರ ಪದ್ಧತಿಯಿಂದಲ್ಲ ಎಂಬುದು ಅವರ ವ್ಯಾಪಕ ಭಾವನೆಯಾಗಿತ್ತು.[] ಇದರ ಪರಿಣಾಮವಾಗಿ ಉತ್ತರ ಧೃವದ ಪರ್ಯಟನೆಗಳಲ್ಲಿ ರಕ್ತಪಿತ್ತವ್ಯಾಧಿ ಹಾಗೂ ಇನ್ನಿತರ ಕೊರತೆಯಿಂದುಂಟಾಗುವ ರೋಗಗಳ ಉಪಟಳ ಮುಂದುವರೆಯಿತು. 20ನೇ ಶತಮಾನದ ಆದಿಯಲ್ಲಿ ರಾಬರ್ಟ್‌ ಫಾಲ್ಕನ್‌ ಸ್ಕಾಟ್‌‌ ಅಂಟಾರ್ಟಿಕ್‌ಗೆ ಎರಡು ಬಾರಿ ಪರ್ಯಟನೆ ಮಾಡಿದಾಗ, ಬಳಕೆಗೆ ಬಂದ ವೈದ್ಯಕೀಯ ಸಿದ್ಧಾಂತದ ಪ್ರಕಾರ ರಕ್ತಪಿತ್ತವ್ಯಾಧಿಯು "ದೋಷಪೂರಿತ" ಡಬ್ಬಿಯಲ್ಲಿ ಇರಿಸಿದ ಆಹಾರ ಸೇವನೆಯಿಂದಾಗುತ್ತದೆ ಎಂಬುದಾಗಿತ್ತು.[]

18ನೇ ಶತಮಾನದ ಕೊನೆಗೆ ಹಾಗೂ 19ನೇ ಶತಮಾನದ ಆರಂಭಿಕ ಅವಧಿಯಲ್ಲಿ ನಡೆದ ಕೊರತೆಯ ಕುರಿತ ಅಧ್ಯಯನಗಳು, ವಿಜ್ಞಾನಿಗಳು ಅನೇಕ ಜೀವಸತ್ವಗಳನ್ನು ಪ್ರತ್ಯೇಕಿಸಿ ಗುರುತಿಸಲು ಸಾಧ್ಯವಾಗುವಂತೆ ಮಾಡಿದವು. ಮೊದಲಿಗೆ ಮೀನಿನ ತೈಲದಲ್ಲಿನ ಮೇದಸ್ಸನ್ನು ಇಲಿಗಳಲ್ಲಿ ಕಂಡುಬರುವ ಬಾಲಗ್ರಹಬಾಧೆಯನ್ನು ಗುಣಪಡಿಸಲು ಬಳಸಲಾಗುತ್ತಿತ್ತು, ಹಾಗೂ ಕೊಬ್ಬಿನಲ್ಲಿ-ಕರಗಬಲ್ಲ ಪೋಷಕಾಂಶವನ್ನು "ಆಂಟಿರ್ಯಾಚಿಟಿಕ್‌‌ A" ಎಂದು ಕರೆಯಲಾಯಿತು. ಆದ್ದರಿಂದ, ಬಾಲಗ್ರಹ ಬಾಧೆಯನ್ನು ಗುಣಪಡಿಸಿ ಪ್ರಥಮ ಪ್ರತ್ಯೇಕಗೊಳಿಸಲ್ಪಟ್ಟ "ಜೀವಸತ್ವ" ಜೈವಿಕ ಕಾರ್ಯಶೈಲಿಯನ್ನು ಮೊದಲಿಗೆ "ಜೀವಸತ್ವ A" ಎಂದು ಕರೆಯಲಾಯಿತಾದರೂ, ಈ ಸಂಯೋಗದ ಜೈವಿಕ ಕಾರ್ಯಶೈಲಿಯನ್ನು ಗೊಂದಲವಾಗುವ ರೀತಿ ಪ್ರಸ್ತುತ ಜೀವಸತ್ವ D ಎಂದು ಕರೆಯಲಾಗುತ್ತಿದೆ.[೧೧] 1881ರಲ್ಲಿ, ರಷ್ಯಾದ ಶಸ್ತ್ರಚಿಕಿತ್ಸಾತಜ್ಞ ನಿಕೋಲಾಯ್‌ ಲ್ಯೂನಿನ್‌ ರಕ್ತಪಿತ್ತವ್ಯಾಧಿಯ ಪರಿಣಾಮಗಳನ್ನು ಈಗಿನ ಎಸ್ಟೋನಿಯಾದ ಟರ್ಟು ವಿಶ್ವವಿದ್ಯಾಲಯದಲ್ಲಿದ್ದಾಗ ಅಧ್ಯಯನ ಮಾಡಿದರು.[೧೨] ಪ್ರೊಟೀನ್‌‌ಗಳು, ಕೊಬ್ಬಿನಂಶಗಳು, ಅಂಗಾರಗಳು, ಹಾಗೂ ಲವಣಗಳೆಂಬ ಆ ಸಮಯದಲ್ಲಿ ತಿಳಿದಿದ್ದ ಹಾಲಿನ ಎಲ್ಲಾ ಪ್ರತ್ಯೇಕ ಅಂಶಗಳ ಕೃತಕ ಮಿಶ್ರಣವನ್ನು ಇಲಿಗಳಿಗೆ ಆಹಾರವಾಗಿ ನೀಡಿದರು. ಪ್ರತ್ಯೇಕ ಘಟಕಗಳನ್ನು ಮಾತ್ರವೇ ಸ್ವೀಕರಿಸಿದ ಇಲಿಗಳು ಸತ್ತರೆ, ಹಾಲನ್ನೇ ನೇರವಾಗಿ ಸ್ವೀಕರಿಸಿದ ಇಲಿಗಳು ಸಾಮಾನ್ಯವಾಗಿ ಬೆಳೆದವು. "ಹೀಗಾಗಿ ಹಾಲಿನಂಥಾ ನೈಸರ್ಗಿಕ ಆಹಾರವು ಈಗಾಗಲೇ ಗೊತ್ತಿರುವ ಪ್ರಮುಖ ಘಟಕಗಳಲ್ಲದೇ, ಅಲ್ಪ ಪ್ರಮಾಣದಲ್ಲಿ ಜೀವಕ್ಕೆ ಅಗತ್ಯವಾದ ಕೆಲ ಅಜ್ಞಾತ ವಸ್ತುಗಳನ್ನು ಹೊಂದಿರಲೇಬೇಕು." ಎಂಬ ತೀರ್ಮಾನಕ್ಕೆ ಅವರು ಬಂದರು.[೧೨] ಆದಾಗ್ಯೂ, ಅವರು ಪಡೆದ ಫಲಿತಾಂಶಗಳನ್ನು ಪುನರಾವರ್ತಿಸಲು ವಿಫಲರಾದ ಕಾರಣ ಅವರ ಅಭಿಪ್ರಾಯಗಳನ್ನು ಇತರೆ ಸಂಶೋಧಕರು ತಿರಸ್ಕರಿಸಿದರು. ಒಂದೇ ವ್ಯತ್ಯಾಸವೆಂದರೆ ಅವರು ಸಿಹಿಬೀಟ್‌ ಗಡ್ಡೆಯ ಸಕ್ಕರೆ (ಸುಕ್ರೋಸ್‌‌) ಬಳಸಿದರೆ, ಜೀವಸತ್ವ Bಯನ್ನು ಅಲ್ಪಪ್ರಮಾಣದಲ್ಲಿ ತಾನೇ ಹೊಂದಿರುವ ಇತರರು ಹಾಲು ಸಕ್ಕರೆಯನ್ನು (ಲ್ಯಾಕ್ಟೋಸ್‌‌) ಬಳಸಿದ್ದರು.

 
ಪ್ರಾಚೀನ ಈಜಿಪ್ಟ್‌ನ ಜನರು ರೋಗಿಗೆ ಯಕೃತ್ತನ್ನು ಸೇವಿಸಲು ನೀಡುವುದರಿಂದ (ಹಿಂದೆ, ಬಲ) ಇರುಳುಗಣ್ಣನ್ನು ತಡೆಗಟ್ಟಲು ಸಾಧ್ಯವೆಂದು ತಿಳಿದಿದ್ದರು.

ನಯಗೊಳಿಸಿದ ಬಿಳಿ ಅಕ್ಕಿಯು ಮಧ್ಯಮ ವರ್ಗದ ಸಾಮಾನ್ಯ ಪ್ರಧಾನ ಆಹಾರವಾಗಿರುವ ಪೂರ್ವ ಏಷ್ಯಾದಲ್ಲಿ, ಜೀವಸತ್ವ B1ರ ಕೊರತೆಯಿಂದ ಬರುವ ಬೆರಿಬೆರಿ ರೋಗವು ಪದೇಪದೇ ದಾಳಿಯಿಡುತ್ತಿತ್ತು. 1884ರಲ್ಲಿ, ಟಕಾಕಿ ಕನೆಹಿರೋ, ಎಂಬ ಬ್ರಿಟಿಷರಿಂದ ತರಬೇತಿ ಪಡೆದ ರಾಜವಂಶೀಯ ಜಪಾನೀ ನೌಕಾಪಡೆಯ ವೈದ್ಯರು, ಬೆರಿಬೆರಿ ರೋಗವು ಕೇವಲ ಅಕ್ಕಿಯ ಆಹಾರವನ್ನು ಮಾತ್ರ ಸೇವಿಸುವ ಕೆಳಕ್ರಮಾಂಕದ ಸಿಬ್ಬಂದಿಯಲ್ಲಿ ಮಾತ್ರ ಪದೇಪದೇ ಬರುತ್ತಿದ್ದು, ಪಾಶ್ಚಿಮಾತ್ಯ ಶೈಲಿಯ ಆಹಾರವನ್ನು ಸೇವಿಸುತ್ತಿದ್ದ ನೌಕಾಪಡೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬರುತ್ತಿರಲಿಲ್ಲ ಎಂಬುದನ್ನು ಗಮನಿಸಿದರು. ಜಪಾನೀ ನೌಕಾಪಡೆಯ ಸಹಕಾರದೊಂದಿಗೆ ಎರಡು ಯುದ್ಧನೌಕೆಗಳ ಸಿಬ್ಬಂದಿಯ ಮೇಲೆ ಆತ ; ಮಾಂಸ, ಮೀನು, ಜವೆಗೋದಿ, ಅಕ್ಕಿ, ಹಾಗೂ ಹುರುಳಿಗಳನ್ನು ಒಳಗೊಂಡ ಆಹಾರವನ್ನು ಒಂದರ ಸಿಬ್ಬಂದಿಗೆ ನೀಡಿದರೆ ಮತ್ತೊಂದರ ಸಿಬ್ಬಂದಿಗೆ ಕೇವಲ ಬಿಳಿ ಅಕ್ಕಿಯ ಆಹಾರ ಮಾತ್ರ ನೀಡಿ ಪ್ರಯೋಗ ನಡೆಸಿದರು. ಕೇವಲ ಬಿಳಿ ಅಕ್ಕಿಯ ಆಹಾರ ಸೇವಿಸಿದ ಗುಂಪಿನ 161 ಸಿಬ್ಬಂದಿ ಬೆರಿಬೆರಿ ಪೀಡಿತರಾಗಿ 25 ಮಂದಿ ಸಾವು ಕಂಡರೆ, ಮತ್ತೊಂದು ಗುಂಪಿನಲ್ಲಿ ಕೇವಲ 14 ಮಂದಿ ಬೆರಿಬೆರಿ ಪೀಡಿತರಾಗಿ ಯಾವುದೇ ಸಾವು ಸಂಭವಿಸಿರಲಿಲ್ಲ. ಇದರಿಂದಾಗಿ ಟಕಾಕಿ ಮತ್ತು ಜಪಾನೀ ನೌಕಾಪಡೆಯವರು ಬೆರಿಬೆರಿಯ ಮೂಲಕಾರಣ ಆಹಾರಪದ್ಧತಿಯೇ ಎಂದರಿತರೂ, ತಪ್ಪಾಗಿ ಅಗತ್ಯ ಪ್ರಮಾಣದ ಪ್ರೋಟೀನ್‌ನಿಂದಾಗಿ ಅದನ್ನು ತಡೆಯಲಾಗಿತ್ತು ಎಂಬ ಅಭಿಪ್ರಾಯಕ್ಕೂ ಬಂದರು.[೧೩] 1897ರಲ್ಲಿ ಕೋಳಿಗಳಿಗೆ ನಯಗೊಳಿಸಿದ ವಿಧದ ಬದಲಿಗೆ ನಯಗೊಳಿಸದ ಅಕ್ಕಿಯನ್ನು ಕೊಡುವುದರ ಮೂಲಕ ಕೋಳಿಗಳಲ್ಲಿ ಬೆರಿಬೆರಿ ರೋಗವನ್ನು ತಡೆಗಟ್ಟಬಹುದು ಎಂಬುದನ್ನು ಪತ್ತೆಹಚ್ಚಿದ ಕ್ರಿಶ್ಚಿಯಾನ್‌ ಐಜ್ಕ್‌ಮನ್‌ ಎಂಬಾತ, ಆಹಾರ ಪದ್ಧತಿಯ ಕೊರತೆಯಿಂದಾಗುವ ರೋಗಗಳ ಬಗ್ಗೆ ಮತ್ತಷ್ಟು ಅಧ್ಯಯನಗಳನ್ನು ನಡೆಸಿದರು. ಅದರ ಮುಂದಿನ ವರ್ಷ, ಫ್ರೆಡೆರಿಕ್‌ ಹಾಪ್‌ಕಿನ್ಸ್‌ ಮಾನವ ದೇಹದ ಚಟುವಟಿಕೆಗಳಿಗೆ ಅಗತ್ಯವಾದ ಪ್ರೋಟೀನ್‌ಗಳು, ಅಂಗಾರಗಳು, ಕೊಬ್ಬಿನಂಶಗಳು, ಇತರ ವಸ್ತುಗಳೊಂದಿಗೆ ಕೆಲ ಆಹಾರಗಳು "ಸಹಕಾರಿ ಅಂಶಗಳನ್ನು" ಸಹಾ ಹೊಂದಿರುತ್ತವೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದರು.[] ಹಾಪ್ಕಿನ್ಸ್‌ ಹಾಗೂ ಐಜ್ಕ್‌ಮನ್‌ರಿಗೆ 1929ರಲ್ಲಿ ಅನೇಕ ಜೀವಸತ್ವಗಳನ್ನು ಆವಿಷ್ಕರಿಸಿದ್ದಕ್ಕೆ ಶರೀರಶಾಸ್ತ್ರ ಅಥವಾ ವೈದ್ಯಕೀಯದ ನೊಬೆಲ್‌ ಪ್ರಶಸ್ತಿ ನೀಡಲಾಯಿತು.[೧೪]

1910ರಲ್ಲಿ, ಜಪಾನೀ ವಿಜ್ಞಾನಿ ಉಮೆಟಾರೊ ಸುಜುಕಿಯವರು ಅಕ್ಕಿ ತವುಡಿನಿಂದ ನೀರಿನಲ್ಲಿ ಕರಗಬಲ್ಲ ಸೂಕ್ಷ್ಮಪೋಷಕಾಂಶಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿ ಅದಕ್ಕೆ ಅಬೆರಿಕ್‌ ಆಮ್ಲ ಎಂದು ಹೆಸರಿಸಿದರು. ಜಪಾನೀ ವೈಜ್ಞಾನಿಕ ಪತ್ರಿಕೆಯಲ್ಲಿ ಈ ಆವಿಷ್ಕಾರವನ್ನು ಅವರು ಪ್ರಕಟಿಸಿದರು.[೧೫] ಜರ್ಮನ್‌ ಭಾಷೆಗೆ ಈ ಲೇಖನ ತರ್ಜುಮೆಗೊಂಡಾಗ, ಭಾಷಾಂತರದಲ್ಲಿ ಇದೊಂದು ಹೊಸದಾಗಿ ಪತ್ತೆಯಾದ ಪೋಷಕಾಂಶ ಎಂದು ಮೂಲ ಜಪಾನೀ ಲೇಖನದಲ್ಲಿ ಸೂಚಿಸಲಾಗಿದ್ದ ಅಂಶ ದಾಖಲಾಗದ ಕಾರಣ, ಅವರ ಈ ಆವಿಷ್ಕಾರ ಜನಪ್ರಿಯಗೊಳ್ಳಲಿಲ್ಲ. 1912ರಲ್ಲಿ ಪೋಲಿಷ್‌ ಜೈವಿಕ ವಿಜ್ಞಾನಿ ಕಾಜಿಮಿಯೆರ್ಜ್‌ ಫಂಕ್‌ ಎಂಬುವವರು ಸೂಕ್ಷ್ಮ ಪೋಷಕಾಂಶಗಳ ಅದೇ ಸಂಯೋಗವನ್ನು ಪ್ರತ್ಯೇಕಿಸಿ, ಅದನ್ನು "ಜೀವಸತ್ವ e" ("ಪ್ರಮುಖ ಅಮೈನ್‌" ಎಂಬುದರ ಬೆರಕೆ ಪದ) ಎಂದು ಕರೆಯಬಹುದೆಂದು ಸಲಹೆ ನೀಡಿದ್ದರು.[೧೬] ಈ ಹೆಸರು ಅಲ್ಪಸಮಯದಲ್ಲೇ ಹಾಪ್‌ಕಿನ್ಸ್‌ರ' "ಸಹಕಾರಿ ಅಂಶಗಳು" ಎಂಬುದಕ್ಕೆ ಪರ್ಯಾಯಪದವಾಗುವ ಹಾಗಿತ್ತು, ಎಲ್ಲಾ ಜೀವಸತ್ವಗಳು ಅಮೈನ್‌‌ಗಳೇ ಆಗಿರಬೇಕಿಲ್ಲ ಎಂಬುದು ತಿಳಿಯುವ ಹೊತ್ತಿಗೆ ಈ ಪದವು ಸರ್ವವ್ಯಾಪಿಯಾಗಿತ್ತು. C ಜೀವಸತ್ವವು ಯಾವುದೇ ಅಮೈನ್‌ ಅಂಶ ಹೊಂದಿಲ್ಲವೆಂದು ಗೊತ್ತಾದ ನಂತರ 1920ರಲ್ಲಿ, ಜ್ಯಾಕ್‌ ಸೆಸಿಲ್‌ ಡ್ರಮ್ಮಂಡ್‌ ಎಂಬುವವರು "ಅಮೈನ್‌"ನ ಉಲ್ಲೇಖವನ್ನು ನಗಣ್ಯಗೊಳಿಸಲು ಕೊನೆಯ "e" ಅಕ್ಷರವನ್ನು ಬಿಟ್ಟುಬಿಡಬಹುದೆಂದು ಸೂಚಿಸಿದರು.[೧೩]

1931ರಲ್ಲಿ, ಆಲ್ಬರ್ಟ್‌ ಸ್ಝೆಂಟ್‌‌-ಗ್ಯೋರ್ಗೈ ಹಾಗೂ ಸಹಸಂಶೋಧಕ ಜೋಸೆಫ್‌‌ ಸ್ವಿರ್ಬೆಲಿಯವರು ರಕ್ತಪಿತ್ತರೋಗ-ವಿರೋಧಿ ಚಟುವಟಿಕೆಯನ್ನು ಗುರುತಿಸಿ "ಹೆಕ್ಸುರೋನಿಕ್‌‌ ಆಮ್ಲ"ವು ವಾಸ್ತವವಾಗಿ ಜೀವಸತ್ವ C ಎಂದು ನಿರ್ಣಯಿಸಿದರು. 1937ರಲ್ಲಿ, ಸ್ಝೆಂಟ್‌‌-ಗ್ಯೋರ್ಗೈರ ಆವಿಷ್ಕಾರಕ್ಕಾಗಿ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯದ ನೊಬೆಲ್‌ ಪ್ರಶಸ್ತಿ ನೀಡಲಾಯಿತು. 1943ರಲ್ಲಿ ಎಡ್ವರ್ಡ್‌ ಅಡೆಲ್ಬರ್ಟ್‌ ಡಾಯ್ಸಿ ಹಾಗೂ ಹೆನ್ರಿಕ್‌ ಡಾಮ್‌ ಎಂಬೀರ್ವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯದ ನೊಬೆಲ್‌ ಪ್ರಶಸ್ತಿಯನ್ನು ಅವರು ಜೀವಸತ್ವ Kಯನ್ನು ಹಾಗೂ ಅದರ ರಾಸಾಯನಿಕ ರಚನೆಯನ್ನು ಆವಿಷ್ಕರಿಸಿದ್ದಕ್ಕೆ ನೀಡಲಾಯಿತು. 1967ರಲ್ಲಿ, ಜಾರ್ಜ್‌ ವಾಲ್ಡ್‌ ಶಾರೀರಿಕ ಪ್ರಕ್ರಿಯೆಯಲ್ಲಿ A ಜೀವಸತ್ವವು ನೇರವಾಗಿ ಭಾಗವಹಿಸಬಲ್ಲದು ಎಂಬ ಆವಿಷ್ಕಾರಕ್ಕೆ (ರಾಗ್ನರ್‌‌ ಗ್ರಾನಿಟ್‌ ಹಾಗೂ ಹಾಲ್ಡನ್‌‌ ಕೆಫ್ಫರ್‌ ಹಾರ್ಟ್‌ಲೈನ್‌ರೊಂದಿಗೆ) ನೊಬೆಲ್‌ ಪ್ರಶಸ್ತಿ ಪಡೆದರು.[೧೪]

ಮಾನವರಲ್ಲಿ

ಬದಲಾಯಿಸಿ

ಜೀವಸತ್ವಗಳನ್ನು ನೀರಿನಲ್ಲಿ-ಕರಗಬಲ್ಲ ಅಥವಾ ಕೊಬ್ಬಿನಲ್ಲಿ ಕರಗಬಲ್ಲವೆಂದು ವರ್ಗೀಕರಿಸಲಾಗಿದೆ. ಮಾನವರಲ್ಲಿ 13 ಜೀವಸತ್ವಗಳಿವೆ : 4 ಕೊಬ್ಬಿನಲ್ಲಿ-ಕರಗಬಲ್ಲಂತವು (A, D, E ಮತ್ತು K) ಹಾಗೂ 9 ನೀರಿನಲ್ಲಿ-ಕರಗಬಲ್ಲಂತವು (8 B ಜೀವಸತ್ವಗಳು ಹಾಗೂ C ಜೀವಸತ್ವ). ನೀರಿನಲ್ಲಿ-ಕರಗಬಲ್ಲ ಜೀವಸತ್ವಗಳು ನೀರಿನಲ್ಲಿ ಸುಲಭವಾಗಿ ಕರಗಬಲ್ಲವು ಹಾಗೂ ಸಾಧಾರಣವಾಗಿ ದೇಹದಿಂದ ನೇರವಾಗಿ ವಿಸರ್ಜಿತಗೊಳ್ಳುತ್ತವೆ, ಇದು ಎಷ್ಟರಮಟ್ಟಿಗೆಂದರೆ ಮೂತ್ರವನ್ನು ಜೀವಸತ್ವ ಸೇವನೆಯ ಪ್ರಮುಖ ಸೂಚಕವನ್ನಾಗಿ ಪರಿಗಣಿಸಬಹುದಾಗಿದೆ.[೧೭] ಅವುಗಳು ಸಿದ್ಧವಾಗಿ ಶೇಖರವಾಗದ ಕಾರಣ, ನಿರಂತರ ದೈನಿಕ ಸೇವನೆಯು ಅತ್ಯಗತ್ಯ.[೧೮] ಅನೇಕ ರೀತಿಯ ನೀರಿನಲ್ಲಿ-ಕರಗಬಲ್ಲ ಜೀವಸತ್ವಗಳನ್ನು ರೋಗಾಣು/ಬ್ಯಾಕ್ಟೀರಿಯಾಗಳು ಅನುಕರಿಸಬಲ್ಲವು.[೧೯] ಕೊಬ್ಬಿನಲ್ಲಿ-ಕರಗಬಲ್ಲ ಜೀವಸತ್ವಗಳನ್ನು ಮೇದಸ್ಸಿನ (ಕೊಬ್ಬು) ಸಹಾಯದಿಂದ ಕರುಳಿನ ಮಾರ್ಗವಾಗಿ ಹೀರಿಕೊಳ್ಳಲಾಗುತ್ತದೆ. ಅವುಗಳು ದೇಹದಲ್ಲಿ ಶೇಖರಗೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ನೀರಿನಲ್ಲಿ-ಕರಗಬಲ್ಲ ಜೀವಸತ್ವಗಳಿಗಿಂತ ಹೈಪರ್‌‌ವಿಟಮಿನೋಸಿಸ್‌ ಬಾಧೆಗೆ ಹೆಚ್ಚು ಕಾರಣವಾಗಬಲ್ಲವು. ಕೊಬ್ಬಿನಲ್ಲಿ-ಕರಗಬಲ್ಲ ಜೀವಸತ್ವಗಳ ನಿಯಂತ್ರಣವು ಕೋಶೀಯ ತಂತೂತಕವೃದ್ಧಿಗೆ ಕಾರಣವಾಗಬಲ್ಲದಾದುದರಿಂದ ನಿರ್ದಿಷ್ಟವಾಗಿ ಪ್ರಾಮುಖ್ಯತೆ ಪಡೆದಿದೆ.[೨೦]

ಜೀವಸತ್ವಗಳ ಪಟ್ಟಿ

ಬದಲಾಯಿಸಿ

ಪ್ರತಿ ಜೀವಸತ್ವವು ಅನೇಕ ಚಟುವಟಿಕೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವುದರಿಂದ, ಅವುಗಳಲ್ಲಿ ಬಹಳಷ್ಟು ಅನೇಕ ಕಾರ್ಯಗಳನ್ನು ಹೊಂದಿವೆ.[೨೧]

ಜೀವಸತ್ವ ಸಾಮಾನ್ಯ ವಿವರಣಾತ್ಮಕ ಹೆಸರು ವಿಟಾಮೆರ್‌ ರಾಸಾಯನಿಕಗಳ ಹೆಸರು(ಗಳು) (ಪಟ್ಟಿ ಸಂಪೂರ್ಣಗೊಂಡಿಲ್ಲ) ಕರಗಬಲ್ಲ ಸಾಮರ್ಥ್ಯ ಶಿಫಾರಸು ಮಾಡಿರುವ ಆಹಾರ ಪದ್ಧತಿಯ ಪ್ರಮಾಣ
(ಪುರುಷ, ವಯಸ್ಸು 19–70)[೨೨]
ಕೊರತೆಯಿಂದುಂಟಾಗುವ ರೋಗ ಗರಿಷ್ಟ ಸೇವನೆಯ ಪ್ರಮಾಣ
(UL/ಪ್ರತಿದಿನ)[೨೨]
ಮಿತಿಮೀರಿದ ಸೇವನೆಯಿಂದುಂಟಾಗುವ ರೋಗ
ಜೀವಸತ್ವ A ರೆಟಿನಾಲ್‌, ರೆಟಿನಲ್‌, ಅನೇಕ ರೆಟಿನಾಯ್ಡ್‌ಗಳು, ಹಾಗೂ
ನಾಲ್ಕು ಕಾರೊಟೆನಾಯ್ಡ್‌ಗಳು)
ಕೊಬ್ಬು 900 µg ಇರುಳುಗಣ್ಣು ಹಾಗೂ
ಕೆರಟೊಮಲಷಿಯಾ[೨೩]
3,000 µg ಹೈಪರ್‌ವಿಟಮಿನೊಸಿಸ್‌‌‌ A
ಜೀವಸತ್ವ B1 ಥಿಯಾಮೈನ್‌ ನೀರು 1.2 mg ಬೆರಿಬೆರಿ, ವೆರ್ನಿಕೆ-ಕೊರ್ಸಾಕಾಫ್‌‌ ರೋಗಲಕ್ಷಣ N/D[೨೪] ಹೆಚ್ಚಿನ ಸೇವನೆಯಿಂದ ಜಡತ್ವ ಅಥವಾ ಸ್ನಾಯುಗಳ ಸಡಿಲಿಕೆ.[೨೫]
ಜೀವಸತ್ವ B2 ರಿಬೊಫ್ಲಾವಿನ್‌ ನೀರು 1.3 mg ಅರಿಬೊಫ್ಲಾವಿನೊಸಿಸ್‌‌ N/D
ಜೀವಸತ್ವ B3 ನಿಯಾಸಿನ್‌, ನಿಯಾಸಿನಮೈಡ್‌‌ ನೀರು 16.0 mg ಪೆಲಾಗ್ರಾ 35.0 mg ಯಕೃತ್ತಿಗೆ ಹಾನಿ (ಪ್ರಮಾಣ > 2g/ಪ್ರತಿದಿನ)[೨೬] ಹಾಗೂ ಇತರೆ ಸಮಸ್ಯೆಗಳು
ಜೀವಸತ್ವ B5 ಪ್ಯಾಂಟೊಥೆನಿಕ್‌ ಆಮ್ಲ ನೀರು 5.0 mg[೨೭] ಪರೆಸ್ತೇಷಿಯಾ N/D ಅತಿಸಾರ; ಬಹುಶಃ ಪಿತ್ತೋದ್ರೇಕ ಹಾಗೂ ಎದೆಯುರಿ.[೨೮]
ಜೀವಸತ್ವ B6 ಪೈರಿಡಾಕ್ಸಿನ್‌‌, ಪೈರಿಡಾಕ್ಸಮೈನ್‌‌, ಪೈರಿಡಾಕ್ಸಲ್‌‌, ಪೀಡಿಯಾಟ್ರಿಕ್‌ ನೀರು 1.3–1.7 mg ಅನೀಮಿಯಾ[೨೯] ಪೆರಿಫೆರಲ್‌ ನ್ಯೂರೋಪತಿ. 100 mg ಪ್ರೊಪ್ರಿಯೋಸೆಪ್ಷನ್‌‌ಯಿಂದಾಗುವ ಬಲಹೀನತೆ, ನರ ಹಾನಿ (ಪ್ರಮಾಣ > 100 mg/ಪ್ರತಿದಿನ)
ಜೀವಸತ್ವ B7 ಬಯೊಟಿನ್‌‌ ನೀರು 30.0 µg ಡರ್ಮಾಟೈಟಿಸ್‌‌, ಎಂಟೆರಿಟಿಸ್‌ N/D
ಜೀವಸತ್ವ B9 ಫಾಲಿಕ್‌‌ ಆಮ್ಲ , ಫಾಲಿನಿಕ್‌‌ ಆಮ್ಲ ನೀರು 400 µg ಗರ್ಭಾವಸ್ಥೆಯಲ್ಲಿನ ಕೊರತೆಗಳಿಂದಾಗಿ ನರಗಳ ಕೊಳವೆ ದೋಷದಂತಹಾ ಜನನ ದೋಷಗಳು ಉಂಟಾಗುತ್ತವೆ 1,000 µg B12 ಜೀವಸತ್ವ ಕೊರತೆಯ ಲಕ್ಷಣಗಳನ್ನು ಮರೆಮಾಚಬಹುದು ; ಇತರೆ ಪ್ರಭಾವಗಳು.
ಜೀವಸತ್ವ B12 ಸೈನೊಕೊಬಾಲಮಿನ್‌, ಹೈಡ್ರಾಕ್ಸಿಕೊಬಾಲಮಿನ್‌, ಮೀಥೈಲ್‌ಕೊಬಾಲಮಿನ್‌‌ ನೀರು 2.4 µg ಮೆಗಾಲೊಬ್ಲಾಸ್ಟಿಕ್‌‌ ಅನೀಮಿಯಾ[೩೦] N/D ಯಾವುದೇ ಅಹಿತಕರ ಗುಣವಿಲ್ಲ[೩೦]
C ಜೀವಸತ್ವ ಆಸ್ಕಾರ್ಬಿಕ್‌ ಆಮ್ಲ ನೀರು 90.0 mg ರಕ್ತಪಿತ್ತರೋಗ 2,000 mg ಜೀವಸತ್ವ ’ಸಿ’ ಬೃಹತ್ ಔಷಧ ತಯಾರಿಕೆ
ಜೀವಸತ್ವ D ಎರ್ಗೋಕ್ಯಾಲ್ಷಿಫೆರಲ್‌, ಕೊಲೆಕ್ಯಾಲ್ಷಿಫೆರಲ್‌ ಕೊಬ್ಬು 5.0 µg–10 µg[೩೧] ಬಾಲಗ್ರಹ ಹಾಗೂ ಅಸ್ತಿಮಾರ್ದವ 50 µg ಹೈಪರ್‌ವಿಟಮಿನೊಸಿಸ್‌‌‌ D
ಜೀವಸತ್ವ E ಟೊಕೊಫೆರಾಲ್‌‌ಗಳು, ಟೊಕೊಟ್ರೈಯೆನಾಲ್‌ಗಳು ಕೊಬ್ಬು 15.0 mg ಕೊರತೆಯು ಬಲು ಅಪರೂಪ; ಆಗತಾನೆ ಜನಿಸಿದ ಕೂಸುಗಳಲ್ಲಿನ ನಮ್ರ ಹೆಮೊಲಿಟಿಕ್‌ ಅನೀಮಿಯಾ.[೩೨] 1,000 mg ವೈವಿಧ್ಯಮಯ ಅಧ್ಯಯನವೊಂದರಲ್ಲಿ ಗಮನಿಸಲಾದ ಹೆಚ್ಚಿದ ರಕ್ತಸಂಚಯದಿಂದಾದ ಹೃದಯ ವೈಫಲ್ಯ.[೩೩]
K ಜೀವಸತ್ವ ಫೈಲ್ಲೋಕ್ವಿನ್ನೋನ್‌‌, ಮೆನಾಕ್ವಿನ್ನೋನ್‌‌ಗಳು ಕೊಬ್ಬು 120 µg ರಕ್ತಸ್ರಾವದ ದೇಹಪ್ರಕೃತಿ N/D ಘನೀಕರಣರೋಧಕ ತೆಗೆದುಕೊಳ್ಳುವ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸುತ್ತದೆ.[೩೪]

ಪೋಷಣೆಯಲ್ಲಿ ಹಾಗೂ ರೋಗಗಳಲ್ಲಿ ವಿಟಮಿನ್‌ಗಳ ಪಾತ್ರ

ಬದಲಾಯಿಸಿ

ಬಹುಕೋಶೀಯ ಜೀವಿಗಳ ಸಾಮಾನ್ಯ ರೀತಿಯ ಬೆಳವಣಿಗೆ ಹಾಗೂ ವಿಕಸನಕ್ಕೆ ಜೀವಸತ್ವಗಳು ಅತ್ಯಗತ್ಯವಾದವು. ಗರ್ಭಧಾರಣೆಯಾದ ಕ್ಷಣದಿಂದ ತಾನು ಪಡೆದುಕೊಳ್ಳುವ ಪೋಷಕಾಂಶಗಳಿಂದ ಬೆಳೆಯಲಾರಂಭಿಸುವ ಭ್ರೂಣವು ತನ್ನ ಪೋಷಕರಿಂದ ಬಳುವಳಿಯಾಗಿ ಪಡೆದ ಸಾಮಾನ್ಯ ತಳಿನಕ್ಷೆಯ ಪ್ರಕಾರ ರೂಪುಗೊಳ್ಳುತ್ತದೆ. ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಜೀವಸತ್ವಗಳು ಹಾಗೂ ಖನಿಜಾಂಶಗಳು ಅದಕ್ಕೆ ಅಗತ್ಯವಾಗಿರುತ್ತದೆ. ಈ ಪೋಷಕಾಂಶಗಳು ಇತರೆ ಅಂಶಗಳೊಂದಿಗೆ ಚರ್ಮ, ಅಸ್ಥಿ, ಹಾಗೂ ಸ್ನಾಯುಗಳನ್ನು ರೂಪಿಸುವ ರಾಸಾಯನಿಕ ಪ್ರತಿಕ್ರಿಯೆಗಳಿಗೆ ಪ್ರಚೋದಿಸುತ್ತವೆ. ಈ ಪೋಷಕಾಂಶಗಳಲ್ಲಿ ಕೆಲವು ಗಂಭೀರ ಕೊರತೆಯಾದರೆ, ಮಗುವು ಕೊರತೆಯ ರೋಗಗಳಿಗೆ ಈಡಾಗಬಹುದು. ಅಲ್ಪಮಟ್ಟದ ಕೊರತೆಗಳೂ ಸಹಾ ಶಾಶ್ವತ ಹಾನಿ ಉಂಟು ಮಾಡಬಹುದು.[೩೫]

ಬಹಳ ಮಟ್ಟಿಗೆ, ಜೀವಸತ್ವಗಳನ್ನು ಆಹಾರದಿಂದಲೇ ಪಡೆಯಲಾಗುತ್ತದಾದರೂ, ಕೆಲವನ್ನು ಬೇರೆ ರೀತಿಯಲ್ಲಿಯೂ ಪಡೆಯಬಹುದು. ಉದಾಹರಣೆಗೆ, ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು— "ಕರುಳಿನ ಪುಷ್ಟ/ಗಟ್‌ ಫ್ಲೋರಾ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ— K ಜೀವಸತ್ವ ಹಾಗೂ ಬಯೋಟಿನ್‌ ಅನ್ನು ಉತ್ಪಾದಿಸಿದರೆ ಚರ್ಮದಲ್ಲಿ ಸೂರ್ಯಬೆಳಕಿನ ನೈಸರ್ಗಿಕ ನೇರಳಾತೀತ ತರಂಗದೂರದ ಸಹಾಯದಿಂದ D ಜೀವಸತ್ವದ ಒಂದು ವಿಧವನ್ನು ಸಂಶ್ಲೇಷಿಸುತ್ತದೆ. ತಾನು ಸೇವಿಸುವ ಪೂರ್ವಗಾಮಿ ವಸ್ತುವಿನಿಂದ ಕೆಲ ಜೀವಸತ್ವಗಳನ್ನು ಉತ್ಪಾದಿಸುವ ಸಾಮರ್ಥ್ಯ ಮಾನವದೇಹಕ್ಕಿದೆ. ಉದಾಹರಣೆಗಳೆಂದರೆ ಬೀಟ ಕೆರೊಟೀನ್‌ನಿಂದ ಉತ್ಪಾದನೆಯಾಗುವ A ಜೀವಸತ್ವ ಹಾಗೂ ಟ್ರಿಪ್ಟೋಫಾನ್‌ ಎಂಬ ಅಮೈನೋ ಆಮ್ಲದಿಂದ ಉತ್ಪತ್ತಿಯಾಗುವ ನಿಯಾಸಿನ್‌.[೨೨]

ಒಮ್ಮೆ ಬೆಳವಣಿಗೆ ಹಾಗೂ ವಿಕಸನವು ಪೂರ್ಣಗೊಂಡ ನಂತರ, ಬಹುಕೋಶೀಯ ಜೀವಿಯ ಕೋಶಗಳ, ಅಂಗಾಂಶಗಳ ಹಾಗೂ ಅಂಗಗಳ ಆರೋಗ್ಯಕರ ನಿರ್ವಹಣೆಗೆ ಜೀವಸತ್ವಗಳು ಅತ್ಯಗತ್ಯ ಪೋಷಕಾಂಶಗಳಾಗಿಯೇ ಇರುತ್ತವೆ; ಇಷ್ಟೇ ಅಲ್ಲದೇ ಅವು ಬಹುಕೋಶೀಯ ಜೀವಿಗೆ ತಾನು ಸೇವಿಸುವ ಆಹಾರದಿಂದ ಪಡೆದ ರಾಸಾಯನಿಕ ಶಕ್ತಿಯನ್ನು ದಕ್ಷ ರೀತಿಯಲ್ಲಿ ಬಳಸಿಕೊಂಡು ಉಸಿರಾಟಕ್ಕೆ ಬೇಕಾಗುವ ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳ ಹಾಗೂ ಕೊಬ್ಬಿನಂಶಗಳನ್ನು ಸಂಸ್ಕರಿಸಲು ಸಹಾಯ ನೀಡುತ್ತವೆ.[]

ಕೊರತೆಗಳು

ಬದಲಾಯಿಸಿ

ಮಾನವ ದೇಹವು ಬಹಳಷ್ಟು ಜೀವಸತ್ವಗಳನ್ನು ಶೇಖರಿಸುವುದಿಲ್ಲವಾದುದರಿಂದ, ಮಾನವರು ಅವುಗಳ ಕೊರತೆ ಬಾಧಿಸದಿರುವಂತೆ ಅವುಗಳನ್ನು ಸೇವಿಸಲೇಬೇಕು. ಮಾನವ ದೇಹದಲ್ಲಿ ವಿವಿಧ ಜೀವಸತ್ವಗಳ ಶೇಖರಣಾ ವ್ಯವಸ್ಥೆ ವ್ಯಾಪಕ ವ್ಯತ್ಯಾಸವನ್ನು ಹೊಂದಿರುತ್ತವೆ; A, D, ಹಾಗೂ B12 ಜೀವಸತ್ವಗಳನ್ನು ಮಾನವ ದೇಹವು ಗಮನಾರ್ಹ ಪ್ರಮಾಣದಲ್ಲಿ ಪ್ರಮುಖವಾಗಿ ಯಕೃತ್ತಿನಲ್ಲಿ ಶೇಖರಿಸಿಕೊಂಡಿರುತ್ತದೆ,[೩೨] ಹಾಗೂ ಓರ್ವ ವಯಸ್ಕ ಮಾನವನ ಆಹಾರದಲ್ಲಿ B12 ಹಾಗೂ A ಜೀವಸತ್ವಗಳ ಕೊರತೆ ಅನೇಕ ತಿಂಗಳುಗಳವರೆಗೂ ಇದ್ದರೂ ಗೊತ್ತಾಗದಿರುವ ಮಟ್ಟಿಗೆ ಅವುಗಳ ಶೇಖರಣೆ ಇರುತ್ತದೆ. B3 ಜೀವಸತ್ವವು ಮಾನವ ದೇಹದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಶೇಖರಣೆಗೊಂಡಿರದ ಕಾರಣ ಅದರ ಕೊರತೆ ಕೆಲವೇ ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ.[೨೩][೩೨] ಜೀವಸತ್ವಗಳ ಕೊರತೆಯನ್ನು ಪ್ರಾಥಮಿಕ ಅಥವಾ ಮಾಧ್ಯಮಿಕ ಎಂದು ವರ್ಗೀಕರಿಸಲಾಗಿದೆ. ಜೀವಿಯು ತನ್ನ ಆಹಾರದ ಮೂಲಕ ಅಗತ್ಯ ಪ್ರಮಾಣದ ಜೀವಸತ್ವವನ್ನು ಪಡೆಯದಿದ್ದರೆ ಪ್ರಾಥಮಿಕ ಕೊರತೆ ಯುಂಟಾಗುತ್ತದೆ. “ಜೀವನಶೈಲಿಯ ಅಂಶ”ಗಳಾದ, ಧೂಮಪಾನ, ವಿಪರೀತ ಆಲ್ಕೋಹಾಲ್‌ ಸೇವನೆಯಿಂದುಂಟಾದ ಜೀವಸತ್ವದ ಬಳಕೆಯನ್ನು ಅಥವಾ ಹೀರುವಿಕೆಯನ್ನು ಮಿತಿಗೊಳಿಸುವ ಅಥವಾ ತಡೆಯುವ ಅಂತರ್ಗತ ಅಸ್ವಸ್ಥತೆ ಅಥವಾ ಜೀವಸತ್ವಗಳ ಬಳಕೆ ಅಥವಾ ಹೀರುವಿಕೆಯನ್ನು ಮಿತಿಗೊಳಿಸುವ ಅಥವಾ ತಡೆಯುವ ಔಷಧಿಗಳ ಬಳಕೆಯಿಂದ ಮಾಧ್ಯಮಿಕ ಕೊರತೆ ಯು ಕಾಡಬಹುದು.[೩೨] ವೈವಿಧ್ಯಮಯ ಆಹಾರ ಸೇವಿಸುವ ಜನರು ತೀವ್ರವಾದ ಪ್ರಾಥಮಿಕ ಜೀವಸತ್ವ ಕೊರತೆಯಿಂದ ಬಾಧಿತರಾಗುವ ಸಾಧ್ಯತೆ ಕಡಿಮೆ. ಬದಲಿಗೆ, ನಿಯಂತ್ರಿತ ಆಹಾರಗಳು ಸಂಭಾವ್ಯ ಮಾರಣಾಂತಿಕ ರೋಗಗಳಿಗೆ ಕಾರಣವಾಗುವ ದೀರ್ಘಕಾಲೀನ ಜೀವಸತ್ವ ಕೊರತೆಗಳಿಗೆ ಇಂಬು ಕೊಡುತ್ತವೆ.

ಮಾನವರಲ್ಲಿನ ಜೀವಸತ್ವ ಕೊರತೆಗಳಲ್ಲಿ ಹೆಚ್ಚು ಪರಿಚಿತವಾದವೆಂದರೆ ಥಿಯಾಮೈನ್‌ (ಬೆರಿಬೆರಿ), ನಿಯಾಸಿನ್‌ (ಪೆಲ್ಲಾಗ್ರಾ), C ಜೀವಸತ್ವ (ರಕ್ತಪಿತ್ತವ್ಯಾಧಿ) ಹಾಗೂ D ಜೀವಸತ್ವ (ಬಾಲಗ್ರಹ). ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ, ಅಂತಹ ಕೊರತೆಗಳು ಅಪರೂಪ; ಇದಕ್ಕೆ (1) ಸಕಾಲಿಕ ಆಹಾರ ಪೂರೈಕೆ; ಮತ್ತು (2) ಸಾರವರ್ಧನೆ ಎಂದು ಕರೆಯಲ್ಪಡುವ ಸಾಮಾನ್ಯ ಆಹಾರಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಬಳಕೆಯು ಕಾರಣ.[೨೨][೩೨] ಈ ಸಾಮಾನ್ಯ ಜೀವಸತ್ವ ಕೊರತೆಯ ವ್ಯಾಧಿಗಳು ಮಾತ್ರವಲ್ಲದೇ, ಜೀವಸತ್ವ ಕೊರತೆಯಿಂದುಂಟಾಗುವ ಅನೇಕ ರೀತಿಯ ಅಸ್ವಸ್ಥತೆಗಳ ಬಗ್ಗೆ ಪುರಾವೆಗಳು ಸಿಕ್ಕಿವೆ.[೩೬][೩೭]

ಅಡ್ಡಪರಿಣಾಮಗಳು ಹಾಗೂ ಅತಿಬಳಕೆ

ಬದಲಾಯಿಸಿ

ಹೆಚ್ಚಿನ ಪ್ರಮಾಣದಲ್ಲಿ ಕೆಲ ಜೀವಸತ್ವಗಳನ್ನು ಸೇವಿಸಿದರೆ ಹೆಚ್ಚಿದ ಪ್ರಮಾಣಕ್ಕನುಗುಣವಾಗಿ ಅಡ್ಡ ಪರಿಣಾಮಗಳು ಉಂಟಾಗುವುದು ಎಂಬುದು ವಿಷದಪಟ್ಟಿದೆ. ಆಹಾರದಿಂದ ಯಾವುದೇ ಜೀವಸತ್ವದ ಅತಿಬಳಕೆಯ ಸಾಧ್ಯತೆ ದೂರದ ಮಾತು, ಆದರೆ ಜೀವಸತ್ವ ಪೂರಣದ ಸಮಯದಲ್ಲಿ ಅತಿಬಳಕೆಯ ಸಾಧ್ಯತೆ ಇರುತ್ತದೆ. ಕೆಲ ಜೀವಸತ್ವಗಳ ಅತಿಬಳಕೆಯಿಂದ ಪಿತ್ತೋದ್ರೇಕ, ಅತಿಸಾರ, ಹಾಗೂ ವಾಂತಿಯಂತಹಾ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ.[೨೩][೩೮]

ಅಡ್ಡಪರಿಣಾಮಗಳು ಕಾಣಿಸಿಕೊಂಡಾಗ, ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿ ಚೇತರಿಸಿಕೊಳ್ಳುವ ಪ್ರಯತ್ನ ಮಾಡುವುದು ಸಾಮಾನ್ಯ ಪದ್ಧತಿ. ಪ್ರತಿ ವ್ಯಕ್ತಿಯು ತಾಳಿಕೊಳ್ಳಬಲ್ಲ ಜೀವಸತ್ವಗಳ ಪರಿಮಾಣ ವ್ಯಾಪಕ ವ್ಯತ್ಯಾಸ ಹೊಂದಿರುತ್ತದಲ್ಲದೇ ವಯಸ್ಸು ಹಾಗೂ ಆರೋಗ್ಯದ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ.[೩೯] 2004ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಎಲ್ಲಾ ರೀತಿಯ ಜೀವಸತ್ವಗಳ ಅತಿಬಳಕೆಗೆ 62,562 ವ್ಯಕ್ತಿಗಳು ಈಡಾಗಿದ್ದರು (ಈ ಸಂದರ್ಭಗಳಲ್ಲಿ ಬಹುಮಟ್ಟಿಗೆ 80%ರಷ್ಟು 6 ವರ್ಷದೊಳಗಿನ ಮಕ್ಕಳು ಅಡ್ಡಪರಿಣಾಮಕ್ಕೆ ಒಳಗಾಗಿದ್ದರು), ಇದು 53 "ಪ್ರಮುಖ" ಮಾರಣಾಂತಿಕ ಪರಿಣಾಮಗಳು ಹಾಗೂ 3 ಸಾವಿಗೆ[೪೦] ಕಾರಣವಾಗಿತ್ತು; ಆದರೆ ಇದು ಅನುದ್ದೇಶಿತ ವಿಷಪ್ರಾಶನದಿಂದ ಅದೇ ವರ್ಷ (2004) U.S.ನಲ್ಲಿ ಸಾವನ್ನಪ್ಪಿದ 19,250 ಮಂದಿಗೆ ಹೋಲಿಸಿದರೆ ಇದು ಅಲ್ಪ ಪ್ರಮಾಣದ್ದು.[೪೧]

ಪೂರಕಗಳು

ಬದಲಾಯಿಸಿ

ವೈವಿಧ್ಯಮಯ ಆಹಾರದಿಂದ ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗದಿದ್ದಾಗ ಅನೇಕ ಬಾರಿ ಜೀವಸತ್ವಗಳನ್ನು ಹೊಂದಿರುವ ಜೀವಸತ್ವಪೂರಕ ಆಹಾರದ ಮೂಲಕ, ಅಗತ್ಯ ಪ್ರಮಾಣದ ಪೋಷಕಾಂಶಗಳು ಪ್ರತಿದಿನವು ಲಭ್ಯವಾಗುವಂತೆ ನೋಡಿಕೊಳ್ಳಬಹುದಾಗಿದೆ. ಕೆಲ ಜೀವಸತ್ವಗಳ ಪೂರಕಗಳ ಅನುಕೂಲದ ಬಗ್ಗೆ ವೈಜ್ಞಾನಿಕ ಪುರಾವೆಗಳು ಕಂಡುಬಂದಿದ್ದರೆ, ಇತರೆಯವುಗಳು ಮತ್ತಷ್ಟು ಅಧ್ಯಯನವನ್ನು ಬೇಡುತ್ತಿವೆ.[೪೨] ಕೆಲ ಸಂದರ್ಭಗಳಲ್ಲಿ, ವಿಶೇಷತಃ ಶಸ್ತ್ರಚಿಕಿತ್ಸೆಗೆ ಮುನ್ನ ಇತರೆ ಜೀವಸತ್ವಪೂರಕ ಆಹಾರ ಅಥವಾ ಔಷಧ ಸೇವಿಸಿದ್ದರೆ ಅಥವಾ ಅವುಗಳನ್ನು ಸೇವಿಸಿದ ವ್ಯಕ್ತಿಯು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಜೀವಸತ್ವ ಪೂರಕಗಳು ಬೇಡದ ಪರಿಣಾಮಗಳನ್ನು ಉಂಟುಮಾಡಬಹುದು.[೪೨] ಜೀವಸತ್ವಪೂರಕ ಆಹಾರಗಳು ಅನೇಕ ಬಾರಿ ವಿವಿಧ ರೂಪದಲ್ಲಿ ಆಹಾರದ ಮೂಲಕ ಪಡೆಯಬಹುದಾದ ಪ್ರಮಾಣದ ಅನೇಕ ಪಟ್ಟು ಹೆಚ್ಚಿನ ಪ್ರಮಾಣದ ಜೀವಸತ್ವಗಳನ್ನು ಹೊಂದಿರುತ್ತವೆ.[೪೩]

2006ರಲ್ಲಿ ಪ್ರಕಟಿಸಲಾದ ಅಪರ-ವಿಶ್ಲೇಷಣೆಯು A ಹಾಗೂ E ಜೀವಸತ್ವಗಳ ಪೂರಕಗಳು ಸಾಮಾನ್ಯ ಆರೋಗ್ಯದ ವ್ಯಕ್ತಿಗಳಿಗೆ ಸುಸ್ಪಷ್ಟ ಆರೋಗ್ಯ ಸುಧಾರಣೆಯನ್ನೇನೂ ಮಾಡದಿರುವುದಲ್ಲದೇ, ವಾಸ್ತವವಾಗಿ ಸಾವಿನ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿಸಿತು, ಆದರೆ ಈ ವಿಶ್ಲೇಷಣೆಯಲ್ಲಿ ಬಳಸಲಾದ ಎರಡು ಬೃಹತ್‌ ಅಧ್ಯಯನಗಳು ಬೀಟ-ಕೆರೊಟೀನ್‌ ಪೂರಕಗಳು ಅಪಾಯಕಾರಿ ಎಂಬುದು ಆಗಲೇ ಸಿದ್ಧವಾಗಿದ್ದ ಧೂಮಪಾನಿಗಳನ್ನು ಒಳಗೊಂಡಿತ್ತು.[೪೪] ಮೇ 2009ರಲ್ಲಿ ಬಿಡುಗಡೆಯಾದ ಮತ್ತೊಂದು ಅಧ್ಯಯನದ ಪ್ರಕಾರ ಆಕ್ಸಿಡೀಕಾರಕವಲ್ಲದ C ಹಾಗೂ E ಜೀವಸತ್ವಗಳು ಕಸರತ್ತಿನ ಕೆಲ ಅನುಕೂಲಗಳನ್ನು ನಿಗ್ರಹಿಸುವ ಸಾಧ್ಯತೆಯಿರುತ್ತದೆ.[೪೫]

ಜೀವಸತ್ವ ಪೂರಕಗಳ ಸರಕಾರಿ ನಿಯಂತ್ರಣ

ಬದಲಾಯಿಸಿ

ಬಹಳಷ್ಟು ರಾಷ್ಟ್ರಗಳು ಜೀವಸತ್ವಪೂರಕ ಆಹಾರಗಳನ್ನು ಆಹಾರವಸ್ತುಗಳ ಸಾಮಾನ್ಯ ವರ್ಗದ ವಿಶೇಷ ವಿಭಾಗದಲ್ಲಿ ಪರಿಗಣಿಸುತ್ತವಲ್ಲದೇ ಔಷಧಿಯಾಗಲ್ಲ. ಇದರಿಂದಾಗಿ ಸರ್ಕಾರದ ಬದಲಾಗಿ ಮಾರಾಟ ಮಾಡುವ ಮುನ್ನ ತಯಾರಕರು ಜೀವಸತ್ವಪೂರಕ ಆಹಾರಗಳು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊರಬೇಕಾಗಿರುತ್ತವೆ. ಕೂಲಂಕುಷವಾಗಿ ಸುರಕ್ಷಿತವೆಂದು ಹಾಗೂ ಪ್ರಭಾವಶಾಲಿಯೆಂದು ದೃಢೀಕರಿಸಲೇಬೇಕಾಗಿರುವ ಔಷಧಿ ಉತ್ಪನ್ನಗಳ ಹಾಗಲ್ಲದೇ ಬಳಕೆದಾರರನ್ನು ತಲುಪುವ ಮುನ್ನ ಜೀವಸತ್ವಪೂರಕ ಆಹಾರಗಳನ್ನು ಸುರಕ್ಷಿತವೆಂದು ಹಾಗೂ ಪ್ರಭಾವಶಾಲಿಯೆಂದು "ದೃಢೀಕರಿಸುವ" ನಿಯಮಗಳು ಚಾಲ್ತಿಯಲ್ಲಿಲ್ಲ. ಹಾಗೆಯೇ ಔಷಧಿ ಉತ್ಪನ್ನಗಳಂತಲ್ಲದೇ ಜೀವಸತ್ವಪೂರಕ ಆಹಾರಗಳ ತಯಾರಕರು ಹಾಗೂ ವಿತರಕರು ತಮ್ಮ ಉತ್ಪನ್ನವನ್ನು ಬಳಸಿ ಆದ ಯಾವುದೇ ತೊಂದರೆಗಳು ಹಾಗು ಅನಾರೋಗ್ಯಗಳನ್ನು ವರದಿ ಮಾಡಬೇಕೆಂಬ ನಿಯಮಗಳೇನೂ ಇಲ್ಲ.[೪೨][೪೬][೪೭]

ಪ್ರಸಕ್ತ ಹಾಗೂ ಪೂರ್ವದ ಹೆಸರುಗಳು

ಬದಲಾಯಿಸಿ
ಮರು ವರ್ಗೀಕರಿಸಿದ ಜೀವಸತ್ವಗಳ ಹೆಸರುಗಳ ಪಟ್ಟಿ
ಹಿಂದಿನ ಹೆಸರು ರಾಸಾಯನಿಕ ಹೆಸರು ಹೆಸರು ಬದಲಾವಣೆಗೆ ಕಾರಣ[೪೮]
ಜೀವಸತ್ವ B4 ಅಡೆನೈನ್‌ DNA ಚಯಾಪಚಯಜ
ಜೀವಸತ್ವ B8 ಅಡೆನಿಲಿಕ್‌ ಆಮ್ಲ DNA ಚಯಾಪಚಯಜ
ಜೀವಸತ್ವ F ಅಗತ್ಯವಾದ ಮೇದಸ್ಸಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿವೆ (
ಜೀವಸತ್ವದ ವಿವರಣೆಗೆ ಪೂರಕವಾಗಿಲ್ಲ).
ಜೀವಸತ್ವ G ರಿಬೋಫ್ಲಾವಿನ್‌ ಜೀವಸತ್ವ B2 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ H ಬಯೋಟಿನ್‌‌ ಜೀವಸತ್ವ B7 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ J ಕ್ಯಾಟೆಕಾಲ್l, ಫ್ಲಾವಿನ್‌‌ ಪ್ರೋಟೀನ್‌ ಚಯಾಪಚಯಜ
ಜೀವಸತ್ವ L1[೪೯] ಆಂಥ್ರಾನಿಲಿಕ್‌ ಆಮ್ಲ ಪ್ರೋಟೀನ್‌ ಚಯಾಪಚಯಜ
ಜೀವಸತ್ವ L2[೪೯] ಅಡೆನೈಲ್‌ಥಿಯೋಮೀಥೈಲ್‌ಪೆಂಟೋಸ್‌ RNA ಪ್ರೋಟೀನ್‌ ಚಯಾಪಚಯಜ
ಜೀವಸತ್ವ M ಫಾಲಿಕ್ ಆಮ್ಲ ಜೀವಸತ್ವ B9 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ O ಕಾರ್ನಿಟಿನ್‌ ಪ್ರೋಟೀನ್‌ ಚಯಾಪಚಯಜ
ಜೀವಸತ್ವ P ಫ್ಲಾವೊನೈಡ್‌ಗಳು ಜೀವಸತ್ವವಲ್ಲವೆಂದು ನಿರ್ಧರಿಸಲಾಗಿದೆ
ಜೀವಸತ್ವ PP ನಿಯಾಸಿನ್ ಜೀವಸತ್ವ B3 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ U S-ಮೀಥೈಲ್‌ಮೆಥಿಯೋನೈನ್‌ ಪ್ರೋಟೀನ್‌ ಚಯಾಪಚಯಜ

ಅನೇಕ ಜೀವಸತ್ವಗಳ ಗುಂಪು ನೇರವಾಗಿ Eಯಿಂದ Kಗೆ ಜಿಗಿಯುವುದಕ್ಕೆ ಕಾರಣವೆಂದರೆ F-J ಅಕ್ಷರಗಳಿಗೆ ಸಂಬಂಧಿಸಿದ ಜೀವಸತ್ವಗಳು ಕಾಲಾಂತರದಲ್ಲಿ ಮರುವರ್ಗೀಕರಣಗೊಂಡಿವೆ ಇಲ್ಲವೇ ತಪ್ಪು ಗ್ರಹಿಕೆಯೆಂದೋ ಇಲ್ಲವೇ, ಜೀವಸತ್ವಗಳ ಸಂಕೀರ್ಣವಾಗಿ ಮಾರ್ಪಟ್ಟ B ಜೀವಸತ್ವದೊಂದಿಗಿನ ಅವುಗಳ ಸಂಬಂಧದಿಂದಾಗಿ ಮರುನಾಮಕರಣಗೊಂಡಿರುವುದು.

K ಜೀವಸತ್ವವನ್ನು ಪ್ರತ್ಯೇಕಿಸಿ ವಿವರಿಸಿದ ಜರ್ಮನ್‌-ಭಾಷಿಕ ವಿಜ್ಞಾನಿಗಳು(ಹಾಗೆ ಕರೆದುದಲ್ಲದೇ ) ಗಾಯವಾದ ನಂತರವಾಗುವ ಗರಣೆಗಟ್ಟುವ ಪ್ರಕ್ರಿಯೆಯಲ್ಲಿ ಜೀವಸತ್ವ ಪ್ರಮುಖ ಪಾತ್ರ ವಹಿಸುವುದರಿಂದಾಗಿ ಜರ್ಮನ್‌ ಭಾಷೆಯಲ್ಲಿ ಕೋಗ್ಯುಲೇಷನ್‌ ಪದದ K ಅಕ್ಷರದಿಂದ ಹಾಗೆ ಹೆಸರಿಸಿದರು. ಆ ಸಮಯದಲ್ಲಿ, ಬಹಳಷ್ಟು (ಆದರೆ ಎಲ್ಲವೂ ಅಲ್ಲ) Fನಿಂದ Jವರೆಗಿನ ಅಕ್ಷರಗಳನ್ನು ನಾಮಕರಣದಲ್ಲಿ ಬಳಸಲಾಗಿತ್ತಾದುದರಿಂದ, K ಅಕ್ಷರದ ಬಳಕೆ ತರ್ಕಬದ್ಧವಾಗಿಯೇ ಇದೆ.[೪೮][೫೦] ಬಲಭಾಗದಲ್ಲಿರುವ ಕೋಷ್ಟಕವು ಜೀವಸತ್ವಗಳೆಂದು ಮೊದಲಿಗೆ ವರ್ಗೀಕರಿಸಲ್ಪಟ್ಟ ರಾಸಾಯನಿಕಗಳನ್ನು, ಹಾಗೂ B-ಸಂಕೀರ್ಣದ ಭಾಗವಾಗಿ ಮಾರ್ಪಟ್ಟ ಜೀವಸತ್ವಗಳ ಪೂರ್ವನಾಮವನ್ನು ಪಟ್ಟಿ ಮಾಡಿದೆ.

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಲಿಯೆಬರ್‌ಮನ್‌, S, ಬ್ರೂನಿಂಗ್‌, N (1990). ದ ರಿಯಲ್‌ ವಿಟಮಿನ್‌ & ಮಿನರಲ್‌ ಬುಕ್‌. NY: ಅವರೆ ಸಮೂಹ, 3.
  2. ಷೂಮನ್‌, N, (1998). ಎ ಹಿಸ್ಟರಿ ಆಫ್‌ ಕಂಟೆಪ್ಲೇಟಿವ್‌ ಮೆಡಿಸಿನ್‌. DC: ಮೊಸೆಬಿ, 1.
  3. ಜೀವಸತ್ವ - ಉಚಿತ ಆನ್‌ಲೈನ್‌ ಪದಕೋಶದಿಂದ, ಜೀವಸತ್ವದ ಬಗ್ಗೆ ವಿವರಣೆ ಅರ್ಥಕೋಶ ಹಾಗೂ ವಿಶ್ವಕೋಶ
  4. ಟೆಂಪ್ಲೇಟು:Cite book.
  5. "vitamer: Definition and Much More from Answers.com". www.answers.com. Retrieved 2008-06-16.
  6. ೬.೦ ೬.೧ Bender, David A. (2003). Nutritional biochemistry of the vitamins. Cambridge, U.K.: Cambridge University Press. ISBN 978-0-521-80388-5.
  7. Bolander FF (2006). "Vitamins: not just for enzymes". Curr Opin Investig Drugs. 7 (10): 912–5. PMID 17086936.
  8. ಕಿರ್ಕ್‌-ಓಥ್ಮರ್‌ (1984). ಎನ್‌ಸೈಕ್ಲೋಪೀಡಿಯಾ ಆಫ್‌ ಕೆಮಿಕಲ್‌ ಟೆಕ್ನಾಲಜಿ ಮೂರನೇ ಆವೃತ್ತಿ. NY: ಜಾನ್‌ ವಿಲೇ ಅಂಡ್‌‌ ಸನ್ಸ್‌‌, Vol. 24:104.
  9. ೯.೦ ೯.೧ ೯.೨ ೯.೩ ೯.೪ ಜ್ಯಾಕ್‌ ಚಲ್ಲೆಮ್‌ (1997). "ದ ಪಾಸ್ಟ್‌, ಪ್ರೆಸೆಂಟ್‌ ಅಂಡ್‌ ಫ್ಯೂಚರ್‌ ಆಫ್‌ ವಿಟಮಿನ್ಸ್‌ " Archived 2010-06-08 ವೇಬ್ಯಾಕ್ ಮೆಷಿನ್ ನಲ್ಲಿ.
  10. Jacob, RA. (1996). "Three eras of vitamin C discovery". Subcell Biochem. 25: 1–16. PMID 8821966. {{cite journal}}: Cite has empty unknown parameter: |month= (help)
  11. ಬೆಲ್ಲಿಸ್‌‌, ಮೇರಿ. ವಿಟಮಿನ್ಸ್‌‌ - ಪ್ರೊಡಕ್ಷನ್‌ ಮೆಥಡ್ಸ್‌ ದ ಹಿಸ್ಟರಿ ಆಫ್‌ ದ ವಿಟಮಿನ್ಸ್‌‌. ಪುನರ್ಪಡೆದದ್ದು 5 ಫೆಬ್ರುವರಿ 2009
  12. ೧೨.೦ ೧೨.೧ "1929 ನೊಬೆಲ್‌ ಉಪನ್ಯಾಸ". Archived from the original on 2008-10-11. Retrieved 2010-03-03.
  13. ೧೩.೦ ೧೩.೧ Rosenfeld, L. (1997). "Vitamine--vitamin. The early years of discovery". Clin Chem. 43 (4): 680–5. PMID 9105273. {{cite journal}}: Unknown parameter |month= ignored (help)
  14. ೧೪.೦ ೧೪.೧ Carpenter, Kenneth (22 June 2004). "The Nobel Prize and the Discovery of Vitamins". Retrieved 5 October 2009.
  15. ಟೋಕ್ಯೋ ಕಗಕು ಕೈಷಿ: (1911)
  16. ಫಂಕ್‌, C. ಹಾಗೂ H. E. ಡುಬಿನ್‌. ದ ವಿಟಮಿನ್ಸ್‌. ಬಾಲ್ಟಿಮೋರ್‌: ವಿಲಿಯಮ್ಸ್‌ ಅಂಡ್‌ ವಿಲ್ಕಿನ್ಸ್‌ ಕಂಪೆನಿ, 1922.
  17. Fukuwatari T, Shibata K (2008). "Urinary water-soluble vitamins and their metabolite contents as nutritional markers for evaluating vitamin intakes in young Japanese women" (– Scholar search). J. Nutr. Sci. Vitaminol. 54 (3): 223–9. doi:10.3177/jnsv.54.223. PMID 18635909. {{cite journal}}: External link in |format= (help); Unknown parameter |month= ignored (help)
  18. "Water-Soluble Vitamins". Archived from the original on 2015-09-25. Retrieved 2008-12-07.
  19. Said HM, Mohammed ZM (2006). "Intestinal absorption of water-soluble vitamins: an update". Curr. Opin. Gastroenterol. 22 (2): 140–6. doi:10.1097/01.mog.0000203870.22706.52. PMID 16462170. {{cite journal}}: Unknown parameter |month= ignored (help)
  20. Maqbool A, Stallings VA (2008). "Update on fat-soluble vitamins in cystic fibrosis". Curr Opin Pulm Med. 14 (6): 574–81. doi:10.1097/MCP.0b013e3283136787. PMID 18812835. {{cite journal}}: Unknown parameter |month= ignored (help)
  21. ಕಟ್ಸ್‌ಕಿ, R.J. (1973). ಹ್ಯಾಂಡ್‌ಬುಕ್‌ ಆಫ್‌ ವಿಟಮಿನ್ಸ್‌ ಅಂಡ್‌ ಹಾರ್ಮೋನ್ಸ್‌. ನ್ಯೂಯಾರ್ಕ್‌:ವಾನ್‌ ನಾಸ್ಟ್ರಾಂಡ್‌ ರೇನ್‌ಹೋಲ್ಡ್‌‌.
  22. ೨೨.೦ ೨೨.೧ ೨೨.೨ ೨೨.೩ ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌‌: ವಿಟಮಿನ್‌ಗಳು Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ. ದ ನ್ಯಾಷನಲ್‌ ಅಕಾಡೆಮೀಸ್‌, 2001.
  23. ೨೩.೦ ೨೩.೧ ೨೩.೨ "ವಿಟಮಿನ್‌ ಅಂಡ್‌ ಮಿನರಲ್‌ ಸಪ್ಲಿಮೆಂಟ್‌ ಫ್ಯಾಕ್ಟ್‌ ಷೀಟ್ಸ್‌ ವಿಟಮಿನ್‌ A". Archived from the original on 2009-09-23. Retrieved 2010-03-03.
  24. N/D= "ದುಷ್ಪರಿಣಾಮಗಳ ಮಾಹಿತಿ ಕೊರತೆಯಿಂದಾಗಿ ಮೊತ್ತವನ್ನು ತಿಳಿಯಲಾಗಿಲ್ಲ. ಅತಿಸೇವನೆಯನ್ನು ತಡೆಗಟ್ಟಬೇಕೆಂದರೆ "(ನೋಡಿ ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌: ವಿಟಮಿನ್ಸ್‌ Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.).
  25. "Thiamin, vitamin B1: MedlinePlus Supplements". Retrieved 5 October 2009.
  26. J.G. ಹಾರ್ಡ್‌ಮನ್‌ et al., eds., ಗುಡ್‌ಮ್ಯಾನ್‌ ಅಂಡ್‌ ಗಿಲ್ಮನ್ಸ್‌ ಫಾರ್ಮಾಕಾಲಾಜಿಕಲ್‌ ಬೇಸಿಸ್‌ ಆಫ್‌ ಥೆರಾಪ್ಯೂಟಿಕ್ಸ್‌, 10ನೇ ed. , p.992.
  27. ಸಾಧಾರಣ ವಿಧವು ಅಗತ್ಯ ಪೂರೈಕೆಯನ್ನು ಸೂಚಿಸುತ್ತದೆ (A/I). "Theಎಲ್ಲಾ ವ್ಯಕ್ತಿಗಳ ಅಗತ್ಯತೆಗಳನ್ನು AI ಪೂರೈಸಬಲ್ಲದು, ಆದರೆ ಮಾಹಿತಿಯ ಕೊರತೆ ಈ ಸೇವನೆಯ ಪ್ರಮಾಣವನ್ನು ಪಾಲಿಸುವ ವ್ಯಕ್ತಿಗಳ ಸಂಖ್ಯೆಯನ್ನು ನಿಖರವಾಗಿ ಹೇಳಲಸಾಧ್ಯವಾಗಿಸಿದೆ" (ನೋಡಿ ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌: ವಿಟಮಿನ್ಸ್‌ Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.).
  28. "Pantothenic acid, dexpanthenol: MedlinePlus Supplements". Retrieved 5 October 2009.
  29. "ವಿಟಮಿನ್‌ ಅಂಡ್‌ ಮಿನರಲ್‌ ಸಪ್ಲಿಮೆಂಟ್‌ ಫ್ಯಾಕ್ಟ್‌ ಷೀಟ್ಸ್‌‌ ಜೀವಸತ್ವ B6". Archived from the original on 2009-09-23. Retrieved 2010-03-03.
  30. ೩೦.೦ ೩೦.೧ "ವಿಟಮಿನ್‌ ಅಂಡ್‌ ಮಿನರಲ್‌ ಸಪ್ಲಿಮೆಂಟ್‌ ಫ್ಯಾಕ್ಟ್‌ ಷೀಟ್ಸ್‌‌ ಜೀವಸತ್ವ B12". Archived from the original on 2009-09-23. Retrieved 2010-03-03.
  31. ನೀಡಿದ ಸಂಖ್ಯೆಯು ಸೂರ್ಯನ ಬೆಳಕಿಗೆ ಈಡು ಮಾಡದೇ ಇರುವ ಸೇವನೆಯನ್ನು ಸೂಚಿಸುತ್ತದೆ (ನೋಡಿ ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌: ವಿಟಮಿನ್ಸ್‌ Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.).
  32. ೩೨.೦ ೩೨.೧ ೩೨.೨ ೩೨.೩ ೩೨.೪ ದ ಮರ್ಕ್‌ ಮ್ಯಾನ್ಯುಯಲ್‌: ನ್ಯೂಟ್ರಿಷನಲ್‌ ಡಿಸ್‌ಆರ್ಡರ್ಸ್: ವಿಟಮಿನ್‌ ಇಂಟ್ರೊಡಕ್ಷನ್‌ ದಯವಿಟ್ಟು ನಿರ್ದಿಷ್ಟ ಜೀವಸತ್ವಗಳನ್ನು ಪುಟದ ಮೇಲಿರುವ ಪಟ್ಟಿಯಿಂದ ಆಯ್ಕೆ ಮಾಡಿ.
  33. http://findarticles.com/p/articles/mi_m0ISW/is_262/ai_n13675725 Archived 2012-07-19 at Archive.is,
  34. Rohde LE, de Assis MC, Rabelo ER (2007). "Dietary vitamin K intake and anticoagulation in elderly patients". Curr Opin Clin Nutr Metab Care. 10 (1): 1–5. doi:10.1097/MCO.0b013e328011c46c. PMID 17143047. {{cite journal}}: Unknown parameter |month= ignored (help)CS1 maint: multiple names: authors list (link)
  35. Dr. ಲಿಯೊನಿಡ್‌ A. ಗಾವ್ರಿಲೊವ್‌, ಪೀಸಸ್‌ ಆಫ್‌ ದ ಪಜಲ್‌: ಏಜಿಂಗ್‌ ರಿಸರ್ಚ್‌ ಟುಡೇ ಅಂಡ್‌ ಟುಮಾರೋ Archived 2009-07-26 ವೇಬ್ಯಾಕ್ ಮೆಷಿನ್ ನಲ್ಲಿ.
  36. ಲಖನ್‌ SE; ವಿಯೆರಾ KF. ನ್ಯೂಟ್ರಿಷನಲ್‌ ಥೆರಪೀಸ್‌ ಫಾರ್‌ ಮೆಂಟಲ್‌ ಡಿಸ್‌ಆರ್ಡರ್ಸ್‌. ನ್ಯೂಟ್ರಿಷನ್‌ ಜರ್ನಲ್‌ 2008;7(2).
  37. Boy, E.; Mannar, V.; Pandav, C.; de Benoist, B.; Viteri, F.; Fontaine, O.; Hotz, C. (2009). "Achievements, challenges, and promising new approaches in vitamin and mineral deficiency control". Nutr Rev. 67 Suppl 1: S24–30. doi:10.1111/j.1753-4887.2009.00155.x. PMID 19453674. {{cite journal}}: Unknown parameter |month= ignored (help)
  38. ಇನ್‌‌ಸ್ಟಿಟ್ಯೂಟ್‌ ಆಫ್‌ ಮೆಡಿಸಿನ್‌. ಫುಡ್‌ ಅಂಡ್‌ ನ್ಯೂಟ್ರಿಷನ್‌ ಬೋರ್ಡ್‌. ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌ ಫಾರ್‌ ವಿಟಮಿನ್‌ A, ವಿಟಮಿನ್‌ K, ಆರ್ಸೆನಿಕ್‌, ಬೋರಾನ್‌, ಕ್ರೋಮಿಯಂ, ಕಾಪರ್‌, ಅಯೋಡಿನ್‌, ಐರನ್‌, ಮ್ಯಾಂಗನೀಸ್‌, ಮಾಲಿಬ್ಡಿನಮ್‌, ನಿಕಲ್‌, ಸಿಲಿಕಾನ್‌, ವೆನೆಡಿಯಂ, ಅಂಡ್‌ ಝಿಂಕ್‌. ನ್ಯಾಷನಲ್‌ ಅಕಾಡೆಮಿ ಪ್ರೆಸ್‌, ವಾಷಿಂಗ್ಟನ್‌, DC, 2001.
  39. ಹೆಲ್ತೀಯರ್‌ ಕಿಡ್ಸ್‌ Archived 2016-10-28 ವೇಬ್ಯಾಕ್ ಮೆಷಿನ್ ನಲ್ಲಿ. ವಿಭಾಗ: ವಾಟ್‌ ಟು ಟೇಕ್‌ ಅಂಡ್‌ ಹೌ ಟು ಟೇಕ್‌ ಇಟ್‌.
  40. ಅಮೇರಿಕನ್‌ ಅಸೋಸಿಯೇಷನ್‌ ಆಫ್‌‌ ಪಾಯ್ಸನ್‌ ಕಂಟ್ರೋಲ್‌ ಸೆಂಟರ್ಸ್ ಟಾಕ್ಸಿಕ್‌ ಎಕ್ಸ್‌ಪೋಷರ್‌ ಸರ್ವೇಲನ್ಸ್‌ ಸಿಸ್ಟಂನ 2004ರ ವಾರ್ಷಿಕ ವರದಿ Archived 2011-01-05 ವೇಬ್ಯಾಕ್ ಮೆಷಿನ್ ನಲ್ಲಿ..
  41. ನ್ಯಾಷನಲ್‌ ಸೆಂಟರ್‌ ಫಾರ್‌ ಹೆಲ್ತ್‌ ಸ್ಟ್ಯಾಟಿಸ್ಟಿಕ್ಸ್‌
  42. ೪೨.೦ ೪೨.೧ ೪೨.೨ ಯೂಸ್‌ ಅಂಡ್‌ ಸೇಫ್ಟಿ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌ Archived 2019-03-27 ವೇಬ್ಯಾಕ್ ಮೆಷಿನ್ ನಲ್ಲಿ. NIH ಆಫೀಸ್‌ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌‌.
  43. ಜೇನ್‌ ಹಿಗ್‌ಡನ್‌ ಜೀವಸತ್ವ ವಿಟಮಿನ್‌ E ರೆಕಮೆಂಡೇಷನ್ಸ್‌ ಅಟ್‌ ಲೈನಸ್‌ ಪಾಲಿಂಗ್‌ ಇನ್‌ಸ್ಟಿಟ್ಯೂಟ್ಸ್‌ ಮೈಕ್ರೋನನ್ಯೂಟ್ರಿಯೆಂಟ್‌ ಇನ್‌ಫರ್ಮೇಷನ್‌ ಸೆಂಟರ್‌
  44. Bjelakovic G; et al. (2007). "Mortality in randomized trials of antioxidant supplements for primary and secondary prevention: systematic review and meta-analysis". JAMA. 297 (8): 842–57. doi:10.1001/jama.297.8.842. PMID 17327526. {{cite journal}}: Explicit use of et al. in: |author= (help). ಫಿಲಿಪ್‌ ಟೇಲರ್‌ ಹಾಗೂ ಸ್ಯಾನ್‌ಫರ್ಡ್‌ ಡಾಸೆಯವರಿಂದ JAMAರಿಗೆ ಬಂದ ಪತ್ರ ಹಾಗೂ ಮೂಲ ದಾಖಲೆಯ ಲೇಖಕರಿಂದ ಮಾರುತ್ತರ Archived 2009-03-15 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನೂ ನೋಡಿ.
  45. https://www.nytimes.com/2009/05/12/health/research/12exer.html?em=&pagewanted=print
  46. "ಓವರ್‌ವ್ಯೂ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌‌". Archived from the original on 2011-06-04. Retrieved 2010-03-03.
  47. ಇಲ್‌ನೆಸಸ್‌ ಅಂಡ್‌ ಇಂಜ್ಯುರೀಸ್‌ ಅಸೋಸಿಯೇಟೆಡ್‌ ವಿತ್‌ ದ ಯೂಸ್‌ ಆಫ್‌ ಸೆಲೆಕ್ಟೆಡ್‌‌ ಡಯೆಟರಿ ಸಪ್ಲಿಮೆಂಟ್ಸ್‌‌ U. S. FDA ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ಅಂಡ್‌ ಅಪ್ಲೈಡ್‌ ನ್ಯೂಟ್ರಿಷನ್‌
  48. ೪೮.೦ ೪೮.೧ ಎವ್ವೆರಿ ವಿಟಮಿನ್‌ ಪೇಜ್‌ Archived 2019-10-24 ವೇಬ್ಯಾಕ್ ಮೆಷಿನ್ ನಲ್ಲಿ. ಆಲ್‌ ವಿಟಮಿನ್ಸ್‌ ಅಂಡ್‌ ಸ್ಯೂಡೋ-ವಿಟಮಿನ್ಸ್‌. ಡೇವಿಡ್‌ ಬೆನ್ನೆಟ್‌‌ರಿಂದ ಸಂಪಾದಿತ.
  49. ೪೯.೦ ೪೯.೧ ಮೈಕೆಲ್‌‌ W. ಡೇವಿಡ್‌ಸನ್‌ (2004) ಅಂಥ್ರಾನಿಲಿಕ್‌ ಆಸಿಡ್‌ (ವಿಟಮಿನ್‌‌ L) ಫ್ಲಾರಿಡಾ ರಾಜ್ಯ ವಿಶ್ವವಿದ್ಯಾಲಯ. ಮರುಪಡೆದ ದಿನಾಂಕ 2009-02-20.
  50. "ವಿಟಮಿನ್ಸ್‌ ಅಂಡ್‌ ಮಿನರಲ್ಸ್‌‌ - ನೇಮ್ಸ್‌ ಅಂಡ್‌ ಫ್ಯಾಕ್ಟ್‌‌". Archived from the original on 2007-07-04. Retrieved 2010-03-03.

ಹೊರಗಿನ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Portal