ಹೃದಯ ಸ್ತಂಭನ , (ಇದನ್ನು ಶ್ವಾಸಕೋಶದ ಶುದ್ಧ ರಕ್ತನಾಳ ಸ್ತಂಭನ ಅಥವಾ ರಕ್ತಪರಿಚಲನೆ ಸ್ತಂಭನ ಎಂದೂ ಗುರುತಿಸಲಾಗುತ್ತದೆ) ಎಂಬುದು ಕ್ರಮಬದ್ಧವಾದ ರಕ್ತಪರಿಚಲನೆಯು ಹೃದಯಕ್ಕೆ ಪರಿಣಾಮಾತ್ಮಕವಾಗಿ ಸೇರಲು ವಿಫಲವಾಗಿ ಹೃದಯ ಬಡಿತ ಅಂತ್ಯ ಅಥವಾ ತಾತ್ಕಾಲಿಕ ಅಂತ್ಯವನ್ನು ಕಾಣುತ್ತದೆ. ಮತ್ತು ಈ ಅನಿರೀಕ್ಷಿತ ಘಟನೆಯನ್ನು ಹಠಾತ್ ಹೃದಯ ಸ್ತಂಭನ ಅಥವಾ ಎಸ್‌ಸಿಎ ಎಂದು ಕರೆಯಲಾಗುತ್ತದೆ.ಹೃದಯ ಸ್ತಂಭನವು ಹೃದಯಾಘತಕ್ಕಿಂತ ಭಿನ್ನವಾಗಿದ್ದು (ಆದರೆ ಹೃದಯಾಘಾತಕ್ಕೆ ಕಾರಣವೂ ಆಗಬಹುದು), ಹೃದಯದ ಸ್ನಾಯುಭಾಗದಲ್ಲಿನ ರಕ್ತಸಂಚಾರದ ಏರಿಳಿತವು ದುರ್ಬಲವಾಗುತ್ತದೆ. ರಕ್ತಸಂಚಾರದಲ್ಲಿ ಸ್ತಂಭನವಾದಾಗ ದೇಹಕ್ಕೆ ಆಮ್ಲಜನಕವು ಸರಬರಾಜಾಗುವುದನ್ನು ತಡೆಯುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಿಕ ಸರಬರಾಜು ಪ್ರಮಾಣದಲ್ಲಿ ಕಡಿಮೆಯಾಗಿ ಪ್ರಜ್ಞೆ ಹೋಗುವುದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಉಸಿರಾಟ ಪ್ರಮಾಣವು ಹೆಚ್ಚಾಗುತ್ತದೆ ಅಥವಾ ನಿಲ್ಲುತ್ತದೆ. ಈ ರೀತಿಯ ಹೃದಯ ಸ್ತಂಭನ ಉಂಟಾದಾಗ ಐದು ನಿಮಿಷಗಳ ವರೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಬ್ರೈನ್ ಇಂಜುರಿ (ಮೈದುಳು ನಿಷ್ಕ್ರಿಯ)ವಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಆ ರೋಗಕ್ಕೆ ತುತ್ತಾದವರನ್ನು ಬದುಕಿಸಲು ಮತ್ತು ನರಶಾಸ್ತ್ರೀಯ ಗುಣಮುಖಕ್ಕೆ ತಕ್ಷಣದ ಮತ್ತು ನಿರ್ಧಿಷ್ಟವಾದ ಚಿಕಿತ್ಸೆ ಅತಿ ಅವಶ್ಯಕವಾಗಿದೆ.ಹೃದಯ ಸ್ತಂಭನವು ತುರ್ತು ವೈದ್ಯಕೀಯ ರೋಗವಾಗಿದ್ದು, ಕೆಲವು ಸಂದರ್ಭದಲ್ಲಿ ಮುಂಚೆಯೇ ಇದಕ್ಕೆ ಚಿಕಿತ್ಸೆ ನೀಡುವುದರಿಂದ ಸಾಮರ್ಥ್ಯದಲ್ಲಿ ಹಿಂದೆಮುಂದೆ ಆಗುವ ಸಾಧ್ಯತೆಗಳಿರುತ್ತದೆ. ಅನಿರೀಕ್ಷಿತವಾಗಿ ಹೃದಯ ಸ್ತಂಭನ ಉಂಟಾಗಿ ಸಾವು ಸಂಭವಿಸಿದರೆ, ಅದನ್ನು ಸಡನ್ ಕಾರ್ಡಿಯಾಕ್ ಡೆತ್ (ಎಸ್ ಸಿ ಡಿ) (ಅನಿರೀಕ್ಷಿತ ಹೃದಯ ಸಾವು) ಎಂದು ಕರೆಯಲಾಗುತ್ತದೆ. ಹೃದಯ ಸ್ತಂಭನಕ್ಕೆ ಚಿಕಿತ್ಸೆಯೆಂದರೆ ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧರಕ್ತನಾಳವು (ಸಿಪಿಆರ್- (ಕಾರ್ಡಿಯೋಪಲ್ಮೋನರಿ ರೆಸಸಿಟೇಶನ್) ಗಾಬಿರಯುತ ಹೃದಯ ಬಡಿತ ಅಥವಾ ಕಂಪನವನ್ನು ಅನುಸರಿಸಿದರೆ ಸುಗಮ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧ ರಕ್ತನಾಳ ಮತ್ತು ಕೆಲ ಅಂಶಗಳ ಮಧ್ಯಪ್ರವೇಶದಿಂದ ಒಂದು ವೇಳೆ ಗಾಬರಿಯುತ ಹೃದಯ ಕಂಪನವು ಆ ಕ್ಷಣದಲ್ಲಿ ಇಲ್ಲದೇ ಹೋದಲ್ಲಿ ವೈದ್ಯಕೀಯ ಮೃತ್ಯು ಅನಿವಾರ್ಯವಾಗುತ್ತದೆ.

ಹೃದಯ ಸ್ತಂಭನ
Classification and external resources
ಹೃದಯ ಸ್ತಂಭನದ ಅನುಕೃತಿ ಸಮಯದಲ್ಲಿ CPR ಅನ್ನು ನಿರ್ವಹಿಸಲಾಗುತ್ತದೆ.
ICD-10I46
ICD-9427.5
MeSHD006323

ವರ್ಗೀಕರಣ ಬದಲಾಯಿಸಿ

ಹೃದಯ ಸ್ತಂಭನವನ್ನು ಆಘಾತಕ್ಕೊಳಗಾಗುವ (shockable) ವಿರುದ್ಧ ಆಘಾತಕ್ಕೊಳಗಾಗದ (non–shockable) ಎಂದು ವರ್ಗೀಕರಿಸಲಾಗಿದ್ದು, ಇದು ಇಸಿಜಿ ಬಡಿತಕ್ಕೆ ಅನುಗುಣವಾಗಿ ರಚಿತಗೊಂಡಿದೆ. ಎರಡು ಆಘಾತಕ್ಕೊಳಗಾಗುವ ಬಡಿತಗಳಾದ ಹೃದಯಗೂಡಿನ ಕಂಪನ ಮತ್ತು ನಾಡಿಮಿಡಿತವಿಲ್ಲದ ಹೃದಯ ಗೂಡಿನ ಅತಿಯಾದ ಬಡಿತವಾಗಿದೆ. ಎರಡು ಆಘಾತಕ್ಕೊಳಗಾಗದ ಬಡಿತಗಳಾದ ಅಸಿಟೋಲ್ ಮತ್ತು ನಾಡಿಮಿಡಿತವಿಲ್ಲದ ವಿದ್ಯುತ್ ಚಾಲನೆಯಾಗಿದೆ. ಇದು ನಿರ್ದಿಷ್ಟವಾದ ಅಸಮತೋಲನ ಕಂಪನದ ವರ್ಗವಾಗಿರುತ್ತದೋ ಇಲ್ಲವೋ ಎಂಬ ಕಂಪನರಹಿತವಾದುದನ್ನು ಚಿಕಿತ್ಸೆ ಮಾಡುವುದರ ಮೂಲಕ ಗುಣಪಡಿಸಬಹುದು.

ಚಿಹ್ನೆಗಳು ಹಾಗು ರೋಗ-ಲಕ್ಷಣಗಳು ಬದಲಾಯಿಸಿ

ಹೃದಯ ಸ್ತಂಭನವು ಹೃದಯ ಬಡಿತ ಪ್ರಕ್ರಿಯೆಯನ್ನು ಏಕಾಏಕಿ ನಿಲ್ಲಿಸುತ್ತದೆ. (ಹೃದಯ ಬಡಿತವಿಲ್ಲದಿರುವುದನ್ನು ಸ್ಪರ್ಶಗೋಚರದಿಂದ ಅನುಭವಕ್ಕೆ ಬರುತ್ತದೆ). ಹೃದಯ ಸ್ತಂಭನವು ಸಾಮಾನ್ಯವಾಗಿ ಶೀಘ್ರ ಮಧ್ಯಪ್ರವೇಶದಿಂದ ಅಂದರೆ ಚಿಕಿತ್ಸೆ ನೀಡಿದಲ್ಲಿ ಮೊದಲಿನ ಸ್ಥಿತಿಗೆ ಬರುತ್ತದೆ. ಆದರೆ ಮಧ್ಯಪ್ರವೇಶ ಮಾಡದೇ ಇದ್ದಲ್ಲಿ ಇದು ಸಾವಿನ ಮನೆಗೆ ಕೊಂಡೊಯ್ಯುವುದು ನಿಶ್ಚಿತವಾಗಿದೆ. ಕೆಲ ಪ್ರಕರಣಗಳಲ್ಲಿ ನಿರೀಕ್ಷಿತ ಫಲಿತಾಂಶವಾಗಿ ತೀವ್ರ ಅಸ್ವಸ್ಥರಾಗುತ್ತಾರೆ.ಆದಾಗ್ಯೂ ಮೆದುಳಿಗೆ ಆವರಿಸಬೇಕಾದ ಸಾಮರ್ಥ್ಯದಲ್ಲಿ ಕಡಿಮೆಯಾದರೆ, ಆ ರೋಗಿಯು ಪ್ರಜ್ಞಾಹೀನನಾಗುತ್ತಾನೆ ಮತ್ತು ಉಸಿರಾಟವನ್ನು ನಿಲ್ಲಿಸುತ್ತಾನೆ. ಮುಖ್ಯವಾಗಿ ರೋಗ ನಿರ್ಣಯಕ್ಕೆ ಮಾನದಂಡವಾಗಿ ಹೃದಯಸ್ತಂಭನಕ್ಕೆ ಚಿಕಿತ್ಸೆಯನ್ನು ನೀಡಲಾಗುತ್ತದೆ. (ಇದಕ್ಕೆ ವಿರುದ್ಧವಾಗಿ ಉಸಿರಾಟ ಅಥವಾ ಶ್ವಾಸೋಚ್ವ್ಸಾಸದ ಸ್ತಂಭನವು ಇದೇ ರಿತಿಯ ಹಲವು ಲಕ್ಷಣಗಳನ್ನು ಹಂಚಿಕೊಂಡಿರುತ್ತದೆ.) ರಕ್ತಸಂಚಾರದ ಕೊರತೆಯಿರುತ್ತದೆ. ಆದರೂ ಇದನ್ನು ನಿರ್ಧರಿಸಲು ಹಲವಾರು ದಾರಿಗಳು ಇರುತ್ತದೆ.

ಕಾರಣಗಳು ಬದಲಾಯಿಸಿ

ಹೃದಯಕ್ಕೆ ರಕ್ತಒದಗಿಸುವ ರಕ್ತನಾಳಕ್ಕೆ ಸಂಬಂಧಿಸಿದ ರೋಗವು ದಿಢೀರ್ ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣವಾಗಬಹುದು. ಕೆಲವು ಹೃದಯ ಸಂದಂಧಿ ಮತ್ತು ಹೃದಯೇತರ ಆರೋಗ್ಯ ಸ್ಥಿತಿಯೂ ತೊಂದರೆಯನ್ನು ಹೆಚ್ಚು ಮಾಡುತ್ತದೆ.

ಹೃದಯಕ್ಕೆ ಸಂಬಂಧಿಸಿದ ರಕ್ತನಾಳ ರೋಗ ಬದಲಾಯಿಸಿ

ಅಂದಾಜಿನಂತೆ 60ರಿಂದ 70 ಪ್ರತಿಶತದಷ್ಟು ಎಸ್ ಸಿ ಡಿ (ಹಠಾತ್ ಹೃದಯ ಸಾವು) ಯು ಹೃದಯಕ್ಕೆ ಸಂಬಂಧಿಸಿದ ರಕ್ತನಾಳದಿಂದ ಉಂಟಾಗುವ ರೋಗದಿಂದ ಸಂಭವಿಸುತ್ತದೆ. ವಯಸ್ಕರಲ್ಲಿ ಹೃದಯಕ್ಕೆ ರಕ್ತಕೊರತೆಯ ರೋಗವು ಹೃದಯಸ್ತಂಭನಕ್ಕೆ ಪ್ರಬಲವಾದ ಕಾರಣವಾಗಿದೆ. ಶೇಕಡಾ 30ರಷ್ಟು ಜನರ ಶವಪರೀಕ್ಷೆ ವೇಳೆ ಅವರ ಹೃದಯದ ಸ್ನಾಯುವಿನ ಊತಕ ಸತ್ತುಹೋಗಿರುವ ಕರುಹು ಕಾಣಸಿಗುತ್ತದೆ.

ರಕ್ತಕೊರತೆ ಇಲ್ಲದ ಹೃದ್ರೋಗ ಬದಲಾಯಿಸಿ

ಹಲವು ಸಂಖ್ಯೆಯ ಹೃದಯ ಸಂಬಂಧೀ ವೈಪರಿತ್ಯಗಳಿಂದಾಗಿ ಎಸ್ ಸಿ ಡಿ (ಹಠಾತ್ ಹೃದಯ ಸಾವು) ಯ ತೊಂದರೆ ಹೆಚ್ಚಾಗುತ್ತದೆ. ಇದು ಕಾರ್ಡಿಯೋಮ್ಯೂಪತಿ, ಹೃದಯ ಬಡಿತದಲ್ಲಿ ಅಡಚಣೆ, ಹೃದಯದ ಅಧಿಕ ರಕ್ತದೊತ್ತಡ ರೋಗ, ರಕ್ತಸಂಚಾರದಿಂದಾದ ಹೃದಯ ವೈಫಲ್ಯವನ್ನು ಒಳಗೊಂಡಿದೆ. ಮಿಲಟರಿಯಲ್ಲಿರುವ 18ರಿಂದ 35 ವಯಸ್ಸಿನ ಅನನುಭವಿ ಸೈನಿಕರ ಗುಂಪಿನಲ್ಲಿ, ಹೃದಯ ಅಸಮತೋಲನತೆಯ ಶೇಕಡಾ 51ರಷ್ಟು ಎಸ್ ಸಿ ಡಿ ಪ್ರಕರಣವು ಸಿಗುತ್ತದೆ. ಇದರಲ್ಲಿ ಶೇಕಡಾ 35 ರಷ್ಟು ಪ್ರಕರಣಗಳ ಕಾರಣಗಳು ತಿಳಿಯುವುದಿಲ್ಲ. ರೋಗಶಾಸ್ತ್ರದ ಆಧಾರದ ಮೇಲೆ ಹೃದಯದ ಅಪಧಮನಿ (ಹೃದಯದಿಂದ ಇತರ ಭಾಗಗಳಿಗೆ ರಕ್ತ ಒಯ್ಯುವ ನಾಳ) ಯ ವೈಪರೀತ್ಯವು (ಶೇಕಡಾ 61), ಹೃದಯ ಸ್ನಾಯುವಿನ ಉರಿಯೂತ (ಶೇಕಡಾ 20), ಮತ್ತು ಅತಿಯಾಗಿ ಬೆಳೆದ ಕಾರ್ಡಿಯೋಮ್ಯೋಪಥಿ ಅವಯವ (ಶೇಕಡಾ 13) ಇರುತ್ತದೆ ಎಂದು ಹೇಳಲಾಗಿದೆ. ರಕ್ತದೊತ್ತಡದ ಹೃದಯ ವೈಫಲ್ಯವು ಎಸ್ ಸಿ ಡಿ ತೊಂದರೆಯನ್ನು ಐದು ಪಟ್ಟು ಹೆಚ್ಚಾಗಿಸುತ್ತದೆ.[೧]

ಹೃದಯನಾಳೇತರ ಸಮಸ್ಯೆಗಳು ಬದಲಾಯಿಸಿ

ಎಸ್ ಸಿ ಡಿ (ಹಠಾತ್ ಹೃದಯ ಸಾವು) ವು ಶೇಕಡಾ 33ರಷ್ಟು ಪ್ರಕರಣಗಳಲ್ಲಿ ಹೃದಯ ತೊಂದರೆಗೆ ಸಂಬಂಧಿಸಿದ್ದಾಗಿರುವುದಿಲ್ಲ. ಹೃದ್ರೋಗವಲ್ಲದ ಮುಖ್ಯವಾದ ಸಾಮಾನ್ಯ ಕಾರಣಗಳೆಂದರೆ, ಮಾನಸಿಕ ಅಥವಾ ದೈಹಿಕ ಆಘಾತ (ಗಾಯ), ದೈಹಿಕ ಗಾಯಕ್ಕೆ ಸಂಬಂಧಿಸಲ್ಲದ ರಕ್ತಸ್ರಾವ (ಅವುಗಳೆಂದರೆ ಕರುಳಿನಭಾಗದಲ್ಲಿನ ರಕ್ತಸ್ರಾವ, ಮಹಾಪಧಮನಿ ಬಿರುಕಿನಿಂದ ಉಂಟಾದ ಊತ ಮತ್ತು ತಲೆಬುರುಡೆಯೊಳಗಿನ ಆಘಾತ, ಅತಿಯಾದ ಪ್ರಮಾಣದ ಔಷಧಿ ಸೇವನೆ, ರಕ್ತನಾಳದಲ್ಲಾಗುವ ಅಡಚನೆಯಿಂದ ಶ್ವಾಸಕೋಶದಲ್ಲಿ ತೊಂದರೆಯಾಗಿ ಉಸಿರುಗಟ್ಟುವುದು.[೨]

ಅಪಾಯಕಾರಿ ಅಂಶಗಳು ಬದಲಾಯಿಸಿ

ಎಸ್‌ಸಿಡಿಗೆ ಅಪಾಯಕಾರಿ ಅಂಶಗಳು ಹೃದಯಕ್ಕೆ ಸಂಬಂಧಿಸಿದ ರಕ್ತನಾಳ ರೋಗಗಳ ಹಾಗೆ ಕಾಣುತ್ತವೆ, ಧೂಮಪಾನ, ದೈಹಿಕ ವ್ಯಾಯಾಮದ ಕೊರತೆ, ಸ್ಥೂಲಕಾಯತೆ, ಡಯಾಬಿಟಿಸ್, ಮತ್ತು ಕೌಟುಂಬಿಕ ಹಿನ್ನೆಲೆಗಳನ್ನು ಇದು ಒಳಗೊಂಡಿದೆ.[೩]

ಎಚ್‌ಗಳು ಮತ್ತು ಟಿಗಳು ಬದಲಾಯಿಸಿ

ಹೃದಯ ಸ್ತಂಭನಕ್ಕೆ ಕಾರಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ನೆನಪಿನ ಸಹಾಯಕ್ಕಾಗಿ ಎಚ್‌ಗಳು ಮತ್ತು ಟಿಗಳು ಉಪಯೋಗಿಸಲಾಗುತ್ತದೆ.[೪][೫]

Hs

ಹೈ ಪೊವೊಲೆಮಿಯ- ರಕ್ತದ ಕೊರತೆ

ಹೈ ಪೋಕ್ಸಿಯ - ಆಮ್ಲಜನಕದ ಕೊರತೆ

ಹೈ ಡ್ರೋಜನ್ ಅಯಾನುಗಳು (ಆಮ್ಲವ್ಯಾಧಿ) - ದೇಹದಲ್ಲಿ pHನ ಅಸಹಜತೆ

ಹೈ ಪರ್‌ಕಲೆಮಿಯ ಅಥವಾ ಹೈ ಪೊಕಲೆಮಿಯ - ಪೊಟ್ಯಾಸಿಯಮ್‌ನ ಅಧಿಕತೆ ಮತ್ತು ಕೊರತೆ ಎರಡೂ ಜೀವಕ್ಕೆ ಹಾನಿಮಾಡಬಹುದು.

ಹೈ ಪೋಥರ್ಮಿಯ - ಕಡಿಮೆಪ್ರಮಾಣದ ದೇಹದ ಉಷ್ಣತೆ

ಹೈ ಪೋಗ್ಲೈಸೆಮಿಯ ಅಥವಾ ಹೈ ಪರ್‌ಗ್ಲೈಸೆಮಿಯ - ರಕ್ತದ ಗ್ಲುಕೋಸ್ ಹೆಚ್ಚಳ ಅಥವಾ ಇಳಿತ

ಟಿಗಳು

ಗುಳಿಗೆಗಳು ಅಥವಾ ನಂಜುಗಳು

ಹೃದಯ ಪ್ರತಿರೋಧ - ಹೃದಯದ ಸುತ್ತಲೂ ದ್ರವದಂತಹ ಅಂಶವನ್ನು ಉತ್ಪತ್ತಿ ಮಾಡುವುದು.

  • ಉದ್ವೇಗ ನ್ಯೂಮೊಥೋರಾಕ್ಸ್ - ಶ್ವಾಸಕೋಶದ ವಿಫಲತೆ
  • ಘನೀಭವನ (ಮಯೋಕಾರ್ಡಿಯಲ್ ಇನ್‌ಫೆಕ್ಷನ್) - ಹೃದಯಾಘಾತ
  • ಥ್ರೊಂ ಬಾಲಿಸಮ್ (ಶ್ವಾಸಕೋಶದ ಧಮನಿರೋಧ ) - ಶ್ವಾಸಕೋಶದಲ್ಲಿ ರಕ್ತದ ಹೆಪ್ಪುಗತ್ತುವಿಕೆ
  • ದೈಹಿಕ ಗಾಯ

ರೋಗನಿರ್ಣಯ ಬದಲಾಯಿಸಿ

 
ಉಸಿರಾಟದ ತಪಾಸಣೆ.
 
ಶೀರ್ಷ ಧಮನಿ ನಾಡಿ ತಪಾಸಣೆ

ಹೃದಯ ಸ್ತಂಭನವು ವೈದ್ಯಕೀಯ ಮೃತ್ಯುವಿನ ತರಹದ್ದೇ ಆಗಿದೆ. ಸಾಮಾನ್ಯವಾಗಿ ಹೃದಯ ಸ್ತಂಭನವನ್ನು ವೈದ್ಯಕೀಯವಾಗಿ ನಾಡಿಮಿಡಿತದ ಸಹಾಯವಿಲ್ಲದೆ ನಿರ್ಣಯಿಸಲಾಗುತ್ತದೆ. ಬಹಳ ಸಂದರ್ಭಗಳಲ್ಲಿ ಶೀರ್ಷ ಧಮನಿ ಮಿಡಿತದ ಕೊರತೆ ಹೃದಯ ಸ್ತಂಭನವನ್ನು ನಿರ್ಣಯಿಸಲು ಒಂದು ಸುವರ್ಣಮಾನವಾಗಿದೆ, ಆದರೆ ನಾಡಿಮಿಡಿತದ ಕೊರತೆ (ವಿಶೇಷವಾಗಿ ಬಾಹ್ಯ ನಾಡಿಮಿಡಿತಗಳಲ್ಲಿ) ಇತರ ಪರಿಸ್ಥಿತಿಗಳ (ಉದಾಹರಣೆಗೆ ಆಘಾತ) ಪರಿಣಾಮವಾಗಿರಬಹುದು, ಅಥವಾ ರಕ್ಷಕರ ಸಾಧಾರಣವಾದ ತಪ್ಪಿನ ಭಾಗವಾಗಿರಬಹುದು. ಕೆಲವೊಮ್ಮೆ ರಕ್ಷಕರು ಆರೋಗ್ಯ ವೃತ್ತಿನಿರತರಾಗಿದ್ದರೂ[೬] ಅಥವಾ ಸಾಮಾನ್ಯ ಮನುಷ್ಯರಾಗಿದ್ದರೂ ತುರ್ತುಸ್ಥಿತಿಯಲ್ಲಿ ಶೀರ್ಷ ಧಮನಿ ಮಿಡಿತವನ್ನು ಪರೀಕ್ಷಿಸುವಾಗ ತಪ್ಪನ್ನು ಮಾಡುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.[೭] ಈ ರೋಗನಿರ್ಣಯ ವಿಧಾನದಲ್ಲಿನ ಅನಿಷ್ಕೃಷ್ಟತೆಯ ಕಾರಣ ಯುರೋಪಿಯನ್ ರಿಸಕ್ಸಿಟೇಷನ್‌‍ ಕೌನ್ಸಿಲ್ (ಇಆರ್‌ಸಿ) ದಂತಹ ಕೆಲವು ಸಮಿತಿಗಳು ಇದರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿದವು. ಅಮೇರಿಕಾದ ರಿ ಸಕ್ಸಿಟೇಷನ್ ಕೌನ್ಸಿಲ್ (ಯುಕೆ), ಇಆರ್‌ಸಿಯ ಶಿಫಾರಸ್ಸನ್ನು ಒಪ್ಪಿಕೊಂಡಿತು ಮತ್ತು ನಿಶ್ಚಿತ ತರಬೇತಿ ಮತ್ತು ಪರಿಣತಿಯೊಂದಿಗೆ ವೈದ್ಯಕೀಯ ವೃತ್ತಿನಿರತರು ಮಾತ್ರ ಈ ವಿಧಾನವನ್ನು ಉಪಯೋಗಿಸಬೇಕು ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಸಲಹೆ ನೀಡಿತು,[೫] ಮತ್ತು ನಂತರ ಇದು ಅಗೋನಲ್ ಉಸಿರಾಟದಂತಹ ಇತರ ಸೂಚನೆ ನೀಡುವುದರ ಜೊತೆ ಸಂಯೋಗಿಸಿ ನೋಡಬೇಕು.[೪] ರಕ್ತಪರಿಚಲನೆಯನ್ನು ಕಂಡುಹಿಡಿಯಲು ವಿವಿಧ ಇತರ ವಿಧಾನಗಳನ್ನು ಪ್ರಸ್ತಾಪಿಸಿತು. ರಿಸಕ್ಸಿಷನ್ ಕುರಿತಾದ ಅಂತರಾಷ್ಟ್ರೀಯ ಲೈಸನ್ ಕಮಿಟಿ 2000 (ಆಯ್‌ಎಲ್‌ಸಿಒಆರ್)ರ ಮಾರ್ಗದರ್ಶನಗಳು ರಕ್ಷಕರಿಗೆ "ರಕ್ತಪರಿಚಲನೆಯ ಗುರುತುಗಳನ್ನು" ನೋಡಲು ಸಲಹೆ ನೀಡಿದ್ದವು. ಆದರೆ ನಿಶ್ಚಿತವಾಗಿ ನಾಡಿ ಮಿಡಿತಕ್ಕಲ್ಲ.[೫] ಕೆಮ್ಮುವುದು, ಮೇಲುಸಿರು ತೆಗೆಯುವುದು, ಬಣ್ಣ, ಸೆಳೆತ ಮತ್ತು ಚಲನೆಗಳು ಈ ಗುರುತುಗಳಾಗಿವೆ.[೮] ಆದಾಗ್ಯೂ, ಈ ಮಾರ್ಗದರ್ಶನಗಳು ಪರಿಣಾಮಕಾರಿಯಾಗಿಲ್ಲ ಎಂದು ಸಾಕ್ಷ್ಯಾಧಾರ ತೋರಿಸಿತು, ಎಲ್ಲ ಅಪಘಾತದಲ್ಲಿ ಪ್ರಜ್ಞೆಯಿಲ್ಲದವರು ಮತ್ತು ಅಸಹಜವಾಗಿ ಉಸಿರಾಡುವವರ ಹೃದಯ ಸ್ತಂಭನವನ್ನು ನಿರ್ಣಯಿಸಬೇಕು ಎಂಬುದು ಆಯ್‌ಎಲ್‌ಸಿಒಆರ್‌ನ ಈಗಿನ ಶಿಫಾರಸ್ಸಾಗಿದೆ.[೫]

ತಡೆಗಟ್ಟುವುದು ಬದಲಾಯಿಸಿ

ಸಕಾರಾತ್ಮಕ ಪರಿಣಾಮದ ಜೊತೆಗೆ ಹೃದಯ ಸ್ತಂಭನದ ಸಂಭವನೀಯತೆಯ ನಂತರ, ಹೃದಯ ಸ್ತಂಭನವನ್ನು ತಡೆಗಟ್ಟಲು ಪರಿಣಾಮಕಾರಿ ವಿಧಾನವನ್ನು ಕಂಡುಹಿಡಿಯುವ ಪ್ರಯತ್ನ ನಡೆಯಿತು. ಹೃದಯ ಸ್ತಂಭನದ ಪ್ರಮುಖ ಕಾರಣವಾದ ಹೃದಯಕ್ಕೆ ರಕ್ತ ಕೊರತೆ ರೋಗಕ್ಕೆ, ಆರೋಗ್ಯಪೂರ್ಣ ಆಹಾರಪದ್ಧತಿಯ ಅಳವಡಿಕೆಯ ಪ್ರಯತ್ನ, ವ್ಯಾಯಾಮ, ಮತ್ತು ಧೂಮಪಾನದ ಸಮಾಪ್ತಿಗಳು ಮುಖ್ಯವಾಗಿವೆ.ಹೃದಯ ತೊಂದರೆಯ ಅಪಾಯದಲ್ಲಿರುವವರಿಗೆ, ರಕ್ತದೊತ್ತಡದ ನಿಯಂತ್ರಣ, ಕಡಿಮೆ ಕೊಲೆಸ್ಟರಾಲ್, ಮತ್ತು ಇತರ ವೈದ್ಯಕೀಯ-ನಿವಾರಣಾ ಕ್ರಮಗಳನ್ನು ಉಪಯೋಗಿಸಲಾಗುತ್ತದೆ.[೧]

ಕೋಡ್ ಗುಂಪುಗಳು ಬದಲಾಯಿಸಿ

ವೈದ್ಯಕೀಯ ಭಾಷೆಯಲ್ಲಿ, ಹೃದಯ ಸ್ತಂಭನವನ್ನು ಒಂದು "ಸಂಕೇತ" ಅಥವಾ ಒಂದು "ಕ್ರ್ಯಾಶ್" ದಿಂದ ಸೂಚಿಸಲಾಗುತ್ತದೆ. ಇದು ವಿಶಿಷ್ಟವಾಗಿ ಆಸ್ಪತ್ರೆಯ ತುರ್ತುಸ್ಥಿತಿ ಕೋಡ್‌ಗಳ ಮೇಲೆ "ನೀಲಿ ಸಂಕೇತ" ಸೂಚಿಸುತ್ತದೆ. ಅಗತ್ಯ ಚಿಹ್ನೆ ಅಳತೆಯಲ್ಲಿ ನಾಟಕೀಯವಾಗಿ ಕಡಿಮೆಯಾಗುವುದನ್ನು "ಕೋಡಿಂಗ್" ಅಥವಾ "ಕ್ರ್ಯಾಶಿಂಗ್" ಎಂದು ಕರೆಯಲಾಗುತ್ತದೆ. ಆದರೆ ಹೃದಯ ಸ್ತಂಭನವಾದಾಗ ಕೋಡಿಂಗ್ ಅನ್ನು ಬಳಸಲಾಗುತ್ತದೆ ಆದರೆ ಕ್ರ್ಯಾಶಿಂಗ್ ಅನ್ನು ಸಾಮಾನ್ಯವಾಗಿ ಬಳಸಲಾಗುವುದಿಲ್ಲ. ಕೆಲವೊಮ್ಮೆ ಹೃದಯ ಸ್ತಂಭನಕ್ಕೆ ಚಿಕಿತ್ಸೆಯನ್ನು "calling a code" ಎನ್ನುವರು.ಜನರಲ್ ವಾರ್ಡ್‌ನಲ್ಲಿರುವ ರೋಗಿಗಳು ಹೃದಯ ಸ್ತಂಭನ ಉಂಟಾಗುವ ಕೆಲವು ಘಂಟೆಗಳು ಅಥವಾ ದಿನಗಳ ಮೊದಲು ಸಹ ಕೆಲವೊಮ್ಮೆ ಕ್ಷೀಣಿಸುತ್ತಾರೆ ಎಂದು ವಿಸ್ತೃತ ಸಂಶೋಧನೆ ತೋರಿಸಿದೆ.[೪][೯] ಇದು ವಾರ್ಡ್‌ನ ನೌಕರ ವರ್ಗದವರಲ್ಲಿ ಜ್ಞಾನ ಮತ್ತು ನೈಪುಣ್ಯತೆಯ ಕೊರತೆಯನ್ನು ಸೂಚಿಸುತ್ತದೆ, ಮುಖ್ಯವಾಗಿ ಉಸಿರಾಟದ ಪ್ರಮಾಣದ ಅಳತೆಯನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವುದು, ಇದು ಕೆಲವೊಮ್ಮೆ ಕ್ಷೀಣತೆಯ ಭವಿಷ್ಯಸೂಚಕವಾಗುತ್ತದೆ[೪] ಮತ್ತು ಕೆಲವೊಮ್ಮೆ ಹೃದಯ ಸ್ತಂಭನದ 48 ಘಂಟೆ ಮೊದಲು ಬದಲಾಗಬಹುದು. ಇದರ ಸಲುವಾಗಿ, ಈಗ ಬಹಳ ಆಸ್ಪತ್ರೆಗಳು ವಾರ್ಡ್‌ನ ನೌಕರ ವರ್ಗದವರಿಗೆ ಹೆಚ್ಚಿನ ತರಬೇತಿಯನ್ನು ನೀಡುತ್ತವೆ. ಬಹಳಷ್ಟು "ಮುನ್ನೆಚ್ಚರಿಕೆ" ಪದ್ಧತಿಗಳು ಸಹ ಇವೆ, ಇವು ಕ್ಷೀಣಿಸುತ್ತಿರುವ ರೋಗಿಗಳ ಅಪಾಯವನ್ನು ಅವರ ಮಹತ್ವಪೂರ್ಣ ಚಿಹ್ನೆಗಳ ಆಧಾರದ ಮೇಲೆ ಗೊತ್ತುಮಾಡುವ ಉದ್ದೇಶ ಹೊಂದಿವೆ ಮತ್ತು ಹೀಗೆ ನೌಕರವರ್ಗದವರಿಗೆ ಮಾರ್ಗದರ್ಶನ ಒದಗಿಸುತ್ತವೆ. ಇದರ ಜೊತೆಗೆ, ನುರಿತ ನೌಕರವರ್ಗದವರನ್ನು ಹೆಚ್ಚು ಪರಿಣಾಮಕಾರಿಯಾಗಿ ಈಗಾಗಲೇ ವಾರ್ಡ್‌ ಲೆವೆಲ್‌ನಲ್ಲಿ ಆದ ಕೆಲಸವನ್ನು ವೃದ್ಧಿಸಲು ಉಪಯೋಗಿಸಲಾಗಿದೆ. ಅವುಗಳೆಂದರೆ:

  • ಕ್ರಾಶ್ ಗುಂಪುಗಳು (ಅಥವಾ ಕೋಡ್ ಗುಂಪುಗಳು) - ಅಂದರೆ ಮತ್ತೆ ಬದುಕಿಸುವಲ್ಲಿ ವಿಶಿಷ್ಟವಾಗಿ ಪರಿಣಿತಿಯನ್ನು ಹೊಂದಿದ ನೌಕರವರ್ಗದ ಸದಸ್ಯರಾಗಿದ್ದು ಆಸ್ಪತ್ರೆಯ ಒಳಗೇ ಸ್ತಂಭನಗಳು ಉಂಟಾದಾಗ ಅವರನ್ನು ಕರೆಸಲಾಗುತ್ತದೆ.
  • ಇದು ಸಾಮಾನ್ಯವಾಗಿ ವಿಶೇಷವಾದ ಸಲಕರಣೆಗಳ (ಡಿಫೈಬ್ರಿಲೇಟರ್‌ನ್ನು ಒಳಗೊಂಡ) ಮತ್ತು "ಕ್ರ್ಯಾಶ್ ಕಾರ್ಟ್" ಎನ್ನುವ ಔಷಧಿಗಳ ಗಾಡಿಯನ್ನು ಒಳಗೊಂಡಿರುತ್ತದೆ.
  • ವೈದ್ಯಕೀಯ ತುರ್ತುಸ್ಥಿತಿ ಗುಂಪುಗಳು - ಈ ಗುಂಪುಗಳು ಎಲ್ಲ ತುರ್ತುಸ್ಥಿತಿಗಳಲ್ಲಿ ಪ್ರತಿಸ್ಪಂದಿಸುತ್ತವೆ, ಹೃದಯ ಸ್ತಂಭನವನ್ನು ತಡೆಗಟ್ಟಲು ರೋಗಿಗಳ ವ್ಯಾಧಿಯ ತೀವ್ರ ಸ್ಥಿತಿಯ ಚಿಕಿತ್ಸೆಯನ್ನು ಮಾಡುವ ಉದ್ದೇಶ ಹೊಂದಿವೆ.

ಮಹತ್ವದ ಕಾಳಜಿ ನೀಡುವಿಕೆ - ಇತರ ಎರಡು ಗುಂಪುಗಳ ಸೇವೆಗಳನ್ನು ಒದಗಿಸುವುದರ ಜೊತೆಗೆ, ಈ ಗುಂಪುಗಳು ಪರಿಣಿತರಲ್ಲದ ನೌಕರರಿಗೆ ಕಲಿಸುವ ಜವಾಬ್ದಾರಿ ಸಹ ಹೊಂದಿರುತ್ತವೆ. ಇದರ ಜೊತೆಗೆ, ತೀವ್ರ ಚಿಕಿತ್ಸೆ/ಅಧಿಕ ಅವಲಂಬನಾ ಘಟಕಗಳು ಮತ್ತು ಸಾರ್ವತ್ರಿಕ ಆಸ್ಪತ್ರೆ ವಾರ್ಡ್‌ಗಳ ನಡುವೆ ಸುಲಭವಾಗಿ ವರ್ಗಾಯಿಸಲು ಅವು ಸಹಾಯ ಮಾಡುತ್ತವೆ. ಮಹತ್ವದ ಕಾಳಜಿಯ ಘಟಕದಿಂದ ಹೊರಬಂದ ಹೆಚ್ಚು ಪ್ರತಿಶತ ರೋಗಿಗಳು ಬೇಗ ಹದಗೆಡುತ್ತಾರೆ ಮತ್ತು ಇವರು ಮತ್ತೆ ದಾಖಲಾಗುತ್ತಾರೆ - ಇದು ಆಗುವುದನ್ನು ತಡೆಗಟ್ಟಲು ವಾರ್ಡಿನ ನೌಕರರಿಗೆ ನೀಡುವಿಕೆ ಗುಂಪು ಬೆಂಬಲ ನೀಡುತ್ತದೆ, ಇದು ಬಹಳ ಪ್ರಮುಖವಾದದ್ದಾಗಿದೆ.

ಇಂಪ್ಲಿಮೆಂಟೆಬಲ್ ಕಾರ್ಡಿಯೊವರ್ಟರ್ ಡಿಫೈಬ್ರಿಲೆಟರ್ ಬದಲಾಯಿಸಿ

ಹೆಚ್ಚಿನ ಹೃದಯ ಸ್ತಂಭನವನ್ನು ತಡೆಗಟ್ಟಲು ಇಂಪ್ಲಿಮೆಂಟೆಬಲ್ ಕಾರ್ಡಿಯೊವರ್ಟರ್ ಡಿಫೈಬ್ರಿಲೆಟರ್‌ನ (ಐಸಿಡಿ) ಬಳಕೆ ತಾಂತ್ರಿಕತೆಯ ಆಧಾರದ ಕೊಡುಗೆಯಾಗಿದೆ.ಈ ಉಪಕರಣವನ್ನು ರೋಗಿಗಳ ಒಳಸೇರಿಸಬಹುದು, ಇದು ಅರ್ಹೆತ್ಮಿಯದ ಸಂದರ್ಭದಲ್ಲಿ ತ್ವರಿತ ಡಿಫೈಬ್ರಿಲೆಟರ್‌ನಂತೆ ವರ್ತಿಸುತ್ತದೆ. ಐಸಿಡಿಗಳು ಒಂದೇ ಗತಿ ನಿಯಂತ್ರಕದ ಕಾರ್ಯಗಳನ್ನು ಹೊಂದಿರುವುದಿಲ್ಲ ಎಂಬುದನ್ನು ಗಮನಿಸಿ, ಆದರೆ ಅವು ಒಂದು ಗತಿ ನಿಯಂತ್ರಕದ ಜೊತೆ ಸಂಯೋಜಿಸಬಹುದು, ಮತ್ತು ಆಧುನಿಕ ಆವೃತ್ತಿಗಳು ಏಂಟಿ-ಟ್ಯಾಕಿಕಾರ್ಡಿಕ್ ಪೇಸಿಂಗ್ ಮತ್ತು ಸಿಂಕ್ರೋನೈಸ್ಡ್ ಕಾರ್ಡಿಯೋವರ್ಷನ್ ನಂತಹ ಮುಂದುವರೆದ ಗುಣಗಳನ್ನೂ ಸಹ ಹೊಂದಿದೆ. ಸಂಯುಕ್ತ ಸಂಸ್ಥಾನ ಮತ್ತು ಕೆನಡ ಎರಡರಲ್ಲಿಯೂ ಐಸಿಡಿಗಳು ಅಗತ್ಯಕ್ಕಿಂತ ಕಡಿಮೆ ಉಪಯೋಗವಾಗುತ್ತಿದೆ ಎಂದು ಒಟ್ಟವ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ವಿಶ್ವವಿದ್ಯಾಲಯದಲ್ಲಿ ಬಿರ್ನೆ ಎತ್ ಅಲ್‍ ಅವರ ಇತ್ತೀಚಿನ ಅಧ್ಯಯನ ತೋರಿಸಿದೆ.[೧೦] ಸಿಂಪ್ಸನ್ ಅವರ ಸಂಪಾದಕೀಯ ಇದಕ್ಕೆ ಕೆಲವು ಆರ್ಥಿಕ, ಭೌಗೋಳಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳ ಬಗ್ಗೆ ವಿಮರ್ಶಿಸುತ್ತದೆ.[೧೧] MADIT-ಈ ಪ್ರಯೋಗ ನಡೆಸಿದ ಪ್ರದರ್ಶನದಂತೆ ತೀವ್ರ ischemic cardiomyopathy (30% ಗಿಂತ ಕಡಿಮೆ ಸಿಸ್ಟೋಲಿಕ್ ಎಜೆಕ್ಷನ್ ಫ್ರಾಕ್ಷನ್‌ಗಳಿರುವ) ದಿಂದ ಬಳಲುತ್ತಿರುವ ರೋಗಿಗಳು ಐಸಿಡಿಯ ಅಳವಡಿಕೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.[೧೨]

ನಿರ್ವಹಣೆ ಬದಲಾಯಿಸಿ

ಅನಿರೀಕ್ಷಿತವಾದ ಹೃದಯ ಸ್ತಂಭನವನ್ನು ಮತ್ತೆ ಬದುಕಿಸುವ ಪ್ರಯತ್ನದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ . ಇದು ಸಾಮಾನ್ಯವಾಗಿ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್)/ಅಡ್ವಾಸ್ನ್ಡ್ ಕಾರ್ಡಿಯಾಕ್ ಲೈಫ್ ಸಪೋರ್ಟ್ (ಎಸಿಎಲ್‌ಎಸ್)[೫],ಪೆಡಿಯಾಟ್ರಿಕ್ ಅಡ್ವಾಸ್ನ್ಡ್ ಲೈಫ್ ಸಪೋರ್ಟ್ (ಪಿಎ‌ಎಲ್‌ಎಸ್)[೧೩] ಅಥವಾ ನಿಯೋನೆಟಲ್ ರಿಸಸಿಟೇಶನ್ ಪ್ರೋಗ್ರಾಮ್ (ಎನ್‌ಆರ್‌ಪಿ)ಮಾರ್ಗದರ್ಶನಗಳ ಮೇಲೆ ಕಾರ್ಯರೂಪಕ್ಕೆ ತರಲಾಗುತ್ತದೆ.

ಬದುಕುಳಿಯುವ ಸರಪಳಿ ಬದಲಾಯಿಸಿ

ಹಲವಾರು ಸಂಸ್ಥೆಗಳು ಬದುಕುಳಿದಿರುವ ಸರಪಳಿ ಯೋಜನೆಗೆ ಪ್ರೋತ್ಸಾಹ ನೀಡುತ್ತಿವೆ, ಕೊಂಡಿಗಳು:

  • ಮೊದಲೇ ಗುರುತಿಸುವುದು - ಸಾಧ್ಯವಿದ್ದರೇ, ರೋಗಿಗೆ ಹೃದಯ ಸ್ತಂಭನ ಗೋಚರವಾಗುವ ಮೊದಲೇ ಕಾಯಿಲೆ ಗುರುತಿಸಿ ಇದರ ಸಂಭವನೀಯತೆಯನ್ನು ತಪ್ಪಿಸಿ ಕಾಪಾಡುವ ಅವಕಾಶ ನೀಡಬಹುದು. ಹೃದಯ ಸ್ತಂಭನ ಮೊದಲೇ ಗುರುತಿಸುವುದು ಹೃದಯ ಸ್ತಂಭನದಲ್ಲಿ ರೋಗಿಗೆ ಬದುಕುಳಿಯಲು ಪ್ರತಿಯೊಂದು ನಿಮಿಷವು ಮಹತ್ವದ ಘಟನೆಯಾಗಿರುತ್ತದೆ-ಸುಮಾರು 10% ರಷ್ಟು ಅದರಿಂದ ಬದುಕುಳಿಯುವ ಅವಕಾಶ ಕಡಿಮೆ ಇದುತ್ತದೆ.[೪]
  • ಮೊದಲಿನ ಸಿಪಿಆರ್ - ಹೃದಯ ಸ್ತಂಭನ ಚಿಕಿತ್ಸೆಗೆ ಅಗತ್ಯವಿರುವ ಅಂಗಗಳಿಗೆ ರಕ್ತ ಮತ್ತು ಪ್ರಮುಖವಾದ ಅವಯವಗಳಿಗೆ ಆಮ್ಲಜನಕದ ಹರಿವು ಉತ್ತಮಗೊಳಿಸುವುದು.ನಿರ್ದಿಷ್ಟವಾಗಿ,ಮೆದುಳಿಗೆ ಆಕ್ಸಿಜನ್‌ನೊಡನೆ ಸಂಯುಕ್ತವಾಗಿಸುವ ರಕ್ತದ ಪೂರೈಕೆ ಮಾಡುವುದರಿಂದ ನರಶಾಸ್ತ್ರೀಯ ಹಾನಿ ಕಡಿಮೆಯಾಗುವ ಅವಕಾಶವಿದೆ.
  • ಮೊದಲೇ ಡಿಫಿಬ್ರಿಲೇಶನ್-ಕುಕ್ಷಿಯ ಫಿಬ್ರಿಲೇಶನ್ ಮತ್ತು ಸ್ತಬ್ಧವಾದ ಕುಕ್ಷಿಯ ಹೃದಯಸ್ಪಂದನಾಧಿಕ್ಯ[೪] ನಿರ್ವಹಣೆ ಪರಿಣಾಮಕಾರಿಯಾಗದೆ ಡಿಫಿಬ್ರಿಲೇಶನ್ ತಡವಾದರೇ ಪರಿಣಾಮ ಕೆಟ್ಟದಾಗಿ ಹೃದಯದ ಸಂಕೋಚನವಿಲ್ಲದೆ ಕಂಪನ ಅವನತಿ ಹೊಂದುತ್ತದೆ.
  • ಮೊದಲೇ ಮುಂಚಿತವಾಗಿ ಲಕ್ಷ್ಯ - ಅರ್ಲಿ ಅಡ್ವಾನ್ಸ್ಡ್ ಕಾರ್ಡಿಯಾಕ್ ಲೈಫ್ ಸಪೋರ್ಟ್ ಬದುಕುಳಿಯುವ ಸರಪಳಿಯಲ್ಲಿ ಕೊನೆಯ ಕೊಂಡಿಯಾಗಿದೆ.ಸರಪಳಿಯಲ್ಲಿ ಒಂದು ಅಥವಾ ಹೆಚ್ಚು ಕೊಂಡಿಗಳು ತಪ್ಪಿದರೆ ಅಥವಾ ನಿಧಾನವಾದರೇ,ನಂತರ ಪ್ರಮುಖವಾಗಿ ಬದುಕುವ ಅವಕಾಶ ಕೈಬಿಟ್ಟಂತೆ.

ಈ ಶಿಷ್ಟಾಚಾರಗಳನ್ನು ಆಗಾಗ ಕೋಡ್ ಬ್ಲ್ಯೂನಿಂದ ಪ್ರಾರಂಭಿಸಲಾಗುತ್ತದೆ, ಮಾಮೂಲಾಗಿ ಸನ್ನಿಹಿತವಾಗಿರುವುದನ್ನು ಅಥವಾ ಹೃದಯ ಸ್ತಂಭನ ಅಥವಾ ಉಸಿರಾಟದ ವೈಫಲ್ಯದ ಗಂಬೀರವಾದ ಮುನ್ನುಗ್ಗುವಿಕೆ ಸೂಚಿಸುತ್ತದೆ,ಆದಾಗ್ಯೂ ಪದ್ಧತಿಯಲ್ಲಿ, ಆಗಾಗ ಕಡಿಮೆ ಜೀವನ-ಬೆದರಿಕೆ ಸ್ಥಿತಿಗೆ ತಕ್ಷಣ ವೈದ್ಯರಿಂದ ಕಾಳಜಿಯ ಅವಶ್ಯಕತೆಯಿದೆ ಎಂದು ಕೋಡ್ ಬ್ಲ್ಯೂ ಕರೆಯುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಹೃದಯ ಮತ್ತು ಶ್ವಾಸಕೋಶ ಸಂಬಂಧಿ ನವೀಕರಣ ಚಿಕಿತ್ಸೆ ಬದಲಾಯಿಸಿ

ಸಿಪಿಆರ್ ಹೃದಯ ಸ್ತಂಭನ ನಿರ್ವಹಣೆಯ ಕ್ಲಿಷ್ಟಕರವಾದ ಭಾಗ. ಇದನ್ನು ಸಾಧ್ಯವಿದ್ದಷ್ಟು ಬೇಗ ಪ್ರಾರಂಭ ಮಾಡಬೇಕು ಮತ್ತು ಸಾಧ್ಯವಿದ್ದಷ್ಟು ಸಣ್ಣ ಅಡ್ಡಿಯುಂಟು ಮಾಡಬೇಕು. ಅತ್ಯಂತ ಪರಿಣಾಮಕಾರಿಯಾದ ಸಿಪಿಆರ್‌ನ ಭಾಗವೆಂದರೆ ಎದೆ ಹೋಲಿಕೆಗಳು

ವಾತಾಯನ ವ್ಯವಸ್ಥೆ

ಶ್ವಾಸನಾಳದ ಇನ್‌ಟ್ಯುಬೆಶನ್ ಹೃದಯ ಸ್ತಂಭನ ಸನ್ನಿವೇಶದಲ್ಲಿ ಬದುಕುಳಿಯುವ ಪ್ರಮಾಣವನ್ನು ಸುಧಾರಿಸುವುದಿಲ್ಲ.[೧೪] ನಿಷ್ಕ್ರಿಯ ಆಮ್ಲಜನಕ ಕಂಚಿಕೆಯಿಂದ ಮೌಖಿಕ ವಾತಾಯನ ನಿಯೋಜನೆ ಮೇಲೆ ಒತ್ತಾಸೆನೀಡಿದ ವಾತಾಯನ ವ್ಯವಸ್ಥೆಯನ್ನು ಫಲಿತಾಂಶವು ಇನ್ನೂ ಕೆಡಿಸಬಹುದು ಎಂದು 2009ರ ಒಂದು ಅಧ್ಯಯನವು ತಿಳಿಸಿದೆ.[೧೫]

ಬೈಸ್ಟ್ಯಾಂಡರ್ ಸಿಪಿಆರ್

ಸರಿಯಾಗಿ ಕಾರ್ಯನಿರ್ವಹಿದ ಬೈಸ್ಟ್ಯಾಂಡರ್ ಸಿಪಿಆರ್ ಬದುಕುಳಿಯುವ ಹೆಚ್ಚಳವನ್ನು ತೋರಿಸುತ್ತದೆ, ಇದು ಆಸ್ಪತ್ರೆಯ ಹೊರಗಿನ ಸ್ತಂಭನದಲ್ಲಿ ಶೇಕಡಾ 30%ಕ್ಕಿಂತ ಕಡಿಮೆ ಕಾರ್ಯನಿರ್ವಹಿಸುತ್ತದೆ.[೧೪]

ಡಿಫಿಬ್ರಿಲೇಶನ್ ಬದಲಾಯಿಸಿ

ಕ್ಲಿನಿಶಿಯನ್ನರು ಹೃದಯ ಸ್ತಂಭನಕ್ಕೆ ಆಘಾತಕ್ಕೊಳಗಾಗುವ ಮತ್ತು ಆಘಾತಕ್ಕೊಳಗಾಗದ ಕಾರಣಗಳು- ಕುಕ್ಷಿಯ ಫಿಬ್ರಿಲೇಶನ್ ಅಥವಾ ಸ್ಥಬ್ದವಾದ ಕುಕ್ಷಿಯ ಹೃದಯಸ್ಪಂದನಾಧಿಕ್ಯದ ಉಪಸ್ಥಿತಿ ಅಥವಾ ಅನುಪಸ್ಥಿತಿ ಆಧಾರದ ಮೇಲೆ ವ್ಯತ್ಯಾಸವನ್ನು ಗುರುತಿಸಿದ್ದಾರೆ. ಆಘಾತಕ್ಕೊಳಗಾಗುವ ಲಯಕ್ಕೆ ಸಿಪಿಆರ್ ಮತ್ತು ಡಿಫಿಬ್ರಿಲೇಶನ್‌ನಿಂದ ಚಿಕಿತ್ಸೆ ಮಾಡುತ್ತಾರೆ.ಆಸ್ಪತ್ರೆಯ ಹೊರಗಾಗುವ ಹೆಚ್ಚಿನ ಹೃದಯ ಸ್ತಂಭನಗಳು ಮಯೋಕಾರ್ಡಿಯಲ್ ಮರಣ (ಹೃದಯಾಘಾತ)ವನ್ನು ಅನುಸರಿಸುವುದನ್ನು ಕಾಣುತ್ತೇವೆ, ಮತ್ತು ಪ್ರಾರಂಭದಲ್ಲಿ ಕುಕ್ಷಿಯ ಫಿಬ್ರಿಲೇಶನ್ ಹೃದಯ ಲಯದಿಂದ ತೋರಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ರೋಗಿಯು ಡಿಫಿಬ್ರಿಲೇಶನ್‌ಗೆ ಪ್ರತಿಕ್ರಿಯಿಸಬೇಕು, ಇದು ಹಸ್ತಕ್ಷೇಪದ ಕೇಂದ್ರಬಿಂದುವಾಗುತ್ತದೆ.ಹೆಚ್ಚುವರಿಯಾಗಿ, ಡಿಫಿಬ್ರಿಲೇಶನ್ ಉಪಯೋಗದ ಸಾರ್ವಜನಿಕ ಪ್ರವೇಶಾವಕಾಶ ಹೆಚ್ಚಾಗಬೇಕು. ಇದನ್ನು ಒಳಗೊಂಡಿರುವ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಶನ್ ಇಡಬೇಕು ಮತ್ತು ಈ ಪ್ರದೇಶಗಳಲ್ಲಿ ಇವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸಲು ತರಬೇತಿ ಪಡೆದ ಸಿಬ್ಬಂದಿ ನೇಮಿಸಬೇಕು. ತುರ್ತು ಸೇವೆಗೆ ಬರುವ ಮೊದಲೇ ಅನುಮತಿಸಿದ ಡಿಫಿಬ್ರಿಲೇಶನ್ ಇಡಬೇಕು, ಮತ್ತು ಬದುಕುಳಿಯುವ ಹೆಚ್ಚಿನ ಅವಕಾಶದ ಮಾರ್ಗದರ್ಶನವನ್ನು ನೀಡಬೇಕು. ಹೆಚ್ಚುವರಿಯಾಗಿ, ಯಾರು ದೂರದ ಸ್ಥಳಗಳಲ್ಲಿ ಕೆಟ್ಟದಾದ ಹೃದಯ ಸ್ತಂಭನ ಪರಿಣಾಮ ಹೊಂದಿ ಸ್ತಂಭನದಿಂದ ಬಳಲುತ್ತಿರುವರೋ ಅವರಿಗೆ ಇದನ್ನು ತೋರಿಸಿಬೇಕು;[೧೬] ಈ ಪ್ರದೇಶಗಳು ಒಮ್ಮೊಮ್ಮೆ ಮೊದಲ ಪ್ರತಿಪ್ರೇಷಕರಾಗಿರುತ್ತದೆ, ಸಮುದಾಯದ ಸದಸ್ಯರಿಗೆ ಮತ್ತೆ ಬದುಕಿಸುವುವ ರೀತಿಯಲ್ಲಿ ತರಬೇತಿ ನೀಡಿ ಮತ್ತು ಡಿಫಿಬ್ರಿಲೇಶನ್ ಕೊಡಬೇಕು,ಮತ್ತು ಅವರು ಸ್ಥಳೀಯ ಪ್ರದೇಶದಲ್ಲಿ ಹಾಳಾದ ಸಂದರ್ಭದಲ್ಲಿ ತುರ್ತು ವೈಧ್ಯಕೀಯ ಸೇವೆಯನ್ನು ಕರೆಯಬೇಕು.

ಔಷಧಗಳು ಬದಲಾಯಿಸಿ

ಔಷಧಗಳು, ಒಳ್ಳೆಯ ಮಾರ್ಗದರ್ಶನದಲ್ಲಿ ಅಡಕವಾಗಿದೆ, ಹೃದಯ ಸ್ತಂಭನದಿಂದ ಬದುಕುಳಿದವರು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸುಧಾರಿಸಿರುವುದನ್ನು ತೋರಿಸುವುದಿಲ್ಲ,ಇದು ಎಫಿನೆಪ್ರಿನ್,ಆಟ್ರೊಪಿನ್,ಮತ್ತು ಎಮಿಯೊಡರೊಮೆ ಉಪಯೋಗಗಳನ್ನು ಒಳಗೊಂಡಿದೆ.[೧೭]

ಚಿಕಿತ್ಸಕ ಲಘೂಷ್ಣತೆ ಬದಲಾಯಿಸಿ

ಹೃದಯ ಸ್ತಂಭನದ ನಂತರ ವ್ಯಕ್ತಿಯು ಸ್ವಯಂಪ್ರೇರಿತ ಪರಿಚಲನೆಯೊಂದಿಗೆ ಹಿಂದಿರುಗಿ ತಣ್ಣಗಾಗಿಸುವುದು (ಆರ್‌ಒಎಸ್‌ಸಿ) ಆದರೆ ಪ್ರಜ್ಞೆ ಮರುಕಳಿಸಿದ ಹೊರತಾಗಿ ಪರಿಣಾಮ ಸುಧಾರಿಸುವುದಿಲ್ಲ. ಈ ಪ್ರಕ್ರಿಯೆಯನ್ನು ಚಿಕಿತ್ಸಕ ಲಘೂಷ್ಣತೆ ಎಂದು ಕರೆಯುತ್ತಾರೆ. ಯೂರೋಪಿನಲ್ಲಿ ಮೊದಲು ಕೈಗೊಂಡ ಅಧ್ಯಯನವು ಕುಸಿತದ 5–15 ನಿಮಿಷದ ನಂತರ ಬದುಕುಳಿದವರ ಮೇಲೆ ಕೇಂದ್ರಿಕೃತವಾಗಿತ್ತು. ಈ ಅಧ್ಯಯನದಲ್ಲಿ ರೋಗಿಗಳು ಭಾಗವಹಿಸಿ ಸುಮಾರು 105 ನಿಮಿಷಗಳ ನಂತರ ಸ್ವಯಂಪ್ರೇರಿತ ಪರಿಚಲನೆಯೊಂದಿಗೆ ಹಿಂದಿರುಗಿ ( ಆರ್‌ಒಎಸ್‌ಸಿ) ಬಂದ ಅನುಭವವನ್ನು ಹೇಳಿದರು. ನಂತರ 32–34 °C (90–93 °F) ಗುರಿಯಿರಿಸಿಕೊಂಡ ತಾಪಮಾನ, 24 ತಾಸಿಗಿಂತ ಹೆಚ್ಚಿನ ಅವಧಿಯಲ್ಲಿ ತಣ್ಣಗಾಯಿತು, ಲಘೂಷ್ಣತೆಯಲ್ಲಿ 137 ರೋಗಿಗಳ ಗುಂಪಿನಲ್ಲಿ 55%ರಷ್ಟು ಅನುಭವದ ಫಲಿತಾಂಶವು ಅನುಕೂಲವಾಗಿತ್ತು, ಇದಕ್ಕೆ ಹೋಲಿಸಿದಾಗ ಗುಂಪಿನಲ್ಲಿ ಕೇವಲ 39%ರಷ್ಟು ಮಾತ್ರ ನವೀಕರಣ ಚಿಕಿತ್ಸೆ ಅನುಸರಿಸಿ ಗುಣಮಟ್ಟದ ಸುರಕ್ಷೆ ಹೊಂದಿದ್ದರು.[೧೮] ಲಘೂಷ್ಣತೆ ಗುಂಪಿನಲ್ಲಿ ಮರಣದ ಪ್ರಮಾಣ 14% ಕಡಿಮೆ, ಇದರರ್ಥ ಪ್ರತಿ 7 ರೋಗಿಗಳು ಚಿಕಿತ್ಸೆಗೊಳಪಟ್ಟು ಜೀವ ಉಳಿಸಿಕೊಂಡರು.[೧೮] ವಿಶೇಷವಾಗಿ,ಎರಡು ಗುಂಪಿನ ನಡುವೆ ವಾಸ್ತವಿಕ ಸಂಕಿರ್ಣತೆ ಹೆಚ್ಚು ಭಿನ್ನವಾಗಿಲ್ಲ. ಆಸ್ಟ್ರೇಲಿಯಾದಲ್ಲಿ ಇದೇ ಸಮಯಕ್ಕೆ ನಡೆಯುತ್ತಿರುವ ಅಧ್ಯಯನಕ್ಕೆ ಈ ಮಾಹಿತಿಯು ಪೂರಕವಾಗಿದೆ. ಈ ಅಧ್ಯಯನದಲ್ಲಿ ಹೃದಯ ಸ್ತಂಭನವಾದ 49% ರೋಗಿಗಳು ಲಘೂಷ್ಣತೆಯ ಚಿಕಿತ್ಸೆಯಿಂದ ಉತ್ತಮ ಪರಿಣಾಮ ಹೊಂದಿದ್ದನ್ನು ಕಂಡುಕೊಳ್ಳಲಾಗಿದೆ. ಆದರೆ ಇದಕ್ಕೆ ಹೋಲಿಸಿದಾಗ ಪ್ರಮಾಣಿತ ಶುಶ್ರೂಶೆ ಪಡೆದವರಲ್ಲಿ ಕೇವಲ 26% ಮಾತ್ರ ಉತ್ತಮ ಪರಿಣಾಮ ಹೊಂದಿದ್ದರು.

ರೋಗದ ಮುನ್ಸೂಚನೆ ಬದಲಾಯಿಸಿ

ಆಸ್ಪತ್ರೆ ಹೊರಗಿನ ಹೃದಯ ಸ್ತಂಭನದಲ್ಲಿ (ಒಎಚ್‌ಸಿಎ) ಬದುಕುಳಿದ ಪ್ರಮಾಣ ಕೆಟ್ಟದಾಗಿದೆ ( 2-8%ರಷ್ಟು ಬಿಡುಗಡೆಯಾಗಿದ್ದಾರೆ ಮತ್ತು 8-22%ರಷ್ಟು ದಾಖಲಾಗಿದ್ದಾರೆ),ಆಸ್ಪತ್ರೆಯಲ್ಲಿನ ಹೃದಯ ಸ್ತಂಭನದಲ್ಲಿ (15%ರಷ್ಟು ಬಿಡುಗಡೆಯಾಗಿದ್ದಾರೆ). ಮೊದಲೇ ದಾಖಲಾದ ಕಂಪನ ಪ್ರಮುಖವಾಗಿ ನಿರ್ಣಯಿಸಬೇಕಾದ ಅಂಶವಾಗಿದೆ. ಸ್ಥಬ್ಧವಾದ ವಿದ್ಯುತ್ತಿನಂಥ ಚಟುವಟಿಕೆ ಅಥವಾ ಹೃದಯದ ಸಂಕೋಚನವಿಲ್ಲದೆ ಬಳಲುತ್ತಿರುವವರಿಗಿಂತ ಜನರು ಕುಕ್ಷಿಯ ಫಿಬ್ರಿಲೇಶನ್ ಅಥವಾ ಸ್ಥಬ್ದವಾದ ಕುಕ್ಷಿಯ ಹೃದಯಸ್ಪಂದನಾಧಿಕ್ಯ ದೊಂದಿಗೆ 10-15 ಪಟ್ಟು ಹೆಚ್ಚು ಬದುಕುವ ಅವಕಾಶ ಹೊಂದಿರುತ್ತಾರೆ.[ಸೂಕ್ತ ಉಲ್ಲೇಖನ ಬೇಕು]ಆದುದರಿಂದ ಒಎಚ್‌ಸಿಎ ಘಟನೆಯಲ್ಲಿ ಮರಣದ ಪ್ರಮಾಣ ಅಧಿಕ,ಬದುಕಿಸುವ ಪ್ರಮಾಣ ಹೆಚ್ಚಿಸುವಲ್ಲಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಹಾಗಿದ್ದಾಗ್ಯೂ ಕುಕ್ಷಿಯ ಫಿಬ್ರಿಲೇಶನ್ ಘಟನೆಯಲ್ಲಿ ಮರಣದ ಪ್ರಮಾಣ ಹೆಚ್ಚು, ತ್ವರಿತವಾಗಿ ಡಿಫಿಬ್ರಿಲೇಶನ್‌ನೊಂದಿಗೆ ಮಧ್ಯಪ್ರವೇಶಿಸಿದರೆ ಬದುಕುವ ಪ್ರಮಾಣ ಹೆಚ್ಚಾಗುತ್ತದೆ.[೧೯][೨೦] ಮುಖ್ಯವಾಗಿ ಬದುಕುಳಿಯುವಿಕೆ ಸ್ತಂಭನದ ಸನ್ನಿವೇಶಕ್ಕೆ ಸಂಬಂಧಿಸಿದೆ (ಮೇಲೆ ನೋಡಿ). ನಿರ್ದಿಷ್ಟವಾಗಿ,ರೋಗಿಗಳು ಹೈಪೋಥೆರ್ಮಿಯಾದಿಂದ ಬಳಲುತ್ತಿದ್ದಾಗ ಬದುಕುಳಿಯುವ ಪ್ರಮಾಣ ಹೆಚ್ಚು,ಏಕೆಂದರೆ ಜೀವಕೋಶಕ್ಕೆ ಆಮ್ಲಜಲಕದ ಕೊರತೆಯ ಪ್ರಭಾವದಿಂದ ತಂಪು ಪ್ರಾಯಶಃ ಮುಖ್ಯವಾದ ಅಂಗಗಳನ್ನು ರಕ್ಷಿಸುತ್ತದೆ. ಟಾಕ್ಸಿನ್ ಗುರುತಿಸುವಿಕೆಯ ಮೇಲೆ ಟಾಕ್ಸಿನ್‌ಗಳು ಹೆಚ್ಚು ಅವಲಂಬಿತವಾಗಿದೆ ಮತ್ತು ಸೂಕ್ತವಾದ ಪ್ರತಿವಿಷ ಕೊಟ್ಟು ನಿರ್ವಹಿಸುವುದರಿಂದ ಸ್ತಂಭನದಿಂದ ಬದುಕುವ ಪ್ರಮಾಣವನ್ನು ಪ್ರಚೋದಿಸುತ್ತದೆ. ಮಯೋಕಾರ್ಡಿಯಲ್ ಮರಣದಿಂದ ಬಳಲುತ್ತಿರುವ ರೋಗಿಯ ಎಡ ಕರೊನರಿ ಅಪಧನಿಯಲ್ಲಿ ರಕ್ತ ಹೆಪ್ಪುಗಟ್ಟಿದಾಗ ಬದುಕುವ ಸಾಧ್ಯತೆ ಕಡಿಮೆ.[ಸೂಕ್ತ ಉಲ್ಲೇಖನ ಬೇಕು]ಆಸ್ಪತ್ರೆ ಹೊರಗಿನ ಹೃದಯ ಸ್ತಂಭನದದಿಂದ 14.6%ರಷ್ಟು ರೋಗಿಗಳು ಅಂಬ್ಯುಲೆನ್ಸ್ ಸಿಬ್ಬಂದಿ ತ್ವರಿತವಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕಿದ್ದಾರೆ ಎಂದು ಬದುಕುಳಿದ ಪ್ರಮಾಣದ ಅಧ್ಯಯನ ತಿಳಿಸುತ್ತದೆ. 59% ರಷ್ಟು ದಾಖಲಾತಿ ಸಮಯದಲ್ಲಿ ,ಅರ್ಧದಷ್ಟು ಮೊದಲ 24 ಘಂಟೆಯೊಳಗಡೆ ಸಾವನ್ನಪ್ಪಿದ್ದಾರೆ, 46%ರಷ್ಟು ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಬದುಕುಳಿದಿದ್ದಾರೆ. ಇದು ನಮಗೆ ಹೃದಯ ಸ್ತಂಭನದ ಸಂಪೂರ್ಣ 6.8% ಬದುಕಿದವರ ಮಾಹಿತಿ ನೀಡುತ್ತದೆ. ಈ 89% ಸಾಮಾನ್ಯ ಮಿದುಳು ಕಾರ್ಯಚಟುವಟಿಕೆ ಅಥವಾ ಲಘು ನರಶಾಸ್ತ್ರೀಯ ದೌರ್ಬಲ್ಯ ಹೊಂದಿರುತ್ತಾರೆ, 8.5% ಮಧ್ಯಮ ಪ್ರಮಾಣದಲ್ಲಿ ಹಾನಿಗೊಳಗಾಗಿರುತ್ತಾರೆ , ಮತ್ತು 2% ಗಂಬೀರವಾಗಿ ನರಶಾಸ್ತ್ರೀಯ ದೌರ್ಬಲ್ಯದಿಂದ ನರಳುತ್ತಾರೆ. ಇವರು ಆಸ್ಪತ್ರೆಯಿಂದ ಬಿಡುಗಡೆಯಾದವರು, 70% ಜನರು 4 ವರ್ಷದ ನಂತರವು ಬದುಕುಳಿದಿದ್ದಾರೆ.[೨೧] ಆಸ್ಪತ್ರೆಯಲ್ಲಿನ ಹೃದಯ ಸ್ತಂಭನ ಅನುಸರಿಸಿ ಮುನ್ಸೂಚನೆಯನ್ನು ಅವಲೋಕಿಸಿದಾಗ ಬದುಕುಳಿದು ಬಿಡುಗಡೆಯಾದವರು 14% ಹಾಗಿದ್ದರೂ ಅಧ್ಯಯನಗಳ ನಡುವೆ 0-28%ರಷ್ಟು ವ್ಯತ್ಯಾಸವಿದೆ.[೨೨]

ಸಾಂಕ್ರಾಮಿಕಶಾಸ್ತ್ರ ಬದಲಾಯಿಸಿ

ಪಾಶ್ಚಿಮಾತ್ಯ ದೇಶಗಳಲ್ಲಿ[೨೩] ಎಲ್ಲ ಮರಣವನ್ನು ಸೇರಿಸಿ ಮರಣ ಪತ್ರಗಳ ಆಧಾರದ ಮೇಲೆ ಆಕಸ್ಮಿಕ ಹೃದಯ ಸ್ತಂಭನದ ಮರಣ ಪ್ರಮಾಣ ಸುಮಾರು 15%, (ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರತಿ ವರ್ಷ 330,000).[೧೪] ಪ್ರೇಮಿಂಗ್ಯಾಮ್ ಹಾರ್ಟ್ ಸ್ಟಡಿ[೨೪] ವಿಶ್ಲೇಷಣೆಯ ಆಧಾರದ ಮೇಲೆ ಮಹಿಳೆಯರಿಗಿಂತ (4.2%) ಗಂಡಸರಲ್ಲಿ ಜೀವಾವಧಿ ಗಂಡಾಂತರ ಮೂರು ಪಟ್ಟು ಹೆಚ್ಚು (12.3%). ಹಾಗಿದ್ದಾಗ್ಯೂ ಈ ಲಿಂಗ ಬೇಧವು 85 ವರ್ಷದಾಚೆಗೆ ಮರೆಯಾಗುತ್ತದೆ.[೨೩]

ನೈತಿಕ ವಿಷಯಗಳು ಬದಲಾಯಿಸಿ

ಕೆಲವು ಜನರು ಅಂತ್ಯ ಸಮೀಪವಾದ ಅನಾರೋಗ್ಯದಿಂದ ಜೀವನದ ಕೊನೆಯಲ್ಲಿ ಆಕ್ರಮಣಕಾರಿ ಕ್ರಮ ಆರಿಸಿಕೊಳ್ಳವಿಕೆಯಿಂದ ದೂರವಿರುತ್ತಾರೆ. ಮತ್ತೆ ಬದುಕಿಸಲಾಗದ (ಡಿಎನ್‌ಆರ್) ಆದೇಶವು ಆಶಯವನ್ನು ಸ್ಪಷ್ಟಪಡಿಸಬಹುದು . ಇದು ಮುಂದುವರೆದ ಆರೋಗ್ಯ ಎಚ್ಚರಿಕೆ ನಿರ್ದೇಶನದಲ್ಲಿ ಒಳಗೊಂಡಿರಬಹುದು.

ಇವನ್ನೂ ಓದಿ ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ಉಲ್ಲೇಖ ದೋಷ: Invalid <ref> tag; no text was provided for refs named AHJ98
  2. Kuisma M, Alaspää A (1997). "Out-of-hospital cardiac arrests of non-cardiac origin. Epidemiology and outcome". Eur. Heart J. 18 (7): 1122–8. PMID 9243146. {{cite journal}}: Unknown parameter |month= ignored (help)
  3. Friedlander Y, Siscovick DS, Weinmann S; et al. (1998). "Family history as a risk factor for primary cardiac arrest". Circulation. 97 (2): 155–60. PMID 9445167. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  4. ೪.೦ ೪.೧ ೪.೨ ೪.೩ ೪.೪ ೪.೫ "Resuscitation Council (UK) Guidelines 2005".
  5. ೫.೦ ೫.೧ ೫.೨ ೫.೩ ೫.೪ ECC Committee, Subcommittees and Task Forces of the American Heart Association (2005). "2005 American Heart Association Guidelines for Cardiopulmonary Resuscitation and Emergency Cardiovascular Care". Circulation. 112 (24 Suppl): IV1–203. doi:10.1161/CIRCULATIONAHA.105.166550. PMID 16314375. {{cite journal}}: Unknown parameter |month= ignored (help)
  6. Ochoa FJ, Ramalle-Gómara E, Carpintero JM, García A, Saralegui I (1998). "Competence of health professionals to check the carotid pulse". Resuscitation. 37 (3): 173–5. doi:10.1016/S0300-9572(98)00055-0. PMID 9715777. {{cite journal}}: Unknown parameter |month= ignored (help)CS1 maint: multiple names: authors list (link)
  7. Bahr J, Klingler H, Panzer W, Rode H, Kettler D (1997). "Skills of lay people in checking the carotid pulse". Resuscitation. 35 (1): 23–6. doi:10.1016/S0300-9572(96)01092-1. PMID 9259056. {{cite journal}}: Unknown parameter |month= ignored (help)CS1 maint: multiple names: authors list (link)
  8. British Red Cross; St Andrew's Ambulance Association; St John Ambulance (2006). First Aid Manual: The Authorised Manual of St. John Ambulance, St. Andrew's Ambulance Association, and the British Red Cross. Dorling Kindersley Publishers Ltd. ISBN 1-4053-1573-3.{{cite book}}: CS1 maint: multiple names: authors list (link)
  9. Kause J, Smith G, Prytherch D, Parr M, Flabouris A, Hillman K (2004). "A comparison of antecedents to cardiac arrests, deaths and emergency intensive care admissions in Australia and New Zealand, and the United Kingdom--the ACADEMIA study". Resuscitation. 62 (3): 275–82. doi:10.1016/j.resuscitation.2004.05.016. PMID 15325446. {{cite journal}}: Unknown parameter |month= ignored (help)CS1 maint: multiple names: authors list (link)
  10. Birnie, David H (2007). "Use of implantable cardioverter defibrillators in Canadian and IS survivors of out-of-hospital cardiac arrest". Canadian Medical Association Journal. 177 (1): 41. doi:10.1503/cmaj.060730. PMC 1896034. PMID 17606938. Retrieved 2007-07-29. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  11. Simpson CS (2007). "Implantable cardioverter defibrillators work--so why aren't we using them?". CMAJ. 177 (1): 49–51. doi:10.1503/cmaj.070470. PMC 1896028. PMID 17606939. {{cite journal}}: Unknown parameter |month= ignored (help)
  12. Moss AJ, Brown MW, Cannom DS; et al. (2005). "Multicenter automatic defibrillator implantation trial-cardiac resynchronization therapy (MADIT-CRT): design and clinical protocol". Ann Noninvasive Electrocardiol. 10 (4 Suppl): 34–43. doi:10.1111/j.1542-474X.2005.00073.x. PMID 16274414. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  13. American Heart, Association (2006). "2005 American Heart Association (AHA) guidelines for cardiopulmonary resuscitation (CPR) and emergency cardiovascular care (ECC) of pediatric and neonatal patients: pediatric advanced life support". Pediatrics. 117 (5): e1005–28. doi:10.1542/peds.2006-0346. PMID 16651281. {{cite journal}}: Unknown parameter |month= ignored (help)
  14. ೧೪.೦ ೧೪.೧ ೧೪.೨ Mutchner L (2007). "The ABCs of CPR--again". Am J Nurs. 107 (1): 60–9, quiz 69–70. PMID 17200636. {{cite journal}}: Unknown parameter |month= ignored (help)
  15. Bobrow BJ, Ewy GA, Clark L; et al. (2009). "Passive oxygen insufflation is superior to bag-valve-mask ventilation for witnessed ventricular fibrillation out-of-hospital cardiac arrest". Ann Emerg Med. 54 (5): 656–662.e1. doi:10.1016/j.annemergmed.2009.06.011. PMID 19660833. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  16. ಲಯಾನ್, ಆರ್.ಎಂ, ಕೊಬ್ಬೆ, ಎಸ್.ಎಂ., ಬ್ರಾಡ್ಲಿ, ಜೆ.ಎಂ., ಗ್ರುಬ್, ಎನ್.ಆರ್. (2004)ಸರ್ವೈವಿಂಗ್ ಔಟ್ ಆಫ್ ಹಾಸ್ಪಿಟಲ್ ಕಾರ್ಡಿಯಾಕ್ ಅರೆಸ್ಟ್ ಎಟ್ ಹೋಮ್: ಎ ಪೋಸ್ಟ್‌ಕೋಡ್ ಲಾಟರಿ? ಎಮರ್ಜೆನ್ಸಿ ಮೆಡಿಕಲ್ ಜರ್ನಲ್ ಸಂಪುಟ. 21 ಪುಪು. 619-624
  17. Olasveengen TM, Sunde K, Brunborg C, Thowsen J, Steen PA, Wik L (2009). "Intravenous drug administration during out-of-hospital cardiac arrest: a randomized trial". JAMA. 302 (20): 2222–9. doi:10.1001/jama.2009.1729. PMID 19934423. {{cite journal}}: Unknown parameter |month= ignored (help)CS1 maint: multiple names: authors list (link)
  18. ೧೮.೦ ೧೮.೧ ಹೊಲ್ಜರ್, ಮೈಕೆಲ್. "ಹೃದಯ ಸ್ತಂಭನದ ನಂತರ ಲಘು ಹೈಪೋಥರ್ಮಿಯಾ ನರಶಾಸ್ತ್ರೀಯ ಪರಿಣಾಮವನ್ನು ಸುಧಾರಿಸುತ್ತದೆ." ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್. (2002) ಸಂಪುಟ. 346, ಸಂಖ್ಯೆ. 8.
  19. ಉಲ್ಲೇಖ ದೋಷ: Invalid <ref> tag; no text was provided for refs named Eisenberg
  20. Bunch TJ, White RD, Gersh BJ; et al. (2003). "Long-term outcomes of out-of-hospital cardiac arrest after successful early defibrillation". N. Engl. J. Med. 348 (26): 2626–33. doi:10.1056/NEJMoa023053. PMID 12826637. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  21. Cobbe SM, Dalziel K, Ford I, Marsden AK (1996). "Survival of 1476 patients initially resuscitated from out of hospital cardiac arrest". BMJ. 312 (7047): 1633–7. PMC 2351362. PMID 8664715. {{cite journal}}: Unknown parameter |month= ignored (help)CS1 maint: multiple names: authors list (link)
  22. Ballew KA (1997). "Cardiopulmonary resuscitation". BMJ. 314 (7092): 1462–5. PMC 2126720. PMID 9167565. {{cite journal}}: Unknown parameter |month= ignored (help)
  23. ೨೩.೦ ೨೩.೧ Zheng ZJ, Croft JB, Giles WH, Mensah GA (2001). "Sudden cardiac death in the United States, 1989 to 1998". Circulation. 104 (18): 2158–63. doi:10.1161/hc4301.098254. PMID 11684624. {{cite journal}}: Unknown parameter |month= ignored (help)CS1 maint: multiple names: authors list (link)
  24. "Abstract 969: Lifetime Risk for Sudden Cardiac Death at Selected Index Ages and by Risk Factor Strata and Race: Cardiovascular Lifetime Risk Pooling Project -- Lloyd-Jones et al. 120 (10018): S416 -- Circulation". Archived from the original on 2011-06-08.
  1. REDIRECT Template:Heart diseases