ಬಿಳಿ ರಕ್ತ ಕಣಗಳು

ಬಿಳಿ ರಕ್ತ ಕಣಗಳು(ಡಬ್ಲ್ಯು.ಬಿ.ಸಿ.)ಇವು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಠೆಯ ಜೀವಕೋಶಗಳು. ಇವು ಸಾಂಕ್ರಾಮಿಕ ರೋಗ ಹಾಗೂ ವಿದೇಶೀ ಆಕ್ರಮಣಕಾರರ ವಿರುದ್ಧ ಹೋರಾಡುವ ಜೀವಕೋಶಗಳಾಗಿವೆ. ಎಲ್ಲಾ ಬಿಳಿ ರಕ್ತ ಕಣಗಳು ಮೂಳೆಮಜ್ಜೆಯ ಒಂದು ಬಹುಪ್ರಬಲ ಜೀವಕೋಶವಾದ ಹೆಮ್ಯಾಟೋಪಯಟಿಕ್ ಕಾಂಡಕೋಶದಿಂದ ನಿರ್ಮಾಣಗೊಂಡಿರುತ್ತವೆ. ಬಿಳಿ ರಕ್ತ ಕಣಗಳು ರಕ್ತ ಹಾಗೂ ದುಗ್ದನಾಳ ವ್ಯವಸ್ಠೆ ಸೇರಿದಂತೆ ನಮ್ಮ ದೇಹದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತವೆ. ಐದು ವಿವಿಧ ಹಾಗೂ ವಿಭಿನ್ನ ರೀತಿಯ ಬಿಳಿರಕ್ತ ಕಣಗಳು ಅಸ್ತಿತ್ವದಲ್ಲಿವೆ. ಭೌತಿಕ ಹಾಗೂ ಕ್ರಿಯಾತ್ಮಕ ಗುಣಲಕ್ಷಣಗಳ ಆಧಾರದ ಮೇಲೆ ಇವುಗಳನ್ನು ವಿಂಗಡಣೆ ಮಾಡಲಾಗಿದೆ. ಅವುಗಳು:

  • ನ್ಯೂಟ್ರೋಫಿಲ್‍ಗಳು
  • ಇಸಿನೊಫಿಲ್‍ಗಳು
  • ಬೇಸೊಫಿಲ್‍ಗಳು
  • ಲಿಂಫೋಸೈಟ್‍ಗಳು
  • ಮೋನೋಸೈಟ್‍ಗಳು.
ಬಿಳಿ ರಕ್ತ ಕಣಗಳು
SEM blood cells.jpg
A scanning electron microscope image of normal circulating human blood. In addition to the irregularly shaped leukocytes, both red blood cells and many small disc-shaped platelets are visible.
ಲ್ಯಾಟಿನ್ leucocytus
ಬಿಳಿ ರಕ್ತ ಕಣಗಳು MRSA ಜೊತೆ
ನ್ಯೂಟ್ರೋಫಿಲ್‍ಗಳು

ಮೋನೋಸೈಟ್‍ಗಳು ಹಾಗೂ ನ್ಯೂಟ್ರೋಫಿಲ್‍ಗಳು ಭಕ್ಞಿಸಿ ನಾಶಪಡಿಸುವ ಗುಣಲಕ್ಷಣವನ್ನು ಹೊಂದಿವೆ. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಒಂದು ಮೈಕ್ರೋ ಲೀಟರ್ ರಕ್ತ ದಲ್ಲಿ ೪,೦೦೦ ದಿಂದ ೧೧,೦೦೦ ಬಿಳಿ ರಕ್ತ ಕಣಗಳು ಕಂಡುಬರುತ್ತದೆ ಹಾಗಿದ್ದರೆ ಮಾತ್ರ ಆರೋಗ್ಯವಂತ(ತೆ). ಮನುಷ್ಯನ ಶರೀದಲ್ಲಿ ಸರಿಸುಮಾರು ೭ ರಿಂದ ೮ ಲೀ ರಕ್ತವಿದೆ ಅಂದರೆ ೪,೦೦೦*೧೦೦*೧೦೦*೮= ಬಿಳಿರಕ್ತ ಕಣಗಳು ಇರುತ್ತವೆ.

ನ್ಯೂಟ್ರೋಫಿಲ್‍ಗಳುಸಂಪಾದಿಸಿ

ಇವು ಅತಿ ಹೇರಳವಾಗಿರುವ ಬಿಳಿರಕ್ತಕಣಗಳು. ೬೦-೭೦%ರಷ್ಟು ಪರಿಚಲನೆಯಲ್ಲಿರುವ ಬಿಳಿರಕ್ತ ಕಣಗಳು. ಇವುಗಳು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ಸೋಂಕುಗಳ ವಿರುದ್ಧ ಹೋರಾಡಿ ದೇಹವನ್ನು ರಕ್ಷಿಸುತ್ತವೆ. ಸಾಮಾನ್ಯವಾಗಿ ಇವುಗಳು ಸೂಕ್ಷ್ಮ ಜೀವಿ ಸೋಂಕಿಗೆ ಮೊದಲ ಪ್ರತಿಕ್ರಿಯಾಶೀಲರು.ಪರಿಚಲನೆಯಲ್ಲಿರುವ ಮಾನವ ನ್ಯೂಟ್ರೋಫಿಲ್‍ಗಳ ಜೀವಿತಾವಧಿ ೫-೬ ದಿನಗಳು.

ಇಸಿನೊಫಿಲ್‍ಗಳುಸಂಪಾದಿಸಿ

ಗುಲ್ಮ ಹಾಗೂ ಕೇಂದ್ರ ನರಮಂಡಲದ ಅಲರ್ಜಿ, ಪರಾವಲಂಬಿ ಸೋಂಕುಗಳು, ಕೊಲ್ಲಾಜೆನ್ ರೋಗಗಳು-ಇವುಗಳ ವಿರುದ್ಧ ಇಸಿನೊಫಿಲ್‍ಗಳು ಪ್ರತಿಕ್ರಿಯೆಯನ್ನು ತೋರುತ್ತವೆ.ಇವುಗಳು ರಕ್ತದಲ್ಲಿ ಕಾಣಸಿಗುವುದು ಅಪರೂಪ. ಜೀರ್ಣಕಾರಿ ಪ್ರದೇಶದ, ಉಸಿರಾಟದ ಪ್ರದೇಶದ, ಕಡಿಮೆ ಮೂತ್ರದ ಪ್ರದೇಶದ ಮ್ಯೂಕಸ್ ಪೊರೆಗಳಲ್ಲಿ ಇವುಗಳು ಕಾಣಸಿಗುತ್ತವೆ.

ಬೇಸೊಫಿಲ್‍ಗಳುಸಂಪಾದಿಸಿ

ಅಲರ್ಜಿ ಹಾಗೂ ಪ್ರತಿಜನಕದ ಪ್ರತಿಕ್ರಿಯೆಗೆ ಅನುಗುಣವಾಗಿ ರಾಸಾಯನಿಕ ಹಿಸ್ಟಮೀನ್ ಅನ್ನು ಬಿಡುಗಡೆ ಮಾಡಿ ರಕ್ತ ನಾಳಗಳ ಹಿಗ್ಗುವಿಕೆ ಮಾಡುವುದು ಬೇಸೋಫಿಲ್‍ಗಳ ಮುಖ್ಯ ಹೊಣೆ. ಇವು ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುವ ಬಿಳಿ ರಕ್ತ ಕಣಗಳು. ದೇಹದ ರಕ್ಷಣೆಗಾಗಿ ಇವು ಹಿಸ್ಟಮೀನ್ ಹಾಗೂ ಹೆಪಾರಿನ್ ಎಂಬ ಎರಡು ರಾಸಯನಿಕಗಳನ್ನು ಹೊರಹಾಕುತ್ತವೆ. ಸೋಂಕು ಆಗಿರುವ ಪ್ರದೇಶಕ್ಕೆ ಇಸಿನೋಫಿಲ್‍ಗಳು ಹಾಗೂ ನ್ಯೂಟ್ರೋಫಿಲ್‍ಗಳನ್ನು ಆಕರ್ಷಿಸಲು ಬಾಸೊಫಿಲ್ ರಾಸಾಯನಿಕ ಸಂಕೇತಗಳನ್ನು ಬಿಡುಗಡೆ ಮಾಡಬಹುದು.

ಲಿಂಫೋಸೈಟ್‍ಗಳುಸಂಪಾದಿಸಿ

ಲಿಂಫೋಸೈಟ್‍ಗಳು ರಕ್ತಕ್ಕಿಂತ ಹೆಚ್ಚಾಗಿ ದುಗ್ಧನಾಳ ವ್ಯವಸ್ಥೆಯಲ್ಲಿ ಕಂಡುಬರುತ್ತವೆ. ಇದರಲ್ಲಿ ೩ ವಿಧಗಳಿವೆ. ಆವುಗಳು -

  1. ಬಿ ಜೇವಕೋಶಗಳು
  2. ಟಿ ಜೇವಕೋಶಗಳು
  3. ಸಹಜವಾಗಿ ಸಾಯಿಸುವ ಜೇವಕೋಶಗಳು

ಇವುಗಳ ಸಾಮಾನ್ಯ ಕೆಲಸವೇನೆಂದರೆ ದೇಹದ ಮೇಲಾಗುವ ದಾಳಿಗಳನ್ನು ಗುರುತಿಸುವುದು ಹಾಗೂ ತಡೆಗಟ್ಟುವುದು. ಇವುಗಳು ನಿರ್ದಿಷ್ಟ ರೋಗಕಾರಕಗಳ ಹಾಗೂ ಸೋಂಕಿತ ಜೀವಕೋಶಗಳು ವಿರುದ್ಧ ಕೆಲಸ ಮಾಡುತ್ತವೆ. ಅಂತೆಯೇ ಹೊಂದಿಕೊಳ್ಳಬಲ್ಲ ಪ್ರತಿರಕ್ಷಣಾ ಪ್ರತಿಕ್ರಿಯೆಯ ಭಾಗವಾಗಿದೆ.

ಮೋನೋಸೈಟ್‍ಗಳು.ಸಂಪಾದಿಸಿ