ಕಣ್ಣು

ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯ.
  • ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯ. ಪಂಚೇಂದ್ರಿಯಗಳಲ್ಲಿ ಒಂದು. ಕಣ್ಣಿನ ರಚನೆ ಹೀಗಿದೆ
:ಮಾನವ ಕಣ್ಣು ;;: 1: ಹಿಂಭಾಗದ ಕೋಣೆ 2: ಓರಾ ಸೆರಾಟಾ 3: ಸಿಲಿಯರಿ ಸ್ನಾಯು 4: ಸಿಲಿಯರಿ ವಲಯಗಳು 5: ಷ್ಲೆಮ್ ಕಾಲುವೆ; 6: ಕಣ್ಣು ಪಾಪೆ 7: ಮುಂಭಾಗದ ಕೋಣೆ 8: ಕಾರ್ನಿಯಾ 9: ಐರಿಸ್ 10: ಲೆನ್ಸ್ ಕಾರ್ಟೆಕ್ಸ್ 11: ಲೆನ್ಸ್ /ಮಸೂರ ನ್ಯೂಕ್ಲಿಯಸ್ 12: ಸಿಲಿಯರಿ ಪ್ರಕ್ರಿಯೆ 13: ಕಾಂಜುಂಟಿವಾ 14: ಕೆಳಮಟ್ಟದ ಓರೆಯಾದ ಸ್ನಾಯು 15: ಕೆಳಮಟ್ಟದ ರೆಕ್ಟಸ್ ಸ್ನಾಯು 16: ಮಧ್ಯದ ರೆಕ್ಟಸ್ ಸ್ನಾಯು 17: ರೆಟಿನಲ್ ಅಪಧಮನಿಗಳು ಮತ್ತು ರಕ್ತನಾಳಗಳು 18 : ಆಪ್ಟಿಕ್ ಡಿಸ್ಕ್ 19: ಡುರಾ ಮೇಟರ್ 20: ಕೇಂದ್ರ ರೆಟಿನಲ್ ಅಪಧಮನಿ 21: ಕೇಂದ್ರ ರೆಟಿನಲ್ ಸಿರೆ 22: ಆಪ್ಟಿಕಲ್ ನರ 23: ವರ್ಟಿಕೋಸ್ ಸಿರೆ 24: ಬಲ್ಬಾರ್ ಶೀಟ್ 25: ಮ್ಯಾಕುಲಾ 26: ಫೊವಾ 27: ಸ್ಕ್ಲೆರಾ 28: ಕೋರಾಯ್ಡ್ 29: ಉನ್ನತ ರೆಕ್ಟಸ್ ಮಸ್ಕ್ಯುಲ್ 30: ರೆಟಿನಾ.
ಕಣ್ಣು
Human eye
Compound eye of Antarctic krill(ಅಂಟಾರ್ಕ್ಟಿಕ್ ಕ್ರಿಲ್ / ಸಮುದ್ರ ಮಿಡತೆಯ ಸಂಯುಕ್ತ ಕಣ್ಣು)
ಲ್ಯಾಟಿನ್ oculus
System Nervous
ಯುರೋಪಿಯನ್ ಕಾಡೆಮ್ಮೆ ಕಣ್ಣು
ಮಾನವನ ಕಣ್ಣು
-ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್- ಅನ್ನು ಬಳಸುವ ಮೂಲಕ ಮನೆಯ ನೊಣ ಸಂಯುಕ್ತ ಕಣ್ಣಿನ ಮೇಲ್ಮೈಯ ಚಿತ್ರ
ಕೀಟದ ಸಂಯುಕ್ತ ಕಣ್ಣಿನ ಅಂಗರಚನೆ (ಅಂಗರಚನಾಶಾಸ್ತ್ರ)



  • ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ.
  • ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ ಸಾಂದ್ರತೆಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು ಬೆಳಕು ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ.
  • ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು ಒಳಗೆ ಬರುವಂತೆ ಮಾಡುತ್ತದೆ. ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.

ರೆಟಿನಾ ರಚನೆ

ಬದಲಾಯಿಸಿ
  • ಇದರಲ್ಲಿ ಸಾವಿರದ ಮುನ್ನೂರು ಕೋಟಿ `ಪೋಟೋ ರಿಸೆಪ್ಟರ್ಸ್’ ಎಂಬ ಕಣಗಳಿರುತ್ತವೆ. ಇವಿಷ್ಟೂ ತಮ್ಮ ಮೇಲೆ ಬೀಳುವ ಬೆಳಕು ಹಾಗೂ ಕತ್ತಲಷ್ಟನ್ನೇ ಗ್ರಹಿಸುತ್ತವೆ. ಇದರ ಆಧಾರದಲ್ಲೇ ಮೆದುಳು ವಸ್ತುವಿನ ಆಕಾರ, ಗಾತ್ರ, ದೂರವನ್ನು ಅಂದಾಜು ಮಾಡುವುದು.
  • ಅದಲ್ಲದೆ, ಅದೇ ರೆಟಿನಾದಲ್ಲಿ ಏಳುನೂರು ಕೋಟಿ `ಕೋನ್’ ಕಣಗಳಿರುತ್ತವೆ. ಇವುಗಳ ಕೆಲಸ ಬಣ್ಣಗಳನ್ನು ಗುರ್ತಿಸುವುದು! ಮನುಷ್ಯನ ದೇಹದ ಎಕ್ಸ್ [X] ಕ್ರೋಮೋಸೋಮ್ ಈ ಕಣಗಳನ್ನು ಉತ್ಪಾದಿಸುತ್ತದೆ. ಈಗ ಸ್ವಲ್ವ ಜನನದ ವಿಷಯವನ್ನು ನೆನಪು ಮಾಡಿಕೊಳ್ಳಿ.
  • ಗಂಡಿನಿಂದ ಬರುವ `ವೈ [Y] ಕ್ರೋಮೋಸೋಮ್ ಹೆಣ್ಣಿನಲ್ಲಿರುವ `ಎಕ್ಸ್ ಕ್ರೋಮೋಸೋಮಿನೊಂದಿಗೆ ಬೆರೆತಾಗ ಗಂಡು ಮಗುವಾಗುತ್ತದೆ. ಗಂಡಿನಿಂದಲೂ `ಎಕ್ಸ್ ಕ್ರೋಮೋಸೋಮ್' ಬಂದಿತೆಂದರೆ ಖಂಡಿತಾ ಹೆಣ್ಣು ಮಗುವೇ ಹುಟ್ಟುವುದು. ಏಕೆಂದರೆ ಹೆಣ್ಣಿನಲ್ಲಿ `ವೈ ಕ್ರೋಮೋಸೋಮ್‌ಗಳಿರುವುದಿಲ್ಲ.
  • ಆಕೆಯಲ್ಲಿರುವ ಎರಡು ಕ್ರೋಮೋಸೋಮ್‌ಗಳೂ ಸಹ `ಎಕ್ಸ್’ ಆಗಿರುತ್ತವೆ. ಅಂತಹ `ಎಕ್ಸ್’ ಕ್ರೋಮೋಸೋಮ್ ಕಣ್ಣಿನ ರೆಟಿನಾದಲ್ಲಿರುವ `ಕೋನ್’ಗಳನ್ನು ಉತ್ಪಾದಿಸುತ್ತಾದ್ದರಿಂದ ಒಂದೇ `ಎಕ್ಸ್ ಕ್ರೋಮೋಸೋಮ್’ ಹೊಂದಿರುವ ಗಂಡಸರಿಗಿಂತಲೂ, ಎರಡು `ಎಕ್ಸ್ ಕ್ರೋಮೋಸೋಮ್‌’ಗಳನ್ನು ಹೊಂದಿರುವ ಹೆಂಗಸರ ಕಣ್ಣಿನಲ್ಲಿ ಕೋನ್‌ಗಳ ಸಂಖ್ಯೆ ವಿಪರೀತವಾಗಿರುತ್ತದೆ. ಹಾಗಾಗಿಯೇ ಅವರು ಬಣ್ಣಗಳನ್ನು ನಿಖರವಾಗಿ ವಿವರವಾಗಿ, ಪ್ರತ್ಯೇಕವಾಗಿ ಗುರ್ತಿಸಬಲ್ಲರು!
 
Arthropods such as this Blue bottle fly-ಕ್ಯಾಲಿಫೋರಾ ವಾಂತಿ ನೊಣವು ಸಂಯುಕ್ತ ಕಣ್ಣುಗಳನ್ನು ಹೊಂದಿದೆ
"https://kn.wikipedia.org/w/index.php?title=ಕಣ್ಣು&oldid=941401" ಇಂದ ಪಡೆಯಲ್ಪಟ್ಟಿದೆ