ಮಾನವನ ಕಣ್ಣು ಬೆಳಕಿಗೆ ಪ್ರತಿಕ್ರಿಯಿಸುವ ವಿವಿಧೋದ್ದೇಶಗಳುಳ್ಳ ಅತ್ಯಮೂಲ್ಯ ಅಂಗವಾಗಿದೆ.

ಮಾನವನ ಕಣ್ಣು
1. posterior chamber 2. ora serrata 3. ciliary muscle 4. ciliary zonules 5. canal of Schlemm 6. pupil 7. anterior chamber 8. cornea 9. iris 10. lens cortex 11. lens nucleus 12. ciliary process 13. conjunctiva 14. inferior oblique muscle 15. inferior rectus muscle 16. medial rectus muscle 17. retinal arteries and veins 18. optic disc 19. dura mater 20. central retinal artery 21. central retinal vein 22. optic nerve 23. vorticose vein 24. bulbar sheath 25. macula 26. fovea 27. sclera 28. choroid 29. superior rectus muscle 30. retina

ಪ್ರಜ್ಞಾತ್ಮಕ ಜ್ಞಾನೇಂದ್ರಿಯವಾಗಿರುವ ಕಣ್ಣು, ದೃಷ್ಟಿಗೆ ಅವಕಾಶ ನೀಡುತ್ತದೆ. ಅಕ್ಷಿಪಟದಲ್ಲಿರುವ ರಾಡ್(ಕಣ್ಣಿನ ಪಾಪೆಯ ದಂಡ) ಮತ್ತು ಕೋನ್ (ಅಕ್ಷಿಪಟದಲ್ಲಿರುವ ಶಂಕುವಿನಾಕಾರದ ರಚನೆ) ಕೋಶಗಳು, ವಿವಿಧ ಬಣ್ಣಗಳು ಮತ್ತು ಅವುಗಳ ಗಾಢತೆಯನ್ನು ಗ್ರಹಿಸುವುದು ಸೇರಿದಂತೆ ಜಾಗೃತ ಬೆಳಕಿನ ಗ್ರಹಿಕೆ ಮತ್ತು ದೃಷ್ಟಿಗೆ ಅವಕಾಶ ಕಲ್ಪಿಸುತ್ತದೆ. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು. [೧]

ಸಾಮಾನ್ಯವಾಗಿ ಇತರ ಸಸ್ತನಿಗಳ ಕಣ್ಣುಗಳ ರೀತಿಯಲ್ಲಿ ಮಾನವನ ಕಣ್ಣಿನ ಅಕ್ಷಿಪಟದಲ್ಲಿರುವ ಚಿತ್ರವನ್ನು ಮೂಡಿಸದ ದ್ಯುತಿಸಂವೇದಿ ನರಗ್ರಂಥಿ ಕೋಶಗಳು , ಬೆಳಕಿನ ಸಂಕೇತಗಳನ್ನು ಸ್ವೀಕರಿಸುತ್ತದೆ. ಇದು ಪಾಪೆಯ ಗಾತ್ರದ ಹೊಂದಾಣಿಕೆ, ಮೆಲಟೊನಿನ್ ಎಂಬ ಹಾರ್ಮೋನ್ ನ ನಿಯಂತ್ರಣ ಮತ್ತು ನಿಗ್ರಹ ಹಾಗೂ ಜೈವಿಕ ಗಡಿಯಾರದ ಹೊಂದಾಣಿಕೆ ಮೇಲೆ ಪ್ರಭಾವ ಬೀರುತ್ತದೆ.


ಸಾಮಾನ್ಯ ಲಕ್ಷಣಗಳು ಬದಲಾಯಿಸಿ

ಕಣ್ಣು ಪರಿಪೂರ್ಣ ಗೋಲಾಕಾರದಲ್ಲಿರುವುದಿಲ್ಲ, ಬದಲಿಗೆ ಇದು ಜೋಡಿಸಿದ ಎರಡು ಭಾಗಗಳ ಘಟಕವಾಗಿದೆ. ಕಣ್ಣಿನ ಮುಂಭಾಗದಲ್ಲಿರುವ ಚಿಕ್ಕದಾದ, ಓರೆಯಾದ ಘಟಕಕ್ಕೆ ಕಾರ್ನಿಯಾ( ಪಾರದರ್ಶಕ ಪಟಲ/ಕಣ್ಣಾಲೆ)ಎನ್ನಲಾಗುತ್ತದೆ. ಇದು ಶ್ವೇತಾಕ್ಷಿಪಟ(ಬಿಳಿಯ ಕಣ್ಣುಪೊರೆ) ಎಂಬ ದೊಡ್ಡ ಘಟಕದೊಂದಿಗೆ ಕೂಡಿಕೊಂಡಿರುತ್ತದೆ. ಕಾರ್ನಿಯಾ ಭಾಗದ ತ್ರಿಜ್ಯ(ರೇಡಿಯಸ್‌)ವು ಸಾಮಾನ್ಯವಾಗಿ ಸುಮಾರು ೮ ಮಿ.ಮೀ. (೦.೩ ಅಂಗುಲ)ನಷ್ಟಿರುತ್ತದೆ. ಉಳಿದ ಆರನೇ ಐದು ಭಾಗಗಳನ್ನು ಶ್ವೇತಾಕ್ಷಿಪಟವು ಒಳಗೊಂಡಿರುತ್ತದೆ. ಇದರ ತ್ರಿಜ್ಯವು ಸಾಮಾನ್ಯವಾಗಿ ಸುಮಾರು ೧೨ ಮಿ.ಮೀ.ಗಳಷ್ಟಿರುತ್ತದೆ. ಕಾರ್ನಿಯಾ ಮತ್ತು ಶ್ವೇತಾಕ್ಷಿಪಟವು ಲಿಂಬಸ್ ಎಂಬ ಉಂಗುರದಿಂದ ಒಟ್ಟಿಗೆ ಜೋಡಿಸಲಾಗಿರುತ್ತವೆ. ಕಾರ್ನಿಯಾ ಪಾರದರ್ಶಕತೆಯಿಂದ, ಕಾರ್ನಿಯಾದ ಬದಲಿಗೆ ಕಣ್ಣಿನ ಬಣ್ಣವಾದ ಕಣ್ಪೊರೆ (ಐರಿಸ್‌) ಮತ್ತು ಮಧ್ಯದಲ್ಲಿರುವ ಕಪ್ಪು ಭಾಗ (ಕಣ್ಣು ಪಾಪೆ) ಕಾಣಿಸುತ್ತವೆ. ಬೆಳಕು ಹೊರಗೆ ಪ್ರತಿಫಲಿಸುವುದಿಲ್ಲವಾದ್ದರಿಂದ ಕಣ್ಣಿನ ಒಳಗೆ ನೋಡಲು ಆಫ್ತಾಲ್ಮೊಸ್ಕೋಪ್ (ಆಪ್ಥಾಲ್ಮೊಸ್ಕೋಪ್‌ ಎಂದರೆ ಕಣ್ಣಿನ ಒಳಭಾಗವನ್ನು ನೋಡಲು ಬಳಸುವ ಯಂತ್ರ) ಅವಶ್ಯಕತೆ ಇರುತ್ತದೆ. ಕಣ್ಣುಪಾಪೆಗೆ ಎದುರಿಗಿರುವ ಸ್ಥಳವಾದ ಕಣ್ಣಿನ ಒಳಭಾಗ(ಫಂಡಸ್) ಮಂಕಾದ ಚಕ್ಷುಬಿಲ್ಲೆ(ಪಪಿಲ) ತೋರಿಸುತ್ತದೆ. ಇಲ್ಲಿ ಕಣ್ಣನ್ನು ಪ್ರವೇಶಿಸುವ ರಕ್ತನಾಳಗಳು ಅಡ್ಡಹಾದು, ದೃಷ್ಟಿ ನರ ತಂತುಗಳು ಈ ಗೋಲಾಕಾರದ ಅಂಗದಿಂದ ನಿರ್ಗಮಿಸುತ್ತವೆ.

ಅಳತೆಗಳು ಬದಲಾಯಿಸಿ

 
ಮಾನವನ ಕಣ್ಣು

ವಯಸ್ಕರಲ್ಲಿ ಕಣ್ಣಿನ ಅಳತೆಗಳು ಒಂದೆರಡು ಮಿಲಿಮೀಟರ್‌ಗಳಷ್ಟು ವ್ಯತ್ಯಾಸಗೊಳ್ಳುತ್ತವೆ. ಲಂಬದ ಅಳತೆಯು ಸಾಮಾನ್ಯವಾಗಿ ಸಮತಲದ(ಹಾರಿಜಾಂಟಲ್) ಅಳತೆಗಿಂತ ಕಡಿಮೆ ಇರುತ್ತದೆ. ವಯಸ್ಕರಲ್ಲಿ ಲಂಬದ ಅಳತೆಯು ಸುಮಾರು ೨೪ ಮಿ.ಮೀ. ಹಾಗೂ ನವಜಾತ ಶಿಶುಗಳಲ್ಲಿ ೬–೧೭ ಮಿ.ಮೀ.ಗಳಷ್ಟಿರುತ್ತದೆ (ಸುಮಾರು ೦.೬೫ ಅಂಗುಲದಷ್ಟು). ಕಣ್ಣುಪಾಪೆಯು ಅತ್ಯಂತ ವೇಗವಾಗಿ ಸುಮಾರು ೨೨.೫–೨೩ ಮಿ.ಮೀ.ಗಳ ವರೆಗೆ (ಸುಮಾರು ೦.೮೯ ಅಂಗುಲಗಳು) ಬೆಳೆದಿರುತ್ತದೆ. ಮೂರು ವರ್ಷದ ಮಗುವಿನಲ್ಲಿ ಈ ರೀತಿಯ ಬೆಳವಣಿಗೆಯಾಗುತ್ತದೆ. ಅಲ್ಲಿಂದ ೧೩ನೆಯ ವಯಸ್ಸಿನವರೆಗೆ, ಕಣ್ಣು ತನ್ನ ಪೂರ್ಣಗಾತ್ರಕ್ಕೆ ಬೆಳೆದಿರುತ್ತದೆ. ಅಳತೆಯು ೬.೫ ಮಿ.ಲೀ.(೦.೪ ಘನ ಅಂಗುಲ)ಗಳಷ್ಟಿರುತ್ತದೆ ಹಾಗೂ ತೂಕವು ೭.೫ ಗ್ರಾಮ್‌ಗಳಷ್ಟಿರುತ್ತದೆ (೦.೨೫ ಔನ್ಸ್‌).

ಭಾಗಗಳು ಬದಲಾಯಿಸಿ

ಕಣ್ಣು ಮೂರು ಪದರಗಳನ್ನು ಹೊಂದಿದ್ದು, ಮೂರು ಪಾರದರ್ಶಕ ರಚನೆಗಳನ್ನು ಆವರಿಸಿದೆ. ಅತ್ಯಂತ ಹೊರಗಿರುವ ಪದರವು ಕಾರ್ನಿಯಾ ಹಾಗೂ ಶ್ವೇತಾಕ್ಷಿಪಟವನ್ನು ಹೊಂದಿದೆ. ಮಧ್ಯದ ಪದರದಲ್ಲಿ ನಡುಪೊರೆ (ಕೋರಾಯ್ಡ್), ಕಣ್ಣೆವೆಯ ಅಂಗಾಂಶ ಹಾಗೂ ಕಣ್ಪೊರೆಹೊಂದಿವೆ. ಅಕ್ಷಿಪಟವು ಅತ್ಯಂತ ಒಳಗಿರುವ ಪದರವಾಗಿದೆ. ನಡುಪೊರೆ ಹಾಗೂ ಅಕ್ಷಿಪಟದ ನಾಳಗಳಿಂದ ಅಕ್ಷಿಪಟಕ್ಕೆ ಪರಿಚಲನೆಯಾಗುತ್ತದೆ. ಕಣ್ಣಿನ ಒಳಭಾಗ ನೋಡಲು ಬಳಸುವ ಆಪ್ತಾಲ್ಮೋಸ್ಕೋಪ್ ಯಂತ್ರದ ಮೂಲಕ ಇವನ್ನು ನೋಡಬಹುದಾಗಿದೆ.

ಈ ಪದರಗಳೊಳಗೆ ಮುಂಗಣ್ಣೀರು, ಜಲಯುಕ್ತ ರಸಧಾತು ಹಾಗೂ ಮೃದುವಾದ ಮಸೂರಗಳು ಇರುತ್ತವೆ. ಮುಂಗಣ್ಣೀರು ಸ್ಪಷ್ಟವಾದ ದ್ರವವಾಗಿದ್ದು, ಇದು ಎರಡು ಸ್ಥಳಗಳಲ್ಲಿರುತ್ತದೆ: ಕಾರ್ನಿಯಾ ಮತ್ತು ಕಣ್ಪೊರೆಯ ನಡುವಿನ ಮುಂಭಾಗದ ಕೋಶ ಹಾಗೂ, ಮಸೂರದ ಗೋಚರವಾಗುವ ಸ್ಥಳಗಳಲ್ಲಿ ಇರುತ್ತದೆ; ಅಲ್ಲದೇ, ಕಣ್ಪೊರೆಯ ಹಿಂದೆ ಮತ್ತು ಉಳಿದ ಸ್ಥಳದಲ್ಲಿ ಇರುವ ಹಿಂಭಾಗದ ಕೋಶದಲ್ಲಿ ಇರುತ್ತದೆ. ಮಸೂರವು ಉತ್ತಮವಾದ ಪಾರದರ್ಶಕ ತಂತುಗಳಿಂದ ರಚಿತವಾದ ನಿಲಂಬಕ ಲಿಗಮೆಂಟ್‌ನಿಂದ(ಜಿನ್‌ನ ಜಾನ್ಯುಲ್) ಕಣ್ಣೆವೆ ಕಾಯಕ್ಕೆ ಅಂಟಿಕೊಂಡಿರುತ್ತದೆ. ಗಾಜುರೂಪಿ ಕಾಯವು ಸ್ವಚ್ಛವಾದ ಲೋಳೆಯಾಗಿದ್ದು ಜಲಯುಕ್ತ ರಸಧಾತುಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಲ್ಲದೇ ಇದು ಶ್ಲೇತಾಕ್ಷಿಪಟ, ಜೊನುಲೆ, ಮತ್ತು ಮಸೂರದ ಪಕ್ಕದಲ್ಲಿರುತ್ತದೆ. ಅವು ಪಾಪೆಯ ಮೂಲಕ ಕೂಡಿಕೊಂಡಿರುತ್ತವೆ.[೨]

ಕ್ರಿಯಾಶೀಲ ವ್ಯಾಪ್ತಿ ಬದಲಾಯಿಸಿ

ಅಕ್ಷಿಪಟವು , ಸುಮಾರು ೧೦೦:೧ ರಷ್ಟು ಕ್ರಿಯಾಶೀಲವಲ್ಲದ ಛಾಯಾವ್ಯತ್ಯಾಸ ಅನುಪಾತವನ್ನು ಹೊಂದಿದೆ (ಸುಮಾರು ೬ ೧/೨ f-stops ನಷ್ಟು). ಕಣ್ಣು ಚಲಿಸಿದ ಕೂಡಲೇ (ಕಣ್ಣೋಟಗಳು) ಅದು ಅದರ ದೃಷ್ಟಿಯನ್ನು ರಾಸಾಯನಿಕವಾಗಿ ಮತ್ತು ಜ್ಯಾಮಿತೀಯವಾಗಿ ಎರಡೂ ರೀತಿಯಲ್ಲೂ ಮರುಹೊಂದಿಸಿಕೊಳ್ಳುತ್ತದೆ. ಈ ಕ್ರಿಯೆಯನ್ನು ಪಾಪೆಯ ಗಾತ್ರ ನಿಯಂತ್ರಿಸುವ ಕಣ್ಪೊರೆಯನ್ನು ಹೊಂದಿಸಿಕೊಳ್ಳುವ ಮೂಲಕ ಮಾಡುತ್ತದೆ. ಸರಿಸುಮಾರು ದೀರ್ಘವಾದ ನಾಲ್ಕು ನಿಮಿಷಗಳಲ್ಲಿ ಕತ್ತಲೆಯ ಆರಂಭಿಕ ಹೊಂದಾಣಿಕೆಯು ನಡೆಯುತ್ತದೆ, ಇದು ಅವಿಚ್ಛಿನ್ನವಾದ ಕತ್ತಲೆ ಪ್ರಕ್ರಿಯೆಯಾಗಿದೆ; ಅಕ್ಷಿಪಟದ ರಚನೆಯಲ್ಲಿ (ಪುರ್ಕಿನ್ ಜೆ ಪರಿಣಾಮ) ಹೊಂದಾಣಿಕೆಗಳ ಮೂಲಕ ನಡೆಯುವ ಪೂರ್ಣ ಹೊಂದಾಣಿಕೆಯು ಬಹುಶಃ ಮೂವತ್ತು ನಿಮಿಷಗಳಲ್ಲಿ ಪೂರ್ಣವಾಗುತ್ತದೆ. ಆದ್ದರಿಂದ, ಕ್ರಿಯಾಶೀಲ ಛಾಯಾವ್ಯತ್ಯಾಸ ಅನುಪಾತ ಸುಮಾರು ೧,೦೦೦,೦೦೦:೧ (ಸುಮಾರು ೨೦ f-stops) ನಷ್ಟಿರಲು ಸಾಧ್ಯವಿದೆ.[೩] ಈ ಕ್ರಿಯೆಯು ಅರೇಖಿಯ ಮತ್ತು ಬಹುಮುಖೀಯವಾಗಿದೆ. ಆದ್ದರಿಂದ ಬೆಳಕಿನಿಂದಾಗುವ ತಡೆಯು ಮತ್ತೆ ಹೊಂದಾಣಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಸಂಪೂರ್ಣ ಹೊಂದಾಣಿಕೆಯು ಪ್ರಕ್ರಿಯೆಯು ಉತ್ತಮವಾದ ರಕ್ತ ಪರಿಚಲನೆಯ ಮೇಲೆ ಆಧರಿಸಿರುತ್ತದೆ; ಹೀಗೆ ಕತ್ತಲೆಯ ಹೊಂದಾಣಿಕೆಯು ಬಹುಶಃ ಕಡಿಮೆ ರಕ್ತ ಪರಿಚಲನೆ ಮತ್ತು ರಕ್ತನಾಳ ಸಂಕುಚಿತಗೊಳಿಸುವ ಆಲ್ಕೊಹಾಲ್ ಅಥವಾ ತಂಬಾಕಿನಿಂದ ತೊಡಕುಂಟಾಗುತ್ತದೆ.

ಕಣ್ಣು ಕ್ಯಾಮರಗಳಂತಹ ಆಪ್ಟಿಕಲ್ ಸಾಧನಗಳಲ್ಲಿ ಕಂಡುಬರುವ ಮಸೂರಗಳಂತೆ ಇರುವ ಮಸೂರವನ್ನು ಒಳಗೊಂಡಿರುತ್ತದೆ. ಅಲ್ಲದೇ ಒಂದೇ ರೀತಿಯ ನಿಯಮಗಳನ್ನು ಕಣ್ಣಿಗೂ ಅನ್ವಯಿಸಬಹುದು. ಮಾನವನ ಕಣ್ಣಿನ ಪಾಪೆಯು ಅದರ ದ್ಯುತಿ ರಂಧ್ರವಾಗಿದೆ; ಕಣ್ಪೊರೆಯು ವಪೆಯಾಗಿದ್ದು ಇದು ದ್ಯುತಿ ರಂಧ್ರದ ನಿಲುಗಡೆಯಾಗಿ ಕಾರ್ಯನಿರ್ವಹಿಸುತ್ತದೆ. ಕಾರ್ನಿಯದಲ್ಲಿ ನಡೆಯುವ ವಕ್ರೀಕರಣವು ಪರಿಣಾಮಕಾರಿ ದ್ಯುತಿ ರಂಧ್ರವನ್ನು (ಪಾಪೆಯ ಪ್ರವೇಶ)ಉಂಟುಮಾಡುತ್ತದೆ. ಇದು ಪಾಪೆಯ ಭೌತಿಕ ವ್ಯಾಸದಿಂದ ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತದೆ. ಪಾಪೆಯ ಪ್ರವೇಶವು ವ್ಯಾಸದಲ್ಲಿ ಸಾಂಕೇತಿಕವಾಗಿ ಸುಮಾರು ೪ mm ನಷ್ಟಿದೆ, ಆದರು ಇದು ಅತ್ಯಂತ ಪ್ರಕಾಶಮಾನವಾದ ಬೆಳಕಿರುವ ಸ್ಥಳದಲ್ಲಿ ೨ mm ನಿಂದ (f/8.3) ಕತ್ತಲೆಯ ಸ್ಥಳದಲ್ಲಿ ೮ mm (f/2.1)ನ ವರೆಗೆ ಹೆಚ್ಚಾಗಬಲ್ಲದು. ನಂತರದ ಪ್ರಮಾಣವು ವಯಸ್ಸಿನ ಜೊತೆಯಲ್ಲಿ ನಿಧಾನವಾಗಿ ಕಡಿಮೆಯಾಗುತ್ತದೆ, ವಯಸ್ಸಾದ ವ್ಯಕ್ತಿಗಳ ಕಣ್ಣು ಕೆಲವೊಮ್ಮೆ ೫-೬mm ಕ್ಕಿಂತ ಹೆಚ್ಚು ಹಿಗ್ಗುವುದಿಲ್ಲ.

ದೃಷ್ಟಿಯ ಕ್ಷೇತ್ರ ಬದಲಾಯಿಸಿ

ಮಾನವನ ಕಣ್ಣಿನ ದೃಷ್ಟಿ ಕ್ಷೇತ್ರವು ಹೊರಗೆ ಸರಿಸುಮಾರು ೯೫° , ಕೆಳಗೆ ೭೫° ,ಒಳಗೆ ೬೦° , ಮೇಲೆ ೬೦° ನಷ್ಟಿರುತ್ತದೆ. ೧೨–೧೫° ನಷ್ಟು ಕಪೋಲದ ಮತ್ತು ಕ್ಷಿತಿಜೀಯದ ಕೆಳಗೆ ೧.೫° ನಷ್ಟರಲ್ಲಿ ಚಾಕ್ಷುಷ ನರ ಅಥವಾ ಕುರುಡು ಬಿಂದು ಇರುತ್ತದೆ. ಇದು ಸರಿಸುಮಾರಾಗಿ ಉದ್ದದಲ್ಲಿ ೭.೫° ನಷ್ಟು ಮತ್ತು ಅಗಲದಲ್ಲಿ ೫.೫° ನಷ್ಟಿರುತ್ತದೆ. [೪]

ಕಣ್ಣಿನ ಕೆರಳಿಕೆ ಬದಲಾಯಿಸಿ

 
ಕೆಂಪಾದ ಕಣ್ಣುಗುಡ್ಡೆ

ಕಣ್ಣಿನ ಕೆರಳಿಕೆ ಸಾಮಾನ್ಯವಾದ ಸಮಸ್ಯೆಯಾಗಿದ್ದು , ಇದನ್ನು ಎಲ್ಲಾ ವಯಸ್ಸಿನ ಜನರು ಅನುಭವಿಸಿರುತ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ, ಕೆಲವೊಂದನ್ನು ತಡೆಯಬಹುದು ಹಾಗು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬಹುದು. ಆದರೂ, ಮುನ್ನೆಚ್ಚರಿಕೆಯನ್ನು ವಹಿಸಲು, ಕಣ್ಣಿನ ಕೆರಳಿಕೆ ಎಂದರೆ ಏನು ಹಾಗು ನಮ್ಮ ಪರಿಸರದಲ್ಲಿ ಅವು ಎಲ್ಲಿ ಕಂಡು ಬರಬಹುದು ಎಂಬುದರ ಬಗ್ಗೆ ಕೆಲವೊಂದು ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡಿರುವುದು ಬಹು ಮುಖ್ಯವಾಗಿದೆ. ಕಣ್ಣಿನ ಕೆರಳಿಕೆ ಸ್ವಲ್ಪ ಕಣ್ಣೀರಿನ ಹೊರ ಪೊರೆಯ ಅಸ್ಥಿರತೆಯ ಮೇಲೆ ಅವಲಂಬಿಸಿರುತ್ತದೆ. ರಾಸಾಯನಿಕವಾಗಿ ಪ್ರತಿಕ್ರಿಯಾತ್ಮಕವಾದ , ನಿರ್ದಿಷ್ಟವಾದ ಬಾಷ್ಪಶೀಲ ಜೈವಿಕ ಸಂಯುಕ್ತಗಳು ಹಾಗು ಗಾಳಿಯ ಉದ್ರೇಕಕಗಳು, ಕಣ್ಣಿನ ಕೆರಳಿಕೆಯನ್ನು ಉಂಟುಮಾಡಬಹುದು. ವೈಯಕ್ತಿಕ ಕಾರಣಗಳು (ಉದಾಹರಣೆಗೆ ಕಾಂಟ್ಯಾಕ್ಟ್ ಲೆನ್ಸ್ , ಕಣ್ಣಿನ ಪ್ರಸಾಧನ ಸಾಮಗ್ರಿ, ಮತ್ತು ಕೆಲವೊಂದು ಔಷಧ ದ್ರವ್ಯಗಳ ಬಳಕೆ) ಕೂಡ ಕಣ್ಣೀರಿನ ಪೊರೆಯ ಅಸ್ಥಿರತೆಯ ಮೇಲೆ ಪರಿಣಾಮ ಬೀರಬಲ್ಲವು. ಅಲ್ಲದೇ ಇದರಿಂದಾಗಿ ಕಣ್ಣಿನ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.[೫] ಆದಾಗ್ಯೂ, ಗಾಳಿಯ ಮೂಲಕ ಹರಡುವ ಕಣಗಳು ಮಾತ್ರ ಕಣ್ಣೀರಿನಪೊರೆಯನ್ನು ಅಸ್ಥಿರಗೊಳಿಸಿ , ಕಣ್ಣಿನ ಕೆರಳಿಕೆಯನ್ನು ಉಂಟುಮಾಡಿದರೆ , ಮೇಲ್ಮೈನ ಕ್ರಿಯಾಶೀಲ ಸಂಯುಕ್ತಗಳ ಪರಿಮಾಣದ ಅಂಶವು ಹೆಚ್ಚಿರುತ್ತದೆ.[೫] ಕಣ್ಣಿನ ರೆಪ್ಪೆಗಳ ಎವೆಯಿಕ್ಕುವ ಆವರ್ತನದೊಂದಿಗೆ ಸಮಗ್ರ ಶಾರೀರಿಕ ಅಪಾಯ ಮಾದರಿ, ಅಸ್ಥಿರತೆ ಮತ್ತು ಕಣ್ಣೀರಿನ ಪೊರೆಯ ಸೀಳುವಿಕೆಯು ಪ್ರತ್ಯೇಕಿಸಲಾಗದ ಸಂಗತಿಯಾಗಿದ್ದು, ಇದು ಔದ್ಯೋಗಿಕ , ವಾಯುಗುಣ, ಕಣ್ಣಿಗೆ ಸಂಬಂಧಿಸಿದ ಶರೀರ ವಿಜ್ಞಾನದ ಅಪಾಯದ ಅಂಶಗಳಿಗೆ ಸಂಬಂಧಿಸಿದಂತೆ ಕಛೇರಿಯ ನೌಕರರಿಗೆ ಉಂಟಾಗುವ ಕಣ್ಣಿನ ಕೆರಳಿಕೆಯನ್ನು ವಿವರಿಸಬಹುದು.[೫]

UCLA ನಡೆಸಲಾದ ಅಧ್ಯಯನದಲ್ಲಿ, ಕೈಗಾರಿಕ ಕಾರ್ಖಾನೆಗಳಲ್ಲಿ ವರದಿ ಮಾಡಲಾದ ಕಣ್ಣಿನ ರೋಗಲಕ್ಷಣಗಳು ಹರಡುವ ಆವರ್ತನವನ್ನು ಪರೀಕ್ಷಿಸಲಾಯಿತು.[೬] ಅಧ್ಯಯನದ ಫಲಿತಾಂಶ, ಕಣ್ಣಿನ ಕೆರಳಿಕೆ ಕೈಗಾರಿಕೆ ಕಾರ್ಖಾನೆಗಳಲ್ಲಿ 81 ಪ್ರತಿಶತ ದಷ್ಟು ಅತ್ಯಂತ ಹೆಚ್ಚಾಗಿ ಕಂಡು ಬಂದಿರುವಂತಹ ರೋಗಲಕ್ಷಣವಾಗಿದೆ ಎಂದು ತಿಳಿಸುತ್ತದೆ. ಕಛೇರಿಯ ಸಲಕರಣೆಗಳ ಬಳಕೆಯೊಂದಿಗೆ ಆಧುನಿಕ ಕಛೇರಿ ಕೆಲಸವು ಆರೋಗ್ಯದ ಮೇಲೆ ಸಂಭವನೀಯ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. [೭] 1970ರಿಂದ, ಲೋಳೆಪೊರೆ , ಚರ್ಮ,ಸಾರ್ವತ್ರಿಕ ಲಕ್ಷಣಗಳನ್ನು ಸ್ವಯಂ ಪ್ರತಿ ಕಾಗದದೊಂದಿಗೆ ಕಾರ್ಯನಿರ್ವಹಿಸುವುದರೊಂದಿಗೆ ವರದಿಗಳು ನಂಟು ಕಲ್ಪಿಸಿದೆ. ವಿವಿಧ ಕಣಗಳ ರೂಪದಲ್ಲಿರುವ ದ್ರವ್ಯ ಅಥವಾ ವಸ್ತುವನ್ನು ಮತ್ತು ಆವಿಯಾಗುವ ವಸ್ತುವನ್ನು ಹೊರಹಾಕುವುದೇ ಇದಕ್ಕೆ ಕಾರಣವಾಗಿದೆ ಎಂದು ಸೂಚಿಸಲಾಗಿದೆ. ಈ ರೋಗಲಕ್ಷಣಗಳು ಸಿಕ್ ಬಿಲ್ಡಿಂಗ್ ಸಿಂಡ್ರೋಮ್ ನೊಂದಿಗೆ ಸಂಬಂಧಿಸಿವೆ. ಇದು ಕಣ್ಣುಗಳು,ಚರ್ಮದ ಮತ್ತು ಗಾಳಿಮಾರ್ಗಗಳ ಕೆರಳಿಕೆ, ತಲೆನೋವು ಮತ್ತು ನಿಶ್ಯಕ್ತಿಯಂತಹ ರೋಗಲಕ್ಷಣವನ್ನು ಒಳಗೊಂಡಿದೆ.[೮]

ಸಿಕ್ ಬಿಲ್ಡಿಂಗ್ ಸಿಂಡ್ರೋಮ್ (SBS) ನಲ್ಲಿ ಮತ್ತು ಮಲ್ಟಿಪಲ್ ಕೆಮಿಕಲ್ ಸೆನ್ಸಿಟಿವಿಟಿ (MCS) ಯಲ್ಲಿ ವಿವರಿಸಲಾದ ಅನೇಕ ರೋಗಲಕ್ಷಣಗಳು ಗಾಳಿಯ ಮೂಲಕ ಹರಡಿ ಉಪದ್ರವ ಕೊಡುವ ರಾಸಾಯನಿಕಗಳಿಂದ ಉಂಟಾಗುವ ರೋಗಲಕ್ಷಣಗಳನ್ನು ಹೋಲುತ್ತವೆ.[೯] ಸೋಡಿಯಂ ಬೋರೇಟ್ ಧೂಳುಗಳ ಔದ್ಯೋಗಿಕ ಒಡ್ಡುವಿಕೆ ಫಲವಾಗಿ ಕಣ್ಣಿನ ತೀವ್ರತರ ಲಕ್ಷಣಗಳು ಮತ್ತು ಉಸಿರಾಟದ ನಾಳದ ಕೆರಳಿಕೆಯ ಅಧ್ಯಯನದಲ್ಲಿ ಪುನರಾವರ್ತಿಕ ಮಾಪನ ವಿನ್ಯಾಸವನ್ನು ಬಳಸಲಾಯಿತು. [೧೦] ಸಂದರ್ಶನಕ್ಕೆ ಒಳಪಡಿಸಲಾದ ಧೂಳಿಗೆ ಒಡ್ಡಲಾದ 79 ಜನರ ಮತ್ತು ಒಡ್ಡಲಾಗದ 27 ಜನರ ರೋಗಲಕ್ಷಣದ ಪ್ರಮಾಣವನ್ನು ನಿರ್ಧರಿಸಲಾಯಿತು. ಈ ಸಂದರ್ಶನವನ್ನು ಪಾಳಿಯು ಪ್ರಾರಂಭವಾಗುವ ಮೊದಲು, ನಂತರ ಪಾಳಿಯ ಮುಂದಿನ ಆರು ಗಂಟೆಗಳಲ್ಲಿ ನೀಡುವ ನಿಯಮಿತವಾದ ಒಂದು ಗಂಟೆಯ ವಿಶ್ರಾಂತಿಯ ಸಮಯದಲ್ಲಿ, ಸಾಲಾಗಿ ನಾಲ್ಕು ದಿನಗಳ ಕಾಲ ನಡೆಸಲಾಯಿತು. [೧೦] ಧೂಳಿಗೆ ಒಡ್ಡಿದ ಜನರನ್ನು ಏಕಕಾಲದಲ್ಲಿ ಖಾಸಗಿಯಾಗಿ ನಿಜಾವಧಿಯ ವಾಯುದ್ರವ ಪರೀಕ್ಷೆಗೆ ಒಳಪಡಿಸಲಾಯಿತು. ಧೂಳಿಗೆ ಒಡ್ಡಿದಂತಹ ಎರಡು ವಿಭಿನ್ನ ವ್ಯಕ್ತಿವಿವರಗಳ ವಿಶ್ಲೇಷಣೆಯಲ್ಲಿ ದಿನದ ಅಂದಾಜು ಮತ್ತು ಅಲ್ಪಾವಧಿಯ (15 ನಿಮಿಷ) ಅಂದಾಜನ್ನು ಬಳಸಲಾಯಿತು. ಒಡ್ಡುವಿಕೆ-ಪ್ರತಿಕ್ರಿಯೆ ಸಂಬಂಧಗಳನ್ನು ಪ್ರತಿಯೊಂದು ಲಕ್ಷಣದ ಪ್ರಮಾಣದ ದರಗಳನ್ನು ಒಡ್ಡುವಿಕೆಯ ವರ್ಗಗಳೊಂದಿಗೆ ನಂಟು ಕಲ್ಪಿಸುವ ಮೂಲಕ ಮೌಲ್ಯಮಾಪನ ಮಾಡಲಾಯಿತು. [೧೦]


ಮೂಗು, ಕಣ್ಣು, ಮತ್ತು ಗಂಟಲಿನ ಕೆರಳಿಕೆ ಹಾಗು ,ಮತ್ತು ಕೆಮ್ಮು ಮತ್ತು ಉಸಿರುಕಟ್ಟಿದ ಸ್ಥಿತಿಗೆ ತೀವ್ರ ಪ್ರಮಾಣದ ದರಗಳು ಎರಡು ಒಡ್ಡುವಿಕೆ ಸೂಚಿಗಳ ಹೆಚ್ಚಿದ ಒಡ್ಡುವಿಕೆ ಮಟ್ಟಗಳಿಗೆ ಸಂಬಂಧಿಸಿದ್ದು ಕಂಡುಬಂತು.


ಅಲ್ಪಾವಧಿ ಒಡ್ಡುವಿಕೆ ಸಾಂದ್ರೀಕರಣಗಳನ್ನು ಬಳಸಿದಾಗ, ಆಳವಾದ ಒಡ್ಡುವಿಕೆ ಪ್ರತಿಕ್ರಿಯೆ ಓರೆಗಳು ಕಂಡುಬಂದವು.


ವಿಭಿನ್ನ ವ್ಯವಸ್ಥಾಪನ ಪ್ರತಿಕ್ರಮಣ ವಿಶ್ಲೇಷಣೆಯ ಫಲಿತಾಂಶಗಳು ಪ್ರಸ್ತುತ ಧೂಮಪಾನಿಗಳು ಗಾಳಿಯ ಮೂಲಕ ಹರಡುವ ಸೋಡಿಯಂ ಬೋರೇಟ್ ಧೂಳಿಗೆ ಒಡ್ಡಿಕೊಳ್ಳುವುದಕ್ಕಿಂತ ಕಡಿಮೆ ಸಂವೇದನೆಯನ್ನು ಹೊಂದಿರುತ್ತಾರೆ ಎಂದು ಸೂಚಿಸಿತು.[೧೦]

ಕಣ್ಣು ಚಲನೆ (Eye movements) ಬದಲಾಯಿಸಿ

 
ಮಾನವನ ಕಣ್ಣಿನ MRI ಸ್ಕ್ಯಾನ್


ಚಿತ್ರಗಳು ಪ್ರತಿಸೆಕೆಂಡಿಗೆ ಕೆಲವು ಡಿಗ್ರಿಗಳಿಗಿಂತ ಹೆಚ್ಚು ಅಕ್ಷಿಪಟದ ಸುತ್ತಲೂ ಜಾರುತ್ತಿದ್ದರೆ, ಮೆದುಳಿನಲ್ಲಿರುವ ದೃಷ್ಟಿ ವ್ಯವಸ್ಥೆ ಮಾಹಿತಿಯನ್ನು ಅತ್ಯಂತ ನಿಧಾನವಾಗಿ ಸ್ವೀಕರಿಸುತ್ತದೆ.[೧೧] ಆದಾಗ್ಯೂ, ಚಲಿಸುತ್ತಿರುವಾಗ ಮಾನವರು ನೋಡುವುದು ಸಾಧ್ಯವಾಗಲು, ಮೆದುಳು ಕಣ್ಣುಗಳನ್ನು ತಿರುಗಿಸುವ ಮೂಲಕ ತಲೆಯ ಚಲನೆಗೆ ಸರಿದೂಗಿಸಬೇಕಾಗುತ್ತದೆ. ಮುಂಭಾಗದಲ್ಲಿರುವ ಕಣ್ಣುಗಳ್ಳುಳ್ಳ ಪ್ರಾಣಿಗಳಲ್ಲಿ ದೃಷ್ಟಿಸಲು ಉಂಟಾಗುವ ಮತ್ತೊಂದು ತೊಂದರೆಯೆಂದರೆ, ಅತ್ಯಂತ ಹೆಚ್ಚಿನ ಚಾಕ್ಷುಷ ತೀಕ್ಷ್ಣತೆಯೊಂದಿಗೆ ಅಕ್ಷಿಪಟದ ಚಿಕ್ಕ ಭಾಗದ ಬೆಳವಣಿಗೆಯಾಗಿದೆ. ಈ ಭಾಗವನ್ನು ಕುಳಿ(ಫೋವಿಯ) ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ಜನರಲ್ಲಿ ಸುಮಾರು ೨ ಡಿಗ್ರಿಗಳಷ್ಟು ದೃಷ್ಟಿ ಕೋನವನ್ನು ಆವರಿಸಿರುತ್ತದೆ. ಪ್ರಪಂಚದ ಸ್ಪಷ್ಟವಾದ ಚಿತ್ರಣವನ್ನು ಪಡೆಯಲು,ಮೆದುಳು ಕಣ್ಣುಗಳನ್ನು ತಿರುಗಿಸಲೇ ಬೇಕು. ಇದರಿಂದಾಗಿ ವಸ್ತುವಿನ ಚಿತ್ರವು ಕುಳಿಯಲ್ಲಿ ಬೀಳುತ್ತದೆ. ಕಣ್ಣಿನ ಚಲನೆಗಳು ದೃಷ್ಟಿಯ ಗ್ರಹಿಕೆಗೆ ಅತ್ಯಂತ ಪ್ರಮುಖವಾಗಿವೆ. ಅಲ್ಲದೇ ಕಣ್ಣಿನ ಚಲನೆಯನ್ನು ಸೂಕ್ತವಾಗಿ ಮಾಡದಿದ್ದಲ್ಲಿ ಅದು ತೀವ್ರವಾದ ದೃಷ್ಟಿ ದೋಷವನ್ನುಂಟುಮಾಡುತ್ತದೆ.

ಎರಡು ಕಣ್ಣುಗಳನ್ನು ಹೊಂದಿರುವುದರಿಂದ ಮತ್ತಷ್ಟು ಜಟಿಲವಾಗಿರುತ್ತದೆ. ಏಕೆಂದರೆ ಎರಡೂ ಅಕ್ಷಪಟಗಳ ಸಂಬಂಧಿತ ಬಿಂದುಗಳ ಮೇಲೆ ಬೀಳುವ ವಸ್ತುವಿನ ಚಿತ್ರವನ್ನು ಮೆದುಳು ಎರಡರ ಮೇಲೂ ನಿಖರವಾಗಿ ಗುರಿಯಿರಿಸಬೇಕು; ಇಲ್ಲವಾದಲ್ಲಿ, ಒಂದು ವಸ್ತು ಎರಡಿರುವಂತೆ(ದ್ವಿದೃಷ್ಟಿ) ಕಾಣಿಸುತ್ತವೆ. ದೇಹದ ಬೇರೆ ಬೇರೆ ಭಾಗಗಳ ಚಲನೆಗಳನ್ನು ಮೂಳೆಗಳ ಸುತ್ತಲಿರುವ ಉದ್ದಗೆರೆಗಳ್ಳುಳ್ಳ ಸ್ನಾಯುಗಳು ನಿಯಂತ್ರಿಸುತ್ತವೆ. ಕಣ್ಣಿನ ಚಲನೆ ಕೂಡ ಅದಕ್ಕೆ ಅಪವಾದವಾಗಿಲ್ಲ , ಆದರೆ ಅವು ಅಸ್ಥಿಪಂಜರದ ಸ್ನಾಯುಗಳು ಮತ್ತು ಮೂಳೆಗಳು ಹೊಂದಿರದ ವಿಶೇಷವಾದ ಉಪಯೋಗವನ್ನು ಹೊಂದಿದೆ. ಆದ್ದರಿಂದ ಅವುಗಳು ಭಿನ್ನವಾದವುಗಳೆಂದು ಪರಿಗಣಿಸಲಾಗುತ್ತದೆ.

ಎಕ್ಸ್ಟ್ರಾಆಕ್ಯುಲರ್ ಸ್ನಾಯುಗಳು (Extraocular muscles) ಬದಲಾಯಿಸಿ

ಪ್ರತಿಯೊಂದು ಕಣ್ಣು ಅದರ ಚಲನೆಯನ್ನು ನಿಯಂತ್ರಿಸುವ ಆರು ಸ್ನಾಯುಗಳನ್ನು ಹೊಂದಿದೆ : ಲ್ಯಾಟರಲ್ ರೆಕ್ಟಸ್(ಪಾರ್ಶ್ವದ ಸ್ನಾಯು), ಮೆಡಿಯಲ್ ರೆಕ್ಟಸ್(ಮಧ್ಯದ ಸ್ನಾಯು), ಇನ್ ಫಿರಿಯರ್ ರೆಕ್ಟಸ್(ಕೆಳಗಿನ ಸ್ನಾಯು), ಸುಪೀರಿಯರ್ ರೆಕ್ಟಸ್(ಮೇಲಿನ ಸ್ನಾಯು), ಇನ್ ಫಿರಿಯರ್ ಆಬ್ಲಿಕ್ (ಕೆಳಗೆ ವಾಲಿರುವ ಸ್ನಾಯು)ಮತ್ತು ಸುಪೀರಿಯರ್ ಆಬ್ಲಿಕ್(ಮೇಲಕ್ಕೆ ವಾಲಿರುವ ಸ್ನಾಯು). ಸ್ನಾಯುಗಳು ವಿಭಿನ್ನ ಸೆಳೆತಗಳನ್ನು ಉಂಟುಮಾಡಿದಾಗ, ಗೋಳದಲ್ಲಿ ಭ್ರಾಮಕಶಕ್ತಿ ಪ್ರಯೋಗವಾಗಿ ಅದನ್ನು ಅಪ್ಪಟ ಪರಿಭ್ರಮಣೆಯಲ್ಲಿ ಬಹುತೇಕ ತಿರುಗಿಸಿ, ಇದನ್ನು ಕೇವಲ ಒಂದು ಮಿಲಿಮೀಟರ್ ಸ್ಥಾನಾಂತರ ಮಾಡುತ್ತದೆ.[೧೨] ಆದಾಗ್ಯು, ಕಣ್ಣಿನ ಕೇಂದ್ರದಲ್ಲಿ ಕಣ್ಣು ಸುಮಾರು ಒಂದು ಬಿಂದುವಿನವರೆಗೆ ಪರಿಭ್ರಮಿಸುತ್ತದೆ ಎಂದು ಪರಿಗಣಿಸಲಾಗಿದೆ.

ಕಣ್ಣಿನ ತೀವ್ರಗತಿಯ ಚಲನೆ (Rapid eye movement (sleep)) ಬದಲಾಯಿಸಿ

ಕಣ್ಣಿನ ತೀವ್ರಗತಿಯ ಚಲನೆ, ಅಥವಾ ಸಂಕ್ಷಿಪ್ತವಾಗಿ REM, ಸಾಂಕೇತಿಕವಾಗಿ ಬಹುಪಾಲು ಸ್ಪಷ್ಟವಾದ ಕನಸುಗಳು ಬೀಳುವಂತಹ ನಿದ್ರೆಯಲ್ಲಿರುವ ಹಂತವನ್ನು ಸೂಚಿಸುತ್ತದೆ. ಈ ಹಂತದಲ್ಲಿ, ಕಣ್ಣುಗಳು ವೇಗವಾಗಿ ಚಲಿಸುತ್ತವೆ. ಇದು ಸ್ವತಃ ಕಣ್ಣಿನ ಚಲನೆಯ ವಿಶಿಷ್ಟ ರೂಪವಲ್ಲ.

ಕಣ್ಣಿನ ಶೀಘ್ರ ಚಲನೆಗಳು (Saccade) ಬದಲಾಯಿಸಿ

ಕಣ್ಣೋಟ(ಕಣ್ಣಿನ ಶೀಘ್ರ ಚಲನೆ) ,ಎರಡು ಕಣ್ಣುಗಳ ಅತಿ ಶೀಘ್ರವಾದ, ಏಕಕಾಲಿಕ ಚಲನೆಯಾಗಿದೆ. ಇವು ಮುಂಭಾಗದಲ್ಲಿರುವ ಮೆದುಳಿನ ಪಾಲಿಗಳು ನಿಯಂತ್ರಿಸುವ ದಿಕ್ಕಿನಲ್ಲೆ ಚಲಿಸುತ್ತವೆ. ಕಣ್ಣೋಟಕ್ಕಿಂತ ಚಿಕ್ಕದಾಗಿರುವ ಹಾಗು ಸೂಕ್ಷ್ಮ ಕಣ್ಣೋಟಕ್ಕಿಂತ ದೊಡ್ಡದಾಗಿರುವ ಕೆಲವೊಂದು ಅನಿಯಮಿತ ಚಲನೆಗಳು, ಕಮಾನಿನ ಆರು ನಿಮಿಷಗಳವರೆಗೆ ಮೂಡಿಸುತ್ತದೆ.

ಸೂಕ್ಷ್ಮ ಕಣ್ಣೋಟ (Microsaccade) ಬದಲಾಯಿಸಿ

ಒಂದೇ ಕಡೆ ತಲ್ಲೀನರಾಗಿ ನೋಡುವಾಗಲು ಕೂಡ, ಕಣ್ಣುಗಳು ಸುತ್ತಲು ಚಲಿಸುತ್ತವೆ. ಇದು,ಪ್ರತ್ಯೇಕವಾದ ದ್ಯುತಿಸಂವೇದಿ ಕೋಶಗಳನ್ನು ನಿರಂತರವಾಗಿ ವಿಭಿನ್ನ ಡಿಗ್ರಿಯಲ್ಲಿ ಉತ್ತೇಜಿಸಲಾಗುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ. ಒಳಗೆ ತೆಗೆದುಕೊಂಡಿದ್ದನ್ನು ಬದಲಾಯಿಸದಿದ್ದರೆ ಈ ಕೋಶಗಳು ಹೊರಗಿನ ಮಾಹಿತಿ ನೀಡುವುದನ್ನು ನಿಲ್ಲಿಸುತ್ತವೆ. ಸೂಕ್ಷ್ಮ ಕಣ್ಣೋಟವು, ಪ್ರೌಢವಯಸ್ಕರಲ್ಲಿ ಒಟ್ಟು ೦.೨° ಗಿಂತ ಹೆಚ್ಚು ಕಣ್ಣನ್ನು ತಿರುಗಿಸುವುದಿಲ್ಲ.

ವೆಸ್ಟಿಬುಲೊ-ಆಕ್ಯುಲರ್ ಪ್ರತಿವರ್ತನೆ (Vestibulo-ocular reflex) ಬದಲಾಯಿಸಿ

ವೆಸ್ಟಿಬುಲೊ-ಆಕ್ಯುಲರ್ ರಿಫ್ಲೆಕ್ಸ್ ಎಂಬುದು ಒಂದು ಪ್ರತಿವರ್ತನೆಯ ಕಣ್ಣಿನ ಚಲನೆಯಾಗಿದ್ದು, ತಲೆಯು ಚಲಿಸುತ್ತಿರುವಾಗ ಅಕ್ಷಿಪಟದ ಮೇಲೆ ಚಿತ್ರಗಳನ್ನು ಸ್ಥಿರಗೊಳಿಸುತ್ತದೆ. ಇದು ತಲೆಯ ಚಲನೆಯ ವಿರುದ್ಧ ದಿಕ್ಕಿನಲ್ಲಿ ಕಣ್ಣಿನ ಚಲನೆ ಉಂಟಾಗುವಂತೆ ಮಾಡಿ ಚಿತ್ರಗಳು ಸ್ಥಿರವಾಗಿ ಉಳಿಯುವಂತೆ ಮಾಡುತ್ತದೆ. ಈ ಮೂಲಕ ದೃಷ್ಟಿ ಕ್ಷೇತ್ರದ ಕೇಂದ್ರದಲ್ಲಿ ಚಿತ್ರ ಉಳಿಯುವಂತೆ ಮಾಡುತ್ತದೆ. ಉದಾಹರಣೆಗೆ, ತಲೆಯು ಬಲಗಡೆಗೆ ತಿರುಗಿದಾಗ, ಕಣ್ಣು ಎಡಗಡೆಗೆ ಅಥವಾ ಪ್ರತಿಕ್ರಮದಲ್ಲಿ ತಿರುಗುತ್ತದೆ.

ಸುಗಮ ಅನುಸರಣೆ ಚಲನೆ (Pursuit movement) ಬದಲಾಯಿಸಿ

ಕಣ್ಣು ತನ್ನ ಸುತ್ತಮುತ್ತ ಚಲಿಸುತ್ತಿರುವ ವಸ್ತುವನ್ನು ಕೂಡ ಅನುಸರಿಸಬಹುದು. ಇದು ವೆಸ್ಟಿಬುಲೊ-ಆಕ್ಯುಲರ್ ರಿಫ್ಲೆಕ್ಸ್‌ನಷ್ಟು ನಿಖರವಾಗಿರುವುದಿಲ್ಲ, ಏಕೆಂದರೆ ಇದಕ್ಕೆ ಮೆದುಳು ಒಳಬರುವ ದೃಷ್ಟಿ ಮಾಹಿತಿಯನ್ನು ಸಾಗಿಸಬೇಕಿರುತ್ತದೆ ಹಾಗು ಅದಕ್ಕೆ ಪ್ರತಿಕ್ರಿಯೆಯನ್ನು ಪೂರೈಸಬೇಕಾಗುತ್ತದೆ. ಸ್ಥಿರ ವೇಗದಲ್ಲಿ ಚಲಿಸುತ್ತಿರುವ ವಸ್ತುವನ್ನು ಅನುಸರಿಸುವುದು ತುಲನಾತ್ಮಕವಾಗಿ ಸುಲಭವಾಗಿರುತ್ತದೆ. ಆದರೂ ಕಣ್ಣುಗಳು ಚಿತ್ರಗಳನ್ನು ಉಳಿಸಿಕೊಳ್ಳಲು ಹೆಚ್ಚಾಗಿ ಶೀಘ್ರ ಚಲನೆಯ(ಕಣ್ಣೋಟದ)ಎಳೆತಗಳನ್ನು ಉಂಟುಮಾಡುತ್ತವೆ. ಸುಗಮವಾದ ಅನ್ವೇಷಣಾ ಚಲನೆಯು ಯುವ ಜನರಲ್ಲಿ ಕಣ್ಣನ್ನು ೧೦೦°/s ನವರೆಗೂ ತಿರುಗಿಸಬಲ್ಲದು.

ಕಡಿಮೆ ಬೆಳಕಿನ ಸ್ಥಿತಿಗಳಲ್ಲಿ ಅಥವಾ ಚಲನೆಯಲ್ಲಿದ್ದಾಗ ವೇಗವನ್ನು ನಿರ್ಣಯಿಸುವ ಇನ್ನೊಂದು ಉಲ್ಲೇಖ ಬಿಂದುವಿಲ್ಲದಿದ್ದರೆ ವೇಗವನ್ನು ದೃಷ್ಟಿಯಿಂದ ಅಂದಾಜು ಮಾಡುವುದು ಕಷ್ಟವಾಗುತ್ತದೆ.

ಆಪ್ಟೊಕೈನೆಟಿಕ್ ಅನುವರ್ತನ ಬದಲಾಯಿಸಿ

ಆಫ್ಟೊಕೈನೆಟಿಕ್ ಅನುವರ್ತನ ಎಂಬುದು ಕಣ್ಣಿನ ಶೀಘ್ರ ಚಲನೆ ಮತ್ತು ಸುಗಮ ಅನುಸರಣೆಯ ಸಂಯೋಗವಾಗಿದೆ. ಉದಾಹರಣೆಗೆ, ಕಿಟಕಿಯಲ್ಲಿ ಚಲಿಸುತ್ತಿರುವ ರೈಲುಗಾಡಿಯನ್ನು ನೋಡುವಾಗ, ರೈಲುಗಾಡಿ ನಮ್ಮ ದೃಷ್ಟಿ ವ್ಯಾಪ್ತಿಯಿಂದ ದೂರವಾಗುವ ವರೆಗೂ ಅಲ್ಪಕ್ಷಣದವರೆಗೆ(ಸುಗಮ ಅನುಸರಣೆಯ ಮೂಲಕ) ಕಣ್ಣುಗಳು 'ಚಲಿಸುತ್ತಿರುವ' ರೈಲುಗಾಡಿಯ ಮೇಲೆ ಕೇಂದ್ರೀಕರಿಸಬಲ್ಲವು. ಈ ಹಂತದಲ್ಲಿ, ಆಪ್ಟೊಕೈನೆಟಿಕ್ ಅನುವರ್ತನ ಆರಂಭವಾಗಿ ರೈಲುಗಾಡಿಯನ್ನು ಕಣ್ಣುಗಳು ಮೊದಲು ಎಲ್ಲಿ ನೋಡಿದವೊ ಅಲ್ಲಿಗೇ ಚಲಿಸುವಂತೆ ಮಾಡುತ್ತದೆ(ಕಣ್ಣಿನ ಶೀಘ್ರ ಚಲನೆಯ ಮೂಲಕ).

ಕಣ್ಣುಗಳ ವಿರುದ್ಧದಿಕ್ಕಿನ ಚಲನೆ (Vergence) ಬದಲಾಯಿಸಿ

 
ಒಂದೇ ವಸ್ತುವಿನ ಮೇಲೆ ದೃಷ್ಟಿನೆಟ್ಟಿರುವ ಎರಡು ಕಣ್ಣುಗಳು.

ಜೀವಿಯು ಉಭಯನೇತ್ರೀಯ ದೃಷ್ಟಿಯೊಂದಿಗೆ ವಸ್ತುವನ್ನು ನೋಡಿದಾಗ, ಕಣ್ಣುಗಳು ಶೃಂಗೀಯ ಅಕ್ಷದ ಸುತ್ತಲು ತಿರುಗುತ್ತವೆ. ಆದ್ದರಿಂದ ಚಿತ್ರದ ಪ್ರಕ್ಷೇಪಣವು ಎರಡು ಕಣ್ಣುಗಳಲ್ಲಿ ಅಕ್ಷಿಪಟದ ಕೇಂದ್ರದಲ್ಲಿರುತ್ತದೆ. ವಸ್ತುವನ್ನು ಹತ್ತಿರದಿಂದ ನೋಡಲು, ಕಣ್ಣುಗಳು ಪರಸ್ಪರ ಅಭಿಮುಖವಾಗಿ ಸುತ್ತುತ್ತವೆ ('ಅಭಿಗಮನ' ). ಇನ್ನೂ ಹೆಚ್ಚು ಹತ್ತಿರದಿಂದ ನೋಡಲು 'ಬೇರೆ ಬೇರೆ ದಿಕ್ಕಿಗೆ' ತಿರುಗುತ್ತವೆ.(ಅಪಸರಣ) ಮಿತಿಮೀರಿದ ಅಭಿಗಮನವನ್ನು ಮೆಳ್ಳಗಣ್ಣು ದೃಷ್ಟಿ (ಉದಾಹರಣೆಗೆ ಕಣ್ಣುಗಳು ಮೂಗನ್ನು ನೋಡುತ್ತಿರುತ್ತವೆ) ಎಂದು ಕರೆಯಲಾಗುತ್ತದೆ. ದೂರದಲ್ಲಿರುವುದನ್ನು ನೋಡುವಾಗ, ಅಥವಾ 'ಶೂನ್ಯವನ್ನು ದಿಟ್ಟಿಸುತ್ತಿರುವಾಗ', ಕಣ್ಣುಗಳು ಒಮ್ಮುಖವಾಗಿಯೂ ಚಲಿಸುವುದಿಲ್ಲ, ಬೇರೆ ಬೇರೆ ದಿಕ್ಕಿನಕಡೆಗೂ ಚಲಿಸುವುದಿಲ್ಲ.

ಕಣ್ಣುಗುಡ್ಡೆಗಳ ಅಭಿಮುಖ ಅಥವಾ ವಿರುದ್ಧದಿಕ್ಕಿನ ಚಲನೆಗಳು ಕಣ್ಣಿನ ಹೊಂದಾಣಿಕೆಗೆ ಹೆಚ್ಚು ಸಂಬಂಧಿಸಿದೆ. ಸಹಜವಾದ ಸ್ಥಿತಿಯಡಿಯಲ್ಲಿ, ಬೇರೆ ಬೇರೆ ದೂರದಿಂದ ವಸ್ತುವನ್ನು ನೋಡಲು ಕಣ್ಣುಗಳ ಗಮನವನ್ನು ಬದಲಾಯಿಸುವುದು, ತಾನೇತಾನಾಗಿ ಕಣ್ಣುಗುಡ್ಡೆಗಳ ಚಲನೆ ಮತ್ತು ಹೊಂದಾಣಿಕೆಯನ್ನು ಉಂಟುಮಾಡುತ್ತದೆ .

ಅನೇಕ ರೋಗಗಳು, ಕಾಯಿಲೆಗಳು, ಮತ್ತು ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳು ಕಣ್ಣುಗಳಿಗೆ ಮತ್ತು ಸುತ್ತಲಿನ ರಚನೆಗಳಿಗೆ ತೊಂದರೆಯನ್ನುಂಟುಮಾಡುತ್ತವೆ.

ಕಣ್ಣುಗಳಿಗೆ ವಯಸ್ಸಾದಂತೆ ಕೆಲವೊಂದು ಬದಲಾವಣೆಗಳು ಉಂಟಾಗುತ್ತವೆ. ಇದು ಏಕೈಕವಾಗಿ ವಯಸ್ಸಾಗುವ ಪ್ರಕ್ರಿಯೆಯ ಲಕ್ಷಣವಾಗಿದೆ. ಈ ಅಂಗರಚನಾ ಮತ್ತು ಶಾರೀರಿಕ ಪ್ರಕ್ರಿಯೆಗಳಲ್ಲಿ ಬಹುಪಾಲು ಪ್ರಕ್ರಿಯೆಗಳು ನಿಧಾನವಾಗಿ ನಿಂತುಹೋಗುತ್ತವೆ. ವಯಸ್ಸಾಗುವುದರೊಂದಿಗೆ, ದೃಷ್ಟಿಯ ಗುಣಮಟ್ಟವು ವಯಸ್ಸಾದ ನಂತರ ಬರುವ ಕಣ್ಣಿನ ತೊಂದರೆಗಳ ಪ್ರತ್ಯೇಕ ಕಾರಣಗಳಿಂದ ಹಾಳಾಗುತ್ತದೆ. ರೋಗವಿಲ್ಲದ ಕಣ್ಣಿನಲ್ಲಿ ಅನೇಕ ಮಹತ್ವದ ಬದಲಾವಣೆಗಳು ಉಂಟಾಗುತ್ತವೆ. ಅತ್ಯಂತ ಸಕ್ರಿಯವಾದ ಮಹತ್ವದ ಬದಲಾವಣೆಯೆಂದರೆ, ಪಾಪೆಯ ಗಾತ್ರದಲ್ಲಿ ಕುಸಿತ ಉಂಟಾಗುವುದು ಹಾಗು ಕಣ್ಣಿನ ಹೊಂದಾಣಿಕೆಯ ನಷ್ಟ ಅಥವಾ ಕೇಂದ್ರೀಕರಿಸುವ ಸಾಮರ್ಥ್ಯ ಕಡಿಮೆಯಾಗುವುದು (ದೂರದೃಷ್ಟಿ). ಪಾಪೆಯ ಸ್ಥಳವು ಅಕ್ಷಿಪಟವನ್ನು ತಲುಪಬಹುದಾದ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಂದು ಹಂತದಲ್ಲಿ ಪಾಪೆಯ ಹಿಗ್ಗುವ ಸಾಮರ್ಥ್ಯ ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ. ಚಿಕ್ಕ ಪಾಪೆಯ ಗಾತ್ರದಿಂದ ವಯಸ್ಸಾದ ಕಣ್ಣುಗಳು ಅಕ್ಷಿಪಟಕ್ಕೆ ಕಡಿಮೆ ಬೆಳಕನ್ನು ತೆಗೆದುಕೊಳ್ಳುತ್ತವೆ ಯುವಜನರೊಂದಿಗೆ ಹೋಲಿಸಿದಲ್ಲಿ, ವಯಸ್ಸಾದವರು ಪ್ರಕಾಶಮಾನ ಬೆಳಕಿನಲ್ಲಿ ಮಧ್ಯಮ ಸಾಂದ್ರತೆಯ ಬಿಸಿಲಿನ ಕನ್ನಡಕವನ್ನು ಧರಿಸುತ್ತಾರೆ ಹಾಗು ಮಂದವಾದ ಬೆಳಕಿನಲ್ಲಿ ಗಾಢ ಕಪ್ಪುಕನ್ನಡಕವನ್ನು ಧರಿಸುತ್ತಾರೆ. ಆದ್ದರಿಂದ ಯಾವುದೇ ವಿವರವಾದ ದೃಷ್ಟಿನಿರ್ದೇಶಿತ ಕೆಲಸಗಳಲ್ಲಿ ಬೆಳಕಿನೊಂದಿಗೆ ನಿರ್ವಹಣೆಯು ವ್ಯತ್ಯಾಸ ಹೊಂದಿದ್ದರೆ, ವಯಸ್ಸಾದ ವ್ಯಕ್ತಿಗಳಿಗೆ ಹೆಚ್ಚಿನ ಬೆಳಕಿನ ಅಗತ್ಯವಿರುತ್ತದೆ. ಕೆಲವೊಂದು ಕಣ್ಣಿನ ತೊಂದರೆಗಳು ಸರ್ಪಸುತ್ತು ಮತ್ತು ಜನನಾಂಗದ ಗಂಟುಗಳಂತಹ ಲೈಂಗಿಕ ಕಾಯಿಲೆಗಳಿಂದ ಉಂಟಾಗಬಹುದು. ಕಣ್ಣು ಮತ್ತು ಸೋಂಕು ತಗುಲಿದ ಭಾಗದೊಂದಿಗೆ ಸಂಪರ್ಕ ಉಂಟಾದರೆ STD ಕಣ್ಣಿಗೆ ವರ್ಗಾವಣೆಯಾಗಬಹುದು.[೧೩]

ವಯಸ್ಸಿನೊಂದಿಗೆ ಕಾರ್ನಿಯಾದ ಸುತ್ತಲು ಪ್ರಮುಖವಾದ ಬಿಳಿ ಉಂಗುರ ಬೆಳೆಯುತ್ತದೆ. ಇದನ್ನು ಅರ್ಕುಸ್ ಸೆನಿಲಿಸ್ ಎಂದು ಕರೆಯಲಾಗುತ್ತದೆ. ವಯಸ್ಸಾಗುವಿಕೆ ಅಸ್ಪಷ್ಟತೆ ಹಾಗು ಕಣ್ಣಿನರೆಪ್ಪೆಯ ಅಂಗಾಂಶಗಳ ಕೆಳಕುಸಿತ ಮತ್ತು ಕಣ್ಣಿನಗುಳಿಯ ಮೇದಸ್ಸು ಕ್ಷೀಣಿಸುವಂತೆ ಮಾಡುತ್ತದೆ. ಈ ಬದಲಾವಣೆಗಳು ಎಕ್ಟ್ರೊಪಿಯನ್, ಎನ್ಟ್ರೊಪಿಯನ್, ಡರ್ಮೆಟೊಕೆಲ್ಯಾಸಿಸ್, ಮತ್ತು ಟೋಸಿಸ್ ನಂತಹ ಅನೇಕ ಕಣ್ಣುರೆಪ್ಪೆಯ ತೊಂದರೆಗಳ ಕಾರಣಗಳ ಅಧ್ಯಯನಕ್ಕೆ ಕೊಡುಗೆ ನೀಡುತ್ತವೆ. ಗಾಜಿನರೂಪದ ಜೆಲ್ ದ್ರವೀಕರಣ ಕ್ರಿಯೆಗೆ ಒಳಪಡುತ್ತದೆ (ಹಿಂಭಾಗದ ವಿಟ್ರಿಯಸ್ ಪ್ರತ್ಯೇಕತೆ(ಗಾಜಿನರೂಪದ ರಸಧಾತು ಅಕ್ಷಿಪಟದಿಂದ ಪ್ರತ್ಯೇಕಗೊಳ್ಳುವುದು) ಅಥವಾ PVD) ಮತ್ತು ಅದರ ಅಪಾರದರ್ಶಕತೆ ಪ್ಲಾವಕಗಳಂತೆ ತೋರುತ್ತದೆ. ನಿಧಾನವಾಗಿ ಇದರ ಸಂಖ್ಯೆಗಳು ಹೆಚ್ಚಾಗುತ್ತವೆ.

ವಿವಿಧ ನೇತ್ರಶಾಸ್ತ್ರಜ್ಞರು, ದೃಷ್ಟಿ ಮಾಪನಕಾರರು, ನೇತ್ರತಜ್ಞರನ್ನು ಒಳಗೊಂಡಂತೆ ಕಣ್ಣಿಗೆ ಚಿಕಿತ್ಸೆಯನ್ನು ನೀಡುವ ವಿವಿಧ ವೃತ್ತಿಪರರು, ದೃಷ್ಟಿ ದೋಷಗಳು ಮತ್ತು ಕಣ್ಣಿನ ದೋಷಗಳ ಚಿಕಿತ್ಸೆಯಲ್ಲಿ ಮತ್ತು ನಿರ್ವಹಣೆಯಲ್ಲಿ ನಿರತರಾಗಿದ್ದಾರೆ. ನೆಲೆನ್ ಚಾರ್ಟ್ ಎಂಬುದು ಒಂದು ರೀತಿಯ ಕಣ್ಣಿನ ಚಾರ್ಟ್ ಆಗಿದ್ದು, ಇದನ್ನು ದೃಷ್ಟಿ ತೀಕ್ಷ್ಣತೆಯನ್ನು ಅಳೆಯಲು ಬಳಸಲಾಗುತ್ತದೆ. ಕಣ್ಣಿನ ಪರೀಕ್ಷೆಯನ್ನು ಮಾಡಿದ ನಂತರ ಕೊನೆಯಲ್ಲಿ , ಕಣ್ಣಿನ ವೈದ್ಯರು ರೋಗಿಗೆ ದೋಷಪರಿಹಾರಕ ಮಸೂರಕ್ಕೆ ಬೇಕಾದ ಕನ್ನಡಕದ ಲಿಖಿತ ಸೂಚಿಯನ್ನು ನೀಡುತ್ತಾರೆ. ದೋಷಪರಿಹಾರಕ ಮಸೂರವನ್ನು ಬಳಸಲು ಸೂಚಿಸುವಂತಹ ದೃಷ್ಟಿ ದೋಷಗಳು ಮಯೋಪಿಯ (ಸಮೀಪ ದೃಷ್ಟಿ ದೋಷ) ದಂತಹ ದೋಷಗಳನ್ನು ಒಳಗೊಂಡಿರುತ್ತದೆ. ಇದು ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರಲ್ಲಿ ಕಂಡುಬರುತ್ತದೆ. ಅಲ್ಲದೇ ಹೈಪರೋಪಿಯ(ದೂರ ದೃಷ್ಟಿ ದೋಷ) ದಂತಹ ದೋಷಗಳನ್ನು ಕೂಡ ಒಳಗೊಂಡಿದೆ. ಇದು ಜನಸಂಖ್ಯೆಯ ಕಾಲುಭಾಗದಷ್ಟು ಜನರಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲದೇ ವಯಸ್ಸಾಗುವುದರಿಂದ ಗಮನಿಸುವ ವ್ಯಾಪ್ತಿ ಕಡಿಮೆಯಾಗುವ ಪ್ರೆಸ್‌ಬೋಪಿಯವನ್ನು ಒಳಗೊಂಡಿದೆ.

ಇವನ್ನೂ ಗಮನಿಸಿ ಬದಲಾಯಿಸಿ

 • ಕಣ್ಣಿನ ಬಣ್ಣ
 • ಸಸ್ತನಿಯ ಕಣ್ಣು
 • ದೃಷ್ಟಿಮಾಪನ
 • ನೇತ್ರವಿಜ್ಞಾನ

ಉಲ್ಲೇಖಗಳು ಬದಲಾಯಿಸಿ

 1. Judd, Deane B. (1975). Color in Business, Science and Industry. Wiley Series in Pure and Applied Optics (third edition ed.). New York: Wiley-Interscience. p. 388. ISBN 0471452122. {{cite book}}: |edition= has extra text (help); Unknown parameter |coauthors= ignored (|author= suggested) (help)
 2. "ಐ, ಹ್ಯುಮನ್."ಎನ್ ಸೈಕ್ಲಪೀಡಿಯ ಬ್ರಿಟಾನಿಕಾ ಫ್ರಮ್ ಎನ್ ಸೈಕ್ಲಪೀಡಿಯ ಬ್ರಿಟಾನಿಕಾ ೨೦೦೬ ಅಲ್ಟಿಮೇಟ್ ರೆಫರೆನ್ಸ್ ಸ್ಯೂಟ್ DVD ೨೦೦೯
 3. ಬಾರ್ಟಾನ್, H. ಅಂಡ್ ಬೈರ್ನ್, K. ಇಂಟರೊಡಕ್ಷನ್ ಟು ಹ್ಯುಮನ್ ವಿಷನ್,ವಿಶ್ಯುಲ್ ದಿಫೆಕ್ಟ್ಸ್ ಅಂಡ್ ಐ ಟೆಸ್ಟ್ಸ್ (೨೦೦೭ ರ ಮಾರ್ಚ್), p. ೨೨. (PDF).[ಶಾಶ್ವತವಾಗಿ ಮಡಿದ ಕೊಂಡಿ]
 4. MIL-STD-೧೪೭೨F, ಮಿಲಿಟರಿ ಸ್ಟ್ಯಾಂಡರ್ಡ್ , ಹುಮನ್ ಇಂಜಿನಿಯರಿಂಗ್, ಡಿಸೈನ್ ಕ್ರೈಟೀರಿಯ ಫಾರ್ ಮಿಲಿಟರಿ ಸಿಸ್ಟಮ್ಸ್, ಎಕ್ಯೂಪ್‌ಮೆಂಟ್ ಅಂಡ್ ಫೆಸಿಲಿಟೀಸ್ (೧೯೯೯ರ ಆಗಸ್ಟ್ ೨೩) PDF[ಶಾಶ್ವತವಾಗಿ ಮಡಿದ ಕೊಂಡಿ]
 5. ೫.೦ ೫.೧ ೫.೨ ವಾಲ್ಕಾಫ್, P., ಸ್ಕೊವ್, P., ಫ್ರ್ಯಾಂಕ್, C., ಅಂಡ್ ಪೀಟರ್ಸನ್, LN. “ಐ ಇರಿಟೇಷನ್ ಅಂಡ್ ಎನ್ವಿರಾನ್ಮೆಂಟಲ್ ಫ್ಯಾಕ್ಟರ್ಸ್ ಇನ್ ದಿ ಆಫೀಸ್ ಎನ್ವಿರಾನ್ಮೆಂಟಲ್-ಹೈಪೋಥಿಸಿಸ್, ಕಾಸಸ್ ಅಂಡ್ ಅ ಫಿಸಿಯೋಲಾಜಿಕಲ್ ಮಾಡೆಲ್” ಸ್ಕ್ಯಾನ್ ಡಿನೇವಿಯನ್ ಜರ್ನಲ್ ಆಫ್ ವರ್ಕ್, ಎನ್ವಿರಾನ್ಮೆಂಟ್ ಅಂಡ್ ಹೆಲ್ತ್ [ಸ್ಕ್ಯಾಂಡ್. J. ವರ್ಕ್ ಎನ್ವಿರಾನ್. ಹೆಲ್ತ್ 2003 ರ ಡಿಸೆಂಬರ್, pp. 411–430. ಸಂಪುಟ 29, ಸಂಖ್ಯೆ ೬.
 6. ವಾಲಿಂಗ್ಫಾರ್ಡ್ K.M ಮತ್ತು ಕಾರ್ಪೆಂಟರ್, J Proc. IAQ '86: ಮ್ಯಾನೆಜಿಂಗ್ ಇನ್‌ಡೋರ್ ಏರ್ ಫಾರ್ ಹೆಲ್ತ್ ಅಂಡ್ ಎನರ್ಜಿ ಕನ್ಸರ್ವ್., ಅಮೇರಿಕನ್ ಸೊಸೈಟಿ ಫಾರ್ ಹೀಟಿಂಗ್, ರೆಫ್ರಿಜರೇಟಿಂಗ್ , ಅಂಡ್ ಏರ್-ಕಂಡೀಷನಿಂಗ್ ಇಂಜಿನಿಯರ್ಸ್ , ಅಟ್ಲಾಂಟ, 448, 1986.
 7. ಜಾಕ್ಕೊಲಾ, ಮ್ಯಾರಿಟಾ S. ಮತ್ತು ಔನಿ J. K. ಜಾಕ್ಕೊಲಾ. "ಆಫೀಸ್ ಎಕ್ಯುಪ್ಮೆಂಟ್ ಅಂಡ್ ಸಲ್ಪೈಸ್: ಅ ಮಾರ್ಡನ್ ಆಕ್ಯುಪೇಷನಲ್ ಹೆಲ್ತ್ ಕನ್‌ಸರ್ನ್ ?", ಅಮೇರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿ, 1999, pp. 1223, ಸಂಪುಟ. 150, ಸಂಖ್ಯೆ. 11
 8. ನಾರ್ಡ್ ಸ್ಟ್ರೊಮ್ K., D.ನಾರ್ಬ್ಯಾಕ್, ಅಂಡ್ R. ಆಕ್ಸೆಲ್ಸನ್. “ಇನ್‌ಫ್ಲ್ಯುಎನ್ಸ್ ಆಫ್ ಇನ್ ಡೋರ್ ಏರ್ ಕ್ವಾಲಿಟಿ ಅಂಡ್ ಪರ್ಸನಲ್ ಫಾಕ್ಟರ್ಸ್ ಆನ್ ದಿ ಸಿಕ್ ಬಿಲ್ಡಿಂಗ್ ಸಿಂಡ್ರೋಮ್ (SBS) ಇನ್ ಸ್ವೀಡಿಷ್ ಜೆರಿಯಾಟ್ರಿಕ್ ಹಾಸ್ಪಿಟಲ್ಸ್.”, ಆಕ್ಯುಪೇಷನ್ಲ್ ಅಂಡ್ ಎನ್ವಿರಾನ್ಮೆಂಟಲ್ ಮೆಡಿಸನ್, 1995, pp. 170–176, ಸಂಪುಟ. 52.
 9. ಅಂಡ್ರಸನ್, ಕ್ರೊಸಲಿಂಡ್ C. ಅಂಡ್ ಜೂಲಿಯಸ್ H. ಅಂಡ್ರಸನ್. “ಸೆನ್ಸರಿ ಇರಿಟೇಷನ್ ಅಂಡ್ ಮಲ್ಟಿಪಲ್ ಕೆಮಿಕಲ್ ಸೆನ್ಸಿಟಿವಿಟಿ .” ಟಾಕ್ಸಿಕಾಲಜಿ ಅಂಡ್ ಇಂಡಸ್ಟ್ರಿಯಲ್ ಹೆಲ್ತ್ 1999, pp. 339–345, ಸಂಪುಟ. 15, No. 3-4
 10. ೧೦.೦ ೧೦.೧ ೧೦.೨ ೧೦.೩ X ಹು, D H ವೆಗ್ ಮ್ಯಾನ್, E A ಐಸೆನ್, S R ವಾಸ್ಕಿ ಮತ್ತು R G ಸ್ಮಿತ್. “ಡೋಸ್ ರಿಲೇಟೆಡ್ ಅಕ್ಯೂಟ್ ಇರಿಟೆಂಟ್ ಸಿಂಪ್ಟಮ್ ರೆಸ್ಪಾನ್ಸಸ್ ಟು ಆಕ್ಯುಪೇಷನಲ್ ಎಕ್ಸ್ ಪೋಶರ್ ಟು ಸೋಡಿಯಂ ಬೊರೇಟ್ ಡಸ್ಟ್ಸ್.” ಬ್ರಿಟಿಷ್ ಜರ್ನಲ್ ಆಫ್ ಇಂಡಸ್ಟ್ರೀಯಲ್ ಮೆಡಿಸನ್ 1992, pp. 706–713, ಸಂಪುಟ. 49.
 11. ವೆಸ್ಟಿಮರ್, ಗೆರಾಲ್ಡ್ ಅಂಡ್ ಮ್ಯಾಕೀ, ಸುಸೇನ್ P.; "ವಿಶ್ಯುಲ್ ಅಕ್ಯೂಟಿ ಇನ್ ದಿ ಪ್ರೆಸೆನ್ಸ್ ಆಫ್ ರೆಟಿನಲ್ ಇಮೇಜ್ ಮೋಷನ್". ಜರನಲ್ ಆಫ್ ದಿ ಆಪ್ಟಿಕಲ್ ಸೊಸೈಟಿ ಆಫ್ ಅಮೇರಿಕ ೧೯೭೫ ೬೫ (೭), ೮೪೭–೫೦.
 12. ರಾಜರ್ H.S. ಕಾರ್ಪೆಂಟರ್ (೧೯೮೮); ಮುಮೆಂಟ್ಸ್ ಆಫ್ ದಿ ಐ (೨nd ed.) . ಪೈಆನ್ Ltd, ಲಂಡನ್. ISBN ೦-೮೫೦೮೬-೧೦೯-೮.
 13. ಏಜಿಂಗ್ ಐ ಟೈಮ್ಸ್

ºÀtÄÚUÀ¼ÀÄ PÀtÂÚ£À ¸ÀAgÀPÀëuÉUÉ ¸ÀºÀPÁgÀ ಬಾಳೆಹಣ್ಣಿನಸಲಾಡ್ ಸ್ವಲ್ಪ ಬಾಳೆಹಣ್ಣು, ಸ್ವಲ್ಪ ಸೀಬೆ ಹಣ್ಣು, ಸ್ವಲ್ಪ ದ್ರಾಕ್ಷಿ, ನಿಂಬೆರಸ, ಮೆಣಸಿನ ಪುಡಿ, ಸ್ವಲ್ಪ ಮಾವಿನ ಹಣ್ಣು, ಹುರಿದ ಜೀರಿಗೆ ಪುಡಿ, ಸ್ವಲ್ಪ ಸಕ್ಕರೆ, ರುಚಿಗೆ ಸ್ವಲ್ಪ ಉಪ್ಪು. ಈ ಎಲ್ಲ ಹಣ್ಣುಗಳನ್ನು ಸಣ್ಣಗೆ ಕತ್ತರಿಸಿಕೊಂಡು, ಮೇಲೆ ಹೇಳಿದ ಎಲ್ಲ ಸಾಮಗ್ರಿಗಳಿಗೆ ಬೆರೆಸಿ ನಿಂಬೆರಸ ಹಿಂಡಿ. ತಕ್ಷಣ ಸೇವಿಸಿ. ಇದು ಸಾಮಾನ್ಯ ಫ್ರೂಟ್ ಸಲಾಡ್. ಇದನ್ನು ರಕ್ತದೊತ್ತಡದವರಿಗೆ ನೀಡಬಹುದು. ಮಧುಮೇಹಿ ಹಾಗೂ ಸ್ಥೂಲಕಾಯವರೂ ಸೇವಿಸಬಹುದು.

ಕಿತ್ತಳೆಸಲಾಡ್ ಸ್ವಲ್ಪ ಕಿತ್ತಳೆ, ಸ್ವಲ್ಪ ಸೇಬು, ಸ್ವಲ್ಪ ಪರಂಗಿಹಣ್ಣು, ಕಲ್ಲಂಗಡಿ, ಹುರಿದ ಜೀರಿಗೆ ಹುಡಿ, ಚಿಟಿಕೆ ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಶೇಂಗಾ ಬೀಜದ ಪುಡಿ. ಕಿತ್ತಳೆ, ಪಪ್ಪಾಯಿ, ಸೇಬು, ಕಲ್ಲಂಗಡಿಗಳನ್ನು ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಿ. ಹುರಿದ ಜೀರಿಗೆ ಪುಡಿ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ. ಹುರಿದ ಶೇಂಗಾ ಬೀಜದ ಪುಡಿಯನ್ನು ಉದುರಿಸಿ, ತಕ್ಷಣ ತಿನ್ನಲು ಕೊಡಿ. ಮಧುಮೇಹ, ಸ್ಥೂಲಕಾಯ, ರಕ್ತದೊತ್ತಡ, ಮಲಬದ್ಧತೆ ಇರುವವರಿಗೆ ಇದು ಒಳ್ಳೆಯದು.

ಬೇಸಗೆಸಲಾಡ್ ಕಾಲು ಲೀ. ಗಟ್ಟಿ ಮೊಸರು, ಕಾಲು ಲೀ. ಪಪ್ಪಾ ಹಣ್ಣಿನ ರಸ, ಸ್ವಲ್ಪ ಕಿತ್ತಳೆ ತೊಳೆ, ಕಲ್ಲಂಗಡಿ, ಸೇಬು ಚೂರುಗಳು, ದಾಳಿಂಬೆ ಬೀಜ, ಏಲಕ್ಕಿ ಪುಡಿ, ಹುರಿದ ಗೋಡಂಬಿ. ಪರಂಗಿ ಜ್ಯೂಸ್ ಹಾಗೂ ಮೊಸರನ್ನು ಕಡಗೋಲಿನಿಂದ ಕಡೆಯಿರಿ. ಇದಕ್ಕೆ ಹೆಚ್ಚಿದ ಹಣ್ಣುಗಳನ್ನು ಬೆರೆಸಿ, ಹುರಿದ ಗೋಡಂಬಿ ಪುಡಿ ಮತ್ತು ಏಲಕ್ಕಿ ಪುಡಿ ಉದುರಿಸಿ. ತಣ್ಣಗೆ ಮಾಡಿಕೊಂಡು ಸೇವಿಸಿ. ಇದನ್ನು ಮಧುಮೇಹಿಗಳಿಗೆ, ಸ್ಥೂಲ ಕಾಯದವರಿಗೆಕೊಡಬಹುದು.

ಮಾವಿನಸಲಾಡ್ ಮಾವು, ಸಪೋಟ, ಸೇಬು, ಬಾಳೆಹಣ್ಣು, ಮೋಸಂಬಿ, ಕಿತ್ತಳೆ, ಸ್ವಲ್ಪ ತೆಂಗಿನ ತುರಿ, ಜೇನುತುಪ್ಪ, ಏಲಕ್ಕಿ ಪುಡಿ. ಎಲ್ಲ ಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿ ಮಿಶ್ರಮಾಡಿ. ಅದಕ್ಕೆ ತೆಂಗಿನ ತುರಿ, ಜೇನುತುಪ್ಪ ಹಾಗೂ ಏಲಕ್ಕಿ ಪುಡಿ ಸೇರಿಸಿ ಸವಿಯಿರಿ. ಇದು ಮಕ್ಕಳಿಗೆ ಉತ್ತಮ. ಬೇಸಿಗೆಗೆ ಹೇಳಿ ಮಾಡಿಸಿದ್ದು.

ಬಾಹ್ಯ ಕೊಂಡಿಗಳು ಬದಲಾಯಿಸಿ

  Media related to human eyes at Wikimedia Commons