ಕನಸು
ಕನಸು ಎಂದರೆ ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ಕಥೆ. ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ. ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ. ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ, ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಒಂದು ಕನಸ್ಸಿನ ಅವಧಿ ಸುಮಾರು ೫ ರಿಂದ ೫೦ ನಿಮಿಷವಿರಬಹುದು. ಒಬ್ಬ ವ್ಯಕ್ತಿಯು ತನ್ನ ಜೀವನಾವಧಿಯಲ್ಲಿ ಸುಮಾರು ೧,೦೦,೦೦೦ಕ್ಕೂ ಹೆಚ್ಚು ಕನಸುಗಳನ್ನು ಕಾಣುವನು. ಸ್ಪಷ್ಟ ಕನಸು ಎಂದರೆ, ಕನಸುಗಳು ಕಾಣುವಾಗ ಕನಸುಗಾರನಿಗೆ ತಾನು ಕನಸು ಕಾಣುತ್ತಿದ್ದೇನೆಂದು ಗೊತ್ತಿರುತ್ತದೆ. ಕನಸು ಹೇಗೆ ಬೀಳುತ್ತದೆ?
ಕನಸು ನಮಗೆ ೨ ಕಾರಣಗಳಿಂದ ಬೀಳಬಹುದು
ಬದಲಾಯಿಸಿ- ನಾವು ಯಾವ ವಿಷಯದ ಬಗ್ಗೆ ಹೆಚ್ಚು ಆಲೋಚಿಸುತ್ತೇವೆಯೋ ಅಥವಾ ಚಿಂತೆ ಮಾಡುತ್ತೇವೆಯೋ ಆ ವಿಷಯ ನಮಗೇ ತಿಳಿಯದಂತೆ ನಮ್ಮ ಮನಸ್ಸಿನ ಆಳದವರೆಗೆ ತಲುಪಿರುತ್ತದೆ ಹಾಗಾಗಿ ಅದು ಕನಸಿನಲ್ಲಿ ಕಾಣಬಹುದು.
- ಕನಸು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯುವ ಕಾರ್ಯದ ಮುನ್ಸೂಚನೆಯೂ ಆಗಿರಬಹುದು.
ಬಾಹ್ಯಸಂಪರ್ಕಗಳು
ಬದಲಾಯಿಸಿ- Dream Psychology by Sigmund Freud Archived 2009-03-24 ವೇಬ್ಯಾಕ್ ಮೆಷಿನ್ ನಲ್ಲಿ.
- Rüya Tabirleri