ಹಿಮ್ಮಡಿಯು ಪಾದದ ಹಿಂದಿನ ತುದಿಯಲ್ಲಿರುವ ಚಾಚಿಕೊಂಡಿರುವ ಭಾಗ. ಇದು ಕಾಲಿನ ಕೆಳಭಾಗದ ಮೂಳೆಗಳ ಸಂಧಿಯ ಹಿಂದಿರುವ ಹಿಮ್ಮಡಿ ಎಲುಬು ಎಂಬ ಮೂಳೆಯ ಚಾಚಿಕೊಂಡಿರುವಿಕೆಯ ಮೇಲೆ ಆಧಾರಿತವಾಗಿದೆ.

ಮಾನವನ ಹಿಮ್ಮಡಿ

ರಚನೆಸಂಪಾದಿಸಿ

ನಡಿಗೆಯ ಅವಧಿಯಲ್ಲಿ, ಮತ್ತು ವಿಶೇಷವಾಗಿ ನಿಲ್ಲುವ ಹಂತದಲ್ಲಿ ಹಿಮ್ಮಡಿಯು ನೆಲದ ಸಂಪರ್ಕಕ್ಕೆ ಬಂದಾಗ, ಹಿಮ್ಮಡಿಯ ಮೇಲೆ ಬೀಳುವ ಸಂಕೋಚಕ ಬಲಗಳನ್ನು ಹಂಚಲು ಪಾದದ ಅಂಗಾಲು ಚರ್ಮದ ಕೆಳಗಿರುವ ೨ ಸೆ.ಮಿ. ವರೆಗೆ ದಪ್ಪವಿರುವ ಸಂಯೋಜಕ ಅಂಗಾಂಶದ ಪದರದ ಹೊದಿಕೆಯನ್ನು ಹೊಂದಿರುತ್ತದೆ. ಈ ಅಂಗಾಂಶವು ಒತ್ತಡ ಕೊಶಗಳ ವ್ಯವಸ್ಥೆಯನ್ನು ಹೊಂದಿದ್ದು ಇದು ಕಂಪನ ಗ್ರಾಹಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಂಗಾಲನ್ನು ಸ್ಥಿರೀಕರಿಸುತ್ತದೆ. ಈ ಕೋಶಗಳಲ್ಲಿ ಪ್ರತಿಯೊಂದು ನಾರುನೆಣವುಳ್ಳ ಅಂಗಾಂಶವನ್ನು ಹೊಂದಿದ್ದು ಕಾಲಜನ್ ನಾರುಗಳಿಂದ ತಯಾರಾದ ಬಿರುಸಾದ ಸಂಯೋಜಕ ಅಂಗಾಂಶದ ಪದರದ ಹೊದಿಕೆಯನ್ನು ಹೊಂದಿರುತ್ತದೆ.

ಉಲ್ಲೇಖಗಳುಸಂಪಾದಿಸಿ

  • Thieme Atlas of Anatomy: General Anatomy and Musculoskeletal System. Thieme. 2006. ISBN 1-58890-419-9.
"https://kn.wikipedia.org/w/index.php?title=ಹಿಮ್ಮಡಿ&oldid=945375" ಇಂದ ಪಡೆಯಲ್ಪಟ್ಟಿದೆ