ಪಾನೀಯ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (February 2011) |
ಒಂದು ಪಾನೀಯ , ಅಥವಾ ಪೇಯ ವೆಂಬುದು ದ್ರವ ರೂಪದ ಪದಾರ್ಥವಾಗಿದ್ದು, ಇದನ್ನು ನಿರ್ದಿಷ್ಟವಾಗಿ ಮನುಷ್ಯರ ಸೇವನೆಗೆಂದೇ ತಯಾರಿಸಲಾಗಿರುತ್ತದೆ. ಮನುಷ್ಯನ ಒಂದು ಮೂಲ ಅಗತ್ಯವನ್ನು ಭರಿಸುವ ಜೊತೆಯಲ್ಲಿ, ಪಾನೀಯಗಳು ಮಾನವ ಸಮಾಜದ ಸಂಸ್ಕೃತಿಯ ಭಾಗವನ್ನು ರೂಪಿಸುತ್ತದೆ.
ನೀರು
ಬದಲಾಯಿಸಿಎಲ್ಲ ಪಾನೀಯಗಳು ನೀರನ್ನು ಒಳಗೊಂಡಿರುತ್ತದೆಂಬ ವಾಸ್ತವದ ಹೊರತಾಗಿಯೂ, ನೀರನ್ನು ಸ್ವತಃ ಪಾನೀಯದ ಒಂದು ವರ್ಗವೆಂದು ವಿಭಾಗಿಸಲಾಗಿಲ್ಲ. ಪಾನೀಯ ವೆಂಬ ಪದವನ್ನು ಸಾಂಪ್ರದಾಯಿಕವಾಗಿ ನೀರಲ್ಲದ ದ್ರವ ಪದಾರ್ಥಗಳಿಗೆ ಸೂಚಿತವಾಗುವಂತೆ ವಿವರಿಸಲಾಗುತ್ತದೆ.
ಆಲ್ಕಹಾಲಿಕ ಪಾನೀಯಗಳು
ಬದಲಾಯಿಸಿಎಥನಾಲ್ ನ್ನು ಒಳಗೊಂಡಿರುವ ಪಾನೀಯವನ್ನು ಒಂದು ಆಲ್ಕಹಾಲಿಕ ಪಾನೀಯವೆಂದು ಕರೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಆಲ್ಕೋಹಾಲ್ ಎಂದು ಕರೆಯಲಾಗುತ್ತದೆ(ಆದಾಗ್ಯೂ ರಸಾಯನಶಾಸ್ತ್ರದಲ್ಲಿ "ಆಲ್ಕಹಾಲ್" ನ ಅರ್ಥ ನಿರೂಪಣೆಯು ಇತರ ಹಲವು ಸಂಯುಕ್ತಗಳನ್ನು ಒಳಗೊಂಡಿರುತ್ತದೆ).
೮,೦೦೦ ವರ್ಷಗಳ ಹಿಂದಿನಿಂದಲೂ ಬೀರ್ ಮಾನವ ಸಂಸ್ಕೃತಿಯ ಒಂದು ಭಾಗವಾಗಿದೆ.[೧] ಜರ್ಮನಿ, ಐರ್ಲೆಂಡ್, ಯುನೈಟೆಡ್ ಕಿಂಗ್ಡಮ್ ಹಾಗು ಇತರ ಹಲವು ಯೂರೋಪಿನ ರಾಷ್ಟ್ರಗಳಲ್ಲಿ, ಬೀರ್ ನ್ನು (ಹಾಗು ಇತರ ಆಲ್ಕಹಾಲಿಕ ಪಾನೀಯಗಳು) ಸ್ಥಳೀಯ ಬಾರ್ ಅಥವಾ ಪಬ್ ಗಳಲ್ಲಿ ಕೂತು ಕುಡಿಯುವುದು ಒಂದು ಸಾಂಸ್ಕೃತಿಕ ಸಂಪ್ರದಾಯವಾಗಿದೆ.[೨]
ಏಷ್ಯನ್ ರಾಷ್ಟ್ರಗಳು (ಉದಾಹರಣೆಗೆ., ಶ್ರೀಲಂಕಾ ಹಾಗು ಭಾರತ) ಹಲವಾರು ವೈವಿಧ್ಯಮಯ ಆಲ್ಕಹಾಲಿಕ ಪಾನೀಯಗಳನ್ನು ತಯಾರಿಸುತ್ತವೆ (ಉದಾಹರಣೆಗೆ ತಾಳೆ ಮದ್ಯ).
ಆಲ್ಕಹಾಲ್ ರಹಿತ ಪಾನೀಯಗಳು
ಬದಲಾಯಿಸಿಒಂದು ಆಲ್ಕಹಾಲ್ ರಹಿತ ಮದ್ಯವು ಸ್ವಲ್ಪ ಅಥವಾ ಯಾವುದೇ ಪ್ರಮಾಣದ ಆಲ್ಕೋಹಾಲ್ ನ್ನು ಒಳಗೊಂಡಿರುವುದಿಲ್ಲ. ಈ ವಿಭಾಗವು ಕಡಿಮೆ-ಆಲ್ಕೋಹಾಲ್ ಯುಕ್ತ ಬೀರ್, ಆಲ್ಕೋಹಾಲ್ ರಹಿತ ವೈನ್, ಹಾಗು ೦.೫%ಗಿಂತ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ನ್ನು ಒಳಗೊಂಡಿರುವ ಸೇಬುಮದ್ಯವು ಸೇರಿದೆ.
ಸಾಫ್ಟ್ ಡ್ರಿಂಕ್ಸ್
ಬದಲಾಯಿಸಿ"ಸಾಫ್ಟ್ ಡ್ರಿಂಕ್" ಎಂಬ ಪದವು "ಮದ್ಯ" ಹಾಗು "ಪಾನೀಯ"ಕ್ಕೆ ವಿರುದ್ಧವಾಗಿ ಆಲ್ಕಹಾಲ್ ರಹಿತ ಪೇಯಕ್ಕೆ ಸೂಚಿಸಲಾಗುತ್ತದೆ. "ಡ್ರಿಂಕ್"(ಪಾನೀಯ) ಎಂಬ ಪದವು ಕೇವಲ ಹೆಸರಿಗೆ ಮಾತ್ರವಿದ್ದರೂ ಸಹ ಸಾಮಾನ್ಯವಾಗಿ ಆಲ್ಕಹಾಲಿಕ ಅಂಶವನ್ನು ಹೊಂದಿರುವ ದ್ರವ ಪದಾರ್ಥಕ್ಕೆ ಸೂಚಿತವಾಗುತ್ತದೆ.
ಪಾನೀಯಗಳಾದ ಸೋಡಾ ಪಾಪ್, ಹೊಳೆಯುವ ನೀರು, ಐಸ್ ಹಾಕಿದ ಟೀ, ನಿಂಬೆ ಪಾನಕ, ಮಂದಪಾನಕ, ಹಾಗು ಹಣ್ಣಿನ ಪಾನೀಯಗಳು ಅತ್ಯಂತ ಸಾಮಾನ್ಯವಾದ ಸಾಫ್ಟ್ ಡ್ರಿಂಕ್ಸ್ ಗಳಾಗಿವೆ. ಹಾಲು, ಬಿಸಿ ಚಾಕೊಲೇಟ್, ಟೀ, ಕಾಫಿ, ಮಿಲ್ಕ್ ಶೇಕ್ ಗಳು, ಹಾಗು ನಲ್ಲಿಯ ನೀರನ್ನು ಸಾಫ್ಟ್ ಡ್ರಿಂಕ್ಸ್ ಗಳೆಂದು ಪರಿಗಣಿಸಲಾಗುವುದಿಲ್ಲ.
ಕೆಲವೊಂದು ಕಾರ್ಬೋನೆಟೆಡ್ ಸಾಫ್ಟ್ ಡ್ರಿಂಕ್ಸ್ ಗಳು ಸಕ್ಕರೆಯ ಪರ್ಯಾಯದೊಂದಿಗೆ ಸಿಹಿಗೊಳಿಸಿದ ರೂಪಾಂತರಗಳಲ್ಲಿ ಲಭ್ಯವಿದೆ.
ಹಣ್ಣಿನ ರಸ
ಬದಲಾಯಿಸಿಹಣ್ಣಿನ ರಸವು ಒಂದು ನೈಸರ್ಗಿಕ ಉತ್ಪನ್ನವಾಗಿದ್ದು, ಇವುಗಳು ಕೆಲವೇ ಕೆಲವು ಸಂಯೋಜನೀಯಗಳನ್ನು ಹೊಂದಿರುತ್ತವೆ, ಅಥವಾ ಯಾವುದೇ ಸಂಯೋಜನೀಯಗಳನ್ನು ಹೊಂದಿರುವುದಿಲ್ಲ. ಸಿಟ್ರಸ್ ಉತ್ಪನ್ನಗಳಾದ ಕಿತ್ತಳೆ ರಸ ಹಾಗು ಕಡು ಕಿತ್ತಳೆಯ ರಸವು ಬೆಳಗಿನ ಉಪಾಹಾರದ ಅತ್ಯಂತ ಸಾಮಾನ್ಯ ಪಾನೀಯಗಳೆನಿಸಿವೆ. ದ್ರಾಕ್ಷಿ ಹಣ್ಣಿನ ರಸ, ಅನಾನಸ್, ಸೇಬು, ದ್ರಾಕ್ಷಿ, ನಿಂಬೆ, ಹಾಗು ನಿಂಬೆ ಹಣ್ಣಿನ ರಸಗಳೂ ಸಹ ಅತ್ಯಂತ ಜನಪ್ರಿಯ ಉತ್ಪನ್ನಗಳೆನಿಸಿವೆ. ಎಳೆನೀರು ಅತ್ಯಂತ ಪುಷ್ಟಿಕರವಾದ ಹಾಗು ಚೇತೋಹಾರಿಯಾದ ಪೇಯವಾಗಿದೆ.
ಹಲವು ವಿಧದ ಬೆರಿಗಳನ್ನು(ಓಟೆಯಿಲ್ಲದ, ರಸ ತುಂಬಿರುವ ಸಣ್ಣ ಹಣ್ಣುಗಳು) ಕಿವುಚಿ ಅದರಿಂದ ಬರುವ ರಸಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಲಾಗುತ್ತದೆ ಹಾಗು ಇದಕ್ಕೆ ಕೆಲವೊಂದು ಬಾರಿ ಸಕ್ಕರೆಯನ್ನು ಹಾಕಲಾಗುತ್ತದೆ. ರಾಸ್ಪ್ಬೆರಿ, ಬ್ಲ್ಯಾಕ್ ಬೆರಿ ಹಾಗು ಒಣದ್ರಾಕ್ಷಿಗಳಿಂದ ತಯಾರಿಸಲಾದ ರಸಗಳು ಸಾಮಾನ್ಯವಾಗಿ ಅತ್ಯಂತ ಜನಪ್ರಿಯ ರಸಗಳಾಗಿವೆ ಆದರೆ ನೀರಿನ ಪ್ರಮಾಣವೂ ಸಹ ಅವುಗಳ ಪೌಷ್ಟಿಕಾಂಶಗಳ ಮೌಲ್ಯವನ್ನು ನಿರ್ಧರಿಸುತ್ತದೆ. ನೀರಿನ ಜೊತೆಯಲ್ಲಿ ಹಣ್ಣಿನ ರಸಗಳೂ ಸಹ ಬಹುಶಃ ಮಾನವಕುಲದ ಅತ್ಯಂತ ಹಳೆಯ ಪೇಯಗಳಾಗಿವೆ. ಹುದುಗಲು ಇಡಲಾದ ದ್ರಾಕ್ಷಾ ರಸದಿಂದ ಆಲ್ಕಹಾಲಿಕ ಪೇಯ ವೈನ್ ನ್ನು ತಯಾರಿಸಲಾಗುತ್ತದೆ.
ಹಣ್ಣುಗಳು ಬಹಳ ಬೇಗನೆ ಕೊಳೆತುಹೋಗುತ್ತವೆ ಹಾಗು ಇದರಿಂದ ರಸವನ್ನು ತಯಾರಿಸುವ ಹಾಗು ಸಂಗ್ರಹಿಸುವ ಸಾಮರ್ಥ್ಯವು ಮಹತ್ವವಾದ ಮೌಲ್ಯವನ್ನು ಪಡೆದಿತ್ತು. ಕೆಲವು ಹಣ್ಣುಗಳು ಅಧಿಕ ಆಮ್ಲೀಯವಾಗಿರುತ್ತವೆ ಹಾಗು ಇದನ್ನು ಹೆಚ್ಚುವರಿ ನೀರನ್ನು ಹಾಗು ಸಕ್ಕರೆಯನ್ನು ಅಥವಾ ಜೇನುತುಪ್ಪವನ್ನು ಬೆರೆಸಿದ್ದರೆ ಇನ್ನಷ್ಟು ಸ್ವಾದಿಷ್ಟವನ್ನಾಗಿ ಮಾಡುವ ಅಗತ್ಯವಿತ್ತು. ಈ ಹಿಂದೆ ಹಣ್ಣಿನ ರಸವನ್ನು ಸಂಗ್ರಹಿಸಿಡುವುದು ಶ್ರಮದಾಯಕ ಕೆಲಸವಾಗಿತ್ತು, ಇದರಲ್ಲಿ ಹಣ್ಣುಗಳನ್ನು ಕಿವುಚುವ ಅಗತ್ಯವಿತ್ತು ಹಾಗು ಬಾಟಲಿಗೆ ತುಂಬಿ, ಅದಕ್ಕೆ ಮುಚ್ಚಳವನ್ನು ಹಾಕುವ ಮುನ್ನ ಈ ರೀತಿಯಾದ ಶುದ್ಧ ರಸಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕಿತ್ತು.
ಮಾರುಕಟ್ಟೆಯಲ್ಲಿ ಇಂದಿಗೂ ಕಿತ್ತಳೆ ರಸ ಹಾಗು ಎಳೆನೀರು ಅತ್ಯಧಿಕವಾಗಿ ಸೇವನೆಯಾಗುವ ಪಾನೀಯಗಳಾಗಿವೆ ಹಾಗು ಇದಕ್ಕೆ ಕಾರಣ ಅವುಗಳಲ್ಲಿರುವ ಮಹತ್ವದ ಪೌಷ್ಟಿಕಾಂಶಗಳು ಹಾಗು ಜಲಸಂಚಯನ ಸಾಮರ್ಥ್ಯಗಳು.
ಬಿಸಿಯಾದ ಪಾನೀಯಗಳು
ಬದಲಾಯಿಸಿಸಾಧಾರಣವಾಗಿ ಬಿಸಿ ಮಾಡಿ ನೀಡಲಾಗುವ ಯಾವುದೇ ಪಾನೀಯವನ್ನು ಬಿಸಿ ಪಾನೀಯವೆಂದು ಕರೆಯಲಾಗುತ್ತದೆ. ಇದನ್ನು ಈಗಾಗಲೇ ಬಿಸಿ ಮಾಡಲಾದಂತಹ ನೀರು ಅಥವಾ ಹಾಲನ್ನು ಮತ್ತಷ್ಟು ಬಿಸಿ ಮಾಡುವ ಮೂಲಕ ತಯಾರಿಸಬಹುದು, ಅಥವಾ ನೇರವಾಗಿ ಪೇಯವನ್ನು ಬಿಸಿ ಮಾಡಬಹುದು. ಬಿಸಿ ಪಾನೀಯಗಳ ಕೆಲ ಉದಾಹರಣೆಗಳೆಂದರೆ:
ಇತರೆ
ಬದಲಾಯಿಸಿಕೆಲವು ಪದಾರ್ಥಗಳನ್ನು ಆಹಾರ ಅಥವಾ ಪಾನೀಯ ಎಂದು ಎರಡೂ ರೀತಿಯಾಗಿ ಸೂಚಿಸಬಹುದು, ಹಾಗು ಈ ಪ್ರಕಾರವಾಗಿ ಇದನ್ನು ಚಮಚದಲ್ಲಿ ತಿನ್ನಬಹುದು ಅಥವಾ ಕುಡಿಯಬಹುದು, ಇದು ಪದಾರ್ಥದ ಸಾಂದ್ರತೆ ಹಾಗು ದ್ರಾವ್ಯತೆಯ ಮೇಲೆ ಅವಲಂಬಿಸಿರುತ್ತದೆ.
- ಮಜ್ಜಿಗೆ
- ಸೂಪ್
- ಮೊಸರು
ಅಳತೆ
ಬದಲಾಯಿಸಿಏಕಮಾನ | ಆಸ್ಟ್ರೇಲಿಯಾ | UK | US | ||||||||
---|---|---|---|---|---|---|---|---|---|---|---|
ಮಿಲಿಲೀಟರ್ | imp fl oz | ಮಿಲಿಲೀಟರ್ | US fl oz | ಮಿಲಿಲೀಟರ್ | |||||||
- | 1/48 | 0.592 | 1/48 | 0.616 | |||||||
ಟೀಚಮಚ | 5 | 1/8 | 3.55 | 1/6 | 4.93 | ||||||
ಟೀಚಮಚ | 20 | 1/2 | 14.2 | 1/2 | 14.8 | ||||||
ದ್ರವ ಔನ್ಸ್, ಗುಟುಕು ಅಥವಾ ಟಾಕಣ | 30 | 1 | 28.413 | 1 | 29.574 | ||||||
ಒಂದು ಕುಡಿತ, ಬಾರ್ ಗ್ಲಾಸ್ ಅಥವಾ ಜಿಗರ್(ಒಂದರಿಂದ ಒಂದೂವರೆ ಔನ್ಸ್ ಹಿಡಿಯುವ ಲೋಟ) | 3/2 | 42.6 | 3/2 | 44.4 | |||||||
ಕುಡಿಯಲು ಸೂಕ್ತ | 375 | 11.6 | 330 | 12 | 355 | ||||||
ಪಿಂಟ್ | 570 | 20 | 568 | 16 | 473 | ||||||
ಶುದ್ಧೀಕರಿಸಿದ ಆಲ್ಕೋಹಾಲ್ ಗಳ ಬಾಟಲ್ | 750 | 24.6 | 700 | 25.3 | 750 | ||||||
ವೈನ್ ಬಾಟಲ್ | 750 | 26.4 | 750 | 25.3 | 750 |