ಭೂತಗನ್ನಡಿಯು ಒಂದು ವಸ್ತುವಿನ ವರ್ಧಿಸಿದ ಚಿತ್ರವನ್ನು ಸೃಷ್ಟಿಸಲು ಬಳಸಲಾದ ಪೀನ ಮಸೂರ. ಸಾಮಾನ್ಯವಾಗಿ ಮಸೂರವನ್ನು ಹಿಡಿಕೆಯಿರುವ ಚೌಕಟ್ಟಿನಲ್ಲಿ ಕೂರಿಸಲಾಗುತ್ತದೆ. ಬೆಳಕನ್ನು ಕೇಂದ್ರೀಕರಿಸಲು ಭೂತಕನ್ನಡಿಯನ್ನು ಬಳಸಬಹುದು, ಉದಾಹರಣೆಗೆ ಬೆಂಕಿಯನ್ನು ಹಚ್ಚಲು ಕೇಂದ್ರಬಿಂದುವಿನಲ್ಲಿ ಬಿಸಿ ಬಿಂದುವನ್ನು ಸೃಷ್ಟಿಸುವ ಸಲುವಾಗಿ ಸೂರ್ಯನ ವಿಕಿರಣವನ್ನು ಕೇಂದ್ರೀಕರಿಸಲು.

ಭೂತಗನ್ನಡಿಯ ಮೂಲಕ ಕಾಣಬರುವ ಪಠ್ಯ

ಇತಿಹಾಸಸಂಪಾದಿಸಿ

ಮಧ್ಯಪ್ರಾಚ್ಯ ಹಾಗೂ ಮೆಡಿಟರೇನಿಯನ್ ಜಲಾನಯನ ಪ್ರದೇಶದಾದ್ಯಂತ ಹಲವಾರು ಸಹಸ್ರಮಾನಗಳಿಂದ ಮಸೂರಗಳ ಬಳಕೆಯು ವ್ಯಾಪಕವಾಗಿತ್ತು ಎಂದು ಸಾಕ್ಷ್ಯವು ಸೂಚಿಸುತ್ತದೆ.[೧] ವರ್ಧಿಸುವ ಸಾಧನದ ಅತ್ಯಂತ ಮುಂಚಿನ ಸ್ಪಷ್ಟ ಲಿಖಿತ ಸಾಕ್ಷ್ಯವೆಂದರೆ ಅರಿಸ್ಟೋಫೆನೀಸ್‍ನ ಕ್ರಿ.ಪೂ. ೪೨೪ರ ದ ಕ್ಲೌಡ್ಸ್‌ನಲ್ಲಿನ ಒಂದು ಕುಚೋದ್ಯ. ಇದರಲ್ಲಿ ದೂದಿಗೆ ಬೆಂಕಿಹೊತ್ತಿಸಲು ಇರುವ ಭೂತಗನ್ನಡಿಗಳನ್ನು ಔಷಧಾಲಯಗಳಲ್ಲಿ ಮಾರಾಟಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಮತ್ತೊಂದು ಸಾಕ್ಷ್ಯವೆಂದರೆ ಹಿರಿಯ ಪ್ಲೈನಿಯ "ಲೆನ್ಸ್" (ಇದು ಗಾಯಗಳಿಗೆ ಕಾವು ಕೊಡಲು ಬಳಸಲಾದ, ನೀರು ತುಂಬಿದ ಗಾಜಿನ ಗೋಳ).

ಉಲ್ಲೇಖಗಳುಸಂಪಾದಿಸಿ

  1. Sines, George; Sakellarakis, Yannis A. (Apr 1987). "Lenses in Antiquity". American Journal of Archaeology. 91 (2). doi:10.2307/505216.