ತೋಳು
ಮಾನವ ಅಂಗರಚನಾಶಾಸ್ತ್ರದಲ್ಲಿ, ತೋಳು ಶರೀರದ ಮೇಲಿನ ಅವಯವವಾಗಿದೆ, ಮತ್ತು ಭುಜ ಹಾಗೂ ಮೊಣಕೈ ಕೀಲುಗಳ ನಡುವಿನ ಪ್ರದೇಶಗಳನ್ನು ಒಳಗೊಂಡಿದೆ. ಸಾಮಾನ್ಯ ಬಳಕೆಯಲ್ಲಿ ತೋಳು ಕೈಗೆ ವಿಸ್ತರಿಸುತ್ತದೆ. ಅದನ್ನು ಮೇಲ್ತೋಳು (ಬ್ರೇಕಿಯಂ), ಮುಂದೋಳು (ಆಂಟಿಬ್ರೇಕಿಯಂ), ಮತ್ತು ಕೈ (ಮೇನಸ್) ಎಂದು ವಿಭಜಿಸಬಹುದು.