Expression error: Unexpected < operator.

Navel
Belly Button 002.jpg
Human "innie" navel
ಚಿತ್ರ:Outie navel 2.jpg
Human "outie" navel
ಲ್ಯಾಟಿನ್ umbilicus

ನಾಭಿ(ಹೊಕ್ಕಳು) ಯು (ವೈದ್ಯಕೀಯವಾಗಿ ಅಂಬಿಲಿಕಸ್ ಎಂದೂ ಕರೆಯಲಾಗುತ್ತದೆ, ಇದನ್ನು ಬೆಲ್ಲಿ ಬಟನ್ ಎಂದು ಕರೆಯುತ್ತಾರೆ) ಹೊಟ್ಟೆಯ ಮೇಲಿರುವ ಒಂದು ಗುರುತಾಗಿದೆ. ಇದು ನವಜಾತ ಶಿಶುವಿನಿಂದ ಹೊಕ್ಕುಳಬಳ್ಳಿಯು ಕತ್ತರಿಸಿಹೋಗುವಾಗ ಉಂಟಾಗುತ್ತದೆ. ಎಲ್ಲಾ ಜರಾಯುಯುಕ್ತ ಸಸ್ತನಿಗಳು ಒಂದು ನಾಭಿಯನ್ನು ಹೊಂದಿರುತ್ತವೆ. ಇದು ಮಾನವರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಮಾನವರಲ್ಲಿ, ಈ ಗುರುತು ಕುಗ್ಗಿರುವಂತೆ (ಇದನ್ನು ಹೆಚ್ಚಾಗಿ ಬಳಕೆ ಮಾತಿನಲ್ಲಿ ಇನ್ನೈ ಎಂದು ಸೂಚಿಸಲಾಗುತ್ತದೆ) ಅಥವಾ ಮುಂಚಾಚಿರುವಂತೆ (ಔಟೈ ) ಕಾಣಿಸಬಹುದು. ನಾಭಿಗಳನ್ನು ಈ ಮೇಲಿನಂತೆ ಎರಡು ವರ್ಗಗಳಾಗಿ ಪ್ರತ್ಯೇಕಿಸಬಹುದಾದರೂ, ಅವು ವಾಸ್ತವವಾಗಿ ಗಾತ್ರ, ಆಕಾರ, ಆಳ/ಉದ್ದ ಮತ್ತು ಒಟ್ಟು ತೋರ್ಕೆಯ ಆಧಾರದಲ್ಲಿ ಜನರಿಂದ ಜನರಿಗೆ ಹೆಚ್ಚು ವ್ಯಾಪಕವಾಗಿ ವ್ಯತ್ಯಾಸಗೊಳ್ಳುತ್ತವೆ. ನಾಭಿಗಳು ಗುರುತುಗಳಾಗಿರುವುದರಿಂದ ಮತ್ತು ಅವನ್ನು ತಳಿಶಾಸ್ತ್ರದಲ್ಲಿ ಯಾವುದೇ ರೀತಿಯಿಂದ ನಿರೂಪಿಸದಿದ್ದುದರಿಂದ, ಅವನ್ನು ತದ್ರೂಪು ಅವಳಿಗಳ ನಡುವೆ ಗುರುತಿಸಬಹುದಾದ ಗುರುತುಗಳಿಲ್ಲದಾಗ ವ್ಯತ್ಯಾಸ ತೋರಿಸುವ ಮಾರ್ಗವೆಂದು ತಿಳಿಯಲಾಗುತ್ತದೆ.

ಮಾನವನ ಅಂಗರಚನಾಶಾಸ್ತ್ರಸಂಪಾದಿಸಿ

ನಾಭಿಯು ಹೊಟ್ಟೆಯ ಮೇಲಿರುವ ಒಂದು ಪ್ರಮುಖ ಗುರುತಾಗಿದೆ ಏಕೆಂದರೆ ಅದರ ಸ್ಥಾನವು ಮಾನವರಲ್ಲಿ ಹೆಚ್ಚುಕಡಿಮೆ ಸ್ಥಿರವಾಗಿರುತ್ತದೆ. ನಾಭಿಯ ಮಟ್ಟದಲ್ಲಿ ಸೊಂಟದ ಸುತ್ತಲಿರುವ ಚರ್ಮವು ಹತ್ತನೇ ಎದೆಗೂಡಿನ ಬೆನ್ನುಮೂಳೆಯ ನರದಿಂದ (T10 ಡರ್ಮಟೋಮ್) ಪೂರೈಕೆಯನ್ನು ಪಡೆಯುತ್ತದೆ. ನಾಭಿಯು ಸಾಮಾನ್ಯವಾಗಿ L3 ಮತ್ತು L4 ಬೆನ್ನುಮೂಳೆಗಳ ನಡುವಿನ ಸಂಧಿಗೆ ಹೊಂದಿಕೆಯಾದ ಲಂಬವಾದ ಮಟ್ಟದಲ್ಲಿರುತ್ತದೆ.[೧], ಇದರ ಸ್ಥಾನದಲ್ಲಿ L3 ಮತ್ತು L5 ಬೆನ್ನುಮೂಳೆಗಳ ನಡುವೆ ಜನರಲ್ಲಿ ಕೆಲವು ವ್ಯತ್ಯಾಸಗಳಿರುತ್ತವೆ.[೨]

 
62%ನಷ್ಟು ದೇಹದ ಎತ್ತರ - ನೇವಲ್ ಅಟ್ ಗೋಲ್ಡನ್ ಸೆಕ್ಷನ್

ನಾಭಿಯು ಮುಂಚಾಚಿರುವಂತೆ(ಔಟೈ) ಗೋಚರಿಸಲು ಕಾರಣ ಹೊಕ್ಕುಳಬಳ್ಳಿಯಿಂದ ಹೆಚ್ಚುವರಿ ಚರ್ಮವು ಉಳಿದಿರುವುದು ಅಥವಾ ಹೊಕ್ಕುಳಿನ ಹರ್ನಿಯಾಗಳು. ಆದರೂ ಹೊಕ್ಕುಳಿನ ಹರ್ನಿಯಾವನ್ನು ಹೊಂದಿರುವ ಶಿಶುವಿನ ನಾಭಿಯು ಮುಂಚಾಚಿರುವಂತೆ ಕಾಣಬೇಕೆಂದೇನಿಲ್ಲ. ವ್ಯಕ್ತಿಯ ಹೊಟ್ಟೆಯು ಒಳಗಿರುವಂತೆ ಗೋಚರಿಸುವುದು ಮಾತ್ರವಲ್ಲದೆ ಕೆಳಗಿರುವ ಹೊಟ್ಟೆಯ ಸ್ನಾಯು ಪದರಗಳೂ ಸಹ ನಾಭಿಯು ಒಳಗಿರುವಂತೆ ಕಾಣಲು ಕಾರಣವಾಗಿರುತ್ತವೆ; ಈ ಸ್ಥಾನವು ತೆಳ್ಳಗಾಗಿದ್ದರೆ ಕೃಶವಾದ ರಚನೆಯನ್ನು ಉಂಟುಮಾಡಿ, ನಾಭಿಯನ್ನು ಹರ್ನಿಯಾವಾಗುವಂತೆ ಮಾಡುತ್ತದೆ. ಗರ್ಭಧರಿಸಿರುವ ಸಂದರ್ಭದಲ್ಲಿ, ಗರ್ಭಕೋಶವು ಗರ್ಭಿಣಿಯ ನಾಭಿಯನ್ನು ಹೊರಕ್ಕೆ ತಳ್ಳುತ್ತದೆ. ಇದು ಪ್ರಸವದ ಸಾಮಾನ್ಯವಾಗಿ ಸಂಕುಚಿತವಾಗುತ್ತದೆ.

ಹೊಕ್ಕುಳನ್ನು ಉದರವನ್ನು ನೋಟದಿಂದ ನಾಲ್ಕು ವಿಭಾಗಗಳಾಗಿ ಪ್ರತ್ಯೇಕಿಸಲು ಬಳಸಲಾಗುತ್ತದೆ. ಮಾನವನ ಭಾಗಗಳ ಬಗೆಗಿನ ಲಿಯೊನಾರ್ಡೊ ದ ವಿನ್ಸಿಯ ಪ್ರಸಿದ್ಧ ಚಿತ್ರ ವಿಟ್ರುವಿಯನ್ ಮ್ಯಾನ್‌ನಲ್ಲಿ ನಾಭಿಯು ತೋಳುಗಳನ್ನೂ ಕಾಲುಗಳನ್ನೂ ಅಗಲಿಸಿ ನಿಂತ ವ್ಯಕ್ತಿಯನ್ನು ಆವರಿಸಿರುವ ವೃತ್ತದ ಕೇಂದ್ರಭಾಗದಲ್ಲಿ ಕಂಡುಬರುತ್ತದೆ. ತೋಳುಗಳನ್ನೂ ಕಾಲುಗಳನ್ನೂ ಅಗಲಿಸಿ ನಿಂತ ಭಂಗಿ ಮತ್ತು ನೇರವಾದ ಭಂಗಿಯನ್ನು ಬದಲಾಯಿಸಿದರೆ, ಆ ವ್ಯಕ್ತಿಯ ತೋರಿಕೆಯ ಕೇಂದ್ರವು ಸರಿದಂತೆ ಕಂಡುಬರುತ್ತದೆ, ಆದರೆ ನಿಜವಾಗಿ ವ್ಯಕ್ತಿಯ ನಾಭಿಯು ಚಲಿಸದೆ ಸ್ಥಿರವಾಗಿ ಉಳಿಯುತ್ತದೆ ಎಂಬುದನ್ನು ಇದು ತೋರಿಸುತ್ತದೆ.

ಕೆಲವರು ಹೊಕ್ಕುಳ ಮಡಿಚು, ಗ್ಯಾಸ್ಟ್ರೊಸ್ಕಿಸಿಸ್ ಅಥವಾ ಹೊಕ್ಕುಳಬಳ್ಳಿಯ ಹಾರ್ನಿಯಾದ ಶಸ್ತ್ರಚಿಕಿತ್ಸೆಯಿಂದಾಗಿ ಇನ್ನೈ ಅಥವಾ ಔಟೈನ ಬದಲಿಗೆ ಸೂಕ್ಷ್ಮವಾದ ಕಚ್ಚು ಕಚ್ಚಾಗಿರುವ ನಾಭಿಯನ್ನು ಹೊಂದಿರುತ್ತಾರೆ. ವಿಪರೀತ ತೂಕವಿರುವವರು ಸಾಮಾನ್ಯ ತೂಕವಿರುವವರಿಗಿಂತ ದೊಡ್ಡ ಹೊಕ್ಕುಳನ್ನು ಹೊಂದಿರುತ್ತಾರೆ.

ಫ್ಯಾಷನ್ಸಂಪಾದಿಸಿ

ಫ್ಯಾಷನ್ ಕೆಲವೊಮ್ಮೆ ಕಿಬ್ಬೊಟ್ಟೆಯನ್ನು (ಅಂದರೆ ವಪೆ) ನಗ್ನವಾಗಿ ತೋರಿಸುವ ಉಡುಗೆಯ ಮೂಲಕ ಹೊಕ್ಕುಳನ್ನು ಪ್ರದರ್ಶಿಸುತ್ತದೆ, ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುವ ಬಳಕೆಯಾಗಿದೆ. ನಗ್ನ ಹೊಕ್ಕುಳು ಪ್ರದರ್ಶಿಸುವುದನ್ನು ಕೆಲವು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ನಿಷೇಧಿಸಲಾಗಿತ್ತು: ಉದಾಹರಣೆಗಾಗಿ,೧೯೬೦ರಲ್ಲಿ ಟಿವಿ ಪ್ರದರ್ಶನ ಐ ಡ್ರೀಮ್ ಆಫ್ ಜೀನೈ ನಲ್ಲಿ ಬಾರ್ಬರ ಎಡೆನ್‌ರಿಗೆ ಹೊಕ್ಕುಳನ್ನು ಪ್ರದರ್ಶಿಸಲು ಅನುಮತಿ ನೀಡಲಿಲ್ಲ. ಇದನ್ನು ಈಗ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.

ನಾಭಿಯನ್ನು ಪ್ರದರ್ಶಿಸುವ ಆಧುನಿಕ ಶೈಲಿಯು ಸಾಮಾನ್ಯವಾಗಿ ಮಹಿಳೆಯರಿಗೆ ಮೀಸಲಾಗಿದ್ದರೂ, ೧೯೮೦ರ ಫ್ಯಾಷನ್‌ನಲ್ಲಿ ಪುರುಷರು ನಾಭಿಯನ್ನು ತೋರಿಸುವ ಅಂಗಿಯನ್ನು ಧರಿಸುವ ವಿಚಿತ್ರವರ್ತನೆ ಕಂಡುಬಂದಿತು. ಪಾಶ್ಚಿಮಾತ್ಯರು ೧೯೮೦ರವರೆಗೆ ಹೊಕ್ಕುಳನ್ನು ಪ್ರದರ್ಶಿಸುವ ಉಡುಪುಗಳಿಗೆ ಹೆಚ್ಚಿನ ನಿರ್ಬಂಧವನ್ನು ಹಾಕಿದ್ದರು. ಆದರೆ ಇದು ಭಾರತೀಯ ಮಹಿಳೆಯರ ಉಡುಗೆಯಲ್ಲಿ ಒಂದು ಫ್ಯಾಷನ್ ಆಗಿಯೇ ಹಿಂದಿನಿಂದಲೂ ಬೆಳೆದುಬಂದಿದೆ.[೩] ಭಾರತೀಯ ಮಹಿಳೆಯರು ಮತ್ತು ವಿಶೇಷವಾಗಿ ದಕ್ಷಿಣ ಭಾರತದ ಸ್ತ್ರೀಯರು ಸಾಂಪ್ರದಾಯಿಕವಾಗಿ ವಪೆ ಮತ್ತು ಹೊಕ್ಕುಳನ್ನು ತೋರಿಸುವಂತೆ ಸೀರೆಗಳನ್ನು ಉಡುತ್ತಾರೆ.[೪][೫] ಭಾರತೀಯ ಸಂಸ್ಕೃತಿಯಲ್ಲಿ, ಹೊಕ್ಕುಳ ಪ್ರದರ್ಶನವನ್ನು ನಿಷಿದ್ಧವೆಂದು ಪರಿಗಣಿಸಲಾಗಿಲ್ಲ ಮತ್ತು ವಾಸ್ತವವಾಗಿ ಅದನ್ನು ಹಿಂದಿನಿಂದಲೂ ಸ್ತ್ರೀಯ ಆಕರ್ಷಕ ಗುರುತೆಂದು ತಿಳಿಯಲಾಗುತ್ತಿದೆ.[೩] ಕುಳಿಬೀಳುವ ಹೊಕ್ಕುಳನ್ನು ಸ್ತ್ರೀಯೊಬ್ಬಳ, ವಿಶೇಷವಾಗಿ ದಕ್ಷಿಣ ಭಾರತದ ಮಹಿಳೆಯರಲ್ಲಿ, ಒಂದು ವಿಶೇಷ ಆಸ್ತಿಯೆಂದು ಮತ್ತು ಬೆಳೆಯುತ್ತಿರುವ ಬಾಲಿವುಡ್ ನಟಿಯ ಒಂದು ಪ್ರಮುಖ ವೈಶಿಷ್ಟ್ಯವೆಂದು ಪರಿಗಣಿಸಲಾಗುತ್ತದೆ. ಹೊಕ್ಕುಳ ಪ್ರದರ್ಶನಕ್ಕೆ ಅನುಮತಿಸುವ ಇತರ ಭಾರತೀಯ ಸಮುದಾಯಗಳೆಂದರೆ ರಾಜಸ್ಥಾನಿಗಳು ಮತ್ತು ಗುಜರಾತಿಗಳು, ಅವರ ಮಹಿಳೆಯರು ಸಾಂಪ್ರದಾಯಿಕ ಜಿಪ್ಸಿ ಲಂಗಗಳೊಂದಿಗೆ ಗಿಡ್ಡ ಚೋಳಿಗಳನ್ನು ಧರಿಸುವಾಗ ಹೊಕ್ಕುಳನ್ನು ಪ್ರದರ್ಶಿಸುತ್ತಾರೆ. ಆದರೆ ಈ ಮಹಿಳೆಯರು ತಲೆಯನ್ನು 'ಚಾದರ್'ನಿಂದ ಮುಚ್ಚುತ್ತಾರೆ ಮತ್ತು ಅಪರಿಚಿತರು ಮುಂದೆ ತಮ್ಮ ಮುಖಗಳನ್ನೂ ಮುಚ್ಚಿಕೊಳ್ಳುತ್ತಾರೆ. ಇದು ಭಾರತದಲ್ಲಿ ಹೊಕ್ಕುಳ-ಪ್ರದರ್ಶನವು ಜನನ ಮತ್ತು ಜೀವನದೊಂದಿಗೆ ಒಂದು ಸಾಂಕೇತಿಕ, ಹೆಚ್ಚುಕಡಿಮೆ ಆಧ್ಯಾತ್ಮಿಕ ಸಂಬಂಧವನ್ನು ಹೊಂದಿದೆ ಮತ್ತು ಪೋಷಣೆಯ ಪಾತ್ರದಲ್ಲಿ ಪ್ರಕೃತಿಯ ಕೇಂದ್ರತೆಯನ್ನು ಎತ್ತಿತೋರಿಸುವ ಉದ್ದೇಶವನ್ನು ಹೊಂದಿದೆಯೆಂಬ ನಂಬಿಕೆಯನ್ನು ಒಪ್ಪುವಂತೆ ಮಾಡುತ್ತದೆ.[೬] ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೊಕ್ಕುಳ ಪ್ರದರ್ಶನವನ್ನು ಸಮ್ಮತಿಸುವುದರೊಂದಿಗೆ, ಹೊಕ್ಕುಳು ಚುಚ್ಚಿಕೊಳ್ಳುವುದು ಯುವತಿಯರಲ್ಲಿ ಹೆಚ್ಚು ಸಾಮಾನ್ಯವಾಗುತ್ತಿದೆ. ಹೊಟ್ಟೆಯ/ಹೊಕ್ಕುಳ ಹಚ್ಚೆಗುರುತುಗಳನ್ನು ಪ್ರದರ್ಶಿಸಲೂ ನಾಭಿಯನ್ನು ತೋರಿಸುವ ಗಿಡ್ಡ ಉಡುಪುಗಳನ್ನು ಧರಿಸಲಾಗುತ್ತದೆ.

ಇವನ್ನೂ ಗಮನಿಸಿಸಂಪಾದಿಸಿ

 • ಹೊಟ್ಟೆಯ ಕೂದಲು
 • ಗ್ರಾನುಲೋಮ
 • ಹೊಕ್ಕುಳಿನ ಲೈಂಗಿಕ ಪ್ರಚೋದನೆ
 • ಹೊಕ್ಕುಳಿನ ಲಿಂಟ್
 • ಒಂಫಲೋಸ್(ನಾಭಿ)
 • ಒಫಂಲೋಸ್ಕೆಪ್ಸಿಸ್
 • ಹೊಕ್ಕುಳಿನ ಹರ್ನಿಯಾ
 • ಅಂಬಿಲಿಕೊಪ್ಲಾಸ್ಟಿ

ಉಲ್ಲೇಖಗಳುಸಂಪಾದಿಸಿ

 1. Ellis, Harold (2006). Clinical Anatomy: Applied Anatomy for Students and Junior Doctors. New York: Wiley. ISBN 1-4051-3804-1.[೧]
 2. ಬೇಸಿಕ್ ಹ್ಯೂಮನ್ ಅನಾಟಮಿ - ಒರಾಹಿಲಿ, ಮುಲ್ಲರ್, ಕಾರ್ಪೆಂಟರ್ ಆಂಡ್ ಸ್ವೆನ್ಸನ್ - ಚಾಪ್ಟರ್ 25: ಅಬ್ಡೋಮಿನಲ್ ವಾಲ್ಸ್ Archived 2011-09-20 at the Wayback Machine.. ಡಾರ್ಟ್‌ಮೌತ್ ಮೆಡಿಕಲ್ ಸ್ಕೂಲ್. 2010 ನವೆಂಬರ್‌ನಲ್ಲಿ ಮರುಸಂಪಾದಿಸಲಾಗಿದೆ.
 3. ೩.೦ ೩.೧ ಬ್ಯಾನರ್ಜಿ, ಮುಕುಲಿಕ ಮತ್ತು ಮಿಲ್ಲರ್, ಡೇನಿಯಲ್ (೨೦೦೩) ದಿ ಸಾರಿ . ಆಕ್ಸ್‌ಫರ್ಡ್; ನ್ಯೂಯಾರ್ಕ್: ಬರ್ಗ್ ISBN ೧೮೫೯೭೩೭೩೨೩
 4. ಅಲ್ಕಾಜಿ, ರೋಶನ್ (೧೯೮೩) ಏನ್ಶಿಯೆಂಟ್ ಇಂಡಿಯನ್ ಕಾಸ್ಟ್ಯೂಮ್ . ನವದೆಹಲಿ: ಆರ್ಟ್ ಹೆರಿಟೇಜ್
 5. ಘುರ್ಯೆ(೧೯೫೧) ಇಂಡಿಯನ್ ಕಾಸ್ಟ್ಯೂಮ್ . ಬಾಂಬೆ: ಪಾಪ್ಯುಲರ್ ಬುಕ್ ಡಿಪಾಟ್
 6. ಬೆಕ್, ಬ್ರೆಂಡಾ (೧೯೭೬) "ದಿ ಸಿಂಬೋಲಿಕ್ ಮರ್ಜರ್ ಆಫ್ ಬಾಡಿ, ಸ್ಪೇಸ್ ಆಂಡ್ ಕಾಸ್ಮಸ್ ಇನ್ ಹಿಂದ್ ತಮಿಳುನಾಡು" ಇನ್: ಕಾಂಟ್ರಿಬ್ಯೂಷನ್ಸ್ ಟು ಇಂಡಿಯನ್ ಸೋಷಿಯಾಲಜಿ ; ೧೦(೨): ೨೧೩-೪೩.
"https://kn.wikipedia.org/w/index.php?title=ನಾಭಿ&oldid=1056128" ಇಂದ ಪಡೆಯಲ್ಪಟ್ಟಿದೆ