ಸೀರೆ ಹೆಂಗಸರು ತೊಟ್ಟುಕೊಳ್ಳುವ, ಹೊಲಿಗೆ ಮಾಡದ, ಬಟ್ಟೆಯ ಒಂದು ವಿಧವಾದ ಉದ್ದನೆಯ ಪಟ್ಟೆ. ಇದು ಸಾಧಾರಣವಾಗಿ ೪ ಅಥಾವಾ ೯ ಮೀಟರ್ ಉದ್ದವಿರುತ್ತದೆ. . ಈ ವಸ್ತ್ರ ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ಬರ್ಮಾ ಮತ್ತು ಮಲೇಶಿಯಾ ದೇಶಗಳಲ್ಲಿ ಜನಪ್ರಿಯವಾಗಿದೆ. ಇದನ್ನು ಸಾಧಾರಾಣವಾಗಿ ಸೊಂಟಕ್ಕೆ ಸುತ್ತಿಕೊಂಡು, ಒಂದು ತುದಿಯನ್ನು ಹೆಗಲ ಮೇಲೆ ಬರುವಂತೆ ಹೊದೆಯಲಾಗುತ್ತದೆ. ಆದರೂ , ಇದನ್ನು ಉಡುವ ರೀತಿಗಳಲ್ಲಿ ವಿವಿಧ ದೇಶಗಳಲ್ಲಿ , ಪ್ರದೇಶಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಭಾರತದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಸರಿಸುಮಾರು ಏಕಕಾಲದಲ್ಲಿ ಬೆಳವಣಿಗೆಯಾಯಿತೆಂದು ನಂಬಲಾಗಿರುವ ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಹತ್ತು ಹನ್ನೆರಡು ವರ್ಷದ ಹೆಣ್ನಮಕ್ಕಳು ಹಿಂದೆ ಉಡುತ್ತಿದ್ದ ಚಿಕ್ಕ ಅಳತೆಯ ಸೀರೆಗೆ "ಕಿರಿಗೆ" ಎಂದು ಹೆಸರು.

ಸೀರೆಯ ವಿವಿಧ ಬಗೆಯ ಉಡುಗೆ
ಕೊಡವ ಶೈಲಿಯಲ್ಲಿ ಸೀರೆ ಉಟ್ಟಿರುವ ಕರ್ನಾಟಕದ ಹೆಂಗಸರು.

‘ಗಡಿ ಗಟ್ಟಿ ಇದ್ರ ನಾಡು, ದಡಿ ಗಟ್ಟಿ ಇದ್ರ ಸೀರೆ’... ಎಂಬ ಮಾತಿದೆ

ಮೈಸೂರ ಸಿಲ್ಕ್ ಸೀರೆ ಮೈಸೂರು ರೇಷ್ಮೆಗೆ, ತವರೂರು. ಅದಲ್ಲದೆ 'ಮೈಸೂರು ರೇಷ್ಮೆ ಸೀರೆ ವಿಶ್ವ ಪ್ರಸಿದ್ಧ'. ರಾಷ್ಟ್ರಮಟ್ಟದಲ್ಲಿ ಮಹಿಳೆಯರ ಮನಸ್ಸನ್ನು ಸೂರೆಗೊಂಡಿರುವ ವಿಶ್ವವಿಖ್ಯಾತ ರೇಷ್ಮೆ ಸೀರೆ, ಕರ್ನಾಟಕ ರೇಷ್ಮೆ ಕೈಗಾರಿಗೆ ನಿಗಮ(ಕೆ.ಎಸ್.ಐ.ಸಿ) ಯ ಹೆಮ್ಮೆಯ ಉತ್ಪಾದನೆಯಾಗಿದೆ. ಈಗ ಈ ಮನಮೋಹಕ ಸೀರೆಗಳಿಗೆ 'ವ್ಯಾಪಾರ ಸಾಮ್ಯ ಮುದ್ರೆ' (ಟ್ರೇಡ್ ಮಾರ್ಕ್)ನ್ನು ಶುದ್ಧ ರೇಷ್ಮೆಯ ಸಂಕೇತವೆಂದು ನಿರೂಪಿಸಲಾಗಿದೆ. 'ಮೈಸೂರು ಸಿಲ್ಕ್ ಸೀರೆ'ಯ ಗುಣಲಕ್ಷಣವೆಂದರೆ, ಶುದ್ಧ ರೇಷ್ಮೆ ಮತ್ತು ಶೇ.೧೦೦ % ರಷ್ಟು ಶುದ್ಧ ಚಿನ್ನದ ಜರಿಯ ಬಳಕೆ (ಶೇ.೬೫% ರಷ್ಟು ಬೆಳ್ಳಿ ಹಾಗೂ ಶೇ.೩೫% ರಷ್ಟುಚಿನ್ನವನ್ನು ಬಳಸಿ ತಯಾರಿಸಿರುವ ಬಂಗಾರದ ಎಳೆಗಳು)

ಮೈಸೂರರಸರ ಕೊಡುಗೆ

ಬದಲಾಯಿಸಿ

ಸನ್, ೧೯೧೨ ರಲ್ಲಿ ಮೈಸೂರಿನ ಮಹಾರಾಜರು, ಸ್ಥಾಪಿಸಿದ್ದ ರೇಷ್ಮೆ ಗಿರಣಿಯಲ್ಲಿ ತಯಾರಾಗುತ್ತಿದ್ದ ಸೀರೆಗಳಿವು. ಆಗ ಮಹಾರಾಜರು 'ಸ್ವಿಟ್ಸರ್ಲೆಂಡ್'ನಿಂದ ೩೨ ಯಂತ್ರಮಗ್ಗಗಳನ್ನು ಆಮದು ಮಾಡಿಕೊಂಡು ಆ ಗಿರಣಿಯನ್ನು ಆರಂಭಿಸಿದ್ದರು. ಸನ್, ೧೯೮೦ ರಲ್ಲಿ ಈ ಕಾರ್ಖಾನೆಯನ್ನು 'ಕೆ.ಎಸ್.ಐ.ಸಿ' ಯ ಆಡಳಿತದ ವಶಕ್ಕೆ ಒಪ್ಪಿಸಲಾಯಿತು. ಈಗ ಇಲ್ಲಿ ಸುಮಾರು ೧೫೯ ಮಗ್ಗಗಳಿವೆ. ಸರಕಿನ ದುರುಪಯೋಗವನ್ನು ತಡೆಯಲು ಇಲ್ಲಿ ತಯಾರಿಸಲಾಗುವ ಪ್ರತಿ ಸೀರೆಯ ಮೇಲೂ ಅದರ ಸಂಕೇತ ಸಂಖ್ಯೆ ಹಾಗೂ ಒಂದು ಸಾಂಕೇತಿಕ ಚಿತ್ರವಿರುತ್ತದೆ. ಮೈಸೂರು ರೆಷ್ಮೆ ಸೀರೆಗಳ ತಯಾರಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ 'ಕಸೂತಿ ಚಿತ್ರಿಕೆ'ಗಳನ್ನು 'ದಪ್ಪನೆಯ ನೇಯ್ಗೆಯ ಸೆರಗು', ಬಂಧಿನಿ ತಂತ್ರದ ಒಳ ಹೆಣಿಗೆಯ ಜೊತೆಗೆ 'ಲೈಲಾಕ್ ಹೂವಿನ ಬಣ್ಣ', 'ಕಾಫಿ ಕಂದು' ಹಾಗೂ 'ಆನೆಯ ಮೈಯಂಥಹ ಬೂದು ಬಣ್ಣ'ದ ಬಳಕೆ ಇತ್ಯದಿಗಳೊಂದಿಗೆ ಹಲವಾರು ವಿನೂತನ ಉತ್ಪಾದನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮೊಳಕಾಲ್ಮೂರು ಸೀರೆ

ಆರು ವಾರಿ ಸೀರೆ

ಎಂಟು ವಾರಿ ಸೀರೆ

ಗಜಗಾತ್ರದ ಸೀರೆ

ಮಣಭಾರದ ಸೀರೆ

ರತ್ನಖಚಿತವಾದ ಭರ್ಜರಿ ಸೀರೆ

ಇತಿಹಾಸ

ಬದಲಾಯಿಸಿ

ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಅಧಿಕಾರಿಗಳು ಇಂಗ್ಲೆಂಡ್ ರಾಣಿಗೆ ಬಾಂಗ್ಲಾದ ಢಾಕಾ ಮಸ್ಲಿನ್ ಬಟ್ಟೆಯನ್ನು ಬೆಂಕಿ ಪೊಟ್ಟಣದಲ್ಲಿ ಕಳುಹಿಸುತ್ತಿದ್ದರು ಎಂಬ ವಿಷಯ ಕ್ಕೆ ಯಾವ ಆಧಾರವೂ ಇಲ್ಲ. ಆ ಬಟ್ಟೆಗಳು ಅತ್ಯಂತ ನವಿರಾಗಿದ್ದದ್ದು ನಿಜ. ಹತ್ತಿಯಿಂದ ಮಾಡಿದ ಉಡಿಗೆತೊಡಿಗೆ ಸಾಮಗ್ರಿಗಳು ಯೂರೋಪಿಯನ್ ಸಮುದಾಯಕ್ಕೆ ಒಂದು ಸಂಭ್ರಮದ ವಸ್ತುಗಳಾಗಿದ್ದವು. ಉಣ್ಣೆ, ಮತ್ತು ಲಿನನ್ ನಾರಿಗ ಸಾಮಗ್ರಿಗಳಿಗೆ ಹೊಂದಿಕೊಂಡ ಅವರು ಹಾಗೆ ಪ್ರತಿಕ್ರಿಯಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಉತ್ತರ ಭಾರತ ವಿನ್ಯಾಸ:

ದಕ್ಷಿಣ ಭಾರತ ವಿನ್ಯಾಸ:

ಮಧ್ಯ ಭಾರತ ವಿನ್ಯಾಸ:

ಪುರ್ವ ಭಾರತ ವಿನ್ಯಾಸ:

ಪಶ್ಚಿಮ ಭಾರತ ವಿನ್ಯಾಸ:

ವಿದೇಶಿ ವಿನ್ಯಾಸ:

ಭಾರತ ರಾಜ್ಯಗಳ ಸೀರೆಗಳು :

ಪೋಚಂಪಲ್ಲಿ ಸೀರೆ ವೆಂಕಟಕಿರಿ ಸೀರೆ ಗಡ್ವಾಲ್ ಸೀರೆ ಗುಂಟೂರ ಸೀರೆ ನಾರಾಯಣ ಪೇಠ್ ಸೀರೆ ಮಂಗಲಮುರಿ ಸೀರೆ ಧರ್ಮಾವರಂ ಸೀರೆ : ಆಂಧ್ರ ಪ್ರದೇಶ ಅರುಣಾಚಲ ಪ್ರದೇಶ ಈರಿರೇಷ್ಮೆ ಸೀರೆ (ಕಾಡು ರೇಷ್ಮೆಯ ಸೀರೆ ):ಅಸ್ಸಾಮ್ ತುಸ್ಸರ್ ಸಿಲ್ಕ ಸೀರೆ:ಬಿಹಾರ್

():ಚತ್ತೀಸ್‍ಗಢ

():ಗೋವ

ತಾರಿನ್ ಜೋಯಿ ಬ್ರೋಕೇಡ್ಪ ,(ಪಟೋಲಾ ) ಟೋಲಾ ಸೀರೆ , ಬಾಂಧಣಿ ಸೀರೆ , ಭಂದೇಜ ಸೀರೆ :ಗುಜರಾತ್

():ಹರ್ಯಾಣಾ

():ಹಿಮಾಚಲ ಪ್ರದೇಶ

():ಜಮ್ಮು ಮತ್ತು ಕಾಶ್ಮೀರ

():ಜಾರ್ಖಂಡ್

ಮೈಸೂರ ಸಿಲ್ಕ್ ಸೀರೆ , ಇಳಕಲ್ ಸೀರೆ, ಮೋಳಕಾಲ್ಮುರ್ ಸಿಲ್ಕ್ ಸೀರೆ :ಕರ್ನಾಟಕ

ಬಕರಾಂಪುರಂ ಸೀರೆ : ಕೇರಳ

ಚಂದ್ರಗಿರಿ ಸೀರೆ , ಮಹೆಶ್ವರಿ ಸೀರೆ :ಮಧ್ಯ ಪ್ರದೇಶ

ಪೈಠಣಿ ಸೀರೆ , ನವ್ವಾರಿ ಸೀರೆ (ಒಂಬತ್ತು ವಾರಿ ಸೀರೆ) , ಮದ್ರಾಸಿ ಸೀರೆ (Madrasi): ಮಹಾರಾಷ್ಟ್ರ ಮಣಿಪುರ ಸೀರೆ :ಮಣಿಪುರ

():ಮೇಘಾಲಯ

():ಮಿಜೋರಮ್

():ನಾಗಾಲ್ಯಾಂಡ್

ಇಕ್ಕಟ್ ಸೀರೆ, ಸಾಮ್ಬಲ್ಪುರಿ ಸಿಲ್ಕ ಸೀರೆ, ಕೊತ್ಕಿ ಸೀರೆ: ಒಡಿಶಾ

():ಪಂಜಾಬ್

ರಾಜಸ್ಥಾನ ಸೀರೆ , ಕೊತಾ ದೊರಿಅ ಸೀರೆ :ರಾಜಸ್ಥಾನ

():ಸಿಕ್ಕಿಮ್

ಕಾಂಜೀವರಂ ಸೀರೆ, ಧರ್ಮಾವರಂ ಸೀರೆ, ಅರನಿ ಸೀರೆ, ಮಧುರೈ ಸೀರೆ, ಚಟ್ಟಿನಾಡು ಸೀರೆ, ಛಿನ್ನಲಪತ್ತಿ ಸೀರೆ, ಕೊಯಂಬತ್ತೋರ ಸೀರೆ :ತಮಿಳುನಾಡು

():ತ್ರಿಪುರ

():ಉತ್ತರಾಖಂಡ

ಬನಾರಸಿ ಸೀರೆ (ಬಫ್ಟಾ ಮತ್ತು ಅಮೃ ಶ್ಯಲಿ) , ಶಾಲು ಸೀರೆ, ಕಿಂಕಾಬ್ ಸೀರೆ : ಉತ್ತರ ಪ್ರದೇಶ

ಜಾಮ್ದಾನಿ’ ಎಂಬ ಹೆಸರಿನ ಕುಸುರಿ ಕಲೆ ಹಾಗೂ ಜರಿಯುಳ್ಳ ಮಸ್ಲಿನ್ ಸೀರೆ, ಬಿರ್ ಭೌಮ್ ಸೀರೆ, ಕಲ್ಕತ್ತಾ ಕಾಟನ್ ಸೀರೆ ಧಾನಿಖಾಲಿ ಹತ್ತಿ, ಬುಲುಛರಿ, ಫುಲಿಯ ಮತ್ತು ಸಮುದ್ರಗಡದ ವಿಶಿಷ್ಟ ಸೀರೆಗಳು ಢಾಕಾ ಜಾಮ್ದಾನಿ, ಢಾಕಾ ಕಾಟನ್, ಢಾಕಾ ಸಿಲ್ಕ್, ಐದು ಗ್ರಾಂ ಸೀರೆ, ಕೈಯಿಂದ ನೇಯ್ದ ಫೂಲಿಯಾ, ತಾನ್‌ಚೂಡಿ ಸಿಲ್ಕ್, ಬಾಪಾ ಬುಟ್ಟಿ, ಓಂಕೈ ಕಾಟನ್, ಬನಾರಸಿ, ಟಾಂಗೈ ಬಾಲುಚೂಡಿ, ಮಲ್‌ಮಲೈ ಹೀಗೆ ಹಲವು ಬಗೆಯ ಸೀರೆಗಳು : ಪಶ್ಚಿಮ ಬಂಗಾಳಗುಣಮಟ್ಟದ

ಬದಲಾಯಿಸಿ

ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಿನ್ಯಾಸಹ್ದ ಹತ್ತಿ, ರೇಷ್ಮೆ, ಹಾಗೂ ನಾರಿನ ಎಳೆಗಳಿದ ನೇಯ್ದ ಸೀರೆಗಳನ್ನು ತಯಾರಿಸುತ್ತಾರೆ.

ಸೀರೆ ಉಡುವ ವಿದಾನ:

ಸೆರಗು :

ನೀರಿಗೆ:

ರವಿಕೆ:

ವಸ್ತ್ರ ಜಗತ್ತಿನ ಚಕ್ರವರ್ತಿಯಾದ ರೇಷ್ಮೆಯನ್ನು ಜತನವಾಗಿರಿಸಲು ಕೆಲವು ಸುರಕ್ಷಿತ ಕ್ರಮಗಳಿವೆ

ಸೀರೆ ಬಣ್ಣಗುಂದುವುದು ಯಾವಾಗ ?

1. ಪ್ರಿಂಟೆಡ್ ಸೀರೆಯನ್ನು ಬಿಸಿ ನೀರಿನಲ್ಲಿ ತೋಯಿಸಿದಾಗ.

2. ಬಹಳ ದೀರ್ಘ ಕಾಲ ನೀರಿನಲ್ಲಿ ನೆನೆಯಲು ಬಿಟ್ಟಲ್ಲಿ, ಅಥವಾ ಸುಡು ಬಿಸಿಲಿನಲ್ಲಿ ಬಹು ಕಾಲ ಒಣಗಲು ಬಿಟ್ಟಾಗ, ಅಥವಾ ಸೀರೆಯಲ್ಲಿ ಹೆಚ್ಚು ನೀರನ್ನು ಉಳಿಸಿದ್ದಲ್ಲಿ.

3. ಕೀಳು ಮಟ್ಟದ ಸಾಬೂನನ್ನು ಬಳಸಿದಾಗ ಅಥವಾ ಸೀರೆಯ ಮೇಲೆ ಒರಟು ಸಾಬೂನಿನಿಂದ ತಿಕ್ಕಿದಾಗ.

4. ಬಿಸಿಲಲ್ಲಿ ಒಣಗಿಸಿದಲ್ಲಿ ಅಥವಾ ವಿಪರೀತ ಬಿಸಿಯಾಗಿರುವ ಇಸ್ತ್ರಿ ಪೆಟ್ಟಿಗೆ ಬಳಸಿ ಇಸ್ತ್ರಿ ಮಾಡಿದಲ್ಲಿ.

5. ಎಣ್ಣೆ, ಸೆಂಟ್, ಟೀ ಪಾನೀಯಗಳು, ಬೆವರು ಇತ್ಯಾದಿ ಸೀರೆಗೆ ಅಂಟಿಕೊಂಡಲ್ಲಿ.

6. ಯಾವುದ್ಯಾವುದೋ ಸರಿಯಿಲ್ಲದ ಡ್ರೈಕ್ಲೀನರ್‌ಗೆ ಸೀರೆ ಕೊಟ್ಟಲ್ಲಿ..

ಜರಿ ಯಾವಾಗ ಕಪ್ಪಾಗುವುದು ?

1. ಚಿನ್ನ ಅಥವಾ ಬೆಳ್ಳಿಯ ಜರಿಯುಳ್ಳ ಸೀರೆಯನ್ನು ಬಹಳ ಕಾಲ ಪೆಟ್ಟಿಗೆಯಲ್ಲಿ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿದಲ್ಲಿ ಅಥವಾ ನ್ಯಾಫ್ತಲೀನ್ ಗುಳಿಗಳನ್ನು ಹಾಕಿ ದೀರ್ಘ ಕಾಲ ಇಟ್ಟಲ್ಲಿ .

2. ಎಣ್ಣೆ, ಸೆಂಟ್, ಟೀ ಪಾನೀಯಗಳು ಬೆವರು ಇತ್ಯಾದಿ ದ್ರವಗಳು ಜರಿಗೆ ಅಂಟಿದಲ್ಲಿ .

3. ಜರಿ ಮೇಲ್ಭಾಗದಲ್ಲಿ ನೇರವಾಗಿ ಸಾಬೂನಿನಿಂದ ಉಜ್ಜಿದಲ್ಲಿ .

4. ಬಿಸಿಯಾದ ಇಸ್ತ್ರಿ ಪೆಟ್ಟಿಗೆಯನ್ನು ಜರಿ ಮೇಲ್ಭಾಗದಲ್ಲಿ ಉಜ್ಜಿದಲ್ಲಿ .

ರಾಜ್ಯದ ಸಾಂಸ್ಕೃತಿಕ ಆಸ್ತಿಗೆ ಪೇಟೆಂಟ್‌

ಬದಲಾಯಿಸಿ

ಕರ್ನಾಟಕ ರಾಜ್ಯ ರೇಷ್ಮೆ ಉದ್ಯಮ ನಿಗಮ(ಕೆಎಸ್‌ಐಸಿ) ರಾಜ್ಯದ ಸಾಂಸ್ಕೃತಿಕ ಆಸ್ತಿಯಾಗಿರುವ ಮೈಸೂರು ಸಿಲ್ಕ್‌ನ ಕೆಎಸ್‌ಐಸಿಗೆ ಸರಕಾರ ಪುನರುಜ್ಜೀವನ ನೀಡಲು ಮುಂದಾಗಿದೆ, ಮೈಸೂರು ಸಿಲ್ಕ್‌ ಮತ್ತೆ ಹೊಸ ಚೈತನ್ಯದೊಂದಿಗೆ ಮಾರುಕಟ್ಟೆಯಲ್ಲಿ ತನ್ನ ವೈಶಿಷ್ಟ್ಯತೆ ಉಳಿಸಿಕೊಂಡು ಮಿಂಚುತ್ತಿದೆ. ಮೈಸೂರು ಸಿಲ್ಕ್‌ ಸೀರೆಗಳ ಪೇಟೆಂಟ್‌ಗಾಗಿ ಕರ್ನಾಟಕ ರಾಜ್ಯರೇಷ್ಮೆ ಅಭಿವೃದ್ಧಿ ಮಂಡಲಿ(ಕೆಎಸ್‌ಐಸಿ) ಪ್ರಯತ್ನಿಸುತ್ತಿದೆ.

ಮೈಸೂರು ಸಿಲ್ಕ್‌ ಉತ್ಪನ್ನ ಅಧಿಕೃತ ಷೋರೂಂಗಳಲ್ಲಿ ಮಾತ್ರ ಲಭ್ಯ. ನೀರೆಯರ ನೆಚ್ಚಿನ ಮೈಸೂರು ಸಿಲ್ಕ್ ಸೀರೆಯನ್ನು ಈಗ ಅಂತರ್ಜಾಲದ ಮುಖಾಂತರವೂ ಖರೀದಿಸಬಹುದು.

ಸಿಲ್ಕ್ ಸೀರೆ ಖರೀದಿ

ಬದಲಾಯಿಸಿ

ಅಂದಚೆಂದದ ಮೈಸೂರು ಸಿಲ್ಕ್ ಸೀರೆ ಖರೀದಿಸುವ ಮುನ್ನ ಸಿಲ್ಕ್ ಸೀರೆ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಗ್ರಾಹಕರೇ ಈಗ ಜರಿ ಅನಲೈಸಿಂಗ್ ಯಂತ್ರ ಮೂಲಕ ಪರೀಕ್ಷೆ ಮಾಡಬಹುದು.

ನೇಕಾರರ ಸೇವಾ ಕೇಂದ್ರಗಳಿಂದ ಸಂಗ್ರಹಿಸಿದ ಬಳಕೆಗೆ ಸಿದ್ಧವಿರುವ ಪ್ರಿಂಟ್ ಹಾಗೂ ಕೈಮಗ್ಗದ ವಿನ್ಯಾಸಗಳ ಸಂಗ್ರಹ[ಶಾಶ್ವತವಾಗಿ ಮಡಿದ ಕೊಂಡಿ]

ಕೈಮಗ್ಗದ ಸೀರೆ: ಕೈಮಗ್ಗದ ಸೀರೆಯನ್ನು ಹೆಮ್ಮೆಯಿಂದ ಧರಿಸಿ

ರತ್ನಖಚಿತವಾದ ಭರ್ಜರಿ ಸೀರೆ

ಬದಲಾಯಿಸಿ

ನಿರಾಭರಣ ಸುಂದರಿಯರಿಗೆ ಮಾತ್ರ ಸಲ್ಲುವ ಆ ಸೀರೆಯನ್ನು ಚಿನ್ನ, ವಜ್ರ,ಮುತ್ತು ರತ್ನ ಹವಳ ಸೇರಿಸಿ ನೇಯ್ದಿದ್ದಾರೆ ಕುಶಲಕರ್ಮಿ ತಮಿಳು ನೇಕಾರರು. ಆ ಸೀರೆಯ ಮನಮೋಹಕ ಪಲ್ಲು ಒಳಗೆ ರಾಜಾ ರವಿವರ್ಮ ರಚಿಸಿದ ತೈಲಚಿತ್ರದ ಕಲೆ ಒಪ್ಪವಾಗಿ ಅರಳಿದೆ. (೪೦ಲಕ್ಷ ಇಂಡಿಯನ್ ಡಾಲರ್ಸ್) ಸೀರೆಯನ್ನು ಹರವಿ ನಿಮಗೆ ತೋರಿಸ್ತಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿರುವ ಈಪಾಟಿ ಭಾರೀ ಸೀರೆ, ಗಿನ್ನಿಸ್ ದಾಖಲೆ ಪುಸ್ತಕ ಸೇರುವ ಛಾನ್ಸೂ ಇದೆಯಂತೆ. ೩೦ನೇಕಾರರು ಏಳು ತಿಂಗಳು ಕಾಲ ಏಕಪ್ರಕಾರವಾಗಿ ಕುಸುರಿ ಕೆಲಸ ಮಾಡಿ ತಯಾರಿಸಿದ ಈ ಸೀರೆ ಬರೋಬ್ಬರಿ ಎಂಟು ಕೆಜಿ ಭಾರ ಇದೆ.

ಖಣ (ರವಿಕೆಯ ಬಟ್ಟೆ)

ಬದಲಾಯಿಸಿ

ಉತ್ತರ ಕರ್ನಾಟಕದ ಗುಳೇದಗುಡ್ಡದ ಖಣ, ಚಂದ್ರಕಾಳಿ ಹಾಗೂ ರೇಶ್ಮೆ ಸೀರೆಗಳು ಬಹಳ ಪ್ರಸಿದ್ಧ. ಕುಪ್ಪುಸದ (ರವಿಕೆ) ಬಟ್ಟೆಯಲ್ಲಿ ಕಡುನೀಲಿ (ಇಂಡಿಗೋ) ಬಳಕೆಗೆ ಆದ್ಯತೆ.

ಚಿತ್ರ ಗ್ಯಾಲರಿ

ಬದಲಾಯಿಸಿ

ಇತಿಹಾಸ ಚಿತ್ರಗಳು

ಬದಲಾಯಿಸಿ

ಸೀರೆ ಬಟ್ಟೆ

ಬದಲಾಯಿಸಿ
"https://kn.wikipedia.org/w/index.php?title=ಸೀರೆ&oldid=1121829" ಇಂದ ಪಡೆಯಲ್ಪಟ್ಟಿದೆ