ಮಾವು
ಮಾವು | |
---|---|
![]() | |
ಮಾವಿನಮರ ಮತ್ತು ಕಾಯಿ | |
Egg fossil classification | |
Kingdom: | plantae
|
Phylum: | |
Class: | |
Order: | |
Family: | |
Genus: | ಮ್ಯಾಗ್ನಿಫೆರ |
ತಳಿಗಳು | |
About 35 species, including: |

ಮಾವು, ಉತ್ತರ ಆಮ್ರಾ(ಮ್ಯಾಂಗಿಫೆರ ಇಂಡಿಕ)ಉಷ್ಣವಲಯದಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಕಂಡು ಬರುವ ಮರ. ಇದರ ದಾರುವಿಗಿಂತ ಹಣ್ಣೇ ಪ್ರಸಿದ್ಢ. ಇದರ '೩೦'ಕ್ಕಿಂತಲೂ ಹೆಚ್ಚು ತಳಿಗಳು ಪ್ರಚಲಿತವಿದೆ. ಇದು ಸುಮಾರು ೪೦೦೦ ವರ್ಷಗಳಿಂದಲೂ ಭಾರತದ ವ್ಯವಸಾಯ ದಲ್ಲಿದ್ದು, ಸುಮಾರು ೧೭ ಮತ್ತು ೧೮ನೇ ಶತಮಾನದಲ್ಲಿ ಯುರೋಪ್ನ ಪ್ರವಾಸಿಗರು ಇದನ್ನು ಪಶ್ಚಿಮದ ಉಷ್ಣವಲಯ ದೇಶಗಳಲ್ಲಿ ಪ್ರಸರಿಸಿದರು.
ಸಸ್ಯಶಾಸ್ತ್ರೀಯ ವರ್ಗೀಕರಣಸಂಪಾದಿಸಿ
ಮಾವು [[ಅನಕಾರ್ಡಿಯಾಸಿ]]ಕುಟುಂಬಕ್ಕೆ ಸೇರಿದ್ದು, ಇದರ ಸಸ್ಯಕುಲ (Gen|ಮ್ಯಾಂಗಿಫೆರ\us)[[ಮ್ಯಾಂಗಿಫೆರಾ]]ಆಗಿರುತ್ತದೆ. ಭಾರತದಲ್ಲಿ ವ್ಯಾಪಕವಾಗಿರುವ ತಳಿ ಸಸ್ಯನಾಮ 'ಮ್ಯಾಂಗಿಫೆರ ಇಂಡಿಕ' ಆಗಿದೆ.
ಸಸ್ಯ/ಗುಣ/ಲಕ್ಷಣಗಳುಸಂಪಾದಿಸಿ
ಮಾವು ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣಮರ. ಹಚ್ಚ ಹಸಿರಿನ ದಟ್ಟವಾದ ಎಲೆಗಳು ಇದ್ದು, ಇದು ತೇವಾಂಶವಿರುವ ಮಿಶ್ರಪರ್ಣಪಾತಿ (Mixed Deciduous) ಹಾಗೂ ಅರೆ ನಿತ್ಯಹರಿದ್ವರ್ಣ(Semi evergreen)ಕಾಡುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇಂತಹ ಕಾಡುಗಳಲ್ಲಿ ಬೆಳೆಯುವ ಮಾವು ಎತ್ತರವಾಗಿ ಸುಮಾರು ೬೦ ಅಡಿಗಳವರೆಗೂ ಬೆಳೆಯುತ್ತದೆ. ಇದರ ದಾರುವು ಮೃದುವಾಗಿದ್ದು ಮರಗೆಲಸಕ್ಕೆ ಸುಲಭವಾಗಿರುತ್ತದೆಯಾದರೂ ಬಾಳಿಕೆಯುತವಲ್ಲ. ಇದನ್ನು ಪದರ ಹಲಗೆ (plywood)ತಯಾರಿಕೆಯಲ್ಲಿ, ಕೆಲವು ತಾತ್ಕಾಲಿಕ ಉಪಯೋಗದ ಕೆಲಸಗಳಿಗೆ ಹಲಗೆಗಳಾಗಿ ಉಪಯೋಗಿಸಬಹುದು. ಕಸಿ ಮಾಡಲ್ಪಟ್ಟ ಅನೇಕ ತಳಿಗಳು ಕೇವಲ ರುಚಿಕರ ಹಣ್ಣಿಗಾಗಿ ಬೆಳೆಸಲ್ಪಡುತ್ತವೆ.
ಉಪಯೋಗಗಳು== ಮಾವಿನ ಹಣ್ಣು ಅತ್ಯಂತ ರುಚಿಕರವಾಗಿದ್ದು, ಪ್ರಪಂಚದಾದ್ಯಂತ ಬೇಡಿಕೆಯಲ್ಲಿದೆ. ಮಾವಿನ ಹಣ್ಣಿನ ಅನೇಕ ತಳಿಗಳಿದ್ದು ಪ್ರತಿ ವರ್ಷವೂ ಹೊಸತಾದ ತಳಿಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಇದರಲ್ಲಿ ಹೆಚ್ಚಿನವುಗಳು ತಿನ್ನಲು ಯೋಗ್ಯವಾದವುಗಳಾಗಿದ್ದು, ಕೆಲವು ಪಾನೀಯ ತಯಾರಿಕೆಗೆ ಉಪಯುಕ್ತ. ಕಾಡು ಮಾವಿನ ಜಾತಿಗಳಲ್ಲಿ ಅಪ್ಪೆ ಮತ್ತು ಕೆಲವು ಉಪ್ಪಿನಕಾಯಿ ತಯಾರಿಕೆಗೆ ಬಳಸಲ್ಪಡುತ್ತಿದೆ.
ಮಾವಿನಹಣ್ಣಿನ ಸಾರಸಂಪಾದಿಸಿ
- ಮಾವಿನ ಹಣ್ಣು , ಹಣ್ಣುಗಳ ರಾಜ ಎಂದು ಪರಿಗಣಿಸಲ್ಪಟ್ಟಿದೆ.
- ಮಾವಿನ ಹಣ್ಣಿನ ಆಲ್ಫಾನ್ಸೋ ಜಾತಿಯ ೧೦೦ ಗ್ರಾಂ ಹಣ್ಣಿನಲ್ಲಿ ಇರುವ (ಅಂದಾಜು) ಸಾರ ;
- ನೀರು -೮೧.೬ ಗ್ರಾಂ.
- ಪ್ರೋಟೀನ್ ----೦.೯ಗ್ರಾಂ.
- ಕೊಬ್ಬು -----೦.೪ ಗ್ರಾಂ.
- ಕಾರ್ಬೋಹೈದ್ರೇಟ್ (ಸಕ್ಕರೆ) -೧೬.೩ಗ್ರಾಂ
- ನಾರು - ೦.೪ ಗ್ರಾಂ.
- ಸುಣ್ಣ -೦.೪೦ ಮಿ ಗ್ರಾಂ.
- ರಂಜಕ - ೧೬.೦ ಮಿ ಗ್ರಾಂ.
- ಪೊಟ್ಯಾಸಿಯಂ -೨೦೦೦.೦ಮಿ ಗ್ರಾಂ.
- ಸೋಡಿಯಂ -೯.೦ ಮಿಗ್ರಾಂ.
- ವಿಟಮಿನ್ (ಅನ್ನಾಂಗ) ಎ - ೨೦,೦೦೦ ಐ.ಯು.
- ವಿಟಮಿನ್ (ಅನ್ನಾಂಗ) ಬಿ ೧ - ೦.೦೮ಮಿ ಗ್ರಾಂ.
- ವಿಟಮಿನ್ (ಅನ್ನಾಂಗ)ಬಿ ೨ -೦.೦೯ ಮಿಗ್ರಾಂ
- ವಿಟಮಿನ್ (ಅನ್ನಾಂಗ) ಸಿ -- ೧೨೫.೦ ಮಿ ಗ್ರಾಂ.
- ನಿಯಾಚಿನ್ -- ೪.೧ ಮಿ ಗ್ರಾಂ.
- ಕ್ಯಾಲರೀಗಳು ---೫೦
- ವಿಟಮಿನ್'ಎ' ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳಲಾಗಿದೆ. ತೊಳೆಯದ, ಅತಿ ಗಳಿತ(ಕೊಳೆ ಆರಂಭದ) ಹಣ್ಣು, ಅರ್ಧ ಮಾಗಿದ ಹಣ್ಣು ಅತಿಸಾರಕ್ಕೆ ಕಾರಣವಾಗಬಹುದು. ಮಾಗಿದ ಹಣ್ಣು ಆರೋಗ್ಯಕ್ಕೆ ಒಳ್ಳೆಯದು.(ಡಾ.ಪಿ.ಲಕ್ಷ್ಮಿ ೧೯೬೦ ರ ಲೇಖನ)
ಕರ್ನಾಟಕದಲ್ಲಿ ಮಾವಿನ ಹಣ್ಣುಸಂಪಾದಿಸಿ
- ಮಾವಿನ ಹಣ್ಣು ಒಂದು ವರ್ಷ ಉತ್ತಮ ಬೆಳೆ ಬಂದರೆ ಮಾರನೇ ವರ್ಷ ಕಡಿಮೆ ಬೆಳೆ ಬರುವುದು. ಆದರೆ ಕರ್ನಾಟಕದಲ್ಲಿ ೨೦೧೧ ರಲ್ಲಿ ಉತ್ತಮ ಬೆಳೆ ಬಂದರೆ ೨೦೧೨ ಮತ್ತು ೨೦೧೩ರಲ್ಲಿ ಬೆಳೆ ಕಡಿಮೆ ಯಾಗಿದೆ. ೨೦೦೯ ರಲ್ಲಿ ಸುಮಾರು ೮ ಲಕ್ಷ ಟನ್ ಬೆಳೆ ಬಂದರೆ ೨೦೧೧-೧೨ ಮತ್ತು ೨೦೧೨-೧೩ ರಲ್ಲಿ ಕೇವಲ ಅಂದಾಜು ೩ ಲಕ್ಷ ಟನ್ ಮಾವಿನ ಹಣ್ಣಿನ ಬೆಳೆಯಾಗಿದೆ.
- ಕರ್ನಾಟಕದ ಮಾವಿನ ಹಣ್ಣುಗಳು ಪುಣೆಗೆ ಹೋಗಿ ಅಲ್ಲಿಂದ ವಿದೇಶಗಳಿಗೆ ರಫ್ತಾಗುತ್ತವೆ. ಕರ್ನಾಟಕದ ಆಲಫಾನ್ಸೋ ಹಣ್ಣುಗಳು ಮಹಾರಾಷ್ಟ್ರ ಸೇರಿ ಅಲ್ಲಿಂದ ರತ್ನಗಿರಿ (ಬ್ರ್ಯಾಂಡ್ ನೇಮ್) ಹೆಸರಿನಲ್ಲಿ ಹೊರದೇಶಕ್ಕೆ ಹೋಗುತ್ತವೆ. ಆದ್ದರಿಂದ ಕರ್ನಾಟಕದಿಂದ ಎಷ್ಟು ರಫ್ತಾಗುವುದೆನ್ನುವ ಲೆಕ್ಕ ಸಿಗುವುದಿಲ್ಲ.ಮಹಾರಾಷ್ಟ್ರದಲ್ಲಿ ಬೆಳೆಯುವ ರತ್ನಗಿರಿ ಹಣ್ಣಿಗಿಂತ ಕರ್ನಾಟಕದ ಆಲ್ಫಾನ್ಸೋ ಹೆಚ್ಚು ರುಚಿಯುಳ್ಳದ್ದು ಆದರೆ ಅದರ ಹೆಸರು ವಿದೇಶದಲ್ಲಿ ಇಲ್ಲ.
- ಕಾರಣ ಅದು ಮಹಾರಾಷ್ಟ್ರದ ರತ್ನಗಿರಿ ಹೆಸರಿನಲ್ಲಿ ಮಾರಾಟವಾಗುವುದು ಮತ್ತು ರಫ್ತಾಗುವುದು. ಈಗ ಕರ್ನಾಟಕದಲ್ಲಿ ಮಾವಿನ ಹಣ್ಣಿನ ರಕ್ಷಣೆಗಾಗಿ ತಂಪು ಉಗ್ರಾಣಗಳು ತಯಾರಾಗುತ್ತಿವೆ. ಅದಾದ ನಂತರ ರಫ್ತಿಗೂ ಅನುಕೂಲವಾಗಿ ಉತ್ತಮ ಬೆಲೆ ರೈತರಿಗೆ ಸಿಗಬಹುದು.
ಮಾವಿನ ಬೆಳೆ ಮತ್ತು ನಿರ್ಯಾತಸಂಪಾದಿಸಿ
- ಭಾರತದಿಂದ ವಾರ್ಷಿಕ ರಪ್ತಾಗುವ ಮಾವಿನ ಹಣ್ಣಿನ ಪ್ರಮಾಣ ಸುಮಾರು ೬೦ಸಾವಿರ (60,000- 2013-2014) ಅದರಲ್ಲಿ ಸುಮಾರು 3500 ಟನ್ ಯೂರೋಪಿಗೆ ಅದರಲ್ಲಿ ಬ್ರಿಟನ್ನಿಗೇ 3000ಟನ್ ರಫ್ತಾದರೆ ಉಳಿದದ್ದು ಅರಬ್ ದೇಶಗಳಿಗೆ ಅಥವಾ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುತ್ತದೆ.(೨೫ ವರ್ಷಗಳಿಂದ ಮಾವಿನ ಹಣ್ಣಿನ ರಸ ರಪ್ತು ಮಾಡುವ ಎಕ್ಸೆಲ್ ಕಂಪನಿಯ ಮಾಲಿಕ ಪ್ರಕಾಶ ಕಾನೂರ್ -ಪತ್ರಿಕಾ ಹೇಳಿಕೆ ವರದಿ ಪ್ರಜಾವಾಣಿ ೫-೫-೨೦೧೪)
- ಭಾರತ ಮಾವು ಬೆಳೆಯಲ್ಲಿ ಜಗತ್ತಿನ ಮೊದಲ ಸ್ಥಾನ ಹೊಂದಿದೆ.ಜಗತ್ತಿನಲ್ಲಿ ಸುಮಾರು 1,300(೧೩೦೦) ತಳಿಗಳಿವೆ ಅವುಗಳಲ್ಲಿ ಬಾರತದಲ್ಲಿ ಸುಮಾರು ಸಾವಿರ ತಳಿಗಳ ಮಾವು ಬೆಳೆಯುತ್ತಿದೆ.ನಮ್ಮ ದೇಶದಲ್ಲಿ ಸುಮಾರು 15.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, 95 ಲಕ್ಷ ಮೆಟ್ರಿಕ್ ಟನ್ ಇಳುವರಿ ಪಡೆಯಲಾಗುತ್ತಿದೆ.ಆಂಧ್ರಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ ಒಟ್ಟು ಮಾವು ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಬೆಳೆಯುವುದು. ಅದರಲ್ಲಿ ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶ ದೇಶದ ಮಾವು ಉತ್ಪಾದನೆಯಲ್ಲಿ ಅರ್ಧದಷ್ಟನ್ನು ಪೂರೈಸುತ್ತವೆ.ಕರ್ನಾಟಕದಲ್ಲಿ ಮಾವು ಸುಮಾರು 1.30 ಲಕ್ಷ ಹೆಕ್ಟೇರ್ ಪ್ರದೇಶ ಆವರಿಸಿದ್ದು, 14 ಲಕ್ಷ ಟನ್ ಉತ್ಪಾದನೆ ಮಾಡಲಾಗುತ್ತಿದೆ (2013-2014).
- ಕೋಲಾರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದ್ದು, 40,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವುದು.ಕೋಲಾರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದ್ದು, 40,000 ಹೆಕ್ಟೇರ್ ಪ್ರದೇಶ ಮಾವಿಗೆ ಮೀಸಲಾಗಿದೆ. ರಾಮನಗರದಲ್ಲಿ 20,000 ಹೆಕ್ಟೇರ್, ಉಳಿದಂತೆ ಧಾರವಾಡ, ಹಾವೇರಿ, ಬೆಳಗಾವಿ ಶಿವಮೊಗ್ಗ ಚಿಕ್ಕಬಳ್ಳಾಪುರ, ತುಮಕೂರು, ಧಾರವಾಡ, ಗದಗ, ಬೆಳಗಾವಿ, ಕೊಡಗು.ಮೊದಲಾದ ಜಿಲ್ಲೆಗಳಲ್ಲೂ ಬೆಳೆಯುವುದು.
- ರಾಜ್ಯದ ತಳಿ:ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ. ರಫ್ತಾಗುವ ಮಾವು: ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಮಲ್ಗೋವಾ.ಸುಮಾರು 100 ಮಾವಿನ ತಳಿಗಳಿರುವ ದೇಶದ ಪುಟ್ಟ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 12 ತಳಿಯ ಮಾವನ್ನು ಬೆಳೆಯಲಾಗುತ್ತಿದೆ. ರಾಜಗಿರಿ, ರಸಪುರಿ, ಮಲಗೋವಾ, ಬಾದಾಮಿ, ಬೇನಿಷಾ, ಮಲ್ಲಿಕಾ, ನೀಲಂ, ತೋತಾಪುರಿ, ಕುದೂಸ್, ಕಾಲಾಪಾಡ್, ಆಮ್ಲೆಟ್, ನಾಟಿ ತಳಿಗಳ ವಹಿವಾಟು ನಡೆಯುತ್ತಿದೆ.ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ, ನವದೆಹಲಿ, ಪಂಜಾಬ್, ಹರಿಯಾಣ ರಾಜ್ಯಗಳಿಗೆ ಈ ತಾಲ್ಲೂಕಿನ ಮಾವು ರವಾನೆಯಾಗುತ್ತದೆ. ಕೊಯ್ಲು ಅವಧಿ: ಏಪ್ರಿಲ್– ಜೂನ್.
- ಭಾರತ 2010–11ರಲ್ಲಿ Rs.164 ಕೋಟಿ, 2012–13ರಲ್ಲಿ Rs.267 ಕೋಟಿಯ ಮಾವು ರಫ್ತು ಮಾಡಿದೆ. ಭಾರತದ ಮಾವಿನ ದೊಡ್ಡ ಗ್ರಾಹಕ ರಾಷ್ಟ್ರ ಅರಬ್ ಸಂಯುಕ್ತ ಒಕ್ಕೂಟ.
- 2012–13ರ ಹಣಕಾಸು ವರ್ಷದಲ್ಲಿ 46,500 ಟನ್ ಮಾವಿನ ಹಣ್ಣು ರಫ್ತು ಮಾಡಲಾಗಿತ್ತು. ಗುಣಮಟ್ಟ ಕಾಪಾಡುವುದು ಕಷ್ಟವಾಗಿ ರಪ್ತು ಪ್ಮಾಣ ಕಡಿಮೆಯಾಗುತ್ತಿದೆ.(ಕೃಷಿ ಮತ್ತು ಸಂಸ್ಕರಿಸಿದ ಆಹಾರ ಪದಾರ್ಧಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ವರದಿ)೨
- 2014-2015 ಮತ್ತು ನಂತರ ಕರ್ನಾಟಕದಿಂದ 500 ಟನ್ ಮಾವಿನ ಹಣ್ಣು ರಫ್ತು ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ರಾಜ್ಯದ ಮಾವು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ (2014) ಕೆ.ಎಂ.ಪರಶಿವಮೂರ್ತಿ ದಿ.೨೨-೧೨-೨೦೧೪ ರಂದು ತಿಳಿಸಿದ್ದಾರೆ. ಆದರೆ ಯೂರೋಪ ರಾಷ್ಟ್ರಗಳು ಬಿಸಿನೀರಿನಲ್ಲಿ ಸಂಸ್ಕರಿಸಿದ ಮಾವನ ಹಣ್ಣನ್ನು ಬಯಸುವುದರಿಂದ ರಪ್ತುಮಾಡುವ ಮಾವಿನ ಹಣ್ಣುಗಳನ್ನು 45 ಡಿಗ್ರಿ ಸೆಲ್ಸಿಯಸ್ ಬಿಸಿನೀರಿನಲ್ಲಿ ಅದ್ದಿ ಸಂಸ್ಕರಿಸಬೇಕು.ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಪ್ತು ಪ್ರಾಧಿಕಾರ(ಅಪೆಡಾ) ಈ ರೀತಿ ಸಂಸ್ಕರಿಸಲು ಸೂಚಿಸಿದೆ. ಅದಕ್ಕಾಗಿ ಬಿಸಿನೀರಿನ ಸಂಸ್ಕರಣಾಕೇಂದ್ರಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ.(ಪ್ರಜಾವಾಣಿ/೨೩-೧೨-೨೦೧೪)
ವಿಶಿಷ್ಟ ಮಾವಿನ ಭಾರತೀಯ ತಳಿಸಂಪಾದಿಸಿ
- ಗುಜರಾತ್ನಲ್ಲಿ 2 ಕಿಲೋ ತೂಕದ ಮಾವಿನ ಹಣ್ಣಿನ ತಳಿ ಇದೆ.
(ವಿಜಯ ಕರ್ನಾಟಕ/ಏಜೆನ್ಸೀಸ್ | Jun 6, 2014) ಇಂಥ ವಿಶಿಷ್ಟ, ದೈತ್ಯ ಮಾವಿನ ಹಣ್ಣುಗಳು ವಡೋದರ ಜಿಲ್ಲೆಯ ನರ್ಮದಾ ನದಿಯ ತಟದಲ್ಲಿರುವ ಶಿನೊರ್ ಎನ್ನುವ ಗ್ರಾಮದಲ್ಲಿ ಬೆಳೆದಿದೆ. ಇಲ್ಲಿಯ ಕೃಷಿಕ ಇಕ್ಬಾಲ್ ಖೋಸ್ಖರ್ ಅವರ ತೋಟದಲ್ಲಿ ಇಂಥ ದೈತ್ಯ ಮಾವಿನಹಣ್ಣುಗಳು ಬೆಳೆದಿದ್ದು, ರೈತ ಇಕ್ಬಾಲ್ ತೋಟದ ಮಾವಿನಹಣ್ಣುಗಳನ್ನು ಇತ್ತೀಚೆಗೆ ಚೋಟಾ ಉದೇಪುರ್ನಲ್ಲಿ ನಡೆದ ಕೃಷಿ ಮಹೋತ್ಸವದಲ್ಲಿ ಪ್ರದರ್ಶಿಸಲಾಯಿತು.
ಕರ್ನಾಟಕದಲ್ಲಿಸಂಪಾದಿಸಿ
- ತಳಿಗಳು :ಆಲ್ಫಾನ್ಸೋ ;ರಸಪುರಿ ;ಸಿಂಧೂರ ;ಮಲಗೋವ ;ಬಂಗಾನಪಲ್ಲಿ ; ಮಲ್ಲಿಕಾ ; ತೋತಾಪುರಿ ;ನೀಲಂ *ಮಲಗೋವಾ ಎಕರೆಗೆ ಸರಾಸರಿ ೨೭೦೦ ಕೆಜಿ ಇಳುವರಿ ಬಂದರೆ -ತೋತಾಪುರಿ ಎಕರೆಗೆ ೫೫೦೦ ಕೆಜಿ ವರೆಗೆ ಇಳುವರಿ ಬರತ್ತದೆ. ಉಳಿದ ತಳಿಗಳು ಎಕರೆಗೆ ೪೦೦೦ ಕೆಜಿ ಯಿಂದ ೪೫೦೦ ಕೆಜಿ ವರೆಗೆ ಇಳುವರಿ ಬರುವುದು
- ಕರ್ನಾಟಕ ರಾಜ್ಯದಲ್ಲಿ ಮಾವು ಇಳುವರಿ ಪ್ರಮಾಣ
ವರ್ಷ | ಇಳುವರಿ | ಪ್ರಮಾಣ/ಟನ್ |
---|---|---|
2009 | ಪೂರ್ಣ | 7,95,000 |
2010 | ಅಲ್ಪ | 2,60,000 |
2011 | ಪೂರ್ಣ | 8,50,000 |
2012 | ಅಲ್ಪ | 2,75,000 |
- ಆಧಾರ:(ಪ್ರಜಾವಾಣಿ ೩-೬-೨೦೧೩)
೨೩-೪-೨೦೧೬ ರಲ್ಲಿ ಮಾವುಸಂಪಾದಿಸಿ
ರಾಜ್ಯದ 5 ಲಕ್ಷ ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರತಿ ವರ್ಷ 12 ರಿಂದ 13 ಲಕ್ಷ ಟನ್ ಫಸಲು ಬರುತ್ತಿತ್ತು. ೨೦೧೬ರಲ್ಲಿ ಈ ಪ್ರಮಾಣ ಕಡಿಮೆಯಾದರೂ, ರಫ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಮೆರಿಕಾ, ಮಲೇಷಿಯಾ ಮುಂತಾದ ದೇಶಗಳಿಂದ ರಾಜ್ಯದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ ೩.
- ಜೂನ್ಗೆ ಅಂತ್ಯ ವಾಗುವ 2015–16ನೇ ಬೆಳೆ ವರ್ಷದಲ್ಲಿ, ಮಾವು ಫಸಲು ಶೇ 2.1ರಷ್ಟು ಹೆಚ್ಚಾಗಲಿದ್ದು, 19 ಲಕ್ಷ ಟನ್ಗಳಿಗೆ ತಲುಪಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 18.52 ಲಕ್ಷ ಟನ್ ಫಸಲು ಬಂದಿತ್ತು.೪
ಇದನ್ನು ಮನಗಂಡ ಸರ್ಕಾರ, ರೈತರಿಗೆ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ 2011ರಲ್ಲಿ ಮಾವು ಅಭಿವೃದ್ಧಿ ನಿಗಮ ರಚಿಸಿತ್ತು. ಆದರೆ, ಅದಕ್ಕೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ನೇಮಕವಾದದ್ದು ಕೇವಲ10 ತಿಂಗಳ ಹಿಂದೆ.
೨೦೧೬ರಲ್ಲಿ ಮಾರುಕಟ್ಟೆ ಲಭ್ಯಸಂಪಾದಿಸಿ
- ಕರ್ನಾಟಕದಲ್ಲಿ ಅವೈಜ್ಞಾನಿಕ ಮಾವು ಕೊಯ್ಲು, ರಫ್ತು ಸೌಲಭ್ಯ ಇಲ್ಲದಿರುವುದು, ಸೂಕ್ತ ಮಾರುಕಟ್ಟೆ ಮತ್ತು ಬ್ರ್ಯಾಂಡ್ ಕೊರತೆ, ಬೆಳೆಗಾರರಿಗೆ ಸಪರ್ಮಕ ಮಾಹಿತಿ ಹಾಗೂ ತರಬೇತಿ ಸಿಗದಿರುವುದು ಈ ಹಿನ್ನಡೆಗೆ ಕಾರಣವಾಗಿತ್ತು. ರಾಜ್ಯದ ಮಾವಿಗೆ ಸ್ವಂತ ಮಾರುಕಟ್ಟೆಯ ಮತ್ತು ಬ್ರ್ಯಾಂಡ್ ಸೃಷ್ಟಿಸಿದ ಶ್ರೇಯಸ್ಸು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ (ಕೆಎಸ್ಎಂಡಿಎಂಸಿ) ಸಲ್ಲಬೇಕು. ರೈತರಿಗೆ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ 2011ರಲ್ಲಿ ಮಾವು ಅಭಿವೃದ್ಧಿ ನಿಗಮ ರಚಿಸಿತ್ತು. ಆದರೆ, ಅದಕ್ಕೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ನೇಮಕವಾದದ್ದು 10 ತಿಂಗಳ ಹಿಂದೆ.
ಬಯೋಪಾರ್ಕ್'ಗೆ ಬೇಡಿಕೆಸಂಪಾದಿಸಿ
- ಮಾವು ರಫ್ತು ಮಾಡಲು ಕೇಂದ್ರ ಕೃಷಿ ಸಚಿವಾಲಯದ ಪರವಾನಗಿ ಅಗತ್ಯ. ಇದನ್ನು ಮನಗಂಡು ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಇನೋವಾ ಬಯೊ ಪಾರ್ಕ್ಗೆ ರಫ್ತು ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರ ಕೃಷಿ ಮತ್ತು ವಾಣಿಜ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.
- 15–20 ಸಾವಿರ ಟನ್ ರಫ್ತು ಗುರಿ: ರಾಜ್ಯದಿಂದ ಇದುವರೆಗೂ ವಾರ್ಷಿಕ ಸರಾಸರಿ 500 ಟನ್ ಮಾವು ರಫ್ತಾಗುತ್ತಿತ್ತು. ಮಾವು ರಫ್ತು ಮಾಡಲು ಎದುರಾಗಿದ್ದ ತಾಂತ್ರಿಕ ಅಡಚಣೆ ನಿವಾರಣೆಯಾಗಿ ಈಗ ಹಾದಿ ಸುಗಮವಾಗಿದೆ. ಈ ವರ್ಷ ರಾಜ್ಯದ ಮಾವಿಗೆ ಅಮೆರಿಕ, ಬ್ರಿಟನ್, ಮಲೇಷ್ಯಾ, ಆಸ್ಟ್ರೇಲಿಯಾ, ಕೊಲ್ಲಿ ರಾಷ್ಟ್ರಗಳಿಂದ ಬೇಡಿಕೆ ಬಂದಿದೆ. ಈ ವರ್ಷ ನಿಗಮ 15-20 ಸಾವಿರ ಟನ್ ಮಾವು ರಫ್ತು ಗುರಿ ಹೊಂದಿದೆ. ಅಷ್ಟೇ ಅಲ್ಲ, ಮಾವು ಮೇಳದ ಮೂಲಕ ಹೊರ ರಾಜ್ಯಗಳನ್ನು ತಲುಪಲಿವೆ ಎನ್ನುತ್ತಾರೆ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ.
:ಮಲೇಷ್ಯಾದಲ್ಲಿ ರಾಜ್ಯದ ಮಾವು
- ಇಲ್ಲಿಯ ಹಣ್ಣಿನ ರುಚಿಗೆ ಮನಸೋತ ಮಲೇಷ್ಯಾ, 10 ಸಾವಿರ ಟನ್ ಅಲ್ಫಾನ್ಸೊ ಹಣ್ಣಿಗೆ ಬೇಡಿಕೆ ಸಲ್ಲಿಸಿ ನಾಲ್ಕು ತಿಂಗಳ ಹಿಂದೆ ನಿಗಮಕ್ಕೆ ಪತ್ರ ಬರೆದಿದೆ.ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ರಾಜ್ಯದ ಮಾವು ಬೆಳೆಗಾರರು ಇದೇ ಮೊದಲ ಬಾರಿಗೆ ನಿಗಮದ ನೆರವಿನಿಂದ ಹೊರ ದೇಶಕ್ಕೆ ಇಷ್ಟು ದೊಡ್ಡ ಪ್ರಮಾಣದ ಮಾವಿನ ಹಣ್ಣು ರಫ್ತು ಮಾಡಲಿದ್ದಾರೆ.
- ಮಹಾರಾಷ್ಟ್ರದಲ್ಲಿರುವ ಕೇಂದ್ರ ಕೃಷಿ ಮತ್ತು ಸಂಸ್ಕರಿತ ಆಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಅಪೆಡಾ) ಮೂಲಕ ಮಾವು ರಫ್ತು ಮಾಡಲು ರಾಜ್ಯದ 4,500 ಮಾವು ಬೆಳೆಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನು ಮುಂದೆ ‘ಕರ್ನಾಟಕದ ಮಾವು’ ಎಂಬ ಸ್ವಂತ ಹೆಸರಿನಲ್ಲಿ (ಬ್ರ್ಯಾಂಡ್) ಮಾರಾಟವಾಗಲಿದೆ. ಇದು ನಿಗಮದ ಪ್ರಯತ್ನಕ್ಕೆ ಸಂದ ಯಶಸ್ಸು.
- ಮಲೇಷ್ಯಾಕ್ಕೆ ರಾಜ್ಯದ ಮಾವು ರಫ್ತು:
- ಕರ್ನಾಟಕದ ಹಣ್ಣಿನ ರುಚಿಗೆ ಮನಸೋತ ಮಲೇಷ್ಯಾ, 10 ಸಾವಿರ ಟನ್ ಅಲ್ಫಾನ್ಸೊ ಹಣ್ಣಿಗೆ ಬೇಡಿಕೆ ಸಲ್ಲಿಸಿ ನಾಲ್ಕು ತಿಂಗಳ ಹಿಂದೆ ನಿಗಮಕ್ಕೆ ಪತ್ರ ಬರೆದಿದೆ.ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ರಾಜ್ಯದ ಮಾವು ಬೆಳೆಗಾರರು ಇದೇ ಮೊದಲ ಬಾರಿಗೆ ನಿಗಮದ ನೆರವಿನಿಂದ ಹೊರ ದೇಶಕ್ಕೆ ಇಷ್ಟು ದೊಡ್ಡ ಪ್ರಮಾಣದ ಮಾವಿನ ಹಣ್ಣು ರಫ್ತು ಮಾಡಲಿದ್ದಾರೆ.
- ಮಹಾರಾಷ್ಟ್ರದಲ್ಲಿರುವ ಕೇಂದ್ರ ಕೃಷಿ ಮತ್ತು ಸಂಸ್ಕರಿತ ಆಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಅಪೆಡಾ) ಮೂಲಕ ಮಾವು ರಫ್ತು ಮಾಡಲು ರಾಜ್ಯದ 4,500 ಮಾವು ಬೆಳೆಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನು ಮುಂದೆ ‘ಕರ್ನಾಟಕದ ಮಾವು’ ಎಂಬ ಸ್ವಂತ ಹೆಸರಿನಲ್ಲಿ (ಬ್ರ್ಯಾಂಡ್) ಮಾರಾಟವಾಗಲಿದೆ. ಇದು ನಿಗಮದ ಪ್ರಯತ್ನಕ್ಕೆ ಸಂದ ಯಶಸ್ಸು.
- ತೋತಾಪುರಿ, ನೀಲಂಗೆ ಭಾಗ್ಯ: ಅಲ್ಫಾನ್ಸೊ, ಕೇಸರ್, ಮಲ್ಲಿಕಾ, ಬೈಗನಪಲ್ಲಿ, ಮಲಗೋವಾ ರಫ್ತು ಮಾಡಲು ನಿಗಮ ಅನುಮತಿ ಪಡೆದುಕೊಂಡಿದೆ. ಆದರೆ, ನೀಲಂ, ತೋತಾಪುರಿ ಸೇರಿದಂತೆ ಕೆಲವು ಹಣ್ಣಿನ ತಳಿ ಬೇಗ ಕೆಡುವುದರಿಂದ ರಫ್ತಿಗೆ ಅನುಮತಿ ನಿರಾಕರಿಸಲಾಗಿದೆ. ಹೊರದೇಶಗಳಿಗೆ ರಫ್ತು ಮಾಡುವ 14 ದಿನಗಳ ಮೊದಲು ಅನುಮತಿ ಪಡೆಯಬೇಕಾಗುತ್ತದೆ. ಅಲ್ಲಿಯವರೆಗೂ ಹಣ್ಣು ಬಾಳಿಕೆ ಬರಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುವಾಗ ಹಣ್ಣು ಸಂಗ್ರಹ, ಶುಚಿತ್ವ, ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಗುಣಮಟ್ಟ ಕಾಪಾಡುವುದು ನಿಜಕ್ಕೂ ಸವಾಲಿನ ಕೆಲಸ ಎನ್ನುವುದು ನಿಗಮದ ಅಧ್ಯಕ್ಷರ ಅಭಿಪಾಯ. ಅದಕ್ಕೆ ರೈತರು ಮತ್ತು ರಫ್ತುದಾರರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ. ಕಾರ್ಬೈಡ್ ಹಾಗೂ ಇನ್ನಿತರ ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳ ರಫ್ತನ್ನು ಸಂಪೂರ್ಣ ನಿಷೇಧಿಸಲಾಗಿದೆ. ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ಮಾತ್ರ ಸಂಸ್ಕರಿಸಿ ವಿದೇಶಕ್ಕೆ ಸಾಗಿಸಲಾಗುವುದು.
- 80 ತಳಿ ಮಾವು: ರಾಜ್ಯದ ಮಾವಿಗೆ ದೇಸಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ರಾಜ್ಯದ 15 ಜಿಲ್ಲೆಗಳಲ್ಲಿ 80 ತಳಿಯ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ಬಿಸಿಲು ಹೆಚ್ಚಾದ ಕಾರಣ ಮಾವಿನ ಇಳುವರಿ ಶೇ 10–20ರಷ್ಟು (2–3 ಲಕ್ಷ ಟನ್) ಕಡಿಮೆಯಾಗುವ ಸಾಧ್ಯತೆ ಇದೆ ಅಂದಾಜಿಸಲಾಗಿತ್ತು. ಆದರೆ ಸುಡುಬಿಸಿಲಿನ ನಡುವೆಯೂ ಬಂಪರ್ ಬೆಳೆ ಬಂದಿದೆ.
ಕರ್ನಾಟಕದಲ್ಲಿ ಬೆಳೆ ಪ್ರಮಾಣ (೨೦೧೬)ಸಂಪಾದಿಸಿ
- ರಾಜ್ಯದಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 12-14 ಲಕ್ಷ ಟನ್ ಇಳುವರಿ ಅಂದಾಜಿಸಲಾಗಿದೆ. ಏರು ಹಂಗಾಮಿನಲ್ಲಿ ಕನಿಷ್ಠ 10 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಇಳಿ ಹಂಗಾಮಿನಲ್ಲಿ ಸುಮಾರು 4 ರಿಂದ 5 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದ್ದು, 40 ಸಾವಿರ ಹೆಕ್ಟೇರ್ ಪ್ರದೇಶ ಮಾವಿಗೆ ಮೀಸಲಾಗಿದೆ. ರಾಮನಗರದಲ್ಲಿ 20 ಸಾವಿರ ಹೆಕ್ಟೇರ್, ಉಳಿದಂತೆ ಧಾರವಾಡ, ಹಾವೇರಿ, ಬೆಳಗಾವಿ ಈ ಮೂರು ಜಿಲ್ಲೆಗಳಲ್ಲಿ 15ರಿಂದ 19 ಸಾವಿರ ಹೆಕ್ಟೇರ್ನಲ್ಲಿ ಅಲ್ಫಾನ್ಸೊ ಮಾವು ಬೆಳೆಯಲಾಗುತ್ತಿದೆ. ಪ್ರತಿ ಹೆಕ್ಟೇರ್ಗೆ 2ರಿಂದ 2.5 ಟನ್ ಇಳುವರಿ ಪಡೆಯಲಾಗುತ್ತದೆ.
ಮಾವು ಮೇಳಸಂಪಾದಿಸಿ
- ರಾಜ್ಯದ ವಿವಿಧ ಮೂಲೆಗಳಲ್ಲಿ ಬೆಳೆಯುವ ವೈವಿಧ್ಯಮಯ ಮಾವಿನ ಹಣ್ಣುಗಳ ರುಚಿಯನ್ನು ಗ್ರಾಹಕರಿಗೆ ಪರಿಚಯಿಸುವ ದೃಷ್ಟಿಯಿಂದ ನಿಗಮವು ಮಾವು ಮೇಳ ಆಯೋಜಿಸುತ್ತಿದೆ. ಒಂದೇ ಸೂರಿನಡಿ ಗುಣಮಟ್ಟದ, ನೈಸರ್ಗಿಕವಾಗಿ ಮಾಗಿಸಿದ ಹಲವು ಜಾತಿಯ ಸ್ವಾದಿಷ್ಟ ಮಾವು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ.
- ಪ್ರತಿ ಮೇಳದಲ್ಲೂ 100–200ಕ್ಕೂ ಹೆಚ್ಚು ಟನ್ ಹಣ್ಣು ಮಾರಾಟವಾಗುತ್ತಿದೆ. ಮೇಳದಲ್ಲಿ 20ಕ್ಕೂ ಹೆಚ್ಚು ವಿವಿಧ ಜಾತಿಯ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತದೆ. ಲಾಲ್ಬಾಗ್ ಸೇರಿ ಬೆಂಗಳೂರು ನಗರದ ಐದು ಕಡೆ ಮತ್ತು ಹೆಚ್ಚು ಮಾವು ಬೆಳೆಯವ 22 ಜಿಲ್ಲೆಗಳಲ್ಲಿ ಮಾವು ಮೇಳ ನಡೆಯುತ್ತಿವೆ. ಹೊರ ರಾಜ್ಯಗಳಿಗೂ ನಮ್ಮ ಹಣ್ಣುಗಳ ರುಚಿಯನ್ನು ಪರಿಚಯಿಸಲು ಗೋವಾ, ದೆಹಲಿ ಮತ್ತು ಕೇರಳದಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ಮಾವು ಮೇಳಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಮಲೇಷ್ಯಾ ಸೇರಿ ಇತರ ರಾಷ್ಟ್ರಗಳಲ್ಲೂ ಮಾವು ಮೇಳ ನಡೆಸುವ ಉದ್ದೇಶ ನಿಗಮಕ್ಕಿದೆ. ಪ್ರಪಂಚದ ಒಟ್ಟು 80ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತದ ಮಾವು ರಫ್ತು ಆಗುತ್ತಿದೆ. ಕೇಂದ್ರ ವಾಣಿಜ್ಯ ಇಲಾಖೆಯ ರಫ್ತು– ಆಮದು ಅಂಕಿ ಅಂಶಗಳ ಪ್ರಕಾರ ಭಾರತದಿಂದ ಪ್ರತಿ ವರ್ಷ 40ರಿಂದ 60 ಸಾವಿರ ಟನ್ ಮಾವು ವಿದೇಶಗಳಿಗೆ ರವಾನೆಯಾಗುತ್ತದೆ.
ವಿಶ್ವದಲ್ಲಿ ಭಾರತ ಅತಿ ಹೆಚ್ಚಿನ ಮಾವು ಬೆಳೆಯುತ್ತದೆಸಂಪಾದಿಸಿ
- ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚಿನ ಮಾವು ಬೆಳೆಯುತ್ತಿರುವ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಮಾವು ಉತ್ಪಾದನೆಯಲ್ಲಿ ಭಾರತದ ಪಾಲು ಅರ್ಧದಷ್ಟಿದೆ. ದೇಶದಲ್ಲಿ ಸುಮಾರು 15.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, 95 ಲಕ್ಷ ಟನ್ ಇಳುವರಿ ಪಡೆಯಲಾಗುತ್ತಿದೆ.
- ದೇಶದ ಒಟ್ಟು ಮಾವು ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯಗಳದ್ದು. ಈ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಹೊರ ರಾಜ್ಯಗಳಿಗೆ ಹೋಗುವ ಮಾವು ರಾಜ್ಯದ ಲೆಕ್ಕಕ್ಕೆ ಜಮಾ ಆದರೆ, ಖಂಡಿತವಾಗಿಯೂ ಎರಡನೇ ಸ್ಥಾನಕ್ಕೆ ಏರುತ್ತದೆ. ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ಉತ್ತರ ಪ್ರದೇಶ ಹಾಗೂ ಆಂಧ್ರ ಪ್ರದೇಶಗಳಿವೆ.
ಕರ್ನಾಟಕದಲ್ಲಿ ಮಾವು ಅಭಿವೃದ್ಧಿ ನಿಗಮದ ಸಾಧನೆಗಳುಸಂಪಾದಿಸಿ
- ಮಾವು ಕೊಯ್ಲು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ತಂತ್ರಜ್ಞಾನ ಮೂಲಕ ತರಬೇತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಬಳಿಯ ಹೊಗಳಗೆರೆಯಲ್ಲಿ ₹3.5 ಕೋಟಿ ವೆಚ್ಚದಲ್ಲಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿಯ ಮಾಡಿಕೆರೆಯಲ್ಲಿ ₹8 ಕೋಟಿ ವೆಚ್ಚದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ
- ಇಸ್ರೇಲ್, ಯೂರೋಪ್ ಹಾಗೂ ಅಮೆರಿಕಾದಲ್ಲಿ ಅಧ್ಯಯನಕ್ಕಾಗಿ ರಾಜ್ಯದಿಂದ 25 ಮಂದಿ ರೈತರ ಆಯ್ಕೆ.
- ನಿಗಮದ ಮುಂದಿರುವ ಯೋಜನೆ:
- ಕೋಲಾರ-ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ ಸೇರಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಲ್ಲಿ ಮಾವು ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ಸ್ಥಾಪನೆ
- ಮಾವಿನ ಹೊಸ ತಳಿಗಳ ಸಂಶೋಧನೆ, ಮಾರಾಟ ಮತ್ತು ರಫ್ತಿಗೆ ಉತ್ತೇಜನ
- ₹ 2 ಕೋಟಿ ವೆಚ್ಚದಲ್ಲಿ ಮಾವಿನ ರಸ ಉತ್ಪಾದನಾ ಮತ್ತು ಉಪ್ಪಿನಕಾಯಿ ತಯಾರಿಕಾ ಘಟಕ ಸ್ಥಾಪನೆ
- ಮಾವಿನ ಹಣ್ಣಿನ ತಿರುಳು ತೆಗೆದು ಸಂಸ್ಕರಿಸಿ ಮಾರಾಟ ಮಾಡುವ ಉದ್ಯಮ ಸ್ಥಾಪನೆಗೆ ನಿಗಮದಿಂದ ₹10 ಲಕ್ಷ ಸಬ್ಸಿಡಿ
- ರಾಜ್ಯದ ವಿವಿಧೆಡೆ ತಲಾ ₹4 ಲಕ್ಷ ವೆಚ್ಚದಲ್ಲಿ ಬಿಸಿ ನೀರಿನ ಉಗಿಯಿಂದ ಮಾವು ಮಾಗಿಸುವ 100 ಘಟಕ ಸ್ಥಾಪನೆ . ನಿಗಮದಿಂದ ₹2 ಲಕ್ಷ ಸಬ್ಸಿಡಿ
- ಬರಡು ಭೂಮಿ ಖರೀದಿಸಿ ಮಾವು ಅಭಿವೃದ್ಧಿ ಮಾಡುವುದು.[೨]
ಕರ್ನಾಟಕ ಸೇರಿದಂತೆ ಭಾರತದಲ್ಲಿ ಮಾವಿನ ಬೆಳೆ ವಿವರಸಂಪಾದಿಸಿ
- ಭಾರತದಲ್ಲಿ ಮಾವು ಬೆಳೆಯುವ ರಾಜ್ಯಗಳು: ಉತ್ತರಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ, ಗುಜರಾತ್, ಮಧ್ಯಪ್ರದೇಶ ಬಿಹಾರ
- ಹಣ್ಣಿನ ಮೂಲ ದಕ್ಷಿಣ ಏಷ್ಯಾ; ಜಾಗತಿಕ ತಳಿ ವಿಧ 1300; ಭಾರತದಲ್ಲಿ ವಿಧ 80;
- ರಫ್ತು ಮಾಡುವ ದೇಶಗಳು ಮತ್ತು ಪ್ರಮಾಣ:
ದೇಶ | ಟನ್ |
---|---|
ಅಮೇರಿಕಾ | 5000 ಟನ್ |
ಬ್ರಿಟನ್ | 3000 |
ಮಲೇಷ್ಯಾ | 3000 |
ಅರಬ್ ರಾಷ್ಟ್ರ | 3000 |
ಆಸ್ಟ್ರೇಲಿಯಾ | 3000 |
ಬೆಳೆ ವಿವರಸಂಪಾದಿಸಿ
- 2016
- ಹಣ್ಣಿನ ಮೂಲ ದಕ್ಷಿಣ ಏಷ್ಯಾ; ಜಾಗತಿಕ ತಳಿ ವಿಧ 1300; ಭಾರತದಲ್ಲಿ ವಿಧ 80.
ಪ್ರದೇಶ | ಬೆಳೆಯುವ ಪ್ರದೇಶ- ಲಕ್ಷ ಹೆಕ್ಟೇರ್ | ಇಳುವರಿ ಲಕ್ಷ ಟನ್ |
---|---|---|
ಭಾರತ | 15.2 | 95 |
ಕರ್ನಾಟಕ | 2 | 12-14 |
ಕೋಲಾರ | 40000ಹೆ. | 4 |
ರಾಮನಗರ | 20000ಹೆ. | 20.5 |
ಧಾರವಾಡ | 20000 | 2 |
ಚಿಕ್ಕಬಳ್ಳಾಪುರ | 15000 | 2.25 |
ಹಾವೇರಿ | 15000 | 1.75 |
ಬೆಳಗಾವಿ | 15000 | 1.75 |
- ೨೦೧೮:ಮಾವು ರಫ್ತು Archived 2018-04-19 at the Wayback Machine.
ಮಾವಿನ ತಳಿಗಳುಸಂಪಾದಿಸಿ
- ರಸಪುರಿ
- ಅಲ್ಫಾನ್ಸೋ (ಕರ್ನಾಟಕ)
- ರತ್ನಗಿರಿ (ಮಹಾರಾಷ್ಟ್ರ)
- ಮಲ್ಗೋವ
- ಬಾದಾಮ್
- ಮಲ್ಲಿಕ
- ನೆಕ್ಕರೆ
- ತೊತಾಪುರಿ
- ಅಪ್ಪೆಮಿಡಿ (ಕರ್ನಾಟಕ-ವಿಶಿಷ್ಟ ತಳಿ)
- ನೀಲಂ
ನೋಡಿಸಂಪಾದಿಸಿ
ಆಧಾರಸಂಪಾದಿಸಿ
- ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
- ೨.http://www.indiapress.org/gen/news.php/Prajavani/400x60/0
- ೩.4 MAY, 2016 :http://www.prajavani.net/
- ೩.[[೧]]