ಆಲಮಟ್ಟಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ. ಆಲಮಟ್ಟಿ ಗ್ರಾಮವು ವಿಜಯಪುರ - ಹೊಸಪೇಟೆ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೬೦ ಕಿ. ಮಿ. ದೂರ ಇದೆ.

ಆಲಮಟ್ಟಿ
ಆಲಮಟ್ಟಿ
village
Population
 (೨೦೧೨)
 • Total೧೫೦೦೦

ಚರಿತ್ರೆ

ಬದಲಾಯಿಸಿ

ಗ್ರಾಮದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು, ರೈಲು ನಿಲ್ದಾಣ, ಹ್ಯಾಲಿಪಾಡ್ ಹಾಗೂ ಇತರೆ ಕಚೇರಿಗಳಿವೆ.

ಭೌಗೋಳಿಕ

ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

ಬದಲಾಯಿಸಿ
 • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
 • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
 • ಚಳಿಗಾಲ ಮತ್ತು
 • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
 • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
 • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಬದಲಾಯಿಸಿ

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 9209 ಇದೆ. ಅದರಲ್ಲಿ 4598 ಪುರುಷರು ಮತ್ತು 4611 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಬದಲಾಯಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಬದಲಾಯಿಸಿ
 
ಉತ್ತರ ಕರ್ನಾಟಕದ ಊಟ

ಅಪ್ಪಟ <ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

ಬದಲಾಯಿಸಿ
 • ಶ್ರೀ ಮಹಾಲಕ್ಷ್ಮಿ ದೇವಾಲಯ
 • ಶ್ರೀ ದುರ್ಗಾದೇವಿ ದೇವಾಲಯ
 • ಶ್ರೀ ಮಲ್ಲಿಕಾರ್ಜುನ ದೇವಾಲಯ
 • ಶ್ರೀ ಬಸವೇಶ್ವರ ದೇವಾಲಯ
 • ಶ್ರೀ ವೆಂಕಟೇಶ್ವರ ದೇವಾಲಯ
 • ಶ್ರೀ ಪಾಂಡುರಂಗ ದೇವಾಲಯ
 • ಶ್ರೀ ಹಣಮಂತ ದೇವಾಲಯ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಬದಲಾಯಿಸಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಬದಲಾಯಿಸಿ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಬದಲಾಯಿಸಿ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಬದಲಾಯಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ಬದಲಾಯಿಸಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ. ಹಂದಿ.ಇನ್ಮಿತರ ಪ್ರಾಣಿಗಳು ಕಾಣಲು ಸಿಗುತ್ತವೆ. ರಾಜಹಂಸವು ಕಾಣಲು ಸಿಗುತ್ತವೆ.

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಬದಲಾಯಿಸಿ
 • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಆಲಮಟ್ಟಿ
 • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಆಲಮಟ್ಟಿ
 • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಆಲಮಟ್ಟಿ
 • ಗೀತಾಂಜಲಿ ಪ್ರಾಥಮಿಕ ಶಾಲೆ, ಆಲಮಟ್ಟಿ
 • ಬಿ.ಎನ್.ಎಮ್. ಪ್ರಾಥಮಿಕ ಶಾಲೆ, ಆಲಮಟ್ಟಿ
 • ಎಮ್.ಎಚ್.ಎಮ್.ಪಿ.ಎಸ್. ಪ್ರಾಥಮಿಕ ಶಾಲೆ, ಆಲಮಟ್ಟಿ
 • ಶಾರದಾ ಪ್ರಾಥಮಿಕ ಶಾಲೆ, ಆಲಮಟ್ಟಿ
 • ಜವಾಹರ ನವೋದಯ ವಿದ್ಯಾಲಯ, ಆಲಮಟ್ಟಿ
 • ಎಮ್.ಎಚ್.ಎಮ್. ಪದವಿಪೂರ್ವ ಮಹಾವಿದ್ಯಾಲಯ, ಆಲಮಟ್ಟಿ
 • ಹರ್ಡೇಕರ ಮಂಜಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಆಲಮಟ್ಟಿ

ಆರೋಗ್ಯ

ಬದಲಾಯಿಸಿ

ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.

ಆರಕ್ಷಕ (ಪೋಲಿಸ್) ಠಾಣೆ

ಬದಲಾಯಿಸಿ

ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ವಿದ್ಯುತ್ ಪರಿವರ್ತನಾ ಕೇಂದ್ರ

ಬದಲಾಯಿಸಿ

೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.

ಮಳೆ ಮಾಪನ ಕೇಂದ್ರ

ಬದಲಾಯಿಸಿ

ಗ್ರಾಮದಲ್ಲಿ ಮಳೆ ಮಾಪನ ಕೇಂದ್ರವಿದೆ.

ಬ್ಯಾಂಕು

ಬದಲಾಯಿಸಿ

ಸ್ಟೇಟ್ ಬ್ಯಾಂಕ್ ಆಫ಼್ ಇಂಡಿಯಾ ಬ್ಯಾಂಕ ಸ್ಥಾಪಿತವಾಗಿದೆ.

ಖಜಾನೆ ಕಚೇರಿ

ಬದಲಾಯಿಸಿ

ಗ್ರಾಮದಲ್ಲಿ ಖಜಾನೆ ಕಚೇರಿ ಇದ್ದು ಸರ್ಕಾರಿ ನೌಕರರಿಗೆ ಅನುಕೂಲವಾಗಿದೆ.

ಗ್ರಾಮ ಪಂಚಾಯತಿ ಕಾರ್ಯಾಲಯ

ಬದಲಾಯಿಸಿ

ಗ್ರಾಮದ ಆಡಳಿತಕ್ಕಾಗಿ ಗ್ರಾಮ ಪಂಚಾಯತಿ ಕಾರ್ಯಾಲಯಯಿದೆ.

ದೂರವಾಣಿ ವಿನಿಮಯ ಕೇಂದ್ರ

ಬದಲಾಯಿಸಿ

ಗ್ರಾಮದಲ್ಲಿ ದೂರವಾಣಿ ವಿನಿಮಯ ಕೇಂದ್ರ (ಬಿ.ಎಸ್.ಎನ್.ಎಲ್)ವಿದೆ.

ಜಲ ವಿದ್ಯುತ್ ಸ್ಥಾವರ

ಬದಲಾಯಿಸಿ

ಆಲಮಟ್ಟಿ ಆಣೆಕಟ್ಟುಯ ಹತ್ತಿರ ಜಲ ವಿದ್ಯುತ್ ಸ್ಥಾವರವಿದೆ.

ಆಲಮಟ್ಟಿ ಆಣೆಕಟ್ಟು

ಬದಲಾಯಿಸಿ

ಕರ್ನಾಟಕದ ಅತಿ ದೊಡ್ಡ ಆಣೆಕಟ್ಟುಗಳಲ್ಲಿ ಒಂದಾದ ಲಾಲ ಬಹದ್ದೂರ ಶಾಸ್ತ್ರಿ ಸಾಗರ(ಆಲಮಟ್ಟಿ ಆಣೆಕಟ್ಟು) ಗ್ರಾಮದ ಹತ್ತಿರದಲ್ಲಿದೆ.

ವೈವಿಧ್ಯಮಯ ಉದ್ಯಾನಗಳ ಸೊಬಗು, ಸಂಗೀತ-ನೃತ್ಯ ಕಾರಂಜಿ ವಯ್ಯಾರ, ಹಸಿರು ಸೀರೆ ತೊಟ್ಟಂತೆ ಕಂಗೊಳಿಸುವ ಗುಡ್ಡಗಳ ಸೌಂದರ‍್ಯವನ್ನು ಬಣ್ಣಿಸಲು ಪದಗಳು ಸಾಲದು. ಆಲಮಟ್ಟಿ ಜಲಾಶಯ ರಾಕ್‌ ಉದ್ಯಾನ, ಕೃಷ್ಣ ಉದ್ಯಾನ, ಮೊಘಲ್‌ ಉದ್ಯಾನ, ರೋಜ್‌ ಉದ್ಯಾನ, ಇಟಾಲಿಯನ್‌ ಉದ್ಯಾನ, ಫ್ರೆಂಚ್‌ ಉದ್ಯಾನ, ಲವ-ಕುಶ ಉದ್ಯಾನ ಹೀಗೆ ಉದ್ಯಾನಗಳ ಪಟ್ಟಣ ಆಲಮಟ್ಟಿಗೆ ಈಗ ಮತ್ತೂಂದು ಗರಿ ಮೂಡಿದಂತಾಗಿ ನಿತ್ಯ ತನ್ನತ್ತ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ.

ರಾಕ್‌ ಗಾರ್ಡನ್‌

ಬದಲಾಯಿಸಿ

33 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಾಕ್‌ ಗಾರ್ಡನ್‌ ನೋಡುಗರ ಮನಸೂರೆಗೊಳ್ಳುತ್ತದೆ. ಅಪರೂಪದ ಸಸ್ಯ ಸಂಕುಲ ಹೊಂದಿದೆ. ನಾನಾ ಬುಡಕಟ್ಟು ಜನಾಂಗದ ಜೀವನ ಶೈಲಿ, ನಮ್ಮ ಹೆಮ್ಮೆಯ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಜೀವನ ಶೈಲಿ ನೋಡುಗರನ್ನು ಆಕರ್ಷಿಸುತ್ತವೆ. ಇಲ್ಲಿ ಮಕ್ಕಳು ಆಡುವ ದೃಶ್ಯಗಳ ಕಲಾಕೃತಿ, ಸಿಲ್ವರ್‌ಲೇಕ್‌ ಬೋಟಿಂಗ್‌, ಪಕ್ಷಿಗಳ ಸೆಕ್ಟರ್‌, ಜಾತ್ರೆ ದೃಶ್ಯಗಳ ಜತೆಗೆ ಮಕ್ಕಳ ಉದ್ಯಾನ ನಿರ್ಮಿಸಲಾಗಿದೆ. ಲವ-ಕುಶ ಉದ್ಯಾನ ಮಕ್ಕಳ ಪ್ರಮುಖ ಆಕರ್ಷಣೀಯ ತಾಣ. ಜಲಾಶಯದ ಬಲದಂಡೆಯ ಸೀತಿಮನಿ ಗುಡ್ಡದಲ್ಲಿ ಮೈದೆಳೆದಿದೆ. ಮೊಘಲ್‌, ಇಟಾಲಿಯನ್‌, ಫ್ರೆಂಚ್‌ ಉದ್ಯಾನಗಳು ಆಧಿಕಧಿರ್ಷಧಿಕ. ರಾಷ್ಟ್ರಪತಿ ಭವನದ ಮೊಘಲ್‌ ಉದ್ಯಾನದ ಶೈಲಿಯಲ್ಲಿಯೇ ನಿರ್ಮಾಣವಾದ ಈ ಉದ್ಯಾನದಲ್ಲಿ ಸಾವಿರಾರು ಕಾರಂಜಿಗಳಿವೆ. ನೀರಿನ ಬಣ್ಣ-ಬಣ್ಣದ ನೃತ್ಯ ಪ್ರೇಕ್ಷ ಕರ ಮನಸೂರೆಗೊಳ್ಳುತ್ತದೆ. ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಸಂಗೀತ ನೃತ್ಯ ಕಾರಂಜಿ ಇಲ್ಲಿದೆ. ಇಲ್ಲಿ 1400 ಜನ ಒಮ್ಮೆಲೆ ಕುಳಿತು ವೀಕ್ಷಿಸುವ ವ್ಯವಸ್ಥೆ ಇದೆ. ಸಂಗೀತ ನೃತ್ಯ ಕಾರಂಜಿಯ ಸ್ಥಳ ವೃತ್ತಾಕಾರವಾಗಿದ್ದು, ಇಂಪಾದ ಸಂಗೀತ ವ್ಯವಸ್ಥೆ, ನಾನಾ ತರಹದ ಬಣ್ಣದ ಸಂಯೋಜನೆ ಇದೆ.

ರೈಲು ನಿಲ್ದಾಣ

ಬದಲಾಯಿಸಿ

ವಿಜಯಪುರ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.

ಸಾಕ್ಷರತೆ

ಬದಲಾಯಿಸಿ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಬದಲಾಯಿಸಿ

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ವಿಜಯಪುರ ಕರ್ನಾಟಕ


"https://kn.wikipedia.org/w/index.php?title=ಆಲಮಟ್ಟಿ&oldid=1163016" ಇಂದ ಪಡೆಯಲ್ಪಟ್ಟಿದೆ