ತಾಳಿಕೋಟ
ತಾಳಿಕೋಟಿ ನಗರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ. ತಾಳಿಕೋಟಿ ನಗರವು ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೭೦ ಕಿ.ಮೀ ದೂರ ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಪಟ್ಟಣವನ್ನು ಹೊಸ ತಾಲ್ಲೂಕು ಎಂದು ರಚಿಸಿದೆ.
ತಾಳಿಕೋಟ
ತಾಳಿಕೋಟಿ | |
---|---|
village | |
Population (೨೦೧೨) | |
• Total | ೩೫೦೦೦ |
ಚರಿತ್ರೆ
ಬದಲಾಯಿಸಿತಾಳಿಕೋಟಿಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.
ಭೌಗೋಳಿಕ
ಬದಲಾಯಿಸಿತಾಳಿಕೋಟಿಯು 16°29′N 76°19′E / 16.48°N 76.32°E ದಲ್ಲಿ ನೆಲೆಗೊಂಡಿದೆ.[೧] ಇದು ಸರಾಸರಿ ೫೦೯ ಮೀಟರ್ (೧೬೬೯ ಅಡಿ) ಎತ್ತರವನ್ನು ಹೊಂದಿದೆ. ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
ಬದಲಾಯಿಸಿ- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ
ಬದಲಾಯಿಸಿಗ್ರಾಮದಲ್ಲಿ ಜನಸಂಖ್ಯೆ(೨೦೧೧ರಂತೆ) ೩೧೬೯೩ ಇದೆ. ಅದರಲ್ಲಿ ೧೫೯೪೦ ಪುರುಷರು ಮತ್ತು ೧೫೭೫೩ ಮಹಿಳೆಯರು ಇದ್ದಾರೆ.[೨]
ಸಾಂಸ್ಕೃತಿಕ
ಬದಲಾಯಿಸಿಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ
ಬದಲಾಯಿಸಿಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮ
ಬದಲಾಯಿಸಿಗ್ರಾಮದಲ್ಲಿ ಹಿಂದೂ , ಕ್ರೈಸ್ತ ,ಜೈನ,ಬೌದ್ಧ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
ಭಾಷೆ
ಬದಲಾಯಿಸಿಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯ
ಬದಲಾಯಿಸಿ- Shree Peelikemma Devi Temple Talikoti
- ಶ್ರೀ ಪೀಲಿಕೆಮ್ಮ ದೇವಿ ದೇವಸ್ಥಾನ ತಾಳಿಕೋಟಿ
- ಶ್ರೀ ಅಂಬಾ ಭವಾನಿ ದೇವಸ್ಥಾನ ಕತ್ರಿ ಬಜಾರ್ ತಾಳಿಕೋಟಿ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಬಸವೇಶ್ವರ ದೇವಾಲಯ
- ಶ್ರೀ ವೆಂಕಟೇಶ್ವರ ದೇವಾಲಯ
- ಶ್ರೀ ಪಾಂಡುರಂಗ ದೇವಾಲಯ
- ಶ್ರೀ ಹಣಮಂತ ದೇವಾಲಯ
- ಶ್ರೀ ಖಾಸ್ಗಟೇಶ್ವರ ಮಠ
- ಶ್ರೀ ದ್ಯಾಮವ್ವ ದೇವಿ ದೇವಸ್ಥಾನ
- ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ವಡ್ಡರ ಓಣಿ ದೇವಸ್ಥಾನ ತಾಳಿಕೋಟಿ
- ಶ್ರೀ ಗದ್ದೆಮ್ಮಾ ದೇವಿ ದೇವಸ್ಥಾನ ವಡ್ಡರ ಓಣಿ ತಾಳಿಕೋಟಿ
- ಶ್ರೀ ಹನುಮಾನ ದೇವಸ್ಥಾನ ವಡ್ಡರ ಓಣಿ ತಾಳಿಕೋಟಿ
- ಶ್ರೀ ನಾಗಪ್ಪ ಕಟ್ಟಿ ವಡ್ಡರ ಓಣಿ ತಾಳಿಕೋಟಿ
- ಶ್ರೀ ಮರಗಮ್ಮ ದೇವಿ ದೇವಸ್ಥಾನ
- ಶ್ರೀ ಅಂಬಾ ದೇವಿ ದೇವಸ್ಥಾನ ವಡ್ಡರ ಓಣಿ ತಾಳಿಕೋಟಿ
- ಶ್ರೀ ಶಿವನ ದೇವಸ್ಥಾನ ವಡ್ಡರ ಓಣಿ ತಾಳಿಕೋಟಿ
- ಶ್ರೀ ಗಚ್ಚಿನ ಮಠ ವಡ್ಡರ ಓಣಿ ತಾಳಿಕೋಟಿ
ಮಸೀದಿ
ಬದಲಾಯಿಸಿಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
ಬದಲಾಯಿಸಿಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ(ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕೃಷಿ ಮತ್ತು ತೋಟಗಾರಿಕೆ
ಬದಲಾಯಿಸಿಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆ
ಬದಲಾಯಿಸಿಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗ
ಬದಲಾಯಿಸಿಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆ
ಬದಲಾಯಿಸಿಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯ
ಬದಲಾಯಿಸಿಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿ
ಬದಲಾಯಿಸಿತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಹಬ್ಬಗಳು
ಬದಲಾಯಿಸಿಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಪ್ರತಿವರ್ಷ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ತಾಳಿಕೋಟೆ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
ಬದಲಾಯಿಸಿ
|
ಶಿಕ್ಷಣ
ಬದಲಾಯಿಸಿಪ್ರಮುಖ ಶಿಕ್ಷಣ ಸಂಸ್ಥೆಗಳು
- ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ತಾಳಿಕೋಟಿ
- ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ತಾಳಿಕೋಟಿ
- ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ತಾಳಿಕೋಟಿ
- ಸರಕಾರಿ ಉರ್ದು ಪ್ರೌಡ ಶಾಲೆ, ತಾಳಿಕೋಟಿ
- ಬ್ರಿಲಿಯಂಟ್ ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಜೆ.ಎಸ್.ಎಸ್. ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಚೇತನ ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಜ್ಣಾನಗಂಗಾ ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಸರಸ್ವತಿ ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಭಾಗಿರಥಿ ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಸರ್ವಜ್ಣ ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಸಹ್ಯಾದ್ರಿ ಕಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ರಿಲಾಯನ್ಸ್ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ತಾಜಬಿ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ವಿ.ಪಿ.ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಸಿದ್ದಾರ್ಥ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಬ್ರಮ್ಮಲಿಂಗ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಬಾಲಭಾರತಿ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ
- ಆದರ್ಶ ಹಿರಿಯ ಪ್ರಾಥಮಿಕ ಶಾಲೆ, ವಡ್ಡರ ಓಣಿ ತಾಳಿಕೋಟಿ
- ಶ್ರೀ ಖಾಸ್ಗತೇಶ್ವರ ಪ್ರೌಡ ಶಾಲೆ, ತಾಳಿಕೋಟಿ
- ಶ್ರೀ ಖಾಸ್ಗತೇಶ್ವರ ಬಾಲಕಿಯರ ಪ್ರೌಡ ಶಾಲೆ, ತಾಳಿಕೋಟಿ
- ಶ್ರೀ ಖಾಸ್ಗತೇಶ್ವರ ಪ್ರೌಡ ಶಾಲೆ, ತಾಳಿಕೋಟಿ
- ಶ್ರೀ ಸಂಗಮೇಶ್ವರ ಪ್ರೌಡ ಶಾಲೆ, ತಾಳಿಕೋಟಿ
- ಬ್ರಿಲಿಯಂಟ್ ಪ್ರೌಡ ಶಾಲೆ, ತಾಳಿಕೋಟಿ
- ವಿದ್ಯಾಭಾರತಿ ಪ್ರೌಡ ಶಾಲೆ, ತಾಳಿಕೋಟಿ
- ಸರ್ವಜ್ಣ ಪ್ರೌಡ ಶಾಲೆ, ತಾಳಿಕೋಟಿ
- ರೆಡ್ ಹಾರ್ಟ್ ಪ್ರೌಡ ಶಾಲೆ, ತಾಳಿಕೋಟಿ (ಇಂಗ್ಲೀಷ್ ಮಾಧ್ಯಮ)
- ಐಡಿಯಲ್ ಪ್ರೌಡ ಶಾಲೆ, ತಾಳಿಕೋಟಿ (ಉರ್ದು ಮಾಧ್ಯಮ)
- ಶ್ರೀ ಖಾಸ್ಗತೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ತಾಳಿಕೋಟಿ
- ಶ್ರೀ ಎಸ್.ಎಸ್.ವಿ.ಎಸ್. ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ತಾಳಿಕೋಟಿ
- ಶ್ರೀ ಅಂಜುಮನ್ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ತಾಳಿಕೋಟಿ
- ಶ್ರೀ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯ, ತಾಳಿಕೋಟಿ
- ಕರ್ನಾಟಕ ಗ್ರಾಮೀಣ ವಿದ್ಯಾಭಿವೃದ್ಧಿ ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಳಿಕೋಟಿ
- ಶಿವಯೋಗಿ ಸಂಗಮ ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಳಿಕೋಟಿ
- ಅಂಜುಮನ್ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಳಿಕೋಟಿ
- ಹುಚ್ಚಪ್ಪಗೌಡ ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ತಾಳಿಕೋಟಿ
- ಶ್ರೀ ಖಾಸ್ಗತೇಶ್ವರ ಕಲಾ ಮತ್ತು ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ತಾಳಿಕೋಟಿ
- ವಿ.ವಿ.ಸಂಘದ ಎನ್.ಎನ್.ಬೋಳಶೆಟ್ಟಿ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
- ಸರ್ ಎಂ.ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
- ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
- ಶ್ರೀ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
- ರಿಲಾಯನ್ಸ್ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
- ಶ್ರೀ ಭವಾನಿ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
- ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
- ಬೆಸ್ಟ ಕೈಗಾರಿಕಾ ತರಬೇತಿ ಕೇಂದ್ರ, ತಾಳಿಕೋಟಿ
ರಾಜಕೀಯ
ಬದಲಾಯಿಸಿತಾಳಿಕೋಟಿ ನಗರವು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಹಾಗೂ ವಿಜಯಪುರ ಲೋಕ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಆರೋಗ್ಯ
ಬದಲಾಯಿಸಿಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
ಪಶು ಆಸ್ಪತ್ರೆ
ಬದಲಾಯಿಸಿಗ್ರಾಮದಲ್ಲಿ ಸರಕಾರಿ ಪಶು ಆಸ್ಪತ್ರೆ ಇದೆ.
ಆರಕ್ಷಕ (ಪೋಲಿಸ್) ಠಾಣೆ
ಬದಲಾಯಿಸಿನಗರದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
ವಿದ್ಯುತ್ ಪರಿವರ್ತನಾ ಕೇಂದ್ರ
ಬದಲಾಯಿಸಿ೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.
ನೆಮ್ಮದಿ ಕೇಂದ್ರ
ಬದಲಾಯಿಸಿಗ್ರಾಮದಲ್ಲಿ ನೆಮ್ಮದಿ ಕೇಂದ್ರವಿದೆ.
ಬ್ಯಾಂಕಗಳು
ಬದಲಾಯಿಸಿ- ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ತಾಳಿಕೋಟ
- ಕರ್ನಾಟಕ ಬ್ಯಾಂಕ್, ತಾಳಿಕೋಟ
- ಎಸ್.ಬಿ.ಐ, ತಾಳಿಕೋಟ
- ಸಿಂಡಿಕೇಟ್ ಬ್ಯಾಂಕ್, ತಾಳಿಕೋಟ
- ಯೂನಿಯನ್ ಬ್ಯಾಂಕ್, ತಾಳಿಕೋಟ
ಸಾಕ್ಷರತೆ
ಬದಲಾಯಿಸಿಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ
ಬದಲಾಯಿಸಿ- ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ, ತಾಳಿಕೋಟ
ಕೃಷಿ ಮಾರುಕಟ್ಟೆ
ಬದಲಾಯಿಸಿ- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಾಳಿಕೋಟ
ರಾಜ್ಯ ಹೆದ್ದಾರಿಗಳು
ಬದಲಾಯಿಸಿ- ರಾಜ್ಯ ಹೆದ್ದಾರಿ - ೬೦ => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ.
- ರಾಜ್ಯ ಹೆದ್ದಾರಿ - ೬೧ => ಮನಗೂಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ.
ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು
ಬದಲಾಯಿಸಿತಾಳಿಕೋಟಿ - 586214
|
|
ಪುರಸಭೆ ಕಾರ್ಯಾಲಯ
ಬದಲಾಯಿಸಿ- ಪುರಸಭೆ ಕಾರ್ಯಾಲಯ, ತಾಳಿಕೋಟ
ಬಿ.ಎಸ್.ಎನ್.ಎಲ್ ಸಂಕೇತಗಳು
ಬದಲಾಯಿಸಿ- ಮುದ್ದೇಬಿಹಾಳ - ೦೮೩೫೬
ಗ್ರಂಥಾಲಯಗಳು / ವಾಚನಾಲಯಗಳು
ಬದಲಾಯಿಸಿ- ನಗರ ಗ್ರಂಥಾಲಯ, ತಾಳಿಕೋಟ.
ಮಳೆ ಮಾಪನ ಕೇಂದ್ರ
ಬದಲಾಯಿಸಿ- ಮಳೆ ಮಾಪನ ಕೇಂದ್ರ, ತಾಳಿಕೋಟ
ಕಂದಾಯ ಕಚೇರಿ
ಬದಲಾಯಿಸಿ- ಕಂದಾಯ ಕಚೇರಿ, ತಾಳಿಕೋಟ
ನೆಮ್ಮದಿ (ಹೋಬಳಿ) ಕೇಂದ್ರ
ಬದಲಾಯಿಸಿ- ನೆಮ್ಮದಿ ಕೇಂದ್ರ, ತಾಳಿಕೋಟ
ಉಚಿತ ಪ್ರಸಾದನಿಲಯ
ಬದಲಾಯಿಸಿ- ಮೆಟ್ರಿಕ್ ಪುರ್ವ ಉಚಿತ ಪ್ರಸಾದನಿಲಯ, ತಾಳಿಕೋಟ
ಜಿನುಗು ಕೆರೆ
ಬದಲಾಯಿಸಿ- ಜಿನುಗು ಕೆರೆ, ತಾಳಿಕೋಟ
ಹಾಲು ಉತ್ಪಾದಕ ಸಹಕಾರಿ ಸಂಘ
ಬದಲಾಯಿಸಿ- ಹಾಲು ಉತ್ಪಾದಕ ಸಹಕಾರಿ ಸಂಘ, ತಾಳಿಕೋಟ
ಕೈಗಾರಿಕಾ ಪ್ರದೇಶ
ಬದಲಾಯಿಸಿ- ಕೈಗಾರಿಕಾ ಪ್ರದೇಶ, ತಾಳಿಕೋಟ
ಸರಕಾರಿ ವಾಹನ ನಿಲ್ದಾಣ
ಬದಲಾಯಿಸಿ- ಸರಕಾರಿ ವಾಹನ ನಿಲ್ದಾಣ, ತಾಳಿಕೋಟ
- ಸರಕಾರಿ ವಾಹನ ಘಟಕ, ತಾಳಿಕೋಟ
ಕಲೆ
ಬದಲಾಯಿಸಿಕನ್ನಡ ಭಾಷೆಯ ಚಲನಚಿತ್ರ ನಟರು, ನಾಟಕಕಾರರು ಆದ ರಾಜು ತಾಳಿಕೋಟಿಯವರು ತಾಳಿಕೋಟಿ ಗ್ರಾಮದವರು.
ಉಲ್ಲೇಖಗಳು
ಬದಲಾಯಿಸಿ- ↑ Falling Rain Genomics, Inc - Talikoti
- ↑ "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.