ದೇವದುರ್ಗವು ರಾಯಚೂರು ಜಿಲ್ಲೆಯ ತಾಲ್ಲೂಕುಗಳಲ್ಲೊಂದು. ಇದರ ಪೂರ್ವದಲ್ಲಿ ರಾಯಚೂರು ತಾಲ್ಲೂಕು, ಪಶ್ಚಿಮದಲ್ಲಿ ಲಿಂಗಸೂಗೂರು ತಾಲ್ಲೂಕು, ಉತ್ತರಕ್ಕೆ ಕೃಷ್ಣಾ ನದಿ (ಗುಲ್ಬರ್ಗ ಜಿಲ್ಲೆ), ದಕ್ಷಿಣದಲ್ಲಿ ಮಾನ್ವಿ ತಾಲ್ಲೂಕುಗಳು ಗಡಿಗಳಾಗಿವೆ. ಡಿ.ಎಂ. ನಂಜುಂಡಪ್ಪ ವರದಿಯ ಪ್ರಕಾರ ದೇವದುರ್ಗವು ಕರ್ನಾಟಕದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದೆ. ಈ ತಾಲ್ಲೂಕಿನ ಸರಾಸರಿ ಸಾಕ್ಷರತೆಯು ಶೇ. 43 ಆಗಿದ್ದು, ಪುರುಷರ ಸಾಕ್ಷರತೆ ಶೇ. 50 ಹಾಗೂ ಮಹಿಳಾ ಸಾಕ್ಷರತೆ ಕೇವಲ ಶೇ. 36 ಇದೆ. ದೇವದುರ್ಗ ಪಟ್ಟಣದಲ್ಲಿ ಪುರಸಭೆ ಇದೆ. ತಾಲೂಕ ಕೇಂದ್ರದಿಂದ 6 ಕಿ ಮೀ ದೂರದಲ್ಲಿ ದೇವರಗುಡ್ಡ ಎಂಬ ಗ್ರಾಮವಿದೆ ಈ ಗ್ರಾಮದಲ್ಲಿ ಆರಾಧ್ಯ ದೇವನಾದ ಶ್ರೀ ಶರಣ ಅಮಾತೇಶ್ವರರ ದೇವಸ್ಥಾನವಿದೆ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನವಿದೆ ವಿಶೇಷವಾಗಿ ಪುರಾತನ ಕಾಲದಲ್ಲಿ ಶ್ರೀ ಶರಣ ಅಮಾತೇಶ್ವರರು ಮಾಡಿದ ಪವಾಡಗಳು ಅನೇಕ ಜನರಿಗೆ ಜನಪರಿಚಿತವಾದುದ್ದು ಇಲ್ಲಿಯ ದೇವಸ್ಥಾನದಲ್ಲಿ ಚಿತ್ರಗಳ ಮುಖಾಂತರ ತೋರಿಸಲಾಗಿದೆ ಭಕ್ತರು ಪ್ರತಿ ವರ್ಷ ದಸರಾ ಮತ್ತು ಯುಗಾದಿ ಹಬ್ಬದ ದಿನದಂದು ಅನೇಕ ಜನರು ಬಂದು ದೇವರ ಸೇವೆಯಲ್ಲಿ ಪಾಲ್ಗೊಂಡು ತಮ್ಮ ಕಷ್ಟಗಳನ್ನು ಪರಿಹಾರ ಮಾಡಲೆಂದು ಬೇಡಿಕೊಂಡು ತೆರಳುತ್ತಾರೆ.

ದೇವದುರ್ಗ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಯಚೂರು
ವಿಸ್ತಾರ
 - ಎತ್ತರ
7.43 km²
 - 398 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
21,994
 - 2,960.16/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 584111
 - +91-08531
 - KA-36

ಹೋಬಳಿಗಳು

ಬದಲಾಯಿಸಿ
  1. ಗಬ್ಬೂರು
  2. ಜಾಲಹಳ್ಳಿ :
  3. ಅರಕೇರ


ಊಟಿ ಚಿನ್ನದ ಗಣಿ

ಬದಲಾಯಿಸಿ
ಇದಕ್ಕೆ ಈ ಹೆಸರು ಬರಲು ಕಾರಣವೆನೆಂದರೆ ಇಲ್ಲಿ ನೀರಿನ ಬುಗ್ಗೆ ಜಾಸ್ತಿ ಇರುವುದರಿಂದ ಈ ಹೆಸರು ಬಂತು ಎಂದು ಹೇಳಲಾಗುತ್ತಿದೆ ಮುಂದೆ ಚಿನ್ನದ ಗಣಿ ಎಂದು ಬರಲು ಕಾರಣ ಏನೆಂದರೆ ಇಲ್ಲಿ ದೇಶದ ಏಕೈಕ ಚಿನ್ನದ ಗಣಿಯಾದ ಹಟ್ಟಿ ಚಿನ್ನದ ಗಣಿಯ ಒಂದು ಉಪವಿಭಾಗ ಆದುದರಿಂದ ಇಲ್ಲಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಕಳುಸಲಾಗುತ್ತಿದೆ {ಕಪ್ಪುಕಲ್ಲು ಮರಳು} ಅದಕ್ಕೆ ಈ ಹೆಸರು ಬಂತು ಇದು ಈ ಊರಿನ ಹೆಸರಿನ ಇತಿಹಾಸ

ಭೌಗೋಳಿಕ ಲಕ್ಷಣಗಳು

ಬದಲಾಯಿಸಿ
  1. ಇದು ಉತ್ತರ ಕರ್ನಾಟಕದ ಪ್ರದೇಶವಾದುದರಿಂದ ಇಲ್ಲಿ ಬಿಸಿಲು ಜಾಸ್ತಿ ಮಳೆಯು ತೀರಾ ಕಡಿಮೆ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ ಧಾರ್ಮಿಕ ಹಬ್ಬಗಳು ಇಲ್ಲಿ ಊರಿನ ಆರಾಧ್ಯ ದೈವ ಎಂದರೆ ಶ್ರೀದುರ್ಗಾದೇವಿ ವರ್ಷಕ್ಕೆ ಒಂದು ಬಾರಿ ಜಾತ್ರೆಯು ಎಳ್ಳ ಅಮಿವಾಸ್ಯೆ ದಿನದಂದು ನಡೆಯುತ್ತದೆ ಈ ಜಾತ್ರೆಗೆ ಸುತ್ತಲಿನ ತಾಲೂಕು ಜಿಲ್ಲೆಯ ಜನರು ಆಗಮಿಸುತ್ತಾರೆ ತಾವು ಬೇಡಿಕೊಂಡ ಹರಕೆಯನ್ನು ತೀರಿಸುತ್ತಾರೆ ಹಾಗೆ ಮೋಹರಂ ದೀಪಾವಳಿ ದಸರಾ ಅನೇಕ ಹಬ್ಬ ಹರಿದಿನಗಳು ನಡೆಯುತ್ತವೆ

ಕೃಷ್ಣಾ ನದಿಯ ತಟದಲ್ಲಿ ಅಲ್ಲಮ ಪ್ರಭುಲಿಂಗೇಶ್ವರ ದೇವಸ್ಥಾವಿದೆ. ಇದು ೧೨ನೇ ಶತಮಾನದ ಪ್ರಸಿದ್ದ ಶರಣ ವೈರಾಗ್ಯ ಮೂರ್ತಿ ಶೂನ್ಯ ಸಿಂಹಾಸನಾಧೀಶ ಶ್ರೀ ಅಲ್ಲಮ ಪ್ರಭು ತಪೋಗೈದ ಪುಣ್ಯ ಭೂಮಿ.

ಪ್ರತಿ ವರ್ಷ ಯುಗಾದಿ ಹಬ್ಬದ ನಂತರ ಬರುವ ಪಂಚಮಿಯಂದು ಬೃಹತ್ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ವಿಶೇಷತೆ ಎಂದರೆ ಬೃಹತ್ ಪ್ರಮಾಣದಲ್ಲಿ ದನದ ಜಾತ್ರೆ ನಡೆಯುತ್ತದೆ. ಶ್ರಾವಣದ ನಾಲ್ಕನೇ ಸೋಮವಾರ ತುಂಬಿ ಹರಿಯುವ ಕೃಷ್ಣ ನದಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಇದನ್ನು ನೋಡಲು ಎರಡು ಕಣ್ಣು ಸಾಲದು ಇದನ್ನು ನೋಡಿದಾಗ ಗಾಳಿಯು ನಿನ್ನದೆ ದೀಪವು ನಿನ್ನದೆ ಆರದಿರಲಿ ಬೇಳಕು ಎನ್ನುವ ಕವಿ ಸಾಲು ನೇನಪಾಗುತ್ತದೆ. ತುಂಬಿ ಹರಿಯುವ ನದಿಯಲ್ಲಿ ಗಾಳಿಯಲ್ಲಿ ಪ್ರಭುಲಿಂಗೇಶ್ವರನ ಜ್ಯೋತಿ ಪ್ರಕಾಶಮಾನವಾಗಿ ಹರಿಯುವದು ನೋಡಿದಾಗ ಕಲಿಯುಗದಲ್ಲೂ ದೈವ ಶಕ್ತಿ ಮೇಲೆ ನಂಬಿಕೆ ಬರುತ್ತದೆ. ಹಾಗೆಯೆ ಜನವರಿ ೧೪ ಮಕರ ಸಂಕ್ರಾಂತಿ ದಿನ ಜಿಲ್ಲೆಯ ಬಹುಭಾಗದ ಜನ ಸಂಕ್ರಾಂತಿ ಹಬ್ಬವನ್ನು ಆಚರಿಸಲು ಇಲ್ಲಿಗೆ ಬರುತ್ತಾರೆ. ವರ್ಷದಲ್ಲಿ ೩ ಬಾರಿ ವೈಭವಯುತ ಜಾತ್ರೆ ನಡೆಯುತ್ತದೆ.

ರಚನೆ;ಪ್ರಭುರಾಯ ದೊರೆ

ವಿಶೇಷತೆ

ಬದಲಾಯಿಸಿ
ಈ ಊರಿನ ವಿಶೇಷತೆ ಎಂದರೆ ಇಲ್ಲಿ ಚಿನ್ನದ ಗಣಿಯನ್ನು ನೀವು ಕಾಣಬಹುದು ಇದರಲ್ಲಿ ಸುಮಾರು 200 ಜನರು ಕೆಲಸವನ್ನು ಮಾಡುತ್ತಿದ್ದಾರೆ ಹಾಗೆಯೆ ಮೂರೂ ಕಾಲುವೆಗಳನ್ನು ಕಾಣಬಹುದು ಇದರಲ್ಲಿ ಒಂದು bridge ಮಾದರಿಯ ಕಾಲುವೆಯನ್ನು ಕಾಣಬಹುದು

ಆರ್ಥಿಕತೆ

ಬದಲಾಯಿಸಿ
  1. ಇಲ್ಲಿ ಬಡವರ್ಗ ಶ್ರೀಮಂತ ವರ್ಗವನ್ನು ಕಾಣಬಹುದು ಕೃಷಿಯು ಪ್ರಧಾನವಾದದ್ದು ಇಲ್ಲಿನ ಪ್ರಮುಖ ಬೆಳೆಗಳೆಂದರೆ ಸಜ್ಜೆ ಜೋಳ ಹತ್ತಿ ಸೂರ್ಯಕಾಂತಿ ಶೇಂಗಾ ಈರುಳ್ಳಿ ತೋಗರಿ ಮುಂತಾದವು ಬೆಳೆಗಳನ್ನ ಕಾಣಬಹುದು

ಜನಸಂಖ್ಯೆ

ಬದಲಾಯಿಸಿ
  1. ಈ ಊರಿನಲ್ಲಿ ಸುಮಾರು 300 ಮನೆಗಳು ಇವೆ 1500 ಜನಸಂಖ್ಯೆಯನ್ನು ಕಾಣಬಹುದು

ಧರ್ಮ ಮತ್ತು ಜಾತಿ

ಬದಲಾಯಿಸಿ
  1. ಇಲ್ಲಿ ಎಲ್ಲ ಹಿಂದೂ ಧರ್ಮದವರನ್ನು ಕಾಣುತ್ತೇವೆ ಬೇರೆ ಧರ್ಮದವರು ಯಾರು ಇಲ್ಲ ಇಲ್ಲಿ ಪ್ರಮುಖವಾಗಿ ನಾಯಕ ಮಾದಿಗ ಕುರುಬ ಜಾತಿಗಳನ್ನ ಹೆಚ್ಚಿನ ರೀತಿಯಲ್ಲಿ ಕಾಣುತ್ತೇವೆ

ನೆರೆಹೊರೆಯ ಊರುಗಳು

ಬದಲಾಯಿಸಿ
  1. ಮೂಡಲಗುಂಡ ಸುಣ್ಣದಕಲ್ ಯಲಾಗಟ್ಟ ಗಾಣಧಾಳ

ದೇವಾಲಯಗಳು

ಬದಲಾಯಿಸಿ
  1. ಶ್ರೀದುರ್ಗಾದೇವಿ ಆಂಜನೇಯ್ಯ ಬಸವಣ್ಣ ಹಸೇನ್ಸಾಬ್ ದರ್ಗಾ ಕೆಂಚಮ್ಮ ದ್ಯಾವಮ್ಮ

ಶಿಕ್ಷಣ

ಬದಲಾಯಿಸಿ
  1. ಇಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಸ ಹಿ ಪ್ರಾ ಶಾಲೆ ತಮ್ಮ ಊರಲ್ಲಿ ಓದುತ್ತಾರೆ ನಂತರ ಬೇರೆ ಕಡೆಗೆ ಎಂದರೆ ಪಕ್ಕದಲ್ಲಿ ಇರುವ ಊರಿಗೆ ಹೋಗುತ್ತಾರೆ.

ಮಲದಕಲ್

ಬದಲಾಯಿಸಿ

ಶ್ರೀ ಪರಮಾನಂದ ದೇವಸ್ಥಾನ ಮಲದಕಲ್ ಈ ದೇವಸ್ಥಾನವು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದಲ್ಲಿದೆ. ಈ ದೇವಸ್ಥಾನ ಮಲದಕಲ್ ಗ್ರಾಮದ ಬೆಟ್ಟದ ಮೇಲೆ ಅದ್ಭುತವಾಗಿ ನಿರ್ಮಾಣಗೊಂಡಿದೆ, ಈ ದೇವಸ್ಥಾನ ಮಳೆ ಬರದಿದ್ದರೆ ಭಜನೆಯ ಮೂಲಕ ಮಳೆರಾಯನ ಕೋರಿಕೆಯನ್ನು ಈ ದೇವಸ್ಥಾನದ ಮೂಲಕ ನಡೆಯುತ್ತದೆ ಕಾರ್ಯ ಶ್ರಾವಣ ಮಾಸದಲ್ಲಿ ನಿಂತು ಭಜನೆಯನ್ನು ಈ ದೇವಸ್ಥಾನದಲ್ಲಿ ನಡೆಸುತ್ತಾರೆ ಈ ದೇವಸ್ಥಾನ ಬೆಟ್ಟದ ಮೇಲೆ ಅದ್ಭುತವಾಗಿ ರಚನೆಗೊಂಡಿದ್ದು ಮಲದಕಲ್ ಆಕರ್ಷಣೀಯ ಸ್ಥಳವಾಗಿದೆ.

ಈ ದೇವಸ್ಥಾನಕ್ಕೆ ಮಲದಕಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ದರ್ಶನವನ್ನು ಪಡೆಯುತ್ತಾರೆ, ಈ ದೇವಸ್ಥಾನಗಳು ಅತಿ ಪ್ರಾಚೀನವಾದಂತಹ ದೇವಸ್ಥಾನವಾಗಿದೆ ಈ ದೇವಸ್ಥಾನದಲ್ಲಿ ಸುತ್ತಮುತ್ತಲು ಕಲ್ಲಿನಿಂದ ರಚನೆಗೊಂಡಿದ್ದು ಅದೇ ರೀತಿಯಾಗಿ ಈ ದೇವಸ್ಥಾನವು ಆಕರ್ಷಣೀಯ ಸ್ಥಳವಾಗಿ ಮಲದಕಲ್ಲಿನಲ್ಲಿದೆ

ಈ ದೇವಸ್ಥಾನದ ಮುಂಭಾಗದಲ್ಲಿ ಬಸವೇಶ್ವರ ಒಂದು ಮೂರ್ತಿ ಇದೆ, ಆ ಮೂರ್ತಿಯು ದೇವಸ್ಥಾನಕ್ಕೆ ಆಕರ್ಷಣೀಯವಾಗಿದೆ