ಕೆಂಭಾವಿ

ಭಾರತ ದೇಶದ ಗ್ರಾಮಗಳು


ಕೆಂಭಾವಿಯು ರಾಜ್ಯದ ೩೦ನೇ ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಬರುವ ಅತೀ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಪುರಸಭೆ ಕಾರ್ಯಾಲಯ ಹೊಂದಿದೆ, ಈ ಪಟ್ಟಣವು 23 ವಾರ್ಡಗಳನ್ನು ಹೊಂದಿದ್ದು .

ಕೆಂಭಾವಿ
Kembhavi
ಹೋಬಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಯಾದಗಿರಿ
Population
 (2001)
 • Total೧೩,೦೭೭
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
ಪಿನ್ ಕೋಡ್
585 216
ದೂರವಾಣಿ ಕೋಡ್08475

ಇತಿಹಾಸ

ಬದಲಾಯಿಸಿ

ಅಲ್ಲದೇ ಈ ಪಟ್ಟಣದಲ್ಲಿ ಬ್ರಿಟಿಷ ಕಾಲದಲ್ಲಿಯೇ ಸ್ಥಾಪಿತವಾದ (1918 ರಲ್ಲಿ) ಪೋಲಿಸ್ ಸ್ಟೇಷನ, 1957 ರಲ್ಲಿ ಸ್ಥಾಪಿತವಾದ ಮಾದರಿ ಪ್ರಾಥಮಿಕ ಶಾಲೆ ಇವೆ. ಸುಮಾರು ೧೧-೧೨ ನೇ ಶತಮಾನದಲ್ಲಿ ಕಲ್ಲ್ಯಾಣದ ಕಲಚೂರಿಗಳು ಕೆಂಭಾವಿಯನ್ನು ಉಪರಾಜ್ಯಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ್ದಾರೆ. ಇಲ್ಲಿ ಚಂಡಿಮರಸ ಎಂಬ ವಿಪ್ರ ಬ್ರಾಹ್ಮಣನು ಆಳ್ವಿಕೆ ಮಾಡುತ್ತಿದ್ದನು. ಈ ಪಟ್ಟಣವು ಅಗ್ರಹಾರವನ್ನು ಹೊಂದಿತ್ತು. ಈ ಪಟ್ಟಣದಲ್ಲಿ ಐತಿಹಾಸಿಕ ಸುಪ್ರಸಿದ್ದ ಶ್ರೀ ಭೋಗೇಶ್ವರ ದೇವಾಲಯವು ನೋಡುಗರಿಗೆ ಅತಿ ರಮಣೀಯವಾಗಿದೆ ಸುತ್ತಲೂ ನೀರು ಇದ್ದು ಮಧ್ಯದಲ್ಲಿ ಮಂದಿರವಿದೆ. ಹಾಗೂ ಪಂಚಲಿಂಗೇಶ್ವರ ದೇವಾಲಯ ಎಂದೇ ಪ್ರಸಿದ್ದವಾದ ಶ್ರೀ ರೇವಣಸಿದ್ದೇಶ್ವರ ದೇವಾಲಯವಿದೆ. ಇಲ್ಲಿ ಶರಣರಲ್ಲದೆ ಭೂ ರಘುಪತಿ ವಿಠಲದಾಸರು ಎಂಬ ದಾಸರು ಬಾಳಿ ಹೋದ ಪುಣ್ಯ ಭೂಮಿ. ಅಲ್ಲದೆ ಇಲ್ಲಿ ರಾಘವೇಂದ್ರಸ್ವಾಮಿಗಳ ಮಂದಿರ ಕೂಡಾ ಇದೆ. ಅಲ್ಲದೆ ಶರಣಬಸವೇಶ್ವರ ದೇವಾಲಯ ಮಾಸಾಬಿ ದರಗಾ ಹೊಂದಿದ ತಾಣ.

ಸೌಲಭ್ಯಗಳು

ಬದಲಾಯಿಸಿ

ಈ ಪಟ್ಟಣದಲ್ಲಿ ಉಪ ತಹಸಿಲ್ದಾರ ಕಛೇರಿ, ೧೧೦ಕೆವಿ ವಿದ್ಯುತ ವಿತರಣಾ ಕೇಂದ್ರ, ದೂರವಾಣ ಪರಿವತ೯ಕ ಕೇಂದ್ರ, ಸುಸಜ್ಜಿತ ಬಸ್ ನಿಲ್ದಾಣ, ಕೆಬಿಜೆಎನ್ಎಲ್ ಮುಖ್ಯ ಕಛೇರಿ, ಮುಖ್ಯ ಕಾಲುವೆಯು ಕೆಂಭಾವಿ ಪಟ್ಟಣದ ಒಳಭಾಗದಲ್ಲಯೇ ಹರಿದು ಹೋಗುತ್ತದೆ. ಈ ಮುಖ್ಯ ಕಾಲುವೆಯು ಕಿ.ಮೀ೭೪ ರಿಂದ್ ೭೮ ಕಿ.ಮೀ ಉದ್ದ ಹೊಂದಿದೆ.

ಶೈಕ್ಷಣಿಕ ಸಂಸ್ಥೆಗಳ ಅಂಕಿ ಅಂಶಗಳು

ಬದಲಾಯಿಸಿ
  • ಸರಕಾರಿ ಪ್ರಾಥಮಿಕ ಶಾಲೆಗಳು : 11
  • ಖಾಸಗಿ ಪ್ರಾಥಮಿಕ ಶಾಲೆಗಳು : 8
  • ಸರಕಾರಿ ಪ್ರೌಢ ಶಾಲೆಗಳು 3
  • ಮೊರಾರ್ಜಿ ದೇಸಾಯಿ ವಸತಿ ಶಾಲೆ : 01
  • ಖಾಸಗಿ ಪ್ರೌಢ ಶಾಲೆ 3
  • ಸರಕಾರಿ ಪದವಿ ಪೂರ್ವ ಕಾಲೇಜು : 01 (ಕಲಾ, ವಾಣೀಜ್ಯ, ವಿಜ್ಞಾನ)
  • ಖಾಸಗಿ ಪದವಿ ಪೈರ್ವ ಕಾಲೇಜು : 02
  • ಸರಕಾರಿ ಪದವಿ ವಿದ್ಯಾಲಯ 01 ( ಬಿ.ಎ, ಬಿಎಸ್ಸಿ, ಬಿಕಾಂ)
  • ಐ.ಟಿ.ಐ ಕಾಲೇಜುಗಳು : 02

ಹಣಕಾಸು ಸಂಸ್ಥೆಗಳು

ಬದಲಾಯಿಸಿ
  • ಭಾರತೀಯ ಸ್ಟೇಟ್ ಬ್ಯಾಂಕ್
  • ಕರ್ನಾಟಕ ಬ್ಯಾಂಕ್
  • ಕೆನರಾ ಬ್ಯಾಂಕ್
  • ಪ್ರಗತಿ ಕೃಷ್ಣಾ ಬ್ಯಾಂಕ್
  • ಎಚ್.ಡಿ.ಎಫ್,ಸಿ ಬ್ಯಾಂಕ್
"https://kn.wikipedia.org/w/index.php?title=ಕೆಂಭಾವಿ&oldid=1196751" ಇಂದ ಪಡೆಯಲ್ಪಟ್ಟಿದೆ