ಕಾಖಂಡಕಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಕಾಖಂಡಕಿ ಗ್ರಾಮವು ವಿಜಯಪುರ ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೩೪ ಕಿ. ಮಿ. ಇದೆ.

ಕಾಖಂಡಕಿ
ಕಾಖಂಡಕಿ
village
Population
 (೨೦೧೨)
 • Total೧೫೦೦೦

ಚರಿತ್ರೆ ಬದಲಾಯಿಸಿ

ಕಾಖಂಡಕಿ ಗ್ರಾಮವು ಮಹಿಪತಿ ದಾಸರ ತಪೋಭೂಮಿಯಾಗಿತ್ತು. ಜಿಲ್ಲೆಯಲ್ಲಿ ಯೋಗಿಗಳೆಂದು ಖ್ಯಾತಿಹೊಂದಿದವರು ಕಾಖಂಡಕಿಯ ಶ್ರೀಮಹಿಪತಿದಾಸರು. ಎರಡನೇ ಅಲಿ ಆದಿಲ್‌ಶಾಹಿ (ಕ್ರಿ.ಶ.೧೬೫೬-ಕ್ರಿ.ಶ.೧೬೭೨) ವಿಜಾಪುರವನ್ನು ಆಳುತ್ತಿದ್ದ ಕಾಲದಲ್ಲಿ ಬಾದಶಹನ ಆಸ್ಥಾನದಲ್ಲಿ ದಿವಾನರಾಗಿದ್ದ ಶ್ರೀಮಹಿಪತಿರಾಯರು ಸಾರವಾಡದ ಶ್ರೀಭಾಸ್ಕರ ಸ್ವಾಮಿಗಳ ಅನುಗ್ರಹಕ್ಕೆ ಒಳಗಾಗಿ ಅಗ್ರಹಾರವಾಗಿದ್ದ ಕಾಖಂಡಕಿಗೆ ಬಂದು ಯೋಗಸಾಧನೆ, ಅನುಷ್ಠಾನದಲ್ಲಿ ತೊಡಗಿ ಆಧ್ಯಾತ್ಮಿಕ ಲೋಕದಲ್ಲಿ ಉನ್ನತ ಶಿಖರಕ್ಕೆ ತಲುಪಿದರು. ಕನ್ನಡ, ಮರಾಠಿ, ಹಿಂದಿ ಮಿಶ್ರಭಾಷೆಗಳಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿ ಶ್ರೇಷ್ಠ ದಾಸರಾಗಿದ್ದಾರೆ. ಕಾಖಂಡಕಿಯಲ್ಲಿ ಶ್ರೀಮಹಿಪತಿದಾಸರ ಮತ್ತು ಶ್ರೀಕೃಷ್ಣರಾಯರ ವೃಂದಾವನಗಳಿವೆ.

ಕಾಖಂಡಕಿ ಕಾರಹುಣ್ಣಿಮೆ

ಇದು ಕಾಖಂಡಕಿಯ ಗ್ರಾಮದಲ್ಲಿ ನಡೆಯುವ ವಿಶಿಷ್ಟ ಕಾರಹುಣ್ಣಿಮೆಯ ದೃಷ್ಯ. ರಾಜ್ಯಾದ್ಯಂತ ಕಾರಹುಣ್ಣಿಮೆಯ ಸಂಭ್ರಮ ನಡೆದರೆ, ಅವತ್ತು ಈ ಊರಲ್ಲಿ ಕಾರಹುಣ್ಣಿಮೆಯ ಆಚರಣೆ ನಡೆಯುವುದೇ ಇಲ್ಲ. ರಾಜ್ಯದ ಕಾರಹುಣ್ಣಿಮೆ ಆಚರಣೆಯಾದ ಏಳು ದಿನಗಳ ಅನಂತರ ಕಾಖಂಡಕಿಯಲ್ಲಿ ಕಾರಹುಣ್ಣಿಮೆಯ ಆಚರಣೆ ನಡೆಯುತ್ತದೆ. ಹೀಗೇಕೆ?ಅದಕ್ಕೊಂದು ಹಿನ್ನೆಲೆ ಇದೆ. ಇತಹಾಸ ಏನು ಹೇಳುತ್ತದೆ?

ಇತಹಾಸ

ಕಾರಹುಣ್ಣಿಮೆಯ ದಿವಸ ಊರ ಅಗಸಿ ಬಾಗಲಿಗೆ ಕೊಬ್ಬರಿ ಬಟ್ಟಲುಗಳನ್ನು ಕಟ್ಟಿ ಅದರಲ್ಲಿ ಕಾಳುಗಳನ್ನು ಕಟ್ಟಿರುತ್ತಾರೆ. ಇದನ್ನು ಕರಿ ಎನ್ನುವರು. ಎರಡು ಎತ್ತಗಳನ್ನು ಕೊಬ್ಬರಿ ಬಟ್ಟಲು ಕಟ್ಟಿದ ದಾರವನ್ನು ಹರಿದುಕೊಂಡು ಹೋಗುವಂತೆ ಓಡಿಸಲಾಗುತ್ತದೆ. ಅದರ ಮೂಲಕ ಹಿಂಗಾರಿನ ಬೆಳೆ ಸಮೃದ್ಧಿಯಾಗಿ ಬೆಳೆಯುತ್ತದೆಯೋ ಅಥವಾ ಮುಂಗಾರಿನ ಬೆಳೆ ಸಮೃದ್ಧವಾಗಿ ಬೆಳೆ ಬೆಳೆಯುತ್ತದೆಯೋ ಎಂಬ ಭವಿಷ್ಯವನ್ನು ಅರ್ಥೈಸಿಕೊಳ್ಳುತ್ತಾರೆ ರೈತರು.

ಬಹಳಷ್ಟು ವರುಷಗಳ ಹಿಂದೆ ಕಾಖಂಡಕಿ ಊರಿನ ಯುವಕನೊಬ್ಬ, ಸುತ್ತಲಿನ ಏಳು ಊರಿನ ಕರಿ ಹರಿದುಕೊಂಡು ಓಡಿ ಬಂದ. ಹುಡುಕಾಟದ ಅನಂತರ ಅವನು ಸಿಕ್ಕಿದ್ದು ಏಳು ದಿನಗಳ ಮೇಲೆ. ಅಂದಿನಿಂದ ತಮ್ಮೂರಿನ ಕರಿ ಕಳೆದುಕೊಂಡ ಸುತ್ತಲಿನ ಏಳು ಗ್ರಾಮಗಳಲ್ಲಿ ಈವರೆಗೂ ಕಾರಹುಣ್ಣಿಮೆಯ ಆಚರಣೆಯೇ ಇಲ್ಲ. ಇದು ಜನಜನಿತ ಕಥೆ . ಹೀಗಾಗಿ ಏಳು ದಿನಗಳ ಅನಂತರ ಶೌರ್ಯದ ಸಂಕೇತವಾಗಿ ಕಾಖಂಡಕಿಯಲ್ಲಿ ಕಾರಹುಣ್ಣಿಮೆಯನ್ನು ಆಚರಿಸಲಾಗುತ್ತದೆ.

ಇಲ್ಲಿ ಕರಿ ಆಡುವ ಆಟ ನಡೆಯುತ್ತದೆ. ಅವತ್ತು ಬೆಳಗಿನಿಂದಲೇ ಸಂಭ್ರಮದ ವಾತಾವರಣ ಆವರಿಸಿಕೊಳ್ಳುತ್ತದೆ. ರೈತರೆಲ್ಲಾ ಎತ್ತುಗಳಿಗೆ-ಹಸುಗಳಿಗೆ ಬೆಳಗಿನಿಂದ ಬಣ್ಣ ಹಚ್ಚಿ ಸಿಂಗಾರಗೊಳಿಸುವರು. ಈರುಳ್ಳಿಯನ್ನು ದುಂಡಗೆ ಹೋಳಿ, ಹೋಳನ್ನು ಬಣ್ಣದಲ್ಲಿ ಅದ್ದಿ ದನಕರುಗಳ ಮೇಲೆ ಒತ್ತುವರು. ನೋಡಲು ಚಿತ್ತಾರದಂತೆ ಕಾಣುವುದು. ಗೊಂಡೆ ಹಾಕಿ, ಹವಳದ ಸರಗಳನ್ನು ಹಾಕಿ ರೈತರು ಆನಂದಿಸುವರು. ಕೊರಳಲ್ಲಿ ಗೆಜ್ಜೆ ಸರಗಳನ್ನು ಕಟ್ಟಿ ನಿನಾದದ ಸವಿಯನ್ನು ಉಣ್ಣುವರು.

ಮೆರವಣಿಗೆ

ಉಳ್ಳವರು ತಮ್ಮ ಎತ್ತುಗಳನ್ನು ಮೆರವಣಿಗೆಗೆ ಸನ್ನದ್ಧಗೊಳಿಸುವರು. ಕರಡಿ ಮಜಲು,ಸನಾದಿಯ ತಾಳದೊಂದಿಗೆ ಕುಣಿಯುವವರ ಹೆಜ್ಜೆ ಮೇಳೈಸಿ ಹರುಷದ ಕೇ. . ಕೇ. . ಮುಗಿಲು ಮುಟ್ಟುತ್ತದೆ. ಮೆರವಣಿಗೆಯ ಸಡಗರ ಮುಗಿಯುತ್ತಿದ್ದಂತೆಯೇ ಕರಿ ಆಟಕ್ಕೆ ವೇದಿಕೆ ಸಿದ್ಧವಾಗಿರುತ್ತದೆ. ಊರ ಅಗಸಿಯ ಮುಂದೆ ಯುವಕರ ತಂಡ ಇರಿಯುವ ಎತ್ತುಗಳನ್ನು ಹಿಡಿದು ತರುತ್ತಾರೆ. ಒಂದೊಂದು ಎತ್ತಿಗೆ ನಾಲ್ಕೈದು ಹಗ್ಗಗಳನ್ನು ಕಟ್ಟಿರುತ್ತಾರೆ. ಎದೆಯ ಗುಂಡಿಗೆ ಗಟ್ಟಿಯಿದ್ದವನು ಎತ್ತಿನ ಮುಂದೆ ಬರುತ್ತಾನೆ. ಇರಿಯಲು ಬರುವಂತೆ ಕೆಣಕುತ್ತಾನೆ. ಇದನ್ನು ಕರಿ ಆಡಿಸುವುದೆನ್ನುತ್ತಾರೆ. ಹಾಗೆ ಕರಿ ಆಡಿಸಲು ಬರುವವನು ಮೈಯೆಲ್ಲಾ ಕಣ್ಣಾಗಿರಬೇಕು. ಬೇರೆ ಬೇರೆ ದಿಕ್ಕುಗಳಿಂದ ಓಡುತ್ತ ನೆಗೆಯುತ್ತ ಬರುವ ಎತ್ತುಗಳ ಕಡೆಗೆ ಲಕ್ಷ್ಯವಿರಬೇಕು. ಮೈಮರೆತರೆ ಓಡಿ ಬರುವ ಎತ್ತುಗಳು ಎತ್ತಿ ನಭದೆಡೆಗೆ ಚಿಮ್ಮುತ್ತವೆ. ಈ ಆಟ ಸುಮಾರು ಎರಡು ಗಂಟೆಗಳವರೆಗೆ ರೋಮಾಂಚಕಾರಿಯಾಗಿ ನಡೆಯುತ್ತದೆ. ಈ ಅವಧಿಯಲ್ಲಿ ಅಗಸಿಯ ಮುಂದಿನ ಮೈದಾನದಲ್ಲೆಲ್ಲ ನೋಡಿದ ಕಡೆಗೆಲ್ಲಾ ಎತ್ತುಗಳ ಓಡಾಟ,ನೆಗೆದಾಟ,ಹಗ್ಗಗಳ ತೊಡರುವಿಕೆ,ಬಣ್ಣ ಬಣ್ಣದ ಅಂಗಿಗಳನ್ನು ತೊಟ್ಟು ಹಗ್ಗ ಹಿಡಿದುಕೊಂಡು ಬರುವ ಯುವಕರ ತಂಡ…ಈ ದೃಷ್ಯಗಳೇ ತುಂಬಿಕೊಳ್ಳುತ್ತವೆ.

ಕೆಲವೊಂದು ಎತ್ತುಗಳು ದಶಕ ವರುಷಗಳಿಂದ ನಿರಂತರವಾಗಿ ಕರಿ ಆಟದಲ್ಲಿ ಭಾಗವಹಿಸಿದ ಉದಾಹರಣೆಗಳು ಕಾಣ ಸಿಗುತ್ತವೆ. ಅಂತಹ ಎತ್ತುಗಳ ಮೇಲೆ ಸವಿವರವಿರುವ ಬಟ್ಟೆಯ ಝೂಲವನ್ನೂ ಕಾಣಬಹುದು. ಕಾರಹುಣ್ಣಿಮೆಯಲ್ಲಿ ಕರಿಯಾಡಿಸಲೆಂದೇ ಹೋರಿಗಳನ್ನು ಕಟ್ಟಿ ಮೇಯಿಸುವವರೂ ಇದ್ದಾರೆ.

ರೋಚಕ ಈ ಆಟವನ್ನು ಕಣ್ತುಂಬಿಕೊಳ್ಳಲು ದೂರ ದೂರದಿಂದ ಜನರು ಬರುತ್ತಾರೆ. ನೆರೆಯ ಮಹಾರಾಷ್ಟ್ರದ ಜನರೂ ಆಗಮಿಸುತ್ತಾರೆ. ಮಾಳಿಗೆಗಳ ಮೇಲೆ ಕುಳಿತು ವೀಕ್ಷಿಸುತ್ತಾರೆ. ಅನಂತರ ಊರ ಗೌಡರ ಎತ್ತುಗಳಿಂದ ಕರಿ ಹರಿಯುವ ಮೂಲಕ ತೆರೆ ಎಳೆಯಲಾಗುತ್ತದೆ. ಕರಿ ಹರಿಯಲು ಎತ್ತುಗಳನ್ನು ಹಿಂಬರಿಕೆಯಾಗಿ ನಡೆಸುತ್ತಾ ಕರೆತರುವುದು ಇಲ್ಲಿನ ಇನ್ನೊಂದು ವಿಶೇಷ.

ಕಾಖಂಡಕಿ ಕಾರಹುಣ್ಣಿಮೆ ಪ್ರಯುಕ್ತ ನಡೆಯುವ ಕರಿ ಹರಿಯುವ ಹಾಗೂ ಹೋರಿ ಬೆದರಿಸುವ ಆಟ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ಕಾರ ಹುಣ್ಣಿಮೆಯಾದ ಏಳುದಿನಕ್ಕೆ ಆಚರಿಸುತ್ತ ಎಲ್ಲೆಡೆ ತನ್ನದೆ ಆದ ಜನಪ್ರಿಯತೆ ಪಡೆದಿದೆ. ಮೈದಾನದಲ್ಲಿ ಎತ್ತುಗಳನ್ನು ಹಿಡಿಯಲು ಯುವ ಕರು ನಡೆಸಿದ ಕಸರತ್ತು ಜನಮನಸೂರೆಗೊಳಿಸುವಂತಿತ್ತು.

ಭವಿಷ್ಯದ ಬೆಳೆ ನಿರ್ಧಾರ

ರಾಜ್ಯದಲ್ಲಿ ವಿಶಿಷ್ಟ ಜಾನಪದ ಪರಂಪರೆ, ಇತಿಹಾಸಹೊಂದಿದೆ. ಈ ಬಾರಿ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಎತ್ತುಗಳು ಮೈದಾನಕ್ಕಿಳಿದಿದ್ದವು. ಮೈದಾನದಲ್ಲಿ ಕರಿ ಸಂಭ್ರಮ ನಡೆಯುತ್ತಿರುವಾಗ ಕಾಖಂಡಕಿ ಗ್ರಾಮದ ಗೌಡರ ಕೆಂಪು ಮತ್ತು ಬಿಳಿ ವರ್ಣದ ಎತ್ತುಗಳು ವಾದ್ಯಮೇಳಗಳೊಂದಿಗೆ ಗೌಡರ ಮನೆಯಿಂದ ಹಿಂದೆ ಹೆಜ್ಜೆ ಹಾಕುತ್ತವೆ. ಗ್ರಾಮದ ಅಗಸಿ ಬಾಗಿಲಲ್ಲಿ ಪೂಜೆಗೊಂಡು ಗ್ರಾಮದ ಒಳಗೆ ಓಡುತ್ತವೆ. ಮೊದಲು ಯಾವ ವರ್ಣದ ಎತ್ತು ಗೌಡರ ಮನೆ ತಲುತ್ತದೆ. ಅದರ ಮೇಲೆ ಆ ವರ್ಷದ ಬೆಳೆಯನ್ನು ನಿರ್ಧರಿಸಲಾಗುತ್ತದೆ. ಈ ಬಾರಿ ಬಿಳಿ ಎತ್ತು ಮುಂದೆ ಬಂದಿದ್ದರಿಂದ ಜೋಳ, ಕುಸುಬೆ, ಬಾಳೆ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ಗ್ರಾಮಸ್ಥರು ಭಾವಿಸಿದ್ದುಂಟು.

ಕಾಖಂಡಕಿ ಕಾರ ಹುಣ್ಣಿಮೆ ಹಿನ್ನೆಲೆ ನಡೆದ ಹೋರಿಗಳ ಬೆದರಿಸುವ ಸ್ಪರ್ಧೆ ನೋಡಲು ಜನರು ಮನೆ ಮಾಳಿಗೆ ಮೇಲೆ ನಿಂತು ಸಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹಿಸುತ್ತಾರೆ.

ಭೌಗೋಳಿಕ ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ ಬದಲಾಯಿಸಿ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ ಬದಲಾಯಿಸಿ

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 7038 ಇದೆ. ಅದರಲ್ಲಿ 3608 ಪುರುಷರು ಮತ್ತು 3430 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ ಬದಲಾಯಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ ಬದಲಾಯಿಸಿ

 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ ಬದಲಾಯಿಸಿ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ ಬದಲಾಯಿಸಿ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು ಬದಲಾಯಿಸಿ

ಶ್ರೀ ಮಹಿಪತಿ ದಾಸರ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಸ್ಥಾನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಶ್ರೀ ಭೀರೇಶ್ವರ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಜೈ ಗುರುದೇವ ಆಶ್ರಮಾ ಶ್ರೀಶ್ರೀಶ್ರೀ ಸ೦ದೀಪ್ ಗುರುಜಿ ನಿರ್ಮಿಸಿದ್ದಾರೆ

ಮಸೀದಿಗಳು ಬದಲಾಯಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ ಬದಲಾಯಿಸಿ

ಗ್ರಾಮದ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ ಮತ್ತು ತೋಟಗಾರಿಕೆ ಬದಲಾಯಿಸಿ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ ಬದಲಾಯಿಸಿ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ ಬದಲಾಯಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ ಬದಲಾಯಿಸಿ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ ಬದಲಾಯಿಸಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬಗಳು ಬದಲಾಯಿಸಿ

ಪ್ರತಿವರ್ಷ ಶ್ರೀ ಮಹಿಪತಿ ದಾಸರ ಜಾತ್ರಾ ಮಹೋತ್ಸ ವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ ಬದಲಾಯಿಸಿ

  • ಸರಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ಕಾಖಂಡಕಿ
  • ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ, ಕಾಖಂಡಕಿ
  • ಜ್ಞಾನ ಗಂಗೋತ್ರಿ ಪ್ರಾಥಮಿಕ ಶಾಲೆ, ಕಾಖಂಡಕಿ
  • ಪರಮಹಂಸ ಪ್ರಾಥಮಿಕ ಶಾಲೆ, ಕಾಖಂಡಕಿ
  • ಸರ್ಕಾರಿ ಪ್ರೌಢ ಶಾಲೆ, ಕಾಖಂಡಕಿ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಕಾಖಂಡಕಿ
  • ನ್ಯಾಶನಲ್ ಪದವಿ ಪೂರ್ವ ಮಹಾವಿದ್ಯಾಲಯ, ಕಾಖಂಡಕಿ

ರಾಜಕೀಯ ಬದಲಾಯಿಸಿ

ಗ್ರಾಮವು ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ತನ್ನದೇ ಆದ ಗ್ರಾಮಪಂಚಾಯಿತಿ ಹೊಂದಿದೆ. ಅದರಲ್ಲಿ ಖಿಲಾರಟ್ಟಿ ಮತ್ತು ಅಗಸನಳ್ಳಿ ಒಳಗೊಂಡಿದೆ.

ಗ್ರಾಮದ ಜಿ.ಎನ್.ಪಾಟೀಲ (ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ) ಶಾಸಕರಾಗಿ ಅವಿರೋಧ ಆಯ್ಕೆಯಾದ ಅಪರೂಪದ ರಾಜಕಾರಣಿ. 1962ರ ವಿಧಾನ ಸಭಾ ಚುನಾವಣೆಯಲ್ಲಿ ತಾಳಿಕೋಟೆ ಕ್ಷೇತ್ರದಲ್ಲಿ (ಈಗಿನ ದೇವರಹಿಪ್ಪರಗಿ, ಹಳೆಯ ಹೂವಿನ ಹಿಪ್ಪರಗಿ) ಕಾಂಗ್ರೆಸ್‌ನಿಂದ ಅವಿರೋಧ ಆಯ್ಕೆಯಾಗಿದ್ದರು.

ವಿಜಯಪುರ ಜಿಲ್ಲೆಯ ನೂತನ ತಾಲೂಕು ಬಬಲೇಶ್ವರ ವ್ಯಾಪ್ತಿಯ ಕಾಖಂಡಕಿ ಗ್ರಾಮದ ಜಿ.ಎನ್‌.ಪಾಟೀಲ (ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ) ಶಾಸಕರಾಗಿ ಅವಿರೋಧ ಆಯ್ಕೆಯಾದ ಅಪರೂಪದ ರಾಜಕಾರಣಿ. 1962ರ ಅಸೆಂಬ್ಲಿ ಚುನಾವಣೆಯಲ್ಲಿ ತಾಳಿಕೋಟೆ ಕ್ಷೇತ್ರದಲ್ಲಿ (ಈಗ ದೇವರಹಿಪ್ಪರಗಿ, ಹಳೆಯ ಹೂವಿನ ಹಿಪ್ಪರಗಿ) ಕಾಂಗ್ರೆಸ್‌ನಿಂದ ಅವಿರೋಧ ಆಯ್ಕೆಯಾಗಿದ್ದರು. ಅಂದರೆ ಅವರ ವಿರುದ್ಧ ಯಾರೂ ಸ್ಪರ್ಧಿಸಿರಲಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ. ಜಿ.ಎನ್‌.ಪಾಟೀಲರ ಸಂಬಂಧಿ ಇಂಗಳೇಶ್ವರದ ಮಡಿವಾಳಪ್ಪಗೌಡ ಪಾಟೀಲ ಹಾಗೂ ಬ್ಯಾಕೋಡ ಎಂಬುವವರು ನಾಮಪತ್ರ ಸಲ್ಲಿಸಿದ್ದರಾದರೂ ನಂತರ ಹಿಂಪಡೆದಿದ್ದರು. ಹೀಗಾಗಿ ಜಿ.ಎನ್‌.ಪಾಟೀಲರ ಅವಿರೋಧ ಆಯ್ಕೆ ಸಾಧ್ಯವಾಗಿತ್ತು.

ಅವಿರೋಧ ಆಯ್ಕೆ

ವಿಜಯಪುರ ಜಿಲ್ಲೆಯಲ್ಲಿ ಇದುವರೆಗೆ ನಡೆದ 13 ವಿಧಾನಸಭೆ ಚುನಾವಣೆಗಳಲ್ಲಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕಾಖಂಡಕಿಯ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾದ ಏಕೈಕ ಅಭ್ಯರ್ಥಿ. ಅವಿರೋಧ ಆಯ್ಕೆ ಸೇರಿ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 1962ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾಳಿಕೋಟೆ ವಿಧಾನಸಭೆ ಮತಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಗೊಂಡು ಮೊಟ್ಟ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

1962ರಲ್ಲಿ ವಿಜಯಪುರ ಜಿಲ್ಲೆಯ ಜಿ.ಎನ್‌.ಪಾಟೀಲ ಅವಿರೋಧ ಆಯ್ಕೆಯಾಗಿದ್ದರು.

ರಾಜಕೀಯ

ಮುಂದಿನ ಎರಡು ಚುನಾವಣೆಗಳಲ್ಲಿ ಇದೇ ಜಿ.ಎನ್‌.ಪಾಟೀಲರು ಕೂಡ ಇತರರೊಂದಿಗೆ ಪೈಪೋಟಿ ಎದುರಿಸಿಯೇ ಗೆಲ್ಲಬೇಕಾಯಿತು. ಆಗಿನ ಕಾಲಕ್ಕೇ ಬಿಎಸ್ಸಿ ಅಗ್ರಿಕಲ್ಚರ್‌ ಪದವಿ ಓದಿದ್ದ ಜಿ.ಎನ್‌.ಪಾಟೀಲ, 1967ರಲ್ಲಿ ಹೂವಿನಹಿಪ್ಪರಗಿ (ಈಗಿನ ದೇವರಹಿಪ್ಪರಗಿ) ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಅಂದು ಚುನಾವಣೆಗೆ ಇವರು ಮಾಡಿದ ಖರ್ಚು 6 ಸಾವಿರ ರೂ. ಮಾತ್ರ. ಕಾಂಗ್ರೆಸ್‌ ಒಡೆದು ಸಂಸ್ಥಾ ಕಾಂಗ್ರೆಸ್‌, ಆಡಳಿಕ ಕಾಂಗ್ರೆಸ್‌ ಎಂದಾದಾಗ ವೀರೇಂದ್ರ ಪಾಟೀಲರನ್ನು ಬೆಂಬಲಿಸಿದ ಜಿ.ಎನ್‌.ಪಾಟೀಲ, 1972ರ ಚುನಾವಣೆಯಲ್ಲಿ ತಿಕೋಟಾ (ಈಗಿನ ಬಬಲೇಶ್ವರ) ಸಂಸ್ಥಾ ಕಾಂಗ್ರೆಸ್‌ (ಎನ್‌ಸಿಒ) ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಎಸ್‌.ಎ.ಜಿದ್ದಿ ವಿರುದ್ಧ ಗೆಲುವು ಸಾಧಿಸಿದ್ದರು.

ನಿರ್ವಹಿಸಿದ ಸ್ಥಾನಗಳು

3 ಅವಧಿಗೆ ಶಾಸಕರಾಗಿದ್ದ ಇವರು 1977ರಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದರು. 1983-85ರತನಕ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು, ಬಿಎಲ್‌ಡಿಇ ಸಂಸ್ಥೆ ನಿರ್ದೇಶಕರೂ ಆಗಿದ್ದರು. ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕರಾಗಿದ್ದರು.

ಆರೋಗ್ಯ ಬದಲಾಯಿಸಿ

ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.

ಬ್ಯಾಂಕ್ ಬದಲಾಯಿಸಿ

  • ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕಾಖಂಡಕಿ

ದೂರವಾಣಿ ವಿನಿಮಯ ಕೇಂದ್ರ ಬದಲಾಯಿಸಿ

  • ದೂರವಾಣಿ ವಿನಿಮಯ ಕೇಂದ್ರ, ಕಾಖಂಡಕಿ

ಅಂಚೆ ಕಚೇರಿ ಬದಲಾಯಿಸಿ

  • ಅಂಚೆ ಕಚೇರಿ, ಕಾಖಂಡಕಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬದಲಾಯಿಸಿ

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಾಖಂಡಕಿ

ಜಿನುಗು ಕೆರೆ ಬದಲಾಯಿಸಿ

ಗ್ರಾಮದ ಹತ್ತಿರ ಎದಡು ಜಿನುಗು ಕೆರೆಗಳಿವೆ.

ಹಾಲು ಉತ್ಪಾದಕರ ಸಹಕಾರಿ ಸಂಘ ಬದಲಾಯಿಸಿ

  • ಹಾಲು ಉತ್ಪಾದಕರ ಸಹಕಾರಿ ಸಂಘ, ಕಾಖಂಡಕಿ

ಪ್ರಾಥಮಿಕ ಆರೋಗ್ಯ ಕೇಂದ್ರ ಬದಲಾಯಿಸಿ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಖಂಡಕಿ

ಪಶು ಚಿಕಿತ್ಸಾಲಯ ಬದಲಾಯಿಸಿ

  • ಪಶು ಚಿಕಿತ್ಸಾಲಯ, ಕಾಖಂಡಕಿ
"https://kn.wikipedia.org/w/index.php?title=ಕಾಖಂಡಕಿ&oldid=1163324" ಇಂದ ಪಡೆಯಲ್ಪಟ್ಟಿದೆ