ಸಂಕೇಶ್ವರವು ಬೆಳಗಾವಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದ್ದು ಹುಕ್ಕೇರಿ ತಾಲೂಕಿನಲ್ಲಿದೆ. ಸಂಕೇಶ್ವರ ನಗರವು ರಾಷ್ಟ್ರೀಯ ಹೆದ್ದಾರಿ ೪ ಹತ್ತಿರವಾಗಿದ್ದು, ಬೆಳಗವಿಯಿಂದ ಸುಮಾರು ೫೦ ಕಿ.ಮಿ ದೂರದಲ್ಲಿದೆ. ನಗರದ ಪಕ್ಕದಲ್ಲಿ ಹಿರಣ್ಯಕೇಶಿ ನದಿ ಹರಿದುಹೊಗುತ್ತಿದೆ.

ಸಂಕೇಶ್ವರ
ಸಂಕೇಶ್ವರ
Government
 • ಪುರಸಭೆ ಅಧ್ಯಕ್ಷಅಮರ ನಲವಡೆ
Population
 (೨೦೧೧)
 • Total೩೪೪೪೫

ಭೌಗೋಳಿಕ ಲಕ್ಷಣಗಳು ಬದಲಾಯಿಸಿ

ಸಂಕೇಶ್ವರ ನಗರವು ಸಮುದ್ರ ಮಟ್ಟದಿಂದ ೬೩೮ ಮೀ (೨೦೯೩ ಅಡಿ) ಏತ್ತರದಲ್ಲಿದ್ದು , ಸುಮಾರು 16°16′N 74°29′E / 16.27°N 74.48°E / 16.27; 74.48 ದಲ್ಲಿದೆ. ರಾಜಧಾನಿ ಬೆಂಗಳೂರಿನಿಂದ ೫೫೨ ಕಿ.ಮಿ ದೂರದಲ್ಲಿ ವಾಯವ್ಯ ದಿಕ್ಕಿನಲ್ಲಿ ನೆಲೆಸಿದ್ದು ಇತರ ಮಹಾನಗರ ಮುಂಬೈನಿಂದ ದಕ್ಷಿಣದಲ್ಲಿ ೫೦೦ ಕಿ.ಮಿ, ಹೈದರಾಬಾದನಿಂದ ಪಶ್ಛಿಮಕ್ಕೆ ೫೨೮ ಕಿ.ಮಿ ಹಾಗೂ ಪಣಜಿಯಿಂದ ೧೭೩ ಕಿ.ಮಿ ದೂರದಲ್ಲಿದೆ. ಇದು ಜಿಲ್ಲಾ ಕೇಂದ್ರದಿಂದ ೫೦ ಕಿ.ಮಿ ಉತ್ತರದಲ್ಲಿದೆ. ಸಂಕೇಶ್ವರವು ಬೆಳಗಾವಿ ಜಿಲ್ಲೆಯ ಪ್ರಮುಖ ನಗರಗಳಾದ ಗೋಕಾಕ್,ಚಿಕ್ಕೋಡಿ,ನಿಪ್ಪಾಣಿ,ಅಥಣಿ,ಬೈಲಹೊಂಗಲ,ಸೌಂದತ್ತಿ,ರಾಯಬಾಗ್ ಗಳೊಂದಾಗಿದೆ.

ಸಾರಿಗೆ ಬದಲಾಯಿಸಿ

ಸಂಕೇಶ್ವರವು ಕರ್ನಾಟಕ,ಗೋವಾ,ಮಹಾರಾಷ್ಟ್ರ ರಾಜ್ಯಗಳಿಗೆ ರಾಷ್ಟ್ರೀಯ ಹೆದ್ದಾರಿ ೪ ಯೊಂದಿಗೆ ಒಳ್ಳೆಯ ಸಾರಿಗೆ ವ್ಯವಸ್ಠೆಹೊಂದಿದ್ದು, ಸರಕಾರಿ ಬಸ್ ನಿಲ್ಡಾಣ ಹಾಗೂ ಬಸ್ ಘಟಕಹೊಂದಿದೆ. ಸಮಿಪಕ್ಕೆ ಘಟಪ್ರಭ (೩೨ ಕಿ.ಮಿ),ಬೆಳಗಾವಿ (೫೨ ಕಿ.ಮಿ.), ಕೊಲ್ಹಾಪುರ(೬೪ ಕಿ.ಮಿ) ರೈಲುನಿಲ್ದಾಣಗಳಿದ್ದು, ವಿಮಾನ ನಿಲ್ದಾಣವಗಿ ಬೆಳಗಾವಿ ಸಾಂಬ್ರ, ಬೆಂಗಳೂರು ಹಾಗೂ ಮುಂಬೈಯಿಂದ ವಿಮಾನ ಹಾರಟ ವ್ಯವಸ್ಥೆಯಿದೆ.

ಪ್ರವಾಸೋದ್ಯಮ ಬದಲಾಯಿಸಿ

ಶಂಕರಲಿಂಗ ದೇವಸ್ಥಾನ ಬದಲಾಯಿಸಿ

ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ನದಿಯ ದಡದಲ್ಲಿ ಸುಪ್ರಸಿದ್ಧ ಶಂಕರಲಿಂಗ ದೇವಸ್ಥಾನ (ಶಂಕರಲಿಂಗ ಮಠ) ಇದ್ದು, ಈ ದೇವಾಲಯವು ಕ್ರಿ.ಶ ೧೧೨೦ ಕ್ಕಿಂತ ಮೊದಲು ನಿರ್ಮಿಸಲಾಗಿದೆ ಎಂದು ಪ್ರತೀತಿ ಇದೆ. ಇದನ್ನು ದ್ರುಡಿಕರಿಸಲು ೩ ಕಲ್ಲಿನ ಮೇಲೆ ಬರಹ ಕೆತ್ತಲಾಗಿದ್ದು , ೧೧೯೯- ೧೨೧೮ ರ ಮಧ್ಯ ಭಾಗದಲ್ಲಿ ಕೆತ್ತಲಾಗಿದೆ. ಪ್ರತಿವರ್ಷ್ ರಥ ಸಪ್ತಮಿ ದಿನದಿಂದ ೩ ದಿನಗಳವರೆಗೆ ಜಾತ್ರಾ ಮಹೊತ್ಸವ ನಡೆಯುತ್ತದೆ. ಇಲ್ಲಿರುವ ಬೃಹತ್ ರಥವನ್ನು ಶಂಕರಲಿಂಗ ದೇವಸ್ಥಾನದಿಂದ ಬನಶಂಕರಿ ದೇವಸ್ಥಾನದ ವರೆಗೆ ತಂದು ನಿಲ್ಲಿಸಲಾಗುತ್ತದೆ. ತದನಂತರ ಒಂದು ದಿನದ ಪೂಜೆಯ ನಂತರ, ಪುನಃ ಶಂಕರಲಿಂಗ ದೇವಸ್ಥಾನಕ್ಕೆ ಎಳೆದು ತರುತ್ತಾರೆ.

ಹಿಡಕಲ್ ಜಲಾಶಯ (ರಾಜಾ ಲಖಮಗೌಡ ಜಲಾಶಯ) ಬದಲಾಯಿಸಿ

ಸಂಕೇಶ್ವರದಿಂದ ಸುಮಾರು ೨೫ ಕಿ.ಮಿ ದೂರದಲ್ಲಿ ಹಿಡಕಲ್ ಜಲಾಶಯವಿದ್ದು, ಒಂದು ಸುಂದರ ಪ್ರವಾಸಿತಾಣವಾಗಿ ಪರಿಣಮಿಸಿದೆ. ಈ ಜಲಾಶಯವನ್ನು ಕ್ರಿ.ಶ ೧೯೭೭ ರಲ್ಲಿ ಮಲಪ್ರಭ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಜಲಾಶಯದ ನೀರನ್ನು ಹೊಲಗದ್ದೆ ಹಾಗೂ ಸಂಕೇಶ್ವರ ಮತ್ತು ಹುಕ್ಕೇರಿ ಪಟ್ಟಣಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿದೆ.

ವಿದ್ಯಾ ಕೇಂದ್ರಗಳು ಬದಲಾಯಿಸಿ

  • ಟೌಣ ಪಂಚಾಯತ ವಿಜ್ಝ್ನ್ಯಾನ ಕಾಲೇಜು
  • ಹಿರಾ ತಾಂತ್ರಿಕ ಕಾಲೇಜು {http://www.hitnidasoshi.org/hit/index.html}[ಶಾಶ್ವತವಾಗಿ ಮಡಿದ ಕೊಂಡಿ]
  • ಕಲೆ ಮತ್ತು ವಾಣಿಜ್ಯ ಕಾಲೇಜು
  • ಹೊಮಿಯೊಪಥಿ ಕಾಲೇಜು
  • ನರ್ಸಿಂಗ ಕಾಲೇಜು
  • ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು