ಬೈಲಹೊಂಗಲ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬೈಲಹೊಂಗಲ ನಗರವು ಸುಮಾರು ಜಿಲ್ಲಾ ಕೇಂದ್ರ ದಿಂದ 45 km ದೂರದಲ್ಲಿ ಇದೆ. ಬೈಲಹೊಂಗಲ ಬೆಳಗಾವಿ ಜಿಲ್ಲೆಯ ಅತ್ಯಂತ ಜನಪ್ರಿಯ ದೊಡ್ಡ ತಾಲೂಕು ಗಳಲ್ಲಿ ಒಂದು ಉತ್ತರ ಕರ್ನಾಟಕ ಕದ ಅತೀ ವೇಗ ವಾಗಿ ಬೆಳೆಯುತ್ತಿರುವ ತಾಲೂಕು ಗಳ ಪೈಕಿ ಒಂದು . ಬೈಲಹೊಂಗಲ ನಾಡನ್ನು"ಕೆಚ್ಚೆದೆಯ ನಾಡು" ಎಂದು ಕರೆಯುತ್ತಾರೆ.ಇಲ್ಲಿನ ಜನರು ಕನ್ನಡ ಭಾಷೆ ಯನ್ನು ಮಾತನಾಡುತ್ತಾರೆ ಬೈಲಹೊಂಗಲ ನಗರದಲ್ಲಿ ಮೊಟ್ಟ ಮೊದಲ(1911) ರಲ್ಲಿ ಹತ್ತಿ ಕಾರ್ಖಾನೆ ಪ್ರಾರಂಭ ವಾದದ್ದು ಇಲ್ಲಿಯೇ .ಹಾಗೂ ಇಲ್ಲಿ ಸಬ್ ಡಿವಿಷನ್ ಕೂಡ ಆಗಿದೆ ಇದರಲ್ಲಿ ಕಿತ್ತೂರು ಸವದತ್ತಿ ರಾಮದುರ್ಗ ಯರಗಟ್ಟಿ ತಾಲೂಕು ಗಳು ಇದಕ್ಕೆ ಸೇರಿವೆ.ಗಂಡು ಗಳಿಗಳ ನಾಡು ಎಂದೇ ಪ್ರಸಿದ್ದಿ ಪಡೆದಿದೆ.

ಬೈಲಹೊಂಗಲ
ಬೈಲಹೊಂಗಲ
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆBelgaum district
Area
 • Total೨೫.೯ km (೧೦�೦ sq mi)
Elevation
೬೬೪ m (೨,೧೭೮ ft)
Population
 (2011)
 • Total೮೮,೯೦೦
 • ಸಾಂದ್ರತೆ೪,೨೫೦.೬೫/km (೧೧,೦೦೯.೧/sq mi)
ಭಾಷೆಗಳು
 • Officialಕನ್ನಡ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
591 102
Telephone code08288
ವಾಹನ ನೋಂದಣಿKA-24

•ಇತಿಹಾಸ : ಬಯಲು + ಹೊನ್ನು +ಗಲ್ಲು ಅಂದರೆ( ಚಿನ್ನದ ಮೈದಾನ) ಬೈಲು ಹೊನ್ನು ಗಲ್ಲು ಎಂದೇ ಕರೆಯುತ್ತಿದ್ದರು ಅನಂತರ ಬೈಲಹೊಂಗಲ ಎಂದು ಪ್ರಸಿದ್ಧ ವಾಯಿತು.ಹಾಗೂ ಸ್ವತಂತ್ರ ಹೋರಾಟ ಗಾರರ ನಾಡು ಎಂದೇ ಪ್ರಸಿದ್ಧ

• ಬೈಲಹೊಂಗಲ ನಾಡು ಸ್ವತಂತ್ರ ಹೋರಾಟ ಗಾರರ ನಾಡು ಎಂದೇ ಪ್ರಸಿದ್ದಿ ಪಡಿದಿದೆ ಇಲ್ಲಿನ ಪ್ರಮುಖ ಸ್ವತಂತ್ರ ಹೋರಾಟ ಗಾರ ರೆಂದರೆ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಬೆಳವಡಿ ವಡ್ಡರ ಎಲ್ಲಣ್ಣ, ಬಿಚ್ಚುಗತ್ತಿ ಚನ್ನ ಬಸಪ್ಪ,ಮುಂತಾದವರು ಹಾಗೂ ಇಲ್ಲಿನ ಜನರು ಕೆಚ್ಚೆದೆಯ ಗುಂಡಿಗೆ ಜನರಾಗಿದ್ದಾರೆ

• ಪ್ರವಾಸಿ ತಾಣಗಳು : ಮರಡಿ ಬಸವೇಶ್ವರ ದೇವಸ್ಥಾನ, ರಾಣಿ ಚನ್ನಮ್ಮ ನವರ ಸಮಾಧಿ, ಮೂರು ಸಾವಿರ ಮಠ, ತಿರುಳ ಗನ್ನಡ ನಾಡು ಒಕ್ಕು0ದ, ಮಲಪ್ರಭಾ ನದಿ ಸೇತುವೆ, MK ಹುಬ್ಬಳ್ಳಿ ಗಂಗಬಿಕಾ ದೇವಸ್ಥಾನ ಕಿತ್ತೂರು ಕೋಟೆ ಮುಂತಾದ ಪ್ರಸಿದ್ಧ ತಾಣಗಳ ನ್ನು ಹೊಂದಿದೆ

•ಉದ್ಯೋಗ :ಈ ನಾಡಿನ ಜನರು ಮುಖ್ಯ ವಾಗಿ ಕೃಷಿ ಯನ್ನೇ ಅವಲಂಬಿಸಿದ್ದಾರೆ ಇಲ್ಲಿ ಹರಿಯುವ ಪ್ರಸಿದ್ಧ ಮಲಪ್ರಭಾ ನದಿಯು ಈ ನಾಡಿನ ಜೀವ ನದಿ ಯಾಗಿದೆ ಈ ನದಿ ನಿರಿಂದ ಈ ಭಾಗದ ಜನರು ಕೃಷಿ ಅವಲಂಬಿಸಿದ್ದಾರೆ ಇಲ್ಲಿನ ಪ್ರಮುಖ ಬೆಳೆ ಗಳೆಂದರೆ ಹತ್ತಿ ಕಡಲೆ ಜೋಳ ಗೋಧಿ ಮೆಕ್ಕೆಜೋಳ ಕಬ್ಬು ಇಲ್ಲಿ ಹೆರಳ ವಾಗಿ ಬೆಳೆ ಯುತ್ತಾರೆ