(ಮಸೀದಿ) ಇಸ್ಲಾಮ್ ಮತದ ಅನುಯಾಯಿಗಳು ಪ್ರಾರ್ಥನೆ ಮಾಡುವ ಸ್ಥಳ. ಮಸೀದಿ ಪದದ ಮೂಲ ಅರಾಬಿಕ್ ಭಾಷೆಯ "ಮಸ್ಜಿದ್". ಮೂಲ ಅರಾಬಿಕ್ ಭಾಷೆಯಲ್ಲಿ ಸಣ್ಣ, ಖಾಸಗಿ ಮಸೀದಿಗಳು ಮತ್ತು ದೊಡ್ಡದಾದ ಸಾರ್ವಜನಿಕ ಮಸೀದಿಗಳಿಗೆ ಬೇರೆಬೇರೆ ಪದಗಳಿದ್ದರೂ ಕನ್ನಡದಲ್ಲಿ "ಮಸೀದಿ" ಎಂಬ ಪದ ಎಲ್ಲ ರೀತಿಯ ಇಸ್ಲಾಮಿಕ್ ಪ್ಪಾರ್ಥನಾ ಸ್ಥಳಗಳಿಗೆ ಅನ್ವಯಿಸುತ್ತದೆ.

ಲಾಹೋರ್, ಪಾಕಿಸ್ತಾನದಲ್ಲಿರುವ ಬಾದ್ ಶಾಹಿ ಮಸೀದಿ


ಮಸೀದಿಯ ಮುಖ್ಯ ಉದ್ದೇಶ ಮುಸ್ಲಿಮರ ಪ್ರಾರ್ಥನೆಗೆ ಸ್ಥಳಾವಕಾಶವನ್ನು ಒದಗಿಸಿಕೊಡುವುದಾದರೂ, ಪ್ರಪ೦ಚದಾದ್ಯಂತ ಮಸೀದಿಗಳು ಮುಸ್ಲಿಮ್ ಸಮಾಜಕ್ಕೆ ಬೇರೆ ಬೇರೆ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವುದಕ್ಕೆ, ಮತ್ತು ಇಸ್ಲಾಮಿಕ್ ಶಿಲ್ಪಕಲೆಗೆ, ಹೆಸರಾಗಿವೆ. ೭ ನೆ ಶತಮಾನದಲ್ಲಿ ಕಟ್ಟಲ್ಪಡುತ್ತಿದ್ದ ತೆರೆದ ಪ್ರದೇಶಗಳಂತಿದ್ದ ಮಸೀದಿಗಳಿಗೂ, ಇಂದಿನ ಗುಂಬಗಳು, ಮಿನಾರ್ ಗಳನ್ನು ಒಳಗೊಂಡ ಶಿಲ್ಪಕಲೆಯನ್ನು ತಲುಪುವಲ್ಲಿ ಮಸೀದಿಗಳನ್ನು ಕಟ್ಟುವ ವಿಧಾನ, ಅವುಗಳ ವಿನ್ಯಾಸ, ಇತ್ಯಾದಿಗಳು ಸಾಕಷ್ಟು ವಿಕಾಸಗೊಂಡಿವೆ. ಅರೇಬಿಯದಲ್ಲಿ ಮೊಟ್ಟಮೊದಲು ಕಟ್ಟಲ್ಪಟ್ಟ ಮಸೀದಿಗಳು ಈಗ ಪ್ರಪಂಚದಾದ್ಯಂತ ಹರಡಿವೆ.


ಇಸ್ಲಾಮಿಕ್ ಧರ್ಮಗ್ರಂಥಗಳಲ್ಲಿ ಮಸೀದಿಸಂಪಾದಿಸಿ

ಇಸ್ಲಾಮ್ ಮತದ ಮುಖ್ಯ ಧರ್ಮಗ್ರಂಥವಾದ ಕುರಾನ್ ನ ಉದ್ದಕ್ಕೂ ಮಸೀದಿಗಳ ಉಲ್ಲೇಖ ಬರುತ್ತದೆ. ಆದರೆ ಇಲ್ಲಿ ಮಸೀದಿ ಎಂಬ ಪದವನ್ನು ಯಾವುದೇ ಧರ್ಮ ಅಥವಾ ಮತದ ಪ್ರಾರ್ಥನಾಸ್ ಥಳ ಎಂಬ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ಇದೇ ಅರ್ಥದಲ್ಲಿ ಈ ಪದದ ಅನೇಕ ಉಲ್ಲೇಖಗಳು ಮುಸ್ಲಿಮ್ ಸಂಪ್ರದಾಯಗಳ ಸಂಗ್ರಹವಾದ "ಹದಿತ್" ನಲ್ಲಿ ಸಹ ಕಂಡು ಬರುತ್ತವೆ.

"ಮಸೀದಿಗಳು ಅಲ್ಲಾಹನದ್ದಾಗಿವೆ. ಆದ್ದರಿಂದ ಅಲ್ಲಾಹನೊಂದಿಗೆ ಇತರ ಯಾರನ್ನೂ ಪ್ರಾರ್ಥಿಸಬಾರದು."

[ಕುರಾನ್, 72: 18]


ಚರಿತ್ರೆಸಂಪಾದಿಸಿ

ವಿಶಾಲವಾದ ಪ್ರವೇಶ ದ್ವಾರಗಳು, ಎತ್ತರದ ಮಿನಾರ್ ಗಳು, ಮೊದಲಾದವು ಮಸೀದಿಗಳ ಶಿಲ್ಪಕಲೆಯೊಂದಿಗೆ ನಿಕಟವಾದ ನ೦ಟು ಪಡೆದಿವೆ. ಆದರೆ ಮೊಟ್ಟಮೊದಲು ಬಳಸಲ್ಪಟ್ಟ ಮೂರು ಮಸೀದಿಗಳು ತೆರೆದ ಪ್ರದೇಶಗಳಷ್ಟೇ ಆಗಿದ್ದವು. ಮುಂದಿನ ಸಾವಿರ ವರ್ಷಗಳಲ್ಲಿ ಮಸೀದಿಗಳು ಬಹಳಷ್ಟು ವಿಕಾಸಗೊಂಡು ಇಂದಿನ ವಿನ್ಯಾಸ ಮತ್ತುಅಆಕರಗಳನ್ನು ಪಡೆದಿವೆ.


ಮೊದಲ ಮಸೀದಿಗಳುಸಂಪಾದಿಸಿ

ಇಸ್ಲಾಮಿಕ್ ನಂಬಿಕೆಯ ಪ್ರಕಾರ, ದೇವರಿಂದ ಅಪ್ಪಣೆ ಪಡೆದು ಇಬ್ರಾಹೀಂ ಮೊದಲ ಮಸೀದಿಯನ್ನು ಕಟ್ಟಿದ. ಇದೇ ಮೆಕ್ಕಾ ದಲ್ಲಿರುವ ಪ್ರಸಿದ್ಧ ಕಾಬಾ. ಇದರ ನಂತರ ಕಟ್ಟಲ್ಪಟ್ಟ ಮಸೀದಿ ಎ೦ದರೆ ಮದೀನಾ ದಲ್ಲಿರುವ ಕುಬಾ ಮಸೀದಿ. ಪ್ರವಾದಿ ಮಹಮ್ಮದ್(ಸ.ಅ) ಮೆಕ್ಕಾ ದಲ್ಲಿ ವಾಸಿಸುತ್ತಿದ್ದಾಗ ಕಾಬಾ ಅನ್ನು ಪ್ರಮುಖ ಮಸೀದಿಯಾಗಿ ಮನ್ನಿಸಿ ತಮ್ಮ ಪ್ರಾರ್ಥನೆ ಹಾಗೂ ಪ್ರವಚನಗಳನ್ನು ಅಲ್ಲಿಯೇ ನಡೆಸುತ್ತಿದ್ದರು. ಮಹಮ್ಮದ್ (ಸ.ಅ)ಮೆಕ್ಕಾ ಅನ್ನು ಕ್ರಿ.ಶ. ೬೩೦ ರಲ್ಲಿ ಗೆದ್ದ ನಂತರ ಕಾಬಾ ವನ್ನು ಮಸ್ಜಿದ್-ಅಲ್-ಹರಾಮ್ ಆಗಿ ಮಾರ್ಪಡಿಸಲಾಯಿತು. ಈ ಮಸೀದಿ ೧೫೭೭ ರಲ್ಲಿ ಇಂದಿನ ರೂಪವನ್ನು ಪಡೆಯಿತು.


ಮದೀನಾ ದಲ್ಲಿರುವ ಕುಬಾ ಮಸೀದಿಯನ್ನು ಸಹ ಪ್ರವಾದಿ ಮಹಮ್ಮದ್ (ಸ.ಅ) ರ ಆಗಮನಾನಂತರ (ಕ್ರಿ.ಶ. ೬೨೨) ಕಟ್ಟಿಸಲಾಯಿತು. ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮಹಮ್ಮದ್(ಸ.ಅ) ಈ ಮಸೀದಿಯಲ್ಲಿ ಮೂರು ದಿನ ತಂಗಿದ ನಂತರ ಮದೀನಾ ನಗರದೊಳಕ್ಕೆ ಪ್ರವೇಶಿಸಿದರು.


ನಂತರದ ಮಸೀದಿ ಎಂದರೆ ಮದಿನಾದಲ್ಲಿಯೇ ಮಹಮ್ಮದ್ (ಸ.ಅ)ಕಟ್ಟಿಸಿದ ಮಸ್ಜಿದ್-ಅಲ್-ನಬಾವಿ. ಇದನ್ನು ಕುಬಾ ಮಸೀದಿಯ ನಿರ್ಮಾಣ ಮುಗಿದ ಕೆಲವೇ ದಿನಗಳಲ್ಲಿ ಆರಂಭಿಸಲಾಯಿತು. ಮಹಮ್ಮದ್(ಸ.ಅ) ರು ನಡೆಸಿದ ಮೊಟ್ಟಮೊದಲ ಶುಕ್ರವಾರದ ಪ್ರಾರ್ಥನೆ ನಡೆದದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಈ ಮಸೀದಿಯ ನಿರ್ಮಾಣದ ನಂತರ, ಇಸ್ಲಾಮ್ ಧರ್ಮದಲ್ಲಿ ಇಂದು ಸರ್ವೇಸಾಮಾನ್ಯವಾಗಿರುವ ಅನೇಕ ಸಂಪ್ರದಾಯಗಳು ಈ ಮಸೀದಿಯಲ್ಲೇ ಆರಂಭವಾದವು. ಈ ಮಸೀದಿ ಪ್ರಾರ್ಥನಾಸ್ಥಳವಲ್ಲದೆ ಮಹಮ್ಮದ್ (ಸ.ಅ) ರ ಆಸ್ಥಾನವೂ ಆಗಿದ್ದಿತು. ಮಹಮ್ಮದ್(ಸ.ಅ)ರು ಯುದ್ಧಯೋಜನೆಗಳನ್ನು ಹಾಕುವುದು, ಆಸ್ಥಾನಿಕ ವ್ಯವಹಾರಗಳನ್ನು ನಡೆಸುವುದು, ಎಲ್ಲವೂ ಇಲ್ಲಿಯೇ. ಹಾಗೆಯೇ ಇದೇ ಸ್ಥಳದಲ್ಲಿ ರೋಗಿಗಳ ಚಿಕಿತ್ಸೆ, ಇತ್ಯಾದಿ ಕೆಲಸಗಳೂ ನಡೆಯುತ್ತಿದ್ದವು.

ಇಂದು, ಮೆಕ್ಕಾಮಸ್ಜಿದ್-ಅಲ್-ಹರಾಮ್, ಮದಿನಾಮಸ್ಜಿದ್-ಅಲ್-ನಬಾವಿ, ಮತ್ತು ಜೆರುಸಲೆಮ್ಅಲ್-ಅಕ್ಸಾ ಮಸೀದಿ ಇಸ್ಲಾಮ್ ಧರ್ಮದ ಮೂರು ಅತ್ಯಂತ ಪ್ರಸಿದ್ಧ ಕ್ಷೇತ್ರಗಳಾಗಿವೆ.

 
ಹಾಜಿ ಅಲಿ ದರ್ಗ
"https://kn.wikipedia.org/w/index.php?title=ಮಸೀದಿ&oldid=1165763" ಇಂದ ಪಡೆಯಲ್ಪಟ್ಟಿದೆ