ಕುರಾನ್ ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ. ಅಲ್-ಕುರಾನ್ ಅಲ್ಲಾಹನ ವಚನವಾಗಿದೆ, ಇದನ್ನು ಅಲ್ಲಾಹು ಮಲಕ್'ಗಳ ನಾಯಕರಾದ ಜಿಬ್ರೀಲ್ [ಅ]ರವರ ಮುಖಾಂತರ ಪ್ರವಾದಿ ಮುಹಮ್ಮದ್ [ಸ]ರವರಿಗೆ ಅವತೀರ್ಣಗೊಳಿಸಿದರು. "ನಿಶ್ಚಯವಾಗಿಯೂ ಇದು (ಕುರಾನ್) ಸರ್ವಲೋಕದ ಪ್ರಭುವಿನಿಂದ ಅವತೀರ್ಣಗೊಳಿಸಲ್ಪಟ್ಟಿದೆ. ರೂಹುಲ್ ಅಮೀನ್ (ಜಿಬ್ರೀಲ್ [ಅ]) ಇದನ್ನು ನಿಮ್ಮ ಹೃದಯಕ್ಕೆ ನೀವು ಮುನ್ನೆಚ್ಚರಿಕೆ ಕೊಡುವವಾರಾಗಲೆಂದು ತಂದಿರಿಸಿದ್ದಾರೆ. ಇದು ಅರಬೀ ಭಾಷೆಯಲ್ಲಿದೆ. ಮತ್ತು ಇದರ (ಕುರಾನ್) ಕುರಿತು ಹಿಂದಿನ ದಿವ್ಯಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ [ಕುರಾನ್, 26: 192-196]". ಕುರಾನಿನಲ್ಲಿ 114 ಸೂರಗಳು ಇದೆ. ಮೊದಲ ಸೂರದ ಹೆಸರು ಸೂರ ಅಲ್ ಫಾತಿಹಾ ಮತ್ತು ಕೊನೆಯ ಸೂರದ ಹೆಸರು ಸೂರ ಅನ್ನಾಸ್. ಕುರಾನ್ ಮೊದಲ ಬಾರಿಗೆ ರಮಝಾನ್ ತಿಂಗಳಲ್ಲಿ ಅವತೀರ್ಣವಾಗಿದೆ. "ಕುರಾನ್ ಅವತೀರ್ಣಗೊಂಡಿದ್ದು ರಮಝಾನ್ ತಿಂಗಳಲ್ಲಾಗಿದೆ. ಅದರಲ್ಲಿ ಜನರಿಗೆ ಸನ್ಮಾರ್ಗವೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸಿ ತಿಳಿಯುವ ಮಾನದಂಡವೂ ಇದೆ [ಕುರಾನ್, 2: 185]". ಕುರಾನ್ ಇನ್ನೊಂದು ಹೆಸರು ಪುರ್ಕಾನ್ ಎಂದು ಆಗಿದೆ. ಪುರ್ಕಾನ್ ಅಂದರೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಸಾಧನವೆಂದು. ಇದಲ್ಲದೆ ಅಲ್-ಕಿತಾಬ್ ಮತ್ತು ಅಧ್-ಧಿಕ್ರ್ ಎಂಬ ಹೆಸರುಗಳೂ ಕೂಡಾ ಇದೆ.

ಮುಸ್ಲಿಮರು ನಂಬಿಕೆ ಪ್ರಕಾರ ಅಲ್ಲಾಹು ನಾಲ್ಕು ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಅದು ಯಾವುದೆಂದರೆ ತೌರಾತ್ ಗ್ರಂಥವನ್ನು ಮೂಸಾ ನಬಿ (ಅ. ಸ)ರವರಿಗೆ, ಝಬೂರ್ ಗ್ರಂಥವನ್ನು ದಾವೂದ್ ನಬಿ (ಅ. ಸ) ರವರಿಗೆ, ಇಂಜೀಲ್ ಗ್ರಂಥವನ್ನು ಈಸಾ ನಬಿ (ಅ. ಸ)ರವರಿಗೆ ಮತ್ತು ಕುರಾನ್ ಗ್ರಂಥವನ್ನು ಮುಹಮ್ಮದ್ (ಸ)ರವರಿಗೆ.   

ಕನ್ನಡ ಅನುವಾದಗಳು

ಬದಲಾಯಿಸಿ
  • ದಿವ್ಯ ಕುರಾನ್, ಆರು ವಿದ್ವಾಂಸರು ಸೇರಿ ಅನುವಾದಿಸಿದ ಕುರಾನ್, 1978
  • ಪವಿತ್ರ ಕುರಾನ್, ಅಬ್ದುಲ್ ಗಫಾರ್ ಸುಳ್ಯ
  • ಕನ್ನಡಲ್ಲಿ ಕುರಾನ್, ಅಬ್ದುಸ್ಸಲಾಂ ಪುತ್ತಿಗೆ, 2012
  • ಕುರಾನ್ ವ್ಯಾಖ್ಯಾನ, ಅಬ್ದುಲ್ ಗಫಾರ್ ಸುಳ್ಯ

ಕುರಾನ್ ಕಲಿಯುವುದು ಮತ್ತು ಅದರ ಓದುವುದರ ಪ್ರತಿಫಲ

ಬದಲಾಯಿಸಿ

"ಉಸ್ಮಾನ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಕುರ್ ಆನ್ ಕಲಿಯುವವರು ಮತ್ತು ಕಲಿಸುವವರು ನಿಮ್ಮ ಪೈಕಿ ಅತ್ಯುತ್ತಮರು… [ಸಹೀಹ್ ಬುಖಾರಿ, ಅಧ್ಯಾಯ ಕುರ್ ಆನಿನ ಶ್ರೇಷ್ಠತೆ]". ಇನ್ನೊಂದು ವರದಿಯಲ್ಲಿ "ಉಸ್ಮಾನ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಕುರ್ ಆನ್ ಕಲಿಯುವವರು ಮತ್ತು ಕಲಿಸುವವರು ನಿಮ್ಮ ಪೈಕಿ ಅತ್ಯುತ್ತಮರು. ಅವರಿಂದಲೇ ವರದಿಯಾದ ಪ್ರಕಾರ, ಪ್ರವಾದಿ [ಸ] ಹೇಳಿದರು. ಕುರ್ ಆನ್ ಕಲಿಯುವವನು ಮತ್ತು ಕಲಿಸುವವನೇ ನಿಮ್ಮ ಪೈಕಿ ಅತಿ ಶ್ರೇಷ್ಠನು. [ಸಹೀಹ್ ಬುಖಾರಿ, ಅಧ್ಯಾಯ ಕುರ್ ಆನಿನ ಶ್ರೇಷ್ಠತೆ]"

ಕುರಾನ್ ಅತಿಂದ್ರಿಯ ಶಕ್ತಿ

ಮಾನವ ಸಮೂಹವನ್ನು ಸನ್ಮಾರ್ಗದ ಹಾದಿಯತ್ತ ಕೊಂಡೊಯ್ಯಲು ಜಗದ್ರಕ್ಷಕನಾದ ಅಲ್ಲಾಹನು ಪ್ರವಾದಿ ಮುಹಮ್ಮದ್ (ಸ) ರವರಿಗೆ ಅವತೀರ್ಣಗೊಳಿಸಿದ ಪವಿತ್ರ ಗ್ರಂಥವಾಗಿದೆ ಪವಿತ್ರ ಖುರಾನ್. “ಈ ವೇದಗ್ರಂಥದ ಅವತೀರ್ಣದಲ್ಲಿ ಸಂದೇಹಕ್ಕೆ ಆಸ್ಪದವೇ ಇಲ್ಲ. ಇದು ವಿಶ್ವಗಳ ಒಡೆಯನಿಂದ ಅವತೀರ್ಣಗೊಂಡಿದೆ ” (ಸಜದ-2). ಖುರ್‍ಆನಿನ ಅತೀಂದ್ರಿಯತೆಯನ್ನು ಸಾರುವ ಅನೇಕ ಪುರಾವೆಗಳಿವೆ. ಆದ್ದರಿಂದಲೇ ಖುರ್‍ಆನ್ ಮುಂದಿರಿಸಿದ ಸವಾಲುಗಳ ಮುಂದೆ ಖುರ್‍ಆನಿನ ವಿಮರ್ಶಕರು ಮಂಡಿಯೂರುತ್ತಾರೆ. ಈಗಲೂ ಆ ಸವಾಲುಗಳಿಗೆ ಎದೆಯೊಡ್ಡಲಾಗದೆ ಅದರ ವಿರುದ್ಧ ವಿಮರ್ಶೆ ಹಾಗೂ ಆರೊಪಗಳ ಸುರಿಮಳೆಗೈಯ್ಯುತ್ತಾರೆ.

ಖುರ್‍ಆನಿನ ಸವಾಲುಗಳು

ಮೂರು ಹಂತಗಳಲ್ಲಾಗಿ ಖುರ್‍ಆನ್ ವಿಮರ್ಶಕರಿಗೆ ಸವಾಲೆಸೆಯುತ್ತದೆ. ಮೊದಲು ಖುರ್‍ಆನಿಗೆ ಸಮನಾಗುವ ಒಂದು ಗ್ರಂಥವನ್ನು ರಚಿಸುವಂತೆ ಸವಾಲೆಸೆಯುತ್ತದೆ.

“ಅವರು ಸತ್ಯ ಹೇಳುವವರಾಗಿದ್ದರೆ ಇದೇ ಮಟ್ಟದ ಒಂದು ಸಂದೇಶವನ್ನು ರಚಿಸಿ ತರಲಿ” (ಸೂರಾ ತ್ವೂರ್-34). ಈ ಸವಾಲುಗಳ ಮುಂದೆ ಸೋತು ಸುಣ್ಣವಾದಾಗ ಕನಿಷ್ಟ ಹತ್ತು ಅಧ್ಯಾಯಗಳನ್ನು ರಚಿಸಲು ಆಜ್ಞಾಪಿಸುತ್ತದೆ. “ಪೈಗಂಬರರು ತಾವೇ ಈ ಗ್ರಂಥವನ್ನು ಸೃಷ್ಟಿಮಾಡಿಕೊಂಡರೆಂದು ಇವರು ಹೇಳುತ್ತಾರೆಯೇ? ಹೇಳಿರಿ: ಹಾಗಾದರೆ ಇದರಂತಹ ಹತ್ತು ಸೂರಃಗಳನ್ನು ಸೃಷ್ಠಿಸಿ ತನ್ನಿರಿ, ಮತ್ತು ಅಲ್ಲಾಹನ ಹೊರತು ನಿಮಗೆ ಕರೆಯಲು ಸಾಧ್ಯವಿರುವವರನ್ನೆಲ್ಲಾ ಕರೆದುಕೊಳ್ಳಿರಿ. ನೀವು ಸತ್ಯವಾದಿಗಳಾಗಿದ್ದರೆ ” (ಹೂದ್-13).

ಈ ಸವಾಲಿನ ಮುಂದೆಯೂ ಶತ್ರುಗಳು ಹೈರಾಣಾದರು. ತರುವಾಯ ಕೇವಲ ಮೂರು ಸೂಕ್ತಗಳಿರುವ ಸೂರಃ ಕೌಸರ್‍ನಂತಹ ಒಂದನ್ನಾದರೂ ಸಮರ್ಪಿಸಲು ಖುರ್‍ಆನ್ ಸವಾಲೆಸೆಯಿತು. “ಪೈಗಂಬರರೇ ಹೇಳಿರಿ, ನೀವು ಸತ್ಯವಾದಿಗಳಾಗಿದ್ದರೆ ಇದಕ್ಕೆ ಸಮಾನವಾದ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ, ಹಾಗೂ ಅಲ್ಲಾಹನ ಹೊರತು ನಿಮಗೆ ಯಾರನ್ನು ಕರೆಯಲು ಸಾಧ್ಯವೊ ಅವರನ್ನೆಲ್ಲಾ ಕರೆಯಿರಿ” (ಯೂನುಸ್-38).

ಸಾಹಿತ್ಯದಲ್ಲಿ ಪರಾಕಾಷ್ಠೆ ತಲುಪಿದ್ದ ಅರಬರಿಗೆ ಖುರ್‍ಆನ್ ಈ ಸವಾಲನ್ನೆಸೆಯುತ್ತದೆ. ಆದರೆ ಅವರು ಸೋತು ಸುಣ್ಣವಾಗಿ ತಲೆ ತಗ್ಗಿಸುತ್ತಾರೆ. ಯಾವುದೇ ಕಠಿಣ ಪ್ರಯತ್ನ ನಡೆಸಿಯೂ ಅವರಿಗೆ ಆ ಸವಾಲುಗಳನ್ನು ಸ್ವೀಕರಿಸಿ ಗೆಲ್ಲಲಾಗಲಿಲ್ಲ. ಖುರಾನಿನ ಸವಾಲುಗಳಿಗೆ ಉತ್ತರಿಸಲು ಯಾರಿಗೂ ಸಾಧ್ಯವಾಗಿಲ್ಲ. ಇನ್ನು ಸಾಧ್ಯವಾಗುವುದೂ ಇಲ್ಲ ಎಂಬುದು ವಾಸ್ತವ.

ಇಸ್ಲಾಮಿನ ತ್ವರಿತ ಬೆಳವಣಿಗೆಯನ್ನು ಕಂಡು ಹೊಟ್ಟೆಯುರಿಯಿಂದ ಇಸ್ಲಾಮಿನ ಶತ್ರುಗಳು ಪ್ರವಾದಿ(ಸ)ರ ಕಾಲದಲ್ಲೇ ಖುರ್‍ಆನ್ ವಿರುದ್ಧ ಆರೋಪ ಹೊರಿಸತೊಡಗಿದ್ದರು. ಇಂದು ಓರಿಯಂಟಲಿಸ್ಟರು ಹಾಗೂ ಕ್ರೈಸ್ತ ಮಿಶನರಿಗಳು ಈ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಕೆಲವು ವಿಚಾರವಾದಿಗಳು  ಕೂಡಾ ಖುರಾನ್ ವಿರುಧ್ಧ ಆರೋಪ ಹೊರಿಸುತ್ತಿದ್ದಾರೆ. ಆದರೆ ಎಲ್ಲಾ ವಿಮರ್ಶೆಗಳು ಹಾಗೂ ಆರೋಪಗಳು ಖುರಾನಿನ ಪ್ರಭಾವಳಿ ಮುಂದೆ ಮಂಕಾಗಿ ಹೋದವು.

ಬೈಬಲ್ ಪರಾಮರ್ಶಿತ ಕೆಲವು ಕಾರ್ಯಗಳನ್ನು ಯಹೂದಿ ಕ್ರೈಸ್ತರ ಒಡನಾಟದಿಂದ ಮುಹಮ್ಮದರು ಅರಿತರು ಹಾಗೂ ಅದನ್ನು ತನ್ನದೇ ಭಾಷೆಯಲ್ಲಿ ಖುರಾನ್ ಮೂಲಕ ಜನರ ಮುಂದೆ ಮಂಡಿಸಿದರು ಎಂದು ಅವರು ವಾದಿಸುತ್ತಾರೆ.

ಖುರಾನ್-ಬೈಬಲ್ ಓದಿದ ಯಾವನಿಗೂ ಈ ವಿಮರ್ಶೆಯಲ್ಲಿ ಹುರುಳಿಲ್ಲ ಎಂಬುದು ಹಗಲಿನಂತೆ ವ್ಯಕ್ತವಾಗುವುದು. ಆದರೂ ವಿಮರ್ಶಕರು ಸತತ ವಿಮರ್ಶೆ ಹಾಗೂ ಆರೋಪಗಳಲ್ಲಿ ಮಗ್ನರಾಗಿರುವುದರಿಂದ ವಸ್ತುನಿಷ್ಠವಾದ ಒಂದು ಅಧ್ಯಯನವು ಪ್ರಸ್ತುತವೆನಿಸುತ್ತದೆ.

ಪೂರ್ವಿಕ ಪ್ರವಾದಿಗಳಲ್ಲೂ ಅವರಿಗೆ ಅಲ್ಲಾಹನು ಅವತೀರ್ಣಗೊಳಿಸಿದ ವೇದಗ್ರಂಥಗಳಲ್ಲೂ ವಿಶ್ವಾಸ ತಾಳುವುದು ಓರ್ವ ಮುಸ್ಲಿಮನಿಗೆ ಕಡ್ಡಾಯವಾಗಿದೆ. ಪವಿತ್ರ ಖುರಾನ್ ಪೂರ್ವಕಾಲ ವೇದಗ್ರಂಥಗಳನ್ನು ಅಂಗೀಕರಿಸುತ್ತದೆ. ಹಾಗೂ ಅವುಗಳು ಸತ್ಯವೆಂದೂ ಅವುಗಳಲ್ಲಿ ವಿಶ್ವಾಸ ಹೊಂದಬೇಕೆಂದೂ ಸಾರುತ್ತದೆ.

“ನನಗಿಂತ ಮುಂಚಿನದ್ದಾಗಿರುವ ತೌರಾತನ್ನು ದೃಢಗೊಳಿಸುವವನಾಗಿಯೂ ಮತ್ತು ನಿಮಗೆ ನಿಷೇಧಿಸಲಾಗಿರುವ ಕೆಲವನ್ನು ಸಮ್ಮತಾರ್ಹಗೊಳಿಸಲು ನಾನು ಬಂದಿರುವೆನು”(ಆಲು ಇಂರಾನ್-50).

“ಖಂಡಿತ ನಾವು ತೌರಾತನ್ನು ಅವತೀರ್ಣಗೊಳಿಸಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿತ್ತು” (ಮಾಇದ-44).

“ಓ ಪ್ರವಾದಿಯರೇ, ಅವನು ಈ ಗ್ರಂಥವನ್ನು ಸತ್ಯಸಂಧವಾಗಿ, ಹಿಂದಿನ ವೇದಗ್ರಂಥಗಳ ದೃಢೀಕರಣವಾಗಿ ನಿಮಗೆ ಅವತೀರ್ಣಗೊಳಿಸಿದನು. ಇದಕ್ಕೂ ಮುನ್ನ ಜನರಿಗೆ ಮಾರ್ಗದರ್ಶನಕ್ಕಾಗಿ ತೌರಾತ್ ಹಾಗೂ ಇಂಜೀಲ್‍ನ್ನು ಅವತೀರ್ಣಗೊಳಿಸಿದ್ದನು.”(ಆಲು ಇಂರಾನ್ 3-4)

“ಆ ಪ್ರವಾದಿಗಳ ತರುವಾಯ ಮರ್ಯಮರ ಪುತ್ರ ಈಸಾರನ್ನು ಕಳುಹಿಸಿದೆವು. ಅವರು ತಮ್ಮ ಪೂರ್ವಕಾಲದ ತೌರಾತನ್ನು ದೃಢಪಡಿಸುವವರಾಗಿದ್ದರು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅದರಲ್ಲಿ ಸನ್ಮಾರ್ಗದರ್ಶನ ಮತ್ತು ಪ್ರಕಾಶವಿತ್ತು. ಅದು ಅವರಿಗೆ ಮುಂಚೆ ಇದ್ದ ತೌರಾತನ್ನು ದೃಢಪಡಿಸುವ ಸ್ಥಿತಿಯಲ್ಲೂ ದೇವಭಯವುಳ್ಳವರಿಗೆ ಮಾರ್ಗದರ್ಶನ ಮತ್ತು ಉಪದೇಶವಾಗಿ ಅವತೀರ್ಣವಾಗಿತ್ತು.”(ಮಾಇದ-46)

“ನಿಮ್ಮ ಪ್ರಭು ಆಕಾಶ ಮತ್ತು ಭೂಮಿಯಲ್ಲಿರುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ. ನಾವು ಕೆಲವು ಪ್ರವಾದಿಗಳಿಗೆ ಬೇರೆ ಕೆಲವರಿಗಿಂತ ಶ್ರೇಷ್ಠತೆಯನ್ನು ನೀಡಿದ್ದೇವೆ. ದಾವೂದರಿಗೆ ನಾವು ಝಬೂರನ್ನು ಕೊಟ್ಟಿದ್ದೇವೆ.” (ಇಸ್ರಾಅï-55)

ಎಲ್ಲಾ ವೇದಗ್ರಂಥಗಳಲ್ಲೂ ವಿಶ್ವಾಸಿಸಬೇಕೆಂದು ಖುರಾನ್ ಹೇಳುತ್ತದೆ.

“ಹೇಳಿರಿ: ಅಲ್ಲಾಹನಲ್ಲಿ ನಾವು ವಿಶ್ವಾಸವಿಟ್ಟೆವು. ನಮಗೆ ಅವತೀರ್ಣವಾದುದರಲ್ಲಿಯೂ ಇಬ್‍ರಾಹೀಂ, ಇಸ್ಮಾಈಲ್, ಇಸ್ಹಾಖ್, ಯಅಖೂಬ್ ಹಾಗೂ ಅವರ ಸಂತತಿಗಳಿಗೆ ಅವತೀರ್ಣವಾದುದರಲ್ಲಿಯೂ ಮೂಸಾ, ಈಸಾ ಹಾಗೂ ಇತರೆಲ್ಲಾ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತುದರಲ್ಲಿಯೂ ನಾವು ವಿಶ್ವಾಸವಿಟ್ಟೆವು. ಅವರಲ್ಲಿ ಯಾರ ಬಗ್ಗೆಯೂ ನಾವು ತಾರತಮ್ಯ ಕಲ್ಪಿಸುವುದಿಲ್ಲ. ” (ಆಲು ಇಂರಾನ್-84)

“ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹು ಮತ್ತು ಅವನ ದೂತರಲ್ಲಿ ಹಾಗೂ ಅವನು ತನ್ನ ದೂತರಿಗೆ ಅವತೀರ್ಣಗೊಳಿಸಿದ ವೇದಗ್ರಂಥದಲ್ಲಿ ಮತ್ತು ಅದಕ್ಕೆ ಮೊದಲು ಅವತೀರ್ಣಗೊಳಿಸಿದ ವೇದಗ್ರಂಥಗಳಲ್ಲೂ ವಿಶ್ವಾಸ ತಾಳಿರಿ. ಯಾವನಾದರೂ ಅಲ್ಲಾಹನನ್ನೂ ಆತನ ದೇವಚರರನ್ನೂ ಅವನ ವೇದಗ್ರಂಥಗಳನ್ನೂ ಅವನ ದೂತರನ್ನೂ ಪರಲೋಕವನ್ನೂ ನಿಷೇಧಿಸಿದರೆ ಅವನು ದಾರಿಗೆಟ್ಟು ಸತ್ಯದಿಂದ ಬಲುದೂರ ಸಾಗಿರುತ್ತಾನೆ.” (ನಿಸಾಅï 136)

“ಈ ಖುರಾನ್ ಅಲ್ಲಾಹನಲ್ಲದವರ ಸೃಷ್ಟಿಯಲ್ಲ. ನಿಜವಾಗಿ ಅದು ಹಿಂದೆ ಬಂದಿದ್ದ ದಿವ್ಯ ಸಂದೇಶದ ದೃಢೀಕರಣವೂ ದಿವ್ಯ ಗ್ರಂಥದ ವಿವರಣೆಯೂ ಆಗಿರುತ್ತದೆ. ಅದರಲ್ಲಿ ಯಾವುದೇ ಸಂದೇಹವೂ ಇಲ್ಲ. ಅದು ಸರ್ವಲೋಕಾಧಿಪತಿಯ ಕಡೆಯಿಂದ ಬಂದಿದೆ.” (ಯೂನುಸ್ 37)

“ನಾವು ನಿಮ್ಮ ಕಡೆಗೆ ಸಂದೇಶ ಕಳುಹಿಸಿದ ಗ್ರಂಥವೇ ಸತ್ಯವಾಗಿದ್ದು ಅದು ಈ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ” (ಫಾತಿರ್ 31)

ಆದರೆ ಪೂರ್ವಿಕರು ತಮಗೆ ದೊರೆತ ವೇದಗ್ರಂಥಗಳನ್ನು ತಿರುಚಿ ಅವರ ಇಚ್ಛೆಗನುಗುಣವಾಗಿ ದುವ್ರ್ಯಾಖ್ಯಾನ ಮಾಡಿದರು. ವೇದಗ್ರಂಥಗಳಲ್ಲಿನ ವಚನಗಳನ್ನು ಹಾಗೂ ಅವರು ಸ್ವತಃ ಹೆಣೆದ ವಚನಗಳನ್ನು ಸೇರಿಸಿ ಹೊಸ ಗ್ರಂಥ ರಚನೆ ಮಾಡಿ, ಬಳಿಕ ಅದು ತಮಗೆ ದೊರೆತ ದಿವ್ಯಗ್ರಂಥವೆಂದು ಪ್ರಚಾರ ಮಾಡಿದರು. ಇದನ್ನು ಖುರಾನ್ ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.

“ಖಂಡಿತವಾಗಿಯೂ ವೇದದವರಲ್ಲಿ ಕೆಲವರಿದ್ದಾರೆ. ಅವರು ನಾಲಗೆ ಕೊಂಕಿಸಿ ಓದುತ್ತಾರೆ. ಅದು ಕೂಡಾ ಗ್ರಂಥದ ಭಾಗವೆಂದು ನೀವು ಭಾವಿಸಲಿಕ್ಕಾಗಿ, ವಾಸ್ತವದಲ್ಲಿಅದು ಗ್ರಂಥದಲ್ಲಿರುವುದಿಲ್ಲ. ’ಇದು ಅಲ್ಲಾಹನ ಕಡೆಯದ್ದು’ ಎಂದು ಅವರು ಹೇಳುತ್ತಾರೆ. ನಿಜವಾಗಿ ಅದು ಅಲ್ಲಾಹನ ಕಡೆಯದ್ದಾಗಿರುವುದಿಲ್ಲ. ತಿಳಿದುಕೊಂಡೇ ಅವರು ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಾರೆ.” (ಆಲು ಇಂರಾನ್ 78)

“ಅವರ ಪೈಕಿ ಒಂದು ವಿಭಾಗದವರು ಅಲ್ಲಾಹನ ವಚನವನ್ನು ಕೇಳಿ ಅದನ್ನು ಅರ್ಥ ಮಾಡಿಕೊಂಡ ಬಳಿಕ ಕೂಡಾ ತಿಳಿದುಕೊಂಡೇ ತಿದ್ದುಪಡಿ ಮಾಡಿದರು” (ಬಖರ 75)

“ಯಹೂದಿಯರಲ್ಲಿ ಕೆಲವರು ವೇದದ ವಚನಗಳನ್ನು ಅವುಗಳ ಸ್ಥಾನದಿಂದ ಬದಲಾಯಿಸುವವರಿದ್ದಾರೆ.” (ನಿಸಾಅï 46)

“ಅನಂತರ ಅವರು ತಮ್ಮ ಕರಾರನ್ನು ಮುರಿದ ಕಾರಣಕ್ಕಾಗಿ ನಾವು ಅವರನ್ನು ಶಪಿಸಿದೆವು. ಮತ್ತು ಅವರ ಹೃದಯಗಳನ್ನು ಕಠಿಣಗೊಳಿಸಿದೆವು. ಅವರು ವಚನಗಳನ್ನು ಅವುಗಳ ಸ್ಥಾನದಿಂದ ಪಲ್ಲಟಗೊಳಿಸುವವರಾಗಿದ್ದಾರೆ.” (ಮಾಇದ 13)

“ಓ ರಸೂಲರೇ, ನಾವು ವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಹಾಗೂ ಯಹೂದಿಗಳ ಪೈಕಿ ಒಂದು ವಿಭಾಗದವರು ಸತ್ಯನಿಷೇಧಕ್ಕೆ ಧಾವಿಸುತ್ತಿರುವ ಅವಸ್ಥೆ ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಅವರು ಸುಳ್ಳು ವಾರ್ತೆಗಳಿಗೆ ಅತಿಯಾಗಿ ಕಿವಿಗೊಡುತ್ತಾರೆ.ಅವರು ದೇವಗ್ರಂಥದ ವಚನಗಳನ್ನು ಸ್ಥಾನಪಲ್ಲಟಗೊಳಿಸುತ್ತಾರೆ”. (ಮಾಇದ 41)

“ಓ ವೈದಿಕರೇ, ನೀವು ತಿಳಿದೂ ತಿಳಿದೂ ಸತ್ಯವನ್ನು ಅಸತ್ಯದೊಂದಿಗೆ ಯಾಕೆ ಬೆರೆಸುತ್ತಿದ್ದೀರಿ? ಸತ್ಯವನ್ನು ಯಾಕೆ ಮುಚ್ಚಿಡುತ್ತಿದ್ದೀರಿ?” (ಆಲು ಇಂರಾನ್ 71)

“ಸ್ವಹಸ್ತಗಳಿಂದ ಗ್ರಂಥ ಬರೆದು ತುಚ್ಛ ಬೆಲೆಯನ್ನು ಪಡೆಯುವ ಸಲುವಾಗಿ ಇದು ಅಲ್ಲಾಹನ ಕಡೆಯಿಂದ ಬಂದಿದೆ ಎನ್ನುವವರಿಗೆ ವಿನಾಶ ಕಾದಿದೆ. ಅವರ ಹಸ್ತಲಿಖಿತಗಳಿಂದ ಅವರಿಗೆ ವಿನಾಶವಿದೆ. ” (ಬಖರ 79)

ಖುರಾನಿನ ಅನೇಕ ಸೂಕ್ತಗಳಲ್ಲಿ ಪೂರ್ವಕಾಲ ವೇದಗ್ರಂಥಗಳನ್ನು ದೃಢೀಕರಿಸುವ ಅನೇಕ ಪರಾಮರ್ಶೆಗಳಿವೆ. ಅದು ವಾಸ್ತವದಲ್ಲಿ ಅಲ್ಲಾಹನಿಂದ ಅವತೀರ್ಣಗೊಂಡ ಪೂರ್ವಿಕ ಗ್ರಂಥಗಳ ಬಗ್ಗೆಯಾಗಿದೆಯೇ ಹೊರತು, ಪೂರ್ವಿಕರು ಹಸ್ತಕ್ಷೇಪ ನಡೆಸಿ, ದೇವರ ಮೇಲೆ ಗೂಬೆ ಕೂರಿಸಿದ ಗ್ರಂಥದ ಬಗ್ಗೆಯಲ್ಲ. ಒಂದೇ  ಉಗಮಸ್ಥಾನದಿಂದ ಅವತೀರ್ಣಗೊಳ್ಳುವ ಮೂಲಕ ಹಾಗೂ ದೈವಿಕ ವಿಶ್ವಾಸ, ಪರಲೋಕ ವಿಶ್ವಾಸ, ಪ್ರವಾದಿಗಳು, ಗ್ರಂಥಗಳು ಇತ್ಯಾದಿ ಮೌಲಿಕ ವಿಷಯಗಳಲ್ಲೆಲ್ಲಾ ಒಂದೇ ದರ್ಶನವನ್ನು ಹೊಂದುವ ಮೂಲಕ ಪೂರ್ವಿಕ ಗ್ರಂಥಗಳೊಂದಿಗೆ ಥಳುಕು ಹಾಕಿಕೊಂಡಿದೆ.

ಆದಂ (ಅ)ರಿಂದ ಈಸಾ(ಅ)ವರೆಗಿನ ಪ್ರವಾದಿ ಪರಂಪರೆಯ ಪ್ರತಿಯೋರ್ವ ಕೊಂಡಿಯೂ ಕಲಿಸಿಕೊಟ್ಟ ಸತ್ಯದರ್ಶನಗಳ ಪೂರ್ತೀಕರಣಕ್ಕಾಗಿಯಲ್ಲವೇ ಪ್ರವಾದಿಯವರು ಆಗಮಿಸಿದ್ದು ಹಾಗೂ ಖುರಾನ್ ಅವತೀರ್ಣಗೊಂಡಿದ್ದು?. ಅವರ ಪ್ರಬೋಧನಾ ಕಾರ್ಯಗಳಲ್ಲೂ ಮೌಲಿಕ ಕಾರ್ಯಗಳಲ್ಲೂ ಅದ್ಹೇಗೆ ಸಾಮ್ಯತೆ ಕಂಡು ಬಂದಿತು?. ಪ್ರವಾದಿ (ಸ)ರವರು ಪ್ರಸ್ತುತ ಲಭ್ಯವಿರುವ ಬೈಬಲ್ ಸಂಕಲನದಿಂದ ಖುರಾನ್‍ನನ್ನು ನಕಲು ಮಾಡಿಲ್ಲ. ಒಂದು ವೇಳೆ ಹಾಗಿದ್ದರೆ ಬೈಬಲ್‍ನ ಪ್ರಮಾದಗಳು ಪ್ರವಾದಿ(ಸ)ರವರಿಗೆ ಸೋಂಕಬೇಕಿತ್ತು. ವಾಸ್ತವವು ನೇರ ಭಿನ್ನವಾಗಿದೆ. ಬೈಬಲ್‍ನ ಕಟ್ಟುಕಥೆಗಳ ಶವಪರೀಕ್ಷೆ ಮಾಡಿ ಸತ್ಯವನ್ನು ಜನರಿಗೆ ತಿಳಿಹೇಳುವ ಕೆಲಸವನ್ನು ಖುರಾನ್ ಮಾಡಿತು. ಇದರ ಕುರಿತ ವಿಶಾಲ ಪರಾಮರ್ಶೆಗಿಂತ ಮುಂಚೆ ಬೈಬಲ್ ಗ್ರಂಥದ ಬಗ್ಗೆ ಸಾಮಾನ್ಯ ಜ್ಞಾನ ಹೊಂದಬೇಕಾಗಿದೆ.

ಅಲ್ಲಾಹು ಕುರಾನ್ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ್ದಾನೆ

ಬದಲಾಯಿಸಿ

ಇದಕ್ಕಿಂತ ಮೊದಲು ಅವತೀರ್ಣಗೊಂಡ ಗ್ರಂಥಗಳು ಇದರ ಮೊದಲ ಸ್ಥಿತಿಯಲ್ಲಿ ಇಲ್ಲ ಆದರೆ ಕುರಾನ್ ಗ್ರಂಥದ ಹೊರತು. "ಖಂಡಿತವಾಗಿಯೂ ಈ ಬೋಧನೆಯನ್ನು (ಕುರ್‌ಆನ್)ನನ್ನು ನಾವೇ ಇಳಿಸಿದ್ದೇವೆ. ಮತ್ತು ಇದರ ಸಂರಕ್ಷಕರೂ ನಾವೇ ಆಗಿದ್ದೇವೆ [ಕುರಾನ್, 15: 9]".

"https://kn.wikipedia.org/w/index.php?title=ಕುರಾನ್&oldid=1251453" ಇಂದ ಪಡೆಯಲ್ಪಟ್ಟಿದೆ