ರಂಜಾನ್ ಅಥವಾ ರಮದಾನ್ (ಅರೇಬಿಕ್‌ ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ನ ಸಮಯದಲ್ಲಿ ಉಪವಾಸ ನಡೆಯುತ್ತದೆ.

ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.

ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ.


ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಈದ್-ಉಲ್-ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಅಲ್ಲಿ ಬಡವ - ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ 'ಝಕಾತ್' ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ ಈದ್-ಉಲ್-ಫಿತರ್. ಇಸ್ಲಾಂ ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ ಈದ್-ಉಲ್-ಫಿತರ್ ಸಂದರ್ಭೋಚಿತವಾಗಿ 'ದಾನ್ಯ' ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ. ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಖಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ದಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ(ಪ್ರತೀ ವ್ಯಕ್ತಿಯ ಮೇಲೂ ಸುಮಾರು 3 ಕೆಜಿ - ಇದು ಮಝಹಬ್ ಗಳಿಗೆ ಅನುಸರಿಸಿ ಬದಲಾಗಬಹುದು). ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು!!!. ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ.

ಹಾಗಿದ್ದರೆ ಯೋಚಿಸಿ ನೋಡಿ ವಿಶ್ವದ ಎಲ್ಲ ಮುಸ್ಲಿಮ ಈ ದಾನವನ್ನು ನೀಡಿದರೆ ಕನಿಷ್ಟ ಒಂದು ವಾರವಾದರೂ ಹಸಿವಿಲ್ಲದ ವಾರ ವಾಗಿರಬಹುದು!!. "ಜಿಹಾದ್-ಜಿಹಾದ್" ಅನ್ನುವ ನಾಮಧಾರಿ ಮುಸ್ಲಿಮ "ಝಕಾತ್ - ಝಕಾತ್" (ದಾನ) ಅಂದರೆ ಇಂದು ಹಸಿವಿನಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು.

ಸಾಹೋದರ್ಯ ಭಾವ ತುಂಬಿಸುವ ಈದ್ ನ ಈ ದಿನ ಎಲ್ಲರೂ ದಾನ ಕರ್ಮಗಳಿಂದ ಸುಂದರವಾಗಿಸಲು, ಸೃಷ್ಟಿಕರ್ತ ನಮನ್ನು ಕರುಣಿಸಲೀ (ಆಮೀನ್) ಎಂದು ಪ್ರಾರ್ತಿಸುತ್ತೇನೆ. ಎಲ್ಲರಿಗೂ ಈದ್-ಉಲ್-ಫಿತರ್ (ದಾನ್ಯ ದಾನದ ಹಬ್ಬ) ನ ಶುಭಾಶಯಗಳು

"https://kn.wikipedia.org/w/index.php?title=ರಮಝಾನ್&oldid=1174439" ಇಂದ ಪಡೆಯಲ್ಪಟ್ಟಿದೆ