[ಓ ಪ್ರವಾದಿಯವರೇ!] ಹೇಳಿರಿ: 'ಅವನು ಅಲ್ಲಾಹು! ಏಕಮೇವನಾಗಿರುವನು. ಅಲ್ಲಾಹು ಸರ್ವರಿಗೂ ಆಶ್ರಯದಾತನಾಗಿರುವನು. ಅವನು (ಯಾರಿಗೂ) ಜನ್ಮವನ್ನು ನೀಡಿಲ್ಲ. ಅವನು (ಯಾರದೇ ಸಂತತಿಯಾಗಿ) ಜನಿಸಿದವನೂ ಅಲ್ಲ. ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ. (ಕುರ್ ಆನ್, 112: 1-4)


ಅಲ್ಲಾಹನ ಕುರಿತು ಒಂದು ನೋಟ:- ಅಲ್ಲಾಹನು ಏಕೈಕನು. ಅಲ್ಲಾಹನು ಒಬ್ಬ ದೇವ. ಅಲ್ಲಾಹನು ಜನಿಸಿದವನು ಅಲ್ಲ. ಅಲ್ಲಾಹನಿಗೆ ಮರಣವಿಲ್ಲ. ಅಲ್ಲಾಹನಿಗೆ ತಂದೆ ಇಲ್ಲ. ಅಲ್ಲಾಹನಿಗೆ ತಾಯಿ ಇಲ್ಲ. ಅಲ್ಲಾಹನಿಗೆ ಪತ್ನಿಯಿಲ್ಲ. ಅಲ್ಲಾಹನಿಗೆ ಮಕ್ಕಳು ಇಲ್ಲ. ಅಲ್ಲಾಹನಿಗೆ ಮಕ್ಕಳ ಅವಶ್ಯಕತೆ ಇಲ್ಲ. ಅಲ್ಲಾಹನಿಗೆ ಬೇರೆಯವರ ಸಹಾಯದ ಅವಶ್ಯಕತೆ ಇಲ್ಲ.


ಅಲ್ಲಾಹನು ನಮ್ಮ ಸೃಷ್ಟಿಕೃರ್ತ [ಅಲ್-ಖಾಲಿಕ್] ಅಲ್ಲಾಹನು ಏಲ್ಲವನ್ನು ಸೃಷ್ಟಿಸಿದನು. ಅಲ್ಲಾಹನು ಉಂಟುಮಾಡಿದನು ಎಲ್ಲವನ್ನು ಯಾವುದರ ಸಹಾಯವಿಲ್ಲದೆ. ಒಮ್ಮೆ ನಮ್ಮ ಮೇಲಿರುವ ಆಕಾಶ ಇರಲಿಲ್ಲ. ಒಮ್ಮೆ ನಾವು ವಾಸಿಸುತ್ತಿರುವ ಈ ಭೂಮಿ ಇರಲಿಲ್ಲ. ಒಮ್ಮೆ ಹೂವುಗಳು ಇರಲಿಲ್ಲ. ಒಮ್ಮೆ ಪ್ರಾಣೆಗಳು ಇರಲಿಲ್ಲ. ಒಮ್ಮೆ ಪಕ್ಷಿಗಳು ಇರಲಿಲ್ಲ. ಅಲ್ಲಾಹನು ಎಲ್ಲವನ್ನು ಉಂಟುಮಾಡಿದನು. ಅಲ್ಲಾಹನು ಆಕಾಶವನ್ನು ಉಂಟುಮಾಡಿದನು. ಅಲ್ಲಾಹನು ಸೂರ್ಯನನ್ನು ಆಕಾಶದಲ್ಲಿ ಇರಿಸಿದನು. ಅಲ್ಲಾಹನು ಚಂದ್ರನನ್ನು ಆಕಾಶದಲ್ಲಿ ಇರಿಸಿದನು. ಅಲ್ಲಾಹನು ನಕ್ಷತ್ರವನ್ನು ಆಕಾಶದಲ್ಲಿ ಇರಿಸಿದನು. ಅಲ್ಲಾಹನು ಈ ಭೂಮಿಯನ್ನು ಉಂಟುಮಾಡಿದನು. ಅಲ್ಲಾಹನು ಬರಡು ಭೂಮಿಯನ್ನು ಉಂಟುಮಾಡಿದನು. ಅಲ್ಲಾಹನು ಪರ್ವತಗಳನ್ನು ಉಂಟುಮಾಡಿದನು. ಅಲ್ಲಾಹನು ನದಿಗಳನ್ನು ಉಂಟುಮಾಡಿದನು. ಅಲ್ಲಾಹನು ಸಾಗರಗಳನ್ನು ಉಂಟುಮಾಡಿದನು. ಅಲ್ಲಾಹನು ಗಿಡಗಳನ್ನು ಉಂಟುಮಾಡಿದನು. ಅಲ್ಲಾಹನು ಮರಗಳನ್ನು ಉಂಟುಮಾಡಿದನು. ಅಲ್ಲಾಹನು ವಿಧ ವಿಧದ ರಂಗಿನ ಹೂವುಗಳನ್ನು ಉಂಟುಮಾಡಿದನು. ಅಲ್ಲಾಹನು ಎಲ್ಲಾ ತರದ ಪ್ರಾಣೆಗಳನ್ನು ಉಂಟುಮಾಡಿದನು: ದೊಡ್ಡ ಆನೆ, ಹುಲಿ, ಸಿಂಹ, ನಾಯಿ ಮತ್ತು ನಾಯಿ ಮರಿಯನ್ನು! ಅಲ್ಲಾಹನು ಅತೀ ಎತ್ತರಕ್ಕೆ ಹಾರುವ ಪಕ್ಷಿಗಳನ್ನು ಉಂಟುಮಾಡಿದನು. ಎಂತಹ ಆಶ್ಚರ್ಯಕರವಾದ ವಿಶ್ವವನ್ನು ಅಲ್ಲಾಹನು ಸೃಷ್ಟಿಸಿದನು! ಸ್ವಲ್ಪ ಯೋಚಿಸಿ ಅಲ್ಲಾಹನು ಈ ಏಲ್ಲಾ ವಸ್ತುವನ್ನು ಯಾವುದರ ಸಹಾಯವಿಲ್ಲದೆ ಉಂಟುಮಾಡಿದನು! ಯಾರಾದರೂ ಇದ್ದಾರೆಯೇ ಅಲ್ಲಾಹನಂತೆ ಉಂಟುಮಾಡಲು? ಅಲ್ಲಾಹನು ವಸ್ತುವನ್ನು ಯಾರ ಸಹಾಯ ವಿಲ್ಲದೆ ಉಂಟುಮಾಡುವುದನ್ನು ನಾವು ಸೃಷ್ಟಿಕೃರ್ತ ಎಂದು ಕರೆಯುತ್ತೇವೆ.


ಅದೃಶ್ಯ ಜ್ಜಾನ ಅಲ್ಲಾಹನಿಗೆ ಮಾತ್ರ:- ದೃಶ್ಯ ಮತ್ತು ಅದೃಶ್ಯ ಜ್ಜಾನಿ ಅಲ್ಲಾಹನಾಗಿದ್ದಾನೆ. ಆದುದರಿಂದ (ಅದರಲ್ಲಿ) ಅವರು ಸಹಭಾಗಿಗಳನ್ನು ಏರ್ಪದಿಸುವಿದರಿಂದ ಅವನು ಅತ್ಯುನ್ನತನಾಗಿರುತ್ತಾನೆ. [ಕುರಾನ್, ಅಲ್-ಮುಹ್'ಮಿನೂನ್, 23: 92] ಇನ್ನೊಂದು ಕಡೆ ಅಲ್ಲಾಹು ಹೇಳುತ್ತಾನೆ: ಹೇಳಿರಿ, ಅಲ್ಲಾಹನ ಹೊರತು ಭೂಮ್ಯಾಕಾಶಗಳಲ್ಲಿರುವ ಯಾರಿಗೂ ಅದ್ರಶ್ಯ ಜ್ಜಾನವಿಲ್ಲ. ಅವರನ್ನು ಯಾವಾಗ ಏಬ್ಬಿಸಲಾಗುವುದು ಎಂಬುವುದರ ಜ್ಜಾನ ಕೂಡಾ ಅವರಿಗಿಲ್ಲ [ಕುರಾನ್, ಅನ್ನಮ್ಲ್: 6: 65]. ಪ್ರವಾದಿ [ಸ]ರವರಿಗೂ ಅದೃಶ್ಯ ಜ್ಜಾನ ಇಲ್ಲ, ನೋಡಿ ಕುರಾನ್ ಏನು ಹೇಳುತ್ತದೆ ಎಂದು... ಓ ಪ್ರವಾದಿ! ಹೇಳು: ಅಲ್ಲಾಹ್ ಇಚ್ಛಿಸಿದವುಗಳ ಹೊರತು ನನ್ನ ಸ್ವಂತಕ್ಕಾಗಿ ಯಾವುದೇ ಒಳಿತುಗಳನ್ನಾಗಲಿ ಕೆಡುಕುಗಳನ್ನಾಗಲಿ ನಾನು ಒಡೆತನದಲ್ಲಿಟ್ಟುಕೊಂಡಿಲ್ಲ… [ಕುರಾನ್, ಅಲ್-ಅಹ್'ರಾಫ್, 7: 188]


ಅಲ್ ಅಸ್ಮಾಉಲ್ ಹುಸ್ನಾ:- "ಸುಂದರವಾದ ನಾಮಗಳು ಅಲ್ಲಾಹನದ್ದಾಗಿವೆ. ಆದ್ದರಿಂದ ಅವುಗಳೊಂದಿಗೆ ಅವನನ್ನು ಕರೆಯಿರಿ" [ಕುರಾನ್: 7: 180]. ಇನ್ನೊಂದು ಕಡೆ ಅಲ್ಲಾಹು ಹೇಳುತ್ತಾನೆ: "ಅಲ್ಲಾಹ್, ಅವನಲ್ಲದೆ ಆರಾಧಿಸಲರ್ಹರಾದವರು ಯಾರೂ ಇಲ್ಲ. ಅವನಿಗೆ ಸುಂದರವಾದ ನಾಮಗಳಿವೆ" [ಕುರಾನ್: 20: 8]. "ಹೇಳು, ಅಲ್ಲಾಹನು ಕರೆಯಿರಿ ಅಥವಾ ಅರಹ್ಮಾನ್ ನನ್ನು ಕರೆಯಿರಿ. ನೀವು ಯಾರನ್ನು ಕರೆದರೂ ಅವನಿಗೆ ಸುಂದರವಾದ ನಾಮಗಳಿವೆ" [ಕುರಾನ್: 17: 110]. ಅವನು ಅಲ್ಲಾಹನು. ಅವನಲ್ಲದೆ ಆರಾಧಿಸಲರ್ಹರು ಯಾರೂ ಇಲ್ಲ. ಅವನು ಅರಹ್ಮಾನ್ ಮತ್ತು ಅರಹೀಮ್ ಆಗಿದ್ದಾನೆ. ಅವನು ಅಲ್ಲಾಹನು. ಅವನಲ್ಲದೆ ಆರಾಧಿಸಲರ್ಹರಾದವರು ಯಾರೂ ಇಲ್ಲ. ಅವನು ಅಲ್ ಮಲಿಕ್, ಅಲ್ ಕುದ್ದೂಸ್, ಅಸ್ಸಲಾಮ್, ಅಲ್ ಮುಹ್ಮಿನ್, ಅಲ್ ಮುಹೈಮಿನ್, ಅಲ್ ಅಝೀಝ್, ಅಲ್ ಜಬ್ಬಾರ್, ಅಲ್ ಮತಕಬ್ಬಿರ್ ಆಗಿದ್ದಾನೆ. ನೀವು ಸಹಭಾಗಿಗಳನ್ನು ಉಂಟುಮಾಡುವುದರಿಂದ ಅಲ್ಲಾಹನು ಪರಮ ಪಾವನನಾಗಿದ್ದಾನೆ. ಅವನಾಗಿದ್ದಾನೆ ಅಲ್ಲಾಹ್, ಅಲ್ ಖಾಲಿಕ್, ಅಲ್ ಬಾರಿಹ್, ಅಲ್ ಮುಸವ್ವಿರ್. ಅವನಿಗೆ ಸುಂದರವಾದ ನಾಮಗಳಿವೆ. ಆಕಾಶಗಳಲ್ಲಿ ಮತ್ತು ಭುಮಿಯಲ್ಲಿರುವವರು ಅವನ ಪರಿಪಾವನತೆಯನ್ನುಕೊಂಡಾಡುತ್ತಾರೆ. ಅವನು ಅಲ್ ಅಝೀಝ್ ಮತ್ತು ಅಲ್ ಹಕೀಮ್ ಆಗಿದ್ದಾನೆ". [ಕುರಾನ್: 59: 22-24] 99 ಅಲ್ಲಾಹನ ಹೆಸರುಗಳು:- "ಅಲ್ಲಾಹನಿಗೆ ತೊಂಬತ್ತೊಂಬತ್ತು ಹೆಸರುಗಳಿವೆ, ನೂರರಿಂದ ಒಂದು ಕಡಿಮೆ. ಯಾರಾದರೂ ಅವುಗಳನ್ನು ಕಂಠಪಾಠ ಮಾಡಿದರೆ ಅವನು ಸ್ವರ್ಗವನ್ನು ಪ್ರವೇಶಿಸಿದನು. ಅವನು ಒಂಟಿಯಾಗಿದ್ದಾನೆ ಮತ್ತು ಬೆಸ ಸಂಖ್ಯೆಯನ್ನು ಅವನು ಇಷ್ಟಪಡುತ್ತಾನೆ". [ಬುಖಾರಿ, ಮುಸ್ಲಿಮ್] ಅಲ್ಲಾಹ್, ಅರ್ರಹ್ಮಾನ್, ಅರ್ರಹೀಮ್, ಅಲ್-ಮಲಿಕ್, ಅಲ್-ಕುದ್ದೂಸ್, ಅಸ್ಸಲಾಮ್, ಅಲ್-ಮುಹ್ ಮಿನ್, ಅಲ್-ಮುಹೈ ಮಿನ್, ಅಲ್-ಅಝೀಝ್, ಅಲ್-ಜಬ್ಬಾರ್, ಅಲ್-ಮುತಕಬ್ಬಿರ್, ಅಲ್-ಖಾಲಿಕ್, ಅಲ್-ಬಾರಿಹ್, ಅಲ್-ಮುಸವ್ವಿರ್, ಅಲ್-ಗಪ್ಫಾರ್, ಅಲ್-ಕಹ್ಹಾರ್, ಅಲ್-ವಹ್ಹಾಬ್, ಅರ್ರಝ್ಹಾಕ್, ಅಲ್-ಫತ್ತಾಹ್, ಅಲ್-ಅಲೀಮ್, ಅಲ್-ಕಾಬಿಝ್, ಅಲ್-ಬಾಸಿತ್, ಅಲ್-ಖಾಫಿಝ್, ಅರ್ರಫಿಹ್, ಅಲ್-ಮುಇಝ್ಹ್, ಅಲ್-ಮುಝಿಲ್ಲ್, ಅಸ್ಸಮೀಹ್, ಅಲ್-ಬಸೀರ್, ಅಲ್-ಹಕಮ್, ಅಲ್-ಅದ್'ಲ್, ಅಲ್-ಲತೀಫ್, ಅಲ್-ಖಬೀರ್, ಅಲ್-ಹಲೀಮ, ಅಲ್-ಅಝೀಮ್, ಅಲ್-ಗಫೂರ್, ಅಶ್ಯಕೂರ್, ಅಲ್-ಅಲಿಯ್ಯ್, ಅಲ್-ಕಬೀರ್, ಅಲ್-ಹಫೀಝ್, ಅಲ್-ಮುಕೀತ್, ಅಲ್-ಹಸೀಬ್, ಅಲ್-ಜಲೀಲ್, ಅಲ್-ಕರೀಮ್, ಅರ್ರಕೀಬ್, ಅಲ್-ಮುಜೀಬ್, ಅಲ್-ವಾಸಿಹ್, ಅಲ್-ಹಕೀಮ್, ಅಲ್-ಬಾಇಸ್, ಅಲ್-ಮಜೀದ್, ಅಲ್-ವದೂದ್, ಅಶ್ಯಹೀದ್, ಅಲ್-ಹಕ್ಕ್, ಅಲ್-ವಕೀಲ್, ಅಲ್-ಕವೀಯ್ಯ್, ಅಲ್-ಮತೀನ್, ಅಲ್-ವಲೀಯ್ಯ್, ಅಲ್-ಹಮೀದ್, ಅಲ್-ಮುಹ್'ಸಿಹ್, ಅಲ್-ಮುಬ್'ದಿಲ್, ಅಲ್-ಮುಈದ್, ಅಲ್-ಮುಹ್ಯೀ, ಅಲ್-ಮುಮಿತ್, ಅಲ್-ಹಯ್ಯ್, ಅಲ್-ಕಯ್ಯೂಮ್, ಅಲ್-ವಾಜಿದ್, ಅಲ್-ಮಾಜಿದ್, ಅಲ್-ವಾಹಿದ್, ಅಲ್-ಅಹದ್, ಅಸ್ಸಮದ್, ಅಲ್-ಕಾದಿರ್, ಅಲ್-ಮುಕ್ತದಿರ್, ಅಲ್-ಮುಕದ್ದಿಮ್, ಅಲ್-ಮುಅಖ್ಖಿರ್, ಅಲ್-ಅವ್ವಲ್, ಅಲ್-ಆಖಿರ್, ಅಲ್-ಝಾಹಿರ್, ಅಲ್-ಬಾತಿನ್, ಅಲ್-ವಲಿಯ್ಯ್, ಅಲ್-ಮುತಅಲೀ, ಅಲ್-ಬರ್ರ್, ಅತ್ತವ್ವಾಬ್, ಅಲ್-ಮುನ್ತಕಿಮ್, ಅಲ್-ಅಫುವ್ವ್, ಅರ್ರವೂಫ್, ಮಾಲಿಕುಲ್ ಮುಲ್ಕ್, ದುಲ್-ಜಲಾಲಿ-ವಲ್-ಕ್ರಾಮ್, ಅಲ್-ಜಾಮಿಹ್, ಅಲ್-ಮುಕ್ಸಿತ್, ಅಲ್-ಗನೀ, ಅಲ್-ಮುಗ್ನೀ, ಅಲ್-ಮಾನಿಹ್, ಅಲ್-ಝಾರ್ರ್, ಅನ್ನಾಫಿಹ್, ಅನ್ನೂರ್, ಅಲ್-ಹಾದೀ, ಅಲ್-ಬದೀಹ್, ಅಲ್-ಬಾಕೀ, ಅಲ್-ವಾರಿಸ್, ಆರ್ರಶೀದ್, ಅಸ್ಸಬೂರ್


ಅಲ್ಲಾಹನ ಪ್ರೀತಿ:- ಓ, ಪೈಗಂಬರರೇ ಜನರೊಡನೆ ಹೀಗೆ ಹೇಳಿರಿ, ನೀವು ನಿಜವಾಗಿಯೂ ಅಲ್ಲಾಹನನ್ನು ಪ್ರೀತಿಸುತ್ತೀರೆಂದಾದರೆ ನನ್ನನ್ನು ಅನುಕರಣೆ ಮಾಡಿರಿ ಅಲ್ಲಾಹ್ ನಿಮ್ಮನ್ನು ಪ್ರೀತಿಸುವನು... [ಕುರ್ ಆನ್: 3: 31] " ... ಅಲ್ಲಾಹ್ ಒಂದು ಸಮೂಹವನ್ನು ತರುವನು. ಅವನು ಅವರನ್ನು ಪ್ರೀತಿಸುವನು ಮತ್ತು ಅವರು ಅವನನ್ನು ಪ್ರೀತಿಸುವರು..." [ಕುರ್ ಆನ್: 5: 54] "... ಸಹನಶೀಲರನ್ನೇ ಅಲ್ಲಾಹನು ಪ್ರೀತಿಸುತ್ತಾನೆ." [ಕುರಾನ್: 3: 146] "... ಮತ್ತು ನ್ಯಾಯ ಪಾಲಿಸಿರಿ. ಖಂಡಿತವಾಗಿಯೂ ನ್ಯಾಯ ಪಾಲಿಸುವವರನ್ನು ಅಲ್ಲಾಹ್ ಪ್ರೀತಿಸುತ್ತಾನೆ" [ಕುರ್ ಆನ್ 49: 9] " ... ಮತ್ತು ಸತ್ಕರ್ಮಗೈಯ್ಯಿರಿ. ಸತ್ಕರ್ಮಗೈಯ್ಯುವವರನ್ನು ಅಲ್ಲಾಹು ಪ್ರೀತಿಸುತ್ತಾನೆ." [ಕುರ್ ಆನ್: 5: 93] ಹ. ಅಬೂ ಹುರೈರಾ [ರ] ವರದಿ ಮಾಡಿರುವ ಹದೀಸ್'ನಲ್ಲಿ ಪ್ರವಾದಿ [ಸ] ಹೇಳುತ್ತಾರೆ, "ಅಲ್ಲಾಹನು ಏಳು ಜನರಿಗೆ ಅವನ ಅರ್ಶ್ನ ನೆರಳನ್ನು ನೀಡುತ್ತಾನೆ. ಅಂದು ಈ ನೆರೆಳಿನ ಹೊರತು ಬೇರಾವ ನೆರಳೂ ಇರಲಾರದು. ಅವರ ಪೈಕಿ ಇಬ್ಬರು ಅಲ್ಲಾಹನಿಗಾಗಿ ಪರಸ್ಪರ ಪ್ರೀತಿಸಿದವರು ಮತ್ತು ಪ್ರೀತಿಯನ್ನು ಶಾಶ್ವತವಾಗಿ ಕಾಪಾಡಿದವರು ಮತ್ತು ಆ ಸ್ಥಿತಿಯಲ್ಲೇ ಅಗಲಿ ಹೋದವರು. [ಬುಖಾರಿ, ಮುಸ್ಲಿಮ್]


"https://kn.wikipedia.org/w/index.php?title=ಅಲ್ಲಾಹ&oldid=1163028" ಇಂದ ಪಡೆಯಲ್ಪಟ್ಟಿದೆ