ಅಲ್ಲಾಹನು ಏಲ್ಲವನ್ನು ಸೃಷ್ಟಿಸಿದನು. ಅಲ್ಲಾಹನು ಉಂಟುಮಾಡಿದನು ಎಲ್ಲವನ್ನು ಯಾವುದರ ಸಹಾಯವಿಲ್ಲದೆ. ಒಮ್ಮೆ ನಮ್ಮ ಮೇಲಿರುವ ಆಕಾಶ ಇರಲಿಲ್ಲ. ಒಮ್ಮೆ ನಾವು ವಾಸಿಸುತ್ತಿರುವ ಈ ಭೂಮಿ ಇರಲಿಲ್ಲ. ಒಮ್ಮೆ ಹೂವುಗಳು ಇರಲಿಲ್ಲ. ಒಮ್ಮೆ ಪ್ರಾಣೆಗಳು ಇರಲಿಲ್ಲ. ಒಮ್ಮೆ ಪಕ್ಷಿಗಳು ಇರಲಿಲ್ಲ. ಅಲ್ಲಾಹನು ಎಲ್ಲವನ್ನು ಉಂಟುಮಾಡಿದನು. ಅಲ್ಲಾಹನು ಆಕಾಶವನ್ನು ಉಂಟುಮಾಡಿದನು. ಅಲ್ಲಾಹನು ಸೂರ್ಯನನ್ನು ಆಕಾಶದಲ್ಲಿ ಇರಿಸಿದನು. ಅಲ್ಲಾಹನು ಚಂದ್ರನನ್ನು ಆಕಾಶದಲ್ಲಿ ಇರಿಸಿದನು. ಅಲ್ಲಾಹನು ನಕ್ಷತ್ರವನ್ನು ಆಕಾಶದಲ್ಲಿ ಇರಿಸಿದನು. ಅಲ್ಲಾಹನು ಈ ಭೂಮಿಯನ್ನು ಉಂಟುಮಾಡಿದನು. ಅಲ್ಲಾಹನು ಬರಡು ಭೂಮಿಯನ್ನು ಉಂಟುಮಾಡಿದನು. ಅಲ್ಲಾಹನು ಪರ್ವತಗಳನ್ನು ಉಂಟುಮಾಡಿದನು. ಅಲ್ಲಾಹನು ನದಿಗಳನ್ನು ಉಂಟುಮಾಡಿದನು. ಅಲ್ಲಾಹನು ಸಾಗರಗಳನ್ನು ಉಂಟುಮಾಡಿದನು. ಅಲ್ಲಾಹನು ಗಿಡಗಳನ್ನು ಉಂಟುಮಾಡಿದನು. ಅಲ್ಲಾಹನು ಮರಗಳನ್ನು ಉಂಟುಮಾಡಿದನು. ಅಲ್ಲಾಹನು ವಿಧ ವಿಧದ ರಂಗಿನ ಹೂವುಗಳನ್ನು ಉಂಟುಮಾಡಿದನು. ಅಲ್ಲಾಹನು ಎಲ್ಲಾ ತರದ ಪ್ರಾಣೆಗಳನ್ನು ಉಂಟುಮಾಡಿದನು: ದೊಡ್ಡ ಆನೆ, ಹುಲಿ, ಸಿಂಹ, ನಾಯಿ ಮತ್ತು ನಾಯಿ ಮರಿಯನ್ನು! ಅಲ್ಲಾಹನು ಅತೀ ಎತ್ತರಕ್ಕೆ ಹಾರುವ ಪಕ್ಷಿಗಳನ್ನು ಉಂಟುಮಾಡಿದನು. ಎಂತಹ ಆಶ್ಚರ್ಯಕರವಾದ ವಿಶ್ವವನ್ನು ಅಲ್ಲಾಹನು ಸೃಷ್ಟಿಸಿದನು! ಸ್ವಲ್ಪ ಯೋಚಿಸಿ ಅಲ್ಲಾಹನು ಈ ಏಲ್ಲಾ ವಸ್ತುವನ್ನು ಯಾವುದರ ಸಹಾಯವಿಲ್ಲದೆ ಉಂಟುಮಾಡಿದನು! ಯಾರಾದರೂ ಇದ್ದಾರೆಯೇ ಅಲ್ಲಾಹನಂತೆ ಉಂಟುಮಾಡಲು? ಅಲ್ಲಾಹನು ವಸ್ತುವನ್ನು ಯಾರ ಸಹಾಯ ವಿಲ್ಲದೆ ಉಂಟುಮಾಡುವುದನ್ನು ನಾವು ಸೃಷ್ಟಿಕೃರ್ತ ಎಂದು ಕರೆಯುತ್ತೇವೆ.