ಝಕಾತ್ ಇಸ್ಲಾಮಿನ ಮೂರನೇ ಕಡ್ಡಾಯವಾಗಿದೆ. ನಮಾಜ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ದೇವ ಸಂಪ್ರೀತಿಯನ್ನು ಗಳಿಸುವ ಮಾರ್ಗವಾಗಿದೆ. ಒಬ್ಬ ಸ್ಥಿತಿವಂತ ಮುಸ್ಲಿಂ ತನ್ನ ಸಂಪಾದನೆಯ ನಿರ್ದಿಷ್ಟ ಭಾಗವನ್ನು ಅರ್ಹರಿಗೆ ನಿರ್ಬಂಧಿತವಾಗಿ ಕೊಡಲೇ ಬೇಕು. ಝಕಾತ್ ಸಿರಿವಂತರು ತೋರುವ ಔದಾರ್ಯವಲ್ಲದೆ ಅದು ಬಡವರ ಹಕ್ಕಾಗಿದೆ ಎಂದು ಇಸ್ಲಾಂ ತಿಳಿಸುತ್ತದೆ. ಸಂಪತ್ತಿನ ಒಡೆಯ ಅಲ್ಲಾಹನಾಗಿರುತ್ತಾನೆ. ಮನುಷ್ಯ ಅದರ ಮೇಲ್ವಿಚಾರಕ ಮಾತ್ರನಾಗಿರುತ್ತನೆಂದೂ ಅದು ನೆನಪಿಸುತ್ತದೆ. ಸಮಾಜಿಕ ಜೀವನದ ಕೆಲವು ಮಹತ್ತರವಾದ ಉದ್ದೇಶಗಳನ್ನು ಈಡೇರಿಸುವುದೂ ಝಕಾತಿನ ಔಚಿತ್ಯಗಳಲ್ಲೊಂದು. ಅವುಗಳಲ್ಲಿ ಮುಖ್ಯವಾದುದರೆಂದರೆ,

ಇಸ್ಲಾಮಿನಲ್ಲಿ ಝಾಕಾತ್'ನ ಉದ್ದೇಶ:

ಬದಲಾಯಿಸಿ

1. ಸಂಪತ್ತನ್ನು ಶುಚಿಗೊಳಿಸುವುದು, ಅದನ್ನು ವ್ರದ್ಧಿಸುವುದು ಮತ್ತು ಅಲ್ಲಾಹನ ಆಜ್ಞಾಪಾಲನೆಯಿಂದ ಸಂಭವನೀಯ ವಿಪತ್ತುಗಳಿಂದ ಅದನ್ನು ರಕ್ಷಿಸಿಕೊಳ್ಳುವುದು.

2. ಲೋಭ, ಜಿಪುಣತೆ ಮತ್ತು ದುರಾಸೆಗಳಂತಹ ದುಶ್ಚಟಗಳಿಂದ ಮನುಷ್ಯ ಮನಸ್ಸನ್ನು ಸ್ವಚ್ಛಗೊಳಿಸುವುದು.

3. ಬಡವರು ಮತ್ತು ನಿರ್ಗತಿಕರೊಂದಿಗೆ ಸಹಾನುಭೂತಿ ತೋರುವುದರ ಜೊತೆಗೆ ದರಿದ್ರರ,ವಂಚಿತರ ಮತ್ತು ಹಸಿದವರ ಅವಶ್ಯಕತೆಗಳನ್ನು ಪೂರೈಸುವುದು.

4. ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಸಮಾಜವನ್ನು ಬಲಿಷ್ಠಗೊಳಿಸುವುದು.

ಕುರಾನ್ 8 ಜನರು ಝಕಾತ್ ಗೆ ಅರ್ಹರೈದ್ದಾರೆ ಎಂದು ಸೂಚಿಸುತ್ತದೆ:

ಬದಲಾಯಿಸಿ

ನಿಜವಾಗಿ ದಾನಗಳು (ಝಕಾತ್) ಇರುವುದು – ಬಡವರಿಗಾಗಿ, ದೀನರಿಗಾಗಿ, ಅದರ ವಿತರಕರಿಗಾಗಿ, ಯಾರ ಮನ ಒಲಿಸಬೇಕಾಗಿದೆಯೋ ಅವರಿಗಾಗಿ, ಕೊರಳು ಬಿಡಿಸುವುದಕ್ಕಾಗಿ (ದಾಸ್ಯ ವಿಮೋಚನೆಗಾಗಿ), ಸಾಲಗಾರರಿಗಾಗಿ, ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದಕ್ಕಾಗಿ ಮತ್ತು ಪ್ರಯಾಣಿಕರಿಗಾಗಿ. ಇದು ಅಲ್ಲಾಹ'ನು ವಿಧಿಸಿರುವ ಕಡ್ಡಾಯ ನಿಯಮ. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ. [ಕುರಾನ್, 9: 60]

1. ಮಿಸ್ಕೀನ್,

2. ಫಕೀರ್,

3. ಇಸ್ಲಾಮಿಗೆ ಬಂದವರು,

4. ಸಾಲಗಾರರು,

5. ಯಾತ್ರಿಕರು,

6. ಗುಲಾಮರು,

7. ಅಲ್ಲಾಹನ ಮಾರ್ಗದಲ್ಲಿ ಸಾಗುವವರು,

8. ಝಕಾತ್ ಖಾತೆಯ ನೌಕರರು.

ಝಾಕತ್ ಕೊಡದವರಿಗೆ ಏನು ಶಿಕ್ಷೆ ಇದೆ:

ಬದಲಾಯಿಸಿ

ಇದೇ ಕಾರಣದಿಂದ ಝಕಾತ್ ನೀಡದವರಿಗೆ ಮತ್ತು ಅದನ್ನು ತಡೆಹಿಡಿದವರಿಗೆ ಕಠಿಣ ಶಿಕ್ಷೆಯಾಗುವುದೆಂದು ಪವಿತ್ರ ಕುರ್ಆನ್ ಎಚ್ಚರಿಕೆ ನೀಡುತ್ತದೆ. ಅದು ಹೇಳುತ್ತದೆ: " ಓ ಸತ್ಯ ವಿಶ್ವಾಸಿಗಳೇ! ಗ್ರಂಥದವರ ಅಧಿಕಾಂಶ ವಿಧ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನಧಿಕ್ರತ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ. ಈ ಚಿನ್ನ ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು. ತರುವಾಯ ಅದರಿಂದಲೇ ಅವರ ಹಣೆಗಳಿಗೂ,ಪಾರ್ಶ್ವಗಳಿಗೂ ಮತ್ತು ಬೆನ್ನುಗಳಿಗೂ ಬರೆ ಹಾಕಲಾಗು ವುದು.ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದುವೇ,ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ" (ಎನ್ನಲಾಗುವುದು) [ಕುರಾನ್, 9: 34-36]

ಪ್ರವಾದಿವರ್ಯರು [ಸ] ಹೀಗೆ ಹೇಳುವುದನ್ನು ನಾನು ಕೇಳಿದೆ: ಯಾವ ಸಂಪತ್ತಿನಿಂದ ಝಕಾತನ್ನು ಪ್ರತ್ಯೇಕಸಲಾಗಿಲ್ಲವೊ, ಆ ಸಂಪತ್ತಿನಲ್ಲಿ ಮಿಶಿತ್ರವಾಗಿರುವ ಝಾಕಾತ್, ಆ ಸಂಪತ್ತನ್ನು ನಾಶ ಮಾಡಿ ಬಿಡುವುದು. [ವರದಿ: ಹಝ್ರತ್ ಆಯಿಶಾ (ರ)] [ಮಿಸ್ಕಾತ್]

ಝಕಾತ್'ನಿಂದ ಆರ್ಥಿಕ ಅಮತೋಲನಕ್ಕಾಗಿ:

ಬದಲಾಯಿಸಿ

ಪ್ರವಾದಿ(ಸ) ಹೇಳಿದರು: ”ನಿಸ್ಸಂದೇಹವಾಗಿ ಅಲ್ಲಾಹನು ಮುಸ್ಲಿಂ ಸಮಾಜದ ಮೇಲೆ ಝಕಾತನ್ನು ಕಡ್ಡಾಯಗೊಳಿಸಿರುವನು.ಅದನ್ನು ಅವರಲ್ಲಿನ ಶ್ರೀಮಂತರಿಂದ ಸಂಗ್ರಹಿಸಲಾಗುವುದು ಮತ್ತು ಅವರಲ್ಲಿನ ಬಡವರಿಗೆ ಮರಳಿಸಲಾಗುವುದು” [ವರದಿ: ಹಝ್ರತ್ ಅಬ್ನು ಅಬ್ಬಾಸ್ (ರ)] [ಬುಖಾರಿ, ಮುಸ್ಲಿಮ್]

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಝಕಾತ್&oldid=1174605" ಇಂದ ಪಡೆಯಲ್ಪಟ್ಟಿದೆ