ಆಲೂರು
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ
ಆಲೂರು | |
ರಾಜ್ಯ - ಜಿಲ್ಲೆ |
ಕರ್ನಾಟಕ - ಹಾಸನ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - ೯೭೪ ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೪,೯೬೧ - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೩ ೨೧೩ - +೦೮೧೭೦ - ಕೆಎ-೧೩ |
ಈ ದೇವಾಲಯವು ಆಲೂರು ತಾಲ್ಲೂಕಿನ ಅಡಿಬಯಲು ಎಂಬ ಗ್ರಾಮದಲ್ಲಿ ನೆಲೆಸಿ ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿನ ವಿವೇಷತೆ ಎಂದರೆ ಅಡಿಬಯಲು ಗ್ರಾಮದ ಸುತ್ತಮುತ್ತಲ್ಲಿನ ೧೪ಗ್ರಾಮಗಳು ಸೇರಿ ಈ ದೇವಾಲಯದಲ್ಲಿ ಪ್ರತಿ ವರ್ಷ ಪೆಬ್ರವರಿ ತಿಂಗಳಿನಂದು ಜಾತ್ರೆಯನ್ನು ನೆಡೆಸುತ್ತಾರೆ.. ಜನರು ರಂಗನಾಥ ಸ್ವಾಮಿಯ ದರ್ಶನ ಪಡೆಯವುದರ ಮೂಲಕ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ.
ಶ್ರೀ ವಿಜಯದುರ್ಗ ಕ್ಷೇತ್ರ:
ಬದಲಾಯಿಸಿಕರ್ನಾಟಕ ರಾಜ್ಯದ ಬಡವರ ಊಟಿ ಎಂದೇ ಎಂದೇ ಪ್ರಖ್ಯಾಟಿ ಹೊಂದಿರುವ ಹಾಸನ ಜಿಲ್ಲೆಯಿಂದ ಸುಮಾರು ಹದಿನೈದು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಪಟ್ಟಣವೇ ಆಲೂರು. ಆಲೂರಿನಿಂದ ಸರಿ ಸುಮಾರು 2 ಕಿ.ಮೀ ಕ್ರಮಿಸಿದರೆ ಸಿಗುವ ಪುಣ್ಯಸ್ಥಳವೇ ಶ್ರೀ ವಿಜಯದುರ್ಗ ಕ್ಷೇತ್ರ. ಭಕ್ತರಿಗೆ ಆರಾಧನೆಯ ಮತ್ತು ಪ್ರೇಕ್ಷಣೀಯ ಸ್ಥಳವಾಗಿರುವ ಈ ಕ್ಷೇತ್ರ ಎಲ್ಲರಿಗೂ ಅಚ್ಚು ಮೆಚ್ಚು .
ಸುಮಾರು ಮೂರು ಶತಮಾನಗಳ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರವು ಶ್ರೀ ಉಡಸಲಮ್ಮ ಮತ್ತು ಶ್ರೀ ಮತ್ಸಾಲಮ್ಮ ದೇವಿಯರ ವಿನೂತನ ದೇವಾಲಯದ ಸಮುಚ್ಚಯವೇ ಶ್ರೀ ವಿಜಯದುರ್ಗ ಕ್ಷೇತ್ರ. ಇನ್ನು 2011ರಲ್ಲಿ ದೇವಿಯ ವಂಶಸ್ಥರಾದ ಸುಂದರರಾಜ ಅರಸ್ ಮತ್ತು ವಂಶಸ್ಥರಿಂದ ಸುಮಾರು 5 ಎಕರೆ ಪ್ರದೇಶದಲ್ಲಿ ಶಕ್ತಿ ಮತ್ತು ಭಕ್ತಿ ಸಂಕೇತವಾಗಿ ಈ ದೇವಾಲಯವನ್ನು ಸ್ಥಾಪಿಸಿದ್ದಾರೆ. ವಿಶಿಷ್ಟ ವಾಸ್ತು ಮತ್ತು ಕಲೆಯಿಂದ ಚೈತನ್ಯ ಪಡೆದು ದಿವ್ಯ ದೇಗುಲವಾಗಿ ವಿಜೃಂಭಿಸುತ್ತಿರುವ ಮತ್ತು ಮತ್ಸಾಲಮ್ಮ ದೇವಿಯವರ ಅಕ್ಕಪಕ್ಕದಲ್ಲಿರುವ ಅಪರೂಪದ ಐಶ್ವರ್ಯ ಗಣಪತಿ ಮತ್ತು ಇಷ್ಟ ಸಿದ್ಧಿ ಆಂಜನೇಯ ದೇವರ ಪುಟ್ಟ ಗುಡಿಗಳು ಇದೆ.
ಇಲ್ಲಿಯ ಮತ್ತೊಂದು ಆಕರ್ಷಣೆ ಎಂದರೆ ಯಾಗ ಮಂಟಪ ಈ ಯಾಗ ಮಂಟಪದ ಸುತ್ತಮುತ್ತಲು ನವದುರ್ಗೇಯರ ಮೂರ್ತಿಗಳ ಪ್ರತಿಷ್ಠಾಪನೆ ಇದ್ದು, ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಇಲ್ಲಿ ವಿಶೇಷ ಪೂಜೆಗಳು ಜರಗುತ್ತದೆ.
ಬಾಹ್ಯಾಪುಟಗಳು
ಬದಲಾಯಿಸಿ- ಹಾಸನ ಇತಿಹಾಸ
- ಹೊಯ್ಸಳ ಟೂರಿಸಮ್ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.
ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿ... ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿರುವ ಗ್ರಾಮ
ಭೌಗೋಳಿಕ ಲಕ್ಷಣ: ಅರೆಮಲೆನಾಡು ಪ್ರದೇಶವಾಗಿದ್ದು ವಾರ್ಷಿಕ 70% ಮಳೆ ಬೀಳುವ ಪ್ರದೇಶವಾಗಿದೆ
ಧಾರ್ಮಿಕ ಹಬ್ಬಗಳು: ವಿಶೇಷವಾಗಿ ಶ್ರೀ ಮಾರಿಕಾಂಬ ದೇವಿಯ ಉತ್ಸವ ನಡೆಯುತ್ತದೆ ಪ್ರತಿ 5ವರ್ಷಕ್ಕೆ
ಮುಖ್ಯ ಕಸುಬು: ಕೃಷಿ ಕಾಫಿ ಜೋಳ ಆಲೂಗಡ್ಡೆ ಭತ್ತರಾಗಿ ತರಕಾರಿ ಬೆಳೆ ಬೆಳೆಯುತಾರೆ
ಜನಸಂಖ್ಯೆ: ಕೇವಲ 51 ಮನೆಗಳಿರುವ ಚಿಕ್ಕ ಗ್ರಾಮ 165 ಜನಸಂಖ್ಯೆ ಹೊಂದಿದ
ಧರ್ಮ: ಹಿಂದೂ ಧರ್ಮ
ನೆರೆಹೊರೆ ಊರುಗಳು: ಕರಿಗೋಡನಹಳ್ಳಿ ಹಸಗನೂರು ಮುತ್ತಿಗೆ
ವಿಶೇಷತೆ: ಗ್ರಾಮದಿಂದ 500 ಮೀಟರ್ ದೂರದಲ್ಲಿ ಯಗಚಿ ನದಿ ಹರಿಯುತ್ತದೆ ಪ್ರಾಚೀನ ಕಾಲದಲ್ಲಿ ಹೊಯ್ಸಳರ ಆಡಳಿತಕ್ಕೆಒಳಪಟ್ಟಿತ್ತು ಚೋಳರ ಕಾಲದಲ್ಲಿ 8ನೇ ಶತಮಾನದಲ್ಲಿ ನಿರ್ಮಿಸಲಾದ ಆಂಜನೇಯ ಸ್ವಾಮಿ ದೇವಸ್ಥಾನ ಇದೆ ಇಂದು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಂಡಿದ್ದಾರೆ