{{#if:|

ಇದು ಹಾಸನ ಜಿಲ್ಲೆಯ ಒಂದು ತಾಲೂಕು ಹಾಗೂ ತಾಲೂಕು ಕೇಂದ್ರ. ಹಾಸನ, ಆಲೂರು,ಹಾಗೂ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೋಕುಗಳನ್ನು ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೋಕುಗಳಿಂದ ಸುತ್ತುವರೆದಿದೆ. ಅರಕಲಗೂಡು ಅರೆಮಲೆನಾಡು ಪ್ರದೇಶ. ಅ.ನ.ಕೃ. ಹುಟ್ಟಿದ ಸ್ಟಳ. ಕಾವೇರಿ ತೀರದಲ್ಲಿರುವ ರಾಮನಾಥಪುರದ ಸುಬ್ರಮಣ್ಯ ದೇವಸ್ಟಾನ ಪ್ರಸಿದ್ಡ ದೇವಸ್ಟಾನ. ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗಡ್ಡೆ ಪ್ರಮುಖ ಬೆಳೆ. ಮುಂದುವರೆಯದ ಆದರೆ ಹಿಂದುಳಿಯದ ಪ್ರದೇಶ. ಅರಕಲಗೂಡಿಗೆ ಈ ಹೆಸರು ಬರಲು ಗೌತಮ ಋಷಿ ಕಾರಣ ಎ౦ದು ಹೇಳಲಾಗುತ್ತದೆ. ಹಿಂದೆ ಗೌತಮ ಋಷಿಯು ಸೂರ್ಯ ದೇವರನ್ನು ಪೂಜಿಸಲು ಅರ್ಕೇಶ್ವರ ಪ್ರತಿಮೆಯನ್ನು ಇ ಊರಿನಲ್ಲಿ ಸ್ಥಾಪಿಸಿದನು. ಇದರ ನಿಜವಾದ ಹೆಸರು ಅರ್ಕಪುರಿ ಎಂದಿತ್ತು.ನಂತರ ಇದು ಅರಕಲಗೂಡು ಎಂದು ಬದಲಾಗಿದೆ ಎನ್ನಲಾಗುತ್ತದೆ. ಅರಕಲಗೂಡನ್ನು ಐಗೂರಿನ ಪಾಳೆಯಗಾರ ಕ್ರಿಷ್ಣಪ್ಪ ನಾಯಕನು ಕ್ರಿ.ಶ.೧೨೬೮ ರಲ್ಲಿ ಬೆಳಕಿಗೆ ತಂದನು. ಅರಕಲಗೂಡು ತಾಲೂಕು ರಾಮನಾಥಪುರವು ಸುಬ್ರಹ್ಮಣ್ಯ ಸ್ವಾಮಿಯ ಹಾಗೂ ಹೊಯ್ಸಳರ ಕಾಲದ ರಾಮೇಶ್ವರ ದೇವಸ್ಥಾನ ಹೊಂದಿದ್ದು ದಕ್ಷಿಣ ಕಾಶಿ ಎಂದೂ ಪ್ರಸಿದ್ಧವಾಗಿದೆ. ಅದೆ ರಾಮನಾಥಪುರದಲ್ಲಿ ತಂಬಾಕು ಮಂಡಳಿಯ ಮಾರುಕಟ್ಟೆಯಿದ್ದು ಬೃಹತ್ ವಹಿವಾಟು ನಡೆಸುತ್ತಾ ತಂಬಾಕು ಬೆಳೆಗಾರರಿಗೆ ವರದಾನವಾಗಿದೆ.

ಅರಕಲಗೂಡು
ಅರಕಲಗೂಡು
—  ಪುರಸಭ  —
ಅರಕಲಗೂಡು is located in Karnataka
ಅರಕಲಗೂಡು
ಅರಕಲಗೂಡು
Location in Karnataka, India
ರೇಖಾಂಶ: 12°46′N 76°04′E / 12.77°N 76.06°E / 12.77; 76.06ನಿರ್ದೇಶಾಂಕಗಳು: 12°46′N 76°04′E / 12.77°N 76.06°E / 12.77; 76.06
ದೇಶ  ಭಾರತ
ರಾಜ್ಯ ಕರ್ನಾಟಕ
ಜಿಲ್ಲೆ ಹಾಸನ
ಎತ್ತರ ೯೧೬ ಮೀ (೩,೦೦೫ ಅಡಿ)
ಜನಸಂಖ್ಯೆ (2001)
 - ಒಟ್ಟು ೧೫,೧೮೪
 - ಸಾಂದ್ರತೆ ./ಚದರ ಕಿಮಿ (./ಚದರ ಮೈಲಿ)
{{{language}}} {{{ಭಾಷೆ}}}

ಅರಕಲಗೂಡಿಗೆ ಹೊಂದಿಕೊಂಡಂತೆಯೆ ಇರುವ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದ್ದು ನೀರಾವರಿಗೆ ಇಂಬು ನೀಡಲಾಗಿದೆ. ೧.ಹಾಸನ ಇತಿಹಾಸ ೨.ಹೊಯ್ಸಳ ಟೂರಿಸಮ್