ಸಕಲೇಶಪುರವು ಕರ್ನಾಟಕಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಸಕಲೇಶಪುರವು ತಾಲ್ಲೂಕು ಕೇಂದ್ರವಾಗಿದೆ. ಸಕಲೇಶಪುರವು ಮಲೆನಾಡು ಪ್ರದೇಶವಾಗಿದೆ. ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ.ಸದಾಕಾಲ ತುಂಬಿ ಹರಿಯುವ ಹೇಮಾವತಿ ನದಿಯನ್ನು ಹೊಂದಿದೆ. ಇಲ್ಲಿ ಸಕಲೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವಂತಹ ಮಲೆನಾಡಿನ ಸೌಂದರ್ಯಭರಿತವಾದ ಸ್ಥಳವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಭಾರತ ದೇಶದಲ್ಲಿ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಪ್ರಸಿದ್ಧ ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆಗಳಿದ್ದು,ಅದರಲ್ಲಿ ಒಂದು ಕೇರಳ ರಾಜ್ಯದಲ್ಲಿದೆ ಮತ್ತೊಂದು ಕರ್ನಾಟಕದ ರಾಜ್ಯವಾದ ಹಾಸನ ಜಿಲ್ಲೆಯ ನಮ್ಮ ಹೆಮ್ಮೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಎಂಬ ಸ್ಥಳದಲ್ಲಿ ಇದೆ.

ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಇದು ಹಸಿರು ಬೆಟ್ಟಗಳ ನಡುವೆ ಕಾಫಿ,ಏಲಕ್ಕಿ, ಮೆಣಸು, ಅಡಕೆ,ತೆಂಗು, ಬಾಳೆಯ ತೋಟಗಳಿಂದ ಆವೃತವಾಗಿದ್ದು ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ. ಮುಖ್ಯವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತ್ತು ಇಡೀ ತಾಲ್ಲೂಕಿನಲ್ಲಿ ಬೆಳೆಯಲಾಗುವ ವಾಣಿಜ್ಯ ಬೆಳೆಗಳನ್ನು ಮಾರಾಟ ಮಾಡಲು ಸಕಲೇಶಪುರ ನಗರಕ್ಕೆ ತರಲಾಗುತ್ತದೆ . ಪಟ್ಟಣವು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಮಂಗಳೂರು ಬಂದರು ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48 (NH-48) ರಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.ಉಲ್ಲೇಖ ದೋಷ: Closing </ref> missing for <ref> tag


ಕಲ್ಲರಹಳ್ಳಿ

        ಇದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಪುಟ್ಟ ಗ್ರಾಮ. ಈ ಗ್ರಾಮದ ಸೌಂದರ್ಯವು ಕಣ್ಣಿಗೂ ಹಾಗೂ ಮನಸಿಗೂ ತಂಪನ್ನು ನೀಡುವಂತಿದೆ. ಈ ಒಂದು ಗ್ರಾಮದ ಜನರು ಕಾಫಿ ಕೃಷಿಯನ್ನು ಆರಂಭಿಸಿಕೊಂಡಿದ್ದಾರೆ ಹಚ್ಚಹಸಿರಿನಿಂದ ಕೂಡಿದ ಪ್ರಶಾಂತ ಪ್ರದೇಶ ಇದಾಗಿದೆ. ಸುತ್ತಲೂ ಪಕ್ಷಿಗಳ ಚಿಲಿಪಿಲಿ ಶಬ್ದಗಳು ನವಿಲು ಗರಿಬಿಚ್ಚಿ ಕುಣಿಯುವುದು ಹಬ್ಬಿ ಜಲಪಾತದಲ್ಲಿ ಹರಿಯುವ ನೀರಿನ ಶಬ್ದ ಇವೆಲ್ಲ ಈ ಹಳ್ಳಿಯ  ವೈಶಿಷ್ಟ್ಯಗಳಾಗಿವೆ. ಇಲ್ಲಿ ಅನೇಕ ರೆಸಾರ್ಟ್ ಗಳಿರುವದರಿಂದ ಇದು ಒಂದು ಪ್ರವಾಸಿಗರ ತಾಣ ಎಂದು ಸಹ ಹೇಳಬಹುದು. ಶಾಂತಿಯುತ ಹಾಗೂ  ಪರಸ್ಪರ ಐಕ್ಯದಿಂದ ಒಂದು ಕೂಡಿ ಬಾಳುವ ಜನರು ಈ ಗ್ರಾಮದ ಒಂದು ವರದಾನವಾಗಿದೆ.ಮಳೆಗಾಲ ಮತ್ತು ಚಳಿಗಾಲದಲ್ಲಿ ಈ ಊರಿನ ಸೌಂದರ್ಯವು ಪ್ರವಾಸಿಗರ ಮನಸೆಳೆಯುತ್ತದೆ ‌‌. ಇಲ್ಲಿನ ನಿವಾಸಿಗಳಿಗೆ ಬೇಕಾದಂತಹ ಎಲ್ಲಾ ಮೂಲ ಸೌಕರ್ಯಗಳು ಇರುವುದನ್ನು 

ಸಹ ಗಮನಿಸಬಹುದು ಅದೇ ರೀತಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಮುಂತಾದ ಸೌಲಭ್ಯಗಳು ಕೂಡ ಇಲ್ಲಿದೆ. ಈ ಗ್ರಾಮವು ಹಚ್ಚಸಿರಿನಿಂದ ಕೂಡಿದ್ದು ಎಲ್ಲರ‌ಮನಸೆಳೆಯುವಂತ್ತಿದೆ.

ಮಂಜರಾಬಾದ್ (ಮಂಜು ತುಂಬಿದ)ಕೋಟೆ:
    ಹಾಸನ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಒಂದಾಗಿರುವ ಸಕಲೇಶಪುರವು ಬಹಳಷ್ಟು ಪ್ರಾಕೃತಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ. ಇಲ್ಲಿನ ಪ್ರಕೃತಿ ಸೌಂದರ್ಯವು ಕಣ್ಣಿಗೆ ತಂಪನ್ನು ನೀಡುತ್ತದೆ, ಮನ್ನಸ್ಸಿಗೆ ಹಿತವನ್ನು ಕೊಡುತ್ತದೆ ,ಅಂತಹ ಸ್ಥಳಗಳಲ್ಲಿ ಒಂದಾದ ಮಂಜರಾಬಾದ್ ಕೋಟೆಯು ಸಕಲೇಶಪುರದಿಂದ ನೈರುತ್ಯ ದಿಕ್ಕಿಗೆ 5 ಕಿ. ಮೀ ದೂರದಲ್ಲಿದೆ. ಈ ಕೋಟೆಯನ್ನು ಭೂಮಟ್ಟದ್ದಿoದ ಸುಮಾರು 988 ಮೀಟರ್ ಎತ್ತರದ ಗುಡ್ಡದ ಮೇಲೆ ನಿರ್ಮಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ಹೋಗುವಾಗ ಎಡಬದಿಯ ರಸ್ತೆಯಲ್ಲಿ ತಿರುಗಿ ಹೋದರೆ ಕೋಟೆಯನ್ನು ತಲುಪಬಹುದು. ಈ ಕೋಟೆಯನ್ನು 1792ರಲ್ಲಿ ಟಿಪ್ಪುಸುಲ್ತಾನನು ನಿರ್ಮಿಸಿರುತ್ತಾನೆ.ಈ ಕೋಟೆಯು ನಕ್ಷ್ರಾಕಾರದ ರೀತಿಯಲ್ಲಿ ಕಾಣುತ್ತದೆ, ಹಾಗೂ ಮಂಜರಾಬಾದ್ ಕೋಟೆಯಿಂದ ಶ್ರೀರಂಗಪಟ್ಟಣಕ್ಕೆ ಸುರಂಗ ಮಾರ್ಗವನ್ನು ಟಿಪ್ಪುಸುಲ್ತಾನನು ನಿರ್ಮಿಸಿದ್ದನು.

ಮಳಲಿ ಗ್ರಾಮ....

       ಇದು ಸಕಲೇಶಪುರ ದಿಂದ 6ಕೀ.ಮೀ.

ದೂರದಲ್ಲಿದೆ.ಇದು ಹೇಮಾವತಿ ನದಿಯ ದಡದ ಪೂವ೯ದಲ್ಲಿರುವ ಗ್ರಾಮ ಇಲ್ಲಿಯ ಗದ್ದೆಗಳು ಮರಳು ಮಣ್ಣಿನಿಂದ ಕೂಡಿದ್ದು, ಭತ್ತದ ಬೆಳೆಗೆ ಯೋಗ್ಯವಾಗಿದೆ.ಈ ಗ್ರಾಮವು ಸಂಪೂರ್ಣವಾಗಿ ಮರಳು ಮಣ್ಣಿನಿಂದ ಕೂಡಿರುವುದರಿಂದಲೇ ಈ ಗ್ರಾಮಕ್ಕೆ 'ಮಳಲಿ'ಎಂಬ ಹೆಸರು ಬಂದಿರುವುದು ಗಮನಾರ್ಹ. ಈ ಗ್ರಾಮವು ಸುಂದರವಾದ ಪ್ರಕೃತಿಯನ್ನು, ಮರಗಿಡಗಳಿಂದ ಕೂಡಿದ ಹಿತಕರವಾದ ವಾತಾವರಣವನ್ನು ಹೊಂದಿದೆ.ಈ ಗ್ರಾಮದಲ್ಲಿ ಭತ್ತ,ಏಲಕ್ಕಿ,ಕಾಫಿ,ಮೆಣಸು,ಮುಖ್ಯವಾದ ಬೆಳೆಗಳಾಗಿ ಕಂಡುಬರುತ್ತವೆ. ಇವುಗಳ ಜೊತೆಗೆ ಅಡಿಕೆ, ಬಾಳೆ, ಕಿತ್ತಳೆ ಬೆಳೆಗಳನ್ನು ಬೆಳೆಯುತ್ತಾರೆ.

    ಐತಿಹಾಸಿಕ ಹಿನ್ನೆಲೆ :ಐಗೂರ ದೂರೆಯ ಆಳ್ವಿಕೆಯ ಸಂದರ್ಭದಲ್ಲಿ ೧೮ ಹಳ್ಳಿಗಳು ಈ ದೊರೆಯ ಹಿಡಿತದಲ್ಲಿರುತ್ತವೆ. ಈ ೧೮ ಹಳ್ಳಿಗಳಲ್ಲಿ ಮಳಲಿ ಗ್ರಾಮವು ಒಂದು. ಮಳಲಿ ಮರಿಚನ್ನೇಗೌಡ ಈ ದೊರೆಯ ಮಂತ್ರಿಯಾಗಿದ್ದನು.ಹುಗ್ಗಿಹಳ್ಳಿ ಸೋಮೇಗೌಡ ಸೇನಾಧಿಪತಿಯಾಗಿದ್ದ.ಮಂತ್ರಿ ಮತ್ತು ಸೇನಾಧಿಪತಿ ದೊರೆಯನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ.ದೊರೆಯನ್ನು ಬ್ರಿಟಿಷರು ಗಲ್ಲಿಗೇರಿಸುತ್ತಾರೆ. ನಂತರ ಈ ೧೮ ಹಳ್ಳಿಗಳನ್ನು ಬ್ರಿಟೀಷರು ವಶಪಡಿಸಿಕೊಳ್ಳುತ್ತಾರೆ.
    • ಗದ್ದೆಯೊಂದರಲ್ಲಿ ನಟ್ಟಿರುವ ಕಲ್ಲು.
   ಕೃಷ್ಣಪ್ಪನಾಯಕನ ಮಗ ವೆಂಕಟರಾಮಯ್ಯ ನಾಯಕ ಒಂದು ಆದೇಶ ಹೊರಡಿಸುತ್ತಾನೆ.ಅಂದರೆ ಮಳಲಿ ಅಪ್ಪೇಗೌಡನಿಗೆ,ಅದರಲ್ಲಿ ಪ್ರಕೃತಿ ವಿಕೋಪಗಳ ನಷ್ಟದ ಬಗೆಗೆ ವಿವರವಿರುತ್ತದೆ.
       ೧೭-೧೮ ನೇ ಶತಮಾನ
     ೧. ಸವ೯ಧಾರಿ ಸಂವತ್ಸರದ 
     ೨. ಚರಿತ್ರೆ ಬಗಗಲ್ಲು
     ೩. ಶ್ರೀಮಂತ ಕ್ರಿಷ್ಣಪ್ಪನಾ
     ೪. ಯಕರ ವೆಂಕಟಾದ್ರಿಯ
     ೫. ಕರು/ಮಳಲಿ ಅಪ್ಪೆ ಉಡುಗೆ 
     ೬. ಬಯಸಿ ಕಳುಹಿಸಿದ ಕಾಯ೯ ಹೊಸ. 

ಮಳಲಿ ಗ್ರಾಮದ ದೇವಾಲಯಗಳು :

೧.ಶ್ರೀ ಚಾಮುಂಡೇಶ್ವರಿ ದೇವಾಲಯ. 
೨.ಸುಗ್ಗಿ ದೇವಿರಮ್ಮ ದೇವಾಲಯ.
೩.ಸಪ್ಪಿನ ಮಲ್ಲಪ್ಪ. (ಈಶ್ವರ) 

೧.ಶ್ರೀ ಚಾಮುಂಡೇಶ್ವರಿ ದೇವಾಲಯ.

   ಈ ದೇವಾಲಯ ಪೂವ೯ ದಿಕ್ಕಿಗೆ ಇದೆ. ಹಿಂದೆ ಒಂದು ದೊಡ್ಡ ಮಾವಿನಮರದ ಕೆಳಗೆ ಈ ದೇವರ ವಿಗ್ರಹವಿದ್ದು ಕಾಲಕ್ರಮೇಣ ಮರವನ್ನು ಕತ್ತರಿಸಿ ದೇವಾಲಯವನ್ನು ನಿರ್ಮಿಸಿ ಪ್ರತಿಷ್ಟಾಪಿಸಿದ್ದಾರೆ. ಇಲ್ಲಿ ದಿನನಿತ್ಯ ಪೂಜೆ ಪುನಸ್ಕಾರ ನಡೆಯುತ್ತವೆ ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ವಿಶೇಷವಾಗಿ ಪೂಜೆ ನಡೆಯುತ್ತದೆ, ಅಕ್ಕಪಕ್ಕದ ಊರುಗಳಿಂದ ಜನರು ಪೂಜೆಗೆ ಬರುತ್ತಾರೆ. 
 ಮೈಸೂರು ದಸರಾದ ಸಮಯದಲ್ಲಿ ಇಲ್ಲೂ ಕೂಡ ಬಂಭತ್ತು ದಿನಗಳ ನವರಾತ್ರಿ ಉತ್ಸವ ನಡೆಯುತ್ತದೆ. ಈ ಬಂಭತ್ತು ದಿನವು ದೇವರಿಗೆ ಚಿನ್ನಾಭರಣಗಳನ್ನು ಧರಿಸಿ ಅಂಲಕಾರ ಮಾಡಿ ಪೂಜೆ ಸಲ್ಲಿಸುತ್ತಾರೆ ಪ್ರತಿದಿನ ಭಕ್ತಾದಿಗಳೆಲ್ಲರಿಗೂ ಮಧ್ಯಾಹ್ನದ ಮತ್ತು ಸಂಜೆ ಅನ್ನದಾನವನ್ನು ಮಾಡಲಾಗುತ್ತದೆ. 
 ಗಭ೯ಗುಡಿಯೊಳಗೆ ಆಯಾತಾಕಾರದ ಗದ್ದುಗೆಯ ಮೇಲೆ ಕಪ್ಪು ಶಿಲೆಯ ದೇವಿ ವಿಗ್ರಹವು ಕುಳಿತಿರುವ ರೀತಿಯಲ್ಲಿ ಪ್ರಾಸನ್ನವಾಗಿದೆ. 

೨.ಸುಗ್ಗಿ ದೇವಿರಮ್ಮ ದೇವಾಲಯ.

  ಊರಿನ ಮಧ್ಯಭಾಗದಲ್ಲಿರುವ ಈ ದೇವಾಲಯವು ಉತ್ತರ ದಿಕ್ಕಿಗೆ ಇದೆ. ಈ ಸುಗ್ಗಿ ಕಟ್ಟೆಯ ವಿಶೇಷವಾಗಿ ಕಲ್ಲಿನಿಂದ ಕೂಡಿದೆ 
೭೦೦-೮೦೦ವಷ೯ ಹಿಂದೆ ಈ ಸುಗ್ಗಿಕಟ್ಟೆಯನ್ನು ನಿಮಿ೯ಸಿದ್ದಾರೆ.ಈ ಸುಗ್ಗಿಕಟ್ಟೆಯಲ್ಲಿ ಸುಗ್ಗಿದೇವತೆಗಳನ್ನು ವಷ೯ಕ್ಕೊಮ್ಮೆ ತಂದು ಪೂಜೆ ಸಲ್ಲಿಸಿ ಜಾತ್ರೆ ನಡೆಸುತ್ತಾರೆ. 

೩. ಸಪ್ಪಿನ ಮಲ್ಲಪ್ಪ (ಈಶ್ವರ)

   ಇದು ಒಂದು ದೊಡ್ಡ ಗೋಣಿ ಮರದ ಕೆಳಗಡೆ ಇರುವಂತಹ ಈಶ್ವರ ವಿಗ್ರಹ. ಈ ಮರವು ತುಂಬಾ ಹಳೆಯದು. ಇತ್ತೀಚಿನ ದಿನಗಳಲ್ಲಿ ಮರದ ಗಾತ್ರವು ಹೆಚ್ಚಿದಂತೆ ಈಶ್ವರ ವಿಗ್ರಹವು ಮರದಳೊಗೆ ಸೇರಿದೆ.  ಇಲ್ಲಿ ವಿಶೇಷವಾಗಿ ಹಬ್ಬದ ದಿನಗಳಂದು ಪೂಜೆ ನಡೆಯುತ್ತದೆ. 
 ಕಾತಿ೯ಕ ಮಾಸದಲ್ಲಿ ವಿಶೇಷ ಪೂಜೆಯನ್ನು ಊರಿನ ಗ್ರಾಮಸ್ಥರೆಲ್ಲರೂ ಸೇರಿ ವಿಶೇಷವಾಗಿ ಅಂಲಕಾರಗೊಳಿಸಿ ವಾದ್ಯದ ಸಮೇತ ಪೂಜೆಯನ್ನು ನೆರವೇರಿಸುತ್ತಾರೆ.ಈ ದಿನದಂದು ಅನ್ನ ಸಂತರ್ಪಣೆ ಇರುತ್ತದೆ. ಈ ಮರವನ್ನು ಇಂದಿನ ದಿನಗಳಲ್ಲೂ ಕಾಣಬಹುದು.
ಸಕಲೇಶಪುರ ತಾಲೋಕಿನ ಪುಟ್ಟ ಗ್ರಾಮವಾದ ಯಡಕೇರಿ  ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಸುಗ್ಗಿ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಮಹೋತ್ಸವವು ಸತತ ಎಂಟು ದಿನಗಳ ಕಾಲದವರೆಗೂ ನಡೆಯುತ್ತದೆ. ಸಕಲೇಶಪುರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪಾಳೆಗಾರರು ಆಳ್ವಿಕೆಯನ್ನು ನಡೆಸಿದ ಇತಿಹಾಸನೂ ಇದೆ


ನಿಡಿಗೆರೆ

ಸಕಲೇಶಪುರ ತಾಲೂಕಿನ ನಿಡಿಗೆರೆ ಗ್ರಾಮವು ಮಲೆನಾಡು ಪ್ರದೇಶವಾಗಿದ್ದು ಇಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು ಮಲೆನಾಡ ವೀಕ್ಷಣೆ ಬಹಳ ರೋಮಾಂಚಕಾರಿಯಾಗಿರುವುದರಿಂದ ಅನೇಕ ಜನರು ಬೇರೆ ಬೇರೆ ಪ್ರದೇಶದಿಂದ ವೀಕ್ಷಿಸಲು ಬರುತ್ತಾರೆ ಈ ಗ್ರಾಮದಿಂದ ಹತ್ತಿರವಿರುವ ಹೊಸಳ್ಳಿ ಬೆಟ್ಟ ನೋಡಲು ಬಹಳ ಸುಂದರವಾಗಿದೆ ಮಳೆಯ ಗಾಲದಲ್ಲಿ ಇನ್ನಷ್ಟು ಸುಂದರವಾಗಿ ಕಾಣುವ ಈ ಹೊಸಳ್ಳಿ ಬೆಟ್ಟವು ನೋಡಲು ಎರಡು ಕಣ್ಣು ಸಾಲದು ಈ ಗ್ರಾಮದಲ್ಲಿ ವರ್ಷಕ್ಕೊಮ್ಮೆ ನಡೆಯುವ ಕಾರ್ತಿ ಪೂಜೆಯು ಬಹಳ ಸುಂದರವಾಗಿ ನಡೆಯುತ್ತದೆ ಹಾಗೂ ಈ ಗ್ರಾಮದಲ್ಲಿ ಇರುವ ಹಳೆಯ ಕಾಲದಿಂದಲೂ ಇರುವ ಆಂಜನೇಯ ಸ್ವಾಮಿ ದೇವಸ್ಥಾನ ಪ್ರಸಿದ್ಧಿಯನ್ನು ಪಡೆದಿದೆ ಹಾಗೂ ಸುತ್ತಮುತ್ತಲು ಕಾಫಿ ತೋಟಗಳಿಂದ ತುಂಬಿದೆ ನೋಡಲು ರಮಣೀಯವಾಗಿದೆ

ಕೃಷಿ ಮತ್ತು ವಾಣಿಜ್ಯ

ಬದಲಾಯಿಸಿ

ಸಕಲೇಶಪುರವು ಕೃಷಿ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಪ್ರಸಿದ್ಧ ತಾಣವಾಗಿದೆ. ಇಲ್ಲಿ ಕಾಫಿ ಮತ್ತು ಏಲಕ್ಕಿ ಸಂಶೋಧನಾ ಮಂಡಳಿ ಇದೆ. ಇದಲ್ಲದೆ ಕಾಫಿ ಬೆಳೆಗಾರರ ಸಂಘ, ಏಲಕ್ಕಿ ಬೆಳೆಗಾರರ ಸಂಘವನ್ನು ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಏಲಕ್ಕಿ ಬೆಳೆಯು ಸಾಂಬಾರ ಪದಾರ್ಥಗಳಲ್ಲಿ ರಾಣಿಯ ಸ್ಥಾನವನ್ನು ಪಡೆದಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾನ್ಯತೆ ಪಡೆದಿದೆ. ಏಲಕ್ಕಿ ಬೆಳೆಯು ಅತೀ ಹೆಚ್ಚಾಗಿ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತದೆ. ಮಲೆನಾಡಿನ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ದೇವಸ್ಥಾನಗಳು

ಬದಲಾಯಿಸಿ

ಸಕಲೇಶಪುರ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಸಕಲೇಶ್ವರ ಸ್ವಾಮಿ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಸಕಲೇಶಪುರದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.ಹೇಮಾವತಿ ನದಿ ತೀರದಲ್ಲಿದೆ, ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡ ಸಕಲೇಶ್ವರ ದೇವಾಲಯವು ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಉತ್ತುಂಗಕ್ಕೇರಿದ ಸಮಯದ ಒಂದು ಮಹಾನ್ ವಾಸ್ತುಶಿಲ್ಪ.ಇದು ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ. ಹೇಮಾವತಿ ನದಿ ತೀರದಲ್ಲಿದೆ, ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡ ಸಕಲೇಶ್ವರ ದೇವಾಲಯವು ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಉತ್ತುಂಗಕ್ಕೇರಿದ ಸಮಯದ ಒಂದು ಮಹಾನ್ ವಾಸ್ತುಶಿಲ್ಪ.ಇದು ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ. ಪಟ್ಟಣದ ಪ್ರವೇಶದ್ವಾರದಲ್ಲಿ ಈ ದೇವಸ್ಥಾನವು ಯಾತ್ರಾರ್ಥಿಗಳಿಗೆ ಪ್ರಸಿದ್ಧವಾದ ಸ್ಥಳವಾಗಿದೆ ಮತ್ತು ಈ ದೇವಸ್ಥಾನದ ಕಾರಣದಿಂದ ಪಟ್ಟಣಕ್ಕೆ ಈ ಹೆಸರು ಬಂದಿದೆ. ಈ ದೇವಾಲಯವು ಶಿವನ ದೈವದ ಪ್ರತಿಮೆಯನ್ನು ಹೊಂದಿದೆ, ಅದು ಎಲ್ಲರ ಕಣ್ಣಿಗೆ ಬೀಳುವಂತೆ ಮಾಡುತ್ತದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವ ಜಾತ್ರೆಗೆ ಈ ದೇವಾಲಯ ಪ್ರಸಿದ್ಧವಾಗಿದೆ.

ಬೆಳಗ್ಗೆಯಿಂದ ಸಂಜೆವರೆಗೆ ರಥೋತ್ಸವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವುದರಿಂದ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿರುತ್ತಾರೆ. ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಜೆವರೆಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗುತ್ತದೆ. ಸಂಜೆ ರಥ ದೇವಸ್ಥಾನ ಆವರಣ ತಲುಪುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟುವುದು. ಲಕ್ಷಾಂತರ ಭಕ್ತರು ಸಕಲೇಶ್ವರ ಸ್ವಾಮಿ ರಥೋತ್ಸವ ಕಂಡು ಕಣ್ತುಂಬಿಕೊಳ್ಳುತ್ತಾರೆ.

" ಶ್ರೀ ವೀರಭದ್ರ ಸ್ವಾಮಿ ದೇವಾಲಯ ಹಲಸುಲಿಗೆ "

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಗಳ ಅಮೃತ ಅಸ್ತದಿಂದ 15-5-1989 ರಲ್ಲಿ ಈ ದೇವಾಲಯ ಸ್ಥಾಪನೆ ಯಾಯಿತು. ಈ ದೇವಾಲಯವು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕ್ಕಿನ ಹಲಸು ಲಿಗೆ ಎಂಬ ಗ್ರಾಮದಲ್ಲಿ ನೋಡಬವುದಾಗಿದೆ. ಇಲ್ಲಿ ಪ್ರಮುಖವಾಗಿ ಮೂರು ದೇವಾಲಯಗಳನ್ನು ನೋಡಬಹುದಾಗಿದೆ. ಅವುಗಳೆಂದರೆ "ಶ್ರೀ ಉಧ್ಭುವ ಧೂರ್ಗಮ್ಮ "," ಶ್ರೀ ಬ್ರಹ್ಮ ದೇವರು "," ಶ್ರೀ ವೀರಭದ್ರ ದೇವಾಲಯ "ಇಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಮಹಾಜಾತ್ರೆ ನಡೆಯುತ್ತೆದೆ ಕಣ್ಣು ಸೆಳೆಯುವಂತಹ ಕಾರ್ಯಕ್ರಮಗಳು ಇರುತ್ತೆದೆ ಮನೋಮೋಹಕವಾದ ಧೃಶ್ಯ ಇರುತ್ತದೆ.

ಅನೇಕ ರೀತಿಯಲ್ಲಿ ಭಕ್ತದಿಗಳು ಬರುತ್ತಾರೆ ಕೆಂಡೋಸ್ತವ ಇರುತ್ತದೆ ಪಮುಖವಾಗಿ ಎರಡು ದಿನ ನಡೆಯುತ್ತದೆ. ಬಹಳ ವಿಜೃಂಭಣೆಇಂದ ನಡೆಯುತ್ತದೆ. [ಸೂಕ್ತ ಉಲ್ಲೇಖನ ಬೇಕು]

ಸಿಂಧೂ ಬ್ರಹ್ಮ ದೇವಸ್ಥಾನ

ಬದಲಾಯಿಸಿ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೆತ್ತುರು ಹೋಬಳಿ ಬೆಳ್ಳೂರು ಗ್ರಾಮ ದಲ್ಲಿ ಇದೆ ಈ ದೇವಸ್ಥಾನವು ಕಲ್ಲಿನಿಂದ ನಿರ್ಮಾಣ ವಾಗಿದ್ದು , ಸುಂದರವಾದ ಕಲ್ಲಿನ ಕೇತನೆ ಕಾಣಸಿಗುತ್ತವೆ. ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ. ಈ ದೇವಸ್ಥಾನದಲ್ಲಿ ನಾಲ್ಕು ಮುಖದ ಬ್ರಹ್ಮ ದೇವರ ಶಿಲೆ ಇದೆ. ಇದಕ್ಕೆ ಚತುರು ಮುಖ ಬ್ರಹ್ಮ ಎಂಬುದಾಗಿಯು  ಕರೆಯುತ್ತಾರೆ. ಈ ದೇವಸ್ಥಾನದ ವೈಶಿಷ್ಟ್ಯ ಎಂದರೆ ಬ್ರಹ್ಮದೇವರ ದೇವಸ್ಥಾನ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತವೆ.  ಈ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ದಂಡು ಪೂಜೆ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಕಾರ್ತಿಪೂಜೆ ನೆಡೆಯುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನೆಡೆಯುತ್ತದೆ. ಬೆಳ್ಳೂರು ಶೆಟ್ಟಿಹಳ್ಳಿ ಈಚಲಪುರ ಗ್ರಾಮಸ್ಥರು ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

ಜೈವಿಕ ವೈವಿಧ್ಯತೆ

ಬದಲಾಯಿಸಿ

ಸಕಲೇಶಪುರವು ಗುಜರಾತ್ ನಿಂದ ಕೇರಳದವರೆಗೆ ಚಾಚಿಕೊಂಡಿರುವ ಪಶ್ಚಿಮಘಟ್ಟದ ಪರ್ವತ ಶ್ರೇಣಿಯಲ್ಲಿ ಇದೆ. ಸಕಲೇಶಪುರದ ಸುತ್ತಲಿನ ಪ್ರದೇಶವು ಬಿಸಿಲೆ ಮೀಸಲು ಅರಣ್ಯ ವ್ಯಾಪ್ತಿಯನ್ನು ಒಳಗೊಂಡಿದೆ. ಈ ದಕ್ಷಿಣ ಶ್ರೇಣಿಯನ್ನು ಸಸ್ಯ ಮತ್ತು ಪ್ರಾಣಿ ವೈವಿಧ್ಯತೆಯ ವಿಷಯದಲ್ಲಿ ವಿಶ್ವದ 18 ಅತ್ಯಂತ ವೈವಿಧ್ಯಮಯ ತಾಣಗಳಲ್ಲಿ ಒಂದೆಂದು ಪಟ್ಟಿಮಾಡಲಾಗಿದೆ. ಸದಾ ತೇವಾಂಶವಿರುವ ಉಪಉಷ್ಣವಲಯದ ಈ ಪ್ರದೇಶದಲ್ಲಿ ಬೀಳುವ ಉತ್ತಮ ಮಳೆಯು ಜೀವ ವೈವಿಧ್ಯತೆಯ ಏಳಿಗೆಗೆ ಸಹಾಯಕವಾಗಿದೆ.

ನಾಗಭೌದ್ಧರಹಳ್ಳಿಯ ಗವಿ ಬೆಟ್ಟ - ನಾಗೇನಹಳ್ಳಿ( ಉಚ್ಚಾಂಗಿ)

  ಪ್ರಕೃತಿಯ ರಮ್ಯ ಸೊಬಗನ್ನು ಅಕ್ಷರಶಃ ಸವಿಯಬೇಕಾದರೆ ಒಮ್ಮೆಯಾದರೂ ನೋಡಲೇಬೇಕು. ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿಯ ಪಂಚಾಯತಿ ವ್ಯಾಪ್ತಿಯ ಹೇರೂರು ದಾಖಲೆ ನಗಭೌದ್ಧರಹಳ್ಳಿ( ನಾಗೇನಹಳ್ಳಿ)ಯನ್ನು.
    ಈ ವನ್ಯ ಸಿರಿಯ  ವೈಯ್ಯಾರ ಸೊಬಗಿನ ರಾಶಿ ಮೊಗೆದಷ್ಟೂ ಮುಗಿಯದು ಒಂದೆಡೆ ಕಡಿದಾದ ಬೆಟ್ಟ ಇನ್ನೊಂದೆಡೆ ರಣಪ್ರಪಾತ ಜಲಪಾತದಿಂದ ಬೇಳುವ ನೀರಿನ ಭೋರ್ಗರೆತ , ಮೇಲೆ ಕಣ್ಣೆತ್ತಿ ನೋಡಿದರೆ ನಿಧಾನವಾಗಿ ಚಲಿಸುವ ಮೋಡಗಳು , ಬೆಟ್ಟದ ನಡುವಿನಿಂದ ಭುಗಿಲೆದ್ದ ಬೆಂಕಿಯ ದಟ್ಟ ಹೋಗೆಯಂತೆ ಮೇಲೇರುವ ಆವಿ , ಬೆಟ್ಟದ ನಡುವೆ ಕಿರಿದಾಗಿ ಹರಿಯುವ ನೂರಾರು ತೊರೆಗಳು , ಪ್ರಶಾಂತ ವಾತಾವರಣದಲ್ಲಿ ಜೀವನ ಸಾಗಿಸುವ ಕಾಡು ಪ್ರಾಣಿಗಳು, ನೋಡಿದಷ್ಟೂ ಮತ್ತೆ ಮತ್ತೆ ನೋಡುವ ತವಕ.

ಏನು ವಿಶೇಷ?...

  ಉತ್ತರಕ್ಕೆ, ಹೇರೂರು ಹಾಗೂ ನಗಭೌದ್ದರಹಳ್ಳಿ , ದಕ್ಷಿಣಕ್ಕೆ ಹುಲಗುತ್ಹೂರು ಒಡಳ್ಳಿ, ಪೂರ್ವಕ್ಕೆ ಉಚ್ಚಂಗಿ , ಪಶ್ಚಿಮಕ್ಕೆ , ಕೊಡಗು ಜಿಲ್ಲೆಗೆ ಕೇವಲ ೩ ಕಿ.ಮೀ ದೂರದ ಕೂತಿ, ಕುಂದಳ್ಳಿ ಗ್ರಾಮಗಳು ಈ ಎಲ್ಲ ಹಳ್ಳಿಗಳಿಂದ ಸುಮಾರು ೩೦೦೦ ಅಡಿ ಎತ್ತರದ ೫೦೦೦ ಎಕರೆ ಭೂ ಪ್ರದೇಶವುಳ್ಳ ಆಕಾಶಕ್ಕೆ ಮುತಿಕ್ಕುವತಿರುವಾಂತಹ ನಗಭೌದ್ಧರಹಳ್ಳಿಯ ಗವಿಬೆಟ್ಟ. 

ಸಕಲೇಶಪುರಕ್ಕೆ ಬಂದವರು ಈ ನಗಭೋದ್ಧರಹಳ್ಳಿಯ ಗವಿ ಬೆಟ್ಟವನ್ನು ನೋಡಲೇ ಬೇಕೆಂಬ ಮನಸ್ಸು ನಿಮ್ಮದಿದ್ದರೆ ಸಕಲೇಶಪುರದಿಂದ ೫೦ಕೀ.ಮಿ. ಬಿಸಲೆ ಘಾಟಿನಿಂದ ೨೦ ಕೀ.ಮೀ. (ಕೊಡಗು) ಸೋಮರಪೇಟೆಯಿಂದ ೩೦ ಕೀ.ಮೀ. ಶನಿವಾರಸಂತೆಯಿಂದ ೧೦ ಕೀ.ಮೀ., ಚಂಗಡಿಹಳ್ಳ - ಸುಬ್ರಹ್ಮಣ್ಯ ರಸ್ತೆ ಉಚ್ಚಂಗಿ ಸಮೀಪ ನಾಗಭೋದ್ಧರ ಹಳ್ಳಿಯಿಂದ ೨ ಕೀ.ಮೀ., ಶ್ರಮಿಸಿದರೆ ಕಾಡುಗಳ ಮಧ್ಯೆ ಸುತ್ತಲಿನ ರಮಣೀಯ ದೃಶ್ಯಗಳು ಧನ್ಯತೆಯ ಆಹ್ಲಾದ ನೀಡುತ್ತದೆ.



ಅಗ್ನಿ ಗುಡ್ಡ

ಬದಲಾಯಿಸಿ

ಹನುಬಾಳಿನಿಂದ 9 ಕಿ.ಮೀ ಮತ್ತು ಸಕಲೇಶಪುರದ ನಾಗಭೌದ್ಧರಹಳ್ಳಿಯ ಗವಿ ಬೆಟ್ಟ - ನಾಗೇನಹಳ್ಳಿ( ಉಚ್ಚಾಂಗಿ)

  ಪ್ರಕೃತಿಯ ರಮ್ಯ ಸೊಬಗನ್ನು ಅಕ್ಷರಶಃ ಸವಿಯಬೇಕಾದರೆ ಒಮ್ಮೆಯಾದರೂ ನೋಡಲೇಬೇಕು. ಕರ್ನಾಟಕ ರಾಜ್ಯದ ಹಾಸನ ಜಿಲ್ಲಯ ಸಕಲೇಶಪುರ ತಲ್ಲುಕಿನ ಚಂಗಡಿಹಳ್ಳಿಯ ಪಂಚಾಯತಿ ವ್ಯಾಪ್ತಿಯ ಹೇರೂರು ದಾಖಲೆ ನಗಭೌದ್ಧರಹಳ್ಳಿ( ನಾಗೇನಹಳ್ಳಿ)ಯನ್ನು.

    ಈ ವನ್ಯ ಸಿರಿಯ ಸೊಬಗಿನ ರಾಶಿ ಮೊಗೆದಷ್ಟೂ ಮುಗಿಯದು ಒಂದೆಡೆ ಕಡಿದಾದ ಬೆಟ್ಟ ಇನ್ನೊಂದೆಡೆ ರಣಪ್ರಪಾತ ಜಲಪಾತದಿಂದ ಬೀಳುವ ನೀರಿನ ಭೋರ್ಗರೆತ , ಮೇಲೆ ಕಣ್ಣೆತ್ತಿ ನೋಡಿದರೆ ನಿಧಾನವಾಗಿ ಚಲಿಸುವ ಮೋಡಗಳು , ಬೆಟ್ಟದ ನಡುವಿನಿಂದ ಭುಗಿಲೆದ್ದ ಬೆಂಕಿಯ ದಟ್ಟ ಹೋಗೆಯಂತೆ ಮೇಲೇರುವ ಆವಿ , ಬೆಟ್ಟದ ನಡುವೆ ಕಿರಿದಾಗಿ ಹರಿಯುವ ನೂರಾರು ತೊರೆಗಳು , ಪ್ರಶಾಂತ ವಾತಾವರಣದಲ್ಲಿ ವೈಯ್ಯಾರದಿಂದ ಜೀವನ ಸಾಗಿಸುವ ಕಾಡು ಪ್ರಾಣಿಗಳು, ನೋಡಿದಷ್ಟೂ ಮತ್ತೆ ಮತ್ತೆ ನೋಡುವ ತವಕ.

ಏನು ವಿಶೇಷ?...

  ಉತ್ತರಕ್ಕೆ, ಹೇರೂರು ಹಾಗೂ ನಗಭೌದ್ದರಹಳ್ಳಿ , ದಕ್ಷಿಣಕ್ಕೆ ಹುಲಗುತ್ಹೂರು ಒಡಳ್ಳಿ, ಪೂರ್ವಕ್ಕೆ ಉಚ್ಚಂಗಿ , ಪಶ್ಚಿಮಕ್ಕೆ , ಕೊಡಗು ಜಿಲ್ಲೆಗೆ ಕೇವಲ ೩ ಕಿ.ಮೀ ದೂರದ ಕೂತಿ, ಕುಂದಳ್ಳಿ ಗ್ರಾಮಗಳು ಈ ಎಲ್ಲ ಹಳ್ಳಿಗಳಿಂದ ಸುಮಾರು ೩೦೦೦ ಅಡಿ ಎತ್ತರದ ೫೦೦೦ ಎಕರೆ ಭೂ ಪ್ರದೇಶವುಳ್ಳ ಆಕಾಶಕ್ಕೆ ಮುತಿಕ್ಕುವತಿರುವಾಂತಹ ನಗಭೌದ್ಧರಹಳ್ಳಿಯ ಗವಿಬೆಟ್ಟ.

  ಸಕಲೇಶಪುರಕ್ಕೆ ಬಂದವರು ಈ ನಗಭೋದ್ಧರಹಳ್ಳಿಯ ಗವಿ ಬೆಟ್ಟವನ್ನು ನೋಡಲೇ ಬೇಕೆಂಬ ಮನಸ್ಸು ನಿಮ್ಮದಿದ್ದರೆ ಸಕಲೇಶಪುರದಿಂದ ೫೦ಕೀ.ಮಿ. ಬಿಸಲೆ ಘಾಟಿನಿಂದ ೨೦ ಕೀ.ಮೀ. (ಕೊಡಗು) ಸೋಮರಪೇಟೆಯಿಂದ ೩೦ ಕೀ.ಮೀ. ಶನಿವಾರಸಂತೆಯಿಂದ ೧೦ ಕೀ.ಮೀ., ಚಂಗಡಿಹಳ್ಳ - ಸುಬ್ರಹ್ಮಣ್ಯ ರಸ್ತೆ ಉಚ್ಚಂಗಿ ಸಮೀಪ ನಾಗಭೋದ್ಧರ ಹಳ್ಳಿಯಿಂದ ೨ ಕೀ.ಮೀ., ಶ್ರಮಿಸಿದರೆ ಕಾಡುಗಳ ಮಧ್ಯೆ ಸುತ್ತಲಿನ ರಮಣೀಯ ದೃಶ್ಯಗಳು ಧನ್ಯತೆಯ ಆಹ್ಲಾದ ನೀಡುತ್ತದೆ.ುರದಿಂದ 25 ಕಿ.ಮೀ ದೂರದಲ್ಲಿರುವ ಅಗ್ನಿ ಗುಡ್ಡಾ ಎಂಬುದು ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಅಗನಿ(ಅಗ್ನಿ) ಗ್ರಾಮದ ಸಮೀಪದಲ್ಲಿರುವ ಬೆಟ್ಟವಾಗಿದೆ.  ಇದು ಕರ್ನಾಟಕದ ಸುಂದರವಾದ ಶಿಖರಗಳಲ್ಲಿ ಒಂದಾಗಿದೆ ಮತ್ತು ಸಕಲೇಶಪುರದ ಅತ್ಯುತ್ತಮ ಚಾರಣ ಸ್ಥಳಗಳಲ್ಲಿ ಒಂದಾಗಿದೆ.

'ಅಗ್ನಿ ಗುಡ್ಡಾ' ಎಂಬ ಹೆಸರಿನ ಅರ್ಥ 'ಉರಿಯುತ್ತಿರುವ ಪರ್ವತ' ಮತ್ತು ಈ ಪ್ರದೇಶದ ಈ ಬೆಟ್ಟದಲ್ಲಿ ತೀವ್ರ ಜ್ವಾಲಾಮುಖಿ ಸ್ವಭಾವದಿಂದಾಗಿ ಇದನ್ನು ಕರೆಯಲಾಗುತ್ತದೆ.  ಚಾರಣ ಉತ್ಸಾಹಿಗಳು ಮತ್ತು ಹೊರಾಂಗಣ ಕ್ಯಾಂಪಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಜನರು ಇದನ್ನು ಹೆಚ್ಚಾಗಿ ಭೇಟಿ ಮಾಡುತ್ತಾರೆ.  ಪರ್ವತದಿಂದ, ಸುತ್ತಮುತ್ತಲಿನ ಭತ್ತದ ಗದ್ದೆಗಳ ನೋಟವನ್ನು ಪಡೆಯಬಹುದು.  ಈ ಸ್ಥಾನವನ್ನು ದಕ್ಷಿಣ ಭಾರತದ ಮತ್ತು ಬಾಲಿವುಡ್‌ನ ವಿವಿಧ ಚಲನಚಿತ್ರಗಳಲ್ಲಿಯೂ ದಾಖಲಿಸಲಾಗಿದೆ.

ಅಗನಿ ಗ್ರಾಮದಿಂದ 3 ಕಿ.ಮೀ ಚಾರಣದ ಮೂಲಕ ಶಿಖರವನ್ನು ತಲುಪಬಹುದು.  ಇದು ಸಾಕಷ್ಟು ಮಧ್ಯಮ ಏರಿಕೆಯಾಗಿದ್ದು ಬೆಟ್ಟದ ತುದಿಯನ್ನು ತಲುಪಲು 1 ಗಂಟೆ ತೆಗೆದುಕೊಳ್ಳುತ್ತದೆ.  ಮೇಲಿನಿಂದ ಸುತ್ತಮುತ್ತಲಿನ ಬಯಲು ಪ್ರದೇಶಗಳು ಮತ್ತು ಹಚ್ಚ ಹಸಿರಿನ ಹೊಲಗಳ ಪೋಸ್ಟ್‌ಕಾರ್ಡ್ ನೋಟವನ್ನು ಪಡೆಯಬಹುದು.  ಯಾವುದೇ ಅಂಗಡಿಗಳು ಲಭ್ಯವಿಲ್ಲದ ಕಾರಣ ಪ್ರವಾಸಿಗರು ನೀರು ಮತ್ತು ತಿಂಡಿಗಳನ್ನು ಸಾಗಿಸಬೇಕಾಗುತ್ತದೆ.  ಒಬ್ಬರು ತಮ್ಮದೇ ಆದ ಗುಡಾರವನ್ನು ಹಾಕಬಹುದು ಮತ್ತು ರಾತ್ರಿಯಿಡೀ ಕ್ಯಾಂಪಿಂಗ್ ಮಾಡಬಹುದು.

ಮಂಜರಾಬಾದ್ ಕೋಟೆ

ಬದಲಾಯಿಸಿ

ಮಂಜರಾಬಾದ್ ಕೋಟೆಯು 1792 ರಲ್ಲಿ ಮೈಸೂರಿನ ನಂತರದ ಆಡಳಿತಗಾರನಾದ ಟಿಪ್ಪು ಸುಲ್ತಾನ್ ನಿರ್ಮಿಸಿದ ನಕ್ಷತ್ರ ಆಕಾರದ ಕೋಟೆಯಾಗಿದ್ದು, ಫ್ರೆಂಚ್ ವಾಸ್ತುಶಿಲ್ಪಿ ಸೆಬಾಸ್ಟಿಯನ್ ಲೆ ಪ್ರೀಸ್ಟ್ರೆ ಡಿ ವೂಬಾನ್ ಅಭಿವೃದ್ಧಿಪಡಿಸಿದ ಮಿಲಿಟರಿ ಕೋಟೆಗಳ ಮಾದರಿಯಲ್ಲಿದೆ. ಇದು ಕರ್ನಾಟಕ ರಾಜ್ಯದಲ್ಲಿರುವ ಹಾಸನ ಜಿಲ್ಲೆಯಲ್ಲಿದೆ.ಈ ಕೋಟೆಯು ಸಕಲೇಶಪುರದಿಂದ 10 ಕಿ.ಮೀ ದೂರದಲ್ಲಿದೆ. ಇದು ಹೇಮಾವತಿ ನದಿಯ ಬಲ ದಡದಲ್ಲಿದೆ. ಇದು ಹಾಸನದಿಂದ 37 ಕಿ.ಮೀ ದೂರದಲ್ಲಿದೆ. ಇದು ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ರಲ್ಲಿದೆ.ಮಂಜರಾಬಾದ್ ಕೋಟೆ 988 ಮೀಟರ್ ಎತ್ತರದಲ್ಲಿ ಬೆಟ್ಟದ ಮೇಲೆ ಇದೆ, ಇದು ಸುತ್ತಮುತ್ತಲಿನ ಸ್ಪಷ್ಟ ಮತ್ತು ಸುಂದರವಾದ ನೋಟವನ್ನು ನೀಡುತ್ತದೆ. ಸ್ಪಷ್ಟವಾದ ದಿನದಂದು, ಅರೇಬಿಯನ್ ಸಮುದ್ರವನ್ನೂ ಸಹ ಕೋಟೆಯಿಂದ ನೋಡಬಹುದಾಗಿದೆ. ಬೈಕೆರೆ ರಾಮೇಶ್ವರ ದೇವಸ್ಥಾನ

ಸಕಲೇಶಪುರ ತಾಲ್ಲೂಕು ಕೇಂದ್ರದಿಂದ 7 km ದೂರದಲ್ಲಿ ಬೇಲೂರು ರಸ್ತೆ ಯಲ್ಲಿ ಇದೆ ನಿಸರ್ಗ ರಮ್ಯ ರಮಣೀಯ ದೃಶ್ಯ

ಬೈಕೆರೆ ಗುಡ್ಡ್ಡೆ ಬಸವೇಶ್ವರ

ದೇವಿರಮ್ಮ ದೇವಸ್ಥಾನ ,ಉದೇಯವಾರ

ಬದಲಾಯಿಸಿ

ಪುರಾತನ ದೇವಾಲಯವಾದ ಈ ದೇವೀರಮ್ಮ ದೇವಾಲಯವು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸಮೀಪವಿರುವ ಉದೇಯವರ ಎಂಬ ಸುಂದರ ಗ್ರಾಮದ ಹಚ್ಚ ಹಸಿರಿನ ಮಡಿಲಿನಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಸಾರಿಗೆ :ಸಕಲೇಶಪುರದಿಂದಾ ಸುಮಾರು 12 ಕಿ. ಲೊ ಮೀಟರ್ ದೂರವಿದ್ದು. ಸರಿಸುಮಾರು 20 ನಿಮಿಷಗಳಲ್ಲಿ ಈ ದೇವಾಲಯವನ್ನು ತಲುಪ ಬಹುದು. ಹಾಗೂ ಪ್ರತಿದಿನ ಬಸ್ಸಿನ ವ್ಯವಸ್ಥೆಯನ್ನು ಮತ್ತು ಈ ದೇವಿಯ ಜಾತ್ರಾ ದಿನದಂದು ಭಕ್ತರಿಗಾಗಿ ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ

ದೇವಾಲಯದ ವಿಶೇಷತೆ : ಇಲ್ಲಿ 7 ದೇವಿಯರು ಕೂಡ ಒಂದೇ ಸ್ಥಳದಲ್ಲಿ ನೆಲೆಸಿರುವಂತಹ ಪುಣ್ಯ ಕ್ಷೇತ್ರ ಇದಾಗಿದೆ.

ಏಳು ದೇವಿಯರಲ್ಲಿ ಎರಡು ಸಪ್ತ ಮಾತ್ರಿಕೆಯರು ನೆಲೆಸಿದ್ದಾರೆ. ಅಷ್ಟೇ ಅಲ್ಲದೇ ಈ ಏಳು ದೇವಿಯರನ್ನು ಮಣ್ಣಿನಿಂದ ಮಾಡಲಾಗಿದೆ ಇದು ಈ ದೇವಾಲಯದ ವಿಶೇಷತೆ ಆಗಿದೆ .

ಜಾತ್ರಾ ಮಹೋತ್ಸವ : ದೇವಿಯ ಜಾತ್ರಾ ಮಹೋತ್ಸವವು ವರ್ಷಕ್ಕೊಮ್ಮೆ ಡಿಪಾವಳಿ ಸಮಯದಲ್ಲಿ ಅದ್ದೂರಿಯಾಗಿ ಮಾಡಲಾಗುತ್ತದೆ. ಈ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಜನರು ಸೇರಿರುತ್ತಾರೆ.

ಸಾಮಾನ್ಯ ದಿನಗಳಲ್ಲಿ ವಾರದಲ್ಲಿ ಮೂರು ದಿನಗಳು ಪೂಜೆ ನಡೆಯುತ್ತದೆ.ವಾರದಲ್ಲಿ ಮಂಗಳವಾರ , ಶುಕ್ರವಾರ, ಮತ್ತು ಭಾನುವಾರ ದಿನದಂದು ಪೂಜೆ ನಡಯುಥ್ದೆ

ಶ್ರೀ ಭ್ರಮೇಶ್ವರ ಸ್ವಾಮಿ ದೇವಾಲಯ

ಬದಲಾಯಿಸಿ

ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ ಆದರೆ ಹೆಚ್ಚು ಪ್ರಸಿದ್ಧ ವಾಗಿಲ್ಲ ಯಾಕೆಂದರೆ ಇದು ಸಕಲೇಶಪುರ ತಾಲೂಕಿನ ಬಾಗೇ ಗ್ರಾಮದ ಅಲ್ಲುವಲ್ಲಿ ಯಲ್ಲಿದೆ. ಇದು ರಾಮರಾಜ್ಯ ಕಾಲದಿಂದಲೂ ಇದೆ ಎನ್ನುವ ಮಾಹಿತಿ ಇದೆ ಈ ದೇವಾಲಯವು ಬ್ರಹ್ಮ ಮತ್ತು ಮಹೇಶ್ವರ (ಈಶ್ವರ )ರು ಒಂದೇ ದೇವಾಲಯದಲ್ಲಿ ಒಂದೇ ಶಿಲೆಯಲ್ಲಿ ಇರುವ ಅಪರೂಪದ ದೇವಾಲಯವಾಗಿದೆ ಮತ್ತು ಸಾವಿರ ವರ್ಷಗಳ ಇತಿಹಾಸ ಇರುವ ದೇವಾಲಯವಾಗಿದೆ ಮತ್ತು ಇದರ ಮತ್ತೊಂದು ವಿಶಿಷ್ಟ ಎಂದರೆ ಪ್ರತಿ ವರ್ಷ ಶಿವರಾತ್ರಿಯ ದಿನ ವಿಶೇಷ ಪೂಜೆ ನಡೆಯುತ್ತದೆ ಹಾಗೂ ಪ್ರತಿ ವಾರ ಪೂಜೆ ನಡೆಯುತ್ತದೆ ಹಾಗೂ ಹಿರಿಯರ ಅನುಭವದ ಮೇಲೆ ತಿಳಿದ ಮಾಹಿತಿಯಾಗಿದೆ ಹಾಗೂ ನಾಗರಕಲ್ಲಿನ   ಪ್ರತಿಮೆಯನ್ನು ಸಹ ಕಾಣಬಹುದು ಮತ್ತು ಇತಿಹಾಸ ಪ್ರಸಿದ್ಧ ದೇವಾಲಯವು ಹಾಗಿದೆ ಇದು ಈ ಶ್ರೀ ಭ್ರಮೇಶ್ವರ ಸ್ವಾಮಿ ದೇವಾಲಯದ ಇತಿಹಾಸವಾಗಿದೆ.

ಶ್ರೀ ಭ್ರಮೇಶ್ವರ ಸ್ವಾಮಿ ದೇವಾಲಯ

ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ ಆದರೆ ಹೆಚ್ಚು ಪ್ರಸಿದ್ಧ ವಾಗಿಲ್ಲ ಯಾಕೆಂದರೆ ಇದು ಸಕಲೇಶಪುರ ತಾಲೂಕಿನ ಬಾಗೇ ಗ್ರಾಮದ ಅಲ್ಲುವಲ್ಲಿ ಯಲ್ಲಿದೆ. ಇದು ರಾಮರಾಜ್ಯ ಕಾಲದಿಂದಲೂ ಇದೆ ಎನ್ನುವ ಮಾಹಿತಿ ಇದೆ ಈ ದೇವಾಲಯವು ಬ್ರಹ್ಮ ಮತ್ತು ಮಹೇಶ್ವರ (ಈಶ್ವರ )ರು ಒಂದೇ ದೇವಾಲಯದಲ್ಲಿ ಒಂದೇ ಶಿಲೆಯಲ್ಲಿ ಇರುವ ಅಪರೂಪದ ದೇವಾಲಯವಾಗಿದೆ ಮತ್ತು ಸಾವಿರ ವರ್ಷಗಳ ಇತಿಹಾಸ ಇರುವ ದೇವಾಲಯವಾಗಿದೆ ಮತ್ತು ಇದರ ಮತ್ತೊಂದು ವಿಶಿಷ್ಟ ಎಂದರೆ ಪ್ರತಿ ವರ್ಷ ಶಿವರಾತ್ರಿಯ ದಿನ ವಿಶೇಷ ಪೂಜೆ ನಡೆಯುತ್ತದೆ ಹಾಗೂ ಪ್ರತಿ ವಾರ ಪೂಜೆ ನಡೆಯುತ್ತದೆ ಹಾಗೂ ಹಿರಿಯರ ಅನುಭವದ ಮೇಲೆ ತಿಳಿದ ಮಾಹಿತಿಯಾಗಿದೆ ಹಾಗೂ ನಾಗರಕಲ್ಲಿನ   ಪ್ರತಿಮೆಯನ್ನು ಸಹ ಕಾಣಬಹುದು ಮತ್ತು ಇತಿಹಾಸ ಪ್ರಸಿದ್ಧ ದೇವಾಲಯವು ಹಾಗಿದೆ ಇದು ಈ ಶ್ರೀ ಭ್ರಮೇಶ್ವರ ಸ್ವಾಮಿ ದೇವಾಲಯದ ಇತಿಹಾಸವಾಗಿದೆ.ಅರಣ್ಯ ವ್ಯಾಪ್ತಿಯ ಎಡಕುಮರಿ, ದೋಣಿಗಾಲ್ ಮತ್ತು ಕೆಂಪುಹೊಳೆ ಪ್ರದೇಶಗಳು ಚಾರಣಕ್ಕೆ ಯೋಗ್ಯವಾದುದು ಮತ್ತು ಸವಾಲಿನದೂ ಆಗಿದೆ. ಬಿಸಿಲೆ ಮಾರ್ಗವಾಗಿ ಚಾರಣಕ್ಕೆ ಹೊರಟು ಕುಮಾರಪರ್ವತ ದಲ್ಲಿ ಚಾರಣವನ್ನು ಕೊನೆಗೊಳಿಸುವ ಪರಿಪಾಠವೂ ಇದೆ. ಆಳವಾದ ಕಣಿವೆಗಳು, ರಭಸವಾಗಿ ಹರಿಯುವ ನದಿಗಳು ಚಾರಣಿಗರಿಗೆ ಸವಾಲೊಡ್ಡುತ್ತದೆ.

ಮಂಜೇ ಅಲ್ಲದೆಹಳ್ಳಿ ಜಲಪಾತಗಳು

ಬದಲಾಯಿಸಿ

ಮಳೆಗಾಲದ ತಿಂಗಳುಗಳಲ್ಲಿ ಮಂಜೆಹಳ್ಳಿ ಜಲಪಾತವನ್ನು ತಲುಪಲು ಪರಿಪೂರ್ಣ ಮತ್ತು ಸೂಕ್ತ ಸಮಯ. ಪ್ರವಾಸಿಗರು ಮತ್ತು ಉತ್ಸಾಹಿಗಳಿಗೆ ಈ ಸಮಯದಲ್ಲಿ ಮಳೆಯಿಂದಾಗಿ ಮಳೆಯಾಗುವ ಅವಕಾಶ ಈ ಜಲಪಾತವು ಆದ್ಯತೆಯಿಂದ ಕೂಡಿದೆ ಮತ್ತು ಅದರ ಆಕರ್ಷಕ ಕ್ಯಾಸ್ಕೇಡಿಂಗ್ ಫಾಲ್ಸ್ಗೆ ವರ್ಷಪೂರ್ತಿ ನೂರು ಪ್ರವಾಸಿಗರು ಆಚರಿಸುತ್ತಾರೆ, ಇದು ಈ ಸ್ಥಳದ ಪ್ರಮುಖ ಲಕ್ಷಣಗಳನ್ನು ಮಾಡುತ್ತದೆ.ಮಂಜೇಹಳ್ಳಿ ಸಮೃದ್ಧ ಹಸಿರುಮನೆಗಳನ್ನು ಹೊದಿಸಿ, ಇಡೀ ಪ್ರದೇಶವು ಶಾಂತಿ ಮತ್ತು ದೈವಿಕ ಪ್ರಶಾಂತತೆಗಳಲ್ಲಿ ನೆನೆಸಿರುತ್ತದೆ. ಮಂಜೆಹಳ್ಳಿ ಜಲಪಾತದಿಂದ ಪುಷ್ಪಗಿರಿ ಪರ್ವತಗಳನ್ನು ವೈಭವೀಕರಿಸುವ ಖಂಡಿತವಾಗಿಯೂ ಸಕಲೇಶಪುರದಲ್ಲಿ ನಡೆಯುವ ವಸ್ತುಗಳ ಪೈಕಿ ಒಂದಾಗಿದೆ. ಏಕೆಂದರೆ ಪ್ರಸಿದ್ಧ ಜಲಪಾತ ಪರ್ವತದ ತಪ್ಪಲಿನಲ್ಲಿದೆ.

ಮಂಜೇಹಳ್ಳಿ ಜಲಪಾತ ಮಂಜೇಹಳ್ಳಿ ಹಳ್ಳಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಮಂಜೇಹಳ್ಳಿ ಜಲಪಾತ ಮತ್ತು ಸಕಲೇಶಪುರ ಬಸ್ ನಿಲ್ದಾಣದಿಂದ ಸುಮಾರು 8 ಕಿ.ಮೀ ದೂರವಿದೆ. ಭೇಟಿ ನೀಡಲು ಉತ್ತಮ ಸಮಯ: ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ಮಳೆಗಾಲದ ತಿಂಗಳುಗಳು ಈ ಜಲಪಾತವನ್ನು ಭೇಟಿ ಮಾಡಲು ಉತ್ತಮ ಕಾಲವಾಗಿದೆ.

ಪ್ರವೇಶ ಶುಲ್ಕ: ಪ್ರವೇಶ ಶುಲ್ಕವಿಲ್ಲ ಆದರೆ ಭೇಟಿ ನೀಡುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಮಂಜೇಹಳ್ಳಿ ಜಲಪಾತಕ್ಕೆ ಪ್ರವೇಶಿಸುವ ಮೊದಲು

ಸಮಯ: ಸಂಜೆಯ ವೇಳೆಗೆ ಜಲಪಾತವು ಬೆಳಗ್ಗೆ 5:30 ರವರೆಗೆ ಭೇಟಿ ಮಾಡಬಹುದು.

ಬಸ್ ನಿಲ್ದಾಣದಿಂದ ದೂರ: ಎರಡು ಸ್ಥಳಗಳ ನಡುವಿನ ಅಂತರವು ಸುಮಾರು 6 ಕಿ.ಮೀ.

ಶಿಕ್ಷಣ ಸಂಸ್ಥೆಗಳು

ಬದಲಾಯಿಸಿ
ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ, ಸಕಲೇಶಪುರ
ಬದಲಾಯಿಸಿ

ಟೆಂಪ್ಲೇಟು:Https://jssonline.org/ಜೆಎಸ್ಎಸ್ ಶಿಕ್ಷಣ ಸಂಸ್ಥೆಯು ಉತ್ತಮ ಶೈಕ್ಷಣಿಕ ಸೌಲಭ್ಯಗಳೊಂದಿಗೆ ದೇಶದಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಮಲೆನಾಡಿನ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಠಿಯಿಂದ ಸಕಲೇಶಪುರದಲ್ಲಿರುವ ಶಿಕ್ಷಣ ಮಹಾವಿದ್ಯಾಲಯವು ಕಳೆದ 35 ವರ್ಷಗಳಲ್ಲಿ 3000+ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿ ಶಿಕ್ಷಕ/ಉಪನ್ಯಾಸಕ ವೃತ್ತಿಗೆ ಕಳುಹಿಸಿರುವ ಶಿಕ್ಷಣ ಸಂಸ್ಥೆ ಎ0ಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜೆಎಸ್ಎಸ್ ಪದವಿ ಪೂರ್ವ ಕಾಲೇಜು

ಬದಲಾಯಿಸಿ

ಸಕಲೇಶಪುರ ಪಟ್ಟಣದಿಂದ 2.5 ಕಿಲೋ ಮೀಟರ್ ದೂರದಲ್ಲಿರುವ ಕಾಲೇಜು ಸುತ್ತಲೂ ಹಸಿರುಗಳಿಂದ ಆವೃತವಾಗಿದ್ದು ಪ್ರಕೃತಿ ಪ್ರಿಯರಿಗೆ ಕೈಬೀಸಿ ಕರೆಯುವಂತ ವಾತಾವರಣದಲ್ಲಿದೆ. ಇದೇ ಸಮಚ್ಚಯದಲ್ಲಿ ಜೆ.ಎಸ್.ಎಸ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಹೊಂದಿದ್ದು ಪ್ರಶಾಂತವಾದ ವಾತಾವರಣದಲ್ಲಿ ವ್ಯಾಸಂಗ ಮಾಡಲು ಅನುಕೂಲಕರ ವಾತಾವರಣದಲ್ಲಿದೆ.

ಸಾರಿಗೆ/ಸಂಪರ್ಕ

ಬದಲಾಯಿಸಿ
  • ಬಸ್ಸು : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿಗೂ ಇಲ್ಲಿ ನಿಲುಗಡೆಯಿದೆ
  • ರೈಲು : ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲಾ ರೈಲುಗಳಿಗೆ ಇಲ್ಲಿ ನಿಲುಗಡೆಯಿದೆ.
  • ವಿಮಾನ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನ ಬಜ್ಪೆಯ ವಿಮಾನ ನಿಲ್ದಾಣ.
  • ವಾಹನ ಸಂಚಾರ ಅತಿ ಹೆಚ್ಚು ಇದೆ.

ಉಲ್ಲೇಖ

ಬದಲಾಯಿಸಿ