ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ ವಿಮಾನ ನಿಲ್ದಾಣ ,IATA: Ixe, ICAO: VOML),ಇದು ಕರ್ನಾಟಕದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಕರಾವಳಿ ನಗರವಾದ ಮಂಗಳೂರಿಗೆ ಸೇವೆಯನ್ನು ನೀಡುತ್ತದೆ. ಇದು ಕರ್ನಾಟಕದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದು.ಇನ್ನೊಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು. ಇಲ್ಲಿಂದ ದೈನಂದಿನ ಹಾರಾಟಗಳು ಮಧ್ಯಪ್ರಾಚ್ಯ್ ದೇಶಗಳಿಗೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಭಾರತದ ನಗರಗಳಿಗೆ ವಿಮಾನ ಸೇವೆ ನೀಡುತ್ತದೆ. [೧]
Mangaluru Airport | |||||||||||||||
---|---|---|---|---|---|---|---|---|---|---|---|---|---|---|---|
![]() Aerial view of the passenger terminal | |||||||||||||||
ಐಎಟಿಎ: IXE – ಐಸಿಎಒ: VOML | |||||||||||||||
ಸಾರಾಂಶ | |||||||||||||||
ಪ್ರಕಾರ | ಸಾರ್ವಜನಿಕ | ||||||||||||||
ಮಾಲಕ/ಕಿ | ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ | ||||||||||||||
ಸೇವೆ | ಮಂಗಳೂರು | ||||||||||||||
ಸ್ಥಳ | ಬಜ್ಪೆ, ಮಂಗಳೂರು | ||||||||||||||
ಸಮುದ್ರಮಟ್ಟಕ್ಕಿಂತ ಎತ್ತರ | ೩೩೭ ft / 103 m | ||||||||||||||
ನಿರ್ದೇಶಾಂಕ | 12°57′41″N 074°53′24″E / 12.96139°N 74.89000°ECoordinates: 12°57′41″N 074°53′24″E / 12.96139°N 74.89000°E | ||||||||||||||
ರನ್‌ವೇ | |||||||||||||||
| |||||||||||||||
Statistics (2015-16) | |||||||||||||||
| |||||||||||||||
Source: AAI, |
ಆರಂಭಸಂಪಾದಿಸಿ
ಬಜ್ಪೆ ವಿಮಾನ ನಿಲ್ದಾಣ 25 ಡಿಸೆಂಬರ್ 1951 ರಂದು ಪ್ರಾರಂಭವಾಯಿತು,2014 ರಂತೆ, ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕ ಸಂದಣಿಯಲ್ಲಿ 54℅ ರಷ್ಟು ಬೆಳವಣಿಗೆಯೊಂದಿಗೆ, ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಬೆಳವಣಿಗೆ ಪ್ರಮಾಣವನ್ನು ಹೊಂದಿದೆ. ವಿಮಾನ ನಿಲ್ದಾಣ ಪ್ರಾಥಮಿಕ ಸ್ಥಳ ಮಂಗಳೂರು ನಗರವಾದರು, ಈ ವಿಮಾನ ನಿಲ್ದಾಣ ಮಣಿಪಾಲ, ಉಡುಪಿ, ಕುಂದಾಪುರ, ಶಿವಮೊಗ್ಗ, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು, ಭಟ್ಕಳ , ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅನೇಕ ಸ್ಥಳಗಳಿಗೆ ಮತ್ತು ಕಾಸರಗೋಡು,ಕೇರಳದ ಉತ್ತರ ಭಾಗದ ನಗರಗಳಿಗೆ ಸೇವೆಯನ್ನು ನೀಡುತ್ತದೆ.