ಬ್ಯಾಡಗಿ
ಬ್ಯಾಡಗಿಯು ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ.
ಬ್ಯಾಡಗಿ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಹಾವೇರಿ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+05:30 (IST) |
ಅಂಚೆ | ೫೮೧೧೦೬ |
ವಾಹನ ನೋಂದಣಿ | KA 27 |
ದೂರವಾಣಿ ಕೋಡ್ | 91-(0)8375 |
ಆಡು ಭಾಷೆ | ಕನ್ನಡ |
ಜಾಲತಾಣ | www |
ಭೌಗೋಳಿಕ ಸ್ಥಾನ
ಬದಲಾಯಿಸಿಬ್ಯಾಡಗಿಯು 14°41′N 75°29′E / 14.68°N 75.48°E.[೧] ಅಕ್ಷಾಂಶ,ರೇಖಾಂಶಗಳಲ್ಲಿ ಸ್ಥಿತವಾಗಿದ್ದು,ಸಮುದ್ರ ಮಟ್ಟದಿಂದ ಸರಾಸರಿ ೬೦೧ ಮೀಟರ್ (೧೯೭೧ ಫೀಟು)ಎತ್ತರದಲ್ಲಿದೆ.
ಪ್ರಸಿದ್ಧಿ
ಬದಲಾಯಿಸಿಮೆಣಸಿನಕಾಯಿಗೆ ಪ್ರಸಿದ್ಧ. ಇಲ್ಲಿನ ಮೆಣಸಿನಕಾಯಿಗೆ ಒಳ್ಳೆಯ ಕೆಂಪು ಬಣ್ಣ ಇದೆ.ಹಾಗೆಯೇ ಒಳ್ಳೆಯ ರುಚಿಯೂ ಕೂಡ ಇದೆ."ಬ್ಯಾಡಗಿ ಮೆಣಸಿನಕಾಯಿ" ಎಂದರೆ ಪ್ರಪಂಚದಲ್ಲಿ ಎರಡನೇ ಸ್ಥಾನ ಪಡೆದಿದೆ. ಹಾಗೆಯೆ ಸುತ್ತೇಳು ಹಳ್ಳಿಗಳ ಸಾವಿರಾರು ಜನರಿಗೆ ಜೀವನ ನಡೆಸಲು ಕೆಲಸ ನೀಡಿ ಜನರ ಜೀವನಾಡಿಯಾಗಿದೆ. ಬ್ಯಾಡಗಿ ಜಿಲ್ಲೆಯಲ್ಲಿ ಅತಿಹೆಚ್ಚು ಮೆಣಸಿನಕಾಯಿಯನ್ನು ಬೆಳೆಯುತ್ತಾರೆ.
ಜಾನಪದ
ಬದಲಾಯಿಸಿಇಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ವಿಜ್ರುಂಭಣೆಯಿಂದ ಜರುಗುತ್ತದೆ. ಹಾಗೂ ಶ್ರೀ ದಾನಮ್ಮದೇವಿ ಜಾತ್ರೆಯೂ ವಿಜ್ರೃಂಭಣೆಯಿಂದ ಜರುಗುತ್ತದೆ.ಇಲ್ಲಿಗೆ ಸಮೀಪದಲ್ಲಿ ಪ್ರಸಿದ್ಧ ಕ್ಷೇತ್ರ ಕಾಗಿನೆಲೆಇದೆ.
ಸಾರಿಗೆ ಸಂಪರ್ಕ
ಬದಲಾಯಿಸಿಬೆಂಗಳೂರಿನಿಂದ ಹಾಗೂ ಮೈಸೂರಿನಿಂದ ರೈಲು ವ್ಯವಸ್ಥೆ ಇದೆ, ಬೆಂಗಳೂರು ರೈಲು ನಿಲ್ದಾಣದಿಂದ ರಾತ್ರಿ ೧೦ ಕ್ಕೆ ಮೈಸೂರಿನಿಂದ ರಾತ್ರಿ ೧೦ ಕ್ಕೆ ಪ್ಯಾಸೆಂಜರ್ ರೈಲುಗಳಿವೆ. ರಾಣೇಬೆನ್ನೂರ ವರೆಗೆ ಬೇರೆ ರೈಲುಗಳಿಗೆ ಬಂದು ಬಸ್ ಮೂಲಕ ಬ್ಯಾಡಗಿಗೆ ತಲುಪಬಹುದು. ಹಾಗೆಯೇ ಹುಬ್ಬಳ್ಳಿಯಿಂದಲೂ ರೈಲು ವ್ಯವಸ್ಥೆ ಇದೆ. ರಾಜ್ಯದ ಪ್ರಮುಖ ನಗರಗಳಿಂದ ಬಸ್ ವ್ಯವಸ್ಥೆ ಇದೆ, ಬೆಂಗಳೂರು & ಹುಬ್ಬಳ್ಳಿ ಕಡೆಯಿಂದ ಬರುವವರು ಮೋಟೇಬೆನ್ನೂರು ಎಂಬ ಊರಿಗೆ ಬಂದಿಳಿದು ಅಲ್ಲಿಂದ ಬಸ್,ಆಟೋ ಮೂಲಕ ತಲುಪಬಹುದು, ೫ ಕಿ.ಮೀ ದೂರವಿದ್ದು ಈಗಿನ(೨೦೧೬) ಬಸ್ ದರ ೧೦ ರೂ ಇರುತ್ತದೆ.
ಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿhttp://www.byadagitown.gov.in/ Archived 2013-03-17 ವೇಬ್ಯಾಕ್ ಮೆಷಿನ್ ನಲ್ಲಿ.