ಕೊಡಗು ಜಿಲ್ಲೆ

ಕರ್ನಾಟಕದ ಒಂದು ಜಿಲ್ಲೆ

ಕರ್ನಾಟಕ ರಾಜ್ಯದ ಒಂದು ಜಿಲ್ಲೆ,

ಕೊಡಗು
Websitekodagu.nic.in

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ

ಅಲ್ಲೆ ಆ ಕಡೆ ನೋಡಲಾ

ಅಲ್ಲೆ ಕೊಡಗರ ನಾಡಲಾ

ಅಲ್ಲೆ ಕೊಡಗರ ಬೀಡಲಾ

ಕೊಡಗಿನಲ್ಲಿ ಕಾಫೀ ಪ್ಲ್ಯಾಂಟೇಶನ್

ಭೂಲಕ್ಷ್ಮಿ ಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಜಿಲ್ಲೆ ಕೊಡಗನ್ನು ಗುರುತಿಸಲು ಇದಕ್ಕಿಂತ ಬೇರೆ ವರ್ಣನೆ ಬೇಕಾಗಿಲ್ಲ.

ಮದುವೆಯ ಉಡುಪಿನಲ್ಲಿ ದಂಪತಿಗಳು

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.ಕೊಡಗು, ಇದು ಪಶ್ಚಿಮ ಘಟ್ಟದ ​​ ತಪ್ಪಲಿನ ದಟ್ಟವಾದ ಕಾಡುಗಳಿಂದ ವೈಭವೀಕರಿಸಿದ ಕರ್ನಾಟಕದ ಅತ್ಯಂತ ಸುಂದರ ಗಿರಿಧಾಮವಾಗಿದೆ. ಇದು ನೈಋತ್ಯ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ 4,102 ಚದರ ಕಿಲೋಮೀಟರ್ (1,584 ಚದರ ಮೈಲಿ) ಪ್ರದೇಶವನ್ನು ಆವರಿಸಿದೆ. 2011 ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆಯು 554,519 ರಷ್ಟಿದೆ, 13.74% ರಷ್ಟು ಜಿಲ್ಲೆಯ ನಗರ ಕೇಂದ್ರಗಳಲ್ಲಿ ಕೇಂದ್ರೀಕೃತಗೊಂಡಿದೆ, ಇದು ಕರ್ನಾಟಕದ 30 ಜಿಲ್ಲೆಗಳಲ್ಲಿಯೇ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಕೊಡಗಿನ ಕಾಫಿ ಮತ್ತು ಕೊಡಗಿನ “ಕೆಚ್ಚೆದೆಯ ಯೋಧರರು” ಪ್ರಪಂಚದಲ್ಲಿ ಪ್ರಸಿದ್ದಿ ಪಡೆದಿದೆ. ಮಡಿಕೇರಿಯು ಕೊಡಗಿನ ಕೇಂದ್ರಸ್ಥಾನವಾಗಿದೆ. ಕೊಡಗು ಕೊಡವ ಭಾಷೆಯನ್ನು ಮಾತನಾಡುವ ಸ್ಥಳೀಯರಿಗೆ ನೆಲೆಯಾಗಿದೆ.

ಕೊಡಗಿನ ಅಧಿಕ ಭೂ ಭಾಗವು ಕೃಷಿಗಾಗಿ ಬಳಸಲಾಗುತ್ತಿದೆ. ಐತಿಹಾಸಿಕವಾಗಿ ಮತ್ತು ವಿಶಿಷ್ಟವಾಗಿ ಭತ್ತದ ಗದ್ದೆಗಳು ಕಣಿವೆ ಪ್ರದೇಶದಲ್ಲಿ ಕಂಡುಬರುತ್ತದೆ. ಕಾಫಿ ಮತ್ತು ಮೆಣಸಿನಗಿಡಗಳು ಸುತ್ತಮುತ್ತಲಿನ ಬೆಟ್ಟಗಳಲ್ಲಿ ಮುಖ್ಯವಾಗಿ ಮಡಿಕೇರಿ ಬಳಿ ಕಂಡುಬರುತ್ತದೆ. ಸಾಮಾನ್ಯವಾಗಿ ಕಂಡುಬರುವಂತಹಾ ಬೆಳೆ ಕಾಫಿ, ಅದರಲ್ಲೂ ವಿಶೇಷವಾಗಿ ಕಾಫೀ ರೋಬಸ್ಟಾ ಹೇರಳವಾಗಿ ಬೆಳೆಯುತ್ತಾರೆ. ಇದು ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುದ್ದಗಿರಿಯ ನಂತರ ಭಾರತದ ಎರಡನೇ ಕಾಫಿ ಉತ್ಪಾದನಾ ಪ್ರದೇಶವಾಗಿದೆ. ಇದರಿಂದ ಕೊಡಗು ಭಾರತದ ಶ್ರೀಮಂತಜಿಲ್ಲೆಗಳಲ್ಲಿ ಒಂದಾಗಿ ಬೆಳೆದಿದೆ.

ಕೊಡಗು ವನ್ಯಜೀವಿ ಸಂಪನ್ಮೂಲಗಳಿಂದ ಸಮೃದ್ಧವೆಂದು ಪರಿಗಣಿಸಲಾಗಿದೆ . ಮೂರು ವನ್ಯಜೀವಿ ಅಭಯಾರಣ್ಯಗಳು ಮತ್ತು ಒಂದು ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ: ಬ್ರಹ್ಮಗಿರಿ, ತಲಕಾವೇರಿ ಮತ್ತು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಗಳು ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಅಥವಾ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವೆಂದೂ ಕರೆಯಲಾಗುತ್ತದೆ.

ಕುಶಾಲನಗರ ಕೊಡಗಿನ ಹೊಸದಾಗಿ ರಚನೆ ಅದ ತಾಲೂಕು ಆಗಿದೆ

ಇಲ್ಲಿಯ ಜನ

ಬದಲಾಯಿಸಿ

ಕೊಡವ ತಕ್ಕ್ ಹಾಗೂ ಅರೆಭಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಇಲ್ಲಿಯ ಜನಸಂಖ್ಯೆ ೨೦೧೧ ಜನಗಣತಿಯಂತೆ ೫,೫೪,೫೧೯ .ಇದರಲ್ಲಿ ೨,೭೪,೬೦೮ ಪುರುಷರು,೨,೭೯,೯೧೧ ಮಹಿಳೆಯರು ಇದ್ದಾರೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಕರ್ನಾಟಕ ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು.

ತಾಲೂಕುಗಳು

ಬದಲಾಯಿಸಿ

ಕೊಡಗಿನಲ್ಲಿ ಐದು ತಾಲೂಕುಗಳಿವೆ.

ಕೊಡಗಿನ ೫ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ. ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲುಕಿನಲ್ಲಿ ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್,ತಲಕಾವೇರಿ, ಇತ್ಯಾದಿಗಳಾದರೆ, ವಿರಾಜಪೇಟೆತಾಲುಕಿನಲ್ಲಿ ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್, ಸೈಂಟ್ ಏನ್ಸ್ ಚರ್ಚ್, ಇಗ್ಗುತ್ತಪ್ಪ ದೇವಸ್ಥಾನ, ನಾಲ್ಕುನಾಡು ಅರಮನೆ, ಮುಂತಾದವು ಇವೆ. ಸೋಮವಾರಪೇಟೆ ತಾಲುಕಿನಲ್ಲಿ ಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ಡನ್ ದೇವಸ್ಥಾನ, ವೀರಭೂಮಿ,ದುಬಾರೆ ಅರಣ್ಯ, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ,ಹೊನ್ನಮ್ಮನ ಕೆರೆ,ಮಲ್ಲಳ್ಳಿ ಜಲಪಾತ, ಮೊದಲಾದವಿವೆ.ಪ್ರಿತಿ ಯಿಂದ ಪ್ರಿತಿಗಾಗಿ

ಕುಶಾಲನಗರ ತಾಲ್ಲೂಕು

 ಕುಶಾಲನಗರವು ಭಾರತದ ಕರ್ನಾಟಕ ರಾಜ್ಯದ ಕೊಡುಗು ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಕಾವೇರಿ ನದಿಯಿಂದ ಸುತ್ತುವರೆದಿರುವ ಇದು ಕೊಡಗು ಜಿಲ್ಲೆಯ ಹೆಬ್ಬಾಗಿಲು,ಇದು ಕುಶಾಲನಗರ ತಾಲ್ಲೂಕಿನ ಕೇಂದ್ರ ಕಛೇರಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಜನಸಂಖ್ಯೆಯ ಪ್ರಕಾರ ಮಡಿಕೇರಿ ಮತ್ತು ವಿರಾಜಪೇಟೆ ನಂತರ ಕುಶಾಲನಗರವು ಜಿಲ್ಲೆಯ ಮೂರನೇ ದೊಡ್ಡ ಪಟ್ಟಣವಾಗಿದೆ. ಕುಶಾಲನಗರ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ.
ವ್ಯುತ್ಪತ್ತಿ:
ಜನಪ್ರಿಯ ಪುರಾಣದ ಪ್ರಕಾರ ಹೈದರಾಲಿಯ ತನ್ನ ಮಗ ಟಿಪ್ಪುವಿನ ಜನನದ ಸುದ್ದಿಯನ್ನು ಪಡೆದಾಗ ಅಲ್ಲಿಯೇ ಬೀಡು ಬಿಟ್ಟಿದ್ದರು ಮತ್ತು ಅದನ್ನು ಕುಶ್ಯಲ್ ನಗರ ಎಂದು ಕರೆದನು "(ಸಂತೋಷದ ಪಟ್ಟಣ)"ಆದರೆ ವಾಸ್ತವದಲ್ಲಿ ಟಿಪ್ಪು ೧೭೫0ರ ಸುಮಾರಿಗೆ ಜನಿಸಿದರು, ಹೈದರಾಲಿ ೧೭೬೦ ರ ದಶಕದಲ್ಲಿ ಮೊದಲ ಬಾರಿಗೆ ಕೊಡಗು ಪ್ರವೇಶಿಸಿದರು ,ಕೊಡಗಿನಲ್ಲಿ ಬ್ರಿಟಿಷ್ ವಿಜಯ ಇದನ್ನು ಎಂದು ಕರೆಯಲಾಗುತ್ತಿತ್ತು, ನಂತರ fraserpet ಕರ್ನಲ್ ನಂತರ ಜೇಮ್ಸ್ ಸ್ಟುವರ್ಟ್ ಫ್ರೇಸರ್ ಯಾರು ರಾಜಕೀಯ ಏಜೆಂಟ್ ಕೂರ್ಗ್ ೧೮೩೪ ಸುಮಾರು.
ಭೌಗೋಳಿಕ ಅಂಶ :
 ಕುಶಾಲನಗರ ಇದೆ 12.47°N 75.97°E ಇದು ಸುಮಾರು 844ಮೀಟರ್(2726 ಅಡಿ)ಎತ್ತರ ವನ್ನು ಹೊಂದಿದೆ.
 ಕುಶಾಲನಗರವು ಕೊಡಗು ಜಿಲ್ಲೆಯ ಪೂರ್ವ ಭಾಗದಲ್ಲಿದೆ ,ನಗರವು ಸಾಮಾನ್ಯವಾಗಿ ಸಮತಟ್ಟಾಗಿದೆ, ಆದರೂ ಕೆಲವು ಪ್ರದೇಶಗಳು ಬೆಟ್ಟ ಗಳಿಂದ ಕೂಡಿದೆ. ಕಾವೇರಿ ನದಿಯು ಪಶ್ಚಿಮವನ್ನು ಹೊರತುಪಡಿಸಿ ಎಲ್ಲಾ ದಿಕ್ಕುಗಳಲ್ಲಿ ನಗರವನ್ನು ಸುತ್ತುವರೆದಿದೆ. ಇದು ಮೈಸೂರಿನಿಂದ ಪಶ್ಚಿಮಕ್ಕೆ 85ಕಿಲೋ ಮೀಟರ್. ಬೆಂಗಳೂರಿನ ಪಶ್ಚಿಮಕ್ಕೆ 220ಕಿಲೋ ಮೀಟರ್ ಮತ್ತು ಮಂಗಳೂರಿನಿಂದ ಪೂರ್ವಕ್ಕೆ 170ಕಿಲೋ ಮೀಟರ್ ದೂರದಲ್ಲಿದೆ.

ಜನಸಂಖ್ಯಾ ಶಾಸ್ತ್ರ: 2011 ರಂತೆ ಭಾರತದ ಜನಗಣತಿ ,ಕುಶಾಲನಗರವು 15.326ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆ ಯಲ್ಲಿ ಷುರುಷರು 53% ಮತ್ತು ಮಹಿಳೆಯರು 47%ರಷ್ಟಿದ್ದಾರೆ. ಕುಶಾಲನಗರವು ಸರಾಸರಿ 89.53%ಸಾಕ್ಷರತೆಯನ್ನು ಹೊಂದದೆ. ರಾಜ್ಯದ ಸರಾಸರಿ 73.36% ಷುರುಷರ ಸಾಕ್ಷರತೆ 82%ಕ್ಕಿಂತ ಹೆಚ್ಚು ಮತ್ತು ಮಹಿಳಾ ಸಾಕ್ಷರತೆ 73%ಆಗಿದೆ. ಜನಸಂಖ್ಯೆಯ 12% 6ವರ್ಷ ಕ್ಕಿಂತ ಕಡಿಮೆ ವಯಸ್ಸಿನವರು. ಕುಶಾಲನಗರವು ಮುಳ್ಳು ಸೋಗೆ ಕೂಡುಮಂಗಳೂರು, ಮತ್ತು ಕೂಡಿಗೆ ಸೇರಿದಂತೆ ಹತ್ತಿರ ದ ಹಳ್ಳಿಗಳ ಸಮೂಹದೊಂದಿಗೆ 39.393ಒಟ್ಟು ಜನಸಂಖ್ಯೆಯೊಂದಿಗೆ ಜಿಲ್ಲೆಯ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಸ್ಥಳೀಯವಾಗಿ 2ವರ್ಷದ ಜನರಿದ್ದಾರೆ. ಅವರು ಈ ಪ್ರದೇಶಗಳಲ್ಲಿ ಇನ್ನೂ ಜನಸಂಖ್ಯೆಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೊಡಗು ಗೌಡರು (ಅಕಾ ಅರೆ ಭಾಷೆ ಗೌಡರು).ಮತ್ತು ಕೊಡವರು(ಅಕಾ ಕೂರ್ಗಿಗಳು).

ಆರ್ಥಿಕತೆ: ಕುಶಾಲನಗರ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ವಾಗಿದೆ. K1ADB ಕೈಗಾರಿಕಾ ಪ್ರದೇಶವು ಕುಶಾಲನಗರ ದ ಕೂಡ್ಲೂರಿನಲ್ಲಿದೆ. ಅಲ್ಲಿ ಬಹು ಕಾಫಿಸಂಸ್ಕರಣಾ ಕೈಗಾರಿಕೆಗಳಿವೆ.

ಶಿಕ್ಷಣ: ಕುಶಾಲನಗರವು ಸರಾಸರಿ 89%ಸಾಕ್ಷರತೆಯನ್ನು ಹೊಂದಿದೆ. ನಗರದಲ್ಲಿ ಆರು ಖಾಸಗಿ ಶಾಲೆಗಳು ಒಂದು ಸರ್ಕಾರಿ ಶಾಲೆ (ಶಿಶುವಿಹಾರದಿಂದ ಪದವಿವರಣೆ)ಒಂದು ಪಾಲಿಟೆಕ್ನಿಕ್ ಶಾಲೆ ಮತ್ತು ಎಂಜಿನಿಯರಿಂಗ್ ಕಾಲೇಜನ್ನು ಹೊಂದಿದೆ, ಒಂದು ಸೈನಿಕ ಶಾಲೆ ವಿದ್ಯಾರ್ಥಿಗಳು ಮಿಲಿಟರಿ ತರಬೇತಿ ಪಡೆಯಲು ಅಲ್ಲಿ ಸಿಟಿ ಅಳವಿಗಿಂತ ಇನ್ನೂ ಹೆಚ್ಚಾದ ದೂರದ ವ್ಯಾಪ್ತಿ ಹೊಂದಿದೆ. ಪ್ರವಾಸೋದ್ಯಮ:

ಪ್ರವಾಸಿ ತಾಣಗಳು: ಕಾವೇರಿ. ಹಾರಂಗಿ ಹಿನ್ನೀರು. ಹಾರಂಗಿ ಜಲಾಶಯ. ದಬಾರೆ. ಚಿಕ್ಲಿಹೊಳೆ. ಅಯ್ಯಪ್ಪ ಸ್ವಾಮಿ ದೇವಸ್ಥಾನ. ಕಣಿವೆ. ಕಾವೇರಿನಿಸರ್ಗಧಾಮ.
ಸಾರಿಗೆ: 

ಕುಶಾಲನಗರವು ಒಂದು ಸರ್ಕಾರಿ ಬಸ್ ನಿಲ್ದಾಣವನ್ನು ಹೊಂದಿದ್ದು. ಅದು ಎಲ್ಲಾ ರಾಜ್ಯಗಳ ಮತ್ತು ಅಂತರ್ ರಾಜ್ಯ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತದೆ. ಬೆಂಗಳೂರು ಮತ್ತು ಮೈಸೂನಿರಿಂದ ಸಾರಿಗೆ ಸೇವೆಗಳು ಅಥವಾ ಸ್ವಯಂ ಚಾಲನಾ ಕಾರುಗಳ ಮೂಲಕ ನಗರವನ್ನು ಪ್ರವೇಶಿಸಬಹುದು. ಇದು ಪ್ರವಾಸಿಗರಿಗೆ ಕೊಡಗು ಪ್ರವೇಶಿಸಲು ಗೇಟ್ ವೇ ಆಗಿದೆ. ಕೊಡಗಿನಲ್ಲಿ ರೈಲ್ವೆ ಸೇವೆ ಇಲ್ಲ ,ಮೈಸೂರಿನಿಂದ ಕುಶಾಲನಗರಕ್ಕೆ ರೈಲ್ವೆ ಮಾರ್ಗಕ್ಕೆ ಯೋಜನೆ ರೂಪಿಸಲಾಗಿದ್ದರೂ ಪರಿಸರ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿದೆ. ಹತ್ತಿರದ ವಿಮಾನ ನಿಲ್ದಾಣ ವು ಮೈಸೂರಿನಲ್ಲಿದೆ. ಮತ್ತು ಹತ್ತಿರದ.ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕಣ್ಣುರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ರಾಜ್ಯದ ಇತರ ಭಾಗಗಳಿಂದ ಪ್ರವಾಸೋದ್ಯಮ ವನ್ನು ಹೆಚ್ಚಿಸಲು ನಗರದಲ್ಲಿ ಕುಶಾಲನಗರ ವಿಮಾನ ನಿಲ್ದಾಣದ ಹೆಸರಿನ ಹೊಸ ಮಿನಿ ವಿಮಾನ ನಿಲ್ದಾಣ ವನ್ನು ನಿರ್ಮಿಸಲು ಪ್ರಸ್ತಾಪಿಸಿದೆ.

ಬೆಳೆಗಳು

ಬದಲಾಯಿಸಿ

ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿ ಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೩/೧ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.

ಇತಿಹಾಸ

ಬದಲಾಯಿಸಿ

ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

ಕೊಡಗಿನಲ್ಲಿ ಐತಿಹಾಸಿಕ ಅತಿವೃಷ್ಟಿ

ಬದಲಾಯಿಸಿ
  • ಕೊಡಗಿನಲ್ಲಿ ೨೦೧೮ರ ಆಗಸ್ಟಿನ ಮಳಗೆ ಕೊಡಗಿನ ಜೀವನ ಪೂರಾ ಅಸ್ತವ್ಯಸ್ತವಾಗಿ ನಲುಗಿಹೋಯಿತು. ಕೊಡಗಿನ ಎಲ್ಲಾ ಸಂಪರ್ಕಗಳು ಕಡಿತವಾಯಿತು. ಸಾವಿರಾರು ಜನ ಮನೆ ಕಳೆದು ಕೊಂಡು ಸಂಪರ್ಕವಿಲ್ಲದೆ ಪ್ರಾಣಭಯಕ್ಕೆ ತುತ್ತಾದರು. ಆಗಸ್ಟ್ ೧೮ ರ ಮಳೆಗೆ ಜನ ಮನೆಮಠ ಕಳೆದುಕೊಂಡು ಅನಾಥರಾದರು. 600 ಮಂದಿ ಜೀವನ್ಮರಣ ಸ್ಥಿತಿಯಲ್ಲಿ ; ಇನ್ನೂ ಐದು ದಿನ ಭಾರಿ ಮಳೆ ನಿರೀಕ್ಷೆ. ಪರಿಹಾರ ಕಾರ್ಯಗಳು ಯುದ್ಧೋಪಅದಿಯಲ್ಲಿ ನಡೆದವು ಹೆಲಿಕ್ಯಾಪಟರುಗಳು ರಕ್ಷಣಾದಳಗಳು ಜೀವ ಒತ್ತೆ ಇಟ್ಟು ಕೆಲಸ ಮಾಡಿದವು ಆದರೂ ಗುಡ್ಡಗಳು ಮನೆಗಳು ಕುಸಿದು, ರಸ್ತೆಗಳೂ ಕಸಿದು ಅದರಮೇಲೆ ಮಣ್ಣು ಕುಸಿದು ಎಲ್ಲಾಸಂಪರ್ಕ ಕಡಿತವಾದವು.[]
  • ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿಯಿಂದ ಕೊಡಗು ಜಿಲ್ಲೆ ನಲುಗಿ ಹೋಯಿತು. ಕ್ಷಣಕ್ಷಣಕ್ಕೂ ಗುಡ್ಡಗಳು ಕುಸಿದವು. ಅದರಲ್ಲಿ ಸಿಲುಕಿಕೊಂಡವರಿಗೆ ಹೊರಗೆ ಬರಲು ಸಾಧ್ಯವಾಗದಾಯಿತು. ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗುವುದೂ ಅಸಾಧ್ಯವಾಯಿತು. ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ವಿಳಂಬವಾಯಿತು. ದಿ.೧೮- ೨೦ ಆಗಸ್ಟ್ ೨೦೧೮ ರಲ್ಲಿ ಜಿಲ್ಲೆಯ ವಿವಿಧೆಡೆ ಅಂದಾಜು 600ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದರು. ಹಲವರು ಮಣ್ಣಿನ ಅಡಿ ಸಿಲುಕಿದ್ದರೆ, ಕೆಲವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ. ದಿ.೧೭-೮-೨೦೧೮ ಶುಕ್ರವಾರ ಮಾದಾಪುರ ಮುವತೊಕ್ಲು ಗ್ರಾಮದಲ್ಲಿ ಗುಡ್ಡ ಕುಸಿದುಒಬ್ಬರು ಮೃತಪಟ್ಟಿದ್ದಾರೆ. ಮತ್ತೆರಡು ಶವಗಳು ಪತ್ತೆಯಾಗಿವೆ. ಪರಿಸ್ಥತಿ ಹಿಗೆಯೆಯೇಗಂಬೀರವಾಗಿದೆ.
  • ಕ್ಷಣಾರ್ಧದಲ್ಲಿ ಸಾವಿರಾರು ಮರಗಳನ್ನು ಕೊಚ್ಚಿಕೊಂಡು ಜನವಸತಿಗೆ ಅಪ್ಪಳಿಸಿದ ತೊರೆ ಭೋರ್ಗರೆವ ಪ್ರವಾಹದ ನಡುವೆ ಸ್ತಬ್ಧವಾದ ಜೋಡುಪಾಲ See video[]
  • ಕೊಡಗಿನ ಪ್ರಳಯಕ್ಕೆ ಅತೀ ಆಸೆಯ ಅಭಿವೃದ್ಧಿಯೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.[]
  • [ನಲುಗಿದ ಕೊಡಗು]
  • ಕೊಡಗಿನ ಪ್ರಳಯದ ಕಥೆ:; ಹೀಗಾಗಿದೆ ನೋಡಿ ಕಾವೇರಿ ಮಕ್ಕಳ ಬದುಕು:ಉಷಾ ಪ್ರೀತಮ್= 21 ಆಗಸ್ಟ್ 2018:: ಕೊಡಗಿನಲ್ಲಿ ಮೈಮುರಿದ ಭೂಮಿ, ಕಣ್ಮುಂದೆಯೇ ಜಾರಿತು ಕಾಫಿನಾಡು
  • ಅಪಾಯದ ಎಚ್ಚರಿಕೆ ಕೊಟ್ಟಿದ್ದ ‘ಪ್ರಕೃತಿ’

ಹೊರಗಿನ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ