ವಿರಾಜಪೇಟೆ
ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ[೧]. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ.
ವಿರಾಜಪೇಟೆ (ವೀರರಾಜೇಂದ್ರಪೇಟೆ) | |
ರಾಜ್ಯ - ಜಿಲ್ಲೆ |
ಕರ್ನಾಟಕ - ಕೊಡಗು ಜಿಲ್ಲೆ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 909 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೧೫,೨೦೬ - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೧ ೨೧೮ - +೦೮೨೭೪ - ಕೆಎ-೧೨ |
ಅಂತರ್ಜಾಲ ತಾಣ: www.virajpettown.gov.in |
ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬, ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ.
ಉಲ್ಲೇಖ
ಬದಲಾಯಿಸಿ- ↑ ಕೊಡಗಿನ ಇತಿಹಾಸ - ಡಿ ಎನ್ ಕೃಷ್ಣಯ್ಯ - ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ - ಮೊದಲನೆಯ ಮುದ್ರಣ ೧೯೭೪ - ಪುಟ ೨೪೪