ನಾಗಮಂಗಲವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಉತ್ತರ ಭಾಗದಲ್ಲಿರುವ ತಾಲ್ಲೂಕು. ಉತ್ತರಕ್ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು. ಪಶ್ಚಿಮಕ್ಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕುಗಳು. ಪೂರ್ವಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕುಗಳು ಮತ್ತು ದಕ್ಷಿಣಕ್ಕೆ ಮಂಡ್ಯ ಮತ್ತು ಪಾಂಡವಪುರ ತಾಲ್ಲೂಕುಗಳಿವೆ. ಇದು ಮಂಡ್ಯ ಜಿಲ್ಲೆಯ ಅತ್ಯಂತ ದೊಡ್ಡ ತಾಲ್ಲೂಕು. ಪಾಂಡವಪುರ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನ ಹೋಬಳಿಗಳು ಕಸಬ, ಬಿಂಡಿಗನವಿಲೆ, ಬೆಳ್ಳೂರು, ದೇವಲಾಪುರ ಮತ್ತು ಹೊಣಕೆರೆ. ಇಲ್ಲಿ ೩೬೫ ಗ್ರಾಮಗಳಿವೆ. ವಿಸ್ತೀರ್ಣ ೧,೦೪೦ ಚ.ಕಿ.ಮೀ. ಜನಸಂಖ್ಯೆ ೧,೯೦,೮೧೪ (೨೦೦೧). ಈ ತಾಲ್ಲೂಕು ೧೮೮೨ರ ವರೆಗೆ ಹಾಸನ ಜಿಲ್ಲೆಯಲ್ಲಿತ್ತು. ಅನಂತರ ಮೈಸೂರು ಜಿಲ್ಲೆಯಲ್ಲಿತ್ತು. ಪ್ರತ್ಯೇಕ ಮಂಡ್ಯ ಜಿಲ್ಲೆಯನ್ನು ರಚಿಸಿದಾಗ ಆ ಜಿಲ್ಲೆಗೆ ಇದನ್ನು ಸೇರಿಸಲಾಯಿತು.

ನಾಗಮಂಗಲ
ತಾಲ್ಲೂಕು
ಸೌಮ್ಯಕೇಶವ ದೇವಸ್ಥಾನ
ಸೌಮ್ಯಕೇಶವ ದೇವಸ್ಥಾನ
Country India
StateKarnataka
DistrictMandya
Elevation
೭೭೨ m (೨,೫೩೩ ft)
Population
 (2001)
 • Total೧೬,೦೫೦
Languages
 • OfficialKannada
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿKA-54
ಜಾಲತಾಣ[<span%20class="url">.nagamangalatown.gov.in www.nagamangalatown.gov.in%20www<wbr/>.nagamangalatown<wbr/>.gov<wbr/>.in]</span>]
ಸೌಮ್ಯಕೇಶವ ದೇವಸ್ಥಾನ
  • ಈ ತಾಲ್ಲೂಕು ಸಾಮಾನ್ಯವಾಗಿ ಬಯಲು ನೆಲ, ಪಶ್ಚಿಮ ಮತ್ತು ಉತ್ತರದಲ್ಲಿ ಸಾಮಾನ್ಯವಾದ ಬೆಟ್ಟಗುಡ್ಡಗಳಿವೆ. ಚುಂಚನಗಿರಿ ಇವುಗಳಲ್ಲಿ ಪ್ರಸಿದ್ಧವಾದುದ್ದು. ತುಮಕೂರಿನಿಂದ ಹರಿದು ಬರುವ ಶಿಂಶಾ ನದಿ ಈ ತಾಲ್ಲೂಕಿನ ಪೂರ್ವದ ಗಡಿಯಾಗಿ ಅಲ್ಲಲ್ಲಿ ಸ್ವಲ್ಪ ದೂರ ಹರಿಯುತ್ತದೆ. ಲೋಕಪಾವನಿ ನದಿ ತಾಲ್ಲೂಕಿನ ನೈಋತ್ಯದಲ್ಲಿ ಹುಟ್ಟಿ ಸ್ವಲ್ಪ ದೂರ ಹರಿದು ದಕ್ಷಿಣಾಭಿಮುಖವಾಗಿ ಪಾಂಡವಪುರ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ತಾಲ್ಲೂಕು ಒಟ್ಟಿನಲ್ಲಿ ಪೂರ್ವ ಮತ್ತು ದಕ್ಷಿಣಕ್ಕೆ ಇಳಿಜಾರಾಗಿದೆ.
  • ಪಶ್ಚಿಮದ ಶಿಲೆಗಳಲ್ಲಿ ಚಿನ್ನದ ನಿಕ್ಷೇಪವುಂಟು. ಆದರೆ ಇದು ಅತ್ಯಲ್ಪ; ಆರ್ಥಿಕವಾಗಿ ಲಾಭದಾಯಕವಲ್ಲ. ಮೃದುವಾದ ಬಳಪದ ಕಲ್ಲು ಇನ್ನೊಂದು ಖನಿಜ ನಿಕ್ಷೇಪ. ತಾಲ್ಲೂಕಿನಲ್ಲಿ ಅಲ್ಲಲ್ಲಿ ಕುರುಚಲು ಕಾಡುಗಳಿವೆ. ಇಲ್ಲಿಯ ಮಣ್ಣು ಸಾಮಾನ್ಯವಾಗಿ ಮರಳುಮಿಶ್ರಿತ. ಅಲ್ಲಲ್ಲಿ ಕೆಂಪು ಮಣ್ಣೂ ಉಂಟು. ವಾರ್ಷಿಕ ಸರಾಸರಿ ಮಳೆ ೫೯೮ ಮೀಮೀ. ರಾಗಿ, ಜೋಳ, ಹುರುಳಿ, ತೊಗರಿ ಇವು ಮುಖ್ಯ ಬೆಳೆಗಳು. ಕೆರೆಗಳು ವಿಶೇಷವಾಗಿವೆ.
  • ಬಾವಿಗಳ ನೆರವಿನಿಂದ ಬತ್ತ, ಕಬ್ಬುಗಳನ್ನೂ ಬೆಳೆಯುತ್ತಾರೆ. ಇತರ ಫಸಲುಗಳು ತೆಂಗು, ಬಾಳೆ, ಮೆಣಸಿನಕಾಯಿ, ತರಕಾರಿ. ಇಲ್ಲಿ ಬೆಳೆಯುವ ಪ್ರಸಿದ್ಧವಾದ ಬತ್ತ ತಿರುಗನಹಳ್ಳಿಯ ಸಣ್ಣ ಎಂಬುದು. ಕುರಿ ಸಾಕುವುದು ಮತ್ತು ಹೈನುಗಾರಿಕೆ ತಾಲ್ಲೂಕಿನ ಮುಖ್ಯ ಕಸುಬು. ಇದು ಹಳ್ಳಿಕಾರ್ ರಾಸುಗಳಿಗೂ ಹೆಸರಾಗಿದೆ. ಕರಡಿಹಳ್ಳಿ ಪ್ರದೇಶದಲ್ಲಿ ಇದನ್ನು ಹೆಚ್ಚಾಗಿ ಸಾಕುತ್ತಾರೆ. ನಾಗಮಂಗಲ ಪಟ್ಟಣ ಈ ತಾಲ್ಲೂಕಿನ ಮುಖ್ಯ ಸ್ಥಳ.
  • ಇದು ಉ.ಅ. ೧೨? ೪೯’ ಮತ್ತು ಪೂ.ರೇ. ೭೬? ೪೯’ ಮೇಲೆ ಇದೆ. ಸಮುದ್ರಮಟ್ಟಕ್ಕೆ ಸುಮಾರು ೭೮೬ ಮೀ. ಎತ್ತರದಲ್ಲಿರುವ ಈ ಪಟ್ಟಣ ಮೈಸೂರಿನಿಂದ ಸುಮಾರು ೬೫ ಕಿ.ಮೀ. ಉತ್ತರಕ್ಕೆ ಇದೆ. ಪಟ್ಟಣದ ಜನಸಂಖ್ಯೆ ೧೬,೦೫೦ (೨೦೦೧). ಪುರಸಭೆ, ಆಸ್ಪತ್ರೆ, ಪಶುವೈದ್ಯಶಾಲೆ, ಪ್ರೌಢಶಾಲೆಗಳು, ಕಿರಿಯ ಕಾಲೇಜು, ಉಪಾಧ್ಯಾಯ ತರಬೇತು ಕಾಲೇಜು ಇವೆ. ಇದೊಂದು ವ್ಯಾಪಾರ ಸ್ಥಳ. ಇಲ್ಲಿ ಪ್ರತಿ ಶುಕ್ರವಾರ ಸಂತೆ ಸೇರುತ್ತದೆ. ಹಿತ್ತಾಳೆ ಕೆಲಸ, ಕಂಚಿನ ವಿಗ್ರಹ ತಯಾರಿಕೆಗಳಿಗೆ ಈ ಪಟ್ಟಣ ಪ್ರಸಿದ್ಧವಾದದ್ದು.

ಧಾರ್ಮಿಕ ಸ್ಥಳಗಳು

ಬದಲಾಯಿಸಿ

ತಾಲ್ಲೂಕಿನ ಯಗಟಿ ಕೊಪ್ಪಲಿನ ಶ್ರೀ ಶ್ರೀ ಶ್ರೀ ಹುಚ್ಚಪ್ಪ ಸ್ವಾಮಿ ದೇವಾಲಯವು ಪ್ರಸಿದ್ದಿಯಾಗಿದೆ ಹಾಗು ಇಲ್ಲಿ ನಡೆಯುವ ಜಾತ್ರೆಯು ತುಂಬಾ ಖಧರ್ರಾಗಿ ನಡೆಯುತ್ತದೆ ಕಾರ್ತಿಕ ಮಾಸದಲ್ಲಿ ನಡೆಯುವ ಹುಲ್ಲೆ ಪರುಷೆ ಪ್ರಸಿದ್ಧವಾಗಿದೆ

  1. ಪ್ರಸಿದ್ಧ ಆದಿಶಕ್ತಿ ಮುಳುಕಟ್ಟಮ್ಮ ದೇವಿ ಕ್ಷೇತ್ರ
  1. ಮೂಲೆ ಸಿಂಗೇಶ್ವರ ಮತ್ತು ಮಾಧವರಾಯ ದೇವಾಲಯಗಳಿವೆ.
  2. ಬಿಂಡಿಗನವಿಲೆಯಲ್ಲಿ ಚನ್ನಕೇಶವ ದೇವಾಲಯವಿದೆ.
  3. ಆದಿಚುಂಚನಗಿರಿ ಒಂದು ಪುಣ್ಯಕ್ಷೇತ್ರ.
  4. ಕಂಬದಹಳ್ಳಿಯಲ್ಲಿ ಗಂಗರ ಕಾಲದ ವಾಸ್ತುಕೃತಿಗಳಿವೆ.
  5. ನಾಗಮಂಗಲ ಮತ್ತು ಕೃಷ್ಣರಾಜಪೇಟೆ ತಾಲೂಕಿನ ಗಡಿ ಗ್ರಾಮವಾದ ಸಣ್ಣೇನಹಳ್ಳಿಯಲ್ಲಿ  ಮಹದೇಶ್ವರ ಹಾಗು ಬಸವೇಶ್ವರ ದೇವಾಲಯಗಳಿದ್ದು ಇಲ್ಲಿ ಪ್ರತಿ ದೀಪಾವಳಿಯ ಸಮಯದಲ್ಲಿ ದನಗಳ ಜಾತ್ರೆಯ  ಜೊತೆಗೆ ಮಹದೇಶ್ವರ ಸ್ವಾಮಿಯ ಹುಲಿವಾಹನೋತ್ಸವ ನೆರವೇರುತ್ತದೆ.
  6. ಇದು ಜೈನ ಕ್ಷೇತ್ರ. ಇಲ್ಲಿ ಸುಮಾರು ೧೫ ಮೀ. ಎತ್ತರದ ಬ್ರಹ್ಮದೇವ ಕಂಬವಿದೆ.
  7. ಇದರ ಎದುರಿಗೇ ದ್ರಾವಿಡ ಶೈಲಿಯ ಪಂಚ (ಕೂಟ) ಬಸ್ತಿ ಇದೆ.
  8. ಆಲತಿಗಿರಿ ಒಂದು ಸುಂದರ ಸ್ಥಳ. ನಾಗಮಂಗಲಕ್ಕೆ ಪಶ್ಚಿಮದಲ್ಲಿ ೬ ಕಿ.ಮೀ. ದೂರದಲ್ಲಿರುವ ಪಡುವಲಪಟ್ಟಣ ಒಂದು ಧಾರ್ಮಿಕ ಕ್ಷೇತ್ರ ಹಾಗೂ ವಿದ್ಯಾಕೇಂದ್ರವಾಗಿತ್ತು.
  9. ರಾಮಾನುಜಾಚಾರ್ಯರು ಇಲ್ಲಿ ತಪಸ್ಸು ಮಾಡಿದರೆಂದು ಒಂದು ಶಾಸನ ತಿಳಿಸುತ್ತದೆ.
  10. ಹೊಣಕೆರೆ ಹೋಬಳಿಯ ಮಾಚಲಗಟ್ಟ ಹಿಂದೆ ಬಿಜ್ಜಳೇಶ್ವರ ಎಂಬ ದೊಡ್ಡ ಊರಾಗಿತ್ತು.
  11. ಇಲ್ಲಿ ೧೩ನೆಯ ಶತಮಾನದ ಮಲ್ಲೇಶ್ವರ ದೇವಾಲಯವಿದೆ.
  12. ಚೋಳಸಂದ್ರದಲ್ಲಿ ೧೨ನೆಯ ಶತಮಾನದ ಒಂದು ಜೈನ ಬಸ್ತಿ ಇದೆ.
  13. ಹಟ್ಣದ ವೀರಭದ್ರ ದೇವಾಲಯ ಹಿಂದೆ ಜೈನಬಸ್ತಿಯಾಗಿತ್ತು. ಇದು ಹೊಯ್ಸಳ ಶೈಲಿಯ ಗುಡಿ. ಇದನ್ನು ೧೧೭೯ರಲ್ಲಿ ಕಟ್ಟಿಸಲಾಯಿತು.
  14. ಚಿನಕುರಳಿಯಲ್ಲಿ ಒಂದು ಆಂಜನೇಯ ದೇವಾಲಯವೂ ಮಾಸ್ತಿ ಗುಡಿಗಳೂ ಇವೆ. ಹೈದರ್ ೧೭೭೧ರಲ್ಲಿ ಇಲ್ಲಿ ಮರಾಠರಿಗೆ ಸೋತ.
  15. ನಲ್ಕುಂದಿ ಗ್ರಾಮದಲ್ಲಿ ಗೋಪಾಲಕೃಷ್ಣ ದೇವಾಲಯವಿದೆ. ಭಾಗವಂತಿಕೆ ಮೇಳಕ್ಕೆ ಇದು ಪ್ರಸಿದ್ಧವಾಗಿದೆ.
  16. ಹದ್ದಿನಕಲ್ಲಿನ ಹನುಮಂತರಾಯನ ಬೆಟ್ಟದ ಮೇಲೆ ಸುಮಾರು ೩ ಮೀ. ಎತ್ತರದ ಕಂಬದಲ್ಲಿ ಇಂದ್ರಜಿತುವಿನ ಚಿತ್ರವನ್ನು ಕೆತ್ತಲಾಗಿದೆ.
  17. ಗಾಳಿ ಹಿಡಿದವರು ಇಲ್ಲಿ ಅದರಿಂದ ಬಿಡುಗಡೆ ಹೊಂದಬಹುದು ಎಂಬುದು ಜನರ ನಂಬಿಕೆ. ಈ ಬೆಟ್ಟದ ಬುಡದಲ್ಲಿರುವ ಚೋರಸಂದ್ರ ಒಂದು ಜನಪದ ಕಲಾಕೇಂದ್ರ.
  18. [[ಕರಡಹಳ್ಳಿಯಲ್ಲಿ ಚಲುವರಾಯಸ್ವಾಮಿದೇವಾಲಯವಿದ್ದು ಅದನ್ನು ಚೋಳರ ಕಾಲದ ಶಿಲಾಸನದ ಕಾಲದಿಂದಲೂ ಗುಡಿಯು ಇಂದಿಗೂ ಇದೆ]] ಕರಡಹಳ್ಳಿಯಲ್ಲಿ ಪಟ್ಟಲದಮ್ಮ ನ ಗುಡಿಯಿದೆ.
  19. ಶಿಲ್ಪಪುರ ಗ್ರಾಮದಲ್ಲಿ ಐತಿಹಾಸಿಕ ಬಸವೇಶ್ವರ ದೇವಾಲಯವಿದೆ. ಸೋಮೇನಹಳ್ಳಿಯಲ್ಲಿ ಶಕ್ತಿ ದೇವತೆಗಳೆನಿಸಿದ ಸೋಮೇನಹಳ್ಳಿಯಮ್ಮ ಮತ್ತು ಕೋಟೆ ಮಾರಮ್ಮನ ದೇವಾಲಯಗಳಿವೆ. ಮಾಂಸಾಹಾರದ ಪರಗಳಿಗೆ ಈ ಕ್ಷೇತ್ರ ಹೆಸರುವಾಸಿಯಾಗಿದೆ.

ಇತಿಹಾಸ

ಬದಲಾಯಿಸಿ
  • ದೇವರಿರುವ ಹುತ್ತವನ್ನು ಲೋಹಿತ ವಂಶದವನೊಬ್ಬ ಕನಸಿನಲ್ಲಿ ಕಂಡು ಅದನ್ನು ಅರಸುತ್ತ ಈ ಸ್ಥಳಕ್ಕೆ ಬಂದನೆಂದೂ ಇಲ್ಲಿ ನರಸಿಂಹ ದೇವರು ಆವಿರ್ಭಾವವಾಗಿದ್ದುದನ್ನು ನೋಡಿ ಇಲ್ಲಿ ದೇವಾಲಯ ನಿರ್ಮಿಸಿದನೆಂದೂ ಪ್ರತೀತಿ. ಅವನು ಇಲ್ಲಿ ದೇವರ ಸುತ್ತ ಒಂದು ನಾಗರಹಾವು ಸುತ್ತುತ್ತಿದ್ದುದನ್ನು ಕಂಡುದರಿಂದ ಈ ಸ್ಥಳಕ್ಕೆ ನಾಗಮಂಡಲವೆಂದು ಹೆಸರಾಯಿತೆಂದೂ ಅನಂತರ ಇದು ನಾಗಮಂಗಲವಾಯಿತೆಂದೂ ಹೇಳಲಾಗಿದೆ.
  • ಮಹಾಭಾರತದ ಮಣಿಪುರ ಇದೆಂದೂ ನಂಬಲಾಗಿದೆ. ಇದಕ್ಕೆ ಚತುರ್ವೇದ ಭಟ್ಟಾರಕ ರತ್ನ ಅಗ್ರಹಾರವೆಂದು ಹೆಸರಿತ್ತು. ಇದು ವ್ಯಾಪಾರ ಮತ್ತು ವಿದ್ಯಾಕೇಂದ್ರವಾಗಿತ್ತು ಎಂದೂ ಪ್ರತೀತಿಯಿದೆ. ಇಲ್ಲಿ ಗಂಗರ ಕಾಲದ ಶಾಸನವೊಂದು ದೊರಕಿದೆ. ೧೧೩೫ರಲ್ಲಿ ವಿಷ್ಣುವರ್ಧನನ ರಾಣಿ ಬೊಮ್ಮಲದೇವಿಯಿಂದ ಇಲ್ಲಿಯ ಅಗ್ರಹಾರದ ಜೀರ್ಣೋದ್ಧಾರವಾಯಿತು.
  • ಲೋಹಿತವಂಶದ ಪಾಳೆಯಗಾರರು ಇಲ್ಲಿ ೧೭ನೆಯ ಶತಮಾನದವರೆಗೂ ಆಳುತ್ತಿದ್ದರೆಂದೂ ಹೇಳಲಾಗಿದೆ. ಈ ವಂಶದ ಜೈವಿಡ ನಾಯಕ ಇಲ್ಲಿಯ ಒಳಕೋಟೆಯನ್ನೂ (೧೨೭೦) ಚನ್ನಪಟ್ಟಣದ ಜಗದೇವರಾಯ ಹೊರಕೋಟೆಯನ್ನೂ ಕಟ್ಟಿಸಿದನೆಂದೂ ಹೇಳಲಾಗಿದೆ. ೧೬೩೦ರಲ್ಲಿ ಇದು ಒಡೆಯರ ಆಳ್ವಿಕೆಗೆ ಬಂತು. ಮೈಸೂರು-ಮರಾಠ ಯುದ್ಧಗಳಲ್ಲಿ ಇದು ಬಹಳ ಹಾನಿಗೆ ಒಳಗಾಯಿತು. ಮರಾಠರ ಪರಶುರಾಮ ಭಾವು ೧೭೯೨ರಲ್ಲಿ ಇದನ್ನು ಕೊಳ್ಳೆ ಹೊಡೆದ.

ದೇವಾಲಯಗಳು

ಬದಲಾಯಿಸಿ
  • ಇಲ್ಲಿಯ ದೇವಾಲಯಗಳಲ್ಲಿ ಸೌಮ್ಯಕೇಶವ ಗುಡಿ ದೊಡ್ಡದು. ಇದು ಬಹುಶಃ ವಿಷ್ಣುವರ್ಧನನ ಕಾಲದ್ದು. ಇದರ ನಕ್ಷತ್ರಾಕಾರದ ಜಗತಿಯ ಎತ್ತರ ಸುಮಾರು ೧.೪ ಮೀ. ಇದು ತ್ರಿಕೂಟಾಚಲ. ಮಧ್ಯದ ಗುಡಿ ಸೌಮ್ಯಕೇಶವನದು; ಆಚೀಚಿನವು ಅರೆಗಂಬಗಳ ಅಲಂಕರಣವಿದೆ. ಸುತ್ತಲೂ ಪ್ರಾಕಾರವಿದೆ. ಮಹಾದ್ವಾರದ ಮೇಲಿನ ದ್ರಾವಿಡ ಗೋಪುರ ಏಳು ಅಂತಸ್ತುಗಳದು.
  • ಪಾತಾಳಾಂಕಣದಲ್ಲಿ ಶ್ರೀವೈಷ್ಣವ ಸಂಪ್ರದಾಯದ ದೇವಾಲಯ ತುಂಬಾ ಪ್ರಸಿದ್ದ ವಾದದ್ದು ಮತ್ತು ಆಳ್ವಾರುಗಳ ಗುಡಿಗಳಿವೆ. ದೇವಾಲಯದ ಮುಂದಿನ ಸುಂದರ ಗರುಡಗಂಬದ ಎತ್ತರ ಸುಮಾರು ೧೬.೮ ಮೀ. ಈ ದೇವಾಲಯದ ಸಮೀಪದಲ್ಲಿರುವ ನರಸಿಂಹ ದೇವಾಲಯವೂ ಹೊಯ್ಸಳರ ಕಾಲದ್ದು. ಇದು ಇಲ್ಲಿಯ ಅತ್ಯಂತ ಪ್ರಾಚೀನ ದೇವಾಲಯ ಎಂದು ಹೇಳಲಾಗಿದೆ. ಭುವನೇಶ್ವರ ದೇವಾಲಯವೂ ಹೊಯ್ಸಳರ ಕಾಲದ್ದೇ.
  • ಆದರೆ ಇದು ಬಹಳಮಟ್ಟಿಗೆ ದ್ರಾವಿಡ ಸಂಪ್ರದಾಯದ ಕಟ್ಟಡ. ವೀರಭದ್ರ ಮತ್ತು ಭದ್ರಕಾಳಿ, ಗ್ರಾಮದೇವತೆಯಾದ ಬಡಗೋಡಮ್ಮ, ಅಕ್ಕಸಾಲಿಗರ ದೇವತೆಯಾದ ಕಾಳಮ್ಮ ಇವರ ಗುಡಿಗಳು ಇವೆ. ಊರಿನ ನಾಲ್ಕೂ ಕಡೆ ನಾಲ್ಕು ಕೆರೆಗಳುಂಟು. ಸೌಮ್ಯಕೇಶವ ಮತ್ತು ನರಸಿಂಹ ಗುಡಿಗಳ ಮಧ್ಯೆ ಜಗದೇವರಾಯನ ಅರಮನೆ ಇತ್ತು ಎಂದು ಹೇಳಲಾಗಿದೆ. ಇದರ ಸಮೀಪದಲ್ಲೆ ಒಂದು ದೊಡ್ಡ ಮಂಟಪವಿದೆ. ಇದು ಸಭಾಮಂಟಪವಾಗಿದ್ದಿರಬಹುದೆಂದು ಊಹಿಸಲಾಗಿದೆ.
  • ಊರಿನ ಸಮೀಪದಲ್ಲಿರುವ, ಸುಮಾರು ೧೮ ಮೀ. ವ್ಯಾಸದ ಮತ್ತು ಸುಮಾರು ೦.೯ ಮೀ. ಆಳದ ಕೊಳವನ್ನು ಜಗದೇವರಾಯ ಜಲಕ್ರೀಡೆಗಾಗಿ ಕಟ್ಟಿಸಿದನೆಂದು ಇಲ್ಲಿಯ ಜನ ಹೇಳುತ್ತಾರೆ. ಈ ಕೊಳದ ನಡುವೆ ಒಂದು ಮಂಟಪ ಇದೆ. ಕರಡಹಳ್ಳಿ ಊರಿನಲ್ಲಿ ಇರುವ ದೇವಾಲಯ ಗಳಲ್ಲಿ ಮಹದೇಶ್ವರ ದೇವಾಲಯ ತುಂಬಾ ಪ್ರಸಿದ್ದ ವಾದದ್ದು ಅಲ್ಲಿ ಒಂದು ಲಿಂಗವಿದೆ ಅದು ತುಂಬಾ ಪ್ರಸಿದ್ದ ವಾಗಿದೆ.
  • ಆ ಊರಿನಲ್ಲ್ಲಿ ಹಸುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಮತ್ತು ಪಟಲದಮ್ಮ ಎಂಬ ದೇವಾಲಯವಿದ್ದು ಆ ದೇವರಿಗೆ ಸುತ್ತಮುತ್ತಲ್ಲಿನ ಊರಿನವರೆಲ್ಲ ಬರುತ್ತಾರೆ. ಆ ಊರಿನಲ್ಲಿ ಬ್ಯಾಂಕು ಮತ್ತು ಗ್ರಾಮಪಂಚಾಯಿತಿ ಇದ್ದು ಸುತ್ತ ಮುತ್ತಲಿನ ಹಳ್ಳಿಗಳಿಗೆ ಇದ್ದು ಅನ್ವಯಿಸುತ್ತದೆ. ಅಲ್ಲಿ ವಾಸಿಸಲು ತುಂಬಾ ಅನುಕೂಲಕರ ಪ್ರದೇಶವಾಗಿದೆ.
  • ಇಲ್ಲಿ ಶಾಲೆಗಳು ಇದ್ದು ರೂಡಿನ ವ್ಯವಸ್ಟೆಯಿದ್ದು ಆ ಊರಿಗೆ ನಾಗಮಂಗಲದಿಂದ ೦.೯ ಕಿ.ಮೀ ಕರಡಹಳ್ಳಿಗೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳು ಹರಳಕೆರೆ, ದಂಡಿಗನಹಳ್ಳಿ , ಹುಳ್ಳೆನಹಳ್ಳಿ, ಕಲ್ಲಿನಾತಪುರ, ಬೋರಿಕೂಪ್ಪಲು, ದೊಡ್ಡಯಗಟ್ಟಿ , ಚಿಕ್ಕಯಗಟ್ಟಿ, ಇನ್ನೂ ಮುಂತಾದ ಊರುಗಳಿವೆ. ಹಾಗೂ ಕರಡಹಳ್ಳಿ ಗ್ರಾಮದ ದೇವತೆಯಾದ ಜಾನಕಮ್ಮ ದೇವರನ್ನು ಆ ಊರಿನ ಜನರೆಲ್ಲರನ್ನು ಆ ದೇವತೆ ಕಾಪಾಡುತ್ತಾಳೆ ಮತ್ತು ಜಾನಕಮ್ಮ ಊರಿನ ಮುಖ್ಯ ದೇವತೆಯಾಗಿದೆ.
  • ತುಪ್ಪದಮಡು- ಈ ಗ್ರಾಮವು ಪುರಾಣ ಪ್ರಸಿದ್ಧಿಯಾಗಿದ್ದು ಇತಿಹಾಸವೂ ಕೂಡ ಇದೆ. ಗ್ರಾಮದ ಪ್ರಮುಖ ದೇವಾಲಯಗಳೆಂದರೆ ಶ್ರೀ ಮುತ್ತಿನಮ್ಮ ದೇವಿ ದೇವಾಲಯ , ಶ್ರೀಮಲ್ಲೇಶ್ವರ(ಈಶ್ವರ) ಸ್ವಾಮಿ ದೇವಾಲಯ, ಶ್ರೀ ದೊಡ್ಡಯ್ಯ ಹಾಗೂ ಚಿಕ್ಕಯ್ಯ ಸ್ವಾಮಿ ದೇವಾಲಯ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಇನ್ನೂ ಹಲವು ದೇವಾಲಯಗಳಿವೆ. ಗ್ರಾಮದಲ್ಲಿ ವರ್ಷಕ್ಕೊಮ್ಮೆ ಮುತ್ತಿನಮ್ಮ ದೇವಿಯ ಸಾಲುಮರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
  • ಶಿಲ್ಪಪುರ-ಗ್ರಾಮದ ಮುಖ್ಯ ದೇವರಾದ ಬಸವೇಶ್ವರ ದೇವಾಲಯ ತುಂಬಾ ಪ್ರಸಿದ್ದ ವಾದದ್ದು ಆ ದೇವರನ್ನು ಮನದಲ್ಲಿ ನೆನೆದರೆ ತೊಂದರೆಗಳೆಲ್ಲ ದೂರವಾಗುವವು ಎಂದು ಇಲ್ಲಿನ ಜನರ ನಂಬಿಕೆ.ಕರಡಹಳ್ಳಿ ಊರಿನಲ್ಲಿ ಇರುವ ದೇವಾಲಯಗಳಲ್ಲಿ ಮಹದೇಶ್ವರ ದೇವಾಲಯ ತುಂಬಾ ಪ್ರಸಿದ್ದ ವಾದದ್ದು ಅಲ್ಲಿ ಒಂದು ಲಿಂಗವಿದೆ ಅದು ತುಂಬಾ ಪ್ರಸಿದ್ದವಾಗಿದೆ. ಆ ಊರಿನಲ್ಲ್ಲಿ ಹಸುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಮತ್ತು ಪಟಲದಮ್ಮ ಎಂಬ ದೇವಾಲಯವಿದ್ದು ಆ ದೇವರಿಗೆ ಸುತ್ತಮುತ್ತಲ್ಲಿನ ಊರಿನವರೆಲ್ಲ ಬರುತ್ತಾರೆ.
  • ಆ ಊರಿನಲ್ಲಿ ಬ್ಯಾಂಕು ಮತ್ತು ಗ್ರಾಮಪಂಚಾಯಿತಿ ಇದ್ದು ಸುತ್ತ ಮುತ್ತಲಿನ ಹಳ್ಳಿಗಳಿಗೆ ಇದ್ದು ಅನ್ವಯಿಸುತ್ತದೆ. ಇಲ್ಲಿ ತೆಂಗು, ತರಕಾರಿ, ರಾಗಿ, ಬಾಳೆ, ನಾನಾ ಬೆಳೆಗಳನ್ನು ಬೆಳೆಯುತ್ತಾರೆ. ಹಾಗೂ ಈ ಗ್ರಾಮದಲ್ಲಿ ಹೆಚ್ಚು ಎಮ್ಮೆ ಗಳನ್ನು ಹಾಗೂ ಸೀಮೆ ಹಸುಗಳನ್ನು ಮತ್ತು ಕುರಿಗಳನ್ನು ಸಾಕುತ್ತಾರೆ. ಈ ಗ್ರಾಮದಲ್ಲಿ ಶಾಲೆಯಿರುವುದರಿಂದ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಓದುವುದಕ್ಕೆ ಬರುತ್ತಾರೆ.
  • ಈ ಊರಿನಲ್ಲಿ ಬೋರಪ್ಪ ಎಂಬ ದೇವರು ಇದೆ ಆ ದೇವರಿಗೆ ಪ್ರತಿ ವ‍‍‍‍‍‍‌‌‌‌‌‌‌‌‌‌‌‌‌‌ರುಷ ಕೊಂಡ ಹಾಯುತ್ತಾರೆ. ಇದು ಮೂಡಲಗಿರಿಯಪ್ಪ ಎಂಬ ದೇವರನ್ನು ಪೂಜಿಸುತ್ತಾರೆ ಹಾಗೂ ಸಿತಪ್ಪ ಎಂಬ ದೇವರನ್ನು ಪೂಜಿಸುತ್ತಾರೆ. ಪ್ರತಿ ಡಿಸೆಂಬರ್ ತಿಂಗಳಲ್ಲಿ ಗಿಡದ ಜಾತ್ರೆಯನ್ನು ಮಾಡುತ್ತಾರೆ ಹಾಗೂ ಮಾರಿಹಬ್ಬವನ್ನು ಮಾಡುತ್ತಾರೆ.

ಉಲ್ಲೇಖ

ಬದಲಾಯಿಸಿ

^ a b (EN) Falling Rain Genomics, Inc, Nagamangala, India Page. URL consultato l'11-07-2008. ^ (EN) India Post, Pincode search - Nagamangala. URL consultato il 28-07-2008. ^ (EN) Bharat Sanchar Nigam Ltd, STD Codes for cities in Karnataka. URL consultato il 28-07-2008. ^ (EN) Census of India, Alphabetical list of towns and their population - Karnataka (PDF). URL consultato il 21-05-2008. ^ (EN) Census of India 2001, Population, population in the age group 0-6 and literates by sex - Cities/Towns (in alphabetic order): 2001. URL consultato il 20-06-2008. [nascondi]V · D · M Stato del Karnataka Capitale Bangalore India Karnataka locator map.svg Divisioni Bangalore · Belgaum · Gulbarga · Mysore Distretti Bagalkot · Bangalore (dist. rurale) · Bangalore (dist. urbano) · Belgaum · Bellary · Bidar · Bijapur · Chamarajanagar · Chickmagalur · Chikballapur · Chitradurga · Davanagere · Dharwad · Gadag · Gulbarga · Hassan · Haveri · Kannada Meridionale · Kannada Settentrionale · Kodagu · Kolar · Koppal · Mandya · Mysore · Raichur · Ramanagara · Shimoga · Tumkur · Udupi Città principali Bangalore · Belgaum · Gulbarga · Hubli-Dharwad · Mangalore · Mysore


"https://kn.wikipedia.org/w/index.php?title=ನಾಗಮಂಗಲ&oldid=1235604" ಇಂದ ಪಡೆಯಲ್ಪಟ್ಟಿದೆ